Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಬೇಕರಿ ಸಿಬ್ಬಂದಿಯ ಮೇಲೆ ಪುಂಡರು ಭೀಕರವಾಗಿ ಹಲ್ಲೆ ನಡೆಸಿ, ಬೇಕರಿಯಲ್ಲಿನ ಹಲವು ವಸ್ತುಗಳನ್ನು ದೌರ್ಜನ್ಯ ಬರೆದಿದ್ದರು ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಸಂಜಯ್ ನಗರ ಠಾಣೆ ಪೋಲೀಸರು ಇಬ್ಬರು ಪುಂಡರನ್ನು ಅರೆಸ್ಟ್ ಮಾಡಿದ್ದಾರೆ. ಹೌದು ಇಬ್ಬರು ಆರೋಪಿಗಳನ್ನು ಬಂಧಿಸಿದ ಸಂಜಯ್ ನಗರ ಠಾಣೆಯ ಪೊಲೀಸರು ಸಿಗರೇಟ್ ಕೊಡಲು ವಿಳಂಬ ಮಾಡಿದ್ದಕ್ಕೆ ಬೇಕರಿ ಸಿಬ್ಬಂದಿಯ ಮೇಲೆ ಆರೋಪಿಗಳು ಹಲ್ಲೆ ಮಾಡಿದ್ದರು. ಹಲ್ಲೆ ಮಾಡಿದ ಆರೋಪಿಗಳನ್ನು ವಿಶ್ವಾಸ ಹಾಗೂ ಗುರುರಾಜ್ ಎಂದು ಗುರುತಿಸಲಾಗಿದ್ದು, ಇದೀಗ ಸಂಜಯ್ ನಗರ ಠಾಣೆಯ ಪೊಲೀಸರು ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಕಳೆದ ಜನವರಿ 8 ರಾತ್ರಿ ಸಂಜಯ್ ನಗರದ ಭೂಪಸಂದ್ರದಲ್ಲಿ ಈ ಒಂದು ಘಟನೆ ನಡೆದಿತ್ತು. ಸುಮ್ಮನೆ ಕಿರಿಕ್ ಮಾಡಿ ಬೇಕರಿ ಒಳಗೆ ನುಗ್ಗಿ ಯುವಕನ ಮೇಲೆ ಇಬ್ಬರು ಹಲ್ಲೆ ಮಾಡಿದ್ದಾರೆ. ಜ್ಯೂಸ್ ಬಾಟಲ್ ನಿಂದ ಬೇಕರಿಯವರ ಮೇಲೆ ಹಲ್ಲೆ ಗೈದಿದ್ದ ಪುಂಡರು, ಈ ಕುರಿತು ಸಂಜಯನಗರ…
ಬೆಂಗಳೂರು : ಚಿಕ್ಕಮಂಗಳೂರು ಭಾಗದ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿದ್ದ 6 ಜನ ನಕ್ಸಲರು ಈಗಾಗಲೇ ಸರ್ಕಾರದ ಮುಂದೆ ಶರಣಾಗಿದ್ದು ಅವರನ್ನು ಜನವರಿ 30ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ನಿನ್ನೆ ಕೋರ್ಟ್ ಆದೇಶ ಹೊರಡಿಸಿತ್ತು.ಆದರೆ ಇನ್ನೋರ್ವ ನಕ್ಸಲ್ ತಲೆಮರಿಸಿಕೊಂಡಿದ್ದು, ಆತನನ್ನು ಆದಷ್ಟು ಬೇಗ ಪತ್ತೆ ಹಚ್ಚುತ್ತೇವೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮತ್ತೋರ್ವ ನಕ್ಸಲ್ ತಲೆಮೆರೆಸಿಕೊಂಡಿರುವ ವಿಚಾರವಾಗಿ ಶರಣಾಗತಿಯಾದವರು ಆತನನ್ನು ಹೊರ ಹಾಕಿದ್ದರು ಎಂಬ ಮಾಹಿತಿ ಇದೆ.ಅದಕ್ಕೆ ಕಾರಣ ಏನು ಅಂತ ಗೊತ್ತಿಲ್ಲ ಆದಷ್ಟು ಬೇಗ ಅವನನ್ನು ಹುಡುಕುತ್ತೇವೆ.ಚಿಕ್ಕಮಗಳೂರು ಭಾಗದಲ್ಲಿಯೇ ಇದ್ದಾನೆ ಎನ್ನುವ ಮಾಹಿತಿ ಇದೆ ಎಂದರು. ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ 6 ಜನ ಇದ್ದಾರೆ ಅನ್ನೋದು ಇತ್ತು. ಬೇರೆ ರಾಜ್ಯದಿಂದಲೂ ಬಂದರೆ ಅದರ ಮೇಲೆ ನಿಗಾ ಇಡಲಾಗುತ್ತದೆ. ಓಡಿಸ್ಸಾ ಕೇರಳದಿಂದ ಬರುವ ಸಾಧ್ಯತೆ ಇದೆ. ನಕ್ಸಲ್ ನಾಯಕ ವಿಕ್ರಂ ಗೌಡ ಕುಟುಂಬ ಪರಿಹಾರ ನೀಡುವ ವಿಚಾರವಾಗಿ ಈ ಕುರಿತು ಪರಿಶೀಲನೆ ನಡೆಸುತ್ತೇವೆ. ಆ…
ಚಾಮರಾಜನಗರ : ಶಬರಿಮಲೆಗೆ ತೆರಳಿ ವಾಪಸ್ ಆಗುತ್ತಿದ್ದ ವೇಳೆ, ಭೀಕರವಾದಂತಹ ಅಪಘಾತ ಸಂಭವಿಸಿದ್ದು, ಈ ಒಂದು ಅಪಘಾತದಲ್ಲಿ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಮೂಲದ ಇಬ್ಬರು ಅಯ್ಯಪ್ಪ ಭಕ್ತರು ಸಾವನ್ನಪ್ಪಿದ್ದು, ಉಳಿದ ಮೂವರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಕೊಯಮತ್ತೂರಿನಲ್ಲಿ ನಡೆದಿದೆ. ಶಬರಿ ಮಲೆಯಿಂದ ಕೊಳ್ಳೇಗಾಲಕ್ಕೆ ವಾಪಸ್ ಬರುತ್ತಿದ್ದಾಗ ಈ ಒಂದು ಅಪಘಾತ ಸಂಭವಿಸಿದೆ.ಅಯ್ಯಪ್ಪ ಭಕ್ತರಾದ ನಾಗಣ್ಣ (66) ವೆಂಕಟದ್ರಿ (70) ಸಾವನ್ನಪ್ಪಿದ್ದರೆ, ಘಟನೆಯಲ್ಲಿ ಮಹೇಶ್ ಕುಮಾರ್, ಸ್ವಾಮಿ ಹಾಗೂ ದೊರೆಸ್ವಾಮಿಗೆ ಗಂಭೀರವಾದ ಗಾಯಗಳಾಗಿದ್ದು ಕೊಯಮತ್ತೂರು ಆಸ್ಪತ್ರೆಯಲ್ಲಿ ಮೂವರಿಗೂ ಚಿಕಿತ್ಸೆ ಮುಂದುವರೆದಿದೆ.
“ವೈಕುಂಠ” ಎಂದರೆ ವಿಷ್ಣುಲೋಕ. ವಿಷ್ಣುವಿಗೆ ವೈಕುಂಠ ಎಂಬ ಹೆಸರಿದೆ ಎಂದು ತಿಳಿದುಬರುತ್ತದೆ, ಕಾರಣ ಒಂದು ಮನ್ವಂತರದಲ್ಲಿ ವಿಷ್ಣುವು ವಿಕುಂಠೆಯೆಂಬ “ಸ್ತ್ರೀ”ಯಲ್ಲಿ ಅವತರಿಸಿದನು, ಇದರಿಂದ ನಾರಾಯಣನಿಗೆ ವೈಕುಂಠನೆಂಬ ಹೆಸರು ಬಂತು ಎಂದು ಮಹಾಭಾರತದ ಶಾಂತಿಪರ್ವದಿಂದ ತಿಳಿದುಬರುತ್ತದೆ. ಇನ್ನು “ಏಕಾದಶಿ” ಎಂದರೆ ಚಾಂದ್ರಮಾನದ ಹನ್ನೊಂದನೆಯ ತಿಥಿ ಎಂದೂ ಸ್ಥೂಲವಾಗಿ ಹೇಳಬಹುದು. “ಏಕಾದಶಿ” ಒಂದು ವ್ರತ.ಏಕಾದಶಿ ದಿನದಂದು ಉಪವಾಸವಿದ್ದು, ದ್ವಾದಶಿಯ ದಿನ, ಆ ತಿಥಿಯಲ್ಲಿಯೇ ನಿತ್ಯಕರ್ಮ ಮುಗಿಸಿ ಭೋಜನ ಮಾಡಬೇಕು.ದಶಮಿಯಂದು ಅಂದರೆ ಏಕಾದಶಿಯ ಹಿಂದಿನ ದಿನ ಒಂದು ಹೊತ್ತು ಮಧ್ಯಾಹ್ನ ಊಟಮಾಡಿ, ಭೋಗಗಳನ್ನು ತ್ಯಜಿಸಿ, ಮರುದಿನ ಏಕಾದಶಿ ಉಪವಾಸಮಾಡಬೇಕು. ಇಲ್ಲಿ ಉಪವಾಸ ಎಂದರೆ ಆಹಾರ ಸೇವಿಸದಿರುವುದು ಎಂಬುದೊಂದು ಅರ್ಥವಾದರೆ ಇನ್ನೊಂದು ಅರ್ಥ ಭಗವಂತನ ಸಮೀಪದಲ್ಲಿರುವುದು.ಅಂದರೆ ಶುಚಿಯಾಗಿ ಎಡಬಿಡದೆ ಭಗವಂತನ ಸ್ಮರಣೆಮಾಡುತ್ತಿರುವುದು ಎಂದರ್ಥ.ಇದರಿಂದ ಏಕಕಾಲಕ್ಕೆ ದೇಹಕ್ಕೆ ವಿಶ್ರಾಂತಿ, ಮನಸ್ಸಿಗೆ ಭಗವನ್ನಾಮ ಸ್ಮರಣೆಯಿಂದ ಶಾಂತಿ ದೊರೆಯುತ್ತದೆ. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ…
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೋಷಾರೋಪ ನಿಗದಿ ಪಡಿಸುವ ಹಿನ್ನೆಲೆ ಇಂದು ಬೆಂಗಳೂರಿನ 57ನೇ CCH ನ್ಯಾಯಾಲಯಕ್ಕೆ ನಟ ದರ್ಶನ್, ಪವಿತ್ರಗೌಡ ಸೇರಿದಂತೆ ಕೊಲೆಯ ಪ್ರಕರಣದ ಎಲ್ಲ 17 ಆರೋಪಿಗಳು ಹಾಜರಾದರು. ಈ ವೇಳೆ ನ್ಯಾಯಾಧೀಶರು ಫೆಬ್ರವರಿ 25ಕ್ಕೆ ವಿಚಾರಣೆ ಮುಂದೂಡಿ, ಆದೇಶ ಹೊರಡಿಸಿದರು. ಬಳಿಕ ರೇಣುಕಾಸ್ವಾಮಿ ಕೊಲೆ ಪ್ರಕರಣದ A1 ಆರೋಪಿ ಆಗಿರುವಂತಹ ಪವಿತ್ರ ಗೌಡ, ದೇವಸ್ಥಾನಕ್ಕೆ ಎಂದು ತೆರಳಲು ಪಕ್ಕದ ರಾಜ್ಯಕ್ಕೆ ತೆರಳಲು ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಒಂದು ತಿಂಗಳ ಕಾಲ ಹೊರ ರಾಜ್ಯಕ್ಕೆ ತೆರಳಲು ಅನುಮತಿ ನೀಡಿ ಎಂದು ಪವಿತ್ರ ಗೌಡ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಡಿಸೆಂಬರ್ ನಲ್ಲಿ ನಟ ದರ್ಶನ್ ಪವಿತ್ರ ಗೌಡ ಸೇರಿದಂತೆ ಕೊಲೆ ಆರೋಪಿಗಳಾದಂತಹ ಎಲ್ಲರಿಗೂ ಕೂಡ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಈ ವೇಳೆ ಬೆಂಗಳೂರು ಬಿಟ್ಟು ಎಲ್ಲಿಯೂ ತೆರಳದಂತೆ ಷರತ್ತು ವಿಧಿಸಿ ಜಾಮೀನು ನೀಡಿತ್ತು. ಆದರೆ ಇದೀಗ ಪವಿತ್ರಗೌಡ…
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೋಷಾರೋಪ ನಿಗದಿ ಪಡಿಸುವ ಹಿನ್ನೆಲೆ ಇಂದು ಬೆಂಗಳೂರಿನ 57ನೇ CCH ನ್ಯಾಯಾಲಯಕ್ಕೆ ನಟ ದರ್ಶನ್, ಪವಿತ್ರಗೌಡ ಸೇರಿದಂತೆ ಕೊಲೆಯ ಪ್ರಕರಣದ ಎಲ್ಲ 17 ಆರೋಪಿಗಳು ಹಾಜರಾದರು. ಈ ವೇಳೆ ನ್ಯಾಯಾಧೀಶರು ಫೆಬ್ರವರಿ 25ಕ್ಕೆ ವಿಚಾರಣೆ ಮುಂದೂಡಿ, ಆದೇಶ ಹೊರಡಿಸಿದರು. ಹೌದು ಸೇಷನ್ಸ್ ಕೋರ್ಟ್ ನಲ್ಲಿ ಇಂದು ದೋಷಾರೋಪ ನಿಗದಿ ಮಾಡುವ ಹಿನ್ನೆಲೆಯಲ್ಲಿ ನಟ ದರ್ಶನ್ ಮತ್ತು ಪವಿತ್ರ ಗೌಡ ಸೇರಿದಂತೆ ಕೊಲೆಯ ಪ್ರಕರಣದ ಉಳಿದ ಆರೋಪಿಗಳಾದಂತಹ ಪ್ರದೋಷ್, ನಾಗರಾಜ್, ಕೆಶವಮೂರ್ತಿ, ನಿಖಿಲ್ ನಾಯಕ್ ಸೇರಿದಂತೆ ಎಲ್ಲ 17 ಆರೋಪಿಗಳು ಕೂಡ ಇದೀಗ ಕೋರ್ಟಿಗೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಕೋರ್ಟ್ ಹಾಲ್ ಗೆ ನ್ಯಾಯಾಧೀಶರು ಆಗಮಿಸಿ ಫೆಬ್ರವರಿ 25ಕ್ಕೆ ವಿಚಾರಣೆ ಮುಂದೂಡಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೋಷಾರೋಪ ನಿಗದಿ ಪಡಿಸುವ ಹಿನ್ನೆಲೆ ಇಂದು ಬೆಂಗಳೂರಿನ 57ನೇ CCH ನ್ಯಾಯಾಲಯಕ್ಕೆ ನಟ ದರ್ಶನ್, ಪವಿತ್ರಗೌಡ ಸೇರಿದಂತೆ ಕೊಲೆಯ ಪ್ರಕರಣದ ಎಲ್ಲ 17 ಆರೋಪಿಗಳು ಹಾಜರಾಗಿದ್ದಾರೆ. ಹೌದು ಸೇಷನ್ಸ್ ಕೋರ್ಟ್ ನಲ್ಲಿ ಇಂದು ದೋಷಾರೋಪ ನಿಗದಿ ಮಾಡುವ ಹಿನ್ನೆಲೆಯಲ್ಲಿ ನಟ ದರ್ಶನ್ ಮತ್ತು ಪವಿತ್ರ ಗೌಡ ಸೇರಿದಂತೆ ಕೊಲೆಯ ಪ್ರಕರಣದ ಉಳಿದ ಆರೋಪಿಗಳಾದಂತಹ ಪ್ರದೋಷ್, ನಾಗರಾಜ್, ಕೆಶವಮೂರ್ತಿ, ನಿಖಿಲ್ ನಾಯಕ್ ಸೇರಿದಂತೆ ಎಲ್ಲ 17 ಆರೋಪಿಗಳು ಕೂಡ ಇದೀಗ ಕೋರ್ಟಿಗೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ.ಇನ್ನು ಕೋರ್ಟ್ ಹಾಲ್ ಗೆ ನ್ಯಾಯಾಧೀಶರು ಆಗಮಿಸಿದ್ದು ಕೆಲವೇ ಕ್ಷಣಗಳಲ್ಲಿ ವಿಚಾರಣೆ ಆರಂಭವಾಗಲಿದೆ.
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೋಷರೋಪ ನಿಗದಿ ಪಡಿಸುವ ಹಿನ್ನೆಲೆ ಇಂದು ಬೆಂಗಳೂರಿನ ಸೇಷನ್ಸ್ ಕೋರ್ಟಿಗೆ ನಟ ದರ್ಶನ್, ಪವಿತ್ರಗೌಡ ಸೇರಿದಂತೆ ಕೊಲೆಯ ಪ್ರಕರಣದ ಹಲವು ಆರೋಪಿಗಳು ಹಾಜರಾಗಿದ್ದಾರೆ. ಹೌದು ಸೇಶನ್ ಕೋರ್ಟ್ ನಲ್ಲಿ ಇಂದು ದೋಷರೋಪ ನಿಗದಿ ಮಾಡುವ ಹಿನ್ನೆಲೆಯಲ್ಲಿ ನಟ ದರ್ಶನ್ ಮತ್ತು ಪವಿತ್ರ ಗೌಡ ಸೇರಿದಂತೆ ಕೊಲೆಯ ಪ್ರಕರಣದ ಉಳಿದ ಆರೋಪಿಗಳಾದಂತಹ ಪ್ರದೋಷ್, ನಾಗರಾಜ್, ಕೆಶವಮೂರ್ತಿ, ನಿಖಿಲ್ ನಾಯಕ್ ಸೇರಿದಂತೆ ಎಲ್ಲಾ 17 ಆರೋಪಿಗಳು ಇದೀಗ ಕೋರ್ಟಿಗೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ.ಇನ್ನು ಕೋರ್ಟ್ ಹಾಲ್ ಗೆ ನ್ಯಾಯಾಧೀಶರು ಆಗಮಿಸಿದ್ದು ಕೆಲವೇ ಕ್ಷಣಗಳಲ್ಲಿ ವಿಚಾರಣೆ ಆರಂಭವಾಗಲಿದೆ.
ಬಾಗಲಕೋಟೆ : ವ್ಯಕ್ತಿತ್ವ ವಿಕಸನ ಹೆಸರಿನಲ್ಲಿ ಸಾಹಸ ಹಾಗೂ ಗನ್ ತರಬೇತಿ ನೀಡಲಾಗಿದೆ ಎಂದು ಆರೋಪಿಸಿ ತರಬೇತಿಯಲ್ಲಿ ಭಾಗಿಯಾಗಿದ್ದ 27 ಶ್ರೀರಾಮ ಸೇನೆಯ ಕಾರ್ಯಕರ್ತರ ವಿರುದ್ಧ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಹೌದು ಶ್ರೀರಾಮ ಸೇನೆಯ 27 ಕಾರ್ಯಕರ್ತರ ವಿರುದ್ಧ ಇದೀಗ FIR ದಾಖಲು ಮಾಡಲಾಗಿದೆ. ತೊದಲಬಾಗಿ ಗ್ರಾಮದ ಗುಡ್ಡದಲ್ಲಿ ಗನ್ ಹಾಗೂ ಸಾಹಸ ತರಬೇತಿ ನೀಡಲಾಗುತ್ತಿತ್ತು. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ಕಾರ್ಯಕರ್ತರಿಗೆ ಈ ಒಂದು ತರಬೇತಿ ನೀಡಲಾಗುತ್ತಿತ್ತು. ನಿಂಗಪ್ಪ ಹೂಗಾರ್ ಎಂಬುವವರ ದೂರಿನ ಮೇರೆಗೆ ಇದೀಗ FIR ದಾಖಲಾಗಿದೆ. ಜಮಖಂಡಿ ತಾಲೂಕಿನ ಸಾವಳಗಿ ಠಾಣೆಯಲ್ಲಿ FIR ದಾಖಲಾಗಿದೆ. 2024 ಡಿಸೆಂಬರ್ 24 ರಿಂದ ಡಿಸೆಂಬರ್ 29 ರವರೆಗೆ ಗನ್ ತರಬೇತಿ ನಡೆದಿತ್ತು. ಶ್ರೀರಾಮ ಸೇನೆಯ ಕಾರ್ಯಕರ್ತರಾದ ಪ್ರಕಾಶ್ ಪತ್ತಾರ್, ಯಮನಪ್ಪ ಕೋರಿ, ಮಹೇಶ್ ಬಿರಾದಾರ್, ಆನಂದ್ ಜಂಬಗಿ ಮಠ ಹಾಗೂ ಗಂಗಾಧರ ಕುಲಕರ್ಣಿ ಸೇರಿದಂತೆ ಒಟ್ಟು 27 ಜನರ…
ಬೆಂಗಳೂರು : ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಮೋಸ್ಟ್ ವಾಂಟೆಡ್ 6 ಜನ ನಕ್ಸಲರು ಶರಣಾಗಿದ್ದಾರೆ. ಇದೀಗ ಎನ್ಕೌಂಟರ್ ನಲ್ಲಿ ಹತನಾದ ನಕ್ಸಲ್ ನಾಯಕ ವಿಕ್ರಂಗೌಡನ ಆಡಿಯೋ ಒಂದು ವೈರಲ್ ಆಗಿದ್ದು, ಈತ ಸಂಧಾನ ಹಾಗೂ ಶರಣಾಗತಿಗೆ ಒಪ್ಪದೇ ವಿರೋಧ ವ್ಯಕ್ತಪಡಿಸಿದ್ದ ಎನ್ನಲಾದ ಆಡಿಯೋ ಇದೀಗ ಲಭ್ಯವಾಗಿದೆ. 6 ಜನ ನಕ್ಸಲರು ಶರಣಾದ ಬಳಿಕ, ವಿಕ್ರಂ ಗೌಡನ ಸಹೋದರಿ ನನ್ನ ಅಣ್ಣನಿಗೂ ಕೂಡ ಶರಣಾಗತಿಗೆ ಅವಕಾಶ ನೀಡಬೇಕಾಗಿತ್ತು ಎಂದು ತಿಳಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಇದೀಗ ವಿಕ್ರಂ ಗೌಡನ ಜೊತೆಗೆ ಕೆಲ ಸಂಘಟನೆಗಳು ಸಂಧಾನಕ್ಕೆ ಮುಂದಾಗಿದ್ದಾಗ ಆತ ಮಾತನಾಡಿರುವ ಆಡಿಯೋ ಇದೀಗ ವೈರಲ್ ಆಗಿದೆ. ಎನ್ಕೌಂಟರ್ ಆದಂತಹ ವಿಕ್ರಂ ಗೌಡ ಸಂಧಾನಕಾರರ ಜೊತೆಗೆ ವಾದ ಮಾಡಿದ್ದ ಎನ್ನಲಾಗಿದೆ. ಆಡಿಯೋದಲ್ಲಿ ಏನಿದೆ? ಸಂಧಾನ ಹಾಗೂ ಶರಣಾಗತಿಗೆ ವಿಕ್ರಂ ಗೌಡ ಒಪ್ಪಿರಲಿಲ್ಲ. ವಿಕ್ರಂ ಗೌಡ ಮಾತನಾಡಿದ್ದಾನೆ ಎನ್ನಲಾದ ಆಡಿಯೋ ಇದೀಗ ವೈರಲ್ ಆಗಿದೆ. ವಿಕ್ರಂಗೌಡನ ವಿರೋಧದಿಂದಲೇ ಶರಣಾಗತಿಗೆ ಹಿನ್ನಡೆಯಾಯಿತಾ ಎನ್ನುವ ಅನುಮಾನ…












