Subscribe to Updates
Get the latest creative news from FooBar about art, design and business.
Author: kannadanewsnow05
ಬೆಳಗಾವಿ : ತಮ್ಮ ಮಗ ಮೃಣಾಲ್ಗೆ ಟಿಕೆಟ್ ದೊರೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಕಾರ್ಯಕರ್ತೆಯರ ಬಳಿ ಆತನ ಪರ ಕೆಲಸ ಮಾಡುವಂತೆ ಸಚಿವೆ ಸೂಚಿಸಿದ್ದಾರೆ.ಈ ಮೂಲಕ ನೀತಿ ಸಂಹಿತೆ ಉಲ್ಲಂಘಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರ ಜೊತೆ ಸಭೆ ನಡೆಸಿರುವ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ಆ ಮೂಲಕ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. https://kannadanewsnow.com/kannada/breaking-two-naxals-killed-in-encounter-between-security-forces-and-maoists-in-chhattisgarh/ ಪುತ್ರ ಮೃಣಾಲ್ಗೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ದೊರೆಯುವುದು ಬಹುತೇಕ ಖಚಿತವಾಗುತ್ತಿದ್ದಂತೆಯೇ ಸಚಿವೆ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರ ಜತೆ ಸಭೆ ನಡೆಸಿದ್ದಾರೆ. ಮಗ ಮೃಣಾಲ್ ಪರ ಕೆಲಸ ಮಾಡುವಂತೆ ಮತ್ತು ಮತ ಹಾಕಿಸುವಂತೆ ಸೂಚನೆ ನೀಡಿದ್ದಾರೆ. ಈ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. https://kannadanewsnow.com/kannada/we-have-made-jds-prime-minister-chief-minister-dk-shivakumar-suresh/ ಲಕ್ಷ್ಮೀ ಹೆಬ್ಬಾಳ್ಕರ್ ಸಭೆ ನಡೆಸುತ್ತಿದ್ದ ಕಚೇರಿಯ ಮೇಲೆ ಚುನಾವಣಾಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್ ಹಠಾತ್ ದಾಳಿ ನಡೆಸಿದೆ. ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ, ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿ ಸಭೆ ಮಾಡುತ್ತಿರುವುದು ಗಮನಕ್ಕೆ…
ಛತ್ತೀಸ್‌ಗಢ : ಪುರಂಗೆಲ್-ಗಾಂಪುರ್ ಅರಣ್ಯದಲ್ಲಿ ದಾಂತೇವಾಡ ಬಿಜಾಪುರ ಗಡಿಯ ಬಳಿ ಪೊಲೀಸರು ಮತ್ತು ಮಾವೋವಾದಿಗಳ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲೀಯರು ಸಾವನ್ನಪ್ಪಿದ್ದಾರೆ. ಕಿರಾಂಡುಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕಿರಂಡುಲ್ ಪೊಲೀಸ್ ಠಾಣೆ ವ್ಯಾಪ್ತಿಯ ಪುರಂಗೆಲ್-ಗಾಂಪುರ ಅರಣ್ಯದಲ್ಲಿ ದಾಂತೇವಾಡ ಬಿಜಾಪುರ ಗಡಿಯಲ್ಲಿ ಪೊಲೀಸರು ಮತ್ತು ಮಾವೋವಾದಿಗಳ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲೀಯರು ಹತರಾಗಿದ್ದಾರೆ. ಪೊಲೀಸರು ಎರಡು ಶಸ್ತ್ರಾಸ್ತ್ರಗಳು ಮತ್ತು ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಇಂದಿನ ಎನ್‌ಕೌಂಟರ್ ನಲ್ಲಿ ದಾಂತೇವಾಡ ಜಿಲ್ಲಾ ಕೇಂದ್ರದಿಂದ 40 ಕಿಮೀ ದೂರದಲ್ಲಿರುವ ಕಿರಾಂಡುಲ್ ಪೊಲೀಸ್ ಠಾಣೆ ವ್ಯಾಪ್ತಿಯ ಪುರಂಗೆಲ್ ಗಾಂಪುರ್ ಅರಣ್ಯ ಪ್ರದೇಶದಲ್ಲಿ ನಡೆದಿದೆ. “ಇಬ್ಬರು ಮಾವೋವಾದಿಗಳ ಶವಗಳು, ಒಬ್ಬ ಪುರುಷ ಮತ್ತು ಮಹಿಳೆಯನ್ನು ವಶಪಡಿಸಿಕೊಳ್ಳಲಾಗಿದೆ. ಎರಡು ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರನ್ನು ಗುರುತಿಸುವ ಪ್ರಯತ್ನ ಮುಂದುವರಿದಿದೆ” ಎಂದು ದಾಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ರೈ ತಿಳಿಸಿದ್ದಾರೆ.
ಕೊಪ್ಪಳ : ತಮ್ಮ ಮಗನಿಗೆ ಲೋಕಸಭಾ ಟಿಕೆಟ್ ಸಿಕ್ಕಿಲ್ಲವೆಂದು ಈಗಾಗಲೇ ಬಿಜೆಪಿಯ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಬಂಡಾಯವೇದಿದ್ದು ಶಿವಮೊಗ್ಗ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ಇದೀಗ ಬಿಜೆಪಿ ಮತ್ತೊಬ್ಬ ನಾಯಕ ಬಂಡಾಯವೇದಿದ್ದು ಕೊಪ್ಪಳದಿಂದ ಸಂಸದ ಕರಡಿ ಸಂಗಣ್ಣ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ. https://kannadanewsnow.com/kannada/gps-based-toll-collection-to-replace-fastag-soon-heres-the-details/ ಹೌದು ಕೆಎಸ್ ಈಶ್ವರಪ್ಪ ಬಳಿಕ ಮತ್ತೊಬ್ಬ ಬಿಜೆಪಿ ನಾಯಕ ಬಂಡಾಯವೆದ್ದಿದ್ದು, ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಸಂಗಣ್ಣ ಕರಡಿ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. https://kannadanewsnow.com/kannada/govt-fixes-age-limit-for-pregnancy-through-ivf-method/ ಇದೆ ವಿಚಾರವಾಗಿ ನಾಳೆ ಕಾರ್ಯಕರ್ತರು ಹಾಗೂ ಬೆಂಬಲಿಗರ ಜೊತೆಗೆ ಸಂಗಣ್ಣ ಕರಡಿ ಸಭೆಯನ್ನು ಕರೆದಿದ್ದಾರೆ ಎನ್ನಲಾಗಿದೆ. ಸಭೆಯಲ್ಲಿ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಮುಂಬೈ : ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿದ್ದ ಮಾಜಿ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖಡೆ, ನಟಿ ರಾಖಿ ಸಾವಂತ್ ಹಾಗೂ ವಕೀಲ ಅಲಿ ಖಾಸಿಫ್ ಖಾನ್ ವಿರುದ್ಧ 11 ಲಕ್ಷದ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ ಎಂದು ತಿಳಿದುಬಂದಿದೆ. https://kannadanewsnow.com/kannada/pm-modi-should-be-shot-in-the-head-rjd-leader-awadhesh-singh-yadav-watch-video/ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಮಾಜಿ ಅಧಿಕಾರಿ ಸಮೀರ್ ವಾಂಖೆಡೆ ಇತ್ತೀಚೆಗೆ ಬಿಗ್ ಬಾಸ್ 14 ರ ಸ್ಪರ್ಧಿ ರಾಖಿ ಸಾವಂತ್ ಮತ್ತು ಡ್ರಗ್ಸ್ ಪ್ರಕರಣದಲ್ಲಿ ರೂಪದರ್ಶಿ ಮುನ್‌ಮುನ್ ಧಮೇಚಾ ಪರವಾಗಿರುವ ವಕೀಲ ಅಲಿ ಕಾಶಿಫ್ ಖಾನ್ ವಿರುದ್ಧ 11 ಲಕ್ಷದ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಈ ಪ್ರಕರಣವು ಭಾರತದ ಮುಂಬೈನಲ್ಲಿರುವ ಮಲಾಡ್‌ನ ದಿಂಡೋಶಿ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ದಾಖಲಾಗಿದೆ. https://kannadanewsnow.com/kannada/zomato-withdraws-move-to-introduce-green-uniforms-for-vegetarians/ ಸಮೀರ್ ವಾಂಖೆಡೆ ಪ್ರಚಾರ ಪ್ರಿಯ, ಇದೇ ಕಾರಣಕ್ಕೆ ಆತ ಕೇವಲ ಸೆಲೆಬ್ರಿಟಿಗಳನ್ನು ಗುರಿ ಮಾಡಿಕೊಂಡು ಅವರಿಗೆ ಹಿಂಸೆ ನೀಡಿದ್ದ. ಆತ ಭ್ರಷ್ಟ, ಸೆಕ್ಷನ್ 29 ಅನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ’ ಎಂಬಿತ್ಯಾದಿ ಆರೋಪಗಳನ್ನು…
ತುಮಕೂರು : ಲೋಕಸಭೆ ಚುನಾವಣೆ ಟಿಕೆಟ್ ತಪ್ಪಿರುವುದರಿಂದ ತೀವ್ರ ಅಸಮಾಧಾನಗೊಂಡಿರುವ ಬಿಜೆಪಿ ನಾಯಕ ಜೆಸಿ ಮಾಧುಸ್ವಾಮಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಯಾರೋ ನೋಡಿ ಬಂದ ಹೆಣ್ಣನ್ನು ನಾನು ಮದುವೆ ಆಗಲ್ಲ ಎಂದು ಮಾಧುಸ್ವಾಮಿ ಮಾರ್ಮಿಕವಾಗಿ ಹೇಳಿದರು. https://kannadanewsnow.com/kannada/indias-start-up-revolution-led-by-youth-pm-modi/ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಜೆಸಿ ಪುರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ನಾನು ಎರಡು ಮೂರು ವಿಷಯವನ್ನು ನಿಮ್ಮ ಬಳಿ ಹೇಳಿಕೊಳ್ಳುತ್ತಿದ್ದೇನೆ. ನಾನು ಕಾಂಗ್ರೆಸ್ ಸೇರಲಿದ್ದೇನೆ ಎಂದು ಎಲ್ಲೋ ಪತ್ರಿಕೆಯಲ್ಲಿ ವರದಿ ಮಾಡಿದ್ದಾರೆ. ಕಾಂಗ್ರೆಸ್ ನ ಬಿ ಫಾರಂ ಮಾಧುಸ್ವಾಮಿಗೆ ಸಿಗುತ್ತೆ ಎಂದು ಉಲ್ಲೇಖಿಸಿದ್ದಾರೆ. ಬಿ ಫಾರಂ ಬದಲಾಯಿಸಿ ಕಾಂಗ್ರೆಸ್ ಪಕ್ಷದವರು ಕರೆದರೂ ಚುನಾವಣೆಯಲ್ಲಿ ಸ್ಪರ್ಧಿಸಲಾರೆ. ಬಿಜೆಪಿಯವರು ಕರೆದರೂ ಚುನಾವಣೆಗೆ ನಿಲ್ಲುವುದಿಲ್ಲ ಎಂದರು. https://kannadanewsnow.com/kannada/breaking-four-killed-13-injured-as-tempo-falls-into-gorge-in-kerala/ ತುಮಕೂರಿನಲ್ಲಿ ಬೆಳೆದವನಾಗಿ ಹೊರಗಿನವರಿಗೆ ಟಿಕೆಟ್ ಕೊಡುವುದಕ್ಕೆ ನನ್ನ ಒಪ್ಪಿಗೆ ಇಲ್ಲ. ನನಗೆ ಕೊಡಬೇಕು ಅಂತಲ್ಲ, ಜಿಲ್ಲೆಯ ಯಾರಿಗೆ ಕೊಟ್ಟರೂ ತೊಂದರೆ ಇರಲಿಲ್ಲ. ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ಮೇಲೆ ನನಗೆ ಯಾವುದೇ…
ಇಡುಕ್ಕಿ: ಕೇರಳದ ಇಡುಕ್ಕಿಯ ಮಂಕುಲಂನ ಅನಕುಲಂ ಬಳಿ ಮಂಗಳವಾರ ಪ್ರವಾಸಿ ವಾಹನ ಅಪಘಾತಕ್ಕೀಡಾಗಿ ನಾಲ್ವರು ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡಿದ್ದಾರೆ. ಟೆಂಪೋ ಟ್ರಾವೆಲರ್ ಕಮರಿಗೆ ಉರುಳಿ ಬಿದ್ದು ದುರಂತ ಸಂಭವಿಸಿದೆ. ಮೃತರು ತಮಿಳುನಾಡಿನ ನಿವಾಸಿಗಳಾದ ಪಿಕೆ ಸೇತು (34), ಅಭಿನವ್, ಗುಣಶೇಖರನ್ (70), ಮತ್ತು ಥಾನ್ವಿಕ್ (1) ಎಂದು ಹೇಳಲಾಗುತ್ತಿದೆ.ಪೇಮಾರಂ ತಿರುವಿನಲ್ಲಿ ಈ ದುರಂತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ವಾಹನ ಕ್ರ್ಯಾಶ್ ಬ್ಯಾರಿಯರ್ ಗೆ ಡಿಕ್ಕಿ ಹೊಡೆದಿದೆ. ವಾಹನ ಕಮರಿಗೆ ಬಿದ್ದಿದೆ. ಎಲ್ಲಾ ಗಾಯಾಳುಗಳನ್ನು ತೊಡುಪುಳ ಮತ್ತು ಆದಿಮಾಲಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವರದಿಗಳ ಪ್ರಕಾರ ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ವಾಹನದೊಳಗೆ ಹದಿನಾಲ್ಕು ಮಂದಿ ಇದ್ದರು ಎನ್ನಲಾಗಿದೆ.
ಬೆಂಗಳೂರು: ಕರ್ನಾಟಕ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಬುಧವಾರ ಹೇಳಿದ್ದಾರೆ.ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು ಸಿದ್ಧರಾಮಯ್ಯ ವಿರುದ್ಧ ಗುಡುಗಿದ್ದಾರೆ. https://kannadanewsnow.com/kannada/lok-sabha-elections-2024-for-the-first-time-employees-of-11-departments-including-journalists-will-get-postal-ballots/ ಬಿ.ಕೆ. ಹರಿಪ್ರಸಾದ್ ಅವರು ತಮ್ಮ ಮೇಲೆ ಪದೇ ಪದೇ ವಾಗ್ದಾಳಿ ನಡೆಸಿದರೂ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳಲಾಗದಷ್ಟು, ಕನಿಷ್ಠ ಪಕ್ಷ ಪ್ರತ್ಯುತ್ತರ ಕೂಡ ನೀಡಲಾಗದಷ್ಟು ಅಸಹಾಯಕರ ತಾವು ಎಂದು ಅಶೋಕ್ ಹೇಳಿದ್ದಾರೆಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಣ ಅವಕಾಶ ಸಿಕ್ಕಾಗಲೆಲ್ಲಾ ಬಂಡಾಯದ ಬಾವುಟ ಹಾರಿಸಿ ತಮ್ಮ ಕುರ್ಚಿಯ expiry date ಮುಗಿಯುತ್ತದೆ ಎಂದು ಕಾಲೆಳೆಯುತ್ತಿದ್ದರೂ ಏನೂ ಮಾಡಲಾಗದ ಅಸಹಾಯಕ ಸ್ಥಿತಿ ನಿಮ್ಮದು ಎಂದಿದ್ದಾರೆ. https://kannadanewsnow.com/kannada/big-relief-for-national-common-mobility-card-users-no-kyc-required-up-to-rs-3000/ ಪ್ರಧಾನಿ ಮೋದಿ ಅವರೇ ಮತ್ತೊಮ್ಮೆ ಮುಂದಿನ ಐದು ವರ್ಷ ಈ ದೇಶದ ಸ್ಟ್ರಾಂಗ್ ಪ್ರಧಾನಿ ಆಗಿ ಮುಂದುವರೆಯುತ್ತಾರೆ ಎಂದು ವಿಶ್ವಾಸದಿಂದ ಹೇಳುವ ಧೈರ್ಯ ನನಗಿದೆ.ನಿಮಗೆ ತಾಕತ್ತಿದ್ದರೆ, ನೀವು ಹೇಳಿಕೊಳ್ಳುವಂತೆ ತಾವು ಸ್ಟ್ರಾಂಗ್ ಮುಖ್ಯಮಂತ್ರಿಯೇ ಆಗಿದ್ದರೆ, “ನಾನೇ ಐದು ವರ್ಷ ಮುಖ್ಯಮಂತ್ರಿ” ಎಂದು…
ನವದೆಹಲಿ : ಬಿಜೆಪಿ ಹಲವು ಹಿರಿಯ ನಾಯಕರಿಗೆ ಟಿಕೆಟ್ ನೀಡದಕ್ಕೆ ಈಗಾಗಲೇ ಕೆಎಸ್ ಈಶ್ವರಪ್ಪ ಸೇರಿದಂತೆ ಹಲವರು ಅಸಮಾಧಾನಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಂತಹ ಅತೃಪ್ತ ನಾಯಕರನ್ನು ಸೆಳೆಯುತ್ತಿರುವ ವಿಷಯವಾಗಿ ನವದೆಹಲಿಯಲ್ಲಿ ಬಿಎಸ್ ಯಡಿಯೂರಪ್ಪ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಈ ತರಹ ಮಾಡುತ್ತಿರುವುದು ಕಾಂಗ್ರೆಸ್ ಗೆ ನಾಚಿಕೆಗೆಡು ಆಗಬೇಕು ಎಂದು ಕಿಡಿ ಕರೆದಿದ್ದಾರೆ. https://kannadanewsnow.com/kannada/names-of-candidates-for-remaining-constituencies-to-be-announced-on-march-22-bs-yediyurappa/ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಕಾಂಗ್ರೆಸ್ ನವರಿಗೆ ಸರಿಯಾದ ಅಭ್ಯರ್ಥಿಗಳು ಎಲ್ಲಿಯೂ ಸಿಗುತ್ತಿಲ್ಲ.ಹಾಗಾಗಿ ಬಿಜೆಪಿಯಲ್ಲಿ ಯಾರು ಅತೃಪ್ತರಿದ್ದಾರೆ ಅವರನ್ನು ಸೆಳೆಯಲು ವಿಶ್ವಪ್ರಯತ್ನ ಮಾಡುತ್ತಿರುವುದು ಒಂದು ರೀತಿಯ ನಾಚಿಕೆಗೇಡಿನ ಸಂಗತಿಯಾಗಿದೆ.ಅದು ಕಾಂಗ್ರೆಸ್ ಪಕ್ಷಕ್ಕೆ ತನ್ನದೇ ಆದ ಅಭ್ಯರ್ಥಿಗಳು ಇಲ್ಲ ಎಂದಾದರೆ ಚುನಾವಣೆ ಫಲಿತಾಂಶ ಹೇಗಿರುತ್ತೆ ಎಂದು ಯೋಚಿಸಬೇಕಾಗಿದೆ ಎಂದರು. https://kannadanewsnow.com/kannada/medanta-presidents-deep-fake-video-on-weight-loss-drug-goes-viral-case-registered/ ಅಮಿತ್ ಷಾ, ಜೆಪಿ ನಡ್ಡ ಜೊತೆ ಐದು ಕ್ಷೇತ್ರಗಳ ಬಗ್ಗೆ ಚರ್ಚೆಯಾಗಿದೆ.ಮಾರ್ಚ್ 22 ರಂದು ಅಧಿಕೃತವಾಗಿ ಅಭ್ಯರ್ಥಿಗಳ ಘೋಷಣೆ ಆಗುತ್ತೆ ಎಂದು ಯಡಿಯೂರಪ್ಪ ತಿಳಿಸಿದರು. ಜೆಡಿಎಸ್ ಬಿಜೆಪಿ ಒಟ್ಟಾಗಿ 28 ಕ್ಷೇತ್ರವನ್ನು ಗೆಲ್ಲುತ್ತೇವೆ ರಾಜ್ಯದ ಉದ್ದಗಲಕ್ಕೂ…
ನವದೆಹಲಿ : ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಉಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಮಾರ್ಚ್ 22 ರಂದು ಘೋಷಣೆ ಮಾಡಲಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದರು. ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂತಿಮವಾಗಿ ಪ್ರಧಾನಿ ಮೋದಿ ಅವರ ಜೊತೆ ಸಮಾಲೋಚನೆ ಮಾಡಿ 22ನೇ ತಾರೀಕು ಯಾರು ಸ್ಪರ್ಧೆ ಮಾಡಬೇಕೆನ್ನುವುದು ಘೋಷಣೆ ಮಾಡಲಿದ್ದಾರೆ. ಬಹಳ ಮುಖ್ಯವಾಗಿ ಬಿಜೆಪಿ ಜೆಡಿಎಸ್ ಹೊಂದಾಣಿಕೆ ಆಗುತ್ತಿರುವುದರಿಂದ ಈ ಬಾರಿ ನಾವು ಅಂದುಕೊಂಡಂತೆ 28ಕ್ಕೆ 28 ಲೋಕಸಭಾ ಕ್ಷೇತ್ರ ಬಿಜೆಪಿ ಜೆಡಿಎಸ್ ಗೆ ಗೆಲುವು ಸಾಧ್ಯವಾಗುತ್ತದೆ. ದೇವೇಗೌಡರು ಸಹ ಪ್ರಧಾನಿ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ.ಅಮಿತ್ ಶಾ ಅವರೊಂದಿಗೆ ಸಂಪರ್ಕದಲ್ಲಿದ್ದಾರೆ. ಇದೆಲ್ಲರ ಪರಿಣಾಮ ನಮ್ಮ ನಿರೀಕ್ಷೆ ಮೀರಿ ಒಳ್ಳೆಯ ಫಲಿತಾಂಶ ಎಂಬ ವಿಶ್ವಾಸ ನನಗಿದೆ. ಎರಡು ಮೂರು ದಿವಸದಲ್ಲಿ 28 ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ಮೇಲೆ ನಾವೆಲ್ಲ ರಾಜ್ಯದಲ್ಲಿ ಪ್ರವಾಸ ಮಾಡುವುದಕ್ಕೆ ಹೊರಡುತ್ತೇವೆ.ಜನ ಇಂದು ಮೋದಿ ಅವರ ಪರ ಬಿಜೆಪಿಯವರ ಪರ ಇರುವುದರಿಂದ ಇತ್ತೀಚಿನ ನಡೆದ ಎಲ್ಲಾ ಚುನಾವಣೆಗಳಿಗಿಂತ…
ನವದೆಹಲಿ : ಲೋಕಸಭಾ ಚುನಾವಣೆಯ ಬಳಿಕ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂಬ ಈಶ್ವರಪ್ಪ ಹೇಳಿಕೆಗೆ ಬಿಎಸ್ ಯಡಿಯೂರಪ್ಪ ಆಕ್ರೋಶ ಹೊರಹಾಕಿದ್ದು ಇಂತಹ ಬೇಜಾಬ್ದಾರಿತನ ಹೇಳಿಕೆಗೆ ನಾನು ಉತ್ತರ ನೀಡುವುದಿಲ್ಲ ಎಂದು ತಿಳಿಸಿದರು. ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ರೀತಿಯ ಬೇಜವಾಬ್ದಾರಿ ಹೇಳಿಕೆಗೆ ನಾನು ಉತ್ತರ ಕೊಡುವುದಿಲ್ಲ ಜನ ಉತ್ತರ ಕೊಡುತ್ತಾರೆ.ವಿಜಯೇಂದ್ರ ರಾಜ್ಯ ಅಧ್ಯಕ್ಷ ಆದ ಮೇಲೆ ಪಕ್ಷ ಯಾವ ರೀತಿ ಬೆಳೆಯುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿದ್ದರೂವಂತಹ ಸಂಗತಿಯಾಗಿದೆ. ಈಶ್ವರಪ್ಪನವರು ಅವರ ಮಗನಿಗೆ ಟಿಕೆಟ್ ಸಿಗಲಿಲ್ಲ ಎಂದು ಒಂದೇ ಕಾರಣಕ್ಕೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಇದು ಸರಿಯಲ್ಲ ಯಾವುದೇ ತೀರ್ಮಾನ ತೆಗೆದುಕೊಳ್ಳುವದಿದ್ದರೂ ಚುನಾವಣೆ ಸಮಿತಿಯಲ್ಲಿ ತೀರ್ಮಾನ ತೆಗೆದುಕೊಳ್ಳಲಗುತ್ತೆ. ಯಡಿಯೂರಪ್ಪ ವೈಯಕ್ತಿಕವಾಗಿ ಯಾವುದೇ ತೀರ್ಮಾನ ತೆಗೆದುಕೊಳ್ಳುವುದಿಲ್ಲ ಎಂದರು. ಅನಗತ್ಯವಾಗಿ ಯಡಿಯೂರಪ್ಪ ಅವರನ್ನು ಸೀಟು ಕೊಡಿಸಲ್ಲ ಎಂದು ಹೇಳುತ್ತಿದ್ದಾರೆ ಬಹುಶ ಎರಡು ಮೂರು ದಿನದಲ್ಲಿ ಅವರು ಅರ್ಥ ಮಾಡಿಕೊಂಡು ಸರಿ ಹೋಗುತ್ತಾರೆ ಎಂದು ಭಾವಿಸುತ್ತೇನೆ ಎಂದು ಅವರು…