Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಜಾನುವಾರು ಸಾಗಿಸುತ್ತಿದ್ದವರಿಂದ ಗೋರಕ್ಷಕರ ಮೇಲೆ ಹಕ್ಕೆ ಮಾಡಿರುವ ಆರೋಪ ಕೇಳಿ ಬಂದಿದೆ ಬೆಂಗಳೂರು ಮೂಲದ ಪುಷ್ಪಲತಾ ತಂಡದ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿ ಗೋರಕ್ಷಕರ ತಂಡದ ಮೇಲೆ ಹಲ್ಲೆ ನಡೆದಿದೆ. ಅಕ್ರಮವಾಗಿ ಕಂಟೇನರ್ ಗಳಲ್ಲಿ ಗೋವು ಸಾಗಿಸುತ್ತಿದ್ದರು ಈ ವೇಳೆ ಗೋ ರಕ್ಷಕರು ಕಂಟೇನರ್ ಅನ್ನು ಅಡ್ಡಗಟ್ಟಿದ್ದಾರೆ. ಇವಳೇ ಗೋವು ಸಾಧಿಸುತ್ತಿದ್ದವರು ಪುಷ್ಪಲತಾ ಮತ್ತು ತಂಡದ ಮೇಲೆ ಮರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಬೆಂಗಳೂರು : ಸೂರಜ್ ರೇವಣ್ಣ ವಿರುದ್ಧದ ಅಸಹಜ ಲೈಂಗಿಕ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಕರಣದಿಂದ ಕೈಬಿಡುವಂತೆ ಕೋರಿದ ಮರುಪರಿಶೀಲನ ಅರ್ಜಿ ಇದೀಗ ಕೋರ್ಟ್ ವಜಾ ಗೊಳಿಸಿದೆ, ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಜಡ್ಜ್ ಸಂತೋಷ್ ಗಜಾನನ ಭಟ್ ಈ ಒಂದು ಆದೇಶ ಹೊರಡಿಸಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಸೂರಜ್ ರೇವಣ್ಣ ಮರು ಪರಿಶೀಲನ ಅರ್ಜಿಯನ್ನು ಸಲ್ಲಿಸಿದ್ದರು. ಇದೀಗ ಬೆಂಗಳೂರಿನಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಸಂತೋಷ್ ಗಜಾನನ ಭಟ್ ಅರ್ಜಿಯ ವಿಚಾರಣೆ ನಡೆಸಿ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ನಟ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ನೀನೇ ಅವರ 49ನೇ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅಭಿಮಾನಿಗಳು ಭರ್ಜರಿ ಹುಟ್ಟು ಹಬ್ಬ ಆಚರಣೆ ಮಾಡಿದ್ದರು, ಇದೀಗ ಖ್ಯಾತ ಜ್ಯೋತಿಷಿ ಒಬ್ಬರು ಜೂನ್ ನಲ್ಲಿ ನಟ ದರ್ಶನ್ ಅವರು ಜೈಲಿನಿಂದ ಬಿಡುಗಡೆಯಾಗುತ್ತಾರೆ ಎಂದು ಪ್ರಶಾಂತ್ ಕಿಣಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಇದೇ ಜ್ಯೋತಿಷಿಯು ರಾಜಕಾರಣಿಯೊಬ್ಬರು ಸಾವಿಗೀಡಾಗುತ್ತಾರೆ ಎಂದು ಭವಿಷ್ಯ ನುಡಿದ ಬೆನ್ನಲ್ಲೆ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಮೃತಪಟ್ಟಿದ್ದರು. ಆ ಸಂದರ್ಭದಲ್ಲಿ ಜ್ಯೋತಿಷಿ ಹೇಳಿದ್ದ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಸದ್ಯ ನಟ ದರ್ಶನ್ ಜಾಮೀನಿನ ಬಗ್ಗೆಗೂ ಹೇಳಿರುವುದು ವೈರಲ್ ಆಗಿದೆ. ಪ್ರಶಾಂತ್ ಕಿಣಿ ರಾಜಕೀಯ, ಸಿನಿಮಾ, ಕ್ರಿಕೆಟ್ ಹಾಗೂ ಹಲವು ಪ್ರಚಲಿತ ವಿದ್ಯಮಾನಗಳ ಕುರಿತು ಟ್ವೀಟ್ ಮಾಡಿ ಭವಿಷ್ಯ ಹೇಳುತ್ತಾರೆ. ಸದ್ಯ ನಟ ದರ್ಶನ್ ಬಗ್ಗೆ ಟ್ವೀಟ್ ಮಾಡಿರುವ ಪ್ರಶಾಂತ್ ಕಿಣಿ, ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ ಜೂನ್ 2026 ರ…
ಬೆಂಗಳೂರು : ಬೆಂಗಳೂರಿನಲ್ಲಿ ಭಾರಿ ಅನಾಹುತ ಒಂದು ತಪ್ಪಿದ್ದು, ಬಿಡದಿ ಬಳಿ ರೈಲು ಒಂದು ಹಳಿ ತಪ್ಪಿದ್ದು, ಭಾರಿ ಅನಾಹುತ ಒಂದು ತಪ್ಪಿದೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಬಿಡದಿಯಲ್ಲಿ ಗೂಡ್ಸ್ ರೈಲು ಒಂದು ಹಳಿ ತಪ್ಪಿದೆ. ಬೆಂಗಳೂರಿನಿಂದ ಮೈಸೂರು ಕಡೆಗೆ ಈ ಒಂದು ಗೂಡ್ಸ್ ರೈಲು ತೆರಳುತ್ತಿತ್ತು. ಈ ವೇಳೆ ಗೂಡ್ಸ್ ರೈಲು ಹಳಿ ತಪ್ಪಿದ್ದರಿಂದ ಭಾರಿ ಅನಾಹುತ ಒಂದು ತಪ್ಪಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಪ್ಯಾಸೆಂಜರ್ ರೈಲು ಓಡಾಡದಿದ್ದರಿಂದ ದುರಂತ ತಪ್ಪಿದೆ.
ಬೆಂಗಳೂರು : ಕಾಂಗ್ರೆಸ್ ಭವನಗಳಿಗೆ ಸರ್ಕಾರಿ ಜಮೀನು ಬಳಕೆ ಮಾಡಿರುವುದಾಗಿ ಬಿಜೆಪಿ ಆರೋಪ ಮಾಡಿದೆ. ಇದೀಗ ಬಿಜೆಪಿ ನಾಯಕರ ಆರೋಪಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ಭವನಗಳಿಗೆ ನಾವು ಸರ್ಕಾರಿ ಜಾಗ ಬಳಸಿಕೊಳ್ಳುತ್ತಿದ್ದೇವೆ. ಬಿಜೆಪಿಯವರು ನೂರಾರು ಎಕರೆ ಕೊಟ್ಟಿಲ್ವೇ ಎಂದು ಪ್ರಶ್ನಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು ಚಾಣಕ್ಯ ವಿಶ್ವವಿದ್ಯಾಲಯ, ಆರ್ ಎಸ್ ಎಸ್ ಕಚೇರಿಗೆ ಬಿಜೆಪಿ ಅವರು ನೂರಾರು ಎಕರೆ ಭೂಮಿ ಕೊಟ್ಟಿಲ್ಲವೇ? 5 ರಿಂದ 10 ಸಾವಿರ ಅಡಿ ಜಾಗ ಮಂಜೂರು ಮಾಡುತ್ತಿದ್ದೇವೆ. ಬಿಜೆಪಿ ಅವಧಿಯಲ್ಲಿ ಬೆಂಗಳೂರಲ್ಲಿ ನೂರಕ್ಕೂ ಹೆಚ್ಚು ಕಡೆಗಳಲ್ಲಿ ವಿವಿಧ ಟ್ರಸ್ಟ್ ಗಳ ಹೆಸರಿನಲ್ಲಿ ಜಾಗವನ್ನು ಪಡೆದಿದ್ದಾರೆ. ಚಾಣಕ್ಯ ವಿಶ್ವವಿದ್ಯಾಲಯಕ್ಕೆ ನೀಡಿರುವ ಜಾಗ ಪ್ರತಿ ಎಕರೆಗೆ 10 ಕೋಟಿ ಇದೆ. ಆದರೆ ಬಿಜೆಪಿಗರು ಎಕರೆಗೆ 50 ಲಕ್ಷದ ದರದಲ್ಲಿ ಮಂಜೂರು ಮಾಡಿದೆ 100 ಎಕರೆ ಜಾಗ ಮಂಜೂರು ಮಾಡಿದ್ದಾರೆ. ಬಿಜೆಪಿಯವರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದರು. ಇಂತಹ ನೂರಾರು ಉದಾಹರಣೆಗಳನ್ನು ನಾನು ನೀಡಬಲ್ಲೆ, ಬಿಜೆಪಿಯವರು ನಮಗೆ…
ಕೋಲಾರ : ಜಾಗತಿಕ ಮಟ್ಟದ ಎಕೋ ಸಿಸ್ಟಮ್ ನಲ್ಲಿ ರಾಜ್ಯ ಮೂರನೇ ಸ್ಥಾನದಲ್ಲಿದೆ ಎಂದು ಕೋಲಾರ ತಾಲೂಕಿನ ವೇಮಗಲ್ ನಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೋದ್ಯಮ ಸಚಿವ ಎಂಬಿ ಪಾಟೀಲ್ ತಿಳಿಸಿದರು. ಭಾರತದ ಏರೋ ಸ್ಪೇಸ್ ನಲ್ಲಿ 65 ರಷ್ಟು ಕರ್ನಾಟಕದ ಕೊಡುಗೆ ಇದೆ ಏರೋ ಸ್ಪೇಸ್ ಜೊತೆಗೆ ವಿವಿಧ ಕಂಪನಿಗಳ ಉತ್ಪಾದನಾ ಘಟಕ ಸ್ಥಾಪನೆ ಮಾಡಲಾಗಿದೆ ಬೆಂಗಳೂರು ಕೋಲಾರ ಸೇರಿದಂತೆ ಹಲವಡೆ ಡಿಫೆನ್ಸ್ ಕಾರಿಡಾರ್ ನಿರ್ಮಾಣ ಮಾಡಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ವೆಮಗಲ್ ನಲ್ಲಿ ಖಾಸಗಿ ಹಲಿಕ್ಯಾಪ್ಟರ್ ಉತ್ಪಾದನಾ ಘಟಕ ಶುರುವಾಗುತ್ತಿದೆ. ಇದರಿಂದ ಉದ್ಯೋಗ ಸೃಷ್ಟಿಯಾಗುವುದು ನಿಶ್ಚಿತ. ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೆ ಮತ್ತಷ್ಟು ಕೈಗಾರಿಕೆಗಳು ಬರಲಿವೆ ಎಂದು ಸಚಿವ ಎಂಬ ಪಟೇಲ್ ಹೇಳಿಕೆ ನೀಡಿದರು.
ಮೈಸೂರು : ಅಕ್ರಮವಾಗಿ ಸಂಗ್ರಹಿಸಿದ 1256 ಚೀಲಗಳನ್ನ ಯೂರಿಯಾ ಜಪ್ತಿ ಮಾಡಲಾಗಿದೆ ಕಳ್ಬೆಟ್ಟ ಸಮೀಪದ ಖಾಸಗಿ ಗೋದಾಮಿಯಲ್ಲಿ ಈ ಒಂದು ಅಕ್ರಮವಾಗಿ ಯುರಿಯಾ ಸಂಗ್ರಹಿಸಲಾಗಿತ್ತು. ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಕಳ್ಬೆಟ್ಟ ಗ್ರಾಮದಲ್ಲಿ ಹುಣಸೂರಿನ ಏಜ್ ಪಾಷಾ ಎಂಬುವರಿಗೆ ಗೋದಮಿನಲ್ಲಿ ಅಕ್ರಮವಾಗಿ ಯೂರಿಯ ಸಂಗ್ರಹಿಸಲಾಗಿತ್ತು. ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದು ದಾಳಿಯ ವೇಳೆ ಗೋದಾಮಿಲ್ಲಿ ಇದ್ದ ಸಿಬ್ಬಂದಿಗಳು ಓಡಿ ಹೋಗಿದ್ದಾರೆ. ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಬೆಂಗಳೂರಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮಾದಕ ದಂಧೆಕೋರರ ವಿರುದ್ಧ ಸಮರ ಮುಂದುವರೆಸಿರುವ ಬೆಂಗಳೂರು ಪೊಲೀಸರು ನಗರದ ವಿವಿಧೆಡೆ ನಡೆಸಿದ ಕಾರ್ಯಾಚರಣೆಗಳಿಂದ 10.59 ಕೋಟಿ ರೂಪಾಯಿ ಮೌಲ್ಯದ ಮಾದಕ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ. ಮೂವರು ವಿದೇಶಿ ಪ್ರಜೆಗಳೂ ಸೇರಿದಂತೆ ಒಟ್ಟು 15 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ವಿವಿಧ ಮಾದಕ ವಸ್ತುಗಳ ಮಾರಾಟ ಮಾಡುತ್ತಿದ್ದ ಸೆನೆಗಲ್ ಪ್ರಜೆಯನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬ್ಯಾರಿ ಯಾಯ ಅಲಿಯಾಸ್ ಒಕೊಲಿ ಬಂಧಿತ ಆರೋಪಿಯಾಗಿದ್ದು, 29 ಎಲ್‌ಎಸ್‌ಡಿ ಮಾತ್ರೆಗಳು, 546 ಗ್ರಾಂ ಎಂಡಿಎಂಎ, 152 ಗ್ರಾಂ ಹೈಡ್ರೋ ಗಾಂಜಾ, 131 ಗ್ರಾಂ ಕೊಕೇನ್ ಹಾಗೂ 27 ಎಲ್‌ಎಸ್‌ಡಿ ಸ್ಟ್ರಿಪ್ಸ್ ಸೇರಿದಂತೆ 1.5 ಕೋಟಿ ಮೌಲ್ಯದ ವಿವಿಧ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕ್ರೀಡಾ ವೀಸಾ ಪಡೆದು ಭಾರತಕ್ಕೆ ಬಂದು ಮಾದಕ ದಂಧೆಯಲ್ಲಿ ತೊಡಗಿದ್ದ ದಕ್ಷಿಣ ಆಫ್ರಿಕಾ ಮೂಲದ ಕೊರ್ಲಿ ಡೇನಿಯಲ್ ಎಂಬಾತನನ್ನು ಗೋವಿಂದಪುರ ಠಾಣೆ…
ಹಾವೇರಿ : ರಾಜ್ಯದಲ್ಲಿ 29 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇವೆ ಶಿಕ್ಷಕರ ಖಾಲಿ ಹುದ್ದೆಗಳ ಭರ್ತಿಗೆ ಬಗ್ಗೆ ಸಭೆ ಕರೆಯುತ್ತೆವೆ ಎಂದು ಹಾವೇರಿಯಲ್ಲಿ ಸಭಾಪತಿ ಬಸವರಾಜ್ ಹೊರಟಿ ಹೇಳಿಕೆ ನೀಡಿದರು.ಹಾವೇರಿಯಲ್ಲಿ ಈ ಕುರಿತು ಮಾತನಾಡಿದ ಅವರು, ಮುಂದಿನ ಅಧಿವೇಶನ ಸಂದರ್ಭದಲ್ಲಿ ಸಭೆ ಕರೆಯಬೇಕು. ತರಗತಿಗೆ ಒಬ್ಬ ಶಿಕ್ಷಕರನ್ನು ಕೊಡುವ ಕೆಲಸ ಆಗಬೇಕು ಈ ವಿಚಾರವಾಗಿ ಶಿಕ್ಷಣ ಇಲಾಖೆಯ ಸಚಿವರಿಗೆ ಕೇಳುತ್ತೇನೆ. ಶಿಕ್ಷಕರ ನೇಮಕ ಮಾಡದಿದ್ದರೆ ಹೇಗೆ ಎಸ್ ಎಸ್ ಎಲ್ ಸಿ ರಿಸಲ್ಟ್ ಕೇಳುತ್ತೀರಿ? ಎಸ್‍ಎಸ್‍ಎಲ್‍ಸಿಯಲ್ಲಿ ಹೇಗೆ ಉತ್ತಮ ಫಲಿತಾಂಶ ನಿರೀಕ್ಷೆ ಮಾಡುತ್ತೀರಿ? ಶಿಕ್ಷಕರ ನೇಮಕಾತಿ ಬಗ್ಗೆ ಮುಖ್ಯಮಂತ್ರಿ ಜೊತೆಗೆ ಮಾತನಾಡುತ್ತೇನೆ. ಸರ್ಕಾರ ಎಲ್ಲಾ ನ್ಯೂನ್ಯತೆ ಸರಿಪಡಿಸಲಿ. ಎಮ್ಮಿಯನ್ನು ನೀರಿನಲ್ಲಿ ಮಲಗಿಸಿ ಬೆಲೆ ಕಟ್ಟುವುದು ಬೇಡ ಎಂದು ಅಸಮಾಧಾನ ಹೊರಹಾಕಿದರು.
ಬೆಂಗಳೂರು : ಬೆಂಗಳೂರಿನಲ್ಲಿ ಪ್ರತಿಷ್ಠಿತ ಖಾಸಗಿ ವಿಶ್ವವಿದ್ಯಾಲಯ ವಿದ್ಯಾರ್ಥಿನಿ ಹಾಸ್ಟೆಲಿನ 14ನೇ ಮಹಡಿಯಿಂದ ಬಿದ್ದು ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ನಾಗದೇವನಹಳ್ಳಿ ಬಳಿ ಇರುವ ವಿಶ್ವವಿದ್ಯಾಲಯದಲ್ಲಿ ಈ ಒಂದು ಘಟನೆ ನಡೆದಿದೆ. ಸರ್ಜಾಪುರದ 20 ವರ್ಷದ ನಯನಾ ಮೃತ ವಿದ್ಯಾರ್ಥಿನಿ ಎಂದು ತಿಳಿದುಬಂದಿದೆ. ಕಂಪ್ಯೂಟರ್ ಸೈನ್ಸ್ ಓದುತ್ತಿದ್ದ ನಯನಾ ಕಟ್ಟಡದ 14ನೇ ಮಹಡಿಯಿಂದ ಬಿದ್ದು ನಯನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುವ ಶಂಕೆ ವ್ಯಕ್ತವಾಗುತ್ತಿದೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.














