Subscribe to Updates
Get the latest creative news from FooBar about art, design and business.
Author: kannadanewsnow05
ಮಂಡ್ಯ : ಕಳೆದ ಕೆಲವು ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಅವರು ಹೃದಯಘಾತದಿಂದ ನಿಧನ ಹೊಂದಿದ್ದರು. ಇದೀಗ ಅವರ ಆಸ್ತಿಯನ್ನು ಎಸ್ ಎಂ ಕೃಷ್ಣ ಮೊಮ್ಮಗ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅಳಿಯ ರಾದ ಅಮರ್ತ್ಯ ಹೆಗಡೆ ಅವರು ಕಾವೇರಿ ನದಿಯಲ್ಲಿ ವಿಸರ್ಜನೆ ಮಾಡಿದ್ದಾರೆ. ಹೌದು ಇಂದು ಎಸ್.ಎಂ ಕೃಷ್ಣ ಅವರ ಅಸ್ಥಿಯನ್ನುಮೊಮ್ಮಗ ಅಮರ್ತ್ಯ ಹೆಗಡೆ ವಿಸರ್ಜನೆ ಮಾಡಿದರು. ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ಅಸ್ಥಿ ವಿಸರ್ಜನೆ ಮಾಡಿದರು. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಅಸ್ತಿ ವಿಸರ್ಜನೆ ಮಾಡಿದರು. ಕಳೆದ ಡಿಸೆಂಬರ್ 10 ರಂದು ಎಸ ಎಂ ಕೃಷ್ಣ ಅವರು ಬೆಂಗಳೂರು ನಗರದ ಸದಾಶಿವನಾಗರದಲ್ಲಿ ತಡರಾತ್ರಿ ತೀವ್ರ ಹೃದಯಘಾತದಿಂದ ಸಾವನ್ನಪ್ಪಿದರು. ಇವರ ಒಂದು ಸಾವಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಎಲ್ಲ ಪಕ್ಷದ ನಾಯಕರು ತೀವ್ರ ಸಂತಾಪ ಸೂಚಿಸಿದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕೂಡ ಎಸ್ಎಂ ಕೃಷ್ಣ ಅವರ ಅಗಲಿಕೆಗೆ…
ಹುಬ್ಬಳ್ಳಿ : ಸಮಾಜವನ್ನು ರಕ್ಷಣೆ ಮಾಡಬೇಕಾಗಿದ್ದ ಆರಕ್ಷಕರಿಂದಲೇ ಇದೀಗ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಲೈಂಗಿಕ ಕಿರುಕುಳ ನಡೆಯುತ್ತಿರುವುದು ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಇದೀಗ ಹಳೆ ಹುಬ್ಬಳ್ಳಿ ಠಾಣೆಯ ಪಿಎಸ್ಐ ಸುರೇಶ್ ಎನ್ನುವವನಿಂದ ಮಹಿಳಾ ಕಾನ್ಸ್ಟೇಬಲ್ ಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಹೌದು ಇನ್ಸ್ಪೆಕ್ಟರ್ ನಿಂದಲೇ ಮಹಿಳಾ ಕಾನ್ಸ್ಟೇಬಲ್ ಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹಳೆ ಹುಬ್ಬಳ್ಳಿ ಠಾಣೆ ಇನ್ಸ್ಪೆಕ್ಟರ್ ಸುರೇಶ್ ಯಳ್ಳುರು ವಿರುದ್ಧ ಈ ಒಂದು ಆರೋಪ ಕೇಳಿ ಬಂದಿದ್ದು, ಇನ್ಸ್ಪೆಕ್ಟರ್ ಸುರೇಶ್ ವಿರುದ್ಧ ಮಹಿಳಾ ಕಾನ್ಸ್ಟೇಬಲ್ ಗಳಿಂದ ಗಂಭೀರ ಆರೋಪ ಕೇಳಿ ಬಂದಿದೆ. ರಾತ್ರಿಯಾದರೆ ಮಹಿಳಾ ಸಿಬ್ಬಂದಿಗೆ ವಿಡಿಯೋ ಕಾಲ್ ಮಾಡಿ ಕಿರುಕುಳ ನೀಡುತ್ತಿದ್ದಾನೆ. ಈ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಖಾತೆ ಸಚಿವ ಡಾ. ಜಿ ಪರಮೇಶ್ವರ್ ಮಹಿಳಾ ಆಯೋಗ ಮತ್ತು ಮಾನವ ಹಕ್ಕುಗಳ ಆಯೋಗಕ್ಕೆ ಇದೀಗ ಸಿಬ್ಬಂದಿಗಳು ಪತ್ರ ಬರೆದಿದ್ದಾರೆ. ಇನ್ಸ್ಪೆಕ್ಟರ್ ಕಿರುಕುಳಕ್ಕೆ ಬೇಸತ್ತು ಮಹಿಳಾ ಸಿಬ್ಬಂದಿಗಳು ಪತ್ರ ಬರೆದಿದ್ದಾರೆ. ಪಿಐ…
ಬೆಳಗಾವಿ : ಅನಾರೋಗ್ಯದ ಸಮಸ್ಯೆಯಿಂದ ಮಹಿಳೆ ನೇಣಿಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ರಮ್ಯಾಶ್ರೀ ಎಂದು ತಿಳಿದುಬಂದಿದೆ. ರಮ್ಯಾಶ್ರೀ ಕಳೆದ ನಾಲ್ಕು ವರ್ಷದ ಹಿಂದೆ ಮೊದಲ ಮದುವೆಯಾಗಿತ್ತು. ಬಳಿಕ ಪಾತಿಯಿಂದ ದೂರವಾಗಿ ಕಳೆದ ಮೂರು ತಿಂಗಳಿಂದ ಮತ್ತೊಂದು ಯುವಕನನ್ನು ವರಿಸಿದ್ದಳು. ನಿಡಗುಂದಿ ಗ್ರಾಮದ ಬಸವರಾಜ ಹಂಪನ್ನವರ ಎಂಬವರನ್ನು ಮದುವೆಯಾಗಿದ್ದಳು. ಆದರೆ ಮದುವೆಯಾಗಿ ಮೂರು ತಿಂಗಳಲ್ಲಿ ರಮ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.ಪತ್ನಿ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದು ಪತಿ ಬಸವರಾಜ ಕೂಡ ಆತ್ನಹತ್ಯೆಗೆ ಯತ್ನಿಸಿದ್ದಾರೆ. ಭಯಗೊಂಡು ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಪಟ್ಟಿದ್ದಾರೆ. ಕೊಡಲಿ ಅವರನ್ನು ಹಾರೂಗೇರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದಾರೆ.
ಬೆಂಗಳೂರು : ಇತ್ತೀಚಿಗೆ ಕೆಪಿಎಸ್‌ಸಿ ನಡೆಸಿರುವ PDO ನೇಮಕಾತಿ ಪರೀಕ್ಷೆಯಲ್ಲಿ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ನವೆಂಬರ್ 17ರಂದು ಪರೀಕ್ಷೆ ನಡೆದಿತ್ತು. ಈ ಒಂದು ನೇಮಕಾತಿ ಪರೀಕ್ಷೆಯ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವ ಕುರಿತು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ ಅಭ್ಯರ್ಥಿಗಳು ಭಾರಿ ಪ್ರತಿಭಟನೆ ಮತ್ತು ಹೋರಾಟ ನಡೆಸಿದ್ದರು. ಇದೀಗ ಮೇಲ್ವಿಚಾರಕರಿಗೆ ಪ್ರಶ್ನೆ ಪತ್ರಿಕೆ ತಡವಾಗಿ ತಲುಪಿದ ಹಿನ್ನೆಲೆಯ ಕುರಿತಂತೆ ಮತ್ತೊಂದು ವಿಡಿಯೋ ಇದೀಗ ವೈರಲಾಗಿದೆ. ತುಮಕೂರಿನ ಕೇಂದ್ರದಲ್ಲಿ ಬ್ಲ್ಯೂಟೂತ್ ಬಳಸಿ ಎಕ್ಸಾಂ ಬರೆಯುತ್ತಿದ್ದ ಅಭ್ಯರ್ಥಿಯನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣದ ಬೆನ್ನಲ್ಲೇ ಪಿಡಿಒ ನೇಮಕಾತಿ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಎಂಬ ಆರೋಪಗಳು ಸಹ ಕೇಳಿ ಬಂದಿದ್ದವು. ಈ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಿದ್ದರು. ಕೆಲ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಬೇರೆ ವಿದ್ಯಾರ್ಥಿಗಳನ್ನು ಪ್ರಚೋದಿಸಿದ, ಪ್ರತಿಭಟನೆ ಮಾಡಿದ 12 ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪ್ರಶ್ನೆ ಪತ್ರಿಕೆ ನೀಡುವಲ್ಲಿ ವಿಳಂಬ ಸಹ ಆಗಿಲ್ಲ.…
ಮಂಗಳೂರು : ವಕ್ಫ್ ಭೂ ಕಬಳಿಕೆಗೆ ಸಂಬಂಧಿಸಿದಂತೆ ಮೌನವಾಗಿರಲು ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಣಿಪ್ಪಾಡಿ ಇದೀಗ ಸ್ಫೋಟಕ ವಾದಂತಹ ಹೇಳಿಕೆಯನ್ನು ನೀಡಿದ್ದು, ಈ ವಿಚಾರವಾಗಿ ಬಿಜೆಪಿ ಆಗಲಿ ಬಿವೈ ವಿಜಯೇಂದ್ರ ಯಾವುದೇ ಆಮೀಷ ಒಡ್ಡಿಲ್ಲ. ಬದಲಾಗಿ ಕಾಂಗ್ರೆಸ್ ನಾಯಕರೇ ನನಗೆ ಆಮಿಷ ಒಡ್ಡಿದ್ದರು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಮಾಡಿರುವಂತಹ ಆರೋಪ ಶೇಕಡ 90% ಸುಳ್ಳು. ಬಿವೈ ವಿಜಯೇಂದ್ರ ನನ್ನ ಮನೆಗೆ ಯಾವತ್ತೂ ಬಂದಿಲ್ಲ. ನಾನು ವರದಿ ಸಲ್ಲಿಕೆ ಮಾಡುವಾಗ ಬಿವೈ ವಿಜಯೇಂದ್ರ ಇರಲೇ ಇಲ್ಲ. ನಾನು ಬಿಜೆಪಿಯವರ ಮೇಲೆ ಕಿಡಿ ಕಾರಿದ್ದಂತು ನಿಜ. ಸಿಬಿಐ ತನಿಖೆಗೆ ಕೊಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ ಕೊಡಲಿ. 1.60 ಲಕ್ಷ ಹೆಕ್ಟರ್ ಆಸ್ತಿ ವಕ್ಫ್ ಗೆ ಸೇರಿದ್ದು ಎಂದು ನೋಟಿಸ್ ನೀಡಿದ್ದಾರೆ. ಆದರೆ ವಕ್ಫ್ ಬೋರ್ಡ್ ಆಸ್ತಿ ಇರುವುದು 54 ಸಾವಿರ ಹೆಕ್ಟರ್. 27 ರಿಂದ 28 ಸಾವಿರ ಹೆಕ್ಟೇರ್ ಜಮೀನು…
ಬೆಂಗಳೂರು : ರಾಜ್ಯದ ಪ್ರಮುಖ 5 ಗ್ಯಾರಂಟಿ ಯೋಜನೆಗಳ್ಳಲ್ಲಿ ಗೃಹಲಕ್ಷ್ಮಿ ಯೋಜನೆಯಿಂದ ಬಂದಂತಹ ಹಣ ಕೂಡಿಟ್ಟು, ಗದಗ ಜಿಲ್ಲೆಯ ಗಜೇಂದ್ರಗಡದಲ್ಲಿ ಅತ್ತೆ ಹಾಗೂ ಸೊಸೆ ಬೋರ್ವೆಲ್ ಕೊರೆಸಿರುವುದು ಇದೀಗ ಭಾರಿ ಸದ್ದು ಮಾಡುತ್ತಿದೆ. ಈ ಒಂದು ವಿಚಾರ ಸಿಎಂ ಸಿದ್ದರಾಮಯ್ಯ ಅವರಿಗೂ ತಲುಪಿದ್ದು, ಗೃಹಲಕ್ಷ್ಮಿ ಹಣದಿಂದ ಅತ್ತೆ ಸೊಸೆ ಜಗಳವಾಡುತ್ತಾರೆ ಎಂದು ಟೀಕಿಸಿದ್ದ ಬಿಜೆಪಿಗೆ ತಪರಾಕಿ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ತಿರುಗೇಟು ನೀಡಿದ್ದಾರೆ. ನಮ್ಮ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ಮೂಲಕ ಪಡೆದ ಹಣದಲ್ಲಿ ಬೋರ್‌ವೆಲ್ ಕೊರೆಸಿ ಬದುಕು ಕಟ್ಟಿಕೊಂಡ ಅತ್ತೆ – ಸೊಸೆಯ ಮಾತುಗಳು ಕೇಳಿ ಖುಷಿಯಾಯಿತು.ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ ಮಾಲದಾರ ಓಣಿಯ ಅತ್ತೆ ಮಾಬುಬೀ ಹಾಗೂ ಸೊಸೆ ರೋಷನ್ ಬೇಗಂ ಪ್ರತಿ ತಿಂಗಳು ತಮಗೆ ಬಂದ ಗೃಹಲಕ್ಷ್ಮಿ ಹಣ ಕೂಡಿಟ್ಟು ಕೃಷಿ ಭೂಮಿಗೆ ಬೋರ್‌ವೆಲ್ ಕೊರೆಸಿ, ಸಮೃದ್ಧ ನೀರು ಪಡೆದಿದ್ದಾರೆ. ನಾಡಿನ ಬಡಕುಟುಂಬಗಳಿಗೆ ಆರ್ಥಿಕ ಶಕ್ತಿ ತುಂಬಿ, ಅವರನ್ನು ಸ್ವಾವಲಂಬಿಗಳನ್ನಾಗಿಸುವ ಈ ಯೋಜನೆಯ ಉದ್ದೇಶ ಯಶಸ್ವಿಯಾಗಿ…
BREAKING : ಉಡುಪಿಯಲ್ಲಿ ಮರಳು ಮಾಫಿಯಾಗೆ ವ್ಯಕ್ತಿ ಬಲಿ : ಬೈಕ್ ಗೆ ಟಿಪ್ಪರ್ ಡಿಕ್ಕಿ ಹೊಡೆದು ಹಿಂಬದಿ ಸವಾರ ದುರ್ಮರಣ!
ಉಡುಪಿ : ಉಡುಪಿಯಲ್ಲಿ ಮರಳು ಮಾಫಿಯಾಗೆ ಇದೀಗ ಮತ್ತೊಂದು ಜೀವ ಬಲಿಯಾಗಿದೆ ಮರಳು ತುಂಬಿದ್ದ ಟಿಪ್ಪರ್ ಒಂದು ವೇಗವಾಗಿ ಚಲಿಸಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬದಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಬಡಗು ಬೆಟ್ಟು ವಿನ ಶಾಂತಿನಗರದಲ್ಲಿ ನಡೆದಿದೆ. ಹೌದು ಮರಳು ತುಂಬಿದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿ ದುರ್ಮರಣ ಹೊಂದಿದ್ದಾನೆ. ಉಡುಪಿ ಬಡಗುಬೆಟ್ಟು ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಉಡುಪಿಯ ಶಾಂತಿನಗರದಲ್ಲಿ ದಾರಿ ಡಿಕ್ಕಿಯಾಗಿ ಬೈಕ್ ನಲ್ಲಿದ್ದ ಜನಾರ್ಧನ್ ದುರ್ಮರಣ ಹೊಂದಿದ್ದಾನೆ. ಇನ್ನು ಬೈಕ್ ಓಡಿಸುತ್ತಿದ್ದ ಸಂತೋಷ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಲಾರಿ ಹರಿದ ದೃಶ್ಯ ಇದೀಗ ಸಿಸಿ ಕ್ಯಾಮೆರಾದಲ್ಲಿ ಸೆರಿಯಾಗಿದೆ ಬೈಕ್ ಸವಾರ ಸಂತೋಷ್ಗೆ ಗಂಭೀರವಾದ ಗಾಯವಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದ್ದು, ಟಿಪ್ಪರ್ ಮಾಲಿಕ ಹಾಗೂ ಚಾಲಕನ ವಿರುದ್ಧ FIR ದಾಖಲಾಗಿದೆ.
ಪರ್ಸ್ ನಲ್ ಯಾವಾಗಲೂ ಹಣ ತುಂಬಿರಬೇಕೆಂದರೆ ಮನೆಯ ಗೃಹಿಣಿಯರ ಕೈಯಿಂದ ಈ ಹೀಗೆ ಮಾಡಿ ಯಜಮಾನನ ಪರ್ಸ್ ಹಣದಿಂದ ತುಂಬಿರುತ್ತದೆ.. ಇಂದಿನ ದಿನಗಳಲ್ಲಿ ಹಣ ಮಾಡುವುದೊಂದೇ ಹಲವರ ಗುರಿಯಾಗಿದೆ. ಕಷ್ಟಪಟ್ಟು ಹಣ ಸೇರಿಸುವ, ಪ್ರಗತಿ ಬಯಸಿದವರೂ ನಿಗದಿತ ಮೊತ್ತಕ್ಕಿಂತ ಹೆಚ್ಚು ಹಣ ಸಂಪಾದಿಸಲಾಗದೆ, ದುಡಿದ ಹಣವನ್ನು ಸೇರಿಸಲಾಗದೆ, ದುಂದುವೆಚ್ಚ, ಹಣದ ಕೊರತೆಯಿಂದ ಬಳಲುತ್ತಿದ್ದಾರೆ. ವ್ಯಾಲೆಟ್‌ಗಳು ಅಥವಾ ಪರ್ಸ್ ನಲ್ಲಿ ಹಣವನ್ನು ಇಡಲು ಪ್ರತಿಯೊಬ್ಬರೂ ಬಳಸುವ ಪ್ರಮುಖ ವಸ್ತುವಾಗಿದೆ. ಹೋಮ್ ಬ್ಯೂರೋ ವ್ಯವಹಾರದ ಗಲ್ಲ ಪೆಟ್ಟಿಗೆ ಕೂಡ ಇದರ ಪಕ್ಕದಲ್ಲಿದೆ. ಹಣವನ್ನು ಇಡಲು ಬಳಸುವ ಈ ಮನಿ ಪರ್ಸ್‌ನಲ್ಲಿ ಒಂದೇ ಒಂದು ವಸ್ತುವನ್ನು ಇರಿಸುವ ಮೂಲಕ ನಮ್ಮ ಹಣದ ಹರಿವನ್ನು ಹೆಚ್ಚಿಸಬಹುದು ಎಂದು ಹೇಳಲಾಗುತ್ತದೆ. ಆಧ್ಯಾತ್ಮದ ಕುರಿತಾದ ಈ ಪೋಸ್ಟ್‌ನಲ್ಲಿ ಇದರ ಅರ್ಥ ಮತ್ತು ಅದನ್ನು ಹೇಗೆ ಇಟ್ಟುಕೊಳ್ಳುವುದು ಎಂದು ನಾವು ತಿಳಿದುಕೊಳ್ಳಬಹುದು . ಶ್ರೀ ಸಿಗಂಧೂರು ಚೌಡೇಶ್ವರಿ ದೇವಿಯನ್ನು ಆರಾಧನೆ ಮಾಡುವ ದೈವಜ್ಞ ವಿದ್ವಾನ್ ವಿದ್ಯಾಧರ್ ತಂತ್ರಿ ದೈವಜ್ಞ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು…
ತುಮಕೂರು : ಅಕ್ರಮವಾಗಿ ಗಾಂಜಾ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸರಿ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬೀರದೇನಹಳ್ಳಿ ಎಂಬಲ್ಲಿ ಗಾಜಾ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೌದು ಗಾಂಜಾ ಮಾರುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದರೆ. ಬೀರದೇನಹಳ್ಳಿ ಬಸ್ ನಿಲ್ದಾಣದಲ್ಲಿ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬೀರದೇನಹಳ್ಳಿಯಲ್ಲಿ ಸಿದ್ದರಬೆಟ್ಟದ ಹೇಮಂತ್ ಹಾಗೂ ನೇಗಲಾಲದ ಭೀಮರಾಜು ಎನ್ನುವ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ಸುಮಾರು 1.50 ಲಕ್ಷ ಮೌಲ್ಯದ 2 ಕೆಜಿ 400 ಗ್ರಾಂ ಗಾಂಜಾ ಸೊಪ್ಪು ಅನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು, ಉದ್ಯಮಿ ಸುತಾರಿಯ ಮನೆಯಲ್ಲಿ ದರೋಡೇ ನಡೆದಿದೆ. ದರೋಡೆಗೂ ಮುನ್ನ ಕಾವಲುಗಾರನ್ನ ಕಟ್ಟಿ ಹಾಕಿದ್ದು ಅಲ್ಲದೆ ಮನೆಯವರನ್ನೆಲ್ಲಾ ಒಂದು ಕೋಣೆಯಲ್ಲಿ ಕೂಡಿಹಾಕಿ ದರೋಡೆಕೋರರು ದರೋಡೆ ಮಾಡಿರುವ ಘಟನೆ ಹುಬ್ಬಳ್ಳಿಯ ಅಶೋಕನಗರದಲ್ಲಿ ಈ ಒಂದು ಘಟನೆ ನಡೆದಿದೆ. ಹೌದು ಮನೆಯ ಕಾವಲುಗಾರನ ಕೈಕಾಲು ಕಟ್ಟಿ ಹಾಕಿದ ಕಳ್ಳರ ಗ್ಯಾಂಗ್ ಬಳಿಕ ಮನೆಯಲ್ಲಿದ್ದವರನ್ನು ಕೋಣೆಯಲ್ಲಿ ಕೂಡಿಹಾಕಿ ದರೋಡೆ ಮಾಡಿದ್ದಾರೆ. ಹುಬ್ಬಳ್ಳಿಯ ಅಶೋಕನಗರದಲ್ಲಿ ಈ ಒಂದು ಘಟನೆ ನಡೆದಿದೆ. ಸ್ಥಳಕ್ಕೆ ಅಶೋಕನಗರ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
		













