Subscribe to Updates
Get the latest creative news from FooBar about art, design and business.
Author: kannadanewsnow05
ಮಂಡ್ಯ : ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿಯಾಗಿರುವ ಪರಿಣಾಮ ನರೇಗಾ ಎಂಜಿನಿಯರ್ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ಬಸಾಪುರ ಗೇಟ್ ಬಳಿ ನಡೆದಿದೆ.ಮೃತಳನ್ನು ಮೂಲತಃ ಹಲಗೂರು ಸಮೀಪದ ಬಳೆಹೊನ್ನಿಗ ಗ್ರಾಮದ ನರೇಗಾ ಎಂಜಿನಿಯರ್ ಆಗಿದ್ದ ಶರಣ್ಯ ಗೌಡ (25) ಎಂದು ಗುರುತಿಸಲಾಗಿದೆ. ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಳೆಹೊನ್ನಿಗನ ಗ್ರಾಮದವಳಾದ ಶರಣ್ಯಾ ಗೌಡ, ಕಳೆದ ಒಂದು ವರ್ಷದಿಂದ ಕನಕಪುರ ವಿಭಾಗದಲ್ಲಿ ನರೇಗಾ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಳು.ಕನಕಪುರ ತಾಲೂಕಿನ ಸಾತನೂರು ಪಂಚಾಯಿತಿಯಲ್ಲಿ ನರೇಗಾ ಇಂಜಿನಿಯರ್ ಆಗಿ ಕರ್ತವ್ಯ ಮಾಡುತ್ತಿದ್ದ ಶರಣ್ಯಾ ಗೌಡ, ನಿನ್ನೆ ತನ್ನ ಕೆಲಸವನ್ನು ಮುಗಿಸಿ ವಾಪಸ್ ಹಲಗೂರಿನ ಬಳಿಯ ಸ್ವಗ್ರಾಮಕ್ಕೆ ಹೋುವಾಗ ಎರಡು ಬೈಕ್‌ಗಳ ನಡುವ ಮುಖಾಮುಖಿ ಡಿಕ್ಕಿಯಾಗಿವೆ. ಈ ವೇಳೆ ಬೈಕ್‌ನಿಂದ ಬಿದ್ದ ಶರಣ್ಯಾ ತಲೆಗೆ ಗಂಭೀರ ಗಾಯವಾಗಿದೆ. ಇದರಿಂದ ತಲೆ ಬಿದ್ದು ಗಂಭೀರ ಪೆಟ್ಟಿನಿಂದಾಗ ತೀವ್ರ ರಕ್ತಸ್ತಾವ ಉಂಟಾಗಿದೆ. ಅವರನ್ನು ಆಸ್ಪತ್ರೆಗೆ ಸೇರಿಸಲು ಯಾವುದೇ ವಾಹನಗಳು ಸರಿಯಾದ ಸಮಯಕ್ಕೆ ಲಭ್ಯವಾಗಲಿಲ್ಲ.…
ಹುಬ್ಬಳ್ಳಿ : ಸಾಲ ಕಟ್ಟುವ ಕಿರುಕುಳದಿಂದ ಬೇಸತ್ತ ವ್ಯಕ್ತಿಯೊಬ್ಬ ಚಲಿಸುತ್ತಿದ್ದ ಲಾರಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದರುವ ಘಟನೆ ಹುಬ್ಬಳ್ಳಿಯ ತಾರಿಹಾಳ ಎಂಬಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ಹುಬ್ಬಳ್ಳಿಯ ಉಣಕಲ್ ನಿವಾಸಿ ಎಂದು ಸಿದ್ದು ಕೆಂಚಣ್ಣನವರ ಎಂದು ತಿಳಿದುಬಂದಿದೆ. ಸಿದ್ದು ಮಹೇಶ್ ಚಿಕ್ಕವೀರ ಮಠ ಬಳಿ 10 ಲಕ್ಷ ಸಾಲ ಪಡೆದಿದ್ದ. ಆದರೆ 10 ಲಕ್ಷ ಪಡೆದ ಸಾಲಕ್ಕೆ 65 ಲಕ್ಷ ಬಡ್ಡಿ ಕಟ್ಟಿದ್ದರು ಕೂಡ ಮಹೇಶ್ ಸಿದ್ದುಗೆ ಕಿರುಕುಳ ನೀಡುತ್ತಿದ್ದ. ಇನ್ನು ಹೆಚ್ಚು ಬಡ್ಡಿ ನೀಡುವಂತೆ ಮಹೇಶ್ ಚಿಕ್ಕವೀರಮಠ ಸಿದ್ದುಗೆ ಪೀಡಿಸುತ್ತಿದ್ದ ಇದರಿಂದ ಮನದೊಂದು ಸಿದ್ದು ಡೆತ್ ನೋಟ್ ಬರೆದು ವಾಟ್ಸಪ್ ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿ ಕೊಂದಿದ್ದಾನೆ. ತಾರಿಹಾಳ ಬಳಿ ಲಾರಿಗೆ ತಲೆ ಕೊಟ್ಟು ಸಿದ್ದು ಕೆಂಚಣ್ಣನವರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಿಮ್ಸ್ ಆಸ್ಪತ್ರೆ ಶವಗಾರದಲ್ಲಿ ಸಿದ್ದು ಕೆಂಚಣ್ಣನವರ ಮೃತ ದೇಹ ಇದ್ದು ಶವಾಗಾರದ ಮುಂದೆ ಸಿದ್ದುವಿನ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಬಡ್ಡಿ ದಂಧೆಕೊರನನ್ನು ಪೊಲೀಸರು ವಶಕ್ಕೆ…
ವಿಜಯಪುರ : ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ ಮಧ್ಯ ವಾಕ್ಸಮರ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಇದೀಗ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಹೇಳಿಕೆ ನೀಡಿದ್ದು, ಮನೆಯಲ್ಲಿ ಬಿಎಸ್ ಯಡಿಯೂರಪ್ಪ ಅವರಿಗೆ ಮುದಿಯ ಅಂತ ಕರೀತಾರೆ ಹೊರಗಡೆ ಮಾತ್ರ ಪೂಜೆ ತಂದೆಯವರು ಎಂದು ನಾಟಕ ಮಾಡುತ್ತಾರೆ ಎಂದು ತಿಳಿಸಿದರು. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನಿಗೆ ಮನೇಲಿ ವಿಜಯೇಂದ್ರ ಮುದಿಯಾ ಅಂತಾನೆ. ಯಡಿಯೂರಪ್ಪಗೆ ಮನೆಯಲ್ಲಿ ಕಿಮ್ಮತ್ತಿಲ್ಲ, ವಿಜಯೇಂದ್ರ ಹೊರಗಡೆ ಪೂಜ್ಯ ತಂದೆ, ಮನೆಯಲ್ಲಿ ಮುದಿಯಾ ಎಂದು ಕರೆಯುತ್ತಾನೆ ಎಂದರು. ವಿಜಯೇಂದ್ರ ಮಾಡಿದ ತಪ್ಪಿನಿಂದಲೇ ಯಡಿಯೂರಪ್ಪ ಜೈಲಿಗೆ ಹೋದದ್ದು, ಅವನಿಂದಲೇ ಹಾಳಾಗಿದ್ದು, ಮೊದಲು ಮಗನ ವ್ಯಾಮೋಹ ಬಿಡಲಿ. ಯಡಿಯೂರಪ್ಪಗೆ ಮನೆಯಲ್ಲಿ ಕಿಮ್ಮತ್ತಿಲ್ಲ. ಹೊರಗಡೆ ಪೂಜ್ಯ ತಂದೆ, ಮನೆಯಲ್ಲಿ ಮುದಿಯಾ ಎಂದು ಕರೆಯುತ್ತಾನೆ.ನಮ್ಮ ವಿರುದ್ಧ ಎರಡು ಹಂದಿಗಳು ಬಿಟ್ಟರೆ ಬೇರೆ ಯಾರೂ ಮಾತನಾಡಲ್ಲ. ಆ ಹಂದಿಗಳಿಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ.…
ಬೆಳಗಾವಿ : ಜನವರಿ 21ರಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಸಮಾವೇಶ ನಡೆಯುತ್ತಿದ್ದು, ಈ ಒಂದು ಸಮಾವೇಶದ ಸಿದ್ಧತೆಯನ್ನು ಈಗಾಗಲೇ ಡಿಸಿಎಂ ಡಿಕೆ ಶಿವಕುಮಾರ್ ಅವರು ಪರಿಶೀಲನೆ ನಡೆಸಿದ್ದು ಕಳೆದ ಎರಡು ದಿನಗಳಿಂದ ಬೆಳಗಾವಿಯಲ್ಲಿಯೇ ಠಿಕಾಣಿ ಹೂಡಿದ್ದಾರೆ. ಇದೀಗ ಡಿಕೆ ಶಿವಕುಮಾರ್ ಟೆಂಪಲ್ ರನ್ ಮಾಡಿದ್ದು ಸಮಾವೇಶ ಯಾವುದೇ ತೊಂದರೆ ಇಲ್ಲದೆ ಅತ್ಯಂತ ಸರಳವಾಗಿ ನಡೆಯಲಿ ಎಂದು ದೇವರ ಮೂರೆ ಹೋಗಿದ್ದಾರೆ. ಹೌದು ಡಿಸಿಎಂ ಡಿಕೆ ಶಿವಕುಮಾರ್ ಬೆಳಗಾವಿಯಲ್ಲಿರುವ ಕಪಿಲೇಶ್ವರ ದೇವಸ್ಥಾನಕ್ಕೆ ಇಂದು ಭೇಟಿ ನೀಡಿದ್ದರು. ಈ ವೇಳೆ ತಮ್ಮ ಅಂಗಿ ಬಿಚ್ಚಿ ಸಮಾವೇಶ ಸರಳವಾಗಿ ಯಾವುದೇ ಸಮಸ್ಯೆ ಆಗದೆ, ನಡೆಯಲಿ ಮತ್ತು ಯಶಸ್ವಿಯಾಗಲಿ ಎಂದು ದೇವರಿಗೆ ವಿಶೇಷ ಪೂಜೆ ಹಾಗೂ ಅಭಿಷೇಕ ಮಾಡಿದರು. ಪೂಜೆ ಮುಗಿದ ಬಳಿಕ ಕಪಲೇಶ್ವರ ದೇವಸ್ಥಾನದ ಅರ್ಚಕ ಮಂಜುನಾಥ್ ಅವರು ಮುಂದಿನ ಬಾರಿ ಡಿಕೆ ಶಿವಕುಮಾರ್ ಅವರು ಸಿಎಂ ಆಗಲಿ ಎಂದು ಅವರಿಗೆ ತ್ರಿಶೂಲ ನೀಡಿ ಆಶೀರ್ವದಿಸಿದರು. ಇವಳೇ ಡಿಸೆಂಬ್ ಡಿಕೆ ಶಿವಕುಮಾರ್ ಅರ್ಚಕರಿಂದ ಸನ್ಮಾನ ಸ್ವೀಕರಿಸಿ ಆಶೀರ್ವಾದ…
ರಾಯಚೂರು : ನಿನ್ನೆ ರಾಜ್ಯಕ್ಕೆ ಭೇಟಿ ನೀಡಿದಂತಹ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಶೀಘ್ರದಲ್ಲಿ ನೂತನ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಕುರಿತು ಚುನಾವಣೆ ನಡೆಯಲಿದೆ ಎಂದು ಹೇಳಿಕೆ ನೀಡಿದರೆ, ಇನ್ನೊಂದು ಕಡೆಗೆ ಶಾಸಕ ಬಚನಗೌಡ ಪಾಟೀಲ ಯತ್ನಾಳ್ ಬಣ ಬಿ ವೈ ವಿಜಯೇಂದ್ರ ವಿರುದ್ಧ ಆಕ್ರೋಶ ಹೊರ ಹಾಕುತ್ತಿದೆ. ಇದರ ಮಧ್ಯ ಬಿಜೆಪಿ ಮಾಜಿ ಸಚಿವ ಶಿವನಗೌಡ ನಾಯಕ್ ಬಿ ವೈ ವಿಜಯೇಂದ್ರ ಸಿಎಂ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಸಿಎಂ ಆಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಬಿವೈ ವಿಜಯೇಂದ್ರ ನೂರಕ್ಕೆ ನೂರು ಮುಖ್ಯಮಂತ್ರಿಯಾಗಿ ಆಗುತ್ತಾರೆ. ನೀವು ಅಧಿಕಾರಕ್ಕೆ ಬಂದು ನಮಗೆ ನವಲಿ ಜಲಾಶಯ ಮಾಡಿಕೊಡಿ ರಾಯಚೂರು ಜಿಲ್ಲೆಯಲ್ಲಿ ಏಮ್ಸ್ ಆಸ್ಪತ್ರೆಗಾಗಿ ಹೋರಾಟ ನಡೆಯುತ್ತಿದೆ ಎಂದು ತಿಳಿಸಿದರು. ಪ್ರಧಾನಿ ಮೋದಿ, ಅಮಿತ್ ಷಾ, ಜೆಪಿ ನಡ್ಡಾ ಮನವೊಲಿಸಿ ತರಬಹುದು. ರಾಯಚೂರಿಗೆ ಏಮ್ಸ್ ತರಲು ಬಿವೈ…
ಬೆಂಗಳೂರು : ಕಳೆದ ಹಲವು ದಿನಗಳಿಂದ ಡಿಜಿಟಲ್ ಅರೆಸ್ಟ್ ಹಾಗೂ ಡಿಜಿಟಲ್ ವಂಚನೆಯ ಮೂಲಕ ಸೈಬರ್ ವಂಚಕರು ಗ್ರಾಹಕರ ಹಣ ದೋಚುತ್ತಿದ್ದರು. ಇದೀಗ ಹೊಸ ಪ್ಲಾನ್ ಮಾಡಿದ ಸೈಬರ್ ವಂಚಕರು ಬೆಂಗಳೂರಿನಲ್ಲಿ ಟೆಕ್ಕಿ ಒಬ್ಬರಿಗೆ ಮೊಬೈಲ್ ಗಿಫ್ಟ್ ನೀಡುವ ಮುಖಾಂತರ ಸುಮಾರು ಎರಡು ಕೋಟಿ ರೂಪಾಯಿಗೂ ಅಧಿಕ ವಂಚಿಸಿರುವ ಘಟನೆ ಇದೀಗ ವರದಿಯಾಗಿದೆ. ಹೌದು ಕ್ರೆಡಿಟ್ ಕಾರ್ಡ್ ಮಂಜೂರಾಗಿದೆ ಎಂದು ನಂಬಿಸಿದ ಸೈಬರ್ ವಂಚಕರು ಮೊಬೈಲ್ ಗಿಫ್ಟ್ ಕಳುಹಿಸಿ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರ ಖಾತೆಯಿಂದ 2.8 ಕೋಟಿ ರೂ ದೋಚಿರುವ ಪ್ರಕರಣ ಬೆಂಗಳೂರಿನಲ್ಲಿ ವರದಿಯಾಗಿದೆ. ಖಾಸಗಿ ಬ್ಯಾಂಕ್ ಪ್ರತಿನಿಧಿಗಳ ಹೆಸರಿನಲ್ಲಿ ತಾವೇ ಮೊಬೈಲ್ ಫೋನ್ ಕಥ ಕಳುಹಿಸಿ ವಂಚಿಸಿರುವ ಖದೀಮರ ವಿರುದ್ಧ ವೈಟ್ ಫೀಲ್ಡ್ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಂಚಕರ ಕುರಿತು ಸುಳಿವಿರದ ದೂರುದಾರರು, ಹೊಸ ಮೊಬೈಲ್ ಫೋನ್‌ನಲ್ಲಿ ತಾವು ಖರೀದಿಸಿದ್ದ ಹೊಸ ಸಿಮ್ ಕಾರ್ಡ್ ಹಾಕಿ ಬಳಸಲಾರಂಭಿಸಿದ್ದಾರೆ. ಆದರೆ, ಹೊಸ ಸಿಮ್ ಕಾರ್ಡ್ ಆ್ಯಕ್ಟಿವೇಟ್ ಆಗುತ್ತಿದ್ದಂತೆ ವಂಚಿಸಲು ಅಗತ್ಯ ಇರುವಂತೆ…
ಬೀದರ್ : ಕಳೆದ ಎರಡು ದಿನಗಳ ಹಿಂದೆ ಬೀದರ್ ನಲ್ಲಿ ಎಟಿಎಂ ಗೆ ಹಣ ತುಂಬವ ವೇಳೆ ಇಬ್ಬರು ದುಷ್ಕರ್ಮಿಗಳು ಎಟಿಎಂ ಹಣ ತುಂಬುವ ಸಿಬ್ಬಂದಿಗಳ ಮೇಲೆ ಬಂದೂಕಿನಿಂದ ದಾಳಿ ಮಾಡಿ ಓರ್ವ ಸಿಬ್ಬಂದಿಯನ್ನು ಕೊಂದು, ಸುಮಾರು 83 ಲಕ್ಷ ಹಣವಿದ್ದ ಬಾಕ್ಸ್ ಸಮೇತ ಕದ್ದು ಪರಾರಿಯಾಗಿದ್ದಾರೆ. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಈ ಒಂದು ದರೋಡೆಕೋರರ ಗ್ಯಾಂಗ್ ಅನ್ನು ಪತ್ತೆ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ. ಹೌದು ಎಟಿಎಂಗೆ ಹಣ ತುಂಬುವಾಗ ಗುಂಡಿನ ದಾಳಿ ಮಾಡಿ ಹಣ ದರೋಡೆ ಮಾಡಿದ ಇಬ್ಬರು ಆರೋಪಿಗಳ ಪೈಕಿ ಒಬ್ಬನ ಗುರುತು ಪತ್ತೆ ಮಾಡಲಾಗಿದೆ. ಆರೋಪಿಯು ಛತ್ತಿಸ್‌ಗಢ ಮೂಲದ ಮನೀಶ್ ಎಂಬಾತನಿಂದ ಈ ಕೃತ್ಯ ನಡೆದಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಅಲ್ಲದೆ ದರೋಡೆ ಹಿಂದೆ ಬಿಹಾರ್ ಗ್ಯಾಂಗ್ ಇದೆ ಎನ್ನಲಾಗುತ್ತಿದೆ. ಮೃತರಿಗೆ 8 ಲಕ್ಷ ಪರಿಹಾರ ಘೋಷಣೆ ಜನವರಿ 16 ಗುರುವಾರ ಬೀದರ್‌ನ ಎಸ್‌ಬಿಐ ಬ್ಯಾಂಕ್ ಬಳಿ ಇದ್ದ ಎಟಿಎಂಗೆ ಹಣ…
ಬೆಂಗಳೂರು : ಮಗ ಕುಡಿತದ ಚಟಕ್ಕೆ ದಾಸನಾಗಿದ್ದ. ಈ ವೇಳೆ ತಂದೆ ಕುಡಿಯಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ತಂದೆ ಮಗನ ನಡುವೆ ಗಲಾಟೆ ನಡೆದು ಈ ವೇಳೆ ಮಗ ಕಬ್ಬಿಣದ ರಾಡ್ ನಿಂದ ತಂದೆಯ ತಲೆಗೆ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಂಗಳೂರಿನ ರಾಜಾಜಿನಗರದಲ್ಲಿ ನಡೆದಿದೆ. ಹೌದು ತಂದೆಯನ್ನು ಮಗನೇ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ರಾಜಾಜಿನಗರದ 4ನೇ ಬ್ಲಾಕ್‌ನ 7 ಮುಖ್ಯರಸ್ತೆಯಲ್ಲಿ ನಡೆದಿದೆ. ಕುಡಿತದ ದಾಸನಾಗಿದ್ದ ಮಗ ರಘು (29) ಎಂಬಾತನಿಂದ ತಂದೆ ರಾಮಚಂದ್ರ (59) ಎಂಬಾತನ್ನು ಕೊಲೆ ಮಾಡಲಾಗಿದೆ. ಜನವರಿ 10 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಲಾರಿ ಡ್ರೈವರ್ ಆಗಿದ್ದ ರಘು ಕುಡಿತದ ಚಟದಿಂದ ದಾಸನಾಗಿದ್ದನು. ಕುಡಿತ ಬಿಡುವಂತೆ ತಂದೆ ಮಗನಿಗೆ ದಿನನಿತ್ಯ ಬುದ್ದಿವಾದ ಹೇಳುತ್ತಿದ್ದರು. ನಿತ್ಯ ಕುಡಿದು ಬಂದು ತಂದೆ-ತಾಯಿಗೆ ತೊಂದರೆ ಕೊಡ್ತಿದ್ದ ಆರೋಪಿ ರಘು. ಕೆಲಸಕ್ಕೆ ಹೋಗದೇ ತಂದೆ ಬಳಿ ಎಣ್ಣೆ ಕುಡಿಯಲು ಹಣ ಕೊಡುವಂತೆ ಗಲಾಟೆ ಮಾಡುತ್ತಿದ್ದನು.…
ಬೆಂಗಳೂರು : ಹಾಸನದ ಮಾಜಿ ಸಂಸದ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ, ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಿಚಾರಣೆಯ ವೇಳೆ ಇನ್ ಕ್ಯಾಮೆರಾ ವಿಚಾರಣೆ (ಮುಚ್ಚಿದ ಕೊಠಡಿಯಲ್ಲಿ) ನಡೆಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮ್ಮತಿ ನೀಡಿದೆ. ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ, ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾಮೀನು ಕೋರಿ ಅರ್ಜಿ ಸಲ್ಲಿಸಲಾಗಿದ್ದು, ಈ ವೇಳೆ ಅರ್ಜಿಗೆ ಎಸ್ಐ ಟಿ ಎಸ್ ಪಿ ಪಿ ಅಶೋಕ್ ನಾಯಕ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆರೋಪ ಪಟ್ಟಿಯಲ್ಲಿನ ಅಂಶಗಳನ್ನು ಮುಂದಿಟ್ಟು ಅಶೋಕ್ ನಾಯಕ್ ವಾದ ಮಂಡನೆ ಮಾಡಿದರು. ಪ್ರತಿವಾದ ಮಂಡಿಸಲು ಕಾಲಾವಕಾಶ ಕೋರಿ ಪ್ರಜ್ವಲ್ ರೇವಣ್ಣ ಪರ ವಕೀಲರು ಇದೆ ವೇಳೆ ಮನವಿ ಮಾಡಿದರು. ಫೋಟೋ ವಿಡಿಯೋ ವೀಕ್ಷಿಸಲು ಕೂಡ ಕಾಲಾವಕಾಶಕ್ಕೆ ಮನವಿ ಮಾಡಿದರು. ಕೇಸ್ ನ ವಿಚಾರಣೆ ಮುಚ್ಚಿದ ಕೊಠಡಿಯಲ್ಲಿ ನಡೆಸುವಂತೆ ಇದೆ ವೇಳೆ ಪ್ರಜ್ವಲ್ ರೇವಣ್ಣ ಪರ ವಕೀಲರು ಅರ್ಜಿ ಸಲ್ಲಿಸಿದರು. ಅತ್ಯಾಚಾರ ಆರೋಪ ಇರುವುದರಿಂದ ಇನ್ ಕ್ಯಾಮೆರಾ ವಿಚಾರಣೆಗೆ ಮನವಿ ಮಾಡಲಾಯಿತು.…
ಬೆಂಗಳೂರು : ಬೆಂಗಳೂರಿನಲ್ಲಿ ಇದೆ ಜನವರಿ 23 ರಿಂದ ಫೆಬ್ರವರಿ 17ರ ವರೆಗೆ ಏರ್ ಶೋ ಆ ಯೋಜನೆ ಮಾಡಲಾಗಿದ್ದು ಈ ಹಿನ್ನೆಲೆಯಲ್ಲಿ, ಯಲಹಂಕದ ಸುತ್ತಮುತ್ತಲೂ ಇದೀಗ ಮಾಂಸ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಮಾಂಸ ಮಾರಾಟ ನಿಷೇಧ ಮಾಡಿ ಪಾಲಿಕೆ ಆದೇಶ ಹೊರಡಿಸಿದೆ. ಜನವರಿ 23ರಿಂದ ಫೆಬ್ರವರಿ 17ರವರೆಗೂ ಮಾಂಸ ಮಾರಾಟ ನಿಷೇಧಿಸಿ ಆದೇಶ ಹೊರಡಿಸಿದೆ. ವಾಯುನೆಲೆಯಲ್ಲಿ ವಿಮಾನಗಳ ರಿಹರ್ಸಲ್ ನಡೆಸಲಿವೆ. ಬೆಂಗಳೂರಲ್ಲಿ ಫೆಬ್ರವರಿಯಲ್ಲಿ ಏರ್ ಶೋ ಹಿನ್ನೆಲೆಯಲ್ಲಿ ಯಲಹಂಕದ ಸುತ್ತಮುತ್ತ ಮಾಂಸ ಮಾರಾಟಕ್ಕೆ ನಿಷೇಧಿಸಲಾಗಿದೆ. ಯಲಹಂಕದ ಸುಮಾರು 13 ಕಿಲೋ ಮೀಟರ್ ಸುತ್ತಲೂ ಮಾಂಸ ಮಾರಾಟ ನಿಷೇಧ ಮಾಡಲಾಗಿದೆ. ಮಾಂಸ ಮಾರಾಟ ಹಾಗೂ ಉದ್ದಿಮೆಗಳ ಬಂದ್ಗೆ ಸೂಚನೆ ನೀಡಲಾಗಿದೆ. ಫೆಬ್ರವರಿ 10 ರಿಂದ 14ರ ವರೆಗೂ ಈ ಒಂದು ಏರ್ ಶೋ ನಡೆಯಲಿದೆ. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಯಲಹಂಕ ವಲಯ ಜಂಟಿ ಆಯುಕ್ತರು ಸೂಚನೆ ನೀಡಿದ್ದಾರೆ.













