Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಇಂದು ಬೆಳಿಗ್ಗೆ ತಾನೇ ರಾಜ್ಯದ ಹಲವು ಕಡೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ನೀಡಿದ್ದು, ಭ್ರಷ್ಟ ಅಧಿಕಾರಿಗಳ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ಮಾಡಿ ಈಗಾಗಲೇ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇದೀಗ ಬೆಂಗಳೂರು ದಕ್ಷಿಣ ಜಿಲ್ಲಾಸ್ಪತ್ರೆಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ಏಕಾಏಕಿ ದಾಳಿ ನಡೆಸಿದ್ದಾರೆ. ಹೌದು ಬೆಂಗಳೂರು ದಕ್ಷಿಣ ಜಿಲ್ಲಾಸ್ಪತ್ರೆಯ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದು, ಬೆಳಿಗ್ಗೆ 11 ಗಂಟೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಲೋಕಾಯುಕ್ತ ಎಸ್ಪಿ ಸ್ನೇಹಾ ನೇತೃತ್ವದಲ್ಲಿ ಈ ಒಂದು ದಾಳಿ ನಡೆದಿದ್ದು, ಆಸ್ಪತ್ರೆಯಲ್ಲಿ ಹಲವು ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ. ಆಸ್ಪತ್ರೆಯಲ್ಲಿ ಅವ್ಯವಹಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಬಳಕೆ ದಾಳಿ ಮಾಡಿದ್ದಾರೆ. ರಾಮನಗರದಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿನ ಹಲವು ದಾಖಲೆ ಮತ್ತು ಕಡತಗಳನ್ನು ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ.
ರಾಯಚೂರು : ನಿನ್ನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕೆ ತಿಮ್ಮಾಪುರ ಗ್ರಾಮದಲ್ಲಿ ರಾತ್ರಿ ಊಟ ಮಾಡಿ ಬೆಳಿಗ್ಗೆ ಅಷ್ಟರಲ್ಲಿ ಒಂದೇ ಕುಟುಂಬದ ತಂದೆ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದ ಪ್ರಕರಣಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಮಾತ್ರ ಬದುಕುಳಿದಿದ್ದರು. ಇದೀಗ ರಾಯಚೂರಲ್ಲಿ ಅನ್ನ ಸೇವಿಸದೆ ಇಬ್ಬರು ಮಕ್ಕಳು ಬಚಾವ್ ಆಗಿದ್ದಾರೆ. ಅನ್ನ ಸಾಂಬಾರ್ ಸೇವಿಸದೆ ಇದಿದ್ದರಿಂದ ಇಬ್ಬರು ಮಕ್ಕಳು ಬಚಾವ್ ಆಗಿದ್ದಾರೆ. ಈ ಕುರಿತು ಮಕ್ಕಳು ಪ್ರತಿಕ್ರಿಯಿಸಿ ಅಮ್ಮ ಚವಳೆಕಾಯಿ ಪಲ್ಯ ಅನ್ನ ಸಾಂಬಾರ್ ಮಾಡಿದ್ದರು. ಎಲ್ಲರು ಎಲ್ಲವನ್ನು ತಿಂದಿದ್ದರು. ನಾವು ಮಾತ್ರ ಕೇವಲ ರೊಟ್ಟಿ ಪಲ್ಯ ಮಾತ್ರ ಊಟ ಮಾಡಿದ್ವಿ ನಮಗೆ ಏನೂ ತೊಂದರೆ ಆಗಿಲ್ಲ ಎಂದು ಕೃಷ್ಣ ಮತ್ತು ಚೈತ್ರ ವಿವರ ಕೊಟ್ಟಿದ್ದಾರೆ. ಪ್ರಕರಣ ಹಿನ್ನೆಲೆ? ರಾಯಚೂರಿನಲ್ಲಿ ಘೋರ ದುರಂತ ಸಂಭವಿಸಿದ್ದು, ಊಟ ಸೇವಿಸಿದ ಬಳಿಕ ಹೊಟ್ಟೆ ನೋವು ಕಾಣಿಸಿಕೊಂಡು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆಯ…
ದಕ್ಷಿಣಕನ್ನಡ : ರಾಜ್ಯದಲ್ಲಿ ಹೃದಯಾಘಾತದಿಂದ ಸರಣಿ ಸಾವು ಪ್ರಕರಣಗಳ ಸಂಖ್ಯೆ ಮುಂದುವರೆದಿದ್ದು, ಇದೀಗ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ತುಳು ರಂಗಭೂಮಿ ಹಿರಿಯ ಕಲಾವಿದ, ಚಲನಚಿತ್ರ ನಟ ಚಿ.ರಮೇಶ್ ಕಲ್ಲಡ್ಕ ಹೃದಯಾಘಾತದಿಂದ ಸಾವನಪ್ಪಿದ್ದಾರೆ. ಅವರಿಗೆ 68 ವರ್ಷ ವಯಸ್ಸಾಗಿತ್ತು. ಇಂದು ಬೆಳಗ್ಗೆ ಕಲ್ಲಡ್ಕದ ಕೊಳಕೀರು ಮನೆಯಲ್ಲಿ ನಿಧನ ಹೊಂದಿದ್ದಾರೆ. ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಹಿರಿಯ ಕಲಾವಿದನ ನಿಧನಕ್ಕೆ ಸಂತಾಪಗಳು ವ್ಯಕ್ತವಾಗುತ್ತಿವೆ. ರಂಗಭೂಮಿಯಲ್ಲಿ 30 ವರ್ಷಕ್ಕೂ ಹೆಚ್ಚು ಕಲಾಸೇವೆಯನ್ನು ಸಲ್ಲಿಸಿರುವ ರಮೇಶ್ ಕಲ್ಲಡ್ಕ ಕಳೆದ 20 ವರ್ಷಗಳಿಂದ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ಕಲಾಸಂಗಮದಲ್ಲಿ ಕಲಾವಿದರಾಗಿ ಕಲಾಸೇವೆ ಮಾಡುತ್ತಿದ್ದರು. ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ಗರಡಿಯಲ್ಲಿ ಪಳಗಿದ ರಮೇಶ್ ಕಲ್ಲಡ್ಕ ಅವರು ಕಲಾಸಂಗಮದ ಎಲ್ಲ ಸಾಮಾಜಿಕ, ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. 2 ದಿನಗಳ ಹಿಂದೆಯಷ್ಟೇ ನಾಟಕವೊಂದರಲ್ಲಿ ಅಭಿನಯಿಸಿ ಮನೆಗೆ ಮರಳಿದ್ದ ರಮೇಶ್ ಕಲ್ಲಡ್ಕ ಅವರೀಗ ಇಲ್ಲ ಎಂಬುದನ್ನು ಅರಿತ ಅಭಿಮಾನಿಗಳು, ತುಳುರಂಗಭೂಮಿ ಆಘಾತಗೊಂಡಿದೆ.
ಚಿತ್ರದುರ್ಗ : ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಗೋವಿಂದಪ್ಪ ಕಾರು ಚಾಲಕ ಯಶವಂತ್ ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಿಜಿ ಗೋವಿಂದಪ್ಪ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಕಾಂಗ್ರೆಸ್ ಶಾಸಕರಾಗಿದ್ದು, ಕೊಲೆ ಪ್ರಕರಣದಲ್ಲಿ ಶಾಸಕರ ಚಾಲಕ ಯಶವಂತನ್ನು ಇದೀಗ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಾರ್ಚ್ 17 ರಂದು ಜಾನಕಲ್ ಗ್ರಾಮದ ಪ್ರಸನ್ನ (45) ಎನ್ನುವ ವ್ಯಕ್ತಿ ನಾಪತ್ತೆಯಾಗಿದ್ದರು. ಮಾರ್ಚ್ 21ರಂದು ಈ ಕುರಿತು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಚಿಕ್ಕಮಗಳೂರು ಜಿಲ್ಲೆಯ ಲಿಂಗದಳ್ಳಿ ಬಳಿ ಪ್ರಸನ್ನ ಅವರ ಶವ ಪತ್ತೆಯಾಗಿತ್ತು. ಕೊಲೆ ಮಾಡಿ ಲಿಂಗದಳ್ಳಿ ಬಳಿಯ ಅರಣ್ಯದಲ್ಲಿ ಪ್ರಸನ್ನ ಶವ ಎಸದಿದ್ದರು. ಪ್ರಸನ್ನ ಪತ್ನಿ ಗಾಯತ್ರಿ ಅಕ್ರಮ ಸಂಬಂಧ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಪ್ರಕರಣ ಸಂಬಂಧ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಸನ್ನ ಪತ್ನಿ ಗಾಯತ್ರಿ, ಶಾಸಕ ಗೋವಿಂದಪ್ಪ ಕಾರು ಚಾಲಕ ಯಶವಂತ್, ಲೋಹಿತ್ ಹಾಗೂ ವೀರೇಶನ್ನು ಹೊಸದುರ್ಗ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಲಿಂಗದಳ್ಳಿ ಮತ್ತು ಹೊಸದುರ್ಗ…
ನವದೆಹಲಿ : ಕರ್ನಾಟಕದ ತಲಾ ಆದಾಯವು ಈಗ ₹2 ಲಕ್ಷ ದಾಟಿದ್ದು, ₹2,04,605 ತಲುಪಿದೆ – ಇದು ಭಾರತದಲ್ಲಿಯೇ ಅತಿ ಹೆಚ್ಚು ಎಂದು ಕರ್ನಾಟಕ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ ಸಿಂಗ್ ಸುರ್ಜೆವಾಲಾ ಟ್ವೀಟ್ ಮಾಡಿದ್ದಾರೆ. ಈ ಗಮನಾರ್ಹ ಸಾಧನೆಯು ಕಾಂಗ್ರೆಸ್ ಸರ್ಕಾರದ ದೂರದೃಷ್ಟಿಯ ಆರ್ಥಿಕ ನೀತಿಗಳು ಮತ್ತು ಸಾಮಾನ್ಯ ನಾಗರಿಕರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿರುವ ಅದರ ಪರಿವರ್ತಕ “ಖಾತರಿ ಯೋಜನೆಗಳ” ನೇರ ಪರಿಣಾಮವಾಗಿದೆ. ಈ ಖಾತರಿಗಳು ರಾಜ್ಯವನ್ನು ದಿವಾಳಿ ಮಾಡುತ್ತವೆ ಎಂದು ಬಿಜೆಪಿ ನಾಯಕರು ತಪ್ಪಾಗಿ ಹೇಳಿಕೊಂಡಿದ್ದರು. ಆದರೂ, ಕೇಂದ್ರ ಹಣಕಾಸು ಸಚಿವಾಲಯದ ಸ್ವಂತ ದತ್ತಾಂಶವೇ ಈಗ ಅವರ ನಿರೂಪಣೆಯ ಪೊಳ್ಳುತನವನ್ನು ಬಹಿರಂಗಪಡಿಸುತ್ತದೆ. ಕಾಂಗ್ರೆಸ್ ನಾಯಕತ್ವದಲ್ಲಿ, ಕರ್ನಾಟಕವು ಸಮಗ್ರ ಅಭಿವೃದ್ಧಿಯ ಹಾದಿಯಲ್ಲಿ ಸ್ಥಿರವಾಗಿ ಸಾಗುತ್ತಿದೆ. ಇಂದು, ರಾಜ್ಯದ ಖಾತರಿ ಆಧಾರಿತ ಆಡಳಿತ ಮಾದರಿಯು ಕೋಟ್ಯಂತರ ಸಹ ಕನ್ನಡಿಗರಿಗೆ ವಾರ್ಷಿಕವಾಗಿ ₹53,000 CR ಅನ್ನು ವರ್ಗಾಯಿಸುವ ರಾಷ್ಟ್ರೀಯ ಮಾನದಂಡವಾಗಿ ಹೊರಹೊಮ್ಮಿದೆ. ಕಲ್ಯಾಣದಿಂದ ಬೆಳವಣಿಗೆಗೆ, ಕರ್ನಾಟಕವು ಹೊಸ ಎತ್ತರವನ್ನು ಏರುತ್ತಿದೆ – ಸಾಮಾಜಿಕ…
ಕಲಬುರ್ಗಿ : ನಗರದಲ್ಲಿರುವ ಮಹಾದೇವಪ್ಪ ರಾಂಪುರೆ ಮೆಡಿಕಲ್ ಕಾಲೇಜಿನ (MRMC) ವಿದ್ಯಾರ್ಥಿಗಳ ಸ್ಟೈಫಂಡ್ ಹಗರಣಕ್ಕೆ ಸಂಬಂಧಪಟ್ಟಂತೆ, ಇದೀಗ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಹೈದರಾಬಾದ್ ಕರ್ನಾಟಕ ಸೊಸೈಟಿಯ ಮಾಜಿ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ ಅವರ 5.8 ಕೋಟಿ ಆಸ್ತಿಯನ್ನು ಜಪ್ತಿ ಮಾಡಿಕೊಂಡಿದ್ದಾರೆ. ಕಲಬುರಗಿಯ ಎಂಆರ್‌ಎಂಸಿ ವೈದ್ಯಕೀಯ ಕಾಲೇಜಿನಲ್ಲಿ 2018 ರಿಂದ 2024 ರವರೆಗೆ ನಡೆದ 82 ಕೋಟಿ ರೂ. ವಿದ್ಯಾರ್ಥಿವೇತನ ಹಗರಣದಲ್ಲಿ, ಹೆಚ್‌ಕೆಇ ಸೊಸೈಟಿಯ ಮಾಜಿ ಅಧ್ಯಕ್ಷ ಭೀಮಾಶಂಕರ್ ಬಲಿಗುಂದಿಯವರ 5.87 ಕೋಟಿ ರೂ. ಆಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ. ಬಲಿಗುಂದಿ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿತ್ತು. 2018 ರಿಂದ 2024 ರ ವರೆಗಿನ ಮೆಡಿಕಲ್ ಕಾಲೇಜ್ ವಿದ್ಯಾರ್ಥಿಗಳ ಶಿಷ್ಯ ವೇತನದಲ್ಲಿ ಅಂದಾಜು 82 ಕೋಟಿ ರೂ. ಹಗರಣ ನಡೆದಿತ್ತು. ಈ ಬಗ್ಗೆ ಟಿವಿ9 ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಆ ಬೆನ್ನಲ್ಲೆ ಕಳೆದ ಮಾರ್ಚ್ನಲ್ಲಿ ಇ.ಡಿ ಅಧಿಕಾರಿಗಳಿಂದ ಭೀಮಾಶಂಕರ್ ಬಲಿಗುಂದಿ ಸೇರಿ ನಾಲ್ವರ ಮನೆ ಮೇಲೆ ಇ.ಡಿ ದಾಳಿ…
ಗದಗ : ಕಳೆದ ಕೆಲವು ದಿನಗಳ ಹಿಂದೆ ಗದಗದಲ್ಲಿ ಒಂದು ವಿಚಿತ್ರವಾದ ಘಟನೆ ನಡೆದಿತ್ತು. ಮುಸ್ಲಿಂ ಯುವತಿಯಿಂದಲೇ ಹಿಂದೂ ಯುವಕನಿಗೆ ಲವ್ ಜಿಹಾದ್ ಆರೋಪ ಕೇಳಿ ಬಂದಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪತಿ ವಿಶಾಲ್ ವಿರುದ್ಧ ಈಗ ಯುವತಿ ಪೋಸ್ಕೋ ಪ್ರಕರಣ ದಾಖಲು ಮಾಡಿದ್ದಾಳೆ. ಹೌದು ಪತ್ನಿಯೇ ಮುಸ್ಲಿಂ ಧರ್ಮಕ್ಕೆ ಬಲವಂತದ ಮತಾಂತರ ಮಾಡಿದ್ದು, ಮಾನಸಿಕ ಕಿರುಕುಳ ನೀಡಿದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ವಿಶಾಲ್ ಮನವಿ ಮಾಡಿದ್ದಾರೆ. ಅತ್ತ ಪತ್ನಿ ಕೂಡ, ಅಪ್ರಾಪ್ತೆ ಆಗಿದ್ದಾಗ ಬಲವಂತವಾಗಿ ದೈಹಿಕ ಸಂಪರ್ಕ ಮಾಡಿದ್ದನೆಂದು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರಿಗೂ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಿ ತನಿಖೆ ಆರಂಭಿಸಿದ್ದಾರೆ. ಪ್ರಕರಣ ಹಿನ್ನೆಲೆ? ವಿಶಾಲ್ ಕುಮಾರ್ ಹಾಗೂ ಮುಸ್ಲಿಂ ಧರ್ಮದ ಯುವತಿ ಕಳೆದ ಮೂರು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿ-ಪ್ರೇಮಮದ ವಿಷಯವನ್ನು ಮನೆಯವರಿಂದ ಮುಚ್ಚಿಟ್ಟಿದ್ದ…
ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಆರ್ ಪುರಂ ಬಿಜೆಪಿ ಶಾಸಕ ಭೈರತಿ ಬಸವರಾಜ್ ಇಂದು ಎರಡನೇ ಬಾರಿಗೆ ಪೊಲೀಸರ ಎದುರು ವಿಚಾರಣೆಗೆ ಹಾಜರಾದರು. ಬೆಂಗಳೂರಿನ ಭಾರತೀ ನಗರ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಶಾಸಕ ಭರತಿ ಬಸವರಾಜ್ ವಿಚಾರಣೆಗೆ ಹಾಜರಾಗಿದ್ದಾರೆ. ಎರಡನೇ ಬಾರಿಗೆ ಶಾಸಕ ಭೈರತಿ ಬಸವರಾಜ್ ವಿಚಾರಣೆಗೆ ಹಾಜರಾಗಿದ್ದು, ತನಿಖಾಧಿಕಾರಿ ಪ್ರಕಾಶ್ ರಾಥೋಡ್ ಅವರಿಂದ ಭೈರತಿ ಬಸವರಾಜ್ ಅವರ ವಿಚಾರಣೆ ನಡೆಯುತ್ತಿದೆ. ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನನ್ನು ಮಾರಕಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಒಂದು ಘಟನೆಗೆ ಸಂಬಂಧಿಸಿದಂತೆ ಈ ಮೊದಲು ಬೈರತಿ ಬಸವರಾಜ್ ಭಾರತೀ ನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದು ಇಂದು ಎರಡನೇ ಬಾರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.
ಬೆಂಗಳೂರು : ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನ ಕೊಲೆ ಪ್ರಕರಣದ ಎ1 ಆರೋಪಿಯಾಗಿರುವ ಜಗದೀಶ್ ಅಲಿಯಾಸ್ ಜಗ್ಗ ಪತ್ತೆಗಾಗಿ ಪೊಲೀಸರು ಲುಕ್‌ಔಟ್ ನೋಟಿಸ್ ಜಾರಿ ಮಾಡಲು ಸಿದ್ಧತೆ ನಡೆಸಿದ್ದಾರೆ. ಆದರೆ ಪ್ರಕರಣದ A1 ಆರೋಪಿಯಾಗಿರುವ ಜಗ್ಗ ಪೊಲೀಸರ ಕಣ್ಣ ತಪ್ಪಿಸಿ ದುಬೈಗೆ ಪರಾರಿಯಾಗಿದ್ದಾನೆ. ಹೌದು ಬಿಕ್ಲು ಶಿವ ಕೊಲೆಯಾಗಿ ಇಂದಿಗೆ ಹತ್ತು ದಿನ ಕಳೆದಿದೆ. ಕೊಲೆ ಪ್ರಕರಣದಲ್ಲಿ ಇಲ್ಲಿತನಕ ಹನ್ನೊಂದು ಜನ ಆರೋಪಿಗಳ ಬಂಧನವಾಗಿದೆ. ಆದರೆ ಎ1 ಆರೋಪಿಯಾಗಿರುವ ಜಗ್ಗ ಮಾತ್ರ ಪೊಲೀಸರ ಕೈಗೆ ಸಿಕ್ಕಿಲ್ಲ. ಆದರೆ ಆತ ಕೊಲೆಯ ಬಳಿಕ ಚೆನ್ನೈಗೆ ತೆರಳಿ ಅಲ್ಲಿಂದ ದುಬೈಗೆ ಪರಾರಿಯಾಗಿದ್ದಾನೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಸೇರಿದಂತೆ ಹಲವು ಕಡೆಗಳಲ್ಲಿ ಜಗದೀಶ್ ಅಲಿಯಾಸ್ ಜಗ್ಗನ ಹುಡುಕಾಟಕ್ಕೆ ಪೊಲೀಸರು ತೀವ್ರ ಶೋಧ ನಡೆಸಿದ್ದಾರೆ. ಇದೇ ವೇಳೆ ಆರೋಪಿ ಜಗ್ಗ ವಿದೇಶಕ್ಕೆ ಎಸ್ಕೇಪ್ ಆಗುವ ಬಗ್ಗೆ ಮಾಹಿತಿಗಳು ಸಿಕ್ಕ ಹಿನ್ನೆಲೆಯಲ್ಲಿ ಬುಧವಾರ ಆತನ ಪತ್ತೆಗಾಗಿ ಲುಕ್‌ಔಟ್ ನೋಟಿಸ್ ಜಾರಿ…
ದಕ್ಷಿಣಕನ್ನಡ : ದಕ್ಷಿಣಕನ್ನಡದಲ್ಲಿ KSRTC ಬಸ್ನಲ್ಲಿ ವಿದ್ಯಾರ್ಥಿನಿಯ ಜೊತೆಗೆ ಅನುಚಿತ ವರ್ತನೆ ತೋರಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಈ ಒಂದು ಘಟನೆ ನಡೆದಿದೆ. ವಿದ್ಯಾರ್ಥಿನಿ ಜೊತೆಗೆ ಮಹಮ್ಮದ್ ತೌಹೀದ್ ನಿಂದ ಅನುಚಿತ ವರ್ತನೆ ಆರೋಪ ಕೇಳಿ ಬಂದಿದೆ. ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಯುವತಿ ಮಂಗಳೂರಿನಿಂದ ಪುತ್ತೂರಿಗೆ ತೆರಳುತ್ತಿದ್ದಳು. ಈ ವೇಳೆ ಬಸ್ನಲ್ಲಿ ಮೊಹಮ್ಮದ್ ತೌಹೀದ್ ವಿದ್ಯಾರ್ಥಿನಿಯ ಪಕ್ಕದಲ್ಲಿ ಕುಳಿತಿದ್ದಾನೆ. ಈ ವೇಳೆ ವಿದ್ಯಾರ್ಥಿನಿಯ ಜೊತೆಗೆ ಮೊಹಮ್ಮದ್ ತೌಹಿದ್ ಅನುಚಿತವಾಗಿ ವರ್ತನೆ ಮಾಡಿದ್ದಾನೆ. ಕೂಡಲೇ ಆತನಿಗೆ ಬೈದು ಯುವತಿ ತಂದೆಗೆ ಫೋನ್ ಮಾಡಿ ಘಟನೆ ಬಗ್ಗೆ ತಿಳಿಸಿದ್ದಾಳೆ. ಪುತ್ತೂರು ಬಸ್ ನಿಲ್ದಾಣ ಬರುತ್ತಿದ್ದಂತೆ ಆರೋಪಿ ಬಸ್ಸಿನ ಎಮರ್ಜೆನ್ಸಿ ಕಿಟಕಿಯಿಂದ ಪರಾರಿಯಾಗಲು ಯತ್ನಿಸಿದ್ದಾನೆ. ತುರ್ತು ನಿರ್ಗಮನದ ಕಿಟಕಿಯ ಮೂಲಕ ಪರಾರಿಯಾಗಲು ಆರೋಪಿ ತೌಹಿದ್ ಯತ್ನಿಸಿದ್ದಾನೆ. ಸ್ಥಳೀಯರು ಹಾಗು ವಿದ್ಯಾರ್ಥಿನಿಯ ತಂದೆ ತಕ್ಷಣ ಆರೋಪಿಯನ್ನು ಹಿಡಿದಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ತೌಹಿದ್…