Author: kannadanewsnow05

ಗುಜರಾತ್ : 13 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿ ಹೋಗಿ, ಆತನಿಂದಲೇ ಗರ್ಭಿಣಿಯಾಗಿ ಸದ್ಯ ಪೋಕ್ಸೊ ಕಾಯ್ದೆಯಡಿ ಬಂಧನದಲ್ಲಿರುವ 23 ವರ್ಷದ ಶಿಕ್ಷಕಿಯ ಗರ್ಭಪಾತಕ್ಕೆ ಗುಜರಾತ್‌ನ ಸೂರತ್‌ನ ವಿಶೇಷ ಪೋಕ್ಸೋ ನ್ಯಾಯಾಲಯ ಅನುಮತಿ ನೀಡಿದೆ. ಅಪ್ರಾಪ್ತ ವಯಸ್ಕನನ್ನು ಅಪಹರಿಸಿದ ಕೇಸ್‌ನಲ್ಲಿ ಶಿಕ್ಷಕಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ದೂರು ದಾಖಲಾಗಿದ್ದು, ಸದ್ಯ ಸೂರತ್‌ನ ಜೈಲಿನಲ್ಲಿದ್ದಾಳೆ. ಹೌದು ಇಡಿ ದೇಶವೇ ಬೆಚ್ಚಿ ಬೀಳಿಸೋ ಪ್ರಕರಣ ಇದಾಗಿದ್ದು, ಕೆಲವು ದಿನಗಳ ಹಿಂದೆ ಬೆಳಕಿಗೆ ಬಂದ ಈ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿತ್ತು. ಆಕೆಯ ಮಾನಸಿಕ ತೊಂದರೆಗಳನ್ನು ಗಣನೆಗೆ ತೆಗೆದುಕೊಂಡು ಈ ತೀರ್ಪು ನೀಡಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ. ಬಾಲಕ ನಾಪತ್ತೆಯಾದ ಬಳಿಕ ಈ ಬಗ್ಗೆ ಆತನ ತಂದೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಸೂರತ್ ನಗರದ ಪುಣೆ ಠಾಣೆಯ ಪೊಲೀಸರು ಇವರನ್ನು ದೂರು ದಾಖಲಾದ 6 ದಿನಗಳ ಬಳಿಕ ಗುಜರಾತ್‌-ರಾಜಸ್ಥಾನ ಗಡಿಯಲ್ಲಿ ಪತ್ತೆ ಹಚ್ಚಿದ್ದರು. ಈ ವೇಳೆ ಶಿಕ್ಷಕಿ 20 ವಾರಗಳ ಗರ್ಭಿಣಿಯಾಗಿದ್ದಳು. ಏನಿದು ಪ್ರಕರಣ? ಗುಜರಾತಿನ…

Read More

ಕಲಬುರ್ಗಿ : ನಿನ್ನೆ ಕಲ್ಬುರ್ಗಿಯಲ್ಲಿ ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದು, ಈ ವೇಳೆ ಗುಡುಗು ಸಿಡಿಲು ಸಹಿತ ಭಾರಿ ಮಳೆಯಾಗಿದೆ. ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನಲ್ಲಿ ಹಾಗೂ ಪಕ್ಕದ ಯಡ್ರಾಮಿ ತಾಲೂಕಿನಲ್ಲಿ ಸಿಡಿಲು ಬಡಿದು ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿರುವ ಪ್ರತ್ಯೇಕ ಘಟನೆ ನಡೆದಿದೆ. ಮೃತರನ್ನು ಜೇವರ್ಗಿ ತಾಲ್ಲೂಕಿನ ರೇವನೂರ್ ಗ್ರಾಮದ ಶ್ರೀನಾಥ್ ಹಾಗೂ ಯಡ್ರಾಮಿ ತಾಲ್ಲೂಕಿನ ಪಡಗದಳ್ಳಿಯ ಸಿದ್ದಪ್ಪ ಪೂಜಾರಿ (33) ಎಂದು ಗುರುತಿಸಲಾಗಿದೆ. ಶ್ರೀನಾಥ್‌, ಗುರುವಾರ ಗ್ರಾಮದ ತನ್ನ ಹೊಲಕ್ಕೆ ಹೋಗಿ ಮರಳಿ ಮನೆಗೆ ಬರುವಾಗ ಸಿಡಿಲು ಬಡಿದು ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ. ಸಿದ್ದಪ್ಪ ಪೂಜಾರಿ ಹೊಲದಲ್ಲಿ ಕೆಲಸ ಮಾಡುವಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Read More

ಬೀದರ್ : ಬೀದರ್ ನಲ್ಲಿ ಘೋರವಾದ ದುರಂತ ಸಂಭವಿಸಿದ್ದು, ಪ್ರಥಮ ವರ್ಷದ ಬಿ-ಫಾರ್ಮಸಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಹಾಸ್ಟೆಲ್ ನಲ್ಲೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ, ಬೀದರ್‌ನ ನೌಬಾದ್‌ನಲ್ಲಿರುವ ಬಿಸಿಎಂ ವಸತಿ ನಿಲಯದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿಯನ್ನು ನವನಾಥ ಬಾಜೀರಾವ್ ದೊಂಡಿಬಾ ಎಂದು ತಿಳಿದುಬಂದಿದೆ.ನವನಾಥ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಎನ್ನಲಾಗಿದೆ.ಭಾಲ್ಕಿ ತಾಲೂಕಿನ ಲಖನಗಾಂವ್ ಗ್ರಾಮದ ದೊಂಡಿಬಾ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದ ನಿನ್ನೆಯಷ್ಟೇ ಬಿ-ಫಾರ್ಮಸಿ ಪರೀಕ್ಷೆ ಮುಕ್ತಾಯಗೊಂಡಿದೆ. ಪರೀಕ್ಷೆ ಮುಗಿದಿದ್ದು ಊರಿಗೆ ಬರ್ತೀನಿ ಎಂದು ಕುಟುಂಬಸ್ಥರಿಗೆ ತಿಳಿಸಿದ್ದಾನೆ. ಆದ್ರೆ, ಊರಿಗೆ ಹೋಗುವುದಕ್ಕೂ ಮುನ್ನವೇ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಅವರ ಸಹಪಾಠಿಗಳು ಹೇಳಿದ್ದಾರೆ. ಸ್ಥಳಕ್ಕೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬೀದರ್‌ನ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ದಾವಣಗೆರೆ : ಆಪರೇಷನ್ ಸಿಂಧೂರ್ ಕುರಿತಂತೆ ಕೊತ್ತೂರು ಮಂಜುನಾಥ್ ಹೇಳಿಕೆಗೆ ಶಾಸಕ ಬಸನಗೌಡ ಪಾಟೀಲ ಆಕ್ರೋಶ ಹೊರ ಹಾಕಿದ್ದಾರೆ. ದಾವಣಗೆರೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅನುಮಾನ ಇದ್ದರೆ ಶಾಸಕ ಕೊತ್ತೂರು ಮಂಜುನಾಥ್ ನೋಡಿಕೊಂಡು ಬರಲಿ ಎಂದು ಕಿಡಿ ಕಾರಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಾಸಕ ಮಂಜುನಾಥ್ ಗೆ ಅನುಮಾನ ಇದ್ದರೆ ಅದೇ ಫ್ಲೈಟ್ ನಲ್ಲಿ ಅವರು ಹೋಗಿ ನೋಡಿಕೊಂಡು ಬರಲಿ. ಪಾಕಿಸ್ತಾನ ಹೀರೋ ಅಂದರೆ ಅದು ರಾಹುಲ್ ಗಾಂಧಿ ಮತ್ತು ಸಿಎಂ ಸಿದ್ದರಾಮಯ್ಯ. ಕಾಂಗ್ರೆಸ್ ನವರಿಗೆ ಪಾಕಿಸ್ತಾನದಿಂದ ಪ್ರೀವಿಸ ಕೊಡುತ್ತಾರೆ. ಹೋಗಿ ನೋಡಿಕೊಂಡು ಬರಲಿ ಎಂದು ಶಾಸಕ ಯತ್ನಾಳ್ ವ್ಯಂಗ್ಯವಾಡಿದರು. ದಾಳಿಗೆ ಒಳಗಾದಂತಹ ಉಗ್ರರ ಕ್ಯಾಂಪ್ ನೋಡಿಕೊಂಡು ಬರಲಿ. ಸೈನಿಕರ ಕುರಿತು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ತಿಳಿಸಿದರು.

Read More

ತುಮಕೂರು : ಅಪ್ರಾಪ್ತೆಯನ್ನು ಲೈಂಗಿಕ ದೌರ್ಜನ್ಯಕ್ಕೆ ತಳ್ಳಿದವರಿಗೆ ಇದೀಗ ಜೀವಾವಧಿ ಶಿಕ್ಷೆ ನೀಡಿ ತುಮಕೂರಿನ ಸೇಷನ್ಸ್ ಹಾಗು FTSC ಪೋಕ್ಸೋ ಕೋರ್ಟ್ ಈ ಕುರಿತು ಆದೇಶ ಹೊರಡಿಸಿದೆ. ಮಲತಾಯಿ ಸೇರಿದಂತೆ ಮೂವರಿಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ. ತುಮಕೂರು ಸೇಷನ್ಸ್ ಮತ್ತು FTSC ಪೋಕ್ಸೋ ಕೋರ್ಟ್ ಈ ಕುರಿತು ಆದೇಶ ಹೊರಡಿಸಿದೆ. ಅಜ್ಜಿ ಗಂಗಮ್ಮ ಮಲತಾಯಿ ರತ್ನಮ್ಮಗೆ ತಲಾ 1 ಲಕ್ಷ ರೂಪಾಯಿ ದಂಡ ಹಾಗೂ ಅರುಣ್ ಕುಮಾರ್ ಗೆ 1.50 ಲಕ್ಷ ರೂಪಾಯಿ ದಂಡ ವಿಧಿಸಿದೆ. ಅಪ್ರಾಪ್ತೆಗೆ ಕಾನೂನು ಸೇವಾ ಪ್ರಾಧಿಕಾರದ ಪರಿಹಾರ ಸೇರಿದಂತೆ 13 ಲಕ್ಷ 50 ಸಾವಿರ ನೀಡುವಂತೆ ಕೋರ್ಟ್ ಆದೇಶಿಸಿತು.

Read More

ಚಿಕ್ಕಬಳ್ಳಾಪುರ : ಜಮೀನಿಗೆ ನೀರು ಬಿಡುವ ವಿಚಾರವಾಗಿ ಗಲಾಟೆ ನಡೆದಿದೆ ಈ ವೇಳೆ ಗಲಾಟೆಯಲ್ಲಿ ಅಪ್ಪ-ಮಗ ಸೇರಿ ವ್ಯಕ್ತಿಯನ್ನು ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಚಿಗಟಗೆರೆ ಗ್ರಾಮದ ವಡ್ಡರ ಬಂಡೆಯಲ್ಲಿ ಗುರುವಾರ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಗಂಗರಾಜ್ (35) ಎಂದು ತಿಳಿದುಬಂದಿದೆ. ಇನ್ನು ಗಲಾಟೆಯಲ್ಲಿ ಗಂಗರಾಜು ಸಹೋದರ ನಂದೀಶ್ ಹಲ್ಲೆಗೊಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊಲೆಯಾದ ಗಂಗರಾಜುವನ್ನು ಆತನ ಚಿಕ್ಕಪ್ಪ ಗಂಗಾಧರ ಹಾಗೂ ಮಗ ಸೋಮೇಶ್ ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾರೆ. ಕೊಲೆ ಆರೋಪಿಗಳಾದ ಮೃತನ ಚಿಕ್ಕಪ್ಪ ಗಂಗಾಧರಪ್ಪ ಹಾಗೂ ಆತನ ಪುತ್ರ ಸೋಮೇಶ್​ ಎಂಬಾತನನ್ನು ಬಂಧಿಸಲಾಗಿದೆ. ಗೌರಿಬಿದನೂರು ಗ್ರಾಮಾಂತರ ಠಾಣೆ ಪಿಎಸ್ಐ ರಮೇಶ್ ಗುಗ್ಗರಿ ಹಾಗೂ ಪಿಎಸ್ಐ ಲಲಿತಮ್ಮ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Read More

ಚಿಕ್ಕಬಳ್ಳಾಪುರ : ಕಳೆದ ಕೆಲವು ದಿನಗಳ ಹಿಂದೆ ಅಷ್ಟೇ, ಮಂಗಳೂರಿನಲ್ಲಿ ರೌಡಿಶೀಟರ್ ಹಾಗೂ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಅಲ್ಲದೆ ಹಿಂದೂ ಮುಸ್ಲಿಮರ ನಡುವೆ ಕೋಮುಗಲಭೆ ಪ್ರಕರಣಗಳು ಈ ಹಿಂದೆ ರಾಜ್ಯದಲ್ಲಿ ನಡೆದಿದೆ. ಆದರೆ ಇದೀಗ ಚಿಕ್ಕಬಳ್ಳಾಪುರದಲ್ಲಿ ಪೋಷಕರ ವಿರೋಧ ನಡುವೆಯೂ ಹಿಂದೂ ಯುವಕನನ್ನು ಮುಸ್ಲಿಂ ಯುವತಿ ಒಬ್ಬಳು ವರಿಸಿರುವ ಘಟನೆ ವರದಿಯಾಗಿದೆ. ಹೌದು ಹಿಂದೂ ಯುವಕನನ್ನು ಪ್ರೀತಿಸಿ ಮದುವೆಯಾದ ಅನ್ಯ ಧರ್ಮದ ಯುವತಿಯನ್ನು ನಜ್ಮಾ ಎಂದು ತಿಳಿದುಬಂದಿದೆ. ಪೋಷಕರ ವಿರೋಧದ ನಡುವೆಯೂ ಹರೀಶ್ ಬಾಬು ಜೊತೆಗೆ ನಜ್ಮಾ ವಿವಾಹವಾಗಿದ್ದಾಳೆ. ಚಿಕ್ಕಬಳ್ಳಾಪುರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವಾಗ ಇಬ್ಬರ ನಡುವೆ ಪ್ರೇಮಾಂಕರವಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲ್ಲೂಕಿನ ಸೋಮೇಶ್ವರ ಗ್ರಾಮದ ನಜ್ಮಾ, ಚಿಕ್ಕಬಳ್ಳಾಪುರ ತಾಲೂಕಿನ ಯಾಪಲ ಹಳ್ಳಿಯ ಹರೀಶ್ ಬಾಬು ಜೊತೆಗೆ ಪ್ರೇಮ ವಿವಾಹವಾಗಿದ್ದಾಳೆ. ದೇಗುಲದಲ್ಲಿ ವಿವಾಹವಾಗಿ ಚಿಕ್ಕಬಳ್ಳಾಪುರದ ಎಸ್ಪಿ ಕಚೇರಿಗೆ ಇಬ್ಬರು ಬಂದಿದ್ದಾರೆ. ಪ್ರೇಮ ವಿವಾಹಕ್ಕೆ ಪೋಷಕರ ವಿರೋಧ ಹಿನ್ನೆಲೆ, ಎಸ್ ಪಿ ಭೇಟಿಯಾಗಿ…

Read More

ಕೋಲಾರ : ಪಹಲ್ಗಾಮ್ ಉಗ್ರರ ದಾಳಿಯ ಬಳಿಕ ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ಆಪರೇಷನ್ ಸಿಂಧೂರ್ ಮೂಲಕ ದಾಳಿ ಮಾಡಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. ಈ ವಿಚಾರವಾಗಿ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್, ಬೂಟಾಟಿಕೆಗೆ ನಾಲ್ಕು ಫ್ಲೈಟ್ ಮೇಲೆ ಕಳಿಸಿದ್ದು ಬಿಟ್ರೆ ಏನೂ ಮಾಡಿಲ್ಲ. ಉಗ್ರರ ಹತ್ಯೆಯ ಕುರಿತು ಸರಿಯಾದ ಮಾಹಿತಿ ಕೊಟ್ಟಿಲ್ಲ ಎಂದು ತಮ್ಮ ಹೇಳಿಕೆಯನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಕೋಲಾರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಂಧೂರ ಕಾರ್ಯಾಚರಣೆಯ ಬಗ್ಗೆ ನನಗೆ ಯಾವುದೇ ಅನುಮಾನವಿಲ್ಲ ಆದರೆ ಕಾರ್ಯಾಚರಣೆ ನನಗೆ ಸಮಾಧಾನ ತಂದಿಲ್ಲ ಅಂತ ಹೇಳಿದ್ದೇನೆ. ಪಹಲ್ಗಾಮ್ ದಾಳಿಯ ಉಗ್ರರನ್ನು ಮೊದಲು ಸದೆಬಡಿಯಬೇಕಿತ್ತು. ಬಳಿಕ ಪಾಕಿಸ್ತಾನ ಕುಮ್ಮಕ್ಕು ಕೊಟ್ಟಿದ್ದ ಉಗ್ರರ ನೆಲೆಗಳನ್ನು ನಾಶಪಡಿಸಬೇಕಿತ್ತು. ದೇಶ ಯೋಧರು ಅಥವಾ ಪ್ರಧಾನಿಯ ಬಗ್ಗೆ ಹಗುರವಾಗಿ ಮಾತನಾಡಿಲ್ಲ. ಉಗ್ರರ ನೆಲೆ ಧ್ವಂಸಗೊಳಿಸಿ ಹತ್ಯೆಗೈದ ಬಗ್ಗೆ ಹೇಳಿದ್ದನ್ನು ಕೇಳಿದ್ದೆ ಅದರ ಬಗ್ಗೆ ಸರಿಯಾದ ಮಾಹಿತಿ ಕೊಟ್ಟಿಲ್ಲ. ಜನರು ನನ್ನ ಬಳಿ ಹೇಳಿಕೊಂಡ ಕೆಲವೊಂದು ವಿಚಾರಗಳನ್ನು ಹೇಳಿದ್ದೇನೆ. ದೇಶದ…

Read More

ಬೆಂಗಳೂರು : ತಾಯಿಯ ಬಳಿಯಿದ್ದ ಚಿನ್ನಾಭರಣ ಮತ್ತು 2 ಲಕ್ಷಕ್ಕೂ ಅಧಿಕ ಹಣವನ್ನು ತಂದು, ಸ್ವಂತ ಬ್ಯೂಟಿಷಿಯನ್ ಆರಂಭಿಸಲು ಬೆಂಗಳೂರಿಗೆ ಬಂದಂತಹ ಮಹಿಳೆಯ ಬಳಿಯಿದ್ದ ಹಣ ಚಿನ್ನಾಭರಣ ದರೋಡೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ, ನೆಲಮಂಗಲ ಗ್ರಾಮಾಂತರ ಠಾಣೆಯ ಕಾನ್ಸ್ಟೇಬಲ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹೌದು ಹಣ ಮತ್ತು ಚಿನ್ನಾಭರಣ ದರೋಡೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ನೆಲಮಂಗಲ ಗ್ರಾಮಂತರ ಠಾಣೆ ಎಚ್ ಸಿ ಗಿರಿಜೇಶ್ ವಿರುದ್ಧ ಈ ಒಂದು ಆರೋಪ ಕೇಳಿ ಬಂದಿದೆ. ಈ ಬಗ್ಗೆ ಬಾಗಲಗುಂಟೆ ಪೊಲೀಸ್ ಠಾಣೆಗೆ ಸಿಂಚನ ಎನ್ನುವವರು ನೀಡಿದ್ದಾರೆ. ಬೆಂಗಳೂರಿನಲ್ಲಿ ಬ್ಯೂಟಿಷಿಯನ್ ಆಗಿ ಕೆಲಸ ಮಾಡಿಕೊಂಡಿರುವ ಸಿಂಚನ ಮೂಲತಹ ಶಿವಮೊಗ್ಗ ನಿವಾಸಿಯಾಗಿದ್ದಾರೆ. ಸ್ವಂತ ಬ್ಯೂಟಿ ಪಾರ್ಲರ್ ಶಾಪ್ ಆರಂಭಿಸಲು ಸಿಂಚನ ನಿರ್ಧರಿಸಿದ್ದರು. ಶಿವಮೊಗ್ಗದಲ್ಲಿ ತಾಯಿಯ ಬಳಿ ಚುನಾವಣೆ ಹಾಗೂ 2,50,000 ಪಡೆದು ಬೆಂಗಳೂರಿಗೆ ಬಂದಿದ್ದರು. 8ನೇ ಮೈಲಿಬಳಿ ಬಸ್ ಇಳಿದು ಹೋಗುತ್ತಿದ್ದ ವೇಳೆ, ಜಿಎಪ್ ನಲ್ಲಿ ಬಂದಿದ್ದೆ ಹೆಡ್ ಕಾನ್ಸ್ಟೇಬಲ್ ಗಿರಿಜೇಶ್ ಡ್ರಾಪ್ ನೀಡುವುದಾಗಿ ಮಹಿಳೆಯನ್ನು ಹತ್ತಿಸಿಕೊಂಡಿದ್ದಾನೆ.…

Read More

ಹಾಸನ : ಒಂದೆಡೆ ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಎರಡು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ, ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಎರಡು ವರ್ಷದ ಸಾಧನಾ ಸಮಾವೇಶ ಆಯೋಜನೆ ಮಾಡಿದೆ. ಇನ್ನೊಂದಡೆ ಕಾಂಗ್ರೆಸ್ ಶಾಸಕ ಕೆಎಂ ಶಿವಲಿಂಗೇಗೌಡ ಸಿಎಂ ಸಿದ್ದರಾಮಯ್ಯನವರು ಮಂತ್ರಿ ಸ್ಥಾನ ಕೊಡುತ್ತೇನೆ ಎಂದು ಪ್ರಾಮಿಸ್ ಮಾಡಿ ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಕರೆಸಿಕೊಂಡಿದ್ದಾರೆ. ಹಾಗಾಗಿ ನನಗೆ ಮಂತ್ರಿ ಸ್ಥಾನ ಕೊಡುವ ವಿಶ್ವಾಸವಿದೆ ಎಂದು ಸ್ಪೋಟಕವಾದ ಹೇಳಿಕೆ ನೀಡಿದರು. ಹಾಸನ ಜಿಲ್ಲೆಯ ಅರಸೀಕೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನದ ಆಸೆಯನ್ನು ಬಿಚ್ಚಿಟ್ಟಿದ್ದಾರೆ. ನಮ್ಮ ಸರ್ಕಾರಕ್ಕೆ ಎರಡು ವರ್ಷ ತುಂಬಿ ಸುಬ್ಬದ್ರವಾಗಿ ಉಳಿದಿದೆ. ಯಾರು ಏನೇ ಬೊಮ್ಮಡಿ ಪಡೆದುಕೊಂಡರು ತಲೆ ಕೆಡಿಸಿಕೊಳ್ಳುವುದಿಲ್ಲ. ಸಿದ್ದರಾಮಯ್ಯನವರು ಆರ್ಥಿಕ ತಜ್ಞರ ರೀತಿ ನಡೆಸಿಕೊಂಡು ಹೋಗುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನು ಸಾಮಾಜಿಕ ನ್ಯಾಯದ ಹರಿಕಾರ ಅಂತ ಹೇಳಬಹುದು ಎಂದು ಹೇಳಿದರು. ಮಂತ್ರಿ ಸ್ಥಾನ ಕೊಡ್ತೀವಿ ಅಂತ ಪ್ರಾಮಿಸ್ ಮಾಡಿ ಕರೆದುಕೊಂಡು ಹೋದರು. ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಬಂದೆ…

Read More