Subscribe to Updates
Get the latest creative news from FooBar about art, design and business.
Author: kannadanewsnow05
ಉಡುಪಿ : ಉಡುಪಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಕುಶನ್ ಅಂಗಡಿ ಒಂದು ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಆನೆಕೆರೆ ಎಂಬಲ್ಲಿ ನಡೆದಿದೆ. ಈ ಒಂದು ಅಗ್ನಿ ಅವಘಡದಲ್ಲಿ ಅಂಗಡಿಯಲ್ಲಿದ್ದ ಸುಮಾರು 20 ಲಕ್ಷ ಮೌಲ್ಯದ ಕುಶನ್ ಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಹೌದು ಶಾರ್ಟ್ ಸರ್ಕ್ಯೂಟ್ ನಿಂದ ಕುಶನ್ ಶಾಪ್ ಒಂದು ಹೊತ್ತಿ ಉರಿದಿರುವ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಆನೆಕೆರೆ ಬಳಿ ಈ ಒಂದು ಅಗ್ನಿ ಅವಘಡ ಸಂಭವಿಸಿದೆ. ಸದಾನಂದ ಅವರ ಸದಾ ಕುಶನ್ ಅಂಗಡಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿಗೆ ಆಹುತಿಯಾಗಿದೆ. ಸುಮಾರು 20 ಲಕ್ಷ ಮೌಲ್ಯದ ಕುಶನ್ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಗಿವೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ಉದ್ಯಮಿಗಳಿಗೆ ಕೋಟ್ಯಾಂತರ ರೂಪಾಯಿ ವಂಚನೆ ಎಸಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪ್ರಮುಖ ಆರೋಪಿಯಾಗಿರುವ ರೇಖಾ ಹಾಗೂ ಆಕೆಯ ಪತಿ ಮಂಜುನಾಥಚಾರಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಬೆಂಗಳೂರಿನ 1ನೇ ACMM ನ್ಯಾಯಾಲಯ ಆದೇಶ ಹೊರಡಿಸಿದೆ. ಹೌದು ಉದ್ದನಿಗೆ 25 ಕೋಟಿ ಆಸೆ ತೋರಿಸಿ 5 ಕೋಟಿಗೂ ಹೆಚ್ಚು ಹಣ ಪಡೆದು ವಂಚಿಸಿರುವ ಪ್ರಕರಣಕ್ಕೆ ಸಂಬಂಧಸಿದಂತೆ ಇದೀಗ ರೇಖಾ ಹಾಗೂ ಪತಿ ಮಂಜುನಾಥಚಾರಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯ ಈ ಆದೇಶ ಹೊರಡಿಸಿತು. ರೇಖಾ ಮಂಜುನಾಥಚಾರಿ ದಂಪತಿ 14 ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಆಗಿದ್ದಾರೆ. ಪ್ರಕರಣ ಹಿನ್ನೆಲೆ? 2023ರಲ್ಲಿ ಉದ್ಯಮಿಗೂ ಮತ್ತು ರೇಖಾಗೂ ಪರಿಚಯವಾಗುತ್ತದೆ. ಕಾರ್ಲ್ಟನ್ ಟವರ್ ಬೆಂಕಿ ದುರಂತದ ಕತೆ ಹೇಳುವ ಮೂಲಕ ಮೋಸದ ಜಾಲ ಬೀಸಿದ ರೇಖಾ, ನಾನು ಟವರ್ ದುರಂತದ ಪ್ರತ್ಯಕ್ಷ ಸಾಕ್ಷಿ, ನಾನು ಸಾಕ್ಷಿ ಹೇಳದಂತೆ ಮಾಲೀಕರು ಆಫರ್ ಮಾಡಿದ್ದಾರೆ.…
ಉಡುಪಿ : ದೇಶದಲ್ಲಿ ಸನಾತನ ಬೋರ್ಡ್ ಜಾರಿಗೆ ಬರಬೇಕು. ದೇವಾಲಯಗಳ ಸಂಪತ್ತಿನಿಂದ ಊರಿಗೆ ಶಿಕ್ಷಣ ಆಗಬೇಕು ಎಂದು ಉಡುಪಿಯಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಗ್ರಹಿಸಿದ್ದಾರೆ. ಇನ್ನು ಕುಂಭಮೇಳದ ಕುರಿತು ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ ಕುರಿತು ಪ್ರತಿಕ್ರಿಯಿಸಿದ ಅವರು, ಮಲ್ಲಿಕಾರ್ಜುನ್ ಖರ್ಗೆ ಅವರ ಆಶಯಗಳು ತೆರೆದಿಟ್ಟಿವೆ. ಎಲ್ಲರ ಭಾವನೆಯನ್ನು ಗೌರವಿಸಬೇಕು ಯಾರನ್ನು ನೋಯಿಸಬಾರದು. ಅವರ ಹೇಳಿಕೆಗೆ ನಾವು ಯಾವುದೇ ಪ್ರತಿಕ್ರಿಯೆ ಕೊಡಲ್ಲ ಮಲ್ಲಿಕಾರ್ಜುನ ಖರ್ಗೆ ಅವರದು ಬಾಲಿಷ ಹೇಳಿಕೆ ಎಂದರು. ಖರ್ಗೆ ಅವರ ಹೇಳಿಕೆಯ ಪ್ರಕಾರ ಕುಂಭಮೇಳಕ್ಕೆ ಬಂದ ಎಲ್ಲರನ್ನು ಮೂರ್ಖರೆಂದು ಹೇಳಿದಂತೆ ಆಯ್ತು. ರಾಜಕೀಯ ಪಕ್ಷಗಳು ಮತಭೇದ ಮರೆತು ಯಶಸ್ವಿಗೆ ಕೈಜೋಡಿಸಿ. ದೇಶದಲ್ಲಿ ಸನಾತನ ಬೋರ್ಡ್ ಜಾರಿಗೆ ಬರಬೇಕು. ದೇವಾಲಯಗಳ ಸಂಪತ್ತಿನಿಂದ ಊರಿಗೆ ಶಿಕ್ಷಣ ಆಗಬೇಕು. ಅಯೋಧ್ಯೆಯಲ್ಲಿ ಭಕ್ತರ ದರ್ಶನಕ್ಕೆ ಸುಲಲಿತ ವ್ಯವಸ್ಥೆ ಇದೆ. ಇನ್ನು ಪ್ರಯಾಗ್ ರಾಜ್ ನಲ್ಲಿ ಕಾಲ್ತುಳಿತದಲ್ಲಿ ಹಲವರು ಸಾವನ್ನಪ್ಪಿದ್ದ ಕುರಿತು ಪ್ರತಿಕ್ರಯಿಸಿದ ಅವರು ಕುಂಭಮೇಳದಲ್ಲಿ ಕೆಲ ಅನಾನುಕೂಲತೆ ಆಗಿದೆ ಎಂಬುದರ ಕುರಿತು…
ಶಿವಮೊಗ್ಗ : ಮೆಟ್ರೋ ಪ್ರಯಾಣದ ದರ ಹೆಚ್ಚಳ ಮಾಡುವ ಬಗ್ಗೆ ಸಮಿತಿ ತೀರ್ಮಾನಿಸುತ್ತದೆ. ಕೇಂದ್ರ ಸರ್ಕಾರದ ಸಮಿತಿ ಮೆಟ್ರೋ ಪ್ರಯಾಣದ ದರ ಹೆಚ್ಚಳ ಮಾಡುವ ಕುರಿತು ತೀರ್ಮಾನ ಕೈಗೊಳ್ಳುತ್ತದೆ ಎಂದು ಶಿವಮೊಗ್ಗದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಿಳಿಸಿದರು. ಇಂದು ಶಿವಮೊಗ್ಗ ಜಿಲ್ಲೆಗೆ ಭೇಟಿ ನೀಡಿದ ಡಿಕೆ ಶಿವಕುಮಾರ್ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಈ ವೇಳೆ ಅಭಿಮಾನಿಗಳು ಡಿಕೆ ಶಿವಕುಮಾರ್ ಪರ ಘೋಷಣೆ ಕೂಗಿದರು. ಈ ವೇಳೆ ಮೆಟ್ರೋ ಪ್ರಯಾಣದ ದರ ಹೆಚ್ಚಳ ಕುರಿತು ಮಾತನಾಡಿದ ಅವರು, ಮೆಟ್ರೋ ಪ್ರಯಾಣ ದರದ ಬಗ್ಗೆ ನಾವು ತೀರ್ಮಾನಿಸಲ್ಲ. BMRCL ಹಾಗೂ ಕೇಂದ್ರ ಸರ್ಕಾರ ತೀರ್ಮಾನಿಸಬೇಕು ಎಂದು ಅವರು ತಿಳಿಸಿದರು. ಇನ್ನು ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಕಾಲ್ತುಳಿತದಲ್ಲಿ ಕರ್ನಾಟಕದ ನಾಲ್ವರು ಸಾವನಪ್ಪಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಮೃತ ಕುಟುಂಬಸ್ಥರಿಗೆ ಪರಿಹಾರ ನೀಡುವ ಕುರಿತು ಸಿಎಂ ಸಿದ್ದರಾಮಯ್ಯ ತೀರ್ಮಾನ ಕೈಗೊಳ್ಳುತ್ತಾರೆ ಕುಂಭಮೇಳದಲ್ಲಿ ಅಗ್ನಿ ಅವಘಡದ ಕುರಿತು ನನಗೆ ಮಾಹಿತಿ ಇಲ್ಲ ಎಂದು ಡಿಕೆ ಶಿವಕುಮಾರ್…
ಯಾದಗಿರಿ : ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಎಂದು ಪತಿಯನ್ನೇ ಪ್ರಿಯಕರನ ಜೊತೆಗೆ ಸೇರಿ ಪತ್ನಿ ಒಬ್ಬಳು ಭೀಕರವಾಗಿ ಕೊಲೆ ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಹುಣಸಗಿಯಲ್ಲಿ ನಡೆದಿದೆ. ಹತ್ಯೆಯಾದ ಪತಿಯನು ಮಾನಪ್ಪ ಬಂಕಲದೊಡ್ಡಿ (34) ಎಂದು ತಿಳಿದುಬಂದಿದೆ. ಪತ್ನಿ ಲಕ್ಷ್ಮಿಯ ಜೊತೆಗೆ ಮಾನಪ್ಪ ಕಳೆದ 11 ವರ್ಷಗಳ ಹಿಂದೆ ಮದುವೆಯಾಗಿದ್ದ.ಆದರೆ ಇತ್ತೀಚೆ ಲಕ್ಷ್ಮೀ ದಾರಿ ತಪ್ಪಿದ್ದಳು. ಕೆಲವರ ಜತೆ ಅಕ್ರಮ ಸಂಬಂಧ ಇಟ್ಕೊಂಡಿದ್ದಳು. ಈ ವಿಷಯ ಗಂಡನಿಗೆ ಗೊತ್ತಾಗಿ ಜಗಳ ಆಗಿತ್ತು. ಮೊನ್ನೆ ರಾತ್ರಿ ದಂಪತಿ ನಡುವೆ ಮತ್ತೆ ಗಲಾಟೆ ಆಗಿದೆ. ಅದೇ ರಾತ್ರಿ ಪ್ರಿಯಕರನನ್ನ ಮನೆಗೆ ಕರೆಸಿಕೊಂಡಿರುವ ಲಕ್ಷ್ಮೀ, ದಿಂಬಿನಿಂದ ಪತಿಯ ಉಸಿರು ಗಟ್ಟಿಸಿಕೊಂದಿದ್ದಾಳೆ. ಬಳಿಕ ಹೃದಯಾಘಾತದ ನಾಟಕವಾಡಿದ್ದಾಳೆ.ಕೊಲೆ ಬಳಿಕ ತನಗೇನು ಗೊತ್ತೇ ಇಲ್ಲ ಎನ್ನುವಂತೆ ಮೃತ ಗಂಡನ ಮುಂದೆ ಕುಳಿತು ಕಣ್ಣೀರ ಕೋಡಿ ಹರಿಸಿದ್ದಾಳೆ. ಹೃದಯಾಘಾತದಿಂದ ಸತ್ತ ಎಂದು ಸಂಬಂಧಿಕರನ್ನ ನಂಬಿಸೋಕೆ ಯತ್ನಿಸಿದ್ದಾಳೆ. ಆದರೆ ಮಾನಪ್ಪನ ಮುಖದ ಮೇಲೆ ಅಲ್ಲಲ್ಲಿ ಗಾಯಗಳಾಗಿರುವುದನ್ನು ಊರಿನವರು ಗಮನಿಸಿದ್ದಾರೆ.ಈ ವೇಳೆ ಊರಿನವರಿಗೆ…
ಬೆಳಗಾವಿ : ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಇತ್ತೀಚಿಗೆ ನಡೆದ ಕಾಲ್ತುಳಿತ ದುರಂತದಲ್ಲಿ ರಾಜ್ಯದ ಬೆಳಗಾವಿ ಜಿಲ್ಲೆಯ ನಾಲ್ವರು ಸಾವನ್ನಪ್ಪಿದ್ದರು. ಇದೀಗ ಇಬ್ಬರ ಮೃತದೇಹ ಏರ್ ಲಿಫ್ಟ್ ಮೂಲಕ ಬೆಳಗಾವಿಗೆ ತಲುಪಿವೆ.ಅರುಣ್ ಕೊಪರ್ಡೆ ಹಾಗೂ ಮಹದೇವಿ ಬಾವನೂರ್ ಅವರ ಮೃತದೇಹಗಳು ಆಗಮಿಸಿವೆ. ಹೌದು ಮಹಾಕುಂಭ ಮೇಳದಲ್ಲಿ ಮೃತಪಟ್ಟ ಬೆಳಗಾವಿಯ ನಾಲ್ವರ ಪೈಕಿ ಮಹಾದೇವಿ ಬಾವನೂರ ಹಾಗೂ ಅರುಣ ಕೋಪರ್ಡೆ ಅವರ ಶವಗಳು ಸರಿಯಾದ ಸಮಯಕ್ಕೆ ದೆಹಲಿಗೆ ತಲುಪಿವೆ. ಹೀಗಾಗಿ ಮಧ್ಯಾಹ್ನದ ವಿಮಾನದಲ್ಲಿ ದೆಹಲಿಯಿಂದ ನೇರವಾಗಿ ಬೆಳಗಾವಿಗೆ ತರಲಾಗುತ್ತಿದ್ದು, 3.20ಕ್ಕೆ ವಿಮಾನ ದೆಹಲಿಯಿಂದ ಹಾರಿದ್ದು, ಇದೀಗ ಬೆಳಗಾವಿಗೆ ಬೆಳಗಾವಿ ಮೃತದೇಹಗಳು ತಲುಪಿವೆ. ಏರ್ಪೋರ್ಟ್ ನಿಂದ ನೇರವಾಗಿ ಬಿಮ್ಸ್ ಆಸ್ಪತ್ರೆಗೆ ಇಬ್ಬರ ಮೃತದೇಹಗಳನ್ನು ಸ್ಥಳಾಂತರಿಸಲಾಗುತ್ತದೆ. ಮರಣೋತ್ತರ ಪರೀಕ್ಷೆಗಾಗಿ ಬಿಮ್ಸ್ ಆಸ್ಪತ್ರೆಗೆ ಇಬ್ಬರು ಮೃತದೇಹಗಳನ್ನು ಸ್ಥಳಾಂತರಿಸಲಾಗುತ್ತದೆ. ಬಳಿಕ ಜಿಲ್ಲಾಡಳಿತ ಕುಟುಂಬಸ್ಥರಿಗೆ ಮೃತದೇಹಗಳನ್ನು ಹಸ್ತಾಂತರಿಸಲಿದೆ. ಈಗಾಗಲೇ ಏರ್ ಪೋರ್ಟ್ ಗೆ ಸಂಸದ ಜಗದೀಶ್ ಶೆಟ್ಟರ್ ಹಾಗೂ ಸರ್ಕಾರದ ಪರವಾಗಿ ಡಿಸಿ ಮಹಮ್ಮದ್ ರೋಷನ್ ಅವರು ಆಗಮಿಸಿದ್ದಾರೆ.…
ಬೆಂಗಳೂರು : ಕಳೆದ ಜನವರಿ 21ರಂದು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲಿ ಯುವಕನನ್ನು ಗ್ಯಾಂಗ್ ಒಂದು ಅಪಹರಿಸಿ, ಆತನ ಮೇಲೆ ಭೀಕರವಾಗಿ ಹಲ್ಲೆ ಮಾಡಿ ಆತನಿಂದ ಮೊಬೈಲ್, ಹಣ ಹಾಗೂ ಬೈಕ್ ಕದ್ದು ಪರಾರಿಯಾಗಿದ್ದ ಘಟನೆ ನಡೆದಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಆನೇಕಲ್ ತಾಲೂಕಿನ ಪೊಲೀಸರು ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಹೌದು ಯುವಕನ ಕಿಡ್ನಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಪೊಲೀಸರು ಮೂವರನ್ನು ಅರೆಸ್ಟ್ ಮಾಡಿದ್ದಾರೆ. ಯುವಕನನ್ನು ಅರೆಸ್ಟ್ ಮಾಡಿ ಹಲ್ಲೆ ಮಾಡಿದ್ದ ಗ್ಯಾಂಗ್ ಇದೀಗ ಬಂಧನವಾಗಿದೆ. ಬಂಧಿತರನ್ನು ಅನಿಲ್ (21) ಸಿದ್ದಾರ್ಥ್ (21) ದರ್ಶನ (20) ಎಂದು ತಿಳಿದು ಬಂದಿದೆ. ಇನ್ನೋರ್ವ ಆರೋಪಿ ಶಶಾಂಕ್ ಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.ಜನವರಿ 21ರಂದು ಮುರುಳಿ ಎಂಬುವ ಯುವಕನನ್ನು ಅಪಹರಿಸಿ ಈ ಒಂದು ಗ್ಯಾಂಗ್ ದರೋಡೆ ಮಾಡಿತ್ತು ಅಲ್ಲಿ ಮಾಡಿ ಬೈಕ್ ಮತ್ತು ಹಣ ಮೊಬೈಲ್ ಕಿತ್ತುಕೊಂಡು ಯುವಕರು ಪರಾರಿಯಾಗಿದ್ದರು. ಇದೀಗ ಮೂವರನ್ನು ಆನೇಕಲ್…
BREAKING : ರಾಜ್ಯದಲ್ಲಿ ಮತ್ತೆ ಆಕ್ಟಿವ್ ಆದ ‘ಗರುಡಾ ಗ್ಯಾಂಗ್’ : ಉದ್ಯಮಿಯನ್ನು ಅಪಹರಿಸಿ ಲಕ್ಷಾಂತರ ಹಣ ದೋಚಿ ಪರಾರಿ!
ಬೆಂಗಳೂರು : ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ದರೋಡೆ, ಕಳ್ಳತನ ಕೊಲೆ ಸುಲಿಗೆಗಳಂತಹ ಘಟನೆಗಳು ನಡೆಯುತ್ತಿದ್ದು ಇದೀಗ ಬೆಂಗಳೂರಿಗೆ ಉಡುಪಿ ಮೂಲದ ಗರುಡ ಗ್ಯಾಂಗ್ ಎಂಟ್ರಿ ಕೊಟ್ಟಿದೆ. ಪೆಟ್ರೋಲ್ ಟ್ರಾನ್ಸ್ ಪೋರ್ಟ್ ಉದ್ಯಮಿಯನ್ನು ಅಪಹರಿಸಿದ ಇವರು ಲಕ್ಷಾಂತರ ರೂಪಾಯಿ ಹಣ ದೋಚಿ ಪಾರಿ ಯಾಗಿರುವ ಘಟನೆ ಬೆಂಗಳೂರಿನ ನೆಲಮಂಗಲ ತಾಲೂಕಿನ ಕುಣಿಗಲ್ ರಸ್ತೆಯಲ್ಲಿ ನಡೆದಿದೆ. ಹೌದು ಗರುಡಾ ಗ್ಯಾಂಫ್ ನೆಲಮಂಗಲದ ಬಳಿ ಉದ್ಯಮಿ ಇಕ್ಬಾಲ್ನನ್ನು ಸಿನಿಮೀಯ ರೀತಿಯಲ್ಲಿ ಕಿಡ್ಯ್ನಾಪ್ ಮಾಡಿ ಚಿತ್ರಹಿಂಸೆ ನೀಡಿದ್ದಾರೆ.ಹಣ ಕಸಿದುಕೊಂಡು ಉಡುಪಿ ಮೂಲದ ಗರುಡ ಗ್ಯಾಂಗ್ ಇದೀಗ ಪರಾರಿ ಆಗಿದೆ. ನೆಲಮಂಗಲ ತಾಲೂಕಿನ ಕುಣಿಗಲ್ ರಸ್ತೆಯಲ್ಲಿ ಈ ಒಂದು ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಕುಣಿಗಲ್ ರಸ್ತೆಯಲ್ಲಿ ಉದ್ಯಮಿಯನ್ನು ಅಪಹರಿಸಿ ಹಣ ದೋಚಿದ್ದಾರೆ. ಕಳೆದ ಶನಿವಾರ ರಾತ್ರಿ 10 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 75ರ ಕುಣಿಗಲ್ ವೃತ್ತದ ಬಳಿ ಇರುವ ಸಿಮ್ ಬಿರಿಯಾನಿ ಹೋಟೆಲ್‌ನಲ್ಲಿ ಊಟ ಮುಗಿಸಿ ನೆಲಮಂಗಲದಿಂದ ಮಂಗಳೂರು ಮಾರ್ಗವಾಗಿ…
ಬೆಳಗಾವಿ : ಬೆಳಗಾವಿಯ ಖಡೆ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವಂತಹ ಹಳೆ ಪಾಲಿಕೆ ಕಚೇರಿಯಲ್ಲಿ ಇಂದು ಭೀಕರವಾದ ಅಗ್ನಿ ಅವಘಡ ಸಂಭವಿಸಿದೆ. ಈ ಒಂದು ಅಗ್ನಿ ದುರಂತದಲ್ಲಿ ಕಚೇರಿ ದಾಖಲೆ ಕೊಠಡಿಯಲ್ಲಿ ಇದ್ದಂತಹ ಕೆಲವು ಮಹತ್ವದ ದಾಖಲೆಗಳು ಸುಟ್ಟು ಕರಕಲಾಗಿರುವ ಮಾಹಿತಿ ಒದಗಿ ಬಂದಿದೆ. ಹೌದು ಹಳೆ ಪಾಲಿಕೆ ಕಚೇರಿಯಲ್ಲಿ ದಾಖಲಾತಿ ಕೊಠಡಿಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಬೆಳಗಾವಿಯ ಖಡೆ ಬಜಾರ್ ನಲ್ಲಿರುವ ಹಳೆಯ ಪಾಲಿಗೆ ಕಚೇರಿಯಲ್ಲಿ ಬೆಂಕಿ ಹೊತ್ತಿ ಉರಿದಿದೆ. ಕೊಠಡಿಯಲ್ಲಿದ್ದ ಮಹತ್ವದ ದಾಖಲೆಗಳು ಸುಟ್ಟು ಕರಕಲಾಗಿವೆ.ಕೂಡಲೇ ಘಟನಾ ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ. ಸಿಗರೇಟ್ ಸೇದಿ ಕೊಠಡಿಗೆ ಎಸೆದು ಹೋಗಿರುವ ಶಂಕೆ ಇದೀಗ ವ್ಯಕ್ತವಾಗಿದೆ.ಘಟನೆ ಕುರಿತಂತೆ ಖಡೆ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ನಿನ್ನೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರುದ್ಧ ಸಂಸದ ಡಾ. ಕೆ ಸುಧಾಕರ್ ತೀವ್ರ ವಾಗ್ದಾಳಿ ನಡೆಸಿದ್ದರು. ನನ್ನನ್ನು ರಾಜಕೀಯವಾಗಿ ಮುಗಿಸಲು ವಿಜಯೇಂದ್ರ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದೀಗ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿ ವೈ ವಿಜಯೇಂದ್ರ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದು, ಈ ಬಚ್ಚಾ ನಿಂದ ನಾವು ಕಲಿಬೇಕಾ ನಮ್ಮನ್ನು ಪಕ್ಷದಿಂದ ಹೊರಗೆ ಹಾಕಿದರೆ ಹಾಕಿ ಎಂದು ಗುಡುಗಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ನಾಯಕರೇ ಅಧ್ಯಕ್ಷ ಘೋಷಣೆ ಮಾಡಲಿ. ಚುನಾವಣೆ ಯಾಕೆ ಬೇಕು? ವಿಜಯೇಂದ್ರ ಚಡ್ಡಿ ಹಾಕೋ ಮುನ್ನ ನಾನು ಸಂಘಟನೆ ಮಾಡಿದ್ದೇನೆ. ವಿಜಯೇಂದ್ರ ಬಚ್ಚಾ, ನಾವು ಅವನಿಂದ ಕಲಿಯಬೇಕಿಲ್ಲ.ನಮಗೆ ಯಾವುದೇ ಭಯ ಇಲ್ಲ. ಪಕ್ಷದಿಂದ ತೆಗೆದು ಹಾಕ್ತೀರಾ ಹಾಕಲಿ. ನಾವು ಹೆದರೊಲ್ಲ ಎಂದು ಸವಾಲು ಹಾಕಿದರು. ವಿಜಯೇಂದ್ರ ಅವರ ಒರಿಜಿನಲ್ ಬಣ್ಣ ಹೊರಗೆ ಬಂದಿದೆ. ವಿಜಯೇಂದ್ರ ಯಾಕೆ ಸರ್ಕಸ್ ಮಾಡ್ತಿದ್ದೀರಾ ಚುನಾವಣೆ ಅಂತ. ರಾಧಾಮೋಹನ್‌ಗೆ ಹೇಳಿ ರಾಜ್ಯಾಧ್ಯಕ್ಷ ನೀವೇ ಅಂತ…









