Subscribe to Updates
Get the latest creative news from FooBar about art, design and business.
Author: kannadanewsnow05
ದಾವಣಗೆರೆ : ದಾವಣಗೆರೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಾರು ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಯುವತಿಯರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕಡರನಾಯ್ಕನ ಹಳ್ಳಿಯಲ್ಲಿ ನಡೆದಿದೆ. ಮೃತ ಯುವತಿಯರನ್ನು ಪಲ್ಲವಿ ಹಾಗು ಸುಮಾ ಎಂದು ಗುರುತಿಸಲಾಗಿದೆ. ಒಂದೇ ಬೈಕ್ನಲ್ಲಿ ಪಲ್ಲವಿ, ಸುಮಾ ಹಾಗೂ ಸಚಿನ್ ಬರುವಾಗ ಕಾರು ಡಿಕ್ಕಿ ಹೊಡೆದಿದೆ. ಮೂವರು ಬೈಕ್ನಿಂದ ಕೆಳಗೆ ಬಿದ್ದಿದ್ದಾರೆ. ಗಂಭೀರ ಗಾಯಗೊಂಡಿದ್ದ ಪಲ್ಲವಿ ಮತ್ತು ಸುಮಾ ಅವರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಇನ್ನು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಸಚಿನ್ ಅವರನ್ನು ದಾವಣಗೆರೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅಪಘಾತದ ಕುರಿತಂತೆ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ತುಮಕೂರು : ಕೆಲಸ ಮುಗಿಸಿಕೊಂಡು ಮನೆಗೆ ಹೋಗುವ ವೇಳೆ ಹಿಟ್ ಅಂಡ್ ರಂಡಿಗೆ ಬೈಕ್ ಸಮಾರಂಭ ಸಾವನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ತಾವರೆಕೆರೆಯಲ್ಲಿ ನಡೆದಿದೆ. ತಾವರೆಕೆರೆಯ ಬಳಿ ಹಿಟ್ ಅಂಡ್ ರನ್ ಗೆ ಬೈಕ್ ಸವಾರ ಬಲಿಯಾಗಿದ್ದಾನೆ. ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ತಾವರೆಕೆರೆ ಎಂಬಲ್ಲಿ ಈ ಒಂದು ಹಿಟ್ ಅಂಡ್ ರನ್ ಪ್ರಕರಣ ನಡೆದಿದೆ. ತಾವರೆಕೆರೆ ಬಡಾವಣೆ ನಿವಾಸಿ ಸುರೇಶ್ (38) ಸಾವನಪ್ಪಿದ್ದಾನೆ. ಕೆಲಸಕ್ಕೆ ತೆರಳಿ ಮನೆಗೆ ವಾಪಸ್ ಆಗುವಾಗ ಈ ಒಂದು ದುರ್ಘಟನೆ ನಡೆದಿದೆ. ಅಪಘಾತದ ಕುರಿತು ತುರುವೇಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತರಕನ್ನಡ : ಪಹಲ್ಗಾಮ್ ಉಗ್ರರ ದಾಳಿಯ ಬಳಿಕ ಕೇಂದ್ರ ಸರ್ಕಾರವು ಭಾರತದಲ್ಲಿರುವ ಪಾಕಿಸ್ತಾನ ಪ್ರಜೆಗಳಿಗೆ ದೇಶ ತೊರೆಯುವಂತೆ ಆದೇಶ ನೀಡಿದ್ದು, ಬಳಿಕ ಭಾರತದಲ್ಲಿನ ಪಾಕಿಸ್ತಾನ ಪ್ರಜೆಗಳು ದೇಶವನ್ನು ತೊರೆದಿದ್ದರು. ಇದೀಗ ಸರಕು ಸಾಗಾಟ ಮಾಡುವ ಹಡಗಿನಲ್ಲಿ ಪಾಕಿಸ್ತಾನದ ಪ್ರಜೆಯು ಒಬ್ಬ ಉತ್ತರ ಕನ್ನಡ ಜಿಲ್ಲೆಯ ಕಾರವಾರ ಬಂದರಿಗೆ ಬಂದು ಇಳಿದಿದ್ದಾನೆ. ಹೌದು ಕಾರವಾರಕ್ಕೆ ಹಡಗಿನಲ್ಲಿ ಪಾಕಿಸ್ತಾನ ಪ್ರಜೆ ಆಗಮಿಸಿದ್ದಾನೆ. ಪಾಕಿಸ್ತಾನ ಪ್ರಜೆಯ ಕಾಲಿಡಲು ಅಧಿಕಾರಿಗಳು ಬಿಟ್ಟಿಲ್ಲ. ಭಾರತದ ನೆಲಕ್ಕೆ ಕಾಲಿಡಲು ಅಧಿಕಾರಿಗಳು ಪಾಕಿಸ್ತಾನ ಪ್ರಜೆಗೆ ಬಿಡುತ್ತಿಲ್ಲ. ಹಡಗಿನ ಕ್ಯಾಪ್ಟನ್ ಮೂಲಕವೇ ಪಾಕಿಸ್ತಾನದ ಪ್ರಜೆಯ ಮೊಬೈಲ್ ಸೀಜ್ ಮಾಡಿದ್ದಾರೆ. ಸರಕು ಸಾಗಣೆ ಹಡಗಿನಲ್ಲಿ ಪಾಕಿಸ್ತಾನದ ಪ್ರಜೆ ಕಾರವಾರ ಬಂದರಿಗೆ ಆಗಮಿಸಿದ್ದಾನೆ. ಮೇ 12 ರಂದು ಇರಾಕ್ ನಿಂದ ಹಾಗು ಕಾರವಾರಕ್ಕೆ ಬಂದಿದೆ. ಬಿಟುಮಿನ್ ತುಂಬಿಕೊಂಡು ಸರಕಿನ ಹಡಗು ಕಾರವಾರ ಬಂದರಿಗೆ ಆಗಮಿಸಿತ್ತು.
ಚಿತ್ರದುರ್ಗ : ಚಿತ್ರದುರ್ಗದಲ್ಲಿ ಘೋರವಾದ ದುರಂತ ಸಂಭವಿಸಿದ್ದು, ಕೃಷಿ ಹೊಂಡದಲ್ಲಿ ಕಾಲು ಜಾರಿ ಬಿದ್ದು, ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ, ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕಂಬದೇವರಹಟ್ಟಿ ಗ್ರಾಮದಲ್ಲಿ ಇಂದು ಸಂಜೆ ನಡೆದಿದೆ. ಮೃತ ಯುವಕರನ್ನು ರಂಗಸ್ವಾಮಿ (21), ಪ್ರವೀಣ್( 14) ಮೃತ ದುರ್ದೈವಿಗಳು ಎಂದು ತಿಳಿದುಬಂದಿದೆ. ಆದರೆ ಇವರ ಜೊತೆಯಲ್ಲಿದ್ದ ರಮೇಶ (22) ಆಕಸ್ಮಿಕವಾಗಿ ಎನ್ನುವ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ತಕ್ಷಣ ಯುವಕರನ್ನು ಆಸ್ಪತ್ರೆಗೆ ಸಾಗಿಸಲು ನೋಡಿದರೂ ಸಹ ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಸ್ಥಳಕ್ಕೆ ಬಂದಿಲ್ಲ. ಇದರಿಂದ ಮೃತರ ಸಂಬಂಧಿಕರು ಜಿಲ್ಲಾ ಹಾಗೂ ತಾಲೂಕು ಸಾರ್ವಜನಿಕ ಆರೋಗ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು. ಈ ಸಂಬಂಧ ಹೊಳಲ್ಕೆರೆ ತಹಸಿಲ್ದಾರ್ ಬೀಬಿ ಫಾತಿಮಾ, ಸಿಪಿಐ ಚಿಕ್ಕಣ್ಣ, ಪಿಎಸ್ ಐ ಸಚಿನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.
ಬಾಗಲಕೋಟೆ : ಕೇವಲ ಕ್ರಿಕೆಟ್ ಆಟದ ವಿಚಾರವಾಗಿ ಒಡೆದ ಬಿಯರ್ ಬಾಟಲ್ ನಿಂದ ಶಿಕ್ಷಕನಿಗೆ ಯುವಕನೊಬ್ಬ ಇರಿದು ಹಲ್ಲೆಗೈದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಎಂಬ ಗ್ರಾಮದಲ್ಲಿ ನಡೆದಿದೆ.ಹಲ್ಲೆಗೆ ಒಳಗಾದ ಶಿಕ್ಷಕರನ್ನು ರಾಮಪ್ಪ ಪೂಜಾರಿ ಎಂದು ತಿಳಿದುಬಂದಿದೆ. ಕ್ರಿಕೆಟ್ ಬಾಲ್ ವಿಚಾರಕ್ಕೆ ಜಗಳ ತೆಗೆದು ಶಿಕ್ಷಕನಿಗೆ ಯುವಕನೊಬ್ಬ ಒಡೆದ ಬಿಯರ್ ಬಾಟಲ್ ನಿಂದ ಇರದಿದ್ದಾನೆ. ಸಾವಳಗಿ ಗ್ರಾಮದಲ್ಲಿ ರಾಮಪ್ಪ ಪೂಜಾರಿ ಎನ್ನುವ ಶಿಕ್ಷಕನಿಗೆ ಇದೀಗ ಗಂಭೀರವಾದ ಗಾಯಗಳಾಗಿವೆ. ರಾಮಪ್ಪ ಪೂಜಾರಿ ಎನ್ನುವ ಶಿಕ್ಷಕನಿಗೆ ಯುವಕ ಪವನ್ ಜಾಧವ್ ಬಾಟಲ್ ನಿಂದ ಇರಿದಿದ್ದಾನೆ. ರಾಮಪ್ಪ ಪೂಜಾರಿ ಖಾಸಗಿ ಸಂಸ್ಥೆಯ ಪ್ರಾಥಮಿಕ ಶಿಕ್ಷಕರಾಗಿದ್ದಾರೆ. ಕ್ರಿಕೆಟ್ ಆಡುವಾಗ ಬಾಲ್ ಶಿಕ್ಷಕನ ಮನೆಯಲ್ಲಿ ಅತ್ತಿತ್ತು. ಮನೆಯಲ್ಲಿ ಬಾಲ್ ಹೋಗಿದೆ ಕೊಡಿ ಎಂದು ಯುವಕ ಕೇಳಿದ್ದಾನೆ. ಇಲ್ಲಿ ಬಾಲ್ ಬಂದಿಲ್ಲ ಎಂದು ರಾಮಪ್ಪ ಹೇಳಿದ್ದಾರೆ. ಈ ವೇಳೆ ಶಿಕ್ಷಕನ ಜೊತೆಗೆ ಯುವಕ ಕಿರಿಕ್ ಮಾಡಿದ್ದಾನೆ. ನಂತರ ಶಾಲೆಗೆ ಹೋಗಿ ಬಾಟಲ್ ನಿಂದ ಯುವಕ ಶಿಕ್ಷಕನಿಗೆ ಇರಿದಿದ್ದಾನೆ.…
ಚಾಮರಾಜನಗರ : ಇಂದು ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟಕ್ಕೆ ಸಚಿವ ವೆಂಕಟೇಶ್ ಅವರು ಭೇಟಿ ನೀಡಿದ್ದರು. ಈ ವೇಳೆ ಬಿಳಿಗಿರಿರಂಗನ ಬೆಟ್ಟದ ತಿರುವಿನಲ್ಲಿ ಸಚಿವರ ಪೈಲಟ್ ವಾಹನ ಪಲ್ಟಿಯಾಗಿದೆ. ಯಳಂದೂರು ಠಾಣೆಯ ಪಿಎಸ್ಐ ಆಕಾಶ್ ಮತ್ತು ಚಾಲಕನಿಗೆ ಗಂಭೀರ ಗಾಯಗಳಾಗಿದ್ದು ಮೈಸೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಈ ಘಟನೆ ನಡೆದಿದೆ. ಬಿಳಿಗಿರಿರಂಗನ ಬೆಟ್ಟಕ್ಕೆ ಉಸ್ತುವಾರಿ ಸಚಿವ ವೆಂಕಟೇಶ್ ಅವರು ಬೇಟಿ ನೀಡಿದ್ದರು. ಸಚಿವರ ಎಸ್ಕಾರ್ಟ್ ಆಗಿ ಎಯಳಂದೂರು ಠಾಣೆಯ ಪಿಎಸ್ಐ ಆಕಾಶ್ ಅವರು ಹೋಗಿದ್ದರು. ಮಳೆ ಹಿನ್ನೆಲೆಯಲ್ಲಿ ತಿರುವಿನಲ್ಲಿ ಪೈಲಟ್ ವಾಹನ ಪಲ್ಟಿಯಾಗಿದೆ. ಗಂಭೀರವಾಗಿ ಗಾಯಗೊಂಡ ಪೈಲಟ್ ವಾಹನದ ಚಾಲಕ ಮತ್ತು ಪಿಎಸ್ಐ ಆಕಾಶ್. ಪಿ ಎಸ ಐ ಮತ್ತು ಚಾಲಕನಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಬೆಳಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಕಂಪನಿಯಲ್ಲಿ ಕೆಲಸ ಕೊಡಿಸುವ ಆಮಿಷ ತೋರಿಸಿ, ಅನೇಕರಿಂದ ಸುಮಾರು 14 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚನೆ ಎಸಗಿದ್ದ ಖಾಸಗಿ ಕಂಪನಿಯ HR ನನ್ನು ಇದೀಗ ಬೆಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಎಚ್ ಆರ್ ಪತ್ನೂಲ್ ಕಲಂದರ್ ಖಾನ್ ನನ್ನು ಇದೀಗ ಬೆಂಗಳೂರು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. 8 ಅಭ್ಯರ್ಥಿಗಳಿಗೆ 14 ಲಕ್ಷದ 23 ಸಾವಿರ ರೂ.ವಂಚಿಸಿದ್ದ. ಬಿಟಿಎಂ ಲೇಔಟ್ ಕಂಪನಿ ಒಂದರಲ್ಲಿ ಕಲಂದರ್ ಖಾನ್ ಎಚ್ಆರ್ ಆಗಿದ್ದ. ಕೆಲಸ ಅರಸಿ ಬರುವ ಅಭ್ಯರ್ಥಿಗಳೇ ಖಾನ್ ಟಾರ್ಗೆಟ್ ಆಗಿದ್ದರು. ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸದ ಆಮಿಷ ತೋರಿಸಿ ವಂಚನೆ ಎಸಗುತ್ತಿದ್ದ. 2 ಲಕ್ಷಕ್ಕೂ ಅಧಿಕ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಹಂತ ಹಂತವಾಗಿ ಹಣ ಹಾಕಿಸಿಕೊಂಡು ಎಚ್ ಆರ್ ವಂಚಿಸುತ್ತಿದ್ದ. ಈ ವೇಳೆ ಮೋಸ ಹೋದ ಗೀತಾ ಎಂಬ ಯುವತಿ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಯುವತಿಯ ದೂರನ್ನು ಆಧರಿಸಿ ಇದೀಗ ಸಿಸಿಬಿ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.…
ಬೆಂಗಳೂರು : ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಕೋಮು ಚಟುವಟಿಕೆಗಳನ್ನು ನಿಗ್ರಹಿಸಲು ವಿಶೇಷ ಪಡೆ ರಚನೆ ಮಾಡುವ ಸಂಬಂಧ ಪ್ರಸ್ತಾವನೆ ರಾಜ್ಯ ಸರ್ಕಾರಕ್ಕೆ ಬಂದಿದೆ. ಹಾಗಾಗಿ ಎರಡು ಮೂರು ದಿನಗಳಲ್ಲಿ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು. ಇಂದು ಬೆಂಗಳೂರಿನ ಸದಾಶಿವ ನಗರದ ತಮ್ಮ ನಿವಾಸದ ಬಳಿ ಮಾತನಾಡಿದ ಅವರು, ಕರಾವಳಿಯ ಮಂಗಳೂರು, ದಕ್ಷಿಣ ಕನ್ನಡ, ಉಡುಪಿ, ಜಿಲ್ಲೆಗಳಲ್ಲಿ ಕೋಮು ಚಟುವಟಿಕೆಗಳನ್ನು ನಿಗ್ರಹಿಸಲು ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪಡೆ ರಚನೆ ಮಾಡುವ ಪ್ರಸ್ತಾವನೆಯನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸರ್ಕಾರಕ್ಕೆ ಕಳುಹಿಸಿದ್ದಾರೆ. ಇದರ ಬಗ್ಗೆ ಚರ್ಚೆ ಮಾಡಿ ಎರಡು-ಮೂರು ದಿನಗಳಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು. ಮಂಗಳೂರಿನ ಸುಹಾಸ್ ಶೆಟ್ಟಿ ಪ್ರಕರಣವನ್ನು ಎನ್‌ಐಎಗೆ ವಹಿಸುವ ಅಗತ್ಯವಿಲ್ಲ. ಆದರೆ ಬಿಜೆಪಿಯವರು ರಾಜ್ಯಪಾಲರಿಗೆ ಮನವಿ ಮಾಡಿದ್ದಾರೆ. ರಾಜ್ಯಪಾಲರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ನಮಗೆ ಗೊತ್ತಿಲ್ಲ ಎಂದು ಬೆಂಗಳೂರಲ್ಲಿ ಗೃಹ ಸಚಿವ ಜಿ.ಪರಮೇಶ್ವರ್…
ಬೆಳಗಾವಿ : ಕಳೆದ ಮೇ 1 ರಂದು ಅಥಣಿ ತಾಲೂಕಿನ ಹೊರವಲಯದಲ್ಲಿ ಚರಂಡಿಯಲ್ಲಿ ಬಾಲಕನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಖಾಲಿ ನಿವೇಶನದಲ್ಲಿ ದೊರೆತ ಬಾಲಕನ ಶವಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಕಳ್ಳತನಕ್ಕೆ ಬಂದಿದ್ದಾನೆ ಎಂದು ಕಿರಾತಕರು ಬಾಲಕನನ್ನು ಕೊಂದು ಹಾಕಿದ್ದಾರೆ ಎಂದು ತನಿಖೆಯ ವೇಳೆ ತಿಳಿದುಬಂದಿದೆ. ಬೆಳಗಾವಿ ಜಿಲ್ಲೆಯ ಅಥಣಿ ಹೊರವಲಯದಲ್ಲಿ ಬಾಲಕನ ಶವ ಸಿಕ್ಕಿತ್ತು. ಮೇ 1ರಂದು ಕೊಳೆತ ಸ್ಥಿತಿಯಲ್ಲಿ ಬಾಲಕನ ಶವ ಪತ್ತೆಯಾಗಿತ್ತು. ಕೊಲೆ ಪ್ರಕರಣವನ್ನು ಮುಚ್ಚಿ ಹಾಕಲು ಪಾಪಿಗಳು ಆಸಿಡ್ ಬಳಕೆ ಮಾಡಿದ್ದಾರೆ. ಅನಾಥ ಶವ ಎಂದು ಪೊಲೀಸರೇ ಬಾಲಕನ ಶವ ಸಂಸ್ಕಾರ ನೆರವೇರಿಸಿದ್ದಾರೆ. ಶವ ಸಂಸ್ಕಾರ ನಡೆದ ಎರಡು ದಿನಗಳ ಬಳಿಕ ಬಾಲಕನ ಗುರುತು ಪತ್ತೆಯಾಗಿದೆ. ವಿಕಾಸ್ ಶಿವದಾಸ್ ಕೊಷ್ಠಿ (16) ಕೊಲೆಯಾದ ಬಾಲಕ ಎನ್ನಲಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಅರಳಿಹಟ್ಟಿ ಗ್ರಾಮದ ವಿಕಾಸ್ ಎಂದು ತಿಳಿದುಬಂದಿದೆ. ಕಾಳೆ ಫರ್ನಿಚರ್ಸ್ ನಲ್ಲಿ ಕಳ್ಳತನ ಮಾಡಲು ಬಂದಿದ್ದಾನೆ ಎಂದು ರಾತ್ರಿ ಶೆಡ್ ನಲ್ಲಿ ಕಟ್ಟಿಹಾಕಿ…
ತುಮಕೂರು : ಮೇ 10 ರಂದು ತುಮಕೂರು ಜಿಲ್ಲೆಯ ಹೆಬ್ಬುರಿನ ತಿಮ್ಮಸಂದ್ರ ಗ್ರಾಮದಲ್ಲಿ ಕರೆಂಟ್ ಶಾಕ್‌ನಿಂದ ಫ್ಯಾಕ್ಟರಿಯಲ್ಲಿ ಮೃತಪಟ್ಟಿದ್ದಾರೆಂದು ಬಿಂಬಿಸಲಾಗಿತ್ತು. ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೆ, ಪೊಲೀಸ್ ತನಿಖೆ ವೇಳೆ ಇದು ಅಸಹಜ ಸಾವಲ್ಲ, ಬದಲಾಗಿ ಕೊಲೆ ಎಂಬುದು ಗೊತ್ತಾಗಿದೆ. ಸದ್ಯ ಸಿಸಿಟಿವಿ ಆಧರಿಸಿ ತನಿಖೆ ಆರಂಭಿಸಿದ ಪೊಲೀಸರಿಗೆ, ಮಗನಿಂದಲೇ ಹತ್ಯೆ ನಡೆದಿರುವುದು ತಿಳಿದುಬಂದಿದೆ. ಆದರೆ ಮಗ ತಂದೆಯನ್ನು ಯಾವ ಕಾರಣಕ್ಕಾಗಿ ಕೊಲೆ ಮಾಡಿದ್ದಾನೆ ಎಂಬುದು ವಿಚಾರಣೆಯ ವೇಳೆ ತಿಳಿದು ಬಂದಿದೆ.ಐಸ್ ಕ್ರಿಮ್ ಮಾಲೀಕ ನಾಗೇಶ್ (58) ಮೃತ ದುರ್ದೈವಿ.ಫ್ಯಾಕ್ಟರಿಯಲ್ಲಿ ಇಟ್ಟಿದ್ದ ಹಣವನ್ನು ನಾಗೇಶ್ ಅವರ ಪುತ್ರ ಸೂರ್ಯ ತೆಗೆದುಕೊಳ್ಳುತ್ತಿದ್ದ. ತಂದೆಗೆ ಕಾಣದಂತೆ ಪದೇ ಪದೇ ಹಣ ತೆಗೆದುಕೊಳ್ಳುತ್ತಿದ್ದ. ಇದು ನಾಗೇಶ್‌ಗೆ ಗೊತ್ತಾದ ಬಳಿಕ ಮಗನ ಜೊತೆ ಜಗಳವಾಯಿತು.ಇನ್ನೊಂದೆಡೆ ಸೂರ್ಯನ ತಂಗಿಯನ್ನ ಲವ್ ಸಂಜಯ್ ಎಂಬಾತ ಪ್ರೀತಿ ಮಾಡುತ್ತಿದ್ದ. ಸಂಜಯ್ ಲವ್‌ಗೆ ಸೂರ್ಯನೇ ಸಪೋರ್ಟ್ ಮಾಡಿದ್ದ. ಈ ವಿಚಾರಕ್ಕೂ ನಾಗೇಶ್ ವಿರೋಧ ವ್ಯಕ್ತಪಡಿಸಿದ್ದರು. ಸಂಜಯ್ ಮನೆಗೆ…














