Subscribe to Updates
Get the latest creative news from FooBar about art, design and business.
Author: kannadanewsnow05
ಮಂಗಳೂರು : ಮಹಿಳೆಯೊಬ್ಬರಿಗೆ ಯಾರೋ ಮಾಟ, ಮಂತ್ರ ಮಾಡಿಸಿದ್ದಾರೆಂದು ನಂಬಿಸಿ, ಚಿಕಿತ್ಸೆಯ ನೆಪದಲ್ಲಿ ಲೈಂಗಿಕ ಕಿರುಕುಳ ನೀಡಿದ್ದು ಅಲ್ಲದೇ 1 ಲಕ್ಷ ರೂ.ಗಳನ್ನು ಪಡೆದು ವಂಚಿಸಿದ ಆರೋಪದಲ್ಲಿ ಕೂಳೂರು ಉಸ್ತಾದ್, ಗುರುವಾಯನಕೆರೆಯ ನಿವಾಸಿ ಜಿ. ಅಬ್ದುಲ್ ಕರೀಮ್‌ನನ್ನು ಮಂಗಳೂರು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ. 2022ರಲ್ಲಿ ಸಂತ್ರಸ್ತೆಗೆ ಖಿನ್ನತೆಯ ಸಮಸ್ಯೆ ಉಂಟಾಗಿದ್ದು, ಆಕೆ ತನ್ನ ಅಕ್ಕನ ಗಂಡನ ಸಲಹೆಯಂತೆ ಆಗ ಹೆಜಮಾಡಿಯಲ್ಲಿದ್ದ ಉಸ್ತಾದ್ ಅಬ್ದುಲ್ ಕರೀಮ್ ಮನೆಗೆ ಹೋಗಿದ್ದರು. ಅಲ್ಲಿ ಕೂಳೂರು ಉಸ್ತಾದ್ ಎಂಬ ಹೆಸರಿನ ಈ ಅಬ್ದುಲ್ ಕರೀಮ್ ಎಂಬಾತ ಮಹಿಳೆಯನ್ನು ನೋಡಿ ನಿಮಗೆ ಯಾರೋ ಮಾಟ ಮಂತ್ರ ಮಾಡಿಸಿದ್ದಾರೆ ಎಂದು ನಂಬಿಸಿ ಅದನ್ನು ತೆಗೆಸಬೇಕು ಎಂದು ಹೇಳಿದನೆನ್ನಲಾಗಿದೆ. ಮಾಟ ಮಂತ್ರ ನಿವಾರಿಸುವ ಚಿಕಿತ್ಸೆ ಕೊಡುತ್ತೇನೆ ಎಂದು ನಂಬಿಸಿ ಆ ಮಹಿಳೆಯನ್ನು ಆಗಾಗ ಬರಲು ತಿಳಿಸಿದ್ದಾನೆ ಈ ಅಬ್ದುಲ್ ಕರೀಮ್. ಮಹಿಳೆ ತನ್ನ ಅಕ್ಕನ ಜೊತೆ ಈ ವ್ಯಕ್ತಿ ಬಳಿ ಹಲವು ಬಾರಿ ಹೋಗಿದ್ದಾರೆ. ಅಲ್ಲಿ ಈತ ಕೆಲವು ಬಾರಿ…
ಉಡುಪಿ : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಮನೆಯಲ್ಲಿದ್ದ ಇಲಿ ಪಾಷಾಣವನ್ನು ತಿಳಿಯದೇ ತಿಂದು ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಮಲ್ಪೆ ಬಳಿಯ ಪಡುತೋನ್ಸೆ ಗ್ರಾಮದ ಗುಜ್ಜರಬೆಟ್ಟು ಎಂಬಲ್ಲಿ ನಡೆದಿದೆ ಮೃತರನ್ನು ಗುಜ್ಜರಬೆಟ್ಟು ನಿವಾಸಿ ಸರೋಜ(51) ಎಂದು ಗುರುತಿಸಲಾಗಿದೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಇವರು, ಎ.4ರಂದು ಮಧ್ಯಾಹ್ನ ಮನೆಯಲ್ಲಿ ತಂದಿಟ್ಟಿದ್ದ ಇಲಿ ಪಾಷಾಣವನ್ನು ತಿಳಿಯದೆ ಸೇವಿಸಿದ್ದರು. ಇದರಿಂದ ತೀವ್ರ ಅಸ್ವಸ್ಥಗೊಂಡಿದ್ದ ಅವರು ಎ.5ರಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿ : ಬಿಜೆಪಿ ಪಕ್ಷದಿಂದ 6 ವರ್ಷಗಳ ಕಾಲ ಉಚ್ಛಾಟನೆಯಾದರು, ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಎಸ್ ಯಡಿಯೂರಪ್ಪ ಮತ್ತು ಕುಟುಂಬದ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಇದೀಗ ಬಿಎಸ್ ಯಡಿಯೂರಪ್ಪ ವಿರುದ್ಧ ಮತ್ತೊಂದು ಆರೋಪ ಮಾಡಿರುವ ಶಾಸಕ ಯತ್ನಾಳ್ ನನ್ನನ್ನು ಸೋಲಿಸಲು ಬಿಎಸ್ ಯಡಿಯೂರಪ್ಪ ಪ್ರಯತ್ನಿಸಿದ್ದರು ಎಂದು ಆರೋಪಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಸವಜಯ ಮೃತ್ಯುಂಜಯ ಸ್ವಾಮೀಜಿ ಬಗ್ಗೆ ಮಾತನಾಡಿದರೆ ಸರಿ ಇರಲ್ಲ. ಶ್ರೀಗಳ ಬಗ್ಗೆ ಯಾರಾದರೂ ಮಾತನಾಡಿದರೆ ಪರಿಣಾಮ ಸರಿ ಇರಲ್ಲ. ನನ್ನನ್ನು ಸೋಲಿಸುವುದಕ್ಕೂ ಯಡಿಯೂರಪ್ಪ ಪ್ರಯತ್ನ ಮಾಡಿದ್ದರು. ನಾನು ಕೇವಲ ಹಿಂದುಗಳ ಮತಗಳಿಂದ ಗೆದ್ದಿದ್ದು. ಯಡಿಯೂರಪ್ಪ ಬ್ಲಾಕ್ಮೇಲ್ ಮಾಡಿ ದೊಡ್ಡ ವ್ಯಕ್ತಿ ಆಗಿದ್ದಾನೆ. ಭ್ರಷ್ಟಾಚಾರದಿಂದಾಗಿ ಸಿಎಂ ಸ್ಥಾನದಿಂದ ಬಿಎಸ್ ಯಡಿಯೂರಪ್ಪ ಕೆಳಗಿಳಿದರು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ ಕಾರಿದ್ದಾರೆ. ಇನ್ನು ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ 6 ವರ್ಷಗಳ ಕಾಲ ಉಚ್ಚಾಟನೆ ಮಾಡಿರುವ ವಿಚಾರವಾಗಿ, ವಿಜಯಪುರದಲ್ಲಿ ಯತ್ನಾಳ್ ಬೆಂಬಲಿಗರ ಪ್ರತಿಭಟನೆ…
ಬೆಂಗಳೂರು : ನಟಿ ಸಂಜನಾ ಗಲ್ರಾನಿ ಅವರಿಗೆ 45 ಲಕ್ಷ ರೂ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಕರಣದ ಅಪರಾಧಿ ರಾಹುಲ್ ತೋನ್ಸೆ ಎಂಬಾತನಿಗೆ 61.50 ಲಕ್ಷ ರೂ ದಂಡ ಮತ್ತು 6 ತಿಂಗಳು ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ 33ನೇ ಎಸಿಜೆಎಂ ನ್ಯಾಯಾಲಯ ತೀರ್ಪು ನೀಡಿದೆ. ಬನಶಂಕರಿ 3ನೇ ಹಂತದ ನಿವಾಸಿ ರಾಹುಲ್ ತೋನ್ಸೆ ಅಲಿಯಾಸ್ ರಾಹುಲ್ ಶೆಟ್ಟಿ ವಿರುದ್ಧ 2018-19ರಲ್ಲಿ ಸಂಜನಾ ಗಲ್ರಾನಿಯಿಂದ 45 ಲಕ್ಷ ರೂ ಪಡೆದು ವಂಚಿಸಿದ್ದ ಆರೋಪವಿತ್ತು.ದಂಡದ ಮೊತ್ತದಲ್ಲಿ 10 ಸಾವಿರ ರೂ ಕೋರ್ಟ್ ಶುಲ್ಕವನ್ನು ಕಡಿತಗೊಳಿಸಿ ಉಳಿದ 61.40 ಲಕ್ಷ ರೂಪಾಯಿಗಳನ್ನು ದೂರುದಾರೆ ಸಂಜನಾಗೆ ನೀಡಬೇಕು. ನಿಗದಿತ ಸಮಯದಲ್ಲಿ ದಂಡದ ಮೊತ್ತವನ್ನು ಪಾವತಿ ಮಾಡಿದರೆ 6 ತಿಂಗಳ ಶಿಕ್ಷೆಯನ್ನು ಮಾಫಿ ಮಾಡಲಾಗುತ್ತದೆ. ಇಲ್ಲವಾದರೆ, 6 ತಿಂಗಳು ಜೈಲು ಮತ್ತು ದಂಡವನ್ನು ಪಾವತಿ ಮಾಡಬೇಕೆಂದು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ. ಗೋವಾ ಮತ್ತು ಕೊಲಂಬೋದಲ್ಲಿ ಕ್ಯಾಸಿನೋಗಳ ವ್ಯವಸ್ಥಾಪಕ ನಿರ್ದೇಶಕನಾಗಿದ್ದೇನೆ. ನಾನು ಹೇಳಿದ ಕಡೆಗಳಲ್ಲಿ ಹಣವನ್ನು ಹೂಡಿಕೆ…
ಬೆಂಗಳೂರು : ರಾಜ್ಯದಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ಶಾಲಾ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛತೆ ಮಾಡಿಸದಂತೆ ಸಾಕಷ್ಟು ಬಾರಿ ಸರ್ಕಾರ ಹಾಗೂ ನ್ಯಾಯಾಲಯ ಸ್ಪಷ್ಟ ಆದೇಶ ನೀಡಿದ್ದರೂ, ಸಹ ಇದೀಗ ವಿದ್ಯಾರ್ಥಿಗಳಿಂದ ಶೌಚಾಲಯ ಗುಂಡಿಯಿಂದ ಹೊರ ಬಂದ ಮಲವನ್ನು ಸ್ವಚ್ಛ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಹೌದು ಯಲಹಂಕದ ಸರ್ಕಾರಿ ಶಾಲೆಯಲ್ಲಿ ಇಂತಹದೊಂದು ಹೇಯ್ಯ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ. ಯಲಹಂಕದ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲೆಯಲ್ಲಿ ಇಂತಹದೊಂದು ಅಮಾನವೀಯ ಘಟನೆ ನಡೆದಿದ್ದು, 7, 8 ಮತ್ತು 9 ನೇ ತರಗತಿ ಕೆಲ ವಿದ್ಯಾರ್ಥಿಗಳು ಶೌಚಾಲಯ ಗುಂಡಿಯನ್ನು ಸ್ವಚ್ಛಗೊಳಿಸಿರುವ ವಿಡಿಯೋ ವೈರಲ್ ಆಗಿದೆ. ದೂರು ಸಲ್ಲಿಕೆ ಈ ಸಂಬಂಧ ಬೆಳ್ತೂರು ಪರಮೇಶ್ ಎಂಬುವರು ರಾಜ್ಯ ಮಾನವ ಹಕ್ಕುಗಳ ಆಯೋಗ ಮತ್ತು ಮಕ್ಕಳ ಆಯೋಗಕ್ಕೆ ಶಾಲೆಯ ಪ್ರಾಂಶುಪಾಲರಾದ ಕನ್ನಮ್ಮ ಮತ್ತು ಕನ್ನಡ ಶಿಕ್ಷಕ ಶಿವಕುಮಾರ್ ವಿರುದ್ಧ ದೂರು ನೀಡಿದ್ದಾರೆ.ಈ ಒಂದು ಘಟನೆ ಮಾರ್ಚ್ 8 ರಂದು ನಡೆದಿದ್ದು ತಡವಾಗಿ…
ಬಾಗಲಕೋಟೆ : ಒಂದು ಕಡೆ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಅವರ ಬೆಂಬಲಕ್ಕೆ ಕೂಡಲಸಂಗಮದ ಪೀಠಾಧಿಪತಿ ಬಸವ ಜಯಂತಿಯ ಸ್ವಾಮಿಗಳು ನಿಂತಿದ್ದರೆ.ಇನ್ನೊಂದು ಕಡೆ ಅವರನ್ನು ಬದಲಾವಣೆ ಮಾಡುವ ಕುರಿತು ಶಾಸಕ ವಿಜಯಾನಂದ ಕಾಶಪ್ಪನವರ ಸುಳಿವು ನೀಡಿದ್ದಾರೆ. ಹೌದು ಪಂಚಮಸಾಲಿ ಸಮುದಾಯ ಇವರನ್ನು ಗುರುಗಳನ್ನಾಗಿ ಮಾಡಿದೆ. ಇವರೇನು ಸ್ವಯಂಘೋಷಿತರಾಗಿ ಬಂದಿಲ್ಲ. ಬದಲಾವಣೆ ಕಾಲ ಬಂದಾಗ ಬದಲಾವಣೆ ಆಗುತ್ತದೆ ಎಂದು ತಿಳಿಸಿದರು. ಬಾಗಲಕೋಟೆ ಜಿಲ್ಲೆಯ ಹಣವನ್ನು ತಾಲ್ಲೂಕಿನಲ್ಲಿ ಮಾತನಾಡಿದ ಅವರು, ಗುರುಗಳು ಸ್ವಯಂಘೋಷಿತವಾಗಿ ಇವರೇ ಬಂದಿಲ್ಲ. ಕಾಲ ಕಾಲಕ್ಕೆ ಏನೇನು ಆಗಬೇಕೋ ಅದೆಲ್ಲಾ ಆಗುತ್ತದೆ. ಬದಲಾವಣೆ ಕಾಲ ಬಂದಾಗ ಯಾರೂ ತಡೆಯುವುದಿಲ್ಲ. ಭೂಮಂಡಲದಲ್ಲೇ ಯಾರನ್ನು ಉಳಿಸಲು ಆಗುವುದಿಲ್ಲ. ಸುನಾಮಿ ಯಾರನ್ನಾದ್ರೂ ಕೇಳಿ ಬರುತ್ತಾ? ಇವರ ಕಾಲ ಮುಗಿದಿದೆ, ಬದಲಾವಣೆ ಆಗಿಯೇ ಆಗುತ್ತದೆ ಎಂದು ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಹೇಳಿದರು.
ಬೆಂಗಳೂರು : ಬೆಂಗಳೂರಲ್ಲಿ ಘೋರವಾದ ದುರಂತವಾದ ಸಂಭವಿಸಿದ್ದು, 9 ವರ್ಷದ ಬಾಲಕಿಯ ಮೇಲೆ ಟ್ರಾಕ್ಟರ್ ಹರಿದು ಸಾವನ್ನಪ್ಪಿರುವ ದುರ್ಘಟನೆ ವೈಟ್‌ಫೀಲ್ಡ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಹೌದು ಕೆರೆ ಏರಿ ಮೇಲೆ ಚಲಿಸುತ್ತಿದ್ದ ಟ್ರ್ಯಾಕ್ಟರ್ ಉರುಳಿ ಬಿದ್ದ ಪರಿಣಾಮ 9 ವರ್ಷದ ಬಾಲಕಿ ಮೃತಪಟ್ಟಿರುವ ಘಟನೆ ವೈಟ್‌ಫೀಲ್ಡ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಇಸಿನಾಕಾ ಭಟ್ (9) ಎಂದು ತಿಳಿದುಬಂದಿದೆ. ಘಟನೆಯಲ್ಲಿ ಚಾಲಕ ಹಾಗೂ ಆರು ವರ್ಷದ ಬಾಲಕಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಚಾಲಕ ತನ್ನ ಆರು ಮತ್ತು ಒಂಬತ್ತು ವರ್ಷದ ಮಕ್ಕಳನ್ನು ಟ್ರ್ಯಾಕ್ಟರ್‌ನಲ್ಲಿ ಕೂರಿಸಿಕೊಂಡು ತನ್ನ ಶೆಡ್‌ಗೆ ಹೋಗುತ್ತಿದ್ದರು. ಪಟ್ಟಂದೂರು ಅಗ್ರಹಾರ ಕೆರೆ ಏರಿ ಮೇಲೆ ಹೋಗುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಉರುಳಿದ ಟ್ರ್ಯಾಕ್ಟರ್ ಕೆರೆಗೆ ಬಿದ್ದಿದೆ. ಆಗ ಟ್ರ್ಯಾಕ್ಟರ್ ಕೆಳಗೆ ಸಿಲುಕಿಕೊಂಡ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಚಾಲಕ ಮತ್ತು ಆರು ವರ್ಷದ ಬಾಲಕಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು…
ಹುಬ್ಬಳ್ಳಿ : ಸಹಕಾರ ಸಚಿವ ಕೆ.ಎನ್ ರಾಜಣ್ಣ ಮೇಲೆ ಹನಿಟ್ರ್ಯಾಪ್ ನಡೆದಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ರಾಜ್ಯ ಸರ್ಕಾರ ಈ ಒಂದು ಪ್ರಕರಣವನ್ನು ಸಿಐಡಿ ತನಿಖೆಗೆ ನೀಡಿದೆ. ಇದರ ಬೆನ್ನಲ್ಲೇ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಹನಿಟ್ರ್ಯಾಪ್ ಸಂಬಂಧಪಟ್ಟಂತೆ ನನ್ನ ಬಳಿ ಹಲವು ದಾಖಲೆಗಳಿವೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಎಸ್‌ಸಿ/ಎಸ್‌ಟಿ ನಾಯಕರನ್ನು ಮುಗಿಸಿದ್ದೆ ಕಾಂಗ್ರೆಸ್ ಪಕ್ಷ. ಕೆ.ಎನ್ ರಾಜಣ್ಣ, ರಮೇಶ್ ಜಾರಕಿಹೊಳಿ ಮುಗಿಸಿದ್ದು ಯಾರು? ಹಾಗಾಗಿ ರಾಜಕಾರಣ ಹೀಗಾಗಬಾರದು. ಹನಿಟ್ರ್ಯಾಪ್ ಹಿಂದೆ ಮಹಾನ್ ನಾಯಕರ ಕೈವಾಡವಿದೆ. ಎರಡು ಪಕ್ಷದ ಮಹಾನ್ ನಾಯಕರ ಕೈವಾಡ ಇದೆ. ನನ್ನ ಬಳಿಯೂ ಕೆಲವು ದಾಖಲೆಗಳು ಇವೆ. ನನಗೆ ಹಾಯ್ ಅಂದರೆ ನಾನು ಬಾಯ್ ಎಂದು ಹೇಳುತ್ತೇನೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಪೋಟಕ ಹೇಳಿಕೆ ನೀಡಿದರು. ನನ್ನ ವಿರುದ್ಧವು ಶತ್ರು ಸಂಹಾರ ಯಾಗ ನಡೆದಿದೆ. ಕೇರಳದ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಯಾಗ ನಡೆದಿದೆ. ಹುಬ್ಬಳ್ಳಿಯಲು ಕೂಡ ಒಂದು…
ಬೆಂಗಳೂರು : ಇತ್ತೀಚಿಗೆ ರಾಜ್ಯ ಸರ್ಕಾರ ಅಗತ್ಯವಸ್ತುಗಳ ಬೆಲೆ ಏರಿಕೆ, ಮುಸ್ಲಿಮರ ಓಲೈಕೆ, ಪರಿಶಿಷ್ಟರಿಗೆ ಮೀಸಲಾಗಿದ್ದ ಅನುದಾನ ಅನ್ಯ ಉದ್ದೇಶಕ್ಕೆ ಬಳಕೆ ಮತ್ತಿತರ ವೈಫಲ್ಯಗಳನ್ನು ಮುಂದಿಟ್ಟುಕೊಂಡು ಬಿಜೆಪಿಯು ಸೋಮವಾರದಿಂದ ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ಆರಂಭಿಸಲಿದೆ. ಹೌದು ಈ ಒಂದು ಯಾತ್ರೆಯು ಒಟ್ಟು ನಾಲ್ಕು ಹಂತಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗ ಳಲ್ಲಿ ಯಾತ್ರೆ ನಡೆಯಲಿದೆ. ಮೇ 3ಕ್ಕೆ ಅಂತ್ಯಗೊಳ್ಳಲಿದೆ.ಇಂದು ಮೈಸೂರಿನಲ್ಲಿ ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ ಅವರು ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಉಭಯ ಸದನಗಳ ಪ್ರತಿಪಕ್ಷಗಳ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣ ಸ್ವಾಮಿ ಸೇರಿ ಪಕ್ಷದ ಹಿರಿಯ ನಾಯಕರು, ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 3ಗಂಟೆಗೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ ಸಂಜೆ 4ಗಂಟೆಗೆ ಕೇಂದ್ರ ಅಂಚೆ ಕಚೇರಿ ವೃತ್ತದಿಂದ ಗಾಂಧಿ ಚೌಕ್‌ವರೆಗೆ ಪಾದಯಾತ್ರೆ ಮೂಲಕ ಜನಾಕ್ರೋಶ ಯಾತ್ರೆ ನಡೆಯಲಿದೆ.ಕಳೆದ ಬುಧವಾರ ಬಿಜೆಪಿ ಇದೇ ವಿಷಯಗಳನ್ನು…
ಹಾವೇರಿ : ಇತ್ತೀಚಿಗೆ ಹಾಲು ಉತ್ಪಾದಕರಿಂದ ಹಾಲು ಪಡೆಯುವ ಹಾವೇರಿಯ ಹಾವೆಮುಲ್ 3.50 ರೂ. ಅನ್ನು ಇಳಿಕೆ ಮಾಡಿತ್ತು. ಇದಕ್ಕೆ ಹಾಲು ಉತ್ಪಾದಕರು ವಿರೋಧಿಸಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದರು. ಇದೀಗ ಹಾವೆಮುಲ್ ಪ್ರತಿ ಲೀಟರ್ ಗೆ 2.50 ಏರಿಕೆ ಮಾಡಲು ನಿರ್ಧರಿಸಿದೆ. ಹೌದು ಹಸುವಿನ ಹಾಲಿಗೆ 33 ರೂ. ಹಾಗು ಎಮ್ಮೆಯ ಹಾಲಿಗೆ 45.50 ಗೆ ಹೆಚ್ಚಳಕ್ಕೆ ನಿರ್ಧಾರ ಮಾಡಿದೆ. ಕಳೆದ ಮಾರ್ಚ್ 27 ರಂದು ಲೀಟರ್ ಗೆ 3.50 ಕಡಿತಗೊಳಿಸಲಾಗಿತ್ತು. ಈ ವೇಳೆ ಹಾವೆಮುಲ್ ವಿರುದ್ಧ ಹಾಲು ಉತ್ಪಾದಕರು ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಹಾವೆಮುಲ್ ಅಧ್ಯಕ್ಷ ಮತ್ತು ನಿರ್ದೇಶಕರ ಜೊತೆ ಸಭೆ ನಡೆಸಿ ಸಚಿವ ಶಿವಾನಂದ್ ಪಾಟೀಲ್ ಸೂಚನೆ ನೀಡಿದ್ದರು. ಸಚಿವರ ಸಲಹೆ ಹಿನ್ನೆಲೆಯಲ್ಲಿ ಇದೀಗ 2.50 ಹೆಚ್ಚಳಕ್ಕೆ ನಿರ್ಧರಿಸಲಾಗಿದೆ.














