Author: kannadanewsnow05

ಬೆಂಗಳೂರು : ಬೆಂಗಳೂರು ಅರಮನೆ ಮೈದಾನದಲ್ಲಿ ಈದ್ ಉನ್ನಬಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ವಿದೇಶಿ ಧರ್ಮ ಪ್ರಚಾರಕರು ಭಾಗವಹಿಸುವ ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದು, ಸಂಘಟಕರಿಗೆ ಪೊಲೀಸ್ ಆಯುಕ್ತರ ಮೂಲಕ ಮಾಹಿತಿ ನೀಡಲಾಗಿದೆ.ವೀಸಾ ನಿಯಮ ಉಲ್ಲಂಘನೆ ಮಾಡಿದಂತೆ ಕ್ರಮಕ್ಕೆ ಸೂಚಿಸಲಾಗಿದೆ. ಈ ವೇಳೆ ವಿದೇಶಿ ಪ್ರಚಾರಕರು ಭಾಷಣ ಮಾಡುವಂತಿಲ್ಲ ಎಂದು ಸ್ಪಷ್ಟಪಡಿಸಿದರು. ಈ ಒಂದು ಕಾರ್ಯಕ್ರಮದಲ್ಲಿ ವಿದೇಶಿ ಧರ್ಮ ಗುರುಗಳು ಭಾಗವಹಿಸಲು ಅವಕಾಶ ಇಲ್ಲ. ಅಲ್ಲದೆ ಭಾಷಣವನ್ನು ಮಾಡುವಂತಿಲ್ಲ ನಿಮ್ಮ ಉಲ್ಲಂಘಿಸಬಾರದು ಎಂದು ಈಗಾಗಲೇ ಸಂಘಟಕ ಗರಿಗೆ ಸೂಚಿಸಲಾಗಿದೆ ಇಡೀ ಕಾರ್ಯಕ್ರಮದ ಮೇಲೆ ರಾಜ್ಯ ಸರ್ಕಾರ ನಿಗಾ ಇಡಲಿದೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಭಾಗವಹಿಸಲಿದ್ದಾರೆ. ವಿರೋಧ ಪಕ್ಷಗಳಿಗಿಂತ 10 ಪಟ್ಟು ನಮಗೆ ಹೆಚ್ಚು ಜವಾಬ್ದಾರಿ ಇದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದರು.

Read More

ಧಾರವಾಡ : ಇಡೀ ದೇಶವೇ ಬೆಚ್ಚಿ ಬೀಳಿಸುವಂತಹ ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನೇಹಾ ಹಿರೇಮಠರನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿದ್ದ ಆರೋಪಿ ಫಯಾಜ್ ಜಾಮೀನು ಅರ್ಜಿಯನ್ನು ಇದೀಗ ಇಂದು ಧಾರವಾಡ ಹೈಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದೆ. ಹೌದು ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ವಿದ್ಯಾರ್ಥಿ ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನೇಹಾ ಕೊಲೆ ಕೆಎಸ್ ಆರೋಪಿ ಫಯಾಜ್ ಜಾಮೀನು ಅರ್ಜಿ ವಜಾಗೊಳಿಸಿ ಧಾರವಾಡ ಹೈಕೋರ್ಟ್ ಆದೇಶ ಹೊರಡಿಸಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಾಮೀನು ಕೋರಿ ಫಯಾಜ್ ಅರ್ಜಿ ಸಲ್ಲಿಸಿದ್ದ ಈ ಹಿಂದೆ ಹುಬ್ಬಳ್ಳಿಯ 1ನೇ ಹಿರಿಯ ಮತ್ತು ಸತ್ರ ನ್ಯಾಯಾಲಯ ಕೂಡ ಫಯಾಜ್ ಅರ್ಜಿಯನ್ನು ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಧಾರವಾಡ ಹೈಕೋರ್ಟ್ ಕೂಡ ಇದೀಗ ಫಯಾಜ್ ಜಾಮೀನು ಅರ್ಜಿಯನ್ನು ವಜಾ ಗೊಳಿಸಿದೆ.

Read More

ರಾಯಚೂರು : ರಾಯಚೂರಿನಲ್ಲಿ ಬಿಹಾರ್ ಮೂಲದ ಶಂಕಿತ ನಕ್ಸಲ್ ಅರೆಸ್ಟ್ ಬಿಹಾರ ಪೊಲೀಸರು ಹಾಗೂ ರಾಯಚೂರು ಗ್ರಾಮೀಣ ಪೊಲೀಸರ ಕಾರ್ಯಾಚರಣೆ ನಡೆಸಿ ಅರೆಸ್ಟ್ ಮಾಡಿದ್ದಾರೆ. ಬಿಹಾರ್ ಮೂಲದ ನಕ್ಸಲ್ ಮನೋಜ್ ಸದಾ ಎನ್ನುವ ನಕ್ಸಲ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ಮನೋಜ್ ವಿರುದ್ಧ ಕೊಲೆ ಸುಲಿಗೆ ಜೀವ ಬೆದರಿಕೆ ಆರೋಪ ಕೇಳಿ ಬಂದಿದ್ದು, ರಾಯಚೂರಿನ ಯರಮರಸ ಇಂಡಸ್ಟ್ರಿಯಲ್ ಏರಿಯಾದಲ್ಲಿ ಅರೆಸ್ಟ್ ಮಾಡಲಾಗಿದೆ. ಖಾಸಗಿ ರೈಸ್ ಮಿಲ್ ಒಂದರಲ್ಲಿ ಆರೋಪಿ ಮನೋಜ್ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಅರೆಸ್ಟ್ ಬಳಿಕ ಮನೋಜನನ್ನು ಪೊಲೀಸರು ಕೋರ್ಟ್ ಗೆ ಹಾಗಿರುಪಡಿಸಿ ಬಿಹಾರ ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

Read More

ಬೆಂಗಳೂರು : ಅಭಿಮಾನ್ ಸ್ಟುಡಿಯೋದಲ್ಲಿದ್ದ ಡಾ.ವಿಷ್ಣುವರ್ಧನ್ ಅವರ ಸಮಾಧಿ ಕೆಡುವಲಾಗಿತ್ತು. ಈ ವಿಚಾರವಾಗಿ ಇಂದು ಭಾರತಿ ವಿಷ್ಣುವರ್ಧನ್, ಅಳಿಯ ಅನಿರುದ್ಧ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸಮಾಧಿ ನಿರ್ಮಾಣಕ್ಕಾಗಿ ಭೂಮಿ ನೀಡಿ ಎಂದು ಮನವಿ ಮಾಡಿದರು. ಅಲ್ಲದೇ ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಎಂದು ಸಹ ಮನವಿ ಮಾಡಿದರು. ಅದಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಂದಿಸಿ ಈ ವಿಚಾರವಾಗಿ ನಾಳೆ ಕ್ಯಾಬಿನೆಟ್ ನಲ್ಲಿ ಚರ್ಚಿಸಲಾಗುತ್ತದೆ ಎಂದು ಭರವಸೆ ನೀಡಿದ್ದು, ಹಾಗಾಗಿ ನಾಳೆ ಅಧಿಕೃತವಾಗಿ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಆಗುವ ಸಾಧ್ಯತೆ ಇದೆ. ನಟ ಡಾ. ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡುವ ಸಾಧ್ಯತೆಯಿದೆ ಎಂದು ಹೇಳಲಾಗಿದ್ದು, ನಾಳೆ ನಡೆಯುವ ಕ್ಯಾಬಿನೆಟ್ ಸಭೆಯಲ್ಲಿ ಅಧಿಕೃತ ಘೋಷಣೆಯಾಗಲಿದೆ.ನಿನ್ನೆ ಈ ವಿಚಾರವಾಗಿ ನಟ ಡಾ. ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡುವಂತೆ ಕನ್ನಡ ಚಿತ್ರರಂಗದ ಹಿರಿಯ ನಟಿಯರಾದ ಜಯಮಾಲ, ಶ್ರುತಿ ಮತ್ತು ಮಾಳವಿಕ ಅವಿನಾಶ್…

Read More

ಬೆಂಗಳೂರು : ವಿಷ್ಣುವರ್ಧನ್ ಅವರ ಅಭಿನವ್ ಸ್ಟುಡಿಯೋದಲ್ಲಿನ ಸಮಾಧಿ ಕೆಡವಿದ್ದಾರೆ. ಸ್ಮಾರಕ ನಿರ್ಮಾಣಕ್ಕಾಗಿ 10 ಗುಂಟೆ ಜಾಗ ನೀಡುವಂತೆ ಭಾರತಿ ವಿಷ್ಣುವರ್ಧನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಅಲ್ಲದೆ, ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಅಭಿಮಾನಿಗಳ ಮನವಿಯನ್ನೂ ಅವರು ಮುಂದಿಟ್ಟಿದ್ದಾರೆ. ಇಂದು ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿರೋ ವಿಷ್ಣುವರ್ಧನ್ ಸಮಾಧಿ ಕೆಡವಿದ ವಿಚಾರ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿತ್ತು. ಸ್ಟುಡಿಯೋದ 10 ಗುಂಟೆ ಜಾಗವನ್ನು ತಮಗೆ ನೀಡುವಂತೆ ಅಭಿಮಾನಿಗಳು ಒತ್ತಾಯಿಸಿದ್ದರು. ಭಾರತಿ ವಿಷ್ಣುವರ್ಧನ್ ಅವರು ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ವಿಷ್ಣು ಅಳಿಯ ಅನಿರುದ್ಧ್ ಜತ್ಕರ್ ಕೂಡ ಈ ಸಂದರ್ಭದಲ್ಲಿ ಇದ್ದರು. ಅಭಿಮಾನಿಗಳಿಗಾಗಿ ಸ್ಟುಡಿಯೋದಲ್ಲಿ ಜಾಗ ಕೊಡಿ ಎಂದು ಸಿಎಂ ಬಳಿ ಕೇಳಿದ್ದೇವೆ. ಅಭಿಮಾನಿಗಳ ಬಂದು ನಮಸ್ಕಾರ ಮಾಡಿ ಹೋಗಲು ಅವಕಾಶ ಮಾಡಿ ಕೊಡಬೇಕು ಎಂಬುದು ನಮ್ಮ ಮನವಿ ಎಂದಿದ್ದಾರೆ. ವಿಷ್ಣುವರ್ಧನ್​ಗೆ ಕರ್ನಾಟಕ ರತ್ನ ಕೊಡಬೇಕು ಎಂಬುದು ಹಲವು ವರ್ಷಗಳ ಕೋರಿಕೆ.…

Read More

ಬೆಂಗಳೂರು : ಬೆಂಗಳೂರಿನ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನಗೆ ಬಿಗ್ ರಿಲೀಫ್ ಸಿಕ್ಕಿದ್ದು, ಆರ್‌ಎಂಸಿ ಯಾರ್ಡ್ ಮಹಿಳೆ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಶಾಸಕ ಮುನಿರತ್ನಗೆ ಕ್ಲೀನ್‌ಚಿಟ್ ಸಿಕ್ಕಿದೆ. ಸಾಕ್ಷ್ಯಾಧಾರ ಕೊರತೆ ಹಿನ್ನೆಲೆ ಎಸ್‌ಐಟಿ ಬಿ ರಿಪೋರ್ಟ್ ಸಲ್ಲಿಕೆ ಮಾಡಿದೆ. ತಮ್ಮ ಮೇಲಿನ ಆರೋಪ ಸುಳ್ಳೆಂದು ಪ್ರಕರಣ ರದ್ದು ಕೋರಿ ಮುನಿರತ್ನ ಅರ್ಜಿ ಸಲ್ಲಿಸಿದ್ದರು. ಈಗ, ಆರೋಪ ಸಾಬೀತಾಗಿಲ್ಲವೆಂದು ಬಿ ರಿಪೋರ್ಟ್ ಸಲ್ಲಿಸಲಾಗಿದೆ ಎಂದು ಹೈಕೋರ್ಟ್‌ಗೆ ಶಾಸಕ ಮುನಿರತ್ನ ಪರ ವಕೀಲರು ತಿಳಿಸಿದ್ದಾರೆ. ಬಂಧಿಸದಂತೆ ನೀಡಿದ್ದ ಮಧ್ಯಂತರ ತಡೆಯನ್ನು ಹೈಕೋರ್ಟ್ ವಿಸ್ತರಿಸಿದೆ. ಮಹಿಳೆಯೊಬ್ಬರು ಸಾಮೂಹಿಕ ಅತ್ಯಾಚಾರದ ದೂರು ನೀಡಿದ್ದರು. ಆರ್‌ಎಂಸಿ ಯಾರ್ಡ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು.ಮಹಿಳೆ ಮಾತ್ರೆ ಸೇವಿಸುವಾಗಲೂ ರಿಹರ್ಸಲ್ ಮಾಡಿರೋದು ಬೆಳಕಿಗೆ ಬಂದಿದೆ. 8 ಬಾರಿ ರಿಹರ್ಸಲ್ ಮಾಡಿದ್ದಳು. ಆಕೆ ದೇಹದಲ್ಲಿ ನಿದ್ರೆ ಮಾತ್ರೆ ಅಂಶ ಇಲ್ಲ. ಮಹಿಳೆ ಮಾಡಿರುವ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ. ಹೀಗಾಗಿ, ಕೋರ್ಟ್ಗೆ ಎಸ್‌ಐಟಿ ಬಿ ರಿಪೋರ್ಟ್ ಸಲ್ಲಿಕೆ ಮಾಡಿದೆ.

Read More

ಶಿವಮೊಗ್ಗ : ಕೌಟುಂಬಿಕ ಕಲಹಕ್ಕೆ ಬೇಸತ್ತು ಮಹಿಳೆಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಬ್ಬಕ್ಕೆ ತವರು ಮನೆಗೆ ಬಂದಿದ್ದಾಗ ಮಹಿಳೆ ಆತ್ಮಹತ್ಯೆಗೆ ಶರಣಾಗಿರುವ ಘಟನೇ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಎಂಬ ಗ್ರಾಮದಲ್ಲಿ ನಡೆದಿದೆ. ಮನೆಯ ಜಗುಲಿಯಲ್ಲಿ ರಂಜಿತ (28) ಎನ್ನುವ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು, ಈ ಮೊದಲು ಮದುವೆಯಾಗಿ ರಂಜಿತ ವಿಚ್ಛೇದನ ಪಡೆದುಕೊಂಡಿದ್ದರು. ಸಾಗರದ ಆನಂದಪುರದಲ್ಲಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಎರಡನೇ ಮದುವೆ ಕೂಡ ಆಗಿದ್ದರು ಕಳೆದ ನಾಲ್ಕು ತಿಂಗಳ ಹಿಂದೆ ಅಷ್ಟೇ ಎರಡನೇ ಮದುವೆ ಆಗಿದ್ದರು. ಇತ್ತೀಚಿಗೆ ಅಷ್ಟೇ ಪತಿ ಪತಿಯ ಮಧ್ಯೆ ಜಗಳ ನಡೆದಿತ್ತು. ಹಾಗಾಗಿ ತವರು ಮನೆಗೆ ಹಬ್ಬಕ್ಕೆ ಎಂದು ಬಂದಾಗ ರಂಜಿತ ಕೌಟುಂಬಿಕ ಕಲಹಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.

Read More

ಬೆಂಗಳೂರು : ಚೊಚ್ಚಲ ಐಪಿಎಲ್ ಟ್ರೋಫಿ ಗೆದ್ದ ಹಿನ್ನೆಲೆಯಲ್ಲಿ ಕಳೆದ ಜೂನ್ 4 ರಂದು ಬೆಂಗಳೂರಲ್ಲಿ ಆರ್‌ಸಿಬಿ ತಂಡಕ್ಕೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ಒಂದು ಕಾರ್ಯಕ್ರಮದಲ್ಲಿ ಅಪಾರ ಜನಸಂಖ್ಯೆಯಿಂದ ಕಾಲ್ತುಳಿತದಲ್ಲಿ 11 ಜನ ಆರ್‌ಸಿಬಿ ಅಭಿಮಾನಿಗಳು ಸಾವನ್ನಪ್ಪಿದ್ದರು. ಕಾಲ್ತುಳಿತದಿಂದ ಆರ್‌ಸಿಬಿಯ 11 ಅಭಿಮಾನಿಗಳು ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ 3 ತಿಂಗಳ ಬಳಿಕ ಅಭಿಮಾನಿಗಳಿಗೆ ವಿರಾಟ್ ಕೊಹ್ಲಿ ಭಾವುಕ ಸಂದೇಶ ರವಾನೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆರ್ ಸಿ ಬಿ ಸೋಶಿಯಲ್ ಮೀಡಿಯಾ ಪೇಜ್ ಮೂಲಕ ವಿರಾಟ್ ಕೊಹ್ಲಿ ಪೋಸ್ಟ್ ಹಂಚಿಕೊಂಡಿದ್ದು, ಜೂನ್ 4ರ ದಿನ ಅತ್ಯಂತ ಸಂತೋಷದಾಯಕ ಕ್ಷಣವಾಗಿರಬೇಕಾಗಿತ್ತು. ಆದರೆ ದುರಂತವಾಗಿ ಮಾರ್ಪಟ್ಟಿದೆ. ಆ ದಿನ ನಮ್ಮ ಹೃದಯ ಒಡೆದಂತಾಗಿದೆ. ನಾವು ಕಳೆದುಕೊಂಡವರ ಕುಟುಂಬಗಳಿಗಾಗಿ ಮತ್ತು ಗಾಯಗೊಂಡ ನಮ್ಮ ಅಭಿಮಾನಿಗಳಿಗಾಗಿ ಯೋಚಿಸುತ್ತಿದ್ದೇನೆ ಮತ್ತು ಪ್ರಾರ್ಥಿಸುತ್ತಿದ್ದೇನೆ. ನಿಮ್ಮ ನಷ್ಟವು ಈಗ ನಮ್ಮ ಕಥೆಯ ಭಾಗವಾಗಿದೆ. ಇನ್ಮುಂದೆ ಎಚ್ಚರಿಕೆ ಗೌರವ ಜವಾಬ್ದಾರಿಯಿಂದ ಮುಂದುವರಿಯುತ್ತೇವೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆರ್‌ಸಿಬಿ ಆಟಗಾರ ಕೊಹ್ಲಿ ಪೋಸ್ಟ್…

Read More

ಮಂಡ್ಯ : ಮಂಡ್ಯದಲ್ಲಿ ಘೋರ ದುರಂತವೊಂದು ನಡೆದಿದ್ದು, ಬಸ್ ನಿಲ್ದಾಣದ ಬಳಿಯೇ ವ್ಯಕ್ತಿಯ ಮೇಲೆ KSRTC ಬಸ್ ಒಂದು ಹರಿದ ಘಟನೆ ಮಂಡ್ಯ ಜಿಲ್ಲೆಯ KR ಪೇಟೆ ತಾಲೂಕಿನಲ್ಲಿ ನಡೆದಿದೆ. ಘಟನೆಯಲ್ಲಿ ವ್ಯಕ್ತಿಗೆ ಗಂಭೀರ ಗಾಯಗಳಾಗಿದ್ದು, ಮಂಡ್ಯದ K.R ಪೇಟೆ ಪಟ್ಟಣದ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದೆ. ಗಾಯಗೊಂಡ ವ್ಯಕ್ತಿಯ ಹೆಸರು ತಿಳಿದು ಬಂದಿಲ್ಲ. ತಕ್ಷಣ ಸ್ಥಳೀಯರಿಂದ ಗಾಯಗೊಂಡ ವ್ಯಕ್ತಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಂಡ್ಯ : ಸಕ್ಕರೆನಾಡು ಮಂಡ್ಯದಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದ್ದು, ಆಸ್ತಿಗಾಗಿ ಮಗನಿಂದಲೇ ತಂದೆಗೆ ಬ್ಲಾಕ್ ಮೇಲ್ ಮಾಡಿದ್ದಾನೆ. ವಾಟ್ಸಪ್ ಗ್ರೂಪ್ ಗೆ ಅಪ್ಪನ ಅಶ್ಲೀಲ ಸಂದೇಶ ಕಳಿಸಿ ತಂದೆಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಮಗನ ವಿರುದ್ದ ರೊಚ್ಚಿಗೆದ್ದ ತಂದೆಯಿಂದ ಪೊಲೀಸರಿಗೆ ದೂರು ನೀಡಿದ್ದು, ಸದ್ಯ ಬೆದರಿಕೆ ಹಾಕಿದ ಆರೋಪಿ ಮಗನನ್ನು ಬಂಧಿಸಿ ಪೊಲೀಸರು ಜೈಲಿಗಟ್ಟಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ವಿಚಿತ್ರ ಘಟನೆ ನಡೆದಿದೆ. ಮದ್ದೂರಿನ ರಿಯಲ್ ಎಸ್ಟೇಟ್ ಉದ್ಯಮಿ ಸತೀಶ್ ಗೆ ಮಗನಿಂದಲೇ ಬೆದರಿಕೆ ಹಾಕಿದ್ದು, ಮದ್ದೂರು ಸೇರಿದಂತೆ ರಾಜ್ಯದ ಹಲವೆಡೆ ರಾಣಿ ಐಶ್ವರ್ಯ ಡೆವಲರ್ಸ್ ಹೆಸರಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸ್ತಿರೋ ಉದ್ಯಮಿ ಸತೀಶ್‌. ಈತನ‌ ಮಗ ಪ್ರಣವ್ (25) ತಂದೆಗೆ ಬ್ಲಾಕ್ ಮೇಲ್ ಮಾಡಿದ ಕಿರಾತಕ ಮಗ ಎಂದು ತಿಳಿದುಬಂದಿದೆ. ದುಶ್ಚಟಗಳಿಗೆ ಬಲಿಯಾಗಿ ವಿರೋಧಿಗಳ ಜೊತೆ ಸೇರಿ ಆಸ್ತಿಗಾಗಿ ತಂದೆ ಜೊತೆ ಕಿರಿಕ್ ಮಾಡಿಕೊಂಡಿದ್ದಾನೆ. ಈಗಾಗಲೇ ತಂದೆಯ ಕೋಟ್ಯಾಂತರ ರೂ ಕಳೆದು ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ.…

Read More