Author: kannadanewsnow05

ಬೆಂಗಳೂರು : ಇಂದಿನಿಂದ ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ನಡೆಯಲಿರುವ ಏರ್ ಶೋ ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದ್ದಾರೆ. ಈ ಒಂದು ಏರ್ ಶೋ ಕಾರ್ಯಕ್ರಮದಲ್ಲಿ ರಕ್ಷಣಾ ಇಲಾಖೆಯು ನಟ ಪುನೀತ್ ರಾಜಕುಮಾರ್ ಅವರ ಯುವರತ್ನ ಸಿನೆಮಾದ ‘ಪವರ್ ಆಫ್ ಯೂಥ್’ ಎಂಬ ಹಾಡನ್ನು ಪ್ಲೇ ಮಾಡಿತು. ಹೌದು ಇಂದಿನಿಂದ ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ಏರ್ ಶೋ 2025ಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಿದ್ದು, ರಕ್ಷಣಾ ಸಚಿವರು ಬರುತ್ತಿದ್ದಂತೆ ಭಾರತದ ಯುದ್ಧ ವಿಮಾನಗಳ ಹಾರಾಟ ಆರಂಭವಾಯಿತು. ಮುಖ್ಯ ವೇದಿಕೆ ಮುಂಭಾಗದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಸೀನರಾಗಿದ್ದು, ಈ ವೇಳೆ ಡಿಸಿಎಂ ಡಿ.ಕೆ. ಶಿವಕುಮಾರ್, ವಾಯು ಸೇನೆಯ ಮುಖ್ಯಸ್ಥರು ಸೇರಿದಂತೆ ಹಲವರು ಗಣ್ಯರು ಭಾಗಿಯಾಗಿದ್ದಾರೆ. ವಿಮಾನಗಳ ಹಾರಾಟ ಆರಂಭವಾಗುತ್ತಿದ್ದಂತೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ ನಟನೆಯ ಯುವರತ್ನ ಸಿನಿಮಾದ ‘ಪವರ್ ಆಫ್ ಯೂಥ್’ ಹಾಡು ಹಾಕಿದ ರಕ್ಷಣಾ ಇಲಾಖೆ, ಫೆಬ್ರವರಿ 10…

Read More

ಮಧ್ಯಪ್ರದೇಶ : ಇತ್ತೀಚಿಗೆ ಈ ಹೃದಯಾಘಾತ ಎನ್ನುವುದು ಸಾಮಾನ್ಯವಾಗಿದೆ. ಚಿಕ್ಕ ಮಕ್ಕಳಿಂದ, ವಯೋ ವೃದ್ಧರು ಸಹ ಈ ಒಂದು ಹಾರ್ಟ್ ಅಟ್ಯಾಕ್ ಗೆ ಬಲಿಯಾಗುತ್ತಿದ್ದಾರೆ. ಇದೀಗ ಮಧ್ಯಪ್ರದೇಶದಲ್ಲಿ ಕೂಡ ಅಂದೆ ಘಟನೆ ನಡೆದಿದ್ದು, ಸಹೋದರಿಯ ಮದುವೆಯಲ್ಲಿ ವೇದಿಕೆ ಮೇಲೆ ಕುಣಿಯುತ್ತಲೇ ಕುಸಿದು ಬಿದ್ದು ಹಾರ್ಟ್ ಅಟ್ಯಾಕ್ ಆಗಿ ಯುವತಿ ಸಾವನಪ್ಪಿದ್ದಾಳೆ. ಹೌದು ಸಹೋದರಿಯ ಮದುವೆ ಸಂಭ್ರಮದಲ್ಲಿ ನೃತ್ಯ ಮಾಡುವಾಗಲೇ ಹಾರ್ಟ್​​​​​ ಅಟ್ಯಾಕ್​​​​ಗೆ ಬಲಿಯಾಗಿರುವ ಘಟನೆ ಮಧ್ಯಪ್ರದೇಶದ ವಿದಿಶಾ ಎಂಬಲ್ಲಿ ನಡೆದಿದೆ.ಅಂದಾಜು 25 ವರ್ಷದ ಯುವತಿಯು, ಹಿಂದಿ ಗೀತೆಗೆ ಡ್ಯಾನ್ಸ್ ಮಾಡುವಾಗಲೇ ಹೃದಯಾಘಾತವಾಗಿದೆ. ಈ ವೇಳೆ ವೇದಿಕೆ ಮೇಲೆ ಏಕಾಏಕಿ ಕುಸಿದು ಬಿದ್ದಿದ್ದಾಳೆ. ಕೂಡಲೇ ಅಲ್ಲಿದ್ದ ಸಂಬಂಧಿಕರು ಆಕೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಯುವತಿಯ ಪ್ರಾಣ ವೇದಿಕೆಯಲ್ಲಿ ಹೃದಯಾಘಾತವಾಗಿ ಬಿದ್ದಾಗಲೇ ಸಾವಾಗಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಯುವತಿ ಡ್ಯಾನ್ಸ್ ಮಾಡುತ್ತಲೇ ಸಾವನ್ನಪ್ಪಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. https://twitter.com/TeluguScribe/status/1888587997026607401?t=1jEYu-MSyzLnjeU74C-9Bg&s=19

Read More

ಚಿಕ್ಕಮಗಳೂರು : ಚಿಕ್ಕಮಂಗಳೂರಿನಲ್ಲಿ ಇಂದು ಭೀಕರವಾದಂತಹ ಅಪಘಾತ ಸಂಭವಿಸಿದ್ದು ಕೂಲಿ ಕಾರ್ಮಿಕರನ್ನು ಹೊತ್ತು ತೆರಳುತ್ತಿದ್ದ ಟ್ರಾಕ್ಟರ್ ಒಂದು, ನಿಯಂತ್ರಣ ಕಳೆದುಕೊಂಡು 20 ಅಡಿ ಆಳಕ್ಕೆ ಬಿದ್ದ ಪರಿಣಾಮ, ಟ್ರ್ಯಾಕ್ಟರ್ ನಲ್ಲಿದ್ದ ಸುಮಾರು 40 ಕಾರ್ಮಿಕರ ಪೈಕಿ 10ಕ್ಕೂ ಹೆಚ್ಚು ಕೂಲಿ ಕಾರ್ಮಿಕರಿಗೆ  ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ತೀರ್ಥಕೆರೆ ಬಳಿ ಈ ಒಂದು ಅಪಘಾತ ಸಂಭವಿಸಿದ್ದು, ಚಾಲಕನ ನಿಯಂತ್ರಣ ತಪ್ಪಿ 20 ಅಡಿ ಆಳಕ್ಕೆ ಟ್ರ್ಯಾಕ್ಟರ್ ಬಿದ್ದಿದೆ. ತೀರ್ಥಕೆರೆ ಸಮೀಪದ ಎಸ್ಟೇಟ್ ನಲ್ಲಿ ಕೂಲಿ ಕಾರ್ಮಿಕರು ಕೆಲಸಕ್ಕೆ ಇದ್ದರು. ಕೆಲಸ ಮುಗಿದ ಬಳಿಕ ದಿನಸಿ ಖರೀದಿಸಿ ಜಯಪುರದಿಂದ ಕಾರ್ಮಿಕರು ವಾಪಸ್ ಆಗುತ್ತಿದ್ದರು. ಈ ವೇಳೆ ಅಸ್ಸಾಂ ಸೇರಿದಂತೆ ಸ್ಥಳೀಯ 40 ಕಾರ್ಮಿಕರನ್ನು ಹೊತ್ತು ಟ್ರ್ಯಾಕ್ಟರ್ ತೆರಳುತ್ತಿತ್ತು. ಈ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಈ ವೇಳೆ 10ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಜಯಪುರ ಮತ್ತು ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.…

Read More

ಚಿಕ್ಕಮಗಳೂರು : ಮುತ್ತಿನ ಕೊಪ್ಪದ ನೀಲಗಿರಿ ಪ್ಲಾಂಟೇಶನ್ ನಲ್ಲಿ ಭಾರಿ ಅಗ್ನಿ ಅವಘಡ ಸಂಭವಿಸಿದೆ.ಚಿಕ್ಕಮಂಗಳೂರು ಜಿಲ್ಲೆಯ ಎನ್ಆರ್ ಪುರ ತಾಲೂಕು ಮುತ್ತಿನ ಕೊಪ್ಪ ನೀಲಗಿರಿ ಪ್ಲಾಂಟೇಶನ್ ನಲ್ಲಿ ಈ ಒಂದು ಭೀಕರವಾದ ಅಗ್ನಿ ದುರಂತ ಸಂಭವಿಸಿದೆ ಹೌದು ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಮುತ್ತಿನ ಕೊಪ್ಪದಲ್ಲಿ ಭಾರಿ ಅಗ್ನಿ ದುರಂತ ಸಂಭವಿಸಿದ್ದು, ನೀಲಿಗಿರಿ ಪ್ಲಾನೆಟ್ ನಲ್ಲಿರುವ ಸುಮಾರು 5 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಂಕಿ ಹತ್ತಿ ಉರಿಯುತ್ತಿದೆ. ಬೆಂಕಿ ನಂದಿಸಲು ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಹರಸಾಹಸ ಪಡುತ್ತಿದ್ದಾರೆ.ನೀಲಗಿರಿ ಪ್ಲಾಂಟೇಶನ್ ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ಇದೀಗ ವ್ಯಕ್ತವಾಗಿದೆ.

Read More

ಧಾರವಾಡ : ಪೋಕ್ಸೋ ಕೇಸಲ್ಲಿ ಅರೆಸ್ಟ್ ಆಗಿದ್ದಂತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕೋರ್ಟ್ ನೀಡಿತ್ತು. ಜೈಲಿಗೆ ಕರೆದೊಯ್ಯುತ್ತಿದ್ದಂತ ವೇಳೆ ಪೊಲೀಸರಿಂದ ತಪ್ಪಿಸಿಕೊಂಡ ಆರೋಪಿ ಮನೆ ಮೇಲೇರಿ ಆತ್ಮಹತ್ಯೆ ಮಾಡಿಕೊಳ್ಳೋ ಧಮ್ಕಿ ಹಾಕಿ ಹೈಡ್ರಾಮಾವನ್ನೇ ಮಾಡಿದ್ದನು.ಆದರೇ ಪೊಲೀಸರು ಮಾತ್ರ ಅಷ್ಟೇ ಜಾಣ್ಮೆ ಪ್ರದರ್ಶಿಸಿ ಆತನನ್ನು ಹಿಡಿದಿದ್ದಾರೆ. ಅದು ಹೇಗೆ ಅಂತ ಮುಂದೆ ಓದಿ. ಧಾರವಾಡದ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2021ರಲ್ಲಿ ವಿಜಯ್ ಉಣಕಲ್ ಎಂಬಾದ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿತ್ತು. ಆ ಬಳಿಕ ಜಾಮೀನು ಪಡೆದು ಹೊರಗಿದ್ದನು. ಆದರೇ ನಿರಂತರವಾಗಿ ಕೋರ್ಟ್ ಗೆ ಹಾಜರಾಗದ ಕಾರಣ ವಿಜಯ್ ಉಣಕಲ್ ವಿರುದ್ಧ ಜಾಮೀನು ರಹಿತ ಬಂಧನದ ವಾರೆಂಟ್ ಜಾರಿಗೊಳಿಸಲಾಗಿತ್ತು. ಕೋರ್ಟ್ ಆದೇಶದಿಂದಾಗಿ ವಿಜಯ್ ಉಣಕಲ್ ಅವರನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಲಾಗಿತ್ತು. ಈ ಪ್ರಕರಣದ ವಿಚಾರಣೆಯ ಬಳಿಕ ಕೋರ್ಟ್ ವಿಜಯ್ ಉಣಕಲ್ ಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಹೀಗಾಗಿ ಆರೋಪಿಯನ್ನು ಜೈಲಿಗೆ ಧಾರವಾಡ ಉಪನಗರ ಠಾಣೆಯ ಪೊಲೀಸರು ಕರೆದೊಯ್ಯುತ್ತಿದ್ದಾಗ ಕುಮಾರೇಶ್ವರ ಬಡಾವಣೆಯ ಬಳಿಯಲ್ಲಿ…

Read More

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರವಾದ ಮರ್ಡರ್ ಆಗಿದ್ದು, ಕೆಲಸ ಮಾಡುವ ವಿಚಾರಕ್ಕೆ ಇಬ್ಬರು ಕಾರ್ಮಿಕರ ನಡುವೆ ಗಲಾಟೆಯಾಗಿದ್ದು, ಓರ್ವ ಕಾರ್ಮಿಕನನ್ನು ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಬೆಂಗಳೂರಿನ ಸಂಪಿಗೆಹಳ್ಳಿಯ ಆಕಾಶವಾಣಿ ಲೇಔಟ್‌ನಲ್ಲಿ ನಡೆದಿದೆ. ಮೃತ ಕಾರ್ಮಿಕನನ್ನು ಸೈಯದ್ ಮೆಹಬೂಬ್ ಪಾಷ ಎಂದು ತಿಳಿದುಬಂದಿದ್ದು, ಇನ್ನು ಹತ್ಯೆಗೈದ ವ್ಯಕ್ತಿಯನ್ನು ಖಾನಿಯ ಎಂದು ತಿಳಿದುಬಂದಿದೆ. ಈ ಇಬ್ಬರು ಜೆಲ್ಲಿ, ಮರಳು ಟಾಟಾ ಏಸ್ ಗಾಡಿಗಳಿಗೆ ಲೋಡ್ ಮಾಡುವ ಕೆಲಸ ಮಾಡುತ್ತಿದ್ದರು. ಕಳೆದ ಕೆಲವು ವರ್ಷಗಳಿಂದ ರಾಜು ಎನ್ನುವ ವ್ಯಕ್ತಿ ಜೊತೆಗೂಡಿ ಮೃತ ಮೆಹಬೂಬ್ ಜೆಲ್ಲಿ, ಮರಳು ವ್ಯಾಪಾರ ಮಾಡುತ್ತಿದ್ದರು. ರಾಜು, ಮೆಹಬೂಬ್‌ಗೆ ಕರೆ ಮಾಡಿ ಬಾಡಿಗೆಯಿದೆ ಬಾ ಎಂದು ಕರೆದಿದ್ದ. 8:40ಕ್ಕೆ ಸ್ಥಳಕ್ಕೆ ಹೋಗಿದ್ದ ಮೆಹಬೂಬ್ ಖಾನ್ ಅಲ್ಲಿದ್ದ ಖಾನಿಯಾ ಎನ್ನುವ ಮತ್ತೊಬ್ಬ ಕಾರ್ಮಿಕ ಜೊತೆ ಗಲಾಟೆ ಮಾಡಿಕೊಂಡಿದ್ದಾರೆ. ಮಾತಿಗೆ ಮಾತು ಬೆಳೆದು ಸಿಮೆಂಟ್ ಚೀಲ ಕಟ್ ಮಾಡಲು ಬಳಸುತ್ತಿದ್ದ ಚಾಕುವಿನಿಂದ ಇರಿದು ಹತ್ಯೆ ಮಾಡಿ, ಖಾನಿಯಾ ಅಲ್ಲಿಂದ ಪರಾರಿಯಾಗಿದ್ದಾನೆ.ಸದ್ಯ ಸಂಪಿಗೆ ಹಳ್ಳಿ…

Read More

ಹೈದ್ರಾಬಾದ್ : ಕೇವಲ ಅಸ್ತಿಗಾಗಿ ದುಷ್ಟ ಮೊಮ್ಮಗನೊಬ್ಬ ತನ್ನ ತಾತನನ್ನೆ ಚಾಕುವಿನಿಂದ ಇರಿದು ಸುಮಾರು 70ಕ್ಕೂ ಹೆಚ್ಚು ಬಾರಿ ಚುಚ್ಚಿ ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹೈದರಾಬಾದ್​ನ​ ಪಂಜಗುಟ್ಟದಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ವೆಲ್ಜನ್​ ಗ್ರೂಪ್​ ಚೇರ್ಮನ್​ ಜನಾರ್ಧನ್​ ರಾವ್ (86) ಎಂದು ತಿಳಿದುಬಂದಿದೆ. ಕೊಲೆ ಮಾಡಿದ ಮೊಮ್ಮಗನನ್ನು ಕೀರ್ತಿತೇಜ್ (29) ಎಂದು ತಿಳಿದುಬಂದಿದೆ. ಕಳೆದ ಫೆ.6ರಂದು ಆರೋಪಿ ಕೀರ್ತಿ ತೇಜ್​ ತನ್ನ ತಾತ ಜನಾರ್ಧನ್​ ರಾವ್​ಗೆ ಬರೋಬ್ಬರಿ 73 ಬಾರಿ ಚಾಕುವಿನಿಂದ ಇರಿದಿದ್ದ. ಹೈದರಾಬಾದ್​ನ​ ಪಂಜಗುಟ್ಟದಲ್ಲಿ ಈ ಘಟನೆ ನಡೆದಿತ್ತು. ತೀವ್ರ ರಕ್ತಸ್ರಾವವಾಗಿ ಜನಾರ್ಧನ್​ ರಾವ್​​ ಅವರು ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ಘಟನೆ ವೇಳೆ ಅಡ್ಡಬಂದ ತಾಯಿಗೂ ಆರೋಪಿ ಚಾಕುವಿನಿಂದ ಇರಿದಿದ್ದು, ಅವರಿಗೂ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.ನಗರದ ಇನ್ನೊಂದು ಪ್ರದೇಶದಲ್ಲಿ ವಾಸವಾಗಿರುವ ತೇಜ ಹಾಗೂ ಆತನ ತಾಯಿ ಗುರುವಾರ ಸೋಮಾಜಿಗುಡದಲ್ಲಿರುವ ರಾವ್​ ಅವರ ಮನೆಗೆ ಭೇಟಿ ನೀಡಿದ್ದರು. ತಾಯಿ ಕಾಫಿ ಮಾಡಲು ಹೋದಾಗ ತೇಜಾ ಹಾಗೂ…

Read More

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಅಪಘಾತ ಸಂಭವಿಸಿದ್ದು ಆಸ್ಪತ್ರೆಯಿಂದ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಬೈಕಿಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬೇಗೂರು ಗ್ರಾಮದಲ್ಲಿ ನಡೆದಿದೆ. ಹೌದು ಬೇಗೂರು ಬಳಿ ಕೆಎಸ್ಆರ್ಟಿಸಿ ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಾಪ್ಪಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಬೇಗೂರು ಗ್ರಾಮದಲ್ಲಿ ಬೈಕ್ನಲ್ಲಿದ್ದ ಚಲಿಸುತ್ತಿದ್ದ ಪೆಮ್ಮನಹಳ್ಳಿ ನಿವಾಸಿ ಕೆಂಪಗಂಗಯ್ಯ (55) ಸಾವನಪ್ಪಿದ್ದಾರೆ. ಆಸ್ಪತ್ರೆಯಿಂದ ಮನೆಗೆ ತೆರಳುತ್ತಿದ್ದ ವೇಳೆ ಬಸ್ ಡಿಕ್ಕಿಯಾಗಿ ಸಾವನ್ನಪ್ಪಿದ್ದಾರೆ. ಬೇಗೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಈ ಒಂದು ಅಪಘಾತ ಸಂಭವಿಸಿದೆ. ಕೆಎಸ್ಆರ್ಟಿಸಿ ಬಸ್ ಸಮೇತ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಅಪಘಾತದ ಕುರಿತು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಧಾರವಾಡ : ತವರು ಮನೆಗೆ ಹೋಗಿದ್ದಕ್ಕೆ ಪತಿಯೊಬ್ಬ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾನೆ. ಈ ವೇಳೆ ಜಗಳ ಬಿಡಿಸಲು ಬಂದಿದ್ದ ಅತ್ತೆಯ ಮೇಲು ಅಳಿಯ ಹಲ್ಲೆ ನಡೆಸಿರುವ ಘಟನೆ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಪತ್ನಿ ರೂಪ ಅತ್ತೆ ಯಲ್ಲವ ಮೇಲೆ ಬಸವರಾಜ್ ಅವ್ವಣ್ಣನವರ್ ಎನ್ನುವ ವ್ಯಕ್ತಿ ಹಲ್ಲೆ ನಡೆಸಿದ್ದಾನೆ. ಧಾರವಾಡದ ಬನಶ್ರೀ ನಗರದಲ್ಲಿ ಈ ಒಂದು ದಂಪತಿಗಳು ವಾಸವಾಗಿದ್ದರು. ಪತ್ನಿಯ ಮೇಲೆ ಬಸವರಾಜ್ ಅವಣ್ಣನವರ್ ಅನುಮಾನ ಪಡುತ್ತಿದ್ದ ಪತಿ ಬಸವರಾಜನ ನಡೆಯಿಂದ ಪತ್ನಿ ರೂಪ ತೀವ್ರವಾಗಿ ಬೇಸತ್ತು ತವರಿಗೆ ಹೋಗಿದ್ದಳು. ಒಂದು ವಾರದ ಹಿಂದೆ ತವರು ಗರಗಕ್ಕೆ ರೂಪ ಬಂದಿದ್ದಾಳೆ. ಇದರಿಂದ ಸಿಟ್ಟಿಗೆದ್ದು ಗ್ರಾಮಕ್ಕೆ ಬಂದು ಪತ್ನಿಯ ಮೇಲೆ ಬಸವರಾಜ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾನೆ.ಈ ವೇಳೆ ಜಗಳ ಬಿಡಿಸಲು ಬಂದಿದ್ದ ಅತ್ತೆ ಯಲ್ಲವ ಮೇಲು ಬಸವರಾಜ್ ಹಲ್ಲೆ ಮಾಡಿದ್ದಾನೆ. ಹಲ್ಲೆಗೊಳಗಾದಂತಹ ರೂಪ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಪೊಲೀಸರು ಬಸವರಾಜ್ ಅವಣ್ಣನವರನ್ನು ಅರೆಸ್ಟ್…

Read More

ಬೆಂಗಳೂರು : KSRTC ಬಸ್ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿದ್ದರೆ. ಘಟನೆಯಲ್ಲಿ ಓರ್ವ ಸವಾರ ಗಾಯಗೊಂಡಿದ್ದ. ಆದರೆ ಚಿಕಿತ್ಸೆ ಫಲಿಸದೇ ಆತ ಕೂಡ ಸಾವನ್ನಪ್ಪಿರುವ ಘಟನೆ ಬೊಮ್ಮನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಈ ಒಂದು ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗ್ರಾಮದಲ್ಲಿ ಅಪಘಾತ ನಡೆದಿತ್ತು. ಅಪಘಾತದಲ್ಲಿ ಈ ವೇಳೆ ಗಾಯಗೊಂಡಿದ್ದ ಬೈಕ್ ಸವಾರ ಕಾಶಪ್ಪ (45) ಚಿಕಿತ್ಸೆ ಫಲಿಸದೇ ಇದೀಗ ಸಾವನಪ್ಪಿದ್ದಾರೆ. ಯಾದಗಿರಿ ಮೂಲದ ಹನುಮಂತ (55) ಘಟನಾ ಸ್ಥಳದಲ್ಲೇ ಮೃತಪಟ್ಟಿದ್ದರು. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಕೆಎಸ್ಆರ್ಟಿಸಿ ಬಸ್ ತೆರಳುತ್ತಿದ್ದ ವೇಳೆ ಬೈಕಿಗೆ ಬಸ್ ಡಿಕ್ಕಿ ಹೊಡೆದಿತ್ತು. KSRTC ಬಸ್ ನ ಕೆಳಗಡೆ ಸಿಲುಕಿ ಬೈಕ್ ನಜ್ಜುಗುಜ್ಜಾಗಿತ್ತು. ಅಪಘಾತದ ಕುರಿತು ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More