Author: kannadanewsnow05

ಮಂಗಳೂರು : ಮಂಗಳೂರಿನಲ್ಲಿ ಬೃಹತ್ ಡ್ರಗ್ಸ್ ಮಾರಾಟದ ಜಾಲವನ್ನು ಪೊಲೀಸರು ಇದೀಗ ಭೇದಿಸಿದ್ದಾರೆ. ತಮ್ಮ ಮಕ್ಕಳ ಡ್ರಗ್ಸ್ ಅಡಿಕ್ಟ್ ಬಗ್ಗೆ ಇಬ್ಬರು ಪೋಷಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೋಷಕರ ದೂರಿನ ಮೇರೆಗೆ ಪೊಲೀಸರು ಡ್ರಗ್ಸ್ ಜಾಲವನ್ನು ಇದೀಗ ಭೇದಿಸಿದ್ದಾರೆ. ಮಂಗಳೂರಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಮಂಗಳೂರು ಸೆನ್ ಕ್ರೈಂ ಠಾಣೆ ಪೋಲಿಸರಿಂದ ಈ ಒಂದು ಕಾರ್ಯಾಚರಣೆ ನಡೆದಿದೆ. ಮಂಗಳೂರಿನ ತುಷಾರ್ (21) ಧನ್ವಿಶೆಟ್ಟಿ (20) ಸಾಗರ್ ಕರ್ಕೆರ (19) ವಿಕಾಸ (23) ವಿಘ್ನೇಶ್ ಕಾಮತ್ (24) ಎನ್ನುವ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಮಂಗಳೂರಿನ ಹಾಲಾಡಿ ಬಳಿ ಇವರನ್ನು ಅರೆಸ್ಟ್ ಮಾಡಲಾಗಿದೆ. ಮಾದಕ ವಸ್ತುಗಳನ್ನು ಮಾಡಲು ತಯಾರಿ ಮಾಡುತ್ತಿದ್ದಾಗ ಪೊಲೀಸರು ರೇಡ್ ಮಾಡಿದ್ದಾರೆ. ಬಂಧಿತರಿಂದ 5 ಲಕ್ಷ 20 ಸಾವಿರ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಈ ಒಂದು ಗ್ಯಾಂಗ್ ಡ್ರಗ್ಸ್ ಪೂರೈಸುತ್ತಿತ್ತು ಗಾಂಜಾಬನ್ನು ಚಿಕ್ಕ ಚಿಕ್ಕ ಪ್ಯಾಕೆಟ್ ಮಾಡಿ ಮಂಗಳೂರಿನಲ್ಲಿ ಮಾರಾಟ…

Read More

ದಾವಣಗೆರೆ : ರಾಜ್ಯದಲ್ಲಿ ಆನ್ಲೈನ್ ಗೇಮ್ ಗೆ ಇದೀಗ ಮತ್ತೊಂದು ಜೀವ ಬಲಿಯಾಗಿದ್ದು, ದಾವಣಗೆರೆಯಲ್ಲಿ ಆನ್ಲೈನ್ ಗೇಮ್ ಗೆ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ದಾವಣಗೆರೆಯ ಸರಸ್ವತಿ ನಗರದ ಶಶಿಕುಮಾರ್ (25) ನೇಣಿಗೆ ಶರಣಾದ ಯುವಕ ಎಂದು ತಿಳಿದುಬಂದಿದೆ. ಆನ್ಲೈನ್ ಗೇಮ್ ನಲ್ಲಿ ಶಶಿಕುಮಾರ್ 18 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದ. CROWN-246 ಆನ್ ಲೈನ್ ಗೇಮ್ ನಲ್ಲಿ 18 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದ. ಆನ್ಲೈನ್ ಗೇಮ್ ನಿಷೇಧ ಮಾಡುವಂತೆ ಶಶಿಕುಮಾರ್ ಮನವಿ ಮಾಡಿದ್ದ. ಪಿಎಂ, ಸಿಎಂ, ಡಿಸಿ ಹಾಗು ಎಸ್ ಪಿ ಗೆ ಶಶಿಕುಮಾರ್ ಮನವಿ ಮಾಡಿದ್ದ. ಸೆಲ್ಫಿ ವಿಡಿಯೋ ಮಾಡಿ ಶಶಿಕುಮಾರ್ ತನ್ನ ನೋವು ಹೇಳಿಕೊಂಡಿದ್ದ. ನನ್ನಂತೆ ಹಣ ಕಳೆದುಕೊಂಡು ನೋವು ಅನುಭವಿಸುವವರು ಕಡಿಮೆಯಾಗಲಿ ಸೆಲ್ಫಿ ವಿಡಿಯೋ ಮಾಡಿ ಶಶಿಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ದಾವಣಗೆರೆಯ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಅಂಧ್ಯತ್ವ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಜಾರಿಗೆ ತಂದ ಆಶಾಕಿರಣ ಯೋಜನೆಯಡಿ ರಾಜ್ಯಾದ್ಯಂತ 393 ಶಾಶ್ವತ ದೃಷ್ಟಿ ಕೇಂದ್ರಗಳಿಗೆ ಇಂದು ಚಾಲನೆ ನೀಡಲಾಗಿದೆ. ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರದ ಬಿಬಿಎಂಪಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇಂದು ದೃಷ್ಟಿ ಕೇಂದ್ರ ಉದ್ಘಾಟಿಸಿದ ಡಿಸಿಎಂ ಡಿ.ಕೆ ಶಿವಕುಮಾರ್, ರಾಜ್ಯದ 393 ಆಶಾಕಿರಣ ದೃಷ್ಟಿ ಕೇಂದ್ರಗಳಿಗೆ ಏಕಕಾಲಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಶಾಕಿರಣ ಯೋಜನೆಯನ್ನು ಮರುವಿನ್ಯಾಸಗೊಳಿಸಿದ್ದು, ನಿರಂತರವಾಗಿ ಕಣ್ಣಿನ ಆರೋಗ್ಯ ಸೇವೆ ಒದಗಿಸುವತ್ತ 393 ಶಾಶ್ವತ ಆಶಾಕಿರಣ ದೃಷ್ಟಿ ಕೇಂದ್ರಗಳನ್ನ ತೆರೆಯಲಾಗಿದೆ. ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳು, ತಾಲೂಕು ಆಸ್ಪತ್ರೆ ಸೇರಿದಂತೆ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ದೃಷ್ಟಿ ಕೇಂದ್ರಗಳನ್ನು ತೆರೆಯಲಾಗಿದ್ದು, ದೃಷ್ಟಿದೋಷ ಹೊಂದಿದವರು ತಪಾಸಣೆ ಮಾಡಿಸಿಕೊಂಡು, ಉಚಿತವಾಗಿ ಕನ್ನಡಕಗಳನ್ನ ಪಡೆಯಬಹುದಾಗಿದೆ. ಅಲ್ಲದೇ ಕಣ್ಣಿನ ಪೊರೆ ಶಸ್ತ್ರಚುಕಿತ್ಸೆಯನ್ನ ಉಚಿತವಾಗಿ ಕಲ್ಪಿಸಲಾಗುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಕಣ್ಣಿನ ಆರೈಕೆಗೆ ರಾಜ್ಯ ಸರ್ಕಾರ ಜಾರಿಗೆ ತಂದ…

Read More

ಬೆಂಗಳೂರು : ರಾಜ್ಯ ಸರ್ಕಾರದ ಸಿಎ ಶಾಲಿನಿ ರಜನೀಶ್ ಅವರ ಕುರಿತು ಬಿಜೆಪಿ ಪರಿಷತ್ ಸದಸ್ಯ ಎನ್.ರವಿಕುಮಾರ್ ಸಂಸದೀಯ ಪದ ಬಳಸಿದ ವಿಚಾರವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಎನ್. ರವಿಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಿಜೆಪಿಯ ಚೀಫ್ ವಿಪ್ ಹೀಗೆ ಚೀಪ್ ಆಗಿ ಮಾತಾಡ್ತಾನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರವಿ ಕುಮಾರ್ ವಿರುದ್ಧ ಹೆಬ್ಬಾಳ್ಕರ್ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ವಿಪ್ ಚೀಫ್ ಆಗಿ ಮಾತಾಡ್ತಾನೆ ಉಗಿಬೇಕು. ಮಹಿಳೆಯರು ಹಾದಿ ಬೀದಿಯಲ್ಲಿ ರವಿಕುಮಾರ್ ಅವರನ್ನು ಕೇಳಬೇಕು ಹೇಗಿದೆ ಅಂತ ಹೇಳಿಕೆಯಿಂದ ಗೊತ್ತಾಗುತ್ತದೆ. ಇದು ಇಡೀ ಬಿಜೆಪಿಗೆ ಕಳಂಕ ಇದು ಬಿಜೆಪಿ ನಾಯಕರು ಮನಸ್ಥಿತಿಯಾಗಿದೆ. ಬಿಜೆಪಿ ನಾಯಕರು ಮಹಿಳೆಯರ ಬಗ್ಗೆ ಮಾತನಾಡೋದು ಹೀಗೆ ಅನಿಸುತ್ತದೆ ಇದೇ ಮೊದಲ ಬಿಜೆಪಿಯವರು ಅನೇಕ ಬಾರಿ ಹೀಗೆ ಮಹಿಳೆಯರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಸಿಎಸ್ ಅವರು ಸರ್ಕಾರದ ಮುಖ್ಯಸ್ಥರು ಮಹಿಳೆಯರಿಗೆ ಶಾಲಿನಿ…

Read More

ಬೆಂಗಳೂರು : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ವಯೋವೃದ್ಧರು, ಬಡಜನರು ಸೇರಿದಂತೆ ಜನಸಾಮಾನ್ಯರ ಕಣ್ಣಿನ ಸುರಕ್ಷತೆಯ ಕಾಳಜಿ ವಹಿಸುವ ಸಲುವಾಗಿ ನಮ್ಮ ಸರ್ಕಾರವು ರಾಜ್ಯದ 8 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಿದ್ದ ಆಶಾಕಿರಣ ಯೋಜನೆಯ ಮಹತ್ವವನ್ನು ಖುದ್ದು ವಿಶ್ವ ಆರೋಗ್ಯ ಸಂಸ್ಥೆಯೇ ಪ್ರಶಂಸಿಸಿದ್ದು ಹೆಮ್ಮೆಯ ವಿಚಾರ ಎಂದು ಸಿಎಂ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು ಸಾರ್ವಜನಿಕರ ಮನೆ ಬಾಗಿಲಿಗೆ ತೆರಳಿ ದೃಷ್ಟಿ ಪರೀಕ್ಷೆ ಮಾಡುವುದು, ದೃಷ್ಟಿದೋಷ ಹೊಂದಿದವರಿಗೆ ಉಚಿತ ಶಸ್ತ್ರ ಚಿಕಿತ್ಸೆ ಹಾಗೂ ಕನ್ನಡಕ ವಿತರಣೆ ಮಾಡುವುದು ಸೇರಿದಂತೆ ಸಾರ್ವಜನಿಕರ ಕಣ್ಣಿನ ಆರೈಕೆ ಮಾಡುವ ಉದ್ದೇಶದ ಈ ಯೋಜನೆಯು ಸಮಾಜದಲ್ಲಿ ಧನಾತ್ಮಕ ಬದಲಾವಣೆಗೆ ಕಾರಣವಾಗಿದೆ. ಈ ವರೆಗೆ ಒಟ್ಟು 1.40 ಕೋಟಿ ಜನರನ್ನು ನೇತ್ರ ಪರೀಕ್ಷೆಗೆ ಒಳಪಡಿಸಲಾಗಿದ್ದು ಅವರಲ್ಲಿ 24.50 ಲಕ್ಷ ಜನರಲ್ಲಿ ದೃಷ್ಟಿದೋಷ, ಇನ್ನಿತರೆ ನೇತ್ರದ ತೊಂದರೆಗಳನ್ನು ಪತ್ತೆ ಮಾಡಿ ಉಚಿತ ಚಿಕಿತ್ಸೆ ಒದಗಿಸಲಾಗಿದೆ. 4.30 ಲಕ್ಷ ಜನರಿಗೆ ಉಚಿತ ಕನ್ನಡಕ ವಿತರಣೆ…

Read More

ಬೆಂಗಳೂರು : ಬೆಂಗಳೂರಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಕಾಲೇಜು ವಿದ್ಯಾರ್ಥಿಗೆ ಬಿಎಂಟಿಸಿ ಬಸ್ ಒಂದು ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹರಪನಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ. ಹರಪನಹಳ್ಳಿ ಬಳಿ ವಿದ್ಯಾರ್ಥಿಗೆ ಬಿಎಂಟಿಸಿ ಬಸ್ ಗುದ್ದಿಕೊಂಡು ಹೋಗಿದೆ. ವಕೀಲ ಬಡಾವಣೆ ನಿವಾಸಿ ಸಂಜಯ್ (17) ಎನ್ನುವ ವಿದ್ಯಾರ್ಥಿಗೆ ಗಂಭೀರವಾದ ಗಾಯಗಳಾಗಿವೆ. ಶಾಲಾ ಬಸ್ ಹೊರಟಿತು ಎಂದು ವಿದ್ಯಾರ್ಥಿ ಹಿಂದೆ ಓಡುತ್ತಿದ್ದ ವಿದ್ಯಾರ್ಥಿಗಳು ಇದ್ದರೂ ಗಮನಿಸದೇ ಶಾಲಾ ಬಸ್ ಚಾಲಕ ತೆರಳಿದ್ದಾನೆ. ಶಾಲಾ ಬಸ್ ಹಿಂದೆ ಓಡುತ್ತಿದ್ದ ವಿದ್ಯಾರ್ಥಿಗೆ ಹಿಂದಿನಿಂದ ಬಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ. ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

Read More

ಬೆಂಗಳೂರು : ಬಿಜೆಪಿ ಎಂಎಲ್ಸಿ ಆಗಿರುವಂತಹ ಎನ್ ರವಿಕುಮಾರ್ ಅವರು ಇತ್ತೀಚಿಗೆ ಸರ್ಕಾರಿ ಅಧಿಕಾರಿಗಳ ವಿರುದ್ಧ ನಾಲಿಗೆ ಹರಿಬಿಡುತ್ತಿದ್ದಾರೆ ಇತ್ತೀಚೆಗೆ ಕಲ್ಬುರ್ಗಿಯ ಜಿಲ್ಲಾಧಿಕಾರಿ ಫೌಜಿಯಾ ತರುನ್ನಂ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದರು. ಸರ್ಕಾರದ ಸಿ.ಎಸ್ ಶಾಲಿನಿ ರಜನಿಶ್ ಅವರ ಕುರಿತು ಅವೆ ಹೇಳಿನ ಕಾರ್ಯ ಹೇಳಿಕೆ ನೀಡಿದ್ದಾರೆ ಈ ಕುರಿತು ಕಾಂಗ್ರೆಸ್ ತೀವ್ರ ಅಕ್ರೋಶ ವ್ಯಕ್ತಪಡಿಸಿದೆ. ಹೌದು ಸರ್ಕಾರದ ಸಿಎಸ್ ವಿರುದ್ಧ ರವಿಕುಮಾರ್ ಅವಹೇಳನ ಹೇಳಿಕೆ ನೀಡಿದ್ದು, ಸಿಎಸ್ ಶಾಲಿನಿ ರಜನೀಶ್ ಅವರನ್ನು ಎನ್ ರವಿಕುಮಾರ್ ಅವಾಚ್ಯ ಪದ ಬಳಸಿ ಅವಮಾನಿಸಿದ್ದಾರೆ. ಜೂನ್ 30 ರಂದು ಪ್ರತಿಭಟನೆ ವೇಳೆ ಶಾಲಿನಿ ರಜನಿಶ್ ಅವರನ್ನು ನಿಂದಿಸಿದ್ದಾರೆ ಬೆಂಗಳೂರಿನಲ್ಲಿ ಸಿಎಸ್‌ಗೆ ದೂರು ಕೊಡಲು ನಿಯೋಗ ತೆರಳಿತ್ತು. ಈ ವೇಳೆ ಬಿಜೆಪಿ MLC ಎನ್.ರವಿಕುಮಾರ್ ಅವಾಚ್ಯ ಪದ ಬಳಕೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಹಿಂದೆ ಕಲ್ಬುರ್ಗಿ ಜಿಲ್ಲಾಧಿಕಾರಿಯ ವಿರುದ್ಧ ನಾಲಿಗೆ ಹರಿಬಿಟ್ಟಿದ್ದರು. ತಿಂಗಳ ಹಿಂದೆ ಅಷ್ಟೇ ಕಲ್ಬುರ್ಗಿ ಜಿಲ್ಲಾಧಿಕಾರಿ ವಿರುದ್ಧವು ರವಿಕುಮಾರ್…

Read More

ಧಾರವಾಡ : ಬೆಳಗಾವಿಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ವೇದಿಕೆ ಮೇಲೆಯೇ ಸಿಎಂ ಸಿದ್ದರಾಮಯ್ಯ ಹೆಚ್ಚುವರಿ ಎಸ್ಪಿ ಆಗಿದ್ದ ನಾರಾಯಣ ಭರಮನಿ ಅವರಿಗೆ ಕಪಾಳಮೋಕ್ಷಕ್ಕೆ ಮುಂದಾಗಿದ್ದರು. ಇದೇ ವಿಚಾರವಾಗಿ ನಾರಾಯಣ ಭರಮನಿ ಸ್ವಯಂ ನಿವೃತ್ತಿಗೆ ಮುಂದಾಗಿ ಪತ್ರ ಸಹ ಬರೆದಿದ್ದರು. ಇದೀಗ ನಾರಾಯಣ ಬರಮಣಿ ಅವರು ನಾನು ದೈನಂದಿನ ಕೆಲಸಕ್ಕೆ ಮತ್ತೆ ಹಾಜರಾಗುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಧಾರವಾಡ ಎಎಸ್ಪಿ ನಾರಾಯಣ ಬರಮನಿ ರಾಜೀನಾಮೆ ವಿಚಾರವಾಗಿ, ನಾನು ಶಿಸ್ತಿನ ಇಲಾಖೆಯಲ್ಲಿ ಇದ್ದೇನೆ. ನನ್ನ ಭಾವನೆಗಳನ್ನು ಇಲಾಖೆ ಮೇಲಾಧಿಕಾರಿಗಳಿಗೆ ತಿಳಿಸಿದ್ದೇನೆ. ಮೇಲಾಧಿಕಾರಿಗಳು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರಹ ಸಚಿವ ಜಿ ಪರಮೇಶ್ವರ್ ರವರು ನನ್ನ ಜೊತೆಗೆ ಮಾತನಾಡಿದ್ದಾರೆ. ಈಗ ನಾನು ದೈನಂದಿನ ಕೆಲಸಕ್ಕೆ ಹಾಜರಾಗುತ್ತಿದ್ದೇನೆ ರಾಜೀನಾಮೆ ಅಂಗೀಕಾರ ಕುರಿತು ಸರ್ಕಾರ ನಿರ್ಧರಿಸುತ್ತದೆ ನಾನೀಗ ದೈನಂದಿನ ಕೆಲಸಕ್ಕೆ ಹಾಜರಾಗುತ್ತೇನೆ ಎಂದು ಧಾರವಾಡದಲ್ಲಿ ಎಎಸ್ಪಿ ನಾರಾಯಣ ಭರಮಣಿ ಹೇಳಿಕೆ ನೀಡಿದರು.

Read More

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತು ಇತ್ತೀಚಿಗೆ ಭಾರಿ ಚರ್ಚೆ ನಡೆದಿತ್ತು ನಿನ್ನೆ ಚಿಕ್ಕಬಳ್ಳಾಪುರದಲ್ಲಿ ವಿಶೇಷ ಸಂಪುಟ ಸಭೆಗೂ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷಗಳ ಕಾಲ ನಾನೇ ಸಿಎಂ ಎಂದು ಘೋಷಣೆ ಮಾಡಿದ್ದಾರೆ ಈ ವಿಚಾರವಾಗಿ ಬೆಂಗಳೂರಿನಲ್ಲಿ ಅಧ್ಯಕ್ಷ ಡಿಕೆ ಸುರೇಶ್ ಅವರು ಮಾತನಾಡಿದ್ದು ಸದ್ಯ ರಾಜ್ಯದಲ್ಲಿ ಸಿಎಂ ಕುರ್ಚಿ ಕಾಲಿ ಇಲ್ಲ ಏನು ಮಾಡೋದು? ನನಗೂ ನಮ್ಮ ಅಣ್ಣ ಸಿಎಂ ಆಗಬೇಕೆಂಬ ಆಸೆ ಇದೆ ಎಂದು ಹೇಳಿಕೆ ನೀಡಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಬಗ್ಗೆ ಮಾತನಾಡುವಷ್ಟು ದೊಡ್ಡವನು ನಾನು ಅಲ್ಲ. ಪಕ್ಷದ ಒಳಗೊಡೆಯೋ ಎಲ್ಲರೂ ಆಯ್ಕೆ ಆಗಿರುವುದು. ಪಕ್ಷವನ್ನು ಬಲಪಡಿಸಲು ನಾವೆಲ್ಲ ಬದ್ಧರಾಗಿರಬೇಕು. ನಮ್ಮ ಅಣ್ಣ ಒಮ್ಮೆ ಸಿಎಂ ಆಗಬೇಕು ಎಂಬ ಆಸೆ ನನಗೂ ಇದೆ. ಈ ಆಸೆ ಎಂದು ಇದೆ ನಾಳೆಯು ಇರುತ್ತೆ ಮುಂದೆಯೂ ಇರುತ್ತದೆ. ರಾಜ್ಯದಲ್ಲಿ ಸದ್ಯ ಸಿಎಂ ಕುರ್ಚಿ ಕಾಲಿ ಇಲ್ಲ ಏನು ಮಾಡಬೇಕು? ಎಂದರು. ಈ ಅವಧಿಯಲ್ಲೇ CM…

Read More

ಬೆಂಗಳೂರು : ಬೆಂಗಳೂರಿನಲ್ಲಿ ಒಳ ಮೀಸಲಾತಿ ಸರ್ವೇ ಮಾಡುವ ವೇಳೆ ಸಾರ್ವಜನಿಕರೊಂದಿಗೆ ಕಿರಿಕ್ ಮಾಡಿದ್ದು ಅಲ್ಲದೆ ಹಲ್ಲೆಗೆ ಮುಂದಾಗಿದ್ದ, ಬಿಬಿಎಂಪಿ ಮೂವರು ಅಧಿಕಾರಿಗಳನ್ನು ಇದೀಗ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಸರ್ವೆ ಮಾಡದೆ ಮನೆ ಬಾಗಿಲಿಗೆ ಸ್ಟಿಕರ್ ಅಂಟಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಮನೆ ಮಾಲೀಕರ ಮೇಲೆ ಸಿಬ್ಬಂದಿಗಳು ಹಲ್ಲೆಗೆ ಯತ್ನಿಸಿದ್ದಾರೆ ಈ ಹಿನ್ನೆಲೆ ಮೂರು ಅಧಿಕಾರಿಗಳನ್ನು ಇದೀಗ ಸಸ್ಪೆಂಡ್ ಮಾಡಲಾಗಿದೆ. ಹೌದು ಕಾಟಾಚಾರಕ್ಕೆ ಸಮೀಕ್ಷೆ ನಡೆಸಿದ ಮೂವರು ಸಿಬ್ಬಂದಿಗಳು ಅಮಾನತುಗೊಂಡಿದ್ದಾರೆ. ಒಳ ಮೀಸಲಾತಿ ಸಮೀಕ್ಷೆ ವೇಳೆ ಬಿಬಿಎಂಪಿ ಸಿಬ್ಬಂದಿ ಕಿರಿಕ್ ಮಾಡಿರುವ ವಿಚಾರವಾಗಿ ಇದೀಗ ಸಮೀಕ್ಷೆ ನಡೆಸಿದ ಮೂವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ವಿವಿಧ ವಾರ್ಡ್ ಗಳ ಮೂರು ಅಧಿಕಾರಿಗಳು ಸಸ್ಪೆಂಡ್ ಆಗಿದ್ದಾರೆ. ಸಾರ್ವಜನಿಕರ ಜೊತೆ ಕಿರಿಕ್ ಆರೋಪ ಬೆನ್ನಲ್ಲೇ ಸಸ್ಪೆಂಡ್ ಮಾಡಲಾಗಿದೆ. 198ನೇ ವಾರ್ಡ್ ಕಂದಾಯ ವಸೂಲಿಗಾರ ಸೆಂದಿಲ್ ಕುಮಾರ್, ಬಿಬಿಎಂಪಿ 24ನೇ ವಾರ್ಡಿನ ಕಂದಾಯ ವಸೂಲಿಕಾರ ಪೆದ್ದರಾಜು ಹಾಗೂ ಬಿಬಿಎಂಪಿ ರೆವೆನ್ಯೂ ಇನ್ಸ್ಪೆಕ್ಟರ್ ರಮೇಶ್ ಕುಮಾರ್ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.

Read More