Author: kannadanewsnow05

ನವದೆಹಲಿ : ಭಾರತದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ 8 ಉಗ್ರರನ್ನು ಬಂಧಿಸಲಾಗಿದೆ. ಪಾಕಿಸ್ತಾನದ ISI ಮತ್ತು ಬಾಂಗ್ಲಾ ಮೂಲದ ಉಗ್ರ ಸಂಘಟನೆಗಳ ನೆರವು ಹಿನ್ನೆಲೆಯಲ್ಲಿ ದೇಶದ ವಿವಿಧಡೆ ಭಾಮ ಸ್ಫೋಟಕ್ಕೆ ಎಂಟು ಉಗ್ರರು ಸಂಜು ರೂಪಿಸಿದ್ದರು ಇದೀಗ ಅವರನ್ನು ಅರೆಸ್ಟ್ ಮಾಡಲಾಗಿದೆ. ತಮಿಳುನಾಡು ಮತ್ತು ಪಶ್ಚಿಮಬಂಗಾಳದಲ್ಲಿ ಜಂಟಿ ಕಾರ್ಯಚರಣೆಯಲ್ಲಿ ಅರೆಸ್ಟ್ ಮಾಡಲಾಗಿದೆ. ತಿರುಪ್ಪುರನ್ ಗಾರ್ಮೆಂಟ್ಸ್ ನಲ್ಲಿ ಕೆಲಸಕ್ಕೆ ಇದ್ದರು. ಪಶ್ಚಿಮ ಬಂಗಾಳದ ವಿವಿಧ ಭಾಗಗಳಲ್ಲಿ ಇಬ್ಬರು ಸಂಚುಕೋರರು ಅರೆಸ್ಟ್ ಆಗಿದ್ದಾರೆ. ದೆಹಲಿ ಕೆಂಪುಕೋಟೆ, ಚಾದನಿ ಚೌಕ್ ದೇಗುಲ ಮೇಲೆ ದಾಳಿಗೆ ಪ್ಲಾನ್ ಮಾಡಿದ್ದರು. ಬಾಂಗ್ಲಾದಲ್ಲಿ ಇದ್ದುಕೊಂಡು ನಿರ್ದೇಶನ ನೀಡುತ್ತಿದ್ದ ಕಾಶ್ಮೀರಿ ಹ್ಯಾಂಡ್ಲರ್. ಪ್ರಮುಖ ಸ್ಥಳಗಳಲ್ಲಿ ಫ್ರೀ ಕಾಶ್ಮೀರ ಪೋಸ್ಟರ್ ಅಂಟಿಸಿದ್ದರು. ದೆಹಲಿಯ ಮೆಟ್ರೋ ಮತ್ತು ಪ್ರಮುಖ ಸ್ಥಳಗಳಲ್ಲಿ ಫ್ರೀ ಕಾಶ್ಮೀರ ಪೋಸ್ಟರ್ ಅಂಟಿಸಿದ್ದರು. ಬಂಧಿತ ಉಗ್ರರ ಬಳಿ ಇದ್ದ 8 ಮೊಬೈಲ್ ಗಳು 16 ಸಿಂಬಳನ್ನು ವಶಕ್ಕೆ ಪಡೆದಿದ್ದಾರೆ. ಲಷ್ಕರ್-ಎ-ತೈಬಾ ಸಂಘಟನೆ ಸಂಪರ್ಕ ಹೊಂದಿದ್ದ ಆರೋಪಿಗಳು ದೆಹಲಿ ಪೊಲೀಸರ ವಿಶೇಷ…

Read More

ಭರತ ಹುಣ್ಣುಮೆ ಪ್ರಯುಕ್ತ ಜಗನ್ಮಾತೆ ಶ್ರೀ ರೇಣುಕ ಎಲ್ಲಮ್ಮ ದೇವಿಯು ಎಲ್ಲ ಭಕ್ತರ ಮಾತೆಯಾಗಿ ಎಲ್ಲರಿಗೆ ಅಮ್ಮನಾಗಿರುವದರಿಂದ “ಎಲ್ಲರ ಅಮ್ಮ ಯಲ್ಲಮ್ಮ” ಅಂತಾ ರೂಢನಾಮದೊಂದಿಗೆ ಪ್ರಖ್ಯಾತಳಾಗಿ ದಕ್ಷಿಣ ಭಾರತದ ಪ್ರಮುಖ ಶಕ್ತಿ ಕೇಂದ್ರವಾಗಿ ಭಕ್ತರ ಆರಾಧ್ಯ ದೇವತೆಯಾಗಿ ಭಕ್ತರ ಕಾಮಧೇನುವಾಗಿ ಇಷ್ಟಾರ್ಥ ಸಿದ್ಧಿಗಳನ್ನು ನೀಡುವ ಕರುಣಾಮಯಿ ತಾಯಿಯಾಗಿರುತ್ತಾಳೆ. ಇತಿಹಾಸ ಕಾಮಧೇನುವಿನ ವೈಶಿಷ್ಟ್ಯ ನೋಡಿ ಅದನ್ನು ಪಡೆಯುವ ದುರಾಸೆಯಿಂದ ಮಹಿಸ್ಪತಿ ನಗರದ ಅರಸು ಕಾರ್ತವೀರ್ಯಾರ್ಜುನ ರಾಜನು ಶ್ರೀ ಜಮದಗ್ನಿ ಋಷಿಗಳ ಮೇಲೆ ೨೧ ಸಲ ಘೋರವಾದ ಹೊಡೆತದ ಕೊಟ್ಟು ಹತ್ಯೆ ಮಾಡಿ ಕಾಮಧೇನು ಪಡೆಯಲು ಹೋದಾಗ ಅದು ಮಾಯವಾಗಿ ಬಿಡುತ್ತವೆ. ಕಾರ್ತವೀರ್ಯಾರ್ಜುನನು ಬರಿಗೈಯಿಂದ ಹಿಂತಿರುಗುತ್ತಾನೆ. ಶ್ರೀ ಜಮದಗ್ನಿ ಋಷಿಗಳ ಮಗನಾದ ರಾಮಭದ್ರನು ಮಾತೃಹತ್ಯೆ ವಿಮೋಚನೆಯಿಂದ ಮುಕ್ತನಾಗಿ ಶಿವನಿಂದ ಪರಶು ಅಸ್ತ್ರವನ್ನು ಪಡೆದು ಪರಶುರಾಮನೆಂದು ಖ್ಯಾತಿಹೊಂದಿ, ಶ್ರೀ ಪಾರ್ವತಿಯನ್ನು ಒಲಿಸಿಕೊಂಡು ಅಂಬಿಕಾಸ್ತ್ರವನ್ನು ಪಡೆದು ಪರಮ ಪರಾಕ್ರಮಿ ಎಂದೆನಿಸಿಕೊಳ್ಳುತ್ತಾನೆ. ಶ್ರೀ ಜಮದಗ್ನಿ ಋಷಿಯ ಆಶ್ರಮದಲ್ಲೆಲ್ಲಾ ಸ್ಮಶಾನ ಮೌನ ಆವರಿಸಿ ರೇಣುಕಾ ದೇವಿಯು ಜಮದಗ್ನಿ ಋಷಿಯ ಮೇಲೆ…

Read More

ಬೆಂಗಳೂರು : ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ. 16 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜುಗಳಲ್ಲಿ ಮೊಬೈಲ್ ಬ್ಯಾನ್ ಮಾಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಇದಕ್ಕಾಗಿ ಇಂದು ನಡೆದ ಸರ್ಕಾರಿ ವಿಶ್ವವಿದ್ಯಾಲಯಗಳ ಕುಲಪತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿದ್ದರಾಮಯ್ಯ ಅವರು ಕುಲಪತಿಗಳ ಅಭಿಪ್ರಾಯ ಕೇಳಿದ್ದಾರೆ. ಸಿಎಂ ಪ್ರಸ್ತಾಪಕ್ಕೆ ವಿವಿ ಕುಲಪತಿಗಳೂ ಒಪ್ಪಿಗೆ ಸೂಚಿಸಿದ್ದಾರೆ. ಸಣ್ಣ ವಯಸ್ಸಿನ ಮಕ್ಕಳಲ್ಲಿ ಮೊಬೈಲ್‌, ಸೋಷಿಯಲ್ ಮೀಡಿಯಾ ಗೀಳು ದಿನೇ ದಿನೆ ಹೆಚ್ಚುತ್ತಿದೆ. ಪಾಠ-ಆಟ-ಊಟದ ಕಡೆಗಿನ ಆಸಕ್ತಿ ಕಡಿಮೆಯಾಗಿ ಮೊಬೈಲ್ ಲೋಕದಲ್ಲಿ ಮುಳುಗಿ ಹೋಗಿದ್ದಾರೆ. ಹಿಂದೆಲ್ಲಾ ಮಕ್ಕಳಿಗೆ ಚಂದಮಾಮನನ್ನ ತೋರಿಸಿ ಊಟ ಮಾಡಿಸುತ್ತಿದ್ದರು. ಶಾಲೆಯಲ್ಲಿ ಮಕ್ಕಳು ಪಾಠಪ್ರವಚನ, ಕ್ರೀಡೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಿದ್ದರು. ಆದರೆ, ಈಗ ಮೊಬೈಲ್, ಆನ್‌ಲೈನ್ ಗೇಮಿಂಗ್, ಸೋಷಿಯಲ್ ಮೀಡಿಯಾ ಇವುಗಳೇ ಅವರ ಪ್ರಪಂಚವಾಗಿಬಿಟ್ಟಿದೆ. ಇದು ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹಾಗಾಗಿ ಇಂದಿನ ದಿನಗಳಲ್ಲಿ ಯುವಜನರು ಡ್ರಗ್ಸ್‌ಗೆ ಬಲಿಯಾಗುತ್ತಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳಿಗೆ ಮೊಬೈಲ್ ಬ್ಯಾನ್ ಮಾಡುವ ಚಿಂತನೆ…

Read More

ತುಮಕೂರು : ರಾಜ್ಯದಲ್ಲಿ ಬೆಚ್ಚಿ ಬೀಳಿಸುವಂತಹ ಕೊಲೆಯಾಗಿದ್ದು, ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಹತ್ಯೆಯ ಬಳಿಕ ವ್ಯಕ್ತಿಯ ಮರ್ಮಾಂಗ ಕತ್ತರಿಸಿ ದುಷ್ಕರ್ಮಿಗಳು ವಿಕೃತಿ ಮೆರೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಈ ಒಂದು ಬರ್ಬರವಾದ ಹತ್ಯೆ ನಡೆದಿದೆ. ಗ್ರಾಮದ ಬಳಿ ಮೆಕ್ಕೆಜೋಳ ಗದ್ದೆಯಲ್ಲಿ ಕಲ್ಮೇಶ್ ಕೋಟಿ (50) ಭೀಕರವಾಗಿ ಕೊಲೆಯಾಗಿದ್ದಾರೆ. ಕಲ್ಮೇಶ ಹತ್ಯೆಯ ಬಳಿಕ ಮರ್ಮಾಂಗ ಕತ್ತರಿಸಿರುವ ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ. ತುಮಕೂರಿನಲ್ಲಿ ಹೋಂ ಕೇರ್ ನಲ್ಲಿ ಕಲ್ಮೇಶ್ ಕೋಟಿ ಕೆಲಸ ಮಾಡುತ್ತಿದ್ದರು. ಹತ್ತು ದಿನಗಳ ಹಿಂದೆ ಅಷ್ಟೇ ಕಲ್ಮೇಶ್ ಗ್ರಾಮಕ್ಕೆ ಬಂದಿದ್ದರು. ಕೊಲೆಯಾದ ಕಲ್ಮೇಶ್ ಕೋಟಿ ವಿರುದ್ಧ ತಾಯಿಯೊಂದಿಗೆ ವಾಸವಿದ್ದ. 10 ವರ್ಷಗಳ ಹಿಂದೆ ಕಲ್ಮೇಶ್ ಪತ್ನಿ ಕೂಡ ಬಿಟ್ಟು ಹೋಗಿದ್ದಳು. ಕೊಲೆ ವಿಚಾರ ತಿಳಿದು ಗ್ರಾಮಕ್ಕೆ ಪತ್ನಿ ಹಾಗೂ ಮಗ ಆಗಮಿಸಿದ್ದಾರೆ. ಘಟನೆಯಿಂದ ಹಿರೇನಂದಿಹಳ್ಳಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಎಸ್ ಪಿ ರಾಮರಾಜನ್ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿದ್ದಾರೆ. ಹಣಕಾಸು, ಆಸ್ತಿ…

Read More

ಪುಣೆ : ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶರತ್ ಪವರ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ಇದೀಗ ಇಂದು ಅವರು ಮತ್ತೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಅನಾರೋಗ್ಯ ಹಿನ್ನೆಲೆಯಲ್ಲಿ ಪುಣೆಯ ಖಾಸಗಿ ಆಸ್ಪತ್ರೆಗೆ ಶರತ್ ಪವರ್ ಅವರು ದಾಖಲಾಗಿದ್ದಾರೆ. ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ನಿಧನದ ನಂತರ, ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರು ಮತ್ತು ಪದಾಧಿಕಾರಿಗಳಿಗೆ ಆಧಾರವಾಗಿರುವ ಶರದ್ ಪವಾರ್ ಅವರ ಆರೋಗ್ಯ ಮತ್ತೆ ಹದಗೆಟ್ಟಿದೆ. ಈ ಕಾರಣದಿಂದಾಗಿ, ಶರದ್ ಪವಾರ್ ಅವರನ್ನು ಮತ್ತೊಮ್ಮೆ ಚಿಕಿತ್ಸೆಗಾಗಿ ಪುಣೆಯ ರೂಬಿ ಹಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಶರದ್ ಪವಾರ್ ಸ್ವಲ್ಪ ನಿಶ್ಯಕ್ತಿ ಅನುಭವಿಸುತ್ತಿದ್ದಾರೆ. ಅವರ ದೇಹದಲ್ಲಿ ನೀರಿನ ಮಟ್ಟ ಕಡಿಮೆ ಇರುವುದರಿಂದ ಅವರು ನಿಶ್ಯಕ್ತಿ ಅನುಭವಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ದರಿಂದ, ರೂಬಿ ಆಸ್ಪತ್ರೆಯಲ್ಲಿ ಅವರಿಗೆ ಸಲೈನ್ ನೀಡಲಾಗುವುದು ಎಂದು ತಿಳಿದುಬಂದಿದೆ. ನಿಶ್ಯಕ್ತಿ ಹೊರತುಪಡಿಸಿ, ಶರದ್ ಪವಾರ್ ಅವರ ಸ್ಥಿತಿ ಸಂಪೂರ್ಣವಾಗಿ ಸ್ಥಿರವಾಗಿದೆ.

Read More

ರಾಯಚೂರು : ನಗರದ ಎಲ್ ಬಿ ಎಸ್ ನಗರದಲ್ಲಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಅವಧಿ ಇರುವ ಔಷಧಿಗಳನ್ನು ತಿಪ್ಪೆಯಲ್ಲಿ ಬಿಸಾಡಿ ಹೋಗಿರುವ ಘಟನೆ ವರದಿಯಾಗಿದೆ. ಹೌದು ರಾಯಚೂರಿನಲ್ಲಿ ಸರ್ಕಾರಿ ಆಸ್ಪತ್ರೆಯ ಔಷಧಿಗಳು ತಿಪ್ಪೆ ಸೇರಿವೆ. ಅವಧಿ ಇರುವ ಔಷಧಿಗಳನ್ನು ಸಿಬ್ಬಂದಿಗಳು ತಿಪ್ಪೆಗೆ ಬಿಸಾಡಿದ್ದಾರೆ. ತಿಪ್ಪೆಯಲ್ಲಿನ ಸರ್ಕಾರಿ ಔಷಧಗಳು ಕಂಡು ಸ್ಥಳೀಯರು ಶಾಕ್ ಆಗಿದ್ದಾರೆ. ಅವಧಿ ಇರುವ ಲಕ್ಷಾಂತರ ರೂಪಾಯಿ ಮೌಲ್ಯದ ವಿವಿಧ ಬಗೆಯ ಸಿರಪ್ ಗಳು ಕಂಡು ಬಂದಿವೆ. ರಾಯಚೂರಿನ ಎಲ್ ಬಿ ಎಸ್ ನಗರದ ಸ್ಮಶಾನದ ಬಳಿಯ ತಿಪ್ಪೆಯಲ್ಲಿ ಪತ್ತೆಯಾಗಿದೆ. ಕ್ರಮಕ್ಕೆ ಸ್ಥಳೀಯರು ಒತ್ತಾಯಿಸಿದ್ದಾರೆ.

Read More

ಚಿಕ್ಕಮಗಳೂರು : ಚಿಕ್ಕಮಗಳೂರಲ್ಲಿ ಕಾಡಾನೆ ಉಪಟಳ ನಿಂತಿಲ್ಲ ಇದೀಗ ಕಾಡಾನೆದೊಳಗೆ ಮತ್ತೊಂದು ಬಲಿಯಾಗಿದೆ. ಹೌದು, ಕಾಡಾನೆ ದಾಳಿಗೆ ಹೊಸಪೇಟೆ ಮೂಲದ ಬೋರಮ್ಮ (34) ಇದ್ದಾರೆ. ಚಿಕ್ಕಮಗಳೂರು ತಾಲೂಕಿನ ಪುರ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ನಾಗೇಶ ಗೌಡಗೆ ಸೇರಿದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಕಾಡಾನೆ ದಾಳಿ ಮಾಡಿದೆ. ಏಳು ದಿನದ ಹಿಂದೆಯೂ ನಾಗೇಶಗೌಡ ತೋಟದಲ್ಲಿಯೇ ಕಾಡಾನೆ ದಾಳಿ ಮಾಡಿತ್ತು. ಕಾಡಾನೆ ದಾಳಿಗೆ ಬಲಿಯಾಗಿದ್ದ ಹಾವೇರಿ ಮೂಲದ ಕಾರ್ಮಿಕ ಯಲ್ಲಪ್ಪ. ಒಂದೆಡೆ ಕಾಡಾನೆ ಸೆರಿಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದ್ದರೆ, ಮತ್ತೊಂದು ಕಡೆ, ಕಾರ್ಮಿಕ ಮಹಿಳೆಯನ್ನು ಬಳಿ ಪಡೆದಿದೆ. ಕಾಡಾನೆ ಸರಿಗೆ ಏಳು ಕುಮ್ಕಿ ಆನೆಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಕಾರ್ಯಾಚರಣೆ ವೇಳೆ ದಾಳಿ ಮಾಡಿ ಮಹಿಳೆಯನ್ನು ಬಳಿ ಪಡೆದ ಕಾಡಾನೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Read More

ಬೆಂಗಳೂರು : ನಕಲಿ ಇನ್ಸ್ಟಾಗ್ರಾಮ್ ಖಾತೆ ತೆರೆದು ಮಹಿಳೆಯರಿಗೆ ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ ಪಿ ಎಸ್ ಐ ಹನುಮೇಶ್ ವಿರುದ್ಧ ಹಿರಿಯ ಅಧಿಕಾರಿಗಳಿಗೆ ಈ ಕುರಿತು ದೂರು ನೀಡಲಾಗಿದೆ. ಬೆಂಗಳೂರಿನ ಮಹದೇವಪುರ ಠಾಣೆಯ ಪಿಎಸ್ಐ ಹನುಮೇಶ್ ನಕಲಿ ಇನ್ಸ್ಟಾಗ್ರಾಮ್ ಖಾತೆ ತೆರೆದು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಮಹಿಳೆಯರಿಗೆ ಲೈಂಗಿಕ ದೌರ್ಜನ್ಯಸೆಗಿರುವ ಆರೋಪದಲ್ಲಿ ಇದೀಗ ದೂರು ನೀಡಲಾಗಿದೆ. ಕಾನ್ಸ್ಟೇಬಲ್ ಪತ್ನಿಗೆ ಲೈಂಗಿಕ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ದೂರು ಸಲ್ಲಿಸಲಾಗಿದೆ. ವೈಟ್‌ಫೀಲ್ಡ್ ಉಪವಿಭಾಗದ ಎಸಿಪಿ ಯಿಂದ ಪ್ರಕರಣದ ವಿಚಾರಣೆ ನಡೆಯುತ್ತಿದೆ. ನಕಲಿ ಖಾತೆ ತೆರೆದು ಕ್ವಾಟರ್ಸ್ ಮಹಿಳೆಯರಿಗೆ ಪಿಎಸ್ಐ ಹನುಮೇಶ್ ಮೆಸೇಜ್ ಮಾಡುತ್ತಿದ್ದ ಎನ್ನುವ ಆರೋಪ ಕೇಳಿಬಂದಿದೆ.

Read More

ಮಂಡ್ಯ : ಮಾಜಿ ಶಾಸಕ ಸುರೇಶ್ ಗೌಡ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ. ಮಂಡ್ಯ ಜಿಲ್ಲೆಯ ಬೊಂತೆಕೊಪ್ಪಲು ಸಮೀಪ ನಿನ್ನೆ ರಾತ್ರಿ ಒಂದು ಅಪಘಾತ ನಡೆದಿದೆ.ಅದೃಷ್ಟವಶಾತ್ ಅಪಘಾತದಲ್ಲಿ ಮಾಜಿ ಶಾಸಕ ಸುರೇಶ್ ಗೌಡ ಪ್ರಾಣಪಾಯದಿಂದ ಪಾರಾಗಿದ್ದಾರೆ. ಸುರೇಶ ಗೌಡ ಮಂಡ್ಯ ಜಿಲ್ಲೆಯ ನಾಗಮಂಗಲ ಕ್ಷೇತ್ರದ ಮಾಜಿ ಶಾಸಕರಾಗಿದ್ದಾರೆ. ಪಕ್ಷದ ಕಾರ್ಯಕರ್ತರ ಮದುವೆಗೆ ಸುರೇಶ್ ಗೌಡ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಅಪಘಾತದ ರಭಸಕ್ಕೆ ಭಾಗಶಹ ಕಾರು ಜಖಂಗೊಂಡಿದೆ. ಸುರೇಶ್ ಗೌಡ ಕೈಗೆ ಪೆಟ್ಟಾಗಿದ್ದು, ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ತಕ್ಷಣ ಗನ್ ಮ್ಯಾನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುರೇಶ್ ಗೌಡರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.

Read More

ಮೈಸೂರು : ಮಹಿಳೆಯರ ಮುಂದೆ ಶಿಕ್ಷಕ ಮೂತ್ರ ವಿಸರ್ಜನೆ ಮಾಡುತ್ತಿದ್ದ ಆರೋಪ ಹಿನ್ನೆಲೆಯಲ್ಲಿ, ಇದನ್ನು ಪ್ರಶ್ನಿಸಿದ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಸಿಎಂ ಗೋಪಾಲ್ ಮತ್ತು ಆತನ ಪುತ್ರ ಅಭಿಷೇಕಗೆ ಚಾಕು ಇರಿಲಾಗಿದೆ. ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಸಿಎಂ ಮಂಜುನಾಥನಿಂದ ಈ ಒಂದು ಕೃತ್ಯ ನಡೆದಿದೆ. ಸಿಎಂ ಗೋಪಾಲ ಸ್ಥಿತಿ ಗಂಭೀರವಾಗಿದ್ದು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿಕ್ಷಕ ಮಂಜುನಾಥನನ್ನು ಸಾಲಿಗ್ರಾಮ ಪೊಲೀಸರು ಇದೀಗ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಶಿಕ್ಷಕ ಮಂಜುನಾಥನನ್ನು ಅಮಾನತು ಮಾಡಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ.

Read More