Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಬೆಂಗಳೂರಲ್ಲಿ ಟ್ರಾಫಿಕ್ ಜಗತ್ತಲ್ಲಿ ನಾವು ಎಷ್ಟೇ ಹುಷಾರಾಗಿ ಇದ್ದರೂ ಸಹ ಕೆಲವೊಂದು ಬಾರಿ ತಪ್ಪು ನಮ್ಮದಲ್ಲದಿದ್ದರೂ ಅಪಘಾತ ಆಗುವ ಸಂಭವ ಇರುತ್ತೆ. ಇದೀಗ ರಸ್ತೆಯ ಮೇಲೆ ಬಿದ್ದ ಯುವತಿಯ ಮೇಲೆ ಕಾರು ಹರಿದು ಸಾವನ್ನಪ್ಪಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಹೌದು ಸ್ಕೂಟರ್ನಲ್ಲಿ ಬರುತ್ತಿದ್ದಾಗ ಆಯತಪ್ಪಿ ರಸ್ತೆಗೆ ಬಿದ್ದ ಯುವತಿಯ ಮೇಲೆ ಕಾರು ಹರಿದು ಇಂಜಿನಿಯರಿಂಗ್ ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ದೇವತಾ (24) ಸ್ಥಳದಲ್ಲೇ ಮೃತಪಟ್ಟ ವಿದ್ಯಾರ್ಥಿನಿ. ಈ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ವಿದ್ಯಾರ್ಥಿನಿ ದೇವತಾ ಸ್ಕೂಟರ್ನಲ್ಲಿ ಬರುತ್ತಿದ್ದಾಗ ಆಯತಪ್ಪಿ ರಸ್ತೆಗೆ ಬಿದ್ದಿದ್ದಾಳೆ. ಇದೇ ವೇಳೆ ಎದುರಿನಿಂದ ಬಂದ ಕಾರು ಆಕೆಯ ಮೇಲೆ ಹರಿದು ಹೋಗಿದೆ. ಪರಿಣಾಮ ವಿದ್ಯಾರ್ಥಿನಿ ಧರಿಸಿದ್ದ ಹೆಲ್ಮೆಟ್ ಬೇರ್ಪಟ್ಟಿದ್ದರಿಂದ ಯುವತಿ ಸ್ಥಳದಲ್ಲೇ ಉಸಿರು ನಿಲ್ಲಿಸಿದ್ದಾಳೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಸರ್ಕಾರ ಜಾರಿ ಮಾಡಿರುವ ಐದು ಗ್ಯಾರಂಟಿ ಯೋಜನೆಗಳು ಆಗಿರಬಹುದು ಅಥವಾ ಸರ್ಕಾರದ ಸಾಧನೆಗಳ ಕುರಿತಂತೆ ಈಗಾಗಲೇ ಸಾಧನ ಸಮಾವೇಶ ನಡೆಸುತ್ತಿದೆ. ಇದೀಗ ಈ ಒಂದು ಗ್ಯಾರಂಟಿ ಯೋಜನೆಗಳಿಗೆ ನಮ್ಮಲ್ಲಿ ಯಾವುದೇ ಹಣದ ಕೊರತೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮ್ಮ ಗ್ಯಾರಂಟಿ ಯೋಜನೆಗಳಿಗೆ ಯಾವುದೇ ಹಣಕಾಸಿನ ಕೊರತೆ ಇಲ್ಲ. ಅಲ್ಲದೆ, ಕಳೆದ ಬಾರಿಯ ಬಜೆಟ್ನಲ್ಲಿ ಗ್ಯಾರಂಟಿ ಯೋಜನೆಗಳಿಗೆ 52 ಸಾವಿರದ 9 ಕೋಟಿ ರೂ. ಅನುದಾನ ಮೀಸಲಿಡಲಾಗಿತ್ತು. ಈ ವರ್ಷ 50 ಸಾವಿರದ 18 ಕೋಟಿ ರೂ. ಮೀಸಲಿಡಲಾಗಿದೆ. ಹೀಗಾಗಿ ಹಣಕಾಸಿನ ತೊಂದರೆ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಕೂಡಲೇ ಹಂತ ಹಂತವಾಗಿ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು ಅದರಲ್ಲಿ ಮಹಿಳೆಯರಿಗೆ ಎಂದೆ ಗೃಹಲಕ್ಷ್ಮಿ…
ಬೆಂಗಳೂರು : ಈಗಾಗಲೇ ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಆಗುತ್ತಿದ್ದು, ಕಳೆದ ಕೆಲವು ದಿನಗಳಿಂದ ಬಳ್ಳಾರಿ ಗದಗ ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಿಡಿಲು ಬಡಿದು ಹಲವರು ಸಾವನಪ್ಪಿದ್ದಾರೆ. ಈಗ ನಾಳೆಯಿಂದ ಬೆಂಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜಧಾನಿ ಸೇರಿ ರಾಜ್ಯದ 23 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ವಿಜಯಪುರ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಮೈಸೂರು, ತುಮಕೂರು, ವಿಜಯಪುರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರಲ್ಲಿ ಬಿಸಿಲಿನ ವಾತಾವರಣ ಹೆಚ್ಚಾಗಿದ್ದು, ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆ ಇದೆ. ಹೆಚ್ಎಎಲ್ನಲ್ಲಿ 32.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 31.3 ಡಿಗ್ರಿ ಸೆಲ್ಸಿಯಸ್…
ಮೈಸೂರು : ನಿನ್ನೆಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ ವಾಗಿ ಬದಲಾವಣೆ ಆಗಿದೆ. ಇದೆ ವಿಚಾರವಾಗಿ ಗ್ರೇಟರ್ ಬೆಂಗಳೂರಿಗೆ ಶೀಘ್ರದಲ್ಲೇ ಮೀಸಲಾತಿ ಪ್ರಕಟಿಸಿ, ವಿಭಾಗಗಳನ್ನು ವಿಂಗಡಿಸಿ ಆದಷ್ಟು ಬೇಗ ಚುನಾವಣೆ ನಡೆಸುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಮೈಸೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂದಿನ 4 ತಿಂಗಳಲ್ಲಿ ತಡಮಾಡದೇ, ಬೇಗ ಚುನಾವಣೆ ಮಾಡಲಾಗುವುದು. ಇದರ ಸಂಬಂಧ ಎಲ್ಲಾ ಪಕ್ಷಗಳ ಮುಖಂಡರ ಸಭೆ ಕರೆಯಲಾಗುವುದು. ಗ್ರೇಟರ್ ಬೆಂಗಳೂರು ರಚನೆಗೆ ಎಲ್ಲಾ ಪಕ್ಷದವರು ಸಲಹೆ, ಸೂಚನೆ ನೀಡಿದ್ದಾರೆ. ಎಲ್ಲರ ಸಲಹೆಗಳನ್ನು ಪಡೆದು ಗ್ರೇಟರ್ ಬೆಂಗಳೂರು ರಚನೆ ಮಾಡಲಾಗಿದೆ ಎಂದು ತಿಳಿಸಿದರು.
ಯಾದಗಿರಿ : ಯಾದಗಿರಿಯಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಕಾಲು ಜಾರಿ ಬಾವಿಗೆ ಬಿದ್ದು ಇಬ್ಬರು ಯುವತಿಯರು ಸಾವನಪ್ಪಿರುವ ಘಟನೆ ಯಾದಗಿರಿ ತಾಲೂಕಿನ ಮೋಟ್ನಳ್ಳಿ ಎಂಬ ಗ್ರಾಮದಲ್ಲಿ ನಡೆದಿದೆ. ವೈಶಾಲಿ (17) ಮತ್ತು ನವೀತ (16) ಮೃತ ಯುವತಿಯರು ಎಂದು ತಿಳಿದುಬಂದಿದೆ. ಬಟ್ಟೆ ತೊಳೆಯುವಾಗ ಕಾಲು ಜಾರಿ ಬಾವಿಗೆ ಬಿದ್ದು ಇಬ್ಬರು ಯುವತಿಯರು ಸಾವನಪ್ಪಿದ್ದಾರೆ. ಯುವತಿಯರ ಮೃತದೇಹಗಳನ್ನು ಸ್ಥಳೀಯರು ಬಾವಿಯಿಂದ ಹೊರಗಡೆ ತೆಗೆದಿದ್ದಾರೆ. ಘಟನೆ ಕುರಿತಂತೆ ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು : ಮಂಗಳೂರಿನಿಂದ ಲಕ್ಷ ದೀಪಕ್ಕೆ ತೆರಳುತ್ತಿದ್ದ ಹಡಗು ಮುಳುಗಡೆಯಾಗಿದ್ದು, ಸರಕು ತುಂಬಿದ್ದ ಮಂಗಳೂರಿನ ಹಡಗು ಇದೀಗ ಮುಳುಗಡೆಯಾಗಿದೆ. MSV ಸಲಾಮತ್ ಎಂಬ ಹೆಸರಿನ ಹಡಗು, ಮಂಗಳೂರಿನಿಂದ ಲಕ್ಷ ದೀಪಕ್ಕೆ ತೆರಳುವಾಗ ಸಮುದ್ರದಲ್ಲಿ ಮುಳುಗಡೆಯಾಗಿದೆ. ಸುಮಾರು 60 ನಾಟಿಕಲ್ ಮೈಲು ದೂರದಲ್ಲಿದ್ದಾಗ ಹಡಗು ಮುಳುಗಿದೆ. ಮೇ 12 ರಂದು ಮಂಗಳೂರು ಬಂದರಿನಿಂದ ಈ ಒಂದು ಹಡಗು ಲಕ್ಷದ್ವೀಪದ ಕಡೆಗೆ ಹೊರಟಿತ್ತು. ತಾಂತ್ರಿಕ ಸಮಸ್ಯೆಯಿಂದ ನೀರು ನುಗ್ಗಿ ಹಡಗು ಸಂಪೂರ್ಣವಾಗಿ ಮುಳುಗಡೆಯಾಗಿದೆ. ಈ ವೇಳೆ ಹಡಗಿನಿಂದ ಹಾರಿ 6 ಸಿಬ್ಬಂದಿಗಳು ತಮ್ಮ ಪ್ರಾಣ ಉಳಿಸಿಕೊಂಡಿದ್ದಾರೆ. ಡಿಂಗಿ ಬೋಟ್ ಮೂಲಕ ಸಿಬ್ಬಂದಿಗಳು ಪ್ರಾಣ ಉಳಿಸಿಕೊಂಡಿದ್ದಾರೆ. ಕರಾವಳಿ ರಕ್ಷಣಾಪಡಿಗೆ ಬಂದ ಮಾಹಿತಿ ಹಿನ್ನೆಲೆಯಲ್ಲಿ ಸಿಬ್ಬಂದಿಗಳನ್ನು ರಕ್ಷಣೆ ಮಾಡಲಾಗಿದೆ. ಪೋಸ್ಟ್ ಕಾರ್ಡ್ ವಿಕ್ರಂ ಚಿಕ್ನಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಇಸ್ಮಾಯಿಲ್ ಶರೀಫ್ ಅಲೆಮನ್, ಅಹಮದ್ ಭಾಯ್, ಸುಲೇಮಾನ್ ಇಸ್ಮಾಯಿಲ್, ಕಸಮ ಇಸ್ಮಾಯಿಲ್, ಅಕ್ಬರ್ ಅಬ್ದುಲ್ ಸುರಾನಿ ಮತ್ತು ಅಜ್ಮಲ್ ಸಿಬ್ಬಂದಿಗಳನ್ನು ರಕ್ಷಣೆ ಮಾಡಲಾಗಿದೆ.
ನವದೆಹಲಿ : ಪಾಕಿಸ್ತಾನದ ಬಲೂಚಿಸ್ತಾನದ ಪಂಜ್‌ಗುರ್ ಜಿಲ್ಲೆಯ ಮಜ್‌ಬೂರಾಬಾದ್‌ನ ಬೋನಿಸ್ತಾನ್‌ನಲ್ಲಿ ಮೇ 9ರಂದು ನಡೆಸಿದ ದಾಳಿಯಲ್ಲಿ 14 ಪಾಕಿಸ್ತಾನಿ ಸೈನಿಕರನ್ನು ಕೊಂದಿರುವುದಾಗಿ ಘೋಷಿಸಿದೆ. ‘ಆಪರೇಷನ್ ಹೆರೋಫ್’ ಎಂಬ ಕಾರ್ಯಾಚರಣೆಯಡಿ ನಡೆದ ಈ ದಾಳಿಯಲ್ಲಿ ಗುಂಡು ನಿರೋಧಕ ವಾಹನವನ್ನು ರಿಮೋಟ್-ನಿಯಂತ್ರಿತ ಸ್ಫೋಟಕ ಸಾಧನ (ಐಇಡಿ)ದಿಂದ ಧ್ವಂಸಗೊಳಿಸಲಾಗಿದ್ದು, ವಾಹನದಲ್ಲಿದ್ದ ಎಲ್ಲಾ 14 ಸೈನಿಕರು ಸಾವನ್ನಪ್ಪಿದ್ದಾರೆ. ಈ ಕುರಿತಂತೆ ಬಲೂಚ್ ಆರ್ಮಿ ವಿಡಿಯೋ ಒಂದನ್ನು ರಿಲೀಸ್ ಮಾಡಿದೆ. ಈ ದಾಳಿಯ ಸಂಪೂರ್ಣ ವೀಡಿಯೊವನ್ನು ಬಿಎಲ್‌ಎ ಮೇ 14, 2025ರಂದು ಬಿಡುಗಡೆ ಮಾಡಿದ್ದು, ತಾವೇ ಈ ಕೃತ್ಯವನ್ನು ಎಸಗಿರುವುದಾಗಿ ದೃಢಪಡಿಸಿದೆ.ಈ ದಾಳಿಯು ಬಲೂಚಿಸ್ತಾನದಲ್ಲಿ ದೀರ್ಘಕಾಲದಿಂದ ನಡೆಯುತ್ತಿರುವ ಅಶಾಂತಿಯನ್ನು ಎತ್ತಿ ತೋರಿಸುತ್ತದೆ. ಬಲೂಚ್ ಬೇರ್ಪಾಟುವಾದಿ ಗುಂಪುಗಳು, ಪಾಕಿಸ್ತಾನ ಸರ್ಕಾರವು ರಾಜಕೀಯವಾಗಿ ಹೊರಗಿಟ್ಟು, ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ ಮತ್ತು ಪ್ರದೇಶದ ಸಮೃದ್ಧ ಖನಿಜ ಸಂಪತ್ತನ್ನು ಶೋಷಣೆ ಮಾಡುತ್ತಿದೆ ಎಂದು ಆರೋಪಿಸಿವೆ. ಈ ಘಟನೆಯು ಭಾರತ-ಪಾಕಿಸ್ತಾನ ಒಡಂಬಡಿಕೆಯ ಸಂದರ್ಭದಲ್ಲಿ ನಡೆದಿದ್ದು, ಏಪ್ರಿಲ್ 22, 2025ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ…
ಮೈಸೂರು : ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಬೆನ್ನಲ್ಲೆ ಇದೀಗ ದೇಶದೇಲ್ಲೆಡೆ ಭದ್ರತೆ ವಿಚಾರವಾಗಿ ಚರ್ಚೆ ಆಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಮೈಸೂರು ಅರಮನೆಯ ಸುತ್ತಮುತ್ತಲು ಡ್ರೋನ್ ಹಾರಾಟ ನಿಷೇಧಿಸಿ ಅರಮನೆ ಆಡಳಿತ ಮಂಡಳಿ ಈ ಕುರಿತು ಆದೇಶ ಹೊರಡಿಸಿದೆ. ಹೌದು ಭದ್ರತೆಯ ದೃಷ್ಟಿಯಿಂದ ವಿಶ್ವವಿಖ್ಯಾತ ಮೈಸೂರು ಅಂಬಾವಿಲಾಸ ಅರಮನೆ ಸುತ್ತ ಡ್ರೋನ್ ಹಾರಾಟ ನಿಷೇಧಿಸಿ ಅರಮನೆಯ ಆಡಳಿತ ಮಂಡಳಿಯ ಉಪ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಅರಮನೆಯ ನಾಲ್ಕು ಪ್ರಮುಖ ದ್ವಾರದಲ್ಲಿ ಪ್ರಕಟಣೆ ಫಲಕ ಹಾಕಿದ್ದಾರೆ. ನಾಡಹಬ್ಬ ದಸರಾ ಸಂದರ್ಭದಲ್ಲಿ ಹಾಗೂ ಗಜಪಡೆ ತಾಲೀಮು ವೇಳೆ ಕೆಲವರು ಶೋಕಿಗಾಗಿ ಮನಸ್ಸೋ ಇಚ್ಛೆ ಡ್ರೋನ್ ಹಾರಿಸಿ ಉದ್ದಟತನ ಪ್ರದರ್ಶಿಸಿದ್ದ ಬೆನ್ನಲ್ಲೇ ಅರಮನೆ ಸೇರಿದಂತೆ ಸುತ್ತಲಿನ ಪ್ರದೇಶವನ್ನು ಹಳದಿ (ಯಲ್ಲೋ) ವಲಯ ನಿರ್ಬಂಧಿಸಿತ್ತು. ಇದೀಗ ಭಾರತ-ಪಾಕಿಸ್ತಾನದ ನಡುವಿನ ಸಂಘರ್ಷ ಹೆಚ್ಚಾದ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿ ಪಾಕಿಸ್ತಾನ ಡ್ರೋನ್ ದಾಳಿ ನಡೆಸಿರುವುದರಿಂದ ಇದೀಗ ಡ್ರೋನ್ ಹಾರಾಟದ ಮೇಲೆ ನಿಗಾ ಇಡಲಾಗಿದೆ.
ಬಾಗಲಕೋಟೆ : ಬೃಹತ್ ಬನ್ನಿ ಮರವನ್ನು ಹತ್ತುವ ಮಳಿಯಪ್ಪಜ್ಜ.. ಹ್ಯೂತ್ ಎಂದು ಕೂಗಿದ್ದಾರೆ. ಆಗ ಅಲ್ಲಿ ಸೇರಿದ ಸಾವಿರಾರು ಸಂಖ್ಯೆಯ ಭಕ್ತರು ನಿಶಬ್ದರಾಗಿದ್ದಾರೆ. ಬಳಿಕ ಮುಂಗಾರಿ – ಹಿಂಗಾರಿ ತಕ್ಕಸ್ಟ ಮಸನ ಎಂದು ಹೇಳಿದ್ದಾರೆ. ಅಂದರೆ ಪ್ರಸ್ತುತ ಸಾಲಿನಲ್ಲಿ ಚೆನ್ನಾಗಿ ಮಳೆ ಬೆಳೆ ಇದೆ ಎಂದು ಅಲ್ಲಿನವರು ಅರ್ಥೈಸಿದ್ದಾರೆ. ಈ ಒಂದು ಭವಿಷ್ಯ ಹೇಳುವ ಪದ್ಧತಿ ಬಾಗಲಕೋಟೆ ಜಿಲ್ಲೆಯ ಗುಡೂರು ಗ್ರಾಮದಲ್ಲಿದೆ. ಇಲ್ಲಿನ ಹುಲ್ಲೇಶ್ವರ ದೇವಾಲಯ ಜಾತ್ರಾ ಮಹೋತ್ಸವದ ನಿಮಿತ್ತ ನಡೆಯುವ ಈ ವಿಶೇಷ ಆಚರಣೆ ಗಮನ ಸೆಳೆಯುವಂತಿದೆ.ಆಗಿ ಹುಣ್ಣಿಮೆ ದಿನದಂದು ರಾತ್ರಿ ಸಮಯದಲ್ಲಿ ದೇವಾಲಯದಲ್ಲಿ ಡೊಳ್ಳು ಭಾರಿಸುವ ಮೂಲಕ ಮಳಿಯಪ್ಪ ಅಜ್ಜ ಎಂಬುವ ಪೂಜಾರಿಗೆ ಮೈಯಲ್ಲಿ ದೇವರು ಬರುತ್ತದೆ. ಅವರೊಂದಿಗೆ ಗ್ರಾಮದ ಹೊರವಲಯದಲ್ಲಿರುವ ಬೃಹತ್ ಬನ್ನಿ ಮರಕ್ಕೆ ಪಲ್ಲಕ್ಕಿ ಮೆರವಣಿಗೆ ಹೋಗುತ್ತಾರೆ. ಮರದ ಪಕ್ಕದಲ್ಲಿಯೇ ಹಿಂದೆ ಲಿಂಗೈಕ್ಯರಾಗಿರುವ ಹಿರಿಯರ ಸಮಾಧಿಗಳು ಇವೆ. ಇಲ್ಲಿ ಪೂಜೆ – ಪುನಸ್ಕಾರ ಸಲ್ಲಿಸಲಾಗುತ್ತದೆ. ನಂತರ ಹಿಂದಿನ ಮಳಿಯಪ್ಪ ಪೂಜಾರಿಗಳ ವಂಶಸ್ಥರ ಸಮಾಧಿಯಿಂದ ಈಗಿನ ಮಳಿಯಪ್ಪ…
ಬೆಂಗಳೂರು : ಇತ್ತೀಚಿಗೆ ವಿಧಾನಸಭೆಯ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ದಿಶಾ ಸಮಿತಿ ಸಭೆ ನಡೆದಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ದಿಶಾ ಸಭೆಯ ವಿಚಾರವಾಗಿ ಆರ್ ಅಶೋಕ್ ಮಾತನಾಡಿ, 60% ಪೇಮೆಂಟ್ ಬಿದ್ದರೆ ಮಾತ್ರ ಬಿಲ್ ಮಾಡ್ತಾರೆ ಎಂದು ಗಂಭೀರವಾಗಿ ಆರೋಪಿಸಿದರು. ಬೆಂಗಳೂರಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮರೆವು ಜಾಸ್ತಿ ಆಗಿದೆ. ಏನೇನೋ ಮಾತನಾಡುತ್ತಾರೆ. ಎಸ್‌ಪಿಗೆ ಹೊಡೆಯಲು ಹೋಗುತ್ತಾರೆ. ಮನಮೋಹನ್ ಸಿಂಗ್ ಪುಣ್ಯಾತ್ಮ ಗೊಂಬೆ ತರಹ ಇದ್ದವರು. 10 ವರ್ಷದಲ್ಲಿ ಮನಮೋಹನ್ ಸಿಂಗ್ ಎಷ್ಟು ಹಣ ಕೊಟ್ಟಿದ್ದಾರೆ? ಡಾ. ಮನಮೋಹನ್ ಸಿಂಗ್ ಅವರಿಗಿಂತ ಮೋದಿ 4 ಪಟ್ಟು ಹೆಚ್ಚು ಹಣ ಕೊಟ್ಟಿದ್ದಾರೆ. ರಾಜ್ಯದ ಜನರ ಮೇಲೆ ತೆರಿಗೆ ಹಾಕಿ ಸುಲಿಗೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಔಟ್ ಗೋಯಿಂಗ್ ಸರ್ಕಾರ. ಕರ್ನಾಟಕದಲ್ಲಿ ಮುಂದೆ ಕಾಂಗ್ರೆಸ್ ಆಡಳಿತಕ್ಕೆ ಬರಲು ಆಗಲ್ಲ. 60% ಪೇಮೆಂಟ್ ಬಿದ್ದರೆ ಮಾತ್ರ ಬಿಲ್ ಮಾಡಿಕೊಡುತ್ತಾರೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್. ಅಶೋಕ್ ಗಂಭೀರವಾದ ಆರೋಪ ಮಾಡಿದರು. ಡಿಕೆ ಶಿವಕುಮಾರ್…














