Author: kannadanewsnow05

ಬೆಳಗಾವಿ : ಬೆಳಗಾವಿಯಲ್ಲಿ ಭೀಕರವಾದ ಕೊಲೆ ಆಗಿದ್ದು, ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳ ನಡೆದು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಪಟ್ಟಣದ ಹೊರವಲಯದ ಸಾಗರ ನಗರದಲ್ಲಿ ನಡೆದಿದೆ. ಹತ್ಯೆಯಾದ ಯುವಕನನ್ನು ಯಾಸಿನ್ ಜಾತಗಾರ (22) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಆರೋಪಿ ರೋಹಿತ್ ಜಾಧವ್, ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ. ಚಾಕುವಿನಿಂದ ಚುಚ್ಚಿ ಆರೋಪಿಯು ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಬೆಳಗಾವಿ ಎಸ್ಪಿ ಭೀಮಾಶಂಕರ್ ಗುಳೇದ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಡಚಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮೈಸೂರು : ಮೈಸೂರಲ್ಲಿ ಘೋರ ಘಟನೆ ನಡೆದಿದ್ದು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಭೋಗೇಶ್ವರ ಕಾಲೋನಿಯಲ್ಲಿ ವಾಸವಿದ್ದ ಮುಕುಂದ (38) ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿ ಇದೀಗ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನ ಭೋಗೇಶ್ವರ ಕಾಲೋನಿಯಲ್ಲಿ ಕಳೆದ 7 ವರ್ಷದಿಂದ ಮುಕುಂದ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಗುಡ್ಲೂರು ತಾಲೂಕಿನ ಪಂಡನತೋರಯ್ ಗ್ರಾಮದವನಾಗಿದ್ದು, ಜಮೀನು ಭೋಗ್ಯಕ್ಕೆ ಪಡೆದು ಮುಕುಂದ ಇಲ್ಲಿಯೇ ವ್ಯವಸಾಯ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. ಮುಕುಂದ ಮಾನಸಿಕ ಸ್ಥಿಮಿತ ಕಳೆದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಶಂಕೆ ಇದೀಗ ವ್ಯಕ್ತವಾಗುತ್ತಿದೆ. ಆತ್ಮಹತ್ಯೆಗು ಮುನ್ನ ತಾಯಿಗೆ ಕರೆ ಮಾಡಿ ವಾಪಸ್ ಕರೆಸಿಕೊಳ್ಳುವಂತೆ ಮುಕುಂದ ಮನವಿ ಮಾಡಿದ್ದ. ನನಗೆ ಇಲ್ಲಿರಲು ಆಗುತ್ತಿಲ್ಲ ವಾಪಸ್ ಕರೆದುಕೊಂಡು ಹೋಗಿ ಅಂತ ಹೇಳಿದ್ದ. ಆದರೆ ಮನೆಯವರು ಬರುವಷ್ಟರಲ್ಲಿ ಮುಕುಂದ ಜಮೀನಿನಲ್ಲಿ ಕತ್ತು ಕೊಯ್ದುಕೊಂಡಿದ್ದಾನೆ. ತಕ್ಷಣ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮುಕುಂದ ಮೃತಪಟ್ಟಿದ್ದಾನೆ. ಘಟನೆ…

Read More

ಮಂಗಳೂರು : ಗ್ಯಾಸ್ ಟ್ಯಾಂಕರ್ ಗೆ KSRTC ಬಸ್ ಡಿಕ್ಕಿಯಾಗಿ 30 ಪ್ರಯಾಣಿಕರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಹಾಸನ ಜಿಲ್ಲೆಯ ಸಕಲಶಪುರ ತಾಲೂಕಿನ ಮಾರನಹಳ್ಳಿ ಎಂಬಲ್ಲಿ ನಡೆದಿದೆ. 30 ಪ್ರಯಾಣಿಕರಿಗೆ ಗಾಯಗಳಾಗಿದ್ದು 10ಕ್ಕೂ ಹೆಚ್ಚು ಪ್ರಯಾಣಿಕರ ಸ್ಥಿತಿ ಗಂಭೀರವಾಗಿದೆ. ಸಕಲೇಶಪುರದಿಂದ ಕೆಎಸ್ಆರ್ಟಿಸಿ ಬಸ್ ಧರ್ಮಸ್ಥಳಕ್ಕೆ ತೆರಳುತ್ತಿತ್ತು. ಮಂಗಳೂರು ಕಡೆಯಿಂದ ಗ್ಯಾಸ್ ಟ್ಯಾಂಕರ್ ಬೆಂಗಳೂರು ಕಡೆಗೆ ಬರುವಾಗ ನಿಯಂತ್ರಣ ತಪ್ಪಿ ಗ್ಯಾಸ್ ಟ್ಯಾಂಕರ್ ಗೆ ಕೆ ಎಸ್ ಆರ್ ಟಿ ಸಿ ಬಸ್ ಡಿಕ್ಕಿ ಹೊಡೆದಿದೆ. ಗಂಭೀರವಾದ ಗಾಯಗೊಂಡವರನ್ನು ಹಾಸನ ಮತ್ತು ಮಂಗಳೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದ ಗಾಯಾಲುಗಳಿಗೆ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಯಾದಗಿರಿ : ಯಾದಗಿರಿಯಲ್ಲಿ ಇಂದು ಘೋರವಾದ ದುರಂತ ಸಂಭವಿಸಿದ್ದು, ಆಟವಾಡುತ್ತ ತೆರೆದ ಬಾವಿಯಲ್ಲಿ ಬಿದ್ದು 6 ವರ್ಷದ ಬಾಲಕ ಸಾವನಪ್ಪಿರುವ ಘಟನೆ ಯಾದಗಿರಿ ನಗರದಲ್ಲಿ ನಡೆದಿದೆ. ಯಾದಗಿರಿ ನಗರದ ಕೋಲಿವಾಡ ಬಡಾವಣೆಯಲ್ಲಿ ಈ ಒಂದು ಘಟನೆ ನಡೆದಿದ್ದು, ಆಟವಾಡುತ್ತಾ ತೆರೆದ ಬಾವಿಗೆ ಬಿದ್ದು ರಾಜು (6) ಎನ್ನುವ ಬಾಲಕ ಸಾವನಪ್ಪಿದ್ದಾನೆ. ಸದ್ಯ ಬಾಲಕನಿಗಾಗಿ ಅಗ್ನಿಶಾಮಕ ಸಿಬ್ಬಂದಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ.ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಗುಜರಾತಿನ ಅಹಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು ಪೈಲಟ್ ಸೇರಿದಂತೆ ವಿಮಾನದಲ್ಲಿದ್ದ ಎಲ್ಲರೂ ಸಾವನ್ನಪ್ಪಿದ್ದರು. ಇದೀಗ ಈ ಒಂದು ಘಟನೆ ಮಾಸುವ ಮುನ್ನವೇ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನದಲ್ಲಿ ಮತ್ತೊಂದು ಬಾರಿ ಅನಾಹುತ ಒಂದು ತಪ್ಪಿದೆ. ಇಂಧನ ಖಾಲಿಯಾದ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹೌದು ಇಂಧನ ಖಾಲಿಯಾದ ಹಿನ್ನೆಲೆಯಲ್ಲಿ ವಿಮಾನ ತುರ್ತು ಭೂಸ್ಪರ್ಶವಾಗಿರುವ ಘಟನೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನದಲ್ಲಿ ಜೂನ್ 19ರಂದು ನಡೆದ ಘಟನೆ ತಡವಾಗಿ ಬಳಕೆಗೆ ಬಂದಿದೆ. ಇಂಧನ ಖಾಲಿಯಾಗಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ಅದೃಷ್ಟವಶಾತ್ ಭಾರಿ ಅನಾಹುತ ಒಂದು ತಪ್ಪಿದೆ. ಗುವಾಹಟಿಯಿಂದ ಇಂಡಿಗೋ ವಿಮಾನ ಚೈನ್ನೈ ಗೆ ತೆರಳುತ್ತಿತ್ತು. 180 ಪ್ರಯಾಣಿಕರನ್ನು ಹೊತ್ತು ಇಂಡಿಗೋ ವಿಮಾನ ಚೈನ್ನೈಗೆ ತೆರಳುತ್ತಿತ್ತು. ಇಂಧನ ಖಾಲಿಯಾಗಿದ್ದನ್ನು ತಿಳಿದು MAYDAYಎಂದು ಕೂಗಿ ಪೈಲಟ್ ತುರ್ತು ಭೂಸ್ಪರ್ಶ ಮಾಡಿದ್ದಾರೆ. ನಂತರ ಇಂಧನ ತುಂಬಿಸಿಕೊಂಡು…

Read More

ಮೈಸೂರು : ವ್ಯಕ್ತಿಯೊಬ್ಬರಿಗೆ ಇ ಸ್ವತ್ತು ಮಾಡಿ ಕೊಡಲು ಕಂದಾಯ ಅಧಿಕಾರಿ ಹಾಗೂ ಬಿಲ್ ಕಲೆಕ್ಟರ್ ಇಬ್ಬರು ಸೇರಿ 25,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ವೇಳೆ 25,000 ಈ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಹೌದು ಕಂದಾಯ ಅಧಿಕಾರಿ, ಬಿಲ್ ಕಲೆಕ್ಟರ್ ರೇಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 25,000 ಲಂಚ ಸ್ವೀಕರಿಸುವಾಗ ರೆಡ್ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಮೈಸೂರು ಲೋಕಾಯುಕ್ತ ಅಧಿಕಾರಿಗಳು ಈ ಒಂದು ಕಾರ್ಯಾಚರಣೆ ನಡೆಸಿದ್ದಾರೆ. ಪಾಲಿಕೆ ವಲಯ ಕಚೇರಿಯ ಬಿಲ್ ಕಲೆಕ್ಟರ್ ರಜಾಕ್ ಹಾಗೂ ಕಂದಾಯ ಅಧಿಕಾರಿ ನಂದೀಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಎಸ್ ಪಿ ಟಿಜೆ ಉದೇಶ್ ಮಾರ್ಗದರ್ಶನದಲ್ಲಿ ಈ ಒಂದು ಕಾರ್ಯಾಚರಣೆ ನಡೆದಿದೆ. ಇ ಸ್ವತ್ತು ಮಾಡಿಕೊಡಲು 25,000 ಲಂಚ ಸ್ವೀಕಾರ ಮಾಡುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬೆಲೆಗೆ ಬಿದ್ದಿದ್ದಾರೆ. ಸದ್ಯ…

Read More

ತುಮಕೂರು : ಇತ್ತೀಚಿಗೆ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಅದರಲ್ಲೂ ಯುವಜನತೆಗೆ ಈ ಒಂದು ಹೃದಯಾಘಾತ ಎನ್ನುವುದು ಸಾಮಾನ್ಯವಾದ ಕಾಯಿಲೆ ಆಗಿಬಿಟ್ಟಿದೆ. ಇದೀಗ ಇಂದು ತುಮಕೂರಿನಲ್ಲಿ ಸಚಿವ ಕೆಎನ್ ರಾಜಣ್ಣ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ಒಂದು ಸಮಾರಂಭ ಮುಗಿಸಿ ಮನೆಗೆ ತೆರಳುವಾಗ ಮಹಿಳೆಯೋಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಹೌದು ಸಚಿವ ಕೆ.ಎನ್ ರಾಜಣ್ಣ ಅಭಿನಂದನಾ ಸಮಾರಂಭದ ಬಳಿಕ ಮಹಿಳೆಗೆ ಹೃದಯಘಾತವಾಗಿದ್ದು, ಹೃದಯಾಘಾತದಿಂದ ಸೀಗೇಹಳ್ಳಿ ನಿವಾಸಿ ಸುನಂದಮ್ಮ ಸಾವನ್ನಪ್ಪಿದ್ದಾರೆ. ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಸೀಗೆಹಳ್ಳಿ ನಿವಾಸಿಯಾಗಿರುವ ಸುನಂದಮ್ಮ ಅವರು ಅಭಿನಂದನಾ ಸಮಾರಂಭ ಮುಗಿಸಿ ಬಸ್ ನಲ್ಲಿ ತೆರಳುವಾಗ ಈ ಒಂದು ಘಟನೆ ನಡೆದಿದೆ. ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಈ ಒಂದು ಅಭಿನಂದನಾ ಕಾರ್ಯಕ್ರಮ ನಡೆದಿತ್ತು.

Read More

ಹಾಸನ : ಪ್ರಪಂಚದ ಆಗು-ಹೋಗುಗಳ ಬಗ್ಗೆ ಸ್ಪೋಟಕ ಭವಿಷ್ಯ ನುಡಿಯುವುದರಲ್ಲಿ ಕೋಡಿಶ್ರೀಗಳು ಯಾವಾಗಲು ಮುಂದು ಇದೀಗ ಮತ್ತೆ ಸ್ಪೋಟಕ ಭವಿಷ್ಯ ನುಡಿದಿದ್ದು, ಸಿಎಂ ಸಿದ್ದರಾಮಯ್ಯ ಬಗ್ಗೆ ಭವಿಷ್ಯ ಹೇಳಿದ ಸ್ವಾಮೀಜಿಗಳು ಅವರಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ತಿಳಿಸಿದರು. ಮುಂದಿನ 6 ತಿಂಗಳ ಬಗ್ಗೆ ಭವಿಷ್ಯ ಸಂಸದ ವಿ ಸೋಮಣ್ಣ ಅವರು ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಭವಿಷ್ಯ ನುಡಿದಿದ್ದು, ನಿರೀಕ್ಷೆಗೂ ಮೀರಿ ನೋವು ಭಾರತವನ್ನ ಕಾಡಲಿದೆ ಎಂದು ಹೇಳಿದ್ದಾರೆ. ಅದರ ಜೊತೆಗೆ ರಾಜಕೀಯದಲ್ಲಿ ನಿರೀಕ್ಷೆ ಮಾಡದ ರೀತಿಯಲ್ಲಿ ಬದಲಾವಣೆ ಆಗಲಿದೆ ಎಂದು ಭವಿಷ್ಯ ಹೇಳಿದ್ದಾರೆ. ಸೋಳೆಯಾ ಮಗನುಟ್ಟಿ, ಆಳುವನು ಮುನಿಪುರವ. ಯುದ್ದವಿಲ್ಲದೆ ಮಡಿಯೆ ಪುರವೆಲ್ಲ ಕೂಳಾದೀತು ಎಂದು ಗೂಡಾರ್ಥವಾಗಿ ಹೇಳಿದ್ದು, ಇದರ ಅರ್ಥ ಮುಂದಿನ ದಿನಗಳಲ್ಲಿ ಹೇಳುವುದಾಗಿ ಕುತೂಹಲ ಹುಟ್ಟಿಸಿದ್ದಾರೆ. ಸಿಎಂ ಬಗ್ಗೆ ಭವಿಷ್ಯ ನುಡಿದ ಸ್ವಾಮೀಜಿ ಸಿಎಂ ಸಿದ್ದರಾಮಯ್ಯ ಬಗ್ಗೆ ಭವಿಷ್ಯ ಹೇಳಿದ ಸ್ವಾಮೀಜಿಗಳು ಅವರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಈ ಬಾರಿ ಮಳೆ ಹೆಚ್ಚಾಗುವುದರಿಂದ ಜಲಸ್ಫೋಟ…

Read More

ಚಾಮರಾಜನಗರ : ನಿನ್ನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹಳೇ ಹಂಪಾಪುರದಲ್ಲಿ ಹೂತು ಹಾಕಿದ್ದ ಶವದ ಮುಂಗೈ ಹೊರಬಂದ ಘಟನೆ ನಡೆದಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಹಳೆ ಹಂಪಾಪುರ ಬಳಿ ಹೂತಿದ್ದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಇಬ್ಬರು ಮಕ್ಕಳ ತಾಯಿಯನ್ನು ಪ್ರಿಯಕರ ಮಾದೇಶ ಕೊಂದುಹಾಕಿ ಹೂತು ಹಾಕಿದ್ದ ಎನ್ನಲಾಗಿದೆ. ಹೌದು ಪ್ರಿಯಕರ ಮಾದೇಶ ಮಹಿಳೆಯನ್ನು ಕೊಂದು 2 ಅಡಿ ಮಣ್ಣಲ್ಲಿ ಹೂತಿದ್ದ. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಹಳೆ ಹಂಪಾಪುರ ಗ್ರಾಮದಲ್ಲಿ ಮೊಳೆ ನಿವಾಸಿ ಸೋನಾಕ್ಷಿ ತಲೆಗೆ ಹೊಡೆದು ಪ್ರಿಯಕರ ಮಾದೇಶ ಕೊಂದಿದ್ದ. ಪ್ರೇಯಸಿ ಸೋನಾಕ್ಷಿ ಕೊಂದು ಪ್ರಿಯಕರ ಮಾದೇಶ ಶವವನ್ನು 2 ಅಡಿ ಗುಂಡಿ ತೋಡಿ ಹೂತಿದ್ದ ಎನ್ನಲಾದೆ. ಎರಡು ಮಕ್ಕಳನ್ನು ಬಿಟ್ಟು ಸೋನಾಕ್ಷಿ ಮಾದೇಶನ ಜೊತೆಗೆ ಬಂದಿದ್ದಳು. ಕೆಲ ದಿನಗಳ ಕಾಲ ಮಾದೇಶನ ಜೊತೆಗೆ ನಂತರ ಮಾದೇಶನಿಗೆ ಕೈಕೊಟ್ಟು ಮತ್ತೊಬ್ಬನ ಜೊತೆಗೆ ಓಡಿಹೋಗಿದ್ದಳು. ಬಳಿಕ ಮೈಸೂರು ಜಿಲ್ಲೆಯ ಟಿ…

Read More

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸಾಮಾಜಿಕ ಕಾರ್ಯಕರ್ತ ಟಿಜೆ ಅಬ್ರಾಹಾಂ ದಾಖಲಿಸಿದ ಮಾನನಷ್ಟ ಮೊಕದ್ದಮೆಯನ್ನು ಕೋರ್ಟ್ ಇದೀಗ ವಜಾಗೊಳಿಸಿದೆ. ಬೆಂಗಳೂರಿನ 42ನೇ ACJM ಕೋರ್ಟ್ ನ ಜಡ್ಜ್ ಕೆ.ಎನ್ ಶಿವಕುಮಾರ್ ಶಿವಕುಮಾರ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ಮುಡಾ ಪ್ರಕರಣ ದಾಖಲಿಸಿದ ಬಳಿಕಟ್ಟಿದೆ ಅಬ್ರಹಾಮ ವಿರುದ್ಧ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ನನ್ನ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಅಬ್ರಹಾಂ ದೂರು ದಾಖಲಿಸಿದ್ದರು.ಇದೀಗ ಇಂದು ವಿಚಾರಣೆ ನಡೆಸಿದ ಜಡ್ಜ್ ಕೆ.ಎನ್ ಶಿವಕುಮಾರ್ ಅವರು CM ಸಿದ್ದರಾಮಯ್ಯ ವಿರುದ್ಧದ ಮಾನನಷ್ಟ ಮೊಕದ್ದಮೆಯನ್ನು ವಜಾಗೊಳಿಸಿ ಆದೇಶಿಸಿದರು.

Read More