Author: kannadanewsnow05

ಚಿಕ್ಕಮಗಳೂರು : ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಅವಾಚ್ಯ ಪದಗಳಿಂದ ನಿಂದಿಸಿ ಬೈದಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಎಂಎಲ್ಸಿ ಸಿಟಿ ರವಿ ಅವರು ಬಂಧನಕ್ಕೆ ಒಳಗಾಗಿದ್ದರು. ಬಳಿಕ ಹೈಕೋರ್ಟ್ ಆದೇಶದ ಮೇರೆಗೆ ಬಿಡುಗಡೆಯಾಗಿ ಚಿಕ್ಕಮಂಗಳೂರಿಗೆ ತೆರಳಿದ್ದರು. ಈ ವೇಳೆ ಎಂಎಲ್ಸಿ ಸಿಟಿ ರವಿ ಸ್ವಾಗತ ಮೆರವಣಿಗೆ ವೇಳೆ ಆಂಬುಲೆನ್ಸ್ ಬಳಕೆ ಮಾಡಿದ್ದು, 7 ಆಂಬುಲೆನ್ಸ್ ಗಳಲ್ಲಿ ಸೈರನ್, ಲೈಟ್ ಹಾಕಿ ಮೆರವಣಿಗೆ ಮಾಡಲಾಗಿದೆ ಎಂದು ಆರೋಪಿಸಿ ಚಿಕ್ಕಮಗಳೂರು ನಗರ ಠಾಣೆಯಲ್ಲಿ ಆಂಬುಲೆನ್ಸ್ ಮಾಲೀಕ ಹಾಗೂ ಚಾಲಕರ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ. ಹೌದು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆಂಬುಲೆನ್ಸ್ ಮಾಲೀಕ ಹಾಗೂ ಚಾಲಕರ ವಿರುದ್ಧ ಇದೀಗ ಸೋಮೊಟೊ ಕೇಸ್ ದಾಖಲಾಗಿದೆ. ಸಾರ್ವಜನಿಕರ ಶಾಂತಿಭಂಗ ಆರೋಪದ ಅಡಿ ಇದೀಗ ಎಫ್ಐಆರ್ ದಾಖಲಾಗಿದೆ. ಜೈಲಿನಿಂದ ಬಿಡುಗಡೆಯಾಗಿ ಎಂಎಲ್ಸಿ ಸಿಟಿ ರವಿ ಚಿಕ್ಕಮಂಗಳೂರಿಗೆ ಬಂದಿದ್ದರು.ಮೆರವಣಿಗೆಯಲ್ಲಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಭಾಗಿಯಾಗಿದ್ದರು.

Read More

ಮೈಸೂರು : ವೈದ್ಯರ ನಿರ್ಲಕ್ಷಕ್ಕೆ ಬಾಲಕಿಯೊಬ್ಬಳು ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಿ ಇದೀಗ ಮೃತ ಬಾಲಕಿಯ ಖಾಸಗಿ ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸುತ್ತಿರುವ ಘಟನೆ ಮೈಸೂರು ಜಿಲ್ಲೆಯ ಜನತಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ. ಹೌದು ಆಸ್ಪತ್ರೆಯಲ್ಲಿ ಬಾಲಕಿ ಸಾವನ್ನಪ್ಪಿದ್ದು, ಮೃತ ಬಾಲಕಿ ಲಕ್ಷ್ಮಿ ಎಂದು ತಿಳಿದುಬಂದಿದ್ದು, ಜನತಾ ನಗರದ ನಿವಾಸಿಯಾಗಿದ್ದಳು. ಹೊಟ್ಟೆನೋವಿನ ಸಮಸ್ಯೆಯಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಳು. ಇದೀಗ ಖಾಸಗಿ ಆಸ್ಪತ್ರೆ ವೈದ್ಯರ ವಿರುದ್ಧ ಸಂಬಂಧಿಕರು ಆರೋಪ ಮಾಡುತ್ತಿದ್ದು, ಖಾಸಗಿ ಆಸ್ಪತ್ರೆಯ ಮುಂದೆ ಸಂಬಂಧಿಕರು ಪ್ರತಿಭಟನೆ ಮಾಡುತ್ತಿದ್ದಾರೆ. ಡಿಸೆಂಬರ್ 19 ರಂದು ಈ ಒಂದು ಘಟನೆ ನಡೆದಿದ್ದು, ಡಿಸೇಂಬರ್ 2ರಂದು ಖಾಸಗಿ ಆಸ್ಪತ್ರೆಯಲ್ಲಿ ಬಾಲಕಿಗೆ ಶಸ್ತ್ರಚಿಕಿತ್ಸೆ ಕೂಡ ಆಗಿರುತ್ತದೆ. ಅದಾದ ನಂತರ ಡಿಸೆಂಬರ್ 21ರಂದು ಮತ್ತೊಂದು ಆಸ್ಪತ್ರೆಗೆ ಬಾಲಕಿಯನ್ನು ಶಿಫ್ಟ್ ಮಾಡಲಾಗಿತ್ತು. ಆದರೆ ಇಂದು ಬೆಳಗಿನ ಜಾವ ಬಾಲಕಿ ಲಕ್ಷ್ಮಿ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾಳೆ ಎಂದು ತಿಳಿದುಬಂದಿದೆ. ಹಾಗಾಗಿ ಇದೀಗ ಮೃತ ಬಾಲಕಿ ಲಕ್ಷ್ಮಿ ಸಂಬಂಧಿಕರು ಆಸ್ಪತ್ರೆಯ ವೈದ್ಯರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Read More

ಉಡುಪಿ : ಕಳೆದ ಕೆಲವು ದಿನಗಳ ಹಿಂದೆ ಮುರುಡೇಶ್ವರ ಬೀಚ್ ನ ಸಮುದ್ರದಲ್ಲಿ ಮುಳುಗಿ ಕೋಲಾರ ಜಿಲ್ಲೆಯ ವಸತಿ ನಿಲಯದ ನಾಲ್ವರು ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದರು. ಈ ಒಂದು ಘಟನೆ ಮಾಸುವ ಮುನ್ನವೇ ಉಡುಪಿಯ ತ್ರಾಸಿ ಬೀಚ್ನಲ್ಲಿ ಟೂರಿಸ್ಟ್ ಬೋಟ್ ಪಲ್ಟಿಯಾಗಿ ರೈಡರ್ ಒಬ್ಬರು ಕಣ್ಮರೆಯಾಗಿರುವ ಘಟನೆ ನಡೆದಿದೆ. ಹೌದು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ತ್ರಾಸಿ ಬೀಚ್ ನಲ್ಲಿ ಟೂರಿಸ್ಟ್ ಬೋಟ್ ಪಲ್ಟಿಯಾಗಿ ರೈಡರ್ ಕಣ್ಮರೆಯಾಗಿದ್ದಾರೆ. ಬೋಟ್ ಪಲ್ಟಿಯಾದ ಬಳಿಕ ಲೈಫ್ ಜಾಕೆಟ್ ತೊಟ್ಟಿದ್ದ ಬೆಂಗಳೂರು ಮೂಲದ ಪ್ರಶಾಂತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಆದರೆ ಕಣ್ಮರೆಯಾಗಿರುವ ರೈಡರ್ ರವಿದಾಸ್ ಗಾಗಿ ಕರಾವಳಿ ಪೊಲೀಸ್ ಪಡೆಯಿಂದ ಇದೀಗ ಹುಡುಕಾಟ ನಡೆಸಲಾಗುತ್ತಿದೆ. ಘಟನೆ ಕುರಿತಂತೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಂಡ್ಯ : ನಿನ್ನೆ ಸಂಜೆ 7 ಗಂಟೆಗೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿ ಮನೆಗೆ ನುಗ್ಗಿ ಮರ ಕತ್ತರಿಸುವ ಯಂತ್ರದಿಂದ ವೃದ್ಧ ರಮೇಶ್ ಎನ್ನುವ ವ್ಯಕ್ತಿಯನ್ನು ಮಹಮ್ಮದ್ ಇಬ್ರಾಹಿಂ ಎನ್ನುವ ವ್ಯಕ್ತಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿದ್ದು, ಈಗ ಪೊಲೀಸರು ಆರೋಪಿ ಮೊಹಮ್ಮದ್ ಇಬ್ರಾಹಿಂ ವಶಕ್ಕೆ ಪಡೆಸಿಕೊಂಡು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ವೇಳೆ ಕೊಲೆ ಆರೋಪಿ ಮೊಹಮ್ಮದ್ ಇಬ್ರಾಹಿಂ ಕೊಲೆಗೆ ಕಾರಣ ತಿಳಿಸಿದ್ದು, ಈ ಕುರಿತು ಪೊಲೀಸರೇ ಶಾಕ್ ಆಗಿದ್ದಾರೆ. ಕೊಲೆ ಆರೋಪಿ ಮೊಹಮ್ಮದ್ ಇಬ್ರಾಹಿಂ ಮೂಲತಃ ಶ್ರೀರಂಗಪಟ್ಟಣದ ನಿವಾಸಿ ಎಂದು ತಿಳಿದುಬಂದಿದೆ. 27 ವರ್ಷದ ಈತ ಆನ್ಲೈನ್ನಲ್ಲಿ ಗೇಮ್ ಆಡುವ ಚಟ ಹೊಂದಿದ್ದ ಹೀಗಾಗಿ, ಮಹಮದ್ ಇಬ್ರಾಹಿಂ ಸಿಕ್ಕಾಪಟ್ಟೆ ಸಾಲ ಮೈಮೇಲೆ ಎಳೆದುಕೊಂಡಿದ್ದ. ಹೇಗಾದರೂ ಮಾಡಿ ಸಾಲ ತೀರಿಸಬೇಕು ಎಂದು ಒಂಟಿ ಮನೆ ಇರುವ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದ. ಅಲ್ಲಿ ಹೋಗಿ ಕಳ್ಳತನ ಮಾಡುವ ಪ್ಲಾನ್ ಹಾಕಿದ್ದ. ಅದೇ ರೀತಿಯಾಗಿ ಈ ಒಂದು ಕೊಲೆ ಮಾಡೋಕು ಮುಂಚೆ…

Read More

ಬೆಂಗಳೂರು : 2. 42 ಕೋಟಿ ರೂ. ಮೌಲ್ಯದ ಚಿನ್ನ ಖರೀದಿಸಿ ವಂಚನೆ ಮಾಡಿದ್ದ ಆರೋಪದ ಮೇಲೆ ಮಾಜಿ ಸಚಿವ ವರ್ತೂರು ಪ್ರಕಾಶ್ ಆಪ್ತೆಯನ್ನು ಪೊಲೀಸರು ಬಂಧಿಸಿದ್ದಾರೆ.ಬಾಗಲಗುಂಟೆ ನಿವಾಸಿ ಶ್ವೇತಾಗೌಡ ಬಂಧಿತ ಆರೋಪಿ. ಕೆಲ ದಿನಗಳ ಹಿಂದೆ ಅವಿನ್ಯೂ ರಸ್ತೆಯ ನವರತ್ನ ಜ್ಯುವೆಲರ್ಸ್‌ ಮಳಿಗೆಯಲ್ಲಿ ಗಣ್ಯರ ಹೆಸರು ಬಳಸಿಕೊಂಡು 2.42 ಕೋಟಿ ರೂ.ಮೌಲ್ಯದ ಆಭರಣವನ್ನು ಖರೀದಿಸಿದ್ದಳು. ಆದರೆ ಹಣ ಪಾವತಿಸದೆ ವಂಚಿಸಿದ್ದಳು ಎನ್ನುವ ಆರೋಪ ಕೇಳಿ ಬಂದಿದೆ. ಇದೀಗ ವಿಚಾರಣೆ ವೇಳೆ ಸ್ಪೋಟಕ ವಾದಂತಹ ಮಾಹಿತಿ ಬಾಯ್ಬಿಟ್ಟಿರುವ ಆರೋಪಿ ಶ್ವೇತಾ, ವರ್ತೂರು ಪ್ರಕಾಶ್ ಹೆಸರಲ್ಲಿ ಉದ್ಯಮಿಗೆ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಶ್ವೇತ ಮೊಬೈಲ್ ನಲ್ಲಿ ಹಲವು ರಾಜಕಾರಣಿಗಳ ಮೊಬೈಲ್ ನಂಬರ್ ಸೇವ್ ಆಗಿದೆ. ಕೋಲಾರದ ರಾಜಕಾರಣಿಗಳು, ಉದ್ಯಮಿಗಳ ನಂಬರ್ ಗಳನ್ನು ಮೈಸೂರು ಪಾಕ್, ರಸಗುಲ್ಲ ಎಂದು ನಂಬರ್ ಸೇವ್ ಮಾಡಿಕೊಂಡಿದ್ದಾಳೆ. ಸ್ವೀಟ್ಸ್ ಗಳ ಹೆಸರಲ್ಲಿ ರಾಜಕಾರಣಿಗಳು ಮತ್ತು ಉದ್ಯಮಿಗಳ ಹೆಸರು ಸೇವ್ ಮಾಡಿಕೊಂಡಿದ್ದಾಳೆ, ವರ್ತೂರು ಪ್ರಕಾಶ್ ಮನೆಯ ಕೆಲಸದವರ ಜೊತೆಗೆ…

Read More

ಬೆಂಗಳೂರು : ಬೆಂಗಳೂರಲ್ಲಿ ಇಂದು ಮತ್ತೊಂದು ಭೀಕರವಾದಂತಹ ಕೊಲೆ ನಡೆದಿದ್ದು, ಆಶ್ರಯ ಕೊಟ್ಟಂತಹ ಸ್ನೇಹಿತನನ್ನೇ ಯುವಕನೊಬ್ಬ ಬರ್ಬರವಾಗಿ ಕೊಲೆಗೈದಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ತಿಮ್ಮಬೋವಿಪಾಳ್ಯದಲ್ಲಿ ಈ ಒಂದು ಕೊಲೆ ನಡೆದಿದೆ. ಹೌದು ಸಿಗರೇಟ್ ನಿಂದ ಸುಟ್ಟು ದೊಣ್ಣೆಯಿಂದ ಹೊಡೆದು ಪ್ರದೀಪ್ (41) ಎನ್ನುವ ವ್ಯಕ್ತಿಯ ಹತ್ಯೆಯಾಗಿದೆ. ಆರೋಪಿ ಚೇತನ್ (26) ನನ್ನು ಸದ್ಯ ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಯುವಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.ಮನೆಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಾನೆ ಎಂದು ಚೇತನ್ ಪ್ರದೀಪ್ ನನ್ನು ಕೊಂದಿದ್ದಾನೆ. ಸಿಗರೇಟ್ ನಿಂದ ಸುಟ್ಟು, ದೊಣ್ಣೆ ಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಕಿರುಚಾಡುವ ಶಬ್ದ ಕೇಳಿಸದಂತೆ ಟಿವಿ ಸೌಂಡ್ ಜಾಸ್ತಿ ಇಟ್ಟು ಕೊಲೆ ಮಾಡಲಾಗಿದೆ. ಟಿವಿ ಸೌಂಡ್ ಜಾಸ್ತಿ ಆದ ಹಿನ್ನೆಲೆ, ಮನೆಯ ಮಾಲೀಕರು ಬಂದು ನೋಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಕೊಲೆಯ ಬಳಿಕ ತನ್ನ ಕಾರಿನಲ್ಲಿ ಚೇತನ್ ಪರಾರಿಯಾಗುತ್ತಿದ್ದ.ಟವರ್ ಲೊಕೇಶನ್ ಆಧಾರದ ಮೇಲೆ ಇದೀಗ ಮಾದನಾಯಕನಹಳ್ಳಿ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Read More

ಬೆಂಗಳೂರು : ಇಂದು ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ಮೂರು ಅಪಘಾತಗಳು ಸಂಭವಿಸಿದ್ದು, ಮೊದಲನೇ ಅಪಘಾತ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಬಳಿ ನಡೆದಿದ್ದು, ಇನ್ನು ಎರಡನೇ ಅಪಘಾತ ಯಶವಂತಪುರದ ತಡೆಗೋಡೆಗೆ ಬೊಲೆರೋ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.ಇದೀಗ ಮೂರನೇ ಅಪಘಾತ ಸಂಭವಿಸಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ದಟ್ಟ ಮಂಜು ಹಿನ್ನೆಲೆಯಲ್ಲಿ ರಸ್ತೆ ಕಾಣದೆ ಸಿಮೆಂಟ್ ಲಾರಿ ಒಂದು ಪಲ್ಟಿ ಆಗಿರುವ ಘಟನೆ ನಡೆದಿದೆ. ಹೌದು ದಟ್ಟ ಮಂಜು ಕವಿದಿದ್ದ ಹಿನ್ನೆಲೆ ರಸ್ತೆ ಕಾಣದೆ ಸಿಮೆಂಟ್ ಲಾರಿ ಪಲ್ಟಿಯಾಗಿದೆ. ಇಂದು ಬೆಳಿಗ್ಗೆ ಕೊಡಿಪಾಳ್ಯ ಕೆರೆಯ ಏರಿಯ ಬಳಿ ಸಿಮೆಂಟ್ ಬಲ್ಕರ್ ಲಾರಿ ಪಲ್ಟಿಯಾಗಿದೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೋಡಿಪಾಳ್ಯದ ಕೆರೆ ಏರಿ ಬಳಿ ಇಂದು ಬೆಳಿಗ್ಗೆ ಮಂಜು ಕವಿದಿದ್ದ ಹಿನ್ನೆಲೆಯಲ್ಲಿ ರಸ್ತೆ ಕಾಣದೆ ಸಿಮೆಂಟ್ ಲಾರಿ ಪಲ್ಟಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಲಾರಿಯ ಚಾಲಕ ಮತ್ತು ಕ್ಲೀನರ್ ಗೆ ಸಣ್ಣಪುಟ್ಟ ಗಾಯಗಳಾಗಿವೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ರಸ್ತೆಯಲ್ಲಿ…

Read More

ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ಪೋಷಕರ ನಿರ್ಲಕ್ಷಕ್ಕೆ ಒಂದುವರೆ ವರ್ಷದ ಕಂದಮ್ಮ ಬಲಿಯಾಗಿದ್ದಾಳೆ. ಮನೆಯಲ್ಲಿ ಬಾತ್ರೂಮ್ ನಲ್ಲಿ ಇಟ್ಟಿದಂತಹ ತುಂಬಿದ ಬಕೆಟ್ ನಲ್ಲಿ ತಲೆಕೆಳಗಾಗಿ ಬಿದ್ದು ಒಂದೂವರೆ ವರ್ಷದ ಪೂರ್ವಿಕ ಎನ್ನುವ ಮಗು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್ಆರ್ ಪುರ ತಾಲೂಕಿನ ರಾವುರಿನಲ್ಲಿ ನಡೆದಿದೆ. ನೀರು ತುಂಬಿದ ಬಕೆಟ್ಗೆ ಬಿದ್ದು ಮಗು ಸಾವನ್ನಪ್ಪಿದೆ. ಪೋಷಕರ ನಿರ್ಲಕ್ಷದಿಂದಾಗಿ ಇದೀಗ ಹಸುಳೆ ಬಲಿಯಾಗಿದೆ. ಎನ್ ಆರ್ ಪುರ ತಾಲೂಕಿನ ರಾಹುರಿನಲ್ಲಿ ಈ ಒಂದು ಹೃದಯವಿದ್ರಾವಕ ಘಟನೆ ನಡೆದಿದೆ. ಒಂದುವರೆ ವರ್ಷದ ಮಗು ಪೂರ್ವಿಕ ಎನ್ನುವ ಮಗು ಸಾವನ್ನಪ್ಪಿದೆ ಬಾತ್ ರೂಂ ನಲ್ಲಿ ನೀರು ತುಂಬಿದ್ದ ಬಕೆಟ್ ಇತ್ತು. ಪೂರ್ವಿಕ ಆಟ ಆಡುತ್ತಾ ಬಾತ್ ರೂಂ ಗೆ ಹೋಗಿದ್ದಾಳೆ.ಈ ವೇಳೆ ತಲೆಕೆಳಗಾಗಿ ಮಗು ಬಿದ್ದಿದೆ. ಆನಂದ್ ಹಾಗೂ ಅನು ಎನ್ನುವ ದಂಪತಿಯ ಪುತ್ರಿ ಎಂದು ತಿಳಿದುಬಂದಿದೆ.

Read More

ಜತ್ತ : ನಿನ್ನೆ ಬೆಂಗಳೂರಿನ ನೆಲಮಂಗಲದ ಬಳಿ ಭೀಕರವಾದಂತಹ ಅಪಘಾತ ಸಂಭವಿಸಿದ್ದು, ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಗಾತ್ರದ ಕಂಟೆನರ್ ಬಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ IAST ಕಂಪನಿ ಮಾಲೀಕ ಚಂದ್ರಮ್ ಏಗಪ್ಪಗೋಳ್ ಹಾಗೂ ಅವರ ಪತ್ನಿ, ಇಬ್ಬರು ಮಕ್ಕಳು ಸೇರಿ ಆರು ಜನರು ಅಪ್ಪಚ್ಚಿಯಾಗಿ ಸಾವನಪ್ಪಿರುವ ಘಟನೆ ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತಿತ್ತು. ಇದೀಗ ಮೃತಪಟ್ಟ 6 ಜನರ ಮೃತ ದೇಹಗಳು ಮಹಾರಾಷ್ಟ್ರದ ಜತ್ತ ತಾಲೂಕಿನ ಮೊರಬಗಿ ಗ್ರಾಮಕ್ಕೆ ತಲುಪಿ, ಒಂದೇ ಸ್ಥಳದಲ್ಲಿ 6 ಜನರ ಸಾಮೂಹಿಕ ಅಂತ್ಯಕ್ರಿಯೆ ನೆರವೇರಿತು. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಗ್ರಾಮಕ್ಕೆ ಮೂರು ಆಂಬುಲೆನ್ಸ್ಗಳಲ್ಲಿ 6 ಜನರ ಮೃತ ದೇಹ ತಲುಪಿದೆ.ಒಂದೇ ಕುಟುಂಬದ ಆರು ಜನರು ಮೃತ ಪಟ್ಟಿದ್ದಕ್ಕೆ ಇಡೀ ಗ್ರಾಮಸ್ಥರು ಇದೀಗ ಕಣ್ಣೀರಿಟ್ಟಿದ್ದಾರೆ.ಇದೀಗ ಗ್ರಾಮದ ಜನರ ಸಮ್ಮುಖದಲ್ಲಿ ಲಿಂಗಾಯತ ಸಮುದಾಯದಂತೆ ಈ ಒಂದು ಅಂತ್ಯಕ್ರಿಯೆ ನಡೆದಿದ್ದು, ಚಂದ್ರಮ್ ಏಗಪ್ಪಗೋಳ್ ಅವರ ಸಹೋದರ ಮಲ್ಲಿನಾಥ್ ಅಗ್ನಿ ಸ್ಪರ್ಶಿಸಿದ್ದಾರೆ. ಬಡತನದಲ್ಲಿ ಬೆಳೆದು ಚಂದ್ರನ್ ಏಗಪ್ಪಗೋಳ್…

Read More

ಬೆಂಗಳೂರು : ನಿನ್ನೆ ಬೆಂಗಳೂರಿನ ನೆಲಮಂಗಲದ ಬಳಿ ಭೀಕರವಾದಂತಹ ಅಪಘಾತ ಸಂಭವಿಸಿದ್ದು, ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಗಾತ್ರದ ಕಂಟೆನರ್ ಬಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ IAST ಕಂಪನಿ ಮಾಲೀಕ ಚಂದ್ರಮ್ ಏಗಪ್ಪಗೋಳ್ ಹಾಗೂ ಅವರ ಪತ್ನಿ, ಇಬ್ಬರು ಮಕ್ಕಳು ಸೇರಿ ಆರು ಜನರು ಅಪ್ಪಚ್ಚಿಯಾಗಿ ಸಾವನಪ್ಪಿರುವ ಘಟನೆ ಇಡೀ ರಾಜ್ಯವೇ ಬೆಚ್ಚಿ ಬೀಳಿಸುವಂತಿತ್ತು. ಇದೀಗ ಮೃತಪಟ್ಟ 6 ಜನರ ಮೃತ ದೇಹಗಳು ಮಹಾರಾಷ್ಟ್ರದ ಜತ್ತ ತಾಲೂಕಿನ ಮೊರಬಗಿ ಗ್ರಾಮಕ್ಕೆ ತಲುಪಿವೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಗ್ರಾಮಕ್ಕೆ ಮೂರು ಆಂಬುಲೆನ್ಸ್ಗಳಲ್ಲಿ 6 ಜನರ ಮೃತ ದೇಹ ತಲುಪಿದೆ.ಒಂದೇ ಕುಟುಂಬದ ಆರು ಜನರು ಮೃತ ಪಟ್ಟಿದ್ದಕ್ಕೆ ಇಡೀ ಗ್ರಾಮಸ್ಥರು ಇದೀಗ ಕಣ್ಣೀರಿಟ್ಟಿದ್ದಾರೆ. ಬಡತನದಲ್ಲಿ ಬೆಳೆದು ಚಂದ್ರನ್ ಏಗಪ್ಪಗೋಳ್ ಅತಿ ದೊಡ್ಡ ಸಾಧನೆ ಮಾಡಿದ್ದರು. ತನ್ನ ಗ್ರಾಮದ ನೂರಾರು ಯುವಕರಿಗೆ ಚಂದ್ರಮ್ ಅವರು ಕೆಲಸ ಕೊಟ್ಟಿದ್ದರು. ಐಎಎಸ್‌ಟಿ ಕಂಪನಿಯ ಮಾಲೀಕರಾಗಿದ್ದರು. ಬೆಂಗಳೂರಿನ ಎಚ್ಎಸ್ಆರ್ ಲೇಔಟ್ ನಲ್ಲಿ ಐಎಎಸ್‌ಟಿ ಸಾಫ್ಟ್ವೇರ್ ಕಂಪನಿ ಮಾಲೀಕರಾಗಿದ್ದರು…

Read More