Subscribe to Updates
Get the latest creative news from FooBar about art, design and business.
Author: kannadanewsnow05
ಮೈಸೂರು : ಮೈಸೂರು ಕಾರಾಗೃಹದಲ್ಲಿ ಕೈದಿಗಳು ಎಸ್ಸೆನ್ಸ್ ಸೇವಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ರಮೇಶ್ ಎನ್ನುವ ಮೂರನೇ ಕೈದಿ ಕೂಡ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ.ಅಸ್ವಸ್ಥಗೊಂಡಿದ್ದ ಮತ್ತೊಬ್ಬ ಕೈದಿ ರಮೇಶ್ ಕೂಡ ಇದೀಗ ಸಾವನ್ನಪ್ಪಿದ್ದಾನೆ. ಆ ಮೂಲಕ ಹೊಸ ವರ್ಷಚಾರಣೆ ವೇಳೆ ಎಸೆನ್ಸ್ ಸೇವಿಸಿದ್ದ ಮೂವರು ಕೈದಿಗಳು ಇದೀಗ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಹೊಸ ವರ್ಷದ ದಿನ ಕೇಕ್ ತಯಾರಿಸಲು ಎಸೆನ್ಸ್ ತರಿಸಲಾಗಿದ್ದು, ಜೈಲಿನ ಬೇಕರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕೈದಿಗಳು ಕೇಕ್ ತಯಾರಿಸಲು ಇಟ್ಟಿದ್ದ ಎಸೆನ್ಸ್ ಕುಡಿದಿದ್ದರು. ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆ ಜೈಲಿನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಮೂರು ಕೈದಿಗಳನು, ಮೈಸೂರಿನ ಕೆ ಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಬಳಿಕ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ನಿನ್ನೆ ನಿನ್ನೆ ಮೈಸೂರಿನ ಸಾತಗಳ್ಳಿಯ ಮಾದೇಶ್ ಮೃತಪಟ್ಟಿದ್ದರು. ಇಂದು ಚಾಮರಾಜನಗರದ ಕೈದಿ ನಾಗರಾಜ್ ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದ್ದಾರೆ. ಇದೀಗ ಮತ್ತೊಬ್ಬ ಕೈದಿ…
ಬೆಂಗಳೂರು : ಇಂದು ಕರ್ನಾಟಕದಲ್ಲಿ ಬಹು ದೊಡ್ಡ ಶರಣಾಗತಿ ಆಗಲಿದ್ದು, ಚಿಕ್ಕಮಂಗಳೂರಿನಲ್ಲಿ ದಕ್ಷಿಣ ಭಾರತದ ಮೋಸ್ಟ್ ವಾಂಟೆಡ್ ಆರು ಜನ ನಕ್ಸಲರು ಜಿಲ್ಲಾಡಳಿತದ ಮುಂದೆ ಇನ್ನೇನು ಕೆಲವೇ ಕ್ಷಣಗಳಲ್ಲಿ ಶರಣಾಗಲಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಗೃಹ ಸಚಿವ ಡಾ. ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿ ಶರಣಾಗುವ ನಕ್ಸಲರ ವಿರುದ್ಧ ಹಲವು ಪ್ರಕರಣಗಳಿದ್ದು ಆ ಕುರಿತು ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಿಕ್ಕಮಗಳೂರಲ್ಲಿ ಇಂದು ನಕ್ಸಲರು ಶರಣಾಗತಿ ಆಗುತ್ತಿರುವ ವಿಚಾರವಾಗಿ, ಬಾಕಿ ಉಳಿದ ವಿಚಾರವಾಗಿ ನಾನು ಈಗ ಮಾತನಾಡುವುದಿಲ್ಲ. ಆದರೆ ವಿಕ್ರಂ ಎನ್ಕೌಂಟರ್ ವೇಳೆ ನಕ್ಸಲರಿಗೆ ಶರಣಾಗಲು ಕರೆ ನೀಡಲಾಗಿತ್ತು. ಕಾಡಿನಲ್ಲಿದ್ದು ಈ ರೀತಿ ಜೀವನ ಏಕೆ ಮಾಡುತ್ತಿದ್ದೀರಿ, ಸಮಾಜದ ಮುಖ್ಯ ವಾಹಿನಿಗೆ ಬನ್ನಿ ಅಂತ ಹೇಳಿದ್ದೇವೆ. ನಕ್ಸಲರ ವಿರುದ್ಧ ಹಲವು ಪ್ರಕರಣಗಳಿವೆ ನಿಜ, ಪ್ರಕರಣಗಳ ವಿಚಾರದಲ್ಲಿ ಕಾನೂನು ಪ್ರಕಾರ ಕ್ರಮ ಆಗಲಿದೆ ಎಂದು ತಿಳಿಸಿದರು.
BREAKING : ‘ಡಿನ್ನರ್ ಪಾರ್ಟಿ’ ರದ್ದಾಗಿಲ್ಲ, ಮುಂದೂಡಲಾಗಿದೆ ಅಷ್ಟೇ : ಸ್ಪಷ್ಟನೆ ನೀಡಿದ ಗೃಹ ಸಚಿವ ಡಾ.ಜಿ ಪರಮೇಶ್ವರ್
ಬೆಂಗಳೂರು : ಸದ್ಯ ರಾಜ್ಯ ರಾಜಕಾರಣದಲ್ಲಿ ಡಿನ್ನರ್ ಪಾರ್ಟಿ ಭಾರಿ ಸದ್ದು ಮಾಡುತ್ತಿದ್ದು, ಸಚಿವ ಸತೀಶ್ ಜಾರಕಿಹೊಳೆ ಡಿನ್ನರ್ ಪಾರ್ಟಿ ನೀಡಿದ್ದೇ ತಡ, ಇತ್ತ ಗೃಹ ಸಚಿವ ಡಾ.ಜಿ ಪರಮೇಶ್ವರ್ ವಿದೇಶದಿಂದ ಆಗಮಿಸಿದ ತಕ್ಷಣ ಇಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಡಿನ್ನರ್ ಪಾರ್ಟಿ ಆಯೋಜನೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಹೈಕಮಾಂಡ್ ಖಡಕ್ ಸೂಚನೆ ಮೇರೆಗೆ ಇದೀಗ ಇಂದು ನಡೆಯಬೇಕಿದ್ದ ಡಿನ್ನರ್ ಪಾರ್ಟಿ ರದ್ದಾಗಿದೆ. ಈ ಕುರಿತು ಸಚಿವ ಜಿ ಪರಮೇಶ್ವರ ಡಿನ್ನರ್ ರದ್ದಾಗಿಲ್ಲ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ನಡೆಯಬೇಕಿದ್ದ ಔತಣಕೂಟ ರದ್ದಾಗಿಲ್ಲ ಬದಲಾಗಿ ಡಿನ್ನರ್ ಪಾರ್ಟಿ ದಿನಾಂಕ ಮುಂದೂಡಲಾಗಿದೆ. ಹೈಕಮಾಂಡ್ ಡಿನ್ನರ್ ಪಾರ್ಟಿಗೆ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ ಎಂದು ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದರು. ಡಿಕೆ ಶಿವಕುಮಾರ್ ಹೈಕಮಾಂಡ್ಗೆ ದೂರು ನೀಡಿರುವ ಬಗ್ಗೆ ನನಗೆ ಗೊತ್ತಿಲ್ಲ. ಈ ಸಭೆಗೆ ಡಿಸಿಎಂ ಡಿಕೆ ಅವರನ್ನು ಕರೆಯಬೇಕು ಅಂತ ಚರ್ಚೆಯಾಗಿತ್ತು. ರಾಜಕಾರಣ ಮಾಡುವುದಾದರೆ ಓಪನ್…
ಧಾರವಾಡ-ಹುಬ್ಬಳ್ಳಿ : ಕೇಂದ್ರ ಸಚಿವ ಅಮಿತ್ ಶಾ ಅವರು ಡಾ. ಬಿ ಆರ್ ಅಂಬೇಡ್ಕರ್ ಅವರ ಕುರಿತು ನೀಡಿರುವ ಹೇಳಿಕೆಗೆ ಇದೀಗ ತೀವ್ರ ಖಂಡನೆ ವ್ಯಕ್ತವಾಗಿದ್ದು. ಈ ಹಿನ್ನೆಲೆ ನಾಳೆ ಹುಬ್ಬಳ್ಳಿ ಧಾರವಾಡ ಬಂದ್ ಗೆ ದಲಿತ ಸಂಘಟನೆಗಳು ಕರೆ ನೀಡಿವೆ. ಇದಕ್ಕೆ ಕಾಂಗ್ರೆಸ್ ಶಾಸಕ ಪ್ರಸಾದ ಅಬ್ಬಯ್ಯ ಕೂಡ ಬೆಂಬಲ ಘೋಷಣೆ ಮಾಡಿದ್ದು, ಇದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದರಿಂದ ಇದೀಗ ಈ ಒಂದು ಬಂದ್ ಕರೆ ರಾಜಕೀಯ ತಿರುವು ಪಡೆದುಕೊಂಡಿದೆ. ಹೌದು ನಾಳೆ ಹುಬ್ಬಳ್ಳಿ ಧಾರವಾಡ ಬಂದ್ ಗೆ ದಲಿತ ಸಂಘಟನೆಗಳು ಕರೆಗೆ ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಬೆಂಬಲ ಘೋಷಣೆ ಮಾಡಿದ್ದು, ಇತ್ತ ಹುಬ್ಬಳ್ಳಿ ಧಾರವಾಡ ನಗರ ಬಂದ್ ಗೆ ಬಿಜೆಪಿ ವಿರೋಧಿಸುತ್ತಿದೆ. ಹಾಗಾಗಿ ನಾಳೆ ಹುಬ್ಬಳ್ಳಿ ಧಾರವಾಡ ಬಂದ್ ಕರೆ ರಾಜಕೀಯ ತಿರುವು ಪಡೆದುಕೊಂಡಿದೆ ಎನ್ನಲಾಗಿದೆ. ಹುಬ್ಬಳ್ಳಿ ಧಾರವಾಡ ಬಂದ್ ಮಾಡಿದರೆ ನಾವು ಬಂದ್ ಗೆ ಕರೆ ಕೊಡುತ್ತೇವೆ. ನಿಮಗೆ ಪ್ರತಿಯಾಗಿ ನಾವು ಕೂಡ ಬಂದ್ ಗೆ…
ಬಳ್ಳಾರಿ : ಇಂದು ರಾಜ್ಯಾದ್ಯಂತ ಬೆಳ್ಳಂ ಬೆಳಿಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಬಿಗ್ ಶಾಕ್ ನೀಡಿದ್ದು, ವಿವಿಧಡೆ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಸರ್ಕಾರಿ ಅಧಿಕಾರಿಗಳ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇದೀಗ ಬಳ್ಳಾರಿ ಜಿಲ್ಲೆಯಲ್ಲಿ ತಾಲೂಕು ಬಿಸಿಎಂ ಹಾಸ್ಟೆಲ್ ಅಧಿಕಾರಿ ಲೋಕೇಶ್ ಮನೆ ಮೇಲೆ ದಾಳಿ ಮಾಡಿದ್ದು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಹೌದು ಬಳ್ಳಾರಿ ಜಿಲ್ಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದು ತಾಲೂಕು ಬಿಸಿಎಂ ಅಧಿಕಾರಿ ಲೋಕೇಶ್ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಅಲ್ಲದೆ ಅಧಿಕಾರಿ ಲೋಕೇಶ್ ಸ್ನೇಹಿತರ ಮನೆಗಳ ಮೇಲು ಅಧಿಕಾರಿಗಳು ದಾಳಿ ಮಾಡಿದ್ದಾರೆ. ಬಳ್ಳಾರಿಯ ರಾಮಾಂಜನೇಯ ನಗರದಲ್ಲಿರುವ ಲೋಕೇಶ್ ನಿವಾಸದ ಮೇಲೆ ದಾಳಿ ಮಾಡಿ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಈ ಹಿಂದೆ ವಾರ್ಡನ್ ಆಗಿದ್ದ ಲೋಕೇಶ್ ಇದೀಗ ತಾಲೂಕು ಬಿಸಿಎಂ ಹಾಸ್ಟೆಲ್ ಅಧಿಕಾರಿಯಾಗಿದ್ದಾನೆ. ಆದಾಯ ಮೀರಿ ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ. ಅಲ್ಲದೇ ಲೋಕೇಶ್…
ಚಿಕ್ಕಮಗಳೂರು : ಸಮಾಜದ ಮುಖ್ಯ ವಾಹಿನಿಗೆ ಬರಲು ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ 6 ಮೋಸ್ಟ್ ವಾಂಟೆಡ್ ನಕ್ಸಲರು ಇಂದು ಚಿಕ್ಕಮಂಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಲಿದ್ದು, ಈಗಾಗಲೇ ಚಿಕ್ಕಮಂಗಳೂರು ಡಿಸಿ ಕಚೇರಿ ಮುಂದೆ ಬಿಗಿ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ. ನಿನ್ನೆ ಶಾಂತಿಗಾಗಿ ನಾಗರಿಕ ವೇದಿಕೆಯು ರಾಜ್ಯ ಸರ್ಕಾರದೊಂದಿಗೆ ನಡೆಸಿದ ಸುದೀರ್ಘ ಮಾತುಕತೆ ಫಲಪ್ರದವಾಗಿದ್ದು ಇಂದು ಆರು ಜನ ನಕ್ಸಲ್ ಹೋರಾಟಗಾರರು ಮುಖ್ಯ ವಾಹಿನಿಗೆ ಬರಲಿದ್ದಾರೆ. ಪ್ರಮುಖವಾಗಿ ಮುಂಡಗಾರು ಲತಾ, ಸುಂದರಿ ಕುಟ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ, ಕೆ ವಸಂತ, ಟಿ ಎನ್ ಜೀಶ್ ಅವರು ಬುಧವಾರ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಯಾಗಲಿದ್ದಾರೆ ಎಂದು ಶಾಂತಿಗಾಗಿ ನಾಗರಿಕ ವೇದಿಕೆಯ ಪ್ರಮುಖ ಮುಖಂಡ ಕೆ.ಎಲ್. ಅಶೋಕ್ ಮಾಹಿತಿ ನೀಡಿದ್ದಾರೆ. ಪ್ರವಾಸಿ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿಗೆ ನಕ್ಸಲರು ತೆರಳಲಿದ್ದಾರೆ. ಬಳಿಕ 11 ಗಂಟೆಗೆ ಜಿಲ್ಲಾಡಳಿತದ ಮುಂದೆ 6 ಮಂದಿ ನಕಲರು ಶರಣಾಗತಿ ಆಗಲಿದ್ದಾರೆ. 24 ವರ್ಷದ ಬಳಿಕ ಶಸ್ತ್ರ ಹಾಗೂ…
ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನ ಜೆ.ಪಿ ನಗರದಲ್ಲಿ ಟ್ಯೂಷನ್‌ಗೆಂದು ಬರುತ್ತಿದ್ದ 16 ವರ್ಷದ ಬಾಲಕಿಯನ್ನು ಪ್ರೀತಿಸುವುದಾಗಿ ಪುಸಲಾಯಿಸಿ ಶಿಕ್ಷಕನೇ ಕರೆದೊಯ್ದಿರುವ ಪ್ರಕರಣ ನಡೆದಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಜೆಪಿ ನಗರ ಠಾಣೆಯ ಪೊಲೀಸರು ಶಿಕ್ಷಕನನ್ನು ಅರೆಸ್ಟ್ ಮಾಡಿದ್ದಾರೆ. ಹೌದು ಕಳೆದ ಜನೆವರಿ 4 ರಂದು ಕನಕಪುರ ಮೂಲದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಪಾಲಕರು ನೀಡಿದ ದೂರಿನ ಅನ್ವಯ ಶಿಕ್ಷಕ ಅಭಿಷೇಕ ವಿರುದ್ಧ ಜೆ.ಪಿ.ನಗರ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು. ಇದೀಗ ಬಾಲಕಿಯ ಜೊತೆ ಪರಾರಿಯಾಗಿದ್ದ ಶಿಕ್ಷಕ ಅಭಿಷೇಕ ನಾನು ಜೆಪಿ ನಗರ ಠಾಣೆ ಪೊಲೀಸರು ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣ ಹಿನ್ನೆಲೆ? ಅಭಿಷೇಕ್ ಖಾಸಗಿಯಾಗಿ ಟ್ಯೂಷನ್ ಕ್ಲಾಸ್ ನಡೆಸುತ್ತಿದ್ದ. ನಾಪತ್ತೆಯಾಗಿರುವ ವಿದ್ಯಾರ್ಥಿನಿಯೂ ಇಲ್ಲಿ ಟ್ಯೂಷನ್ ಪಡೆಯುತ್ತಿದ್ದಳು. ಈ ನಡುವೆ ಶಿಕ್ಷಕ ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಕಳೆದ ನ.23 ರಂದು ಟ್ಯೂಷನ್‌ನಿಂದ ರಾತ್ರಿಯಾದರೂ ವಿದ್ಯಾರ್ಥಿನಿ ಮನೆಗೆ ಬಾರದಿದ್ದಾಗ ಆಕೆಯ ಪೋಷಕರು ಟ್ಯೂಷನ್…
ಕೋಲಾರ : ಇತ್ತೀಚಿನ ದಿನಗಳಲ್ಲಿ ಹೃದಯಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಸಿದ್ದನಹಳ್ಳಿಯಲ್ಲಿ ಬೆಸ್ಕಾಂ ಸಿಬ್ಬಂದಿ ಒಬ್ಬರು ಮನೆಯೊಂದಕ್ಕೆ ಕರೆಂಟ್ ಬಿಲ್ ನೀಡುವ ಸಂದರ್ಭದಲ್ಲಿ ಕುಸಿದು ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ. ಹೌದು ಹೃದಯಾಘಾತದಿಂದ ಕರ್ತವ್ಯ ನಿರತ ಬೆಸ್ಕಾಂ ಸಿಬ್ಬಂದಿ ಸಾವನ್ನಾಪ್ಪಿದ್ದರೆ. ಸಿದ್ದನಹಳ್ಳಿ ಬೆಸ್ಕಾಂ ಸಿಬ್ಬಂದಿ ಪ್ರಕಾಶ್ ಕುಮಾರ್ ಎನ್ನುವವರು ಸಾವನ್ನಪ್ಪಿದ್ದಾರೆ.. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಸಿದ್ದನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಸಿದ್ದನನಹಳ್ಳಿಯಲ್ಲಿ ವಿದ್ಯುತ್ ಬಿಲ್ ಕೊಡುವಾಗ ಹೃದಯಾಘಾತವಾಗಿದೆ. ಮೃತನ ಕುಟುಂಬಕ್ಕೆ ಇದೀಗ ಸಿಬ್ಬಂದಿಗಳು ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸುತ್ತಿದ್ದಾರೆ. ಘಟನೆ ಕುರಿತು ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ದಾವಣಗೆರೆ : ಮನೆಯಲ್ಲಿ ಗ್ಯಾಸ್ ಲೀಕ್ ಆಗಿ ಸಿಲಿಂಡರ್ ಸ್ಪೋಟಗೊಂಡು ಇಡೀ ಮನೆ ಹೊತ್ತಿ ಉರಿದಿರುವ ಘಟನೆ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಚೆನ್ನೇಶಪುರ ಎಂಬ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ ಅದೃಷ್ಟವಶಾತ್ ಮನೆಯಲ್ಲಿದ್ದ ತಾಯಿ ಹಾಗೂ ಮಗ ಮನೆಯಿಂದ ಹೊರಗೋಡಿ ಪ್ರಾಣ ಉಳಿಸಿಕೊಂಡಿದ್ದಾರೆ. ಗ್ರಾಮದ ರೈತ ಕಾಶಪ್ಪ ಎಂಬುವರ ಮನೆ ಹೊತ್ತಿ ಉರಿದಿದೆ. ಮನೆಯಲ್ಲಿ ತಾಯಿ ಮಗ ಇಬ್ಬರೇ ವಾಸವಾಗಿದ್ದರು. ಅಡುಗೆ ಮನೆಯಲ್ಲಿ ಸಣ್ಣದಾಗಿ ಬೆಂಕಿ ಕಾಣಿಸಿಕೊಂಡಿತ್ತು, ಇದನ್ನ ನೋಡಿ ತಾಯಿ ಮಗ ಹೊರಗೆ ಓಡಿ ಬಂದಿದ್ದಾರೆ. ಇವರು ಹೊರ ಹೋದ ಎರಡು ನಿಮಿಷದಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮನೆಯಿಂದ ಹೊರಗೆ ಓಡಿ ಹೋಗಿ ತಾಯಿ ಮಗ ಪ್ರಾಣ ಉಳಿಸಿಕೊಂಡಿದ್ದಾರೆ. ಸಿಲಿಂಡರ್ ಸ್ಫೋಟದಿಂದ ಇಡೀ ಗ್ರಾಮವೇ ಬೆಸ್ಟ್ ಬಿದ್ದಿದೆ. ಸಿಲಿಂಡರ್ ಸ್ಫೋಟಕ್ಕೆ ಇಡೀ ಮನೆ ಸಂಪೂರ್ಣವಾಗಿ ಸುಟ್ಟು ಕರ್ಕಲಾಗಿದ್ದು ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು.ಚನ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಂದು ಹೈಕೋರ್ಟ್ ನಲ್ಲಿ ಬಿ ಎಸ್ ಯಡಿಯೂರಪ್ಪ ಅವರು ಪ್ರಕರಣ ರದ್ದು ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಯಿತು. ಬಳಿಕ ನ್ಯಾಯಾಧೀಶರು ವಿಚಾರಣೆಯನ್ನು ಜನವರಿ 10 ಕ್ಕೆ ಒಂದು ಮುಂದೂಡಿದರು. ವಿಚಾರಣೆ ಆರಂಭದ ವೇಳೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಪರ ಹಿರಿಯ ವಕೀಲ ಸಿ ವಿ ನಾಗೇಶ್ ಅವರು ವಾದ ಮಂಡಿಸಿದರು. ಪೊಲೀಸರು ಕೆಲವು ಸಾಕ್ಷಿಗಳ ಹೇಳಿಕೆಯನ್ನು ಕೋರ್ಟಿಗೆ ಸಲ್ಲಿಸಿಲ್ಲ. ಈ ಹೇಳಿಕೆಗಳು ಆರೋಪ ಪಟ್ಟಿಯ ಭಾಗವಲ್ಲದಿದ್ದರೂ ಕೂಡ ಕೋರ್ಟ್ ತರಿಸಿಕೊಳ್ಳಬಹುದು. ಪೊಲೀಸರ ಕೇಸ್ ಡೈರಿಯ ಕೂಡ ತನಿಖೆಯ ಭಾಗವಾಗಿದೆ ಎಂದು ವಾದಿಸಿದರು. ಈ ವೇಳೆ ವಿಚಾರಣೆ ಜನವರಿ 10 ಕ್ಕೆ ಮುಂದೂಡಿ ಹೈಕೋರ್ಟ ಆದೇಶಿಸಿತು. ಪ್ರಕರಣದ ಹಿನ್ನೆಲೆ? ಸಹಾಯ ಕೋರಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನಿವಾಸಕ್ಕೆ ತಾಯಿ ಮಗಳು ಭೇಟಿ ನೀಡಿದ್ದ ಸಂದರ್ಭದಲ್ಲಿ ಅಪ್ರಾಪ್ತ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು…














