Subscribe to Updates
Get the latest creative news from FooBar about art, design and business.
Author: kannadanewsnow05
ತುಮಕೂರು : ತುಮಕೂರಿನಲ್ಲಿ ಬೆಚ್ಚಿ ಬೆಳೆಸುವ ಘಟನೆ ನಡೆದಿದ್ದು, ಜುವೆಲ್ಲರೀ ಶಾಪ್ ಮಾಲೀಕನೊಬ್ಬ ಸುಮಾರು 100ಕ್ಕೂ ಹೆಚ್ಚು ಜನರ ಬಳಿ ಹಣ ಪಡೆದು 30 ಕೋಟಿಯೊಂದಿಗೆ ಕುಟುಂಬ ಸಮೇತ ಪರಾರಿಯಾಗಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ. ಹೌದು ತುಮಕೂರಿನ ಜುವೆಲ್ಲರೀ ಶಾಪ್ ಮಾಲೀಕನ ಈ ಒಂದು ಮಹಾ ಮೋಸ ಬೆಳಕಿಗೆ ಬಂದಿದೆ. 30 ಕೋಟಿ ಹಣ ಪಡೆದು ಕುಟುಂಬ ಸಮೇತ ಇದೀಗ ಜುವೆಲ್ಲರಿ ಮಾಲೀಕ ಪರಾರಿಯಾಗಿದ್ದಾನೆ. ಸುಮಾರು 100ಕ್ಕೂ ಹೆಚ್ಚು ಮಂದಿಗೆ ಶಿವಾನಂದ ಮೂರ್ತಿ ಎನ್ನುವ ವ್ಯಕ್ತಿ ವಂಚಿಸಿದ್ದಾನೆ. ವಂಚನೆ ಎಸಗಿದವನನ್ನು ಆಕಾಶ ಜುವೆನರಿ ಶಾಪ್ ಮಾಲೀಕ ಶಿವಾನಂದಮೂರ್ತಿ ಎಂದು ತಿಳಿದುಬಂದಿದೆ. ತುಮಕೂರಿನ ಸರ್ಕಾರಿ ಬಸ್ ನಿಲ್ದಾಣದ ಎದುರುಗಡೆ ಜಿಎಂಎಸ್ ಕಾಂಪ್ಲೇಂಕ್ಸ್ ನಲ್ಲಿ ಜುವೆಲ್ಲರೀ ಶಾಪ್ ಹೊಂದಿದ್ದ ಶಿವಾನಂದಮೂರ್ತಿ, ಚೀಟಿ ವ್ಯವಹಾರವನ್ನು ಕೂಡ ನಡೆಸುತ್ತಿದ್ದ ಎಂದು ತಿಳಿದುಬಂದಿದೆ. ಆಕಾಶ ಸಹಾಕಾರಿ ಕೋ ಆಪರೇಟಿವ್ ಸೊಸೈಟಿ ಆರಂಭ ಮಾಡಿದ್ದ. ನೂರಾರು ಜನರ ಶೇರ್ ಹಣ ಸಂಗ್ರಹಿಸಿದ ಶಿವಾನಂದ ಮೂರ್ತಿ ಸೊಸೈಟಿ ಹಣ ಹೊಡೆದುಕೊಂಡು…
ಬೆಂಗಳೂರು : ಬೆಂಗಳೂರಲ್ಲಿ ಇಂದು ಮತ್ತೊಂದು ಭೀಕರ ವಾದಂತಹ ಅಪಘಾತ ಸಂಭವಿಸಿದ್ದು ವೇಗವಾಗಿ ಬಂದಂತಹ ಲಾರಿ ಒಂದು ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿ ಚಲಿಸುತ್ತಿದ್ದ ವ್ಯಕ್ತಿ ಸ್ಥಳದಲ್ಲಿ ಸಾವನ್ನಪ್ಪಿದ್ದು, ಆತನ ದೇಹ ಛಿದ್ರ ಛಿದ್ರವಾಗಿದೆ. ಇನ್ನೊರ್ವ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಂಗಳೂರಿನ ದೇವನಹಳ್ಳಿ ಕನ್ನಮಂಗಲ ಪಾಳ್ಯ ಗೇಟ್ ಬಳಿ ನಡೆದಿದೆ. ಹೌದು ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಸವಾರನ ದೇಹ ನುಜ್ಜು ಗುಜ್ಜಾಗಿದೆ. ಲಾರಿ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ದೇವನಹಳ್ಳಿ ಕನ್ನಮಂಗಲ ಪಾಳ್ಯ ಗೇಟ್ ಬಳಿ ಈ ಒಂದು ಭೀಕರ ಅಪಘಾತ ಸಂಭವಿಸಿದೆ. ಓರ್ವ ವ್ಯಕ್ತಿ ಸ್ಥಳದಲ್ಲಿ ಸಾವನಪ್ಪಿದ್ದು ಮತ್ತೊರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿವಮೊಗ್ಗ : ಒಂದು ಕಡೆ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳಕ್ಕೆ ಅನೇಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೆ. ಇನ್ನೊಂದು ಕಡೆ ಕೈಸಾಲ ಪಡೆದು ಬಳಿಕ ಸಾಲಗಾರರ ಕಿರುಕುಳ ತಾಳಲಾರದೆ ಹಲವರು ಆತ್ಮತೆಗೆ ಶರಣಾಗುತ್ತಿದ್ದಾರೆ. ಇದೀಗ ಶಿವಮೊಗ್ಗದಲ್ಲಿ ಸಾಲಗಾರರ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬರು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ಹೌದು ಸಾಲಗಾರರ ಕಿರುಕುಳಕ್ಕೆ ಬೆಂಕಿ ಹಚ್ಚಿಕೊಂಡು ಪ್ರಶಾಂತ (32) ಎನ್ನುವ ವ್ಯಕ್ತಿ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬಿದರಗೋಡು ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಪೆಟ್ರೋಲ್ ಸುರದುಕೊಂಡು ಬೆಂಕಿ ಹಂಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಪ್ರಶಾಂತ್ ವರ್ಷದ ಹಿಂದೆ ಪತ್ನಿಯಿಂದ ಡಿವೋಸ್ ಪಡೆದಿದ್ದರು.ಇದೀಗ ಸಾಲಗಾರರ ಕಾಟ ತಾಳಲಾರದೆ ಪ್ರಶಾಂತ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಶರಣಾಗಿದ್ದಾರೆ.
ಚಿತ್ರದುರ್ಗ : ಕಳೆದ ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಪ್ರಯಾಗ್ ರಾಜ್ ನಲ್ಲಿ ಕಾಲ್ತುಳಿತ ದುರಂತ ಸಂಭವಿಸಿತು. ಈ ಒಂದು ಕಾಲ್ತುಳಿತದಲ್ಲಿ ಬೆಳಗಾವಿ ಮೂಲದ ನಾಲ್ವರು ಸಾವನ್ನಪ್ಪಿದ್ದರು ಇದೀಗ ಚಿತ್ರದುರ್ಗ ಜಿಲ್ಲೆಯ ನಾಗಾಸಾಧು ಒಬ್ಬರು ಈ ಒಂದು ಕಾಲ್ತುಳಿತದಲ್ಲಿ ಸಾವನಪ್ಪಿದ್ದಾರೆ ಎಂದು ವರದಿಯಾಗಿದೆ. ಹೌದು ಕಾಲ್ತುಳಿತದಿಂದ ನಾಗ ಸಾಧು ರಾಜನಾಥ್ ಮಹಾರಾಜ್ (49) ಎನ್ನುವವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇವರು ಚಿತ್ರದುರ್ಗದ ಬಂಡಾರ ಗುರುಪೀಠದ ನಿಲ್ಲಿಸಿದ್ದರು ಎಂದು ಹೇಳಲಾಗುತ್ತಿದೆ. ಕಳೆದ 7 ವರ್ಷಗಳಿಂದ ಬಂಜಾರ ಗುರು ಪೀಠದಲ್ಲಿ ಈ ಒಂದು ನಾಗಸಾಧು ನೆಲ್ಲಿಸಿದ್ದರು.15 ದಿನದ ಕುಂಭಮೇಳಕ್ಕೆ ರಾಜನಾಥ ಮಹಾರಾಜ್ ತೆರಳಿದ್ದರು. ಆದರೆ ಕಾಲ್ತುಳಿತದಲ್ಲಿ ಅವರು ಸಾವನಪ್ಪಿದ್ದಾರೆ ಎಂದು ವರದಿಯಾಗಿದೆ. ಇನ್ನು ಚಿತ್ರದುರ್ಗಕ್ಕೆ ನಾಗಸಾಧು ಪಾರ್ಥಿವ ಶರೀರ ತರಿಸಲು ಮನವಿ ಮಾಡಿಕೊಳ್ಳಲಾಗಿದ್ದು, ಚಿತ್ರದುರ್ಗದಲ್ಲಿ ಸರ್ದಾರ್ ಸೇವಾಲಾಲ್ ಸ್ವಾಮೀಜಿ ನಾಗಸಾಧು ರಾಜನಾಥ್ ಪಾರ್ಥಿವ ಶರೀರ ತರಿಸಲು ಮನವಿ ಮಾಡಿಕೊಂಡಿದ್ದಾರೆ.ಚಿತ್ರದುರ್ಗದ ಲಂಬಾಣಿ ಸೇವಾಲಾಲ್ ಗುರುಪೀಠದ ಪೀಠಾಧಿಪತಿಯಾಗಿರುವ ಅವರಿಗೆ ಪಾರ್ಥಿವ ಶರೀರ ತರಲು ಸರ್ಕಾರ…
ಬೆಂಗಳೂರು : ನಿನ್ನೆ ಬಿಜೆಪಿಯ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಗಿದ್ದವರ ಪಟ್ಟಿ ಬಿಡುಗಡೆ ಮಾಡಿದ್ದು, ಈ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜೇಂದ್ರ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ್ದು, ಪಕ್ಷದ ವಿರುದ್ಧವಾಗಿ ಯಾರು ಕೆಲಸ ಮಾಡಿದ್ದರು ಅಂತಹವರಿಗೆ ಜಿಲ್ಲಾಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ ಎಂದು ಕಿಡಿ ಕಾರಿದರು. ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಶಾಸಕ ಯತ್ನಾಳ್, ರಾಜ್ಯಾಧ್ಯಕ್ಷರಾಗಲು ಬೇಕಾದವರನ್ನು ಜಿಲ್ಲಾಧ್ಯಕ್ಷ ಮಾಡಿದ್ದಾರೆ. ನಾಯಕ ಅಂದರೆ ಒಂದು ಗುಂಪಿನ ನಾಯಕ ಅಲ್ಲ ಒಂದು ಪಕ್ಷದ ನಾಯಕ ಆಗಿರಬೇಕು. ದಾವಣಗೆರೆ ಬೀದರ್ ನಲ್ಲಿ ಚುನಾವಣೆಯಲ್ಲಿ ಪಕ್ಷದ ವಿರುದ್ಧವಾಗಿ ಕೆಲಸ ಮಾಡಿದ್ದಾರೆ. ಪಕ್ಷದ ವಿರುದ್ಧ ಕೆಲಸ ಮಾಡಿದವರಿಗೆ ಇದೀಗ ಅಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ ಬಹಳ ಆತಂಕ ಕಾರಿ ಆಗಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ತಿಳಿಸಿದರು. ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಬಗ್ಗೆ ಚರ್ಚಿಸುತ್ತೇವೆ. ಯಾರನ್ನು ಅಭ್ಯರ್ತಿ ಮಾಡಬೇಕು ಎಂದು ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಎರಡು ದಿನ ವಿಸ್ತೃತ ಚರ್ಚೆ ಮಾಡಿ…
ಮೈಸೂರು : ಉತ್ತರಪ್ರದೇಶದ ಪ್ರಯಾಗ್ರಾಜನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಗಂಗೆಸ್ನಾನ ಮಾಡುವುದರ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಇದೀಗ ಬಿಜೆಪಿಯ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಇಂತಹ ಹೇಳಿಕೆ ನೀಡುವವರನ್ನು ನೇಣಿಗೆ ಹಾಕಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಆಕ್ರೋಶ ಹೊರ ಹಾಕಿದರು. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಂಗೆಯಲ್ಲಿ ಪುಣ್ಯ ಸ್ನಾನ ಮಾಡೋದು ಸಂಸ್ಕೃತಿ. ಗಂಗೆಯಲ್ಲಿ ಪುಣ್ಯ ಸ್ನಾನ ಮಾಡಿ ಅಂತ ಪೋಸ್ಟರ್ ಹಾಕಿಲ್ಲ. ಕೋಟ್ಯಂತರ ಜನರ ನಂಬಿಕೆ ನೋಯಿಸುವ ಕೆಲಸ ಆಗಿದೆ. ಈ ರೀತಿ ಯಾರೇ ಹೇಳಿಕೆ ನೀಡಿದರು ನೇಣಿಗೆ ಹಾಕಬೇಕು. ಇದನ್ನು ನಿಂದಿಸುವ ಗೌರಿಸುವ ಕೆಲಸ ಮಾಡಬಾರದು ಮಲ್ಲಿಕಾರ್ಜುನ ಖರ್ಗೆ ಮನೆಯಲ್ಲಿ ನಿತ್ಯ ಪೂಜೆ ಮಾಡುತ್ತಾರೆ. ಹೊರಗೆ ಬಂದು ಯಾರನ್ನು ಮುಚ್ಚಿಸಲು ಹೀಗೆ ಟೀಕಿಸುತ್ತಿದ್ದೀರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಐಸಿಸಿ ಅಧ್ಯಕ್ಷರು ಹೇಳಿದ್ದೇನು? ಕೇಂದ್ರ ಗೃಹ ಸಚಿವ ಅಮಿತ್ ಷಾ ಸೇರಿದಂತೆ ಬಿಜೆಪಿ ನಾಯಕರು ಮಹಾಕುಂಭಮೇಳಕ್ಕೆ ಭೇಟಿ…
ಹೈದ್ರಾಬಾದ್ : ಇಂದಿನ ಜನತೆಗೆ ದುಡಿಮೆ ಬೇಕಾಗಿಲ್ಲ ಆದರೆ ದುಡಿಯದೇ ಕಷ್ಟಪಡದೆ ಹಣ ಗಳಿಸುವ ಆಸೆ ಮಾತ್ರ ತುಂಬಾ ಇದೆ. ಹಾಗಾಗಿ ಇಂತಹ ಜನರನ್ನೇ ಗಾಳವಾಗಿ ಬಳಸಿಕೊಂಡು ಕೆಲವರು ಷೇರು ಮಾರುಕಟ್ಟೆ ಹಾಗೂ ಇತರೆ ಆನ್ಲೈನ್ ಗೇಮ್ ಗಳ ಮೂಲಕ ಜನರನ್ನು ವಂಚಿಸುತ್ತಾರೆ. ಇದೀಗ ಷೇರು ಮಾರುಕಟ್ಟೆಯಲ್ಲಿ 1 ಕೋಟಿ ರೂಪಾಯಿ ನಷ್ಟವಾಗಿದ್ದಕ್ಕೆ ಕಾನ್ಸ್ಟೇಬಲ್ ಒಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೈದರಾಬಾದ್ ಅಂಬರಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತರನ್ನು ವೆಂಕಟೇಶ್ ಎಂದು ತಿಳಿದುಬಂದಿದ್ದು, ಷೇರು ಮಾರುಕಟ್ಟೆಯಲ್ಲಿ 1 ಕೋಟಿ ನಷ್ಟವಾಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮದನಪೇಟ್ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೆಂಕಟೇಶ್ ಅವರು ಸಾಕಷ್ಟು ದೊಡ್ಡ ಮಟ್ಟದ ನಷ್ಟ ಅನುಭವಿಸಿದ್ದರು. ಹಾಗಾಗಿ ಹೈದರಾಬಾದ್ ನಗರದ ಅಂಬರಪೇಟ್‌ನ ದುರ್ಗಾ ನಗರದಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. 1 ಕೋಟಿ ರೂಪಾಯಿ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಕಳೆದುಕೊಂಡ ನಂತರ ಪೇದೆ ವೆಂಕಟೇಶ್ ಅವರು ಖಿನ್ನತೆಯಲ್ಲಿ ನರಳುತ್ತಿದ್ದರು ಎನ್ನಲಾಗಿದೆ. ವೆಂಕಟೇಶ್ ಪೋಷಕರು ದೂರು…
ಮೈಸೂರು : ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಅನೇಕ ಜನರು ಸರಣಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗೆ ಸುಗ್ರೀವಾಜ್ಞೆ ಜಾರಿಗೆ ತರಲು ಮುಂದಾಗಿದ್ದು ಇಂದು ಅಥವಾ ನಾಳೆ ಸುಗ್ರೀವಾಜ್ಞೆ ಜಾರಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಜಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಚ್ಚಿನ ಹಣ ವಸೂಲಿ ಮಾಡಲು ಮೈಕ್ರೋ ಫೈನಾನ್ಸ್ ಅಧಿಕಾರ ಕೊಟ್ಟಿದ್ದು ಯಾರು? ಫೈನಾನ್ಸ್ ನವರು ಹೊಸೂರಿಗೆ ಗುಂಡಾರ ರೌಡಿಗಳನ್ನ ಇಟ್ಟುಕೊಳ್ಳುತ್ತಾರೆ. ಪಾಪ ರೌಡಿಗಳ ಕಿರುಕುಳಕ್ಕೆ ಜನರು ಭಯ ಬೀಳುತ್ತಾರೆ.ಇದನ್ನು ತಡೆಗಟ್ಟಲು ಕಾನೂನು ಜಾರಿ ಮಾಡಲಾಗುತ್ತದೆ ಎಂದರು. ಯಾರು ಸಹ ಭಯ ಪಡುವ ಅಗತ್ಯವಿಲ್ಲ. ಸರ್ಕಾರ ನಿಮ್ಮ ಜೊತೆಗೆ ಇದೆ. ನಿಮಗೆ ಏನಾದರೂ ಕಿರುಕುಳ ಕೊಟ್ಟರೆ ಪೊಲೀಸರಿಗೆ ದೂರು ನೀಡಿ. ಅಸಲಿಗಿಂತ ಬಡ್ಡಿ ಜಾಸ್ತಿ ಹಾಕಬಾರದೆಂದು ಕಾನೂನಿನಲ್ಲಿ ಸೇರಿಸುತ್ತೇವೆ. ಎಂದು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಜಾತ್ರೆಯಲ್ಲಿ…
ರಾಯಚೂರು : ರಾಯಚೂರಲ್ಲಿ ಇಂದು ಬೆಳಗಿನ ಜಾವ ಅಗ್ನಿ ದುರಂತವೊಂದು ಸಂಭವಿಸಿದ್ದು, ಎಲೆಕ್ಟ್ರಿಕ್ ಬೈಕ್ ಗೆ ಆಕಸ್ಮಿಕ ಬೆಂಕಿ ತಗುಲಿದ್ದರಿಂದ ಅದರ ಪಕ್ಕದಲ್ಲಿದ್ದ 4 ಬೈಕ್ ಗಳಿಗೂ ಬೆಂಕಿ ವ್ಯಾಪಿಸಿ ಸುಟ್ಟು ಭಸ್ಮವಾಗಿರುವ ಘಟನೆ ರಾಯಚೂರು ನಗರದಲ್ಲಿ ನಡೆದಿದೆ. ರಾಯಚೂರು ನಗರದ ಆಶಾಪುರ ರಸ್ತೆಯಲ್ಲಿರುವ ಗೋವಿಂದ ಎಂಬವರಿಗೆ ಸೇರಿದ್ದ ಬೈಕ್ ಚಾರ್ಜಿಂಗ್ ಇಟ್ಟಿದಾಗ ಘಟನೆ ನಡೆದಿದೆ ಎನ್ನಲಾಗಿದೆ. ಪಶ್ಚಿಮ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದರೆ.
ವಿಜಯಪುರ : ಪೊಲೀಸ್ ವಿಚಾರಣೆಗೆ ಹೆದರಿ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ಮೌನೇಶ್ ಅಬ್ಬಿಹಾಳ್ ಎಂದು ಗುರುತಿಸಲಾಗಿದೆ. ಹೌದು ಮೌನೇಶ್ ನ ಸೋದರಮಾವ ಬಸವರಾಜ್ ಎನ್ನುವವರು ಕಳೆದ ಕೆಲವು ದಿನಗಳ ಹಿಂದೆ ಕಾಣೆಯಾಗಿದ್ದರು. ಈ ಸಂಬಂಧ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆ ಮೌನೇಶ್‌ನನ್ನು ಠಾಣೆಗೆ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದರು. ಗುರುವಾರ ಸಹ ಮತ್ತೆ ವಿಚಾರಣೆಗೆ ಬರುವಂತೆ ಹೇಳಿದ್ದರು. ಆದರೆ ವಿಚಾರಣೆಗೆ ಹೆದರಿ ಯುವಕ ಜಮೀನಿನಲ್ಲಿ ನೇಣಿಗೆ ಶರಣಾಗಿದ್ದಾನೆ ಎಂದು ಯುವಕನ ಕುಟುಂಬಸ್ಥರು ಆರೋಪಿಸಿದ್ದಾರೆ. ಯುವಕ ಆತ್ಮಹತ್ಯೆ ಮಾಡಿಕೊಂಡಿರುವುದು ಹಲವಾರು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ನಿಡಗುಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.









