Subscribe to Updates
Get the latest creative news from FooBar about art, design and business.
Author: kannadanewsnow05
ಹುಬ್ಬಳ್ಳಿ : ಬಿಜೆಪಿಯಿಂದ 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿತರಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮುಂದಿನ ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ್ದಾರೆ. ನಾನು ಇಲ್ಲದೆ ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಮತ್ತೊಮ್ಮೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ಹೃದಯದಲ್ಲಿ ಬಿಜೆಪಿ ಇದೆ. ಉಚ್ಚಾಟನೆ 6 ತಿಂಗಳು ನಡೆಯಲ್ಲ. ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟಿಲ್ ನನ್ನ ಹೊರ ಹಾಕಿರಬಹುದು. ಪಕ್ಷದಿಂದ ನನ್ನನ್ನು ಹೊರಗೆ ಹಾಕಿದರೆ ಏನು ಕಿಸಿಯೋಕೆ ಆಗಲ್ಲ ನಾನು ಹಿಂದುಗಳ ಪರ ಇದ್ದೇನೆ ಎಂದು ವಾಗ್ದಾಳಿ ನಡೆಸಿದ್ದಾರೆ. ಸನಾತನ ಧರ್ಮ ಉಳಿದರೆ ವಿಭೂತಿ ಉಳಿಯುತ್ತದೆ. ಇಲ್ಲ ಅಂದರೆ ಎಲ್ಲರೂ ಮಸೀದಿಗೆ ಹೋಗಬೇಕು. ನಾನು ಇಲ್ಲದೆ ಯಾವ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಆಗಲ್ಲ. ನನಗೆ ಜನರ ಆಶೀರ್ವಾದ ಇದೆ. ನಾನು ದೊಡ್ಡವನಾಗಲು ಭಗವಾಧ್ವಜ, ಶ್ರೀರಾಮ ಕಾರಣ. ನನಗೆ ಮೂರು ಸಾವಿರ…
ಚಿಕ್ಕಮಗಳೂರು : ಚಿಕ್ಕಮಂಗಳೂರಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರಿಂದ ಜಿಲ್ಲೆಯಾದ್ಯಂತ ಹಲವು ಪ್ರದೇಶಗಳಲ್ಲಿ, ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಇದೆ ವೇಳೆ ತುಂಗಾ ನದಿಯಲ್ಲಿ ಈಜಲು ಹೋಗಿದ್ದ ಯುವಕ ನಾಪತ್ತೆಯಾಗಿದ್ದಾನೆ. ಹೌದು ನುಗ್ಗಿಮಕ್ಕಿ ಗ್ರಾಮದ ಬಳಿ ತುಂಗಾ ನದಿಯಲ್ಲಿ ಯುವಕನೊಬ್ಬ ಈಜಲು ಹೋಗಿ ನಾಪತ್ತೆಯಾಗಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ನುಗ್ಗಿಮಕ್ಕಿ ಎಂಬಲ್ಲಿ ಈ ಒಂದು ಘಟನೆ ಸಂಭವಿಸಿದೆ. ತುಂಗಾ ನದಿಯಲ್ಲಿ ಮನೋಜ್ (17) ನಾಪತ್ತೆಯಾಗಿರುವ ಯುವಕ ಎಂದು ತಿಳಿದು ಬಂದಿದೆ. ಸ್ನೇಹಿತರ ಜೊತೆಗೆ ನದಿಯಲ್ಲೂ ಈಚಲು ತೆರಳಿದ್ದಾಗ ಈ ಒಂದು ಘಟನೆ ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಈಗಾಗಲೇ ಹಲವೆಡೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನಾಪತ್ತೆಯಾಗಿರುವ ಯುವಕನಿಗಾಗಿ ಇದೀಗ ಶೋಧ ಕಾರ್ಯ ಮುಂದುವರಿದಿದೆ.
ನವದೆಹಲಿ : ರಾಜ್ಯದಲ್ಲಿ ಸಹಕಾರ ಸಚಿವ ಕೆ.ಎನ್ ರಾಜಣ್ಣ ವಿರುದ್ಧ ಹನಿಟ್ರ್ಯಾಪ್ ಪ್ರಕರಣ ಭಾರಿ ಸದ್ದು ಮಾಡಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಹಕಾರ ಸಚಿವ ಕೆ.ಎನ್ ರಾಜಣ್ಣ ಕಾಂಗ್ರೆಸ್ ಹೈಕಮಾಂಡಿಗೆ ದೂರು ನೀಡಲು ನವದೆಹಲಿಗೆ ತೆರಳಿದ್ದಾರೆ. ಎಲ್ಲಾ ಸಚಿವರೊಂದಿಗೆ ಸುದೀರ್ಘವಾಗಿ ಚರ್ಚಿಸಿ ಇದೀಗ ಹೈಕಮಾಂಡ್ಗೆ ದೂರು ನೀಡಲು ಕೆ.ಎನ್ ರಾಜಣ್ಣ ನಿರ್ಧರಿಸದ್ದಾರೆ. ಹೌದು ಹನಿಟ್ರ್ಯಾಪ್ ಪ್ರಕರಣ ಇನ್ನು ಮುಗಿದಂತೆ ಕಾಣುತ್ತಿಲ್ಲ. ಹೈಕಮಾಂಡ್ಗೆ ಹನಿಟ್ರ್ಯಾಪ್ ಬಗ್ಗೆ ದೂರು ನೀಡಲು ಕೆ.ಎನ್ ರಾಜಣ್ಣ ನಿರ್ಧರಿಸಿದ್ದಾರೆ. ಸಚಿವರೊಂದಿಗೆ ರಾಜಣ್ಣ ಸುದೀರ್ಘವಾಗಿ ಚರ್ಚೆ ನಡೆಸಿದ್ದು, ಈಗ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಹೈಕಮಾಂಡ್ಗೆ ದೂರು ನೀಡಲು ಕೆ.ಎನ್ ರಾಜಣ್ಣ ಚಿಂತನೆ ನಡೆಸಿದ್ದಾರೆ. ಹನಿಟ್ರ್ಯಾಪ್ ಬಗ್ಗೆ ಮಾಹಿತಿ ನೀಡಲು ರಾಜಣ್ಣ ಇದೀಗ ದೆಹಲಿಗೆ ತೆರಳಿದ್ದಾರೆ. ಮೂರು ದಿನ ದೆಹಲಿಯಲ್ಲಿದ್ದರೂ ಕೂಡ ಹೈಕಮಾಂಡ್ ಅವರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಇದೀಗ ಗುಜರಾತ್ ನಲ್ಲಿ ಎಐಸಿಸಿ ಅಧಿವೇಶನ ನಡೆಯುತ್ತಿದ್ದು, ಎಸಿಐಸಿ ಅಧಿವೇಶನಕ್ಕಾಗಿ ಇದೀಗ ಗುಜರಾತ್ ಗೆ ತೆರಳಲ್ಲಿದ್ದಾರೆ. ಅಧಿವೇಶನದಲ್ಲಿ ಹೈಕಮಾಂಡ್…
ಬೆಂಗಳೂರು : ಸಾಲಕ್ಕೆ ಹೆಚ್ಚು ಬಡ್ಡಿ ನೀಡುವಂತೆ ಮಾಜಿ ರೌಡಿ ಜೊತೆಗಿನ ಫೋಟೋ ತೋರಿಸಿ, ಬೆದರಿಕೆ ಹಾಕಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಲ್ಲಿ ಸಿಸಿಬಿ ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ. ದೀಪಕ್ ಮತ್ತು ಜಯಕುಮಾರ್ ಎಂಬವರನ್ನು ಪೊಲೀಸರು ಸಿಸಿಬಿ ಅರೆಸ್ಟ್ ಮಾಡಿದ್ದಾರೆ. ದೀಪಕ್ ಮತ್ತು ಜಯಕುಮಾರ್ ಬಳಿ ರವಿ ಎನ್ನುವ ವ್ಯಕ್ತಿ ಲಕ್ಷಾಂತರ ರೂಪಾಯಿ ಸಾಲವನ್ನು ಪಡೆದುಕೊಂಡಿದ್ದ. ಇದಕ್ಕೆ ಪ್ರತಿಯಾಗಿ ಬಂಧಿತ ಆರೋಪಿಗಳು ಅಧಿಕ ಬಡ್ಡಿ ಪಡೆಯುತ್ತಿದ್ದರು. ದೀಪಕ್ ಬಳಿ ರವಿ 13 ಲಕ್ಷ ಸಾಲಕ್ಕೆ 63 ಲಕ್ಷ ರೂಪಾಯಿ ಬಡ್ಡಿ ನೀಡಿದ್ದ. ಇನ್ನು ಜಯ ಕುಮಾರ್ ಬಳಿ ಪಡೆದ 8 ಲಕ್ಷಕ್ಕೆ ರವಿ ತಿಂಗಳಿಗೆ 80,000 ಬಡ್ಡಿಯನ್ನು ಕಟ್ಟುತ್ತಿದ್ದ. ಆದರೂ ಸಹ ಅಸಲು ತೀರಿಲ್ಲ ಎಂದು ಹೆಚ್ಚು ಬಡ್ಡಿಗೆ ಒತ್ತಾಯಿಸಿ ಬೆದರಿಕೆ ಹಾಕಿದ್ದಾರೆ. ಬಡ್ಡಿ ಹಣ ನೀಡಲು ತಡವಾದ ಕಿಡ್ನ್ಯಾಪ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. 4 ಕೋಟಿ ಸಾಲ ಪಡೆದಿದ್ದಾಗಿ ದಾಖಲೆ ಸೃಷ್ಟಿಸಿ ಕೇಸ್ ದಾಖಲಿಸುವುದಾಗಿ ಬೆದರಿಸಿದ್ದಾರೆ. ಸೈಲೆಂಟ್ ಸುನಿಲ ಮತ್ತು…
ಎಂಟು ದಿಕ್ಕುಗಳನ್ನು ಕಾಯುವ ದೇವತೆಗಳೇ ಅಷ್ಟ ದಿಕ್ಪಾಲಕರು. ದಿಕ್ಪಾಲಕ ಅಂದರೆ ರಕ್ಷಣೆ ನೀಡುವವ ಎಂದರ್ಥ.ಬ್ರಹ್ಮಾಂಡ ಅನಂತವಾದುದು. ಮಾಪನಕ್ಕೇ ನಿಲುಕದ ಬ್ರಹ್ಮಾಂಡವನ್ನು ಎಂಟು ದಿಕ್ಕುಗಳಿಂದ ಗುರುತಿಸುತ್ತಾರೆ. ಸನಾತನ ಪರಂಪರೆಯ ಪ್ರಕಾರ ಬ್ರಹ್ಮಾಂಡವನ್ನು ಪೊರೆಯುವಾತನೇ ಭಗವಂತ. ಅಂತೆಯೇ ಪ್ರತಿಯೊಂದು ದಿಕ್ಕಿಗೂ ಒಬ್ಬೊಬ್ಬರು ಅಧಿ ದೇವತೆಗಳಿದ್ದಾರೆ. ವಾಸ್ತುಶಾಸ್ತ್ರದ ಪ್ರಕಾರ ಅಷ್ಟದಿಕ್ಪಾಲಕರು: ಇಂದ್ರ-ಪೂರ್ವ, ಕುಬೇರ-ಉತ್ತರ, ಯಮ-ದಕ್ಷಿಣ, ವರುಣ-ಪಶ್ಚಿಮ, ಈಶಾನ (ಶಿವ)- ಈಶಾನ್ಯ, ಅಗ್ನಿ-ಆಗ್ನೇಯ, ವಾಯು-ವಾಯುವ್ಯ, ನಿರುಋುತಿ(ರಾಕ್ಷಸ)- ನೈಋುತ್ಯ. ಇಂದ್ರ : ಇಂದ್ರನು ದೇವತೆಗಳ ರಾಜ. ಸ್ವರ್ಗಲೋಕದ ಒಡೆಯ. ಮಳೆ ಮತ್ತು ಮಿಂಚುಗಳ ಅಧಿಧಿದೇವತೆ. ಐರಾವತ ಇವನ ವಾಹನ. ವಜ್ರಾಯುಧ ಇವನ ಆಯುಧ. ಅಧಿತಿಯ ಇಬ್ಬರು ಮಕ್ಕಳಲ್ಲಿ ಒಬ್ಬನಾದ ಇವನನ್ನು ಆದಿತ್ಯ ಎಂತಲೂ ಕರೆಯುತ್ತಾರೆ. ಅಗ್ನಿ : ಬೆಂಕಿಯ ದೇವತೆ. ಅವನೇ ಯಜ್ಞ ಪುರುಷ. ಹೋಮ, ಹವನಗಳಲ್ಲಿ ಅರ್ಪಣೆಯಾಗುವ ಹವಿಸ್ಸನ್ನು ಸಂಬಧಿಂಧಿತ ದೇವತೆಗಳಿಗೆ ಮುಟ್ಟಿಸುತ್ತಾನೆ. ದೇವತೆಗಳ ಸಂದೇಶವಾಹಕನಾಗಿ ಕೆಲಸ ನಿರ್ವಹಿಸುತ್ತಾನೆ. ಅಗ್ನಿಯು ಪೃಥ್ವಿಗೆ ಅಧಿಧಿಪತಿಯಾದ ದೇವತೆ ಎಂದೂ ಪ್ರಸಿದ್ಧ. ಯಮ : ಹಿಂದೂ ಪುರಾಣಗಳ ಪ್ರಕಾರ ಯಮರಾಜನೇ ಮೃತ್ಯುದೇವತೆ.…
ಮಂಗಳೂರು : ಯುವತಿ ಎಂದು ಭಾವಿಸಿ ಕಾಮುಕನೊಬ್ಬ ಯುವಕನಿಗೆ ಅಶ್ಲೀಲ ಮೆಸೇಜ್ ಮಾಡಿದ್ದಾನೆ. ಅಲ್ಲದೇ ರಾತ್ರಿ ವೇಳೆ ನಗ್ನ ವಿಡಿಯೋ ಕಾಲ್ ಮಾಡುವಂತೆ ಕೂಡ ಒತ್ತಾಯಿಸಿದ್ದಾನೆ. ಇದೀಗ ಕಾಮುಕನಿಗೆ ಸಾರ್ವಜನಿಕರು ಧರ್ಮದೇಟು ನೀಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಕೊಲ್ನಾಡು ಗ್ರಾಮದ ಕುಡ್ತಮುಗೇರಿನಲ್ಲಿ ನಡೆದಿದೆ. ಧರ್ಮದೇಟು ತಿಂದ ಕಾಮುಕ ಕನ್ಯಾನದ ಪಂಜಾಜೆ ನಿವಾಸಿ ಸವಾದ್(20) ಎಂದು ತಿಳಿದುಬಂದಿದೆ. ಸಾವದ್ ಅಂಗಡಿಯೊಂದರಲ್ಲಿ ವಸ್ತುವೊಂದನ್ನು ಖರೀದಿಸಿ ಹಣವಿಲ್ಲವೆಂದು ಗೂಗಲ್ ಪೇ ನಂಬರ್ ಕೇಳಿದ್ದ. ಅಂಗಡಿಯಲ್ಲಿದ್ದ ಹಿಂದೂ ಯುವತಿ ತನ್ನ ನಂಬರ್ ನೀಡದೇ, ಅಂಗಡಿಯ ಮತ್ತೋರ್ವ ಯುವಕನ ನಂಬರ್ ನೀಡಿದ್ದಳು. ಆ ಫೋನ್ ನಂಬರ್ ಯುವತಿಯದ್ದೆಂದು ಭಾವಿಸಿ ರಾತ್ರಿ ವೇಳೆ ಸಾವದ್ ಅಶ್ಲೀಲ ಸಂದೇಶ ಕಳುಹಿಸಿದ್ದ. ಈ ವೇಳೆ ಸಹೊದ್ಯೋಗಿ ಯುವಕ ಎಲ್ಲಾ ಮೆಸೇಜ್‌ಗಳಿಗೂ ಉತ್ತರಿಸಿ ಆಟವಾಡಿಸಿದ್ದ. ತಡರಾತ್ರಿ ಅಶ್ಲೀಲ ವೀಡಿಯೋಗಳನ್ನು ಕಳುಹಿಸಿದ್ದ ಸವಾದ್, ಬಳಿಕ ಯುವತಿಗೆ ನಗ್ನ ವೀಡಿಯೋ ಕಾಲ್ ಮಾಡುವಂತೆ ಒತ್ತಾಯಿಸಿದ್ದ. ಅಲ್ಲದೇ ನಾಳೆ ಮತ್ತೆ ಅಂಗಡಿಯತ್ತ ಬರುತ್ತೇನೆ ಎಂಬ ಸಂದೇಶವನ್ನೂ…
ವಿಜಯಪುರ : ವಿಜಯಪುರದಲ್ಲಿ ಖಾಸಗಿ ಆಸ್ಪತ್ರೆಯಲ್ಲಿಯೇ ವೈದ್ಯರು ಒಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿದೆ. ಆತ್ಮಹತ್ಯೆಗೆ ಶರಣಾದ ವೈದ್ಯ ಡಾ. ರಾಜಶೇಖರ್ ಎಂದು ತಿಳಿದುಬಂದಿದೆ. ಹೌದು ಆಸ್ಪತ್ರೆಯಲ್ಲಿಯೆ ನೇಣು ಬಿಗಿದುಕೊಂಡು ವೈದ್ಯ ಡಾ.ರಾಜಶೇಖರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ಈ ಒಂದು ಘಟನೆ ನಡೆದಿದೆ. ತಾಳಿಕೋಟಿ ಪಟ್ಟಣದ ಶ್ರೀ ಸಾಯಿ ಆಸ್ಪತ್ರೆಯಲ್ಲಿ ಡಾ. ರಾಜಶೇಖರ್ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ವೈದ್ಯ ಡಾ. ರಾಜಶೇಖರ್ ಅವರ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಶಿವಮೊಗ್ಗ : ಶಿವಮೊಗ್ಗದಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಕಾಲುವೆಯಲ್ಲಿ ಮೀನು ಹಿಡಿಯಲು ಹೋದ ಐವರು ಮಕ್ಕಳು ನಾಪತ್ತೆಯಾಗಿದ್ದ ಪ್ರಕರಣಕ್ಕೆ ಸಬಂಧಿಸಿದಂತೆ ಇದೀಗ ಐವರು ಮಕ್ಕಳು ಪತ್ತೆಯಾಗಿದ್ದಾರೆ. ಈ ಒಂದು ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕುಮಾರಿ ನಾರಾಯಣಪುರ ಗ್ರಾಮದಲ್ಲಿ ನಡೆದಿತ್ತು. ನಿನ್ನೆ ರಾತ್ರಿ ಕುಮಾರಿ ನಾರಾಯಣಪುರ ಗ್ರಾಮದ ಬಳಿಯ ದೇಗುಲದಲ್ಲಿ ಮಕ್ಕಳು ಇದ್ದರು ಎನ್ನಲಾಗಿದೆ. ಮೀನು ಹಿಡಿಯಲು ಹೋಗಿದ್ದಕ್ಕೆ ಮನೆಯವರು ಬೈಯುತ್ತಾರೆ ಎಂದು ಗಾಬರಿಯಾದ ಐವರು ಮಕ್ಕಳು ದೇಗುಲದಲ್ಲಿಯೇ ಉಳಿದುಕೊಂಡಿದ್ದಾರೆ. ಹಾಗಾಗಿ ಮಕ್ಕಳ ಪೋಷಕರು ಗಾಬರಿಯಾಗಿ ದ್ದರು. ಈಗ ಮಕ್ಕಳು ಸಿಕ್ಕಿದ್ದಕ್ಕೆ ನಿಟ್ಟುಸಿರು ಬಿಟ್ಟಿದ್ದಾರೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕುಮಾರಿ ನಾರಾಯಣಪುರ ಗ್ರಾಮದಲ್ಲಿ ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ಐವರು ಮಕ್ಕಳು ಇದೀಗ ಪತ್ತೆಯಾಗಿದ್ದಾರೆ. ಧನುಷ್ (14 ಕಿರಣ್ (10) ಲೋಹಿತ್ (12) ಭುವನ್ (8) ಮತ್ತು ಲಕ್ಷ್ಮೀಶ (12) ಇದೀಗ ಪತ್ತೆಯಾಗಿದ್ದಾರೆ. ತಿಳಿದುಬಂದಿದೆ. ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಪ್ರಕರಣ ದಾಖಲಾಗಿದೆ.
ಶಿವಮೊಗ್ಗ : ಶಿವಮೊಗ್ಗದಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು ಕಾಲುವೆಯಲ್ಲಿ ಮೀನು ಹಿಡಿಯಲು ಹೋದ ಐವರು ಮಕ್ಕಳು ನಾಪತ್ತೆ ಆಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕುಮಾರಿ ನಾರಾಯಣಪುರ ಗ್ರಾಮದಲ್ಲಿ ನಡೆದಿದೆ. ಕಾಲುವೆಯಲ್ಲಿ ಮೀನು ಹಿಡಿಯಲು ಹೋದಾಗಲೇ ಒಂದು ದುರಂತ ಸಂಭವಿಸಿದೆ. ಹೌದು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಕುಮಾರಿ ನಾರಾಯಣಪುರ ಗ್ರಾಮದಲ್ಲಿ ಮೀನು ಹಿಡಿಯಲು ಹೋಗಿದ್ದ ಐವರು ಮಕ್ಕಳು ನಾಪತ್ತೆಯಾಗಿದ್ದಾರೆ. ಧನುಷ್ (14 ಕಿರಣ್ (10) ಲೋಹಿತ್ (12) ಭುವನ್ (8) ಮತ್ತು ಲಕ್ಷ್ಮೀಶ (12) ನಾಪತ್ತೆಯಾದ ಮಕ್ಕಳು ಎಂದು ತಿಳಿದುಬಂದಿದೆ.ಭದ್ರಾವತಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಪ್ರಕರಣ ದಾಖಲಾಗಿದ್ದು, ಮಕ್ಕಳಿಗೆ ಅಗ್ನಿಶಾಮಕ ದಳ ಸಿಬ್ಬಂದಿ ಇದೀಗ ಶೋಧ ನಡೆಸುತ್ತಿದ್ದಾರೆ
ದಕ್ಷಿಣಕನ್ನಡ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಗನಿಂದಲೆ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ. 17 ವರ್ಷದ ಕಾಲೇಜು ವಿದ್ಯಾರ್ಥಿನಿ ಮೇಲೆ PSI ಮಗ ಅತ್ಯಾಚಾರ ಎಸಗಿದ್ದಾನೆ. ವಿದ್ಯಾರ್ಥಿನಿ ಮನೆಯಲ್ಲಿ ಒಬ್ಬಳೇ ಇದ್ದಾಗ ಈ ಒಂದು ಕೃತ್ಯ ಎಸಗಿದ್ದಾನೆ. ಮನೆಗೆ ನೀರು ಕೇಳುವ ನೆಪದಲ್ಲಿ ಹೋಗಿ ಇನ್ಸ್ಪೆಕ್ಟರ್ ಮಗ ಅತ್ಯಾಚಾರ ಎಸಗಿದ್ದಾನೆ.ಅಲ್ಲದೇ ಬಾಲಕಿಗೆ ಬೆದರಿಸಿ ಏಳೆಂಟು ಬಾರಿ ನಿರಂತರವಾಗಿ ಅತ್ಯಾಚಾರ ಮಾಡಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಪಿಎಸ್ಐ ಒಬ್ಬರ ಪುತ್ರ ಮಂಜುನಾಥ್ ಎನ್ನುವ ಕಾಮುಕನಿಂದ ಈ ಒಂದು ಕೃತ್ಯ ನಡೆದಿದೆ. ಬಾಲಕಿ ಗರ್ಭಿಣಿಯಾದ ಬಳಿಕ ಈ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಪೋಕ್ಸೋ ಕೇಸ್ ದಾಖಲಿಸಿ, ಇದೀಗ ಪೊಲೀಸರು ಆರೋಪಿ ಮಂಜುನಾಥನನ್ನು ಅರೆಸ್ಟ್ ಮಾಡಿದ್ದಾರೆ.














