Author: kannadanewsnow05

ಹಾಸನ : ಮನೆ ನಿರ್ಮಾಣಕ್ಕೆ 9 ಲಕ್ಷ ಮಾಡಿದ್ದ ಕುಟುಂಬವೊಂದು ಸಾಲ ಮರುಪಾವತಿ ಮಾಡದಿದ್ದಕ್ಕೆ ಫೈನಾನ್ಸ್ ಸಿಬ್ಬಂದಿಗಳು ಗೃಹ ಪ್ರವೇಶಕ್ಕೂ ಮುನ್ನವೆ ಹೊಸ ಮನೆಗೆ ಬೀಗ ಹಾಕಿರುವ ಅಮಾನವೀಯ ಘಟನೆ ಹಾಸನ ತಾಲೂಕಿನ ದೊಡ್ಡಆಲದಹಳ್ಳಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಹಾಸನ ತಾಲೂಕಿನ ದೊಡ್ಡಆಲದಹಳ್ಳಿ ಗ್ರಾಮದಲ್ಲಿ ಮಂಜೇಗೌಡ ಎನ್ನುವವರು ಆಧಾರ್ ಹೌಸಿಂಗ್ ಫೈನಾನ್ಸ್ ನಿಂದ ಸಾಲ ಪಡೆದಿದ್ದರು. ಶಾಲಾ ಮರುಪಾವತಿ ಮಾಡದಿದ್ದಕ್ಕೆ ಫೈನಾನ್ಸ್ ಸಿಬ್ಬಂದಿಗಳು ಗೃಹಪ್ರವೇಶಕ್ಕೂ ಮುನ್ನವೆ ಬೀಗ ಹಾಕಿದ್ದಾರೆ. ಕಳೆದ ಆರು ತಿಂಗಳ ಹಿಂದೆಯೇ ಮನೆಗೆ ಬೀಗ ಹಾಕಿರುವ ಆರೋಪ ಇದೀಗ ಕೇಳಿ ಬರುತ್ತಿದೆ. ಸದ್ಯ ಮನೆ ಇಲ್ಲದೆ ಕುಟುಂಬಸ್ಥರು ದನದ ಕೊಟ್ಟಿಗೆಯಲ್ಲಿ ಜೀವಿಸುತ್ತಿದ್ದಾರೆ. ಗೃಹ ಪ್ರವೇಶಕ್ಕೂ ಮುನ್ನವೇ ಮನೆಗೆ ಬೀಗ ಹಾಕಿ ಸಿಬ್ಬಂದಿ ದೌರ್ಜನ್ಯ ಎಸಗಿದ್ದಾರೆ. ಮನೆ ನಿರ್ಮಾಣದ ವೇಳೆ ಮಗನಿಗೆ ಅಪಘಾತವಾಗಿ ಕುಟುಂಬಸ್ಥರಿಗೆ ಆರ್ಥಿಕ ಸಂಕಷ್ಟ ಎದುರಾಗಿತ್ತು. ಹೀಗಾಗಿ ಸಾಲ ಕಟ್ಟಲಾಗದೆ ಕುಟುಂಬ ತೀವ್ರ ತೊಂದರೆ ಅನುಭವಿಸಿತ್ತು. ಕರುಣೆತೋರದೆ ಫೈನಾನ್ಸ್ ಸಿಬ್ಬಂದಿ ಇದೀಗ ಮನೆಗೆ ಬೀಗ…

Read More

ಬೆಂಗಳೂರು : ಬೆಂಗಳೂರಿನಲ್ಲಿ ಉದ್ಯಮಿಗೆ ವಂಚಸಿದ ಐವರು ಆರೋಪಿಗಳನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹಿಯಾದತ್ ಉಲ್ಲಾ, ಪ್ರತೀಕ್, ಉಮೇಶ್, ಸುಕ್ರೀತ್ ಹಾಗೂ ಜಾಕೀರ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. ಇನ್ನುಳಿದ ಇಬ್ಬರ ಬಂಧನಕ್ಕೆ ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ. ಈ ಐವರು ಉದ್ಯಮಿಯೊಬ್ಬರಿಗೆ 37 ಲಕ್ಷ ರೂಪಾಯಿ ವಂಚನೆ ಎಸಗಿರುವ ಕುರಿತು ದೂರು ದಾಖಲಾಗಿತ್ತು. ಅಮೂಲ್ಯ ಲೋಹ ಅಮೆರಿಕದ ಕಂಪನಿಗೆ ಮಾರಾಟ ಮಾಡಲಾಗಿದೆ. ಇದಕ್ಕೆ ಅಮೆರಿಕಾದಿಂದ ಒಟ್ಟು 15 ಲಕ್ಷ ಕೋಟಿ ಫೈಲ್ ಬಾಕಿ ಇದೆ ಅದಕ್ಕೆ ತೆರಿಗೆ ಹಣವನ್ನು ಕಟ್ಟಿ ಬಿಡಿಸಬೇಕಿದೆ ಎಂದು ಆರೋಪಿಗಳು ಉದ್ಯಮಿಗೆ ತಿಳಿಸಿದ್ದಾರೆ. ಇದಕ್ಕೆ ಸಹಾಯ ಮಾಡಿ 5% ನೀಡುವುದಾಗಿ ಈ ಒಂದು ಖರೀಮರ ಗ್ಯಾಂಗ್ ಉದ್ಯಮಿಗೆ ನಂಬಿಸಿತ್ತು. ಆರ್‌ಬಿಐ ಕೇಂದ್ರ ಸರ್ಕಾರ ಲ್ಯಾಬ್ ರಿಪೋರ್ಟ್ ಸಹ ಮಾಡಿಸಿಕೊಂಡಿದ್ದರು.ಇದೀಗ ಈ ಒಂದು ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಸಿಬಿ ಪೊಲೀಸರು ಐವರನ್ನು ಅರೆಸ್ಟ್ ಮಾಡಿದ್ದಾರೆ.

Read More

ಮಂಡ್ಯ : ಮಂಡ್ಯದಲ್ಲಿ ಬೆಳ್ಳಂಬೆಳಗ್ಗೆ ಭೀಕರವಾದ ಕೊಲೆ ನಡೆದಿದ್ದು, ದೇವಸ್ಥಾನ ಒಂದರ ಮುಂಭಾಗದಲ್ಲೆ ವ್ಯಕ್ತಿ ಒಬ್ಬರ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಲಕ್ಷ್ಮೇಗೌಡನದೊಡ್ಡಿ ಎಂಬ ಗ್ರಾಮದಲ್ಲಿ ನಡೆದಿದ್ದು, ಘಟನೆಯಿಂದ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ. ಕೊಲೆಯಾದ ವ್ಯಕ್ತಿಯನ್ನು ಅದೇ ಗ್ರಾಮದ ಕೃಷ್ಣೆಗೌಡ (46) ಎಂದು ತಿಳಿದುಬಂದಿದೆ.ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಲಕ್ಷ್ಮೇಗೌಡನದೊಡ್ಡಿ ಬೆಳ್ಳಂ ಬೆಳಗ್ಗೆ ಚಾಕುವಿನಿಂದ ಇರಿದು ಕೃಷ್ಣೆಗೌಡನ ಕತ್ತು ಸೀಳಿದ್ದು, ಗ್ರಾಮದ ಮದನಹಟ್ಟಮ್ಮ ದೇವಸ್ಥಾನದ ಮುಂಭಾಗದಲ್ಲೆ ಈ ಒಂದು ಕೃತ್ಯ ನಡೆದಿದೆ. ಆದರೆ ಹತ್ಯೆಗೆ ನಿಖರವಾದಂತ ಕಾರಣ ತಿಳಿದು ಬಂದಿಲ್ಲ. ಹತ್ಯೆಗೈದ ಬಳಿಕ ಹಂತಕರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದ್ದು, ಘಟನಾ ಸ್ಥಳಕ್ಕೆ ಕೆಎಂ ದೊಡ್ಡಿ ಪೊಲೀಸರು ದೌಡಾಯಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೆಎಂ ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.

Read More

ಮೈಸೂರು : ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ದಾಳಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೈಸೂರಿನಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವ ಘಟನೆ ನಡೆದಿದೆ. ಸಿದ್ದರಾಮಯ್ಯ ಎಷ್ಟು ದಿನ ಸಿಎಂ ಆಗಿರುತ್ತಾರೋ ಗೊತ್ತಿಲ್ಲ. ಇನ್ನು ಮುಂದಾದರು ಖಡಕ್ ಆಗಿ ಕೆಲಸ ಮಾಡಬೇಕು ಎಂದು ಮೈಸೂರಿನಲ್ಲಿ ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪುಂಡ ಮುಸ್ಲಿಮರು ನಿನ್ನೆ ಆಕ್ರಮಣ ಮಾಡಿದ್ದಾರೆ. ಪೊಲೀಸರನೇ ಗುರಿಯಾಗಿಸಿ ಇಲ್ಲಿ ಯಾವಾಗಲೂ ದಾಳಿ ಆಗುತ್ತದೆ. ಟಿಪ್ಪು ಸಂತತಿಯವರು ಮಾಡಿರುವ ಗಲಾಟೆ ಇದು. ಸಿಎಂ ಸಿದ್ದರಾಮಯ್ಯ ಆಡಳಿತ ಹೇಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಆಕ್ರೋಶ ಹೊರಹಾಕಿದರು. ಪೊಲೀಸರು ಸರ್ಕಾರದ ಹಣತೆ ನಡೆಯುವುದನ್ನು ಬಿಡಬೇಕು. ಪುಂಡ ಮುಸ್ಲಿಮರಿಗೆ ಸಿದ್ದರಾಮಯ್ಯ ಫ್ರೀ ಬಿಟ್ಟಿದ್ದಕ್ಕೆ ಈ ರೀತಿ ಗಲಾಟೆ ಆಗಿದೆ. ಕೇಜ್ರಿವಾಲ್ ಸೋತರೆ ಉದಯಗಿರಿ ಮುಸ್ಲಿಮರಿಗೆ ಯಾಕೆ ರೋಷ ಬರುತ್ತದೆ? ಕೇಜ್ರಿವಾಲ್ ಸೋತರೆ ಅವರ ಮನೆಯಲ್ಲಿ ಏಕೆ ಸೂತಕ ಬರುತ್ತದೆ? ಎಂದು ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ. ಉದಯಗಿರಿ ವ್ಯಾಪ್ತಿಯಲ್ಲಿ ಪೊಲೀಸರು…

Read More

ಮೈಸೂರು : ರೈಲು ಚಲಿಸುತ್ತಿರುವಾಗಲೇ ಪ್ರಯಾಣಿಕರಿಗೆ ಚಾಕು ತೋರಿಸಿ ಐವರು ದರೋಡೆಕೋರರು ದರೋಡೆ ಮಾಡಿರುವ ಘಟನೆ ಮೈಸೂರು ಬೆಂಗಳೂರು ರೈಲಿನಲ್ಲಿ ನಿನ್ನೆ ರಾತ್ರಿ ಈ ಒಂದು ಘಟನೆ ನಡೆದಿದೆ. ಮೈಸೂರಿನಲ್ಲಿ ರೈಲು ಹತ್ತಿದ ಐವರು ದರೋಡೆಕೋರರಿಂದ ಈ ಒಂದು ಕೃತ್ಯ ನಡೆದಿದ್ದು, ಪ್ರಯಾಣಿಕರಿಗೆ ಚಾಕು ತೋರಿಸಿ ಹಣ ಮೊಬೈಲ್ ಗಳನ್ನು ದರೋಡೆ ಮಾಡಿದ್ದಾರೆ. ಈ ವಿಚಾರ ಗೊತ್ತಾಗಿ ಕೂಡಲೇ ಪೊಲೀಸರು ಚನ್ನಪಟ್ಟಣ ಬಳಿ ರೈಲು ಹತ್ತಿದ್ದಾರೆ. ಪೊಲೀಸರು ಬಂದ ಮಾಹಿತಿ ತಿಳಿದು ಪೊಲೀಸರ ಮೇಲೆ ಆರೋಪಿಗಳು ಹಲ್ಲೆ ಮಾಡಲು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಕೂಡಲೇ ಚಲಿಸುತ್ತಿದ್ದ ರೈಲಿನಿಂದಲೇ ದರೋಡೆಕೋರರು ಜಿಗಿದು ಪರಾರಿಯಾಗಿದ್ದಾರೆ. ಘಟನೆ ಕುರಿತಂತೆ ಮೈಸೂರಿನ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಹಾವೇರಿ : ಹಾವೇರಿಯಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಎತ್ತಿನ ಬಂಡಿಗೆ ಬೈಕ್ ಒಂದು ವೇಗವಾಗಿ ಬಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ವಿದ್ಯಾರ್ಥಿಗಳು ಸೇರಿ ಮೂವರು ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಗುಡಗುರು ಕ್ರಾಸ್ ಭೀಕರ ಅಪಘಾತ ಸಂಭವಿಸಿದೆ  ಶಶಿಕುಮಾರ್ (25) ಆಕಾಶ್ (23) ಮತ್ತು ದರ್ಶನ್ (23) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದ್ದು, ಹನುಮನಮಟ್ಟಿಯಿಂದ ಮೈಲಾರ ಜಾತ್ರೆಗೆ ಹೊರಟಿದ್ದಾಗ ಈ ಒಂದು ಅಪಘಾತ ಸಂಭವಿಸಿದೆ. ಮೃತ ಆಕಾಶ್ ಮತ್ತು ದರ್ಶನ್ ಅಂತಿಮ ವರ್ಷದ ಬಿಎಸ್ಸಿ ಓದುತ್ತಿದ್ದರು. ಇನ್ನು ಶಶಿಕುಮಾರ್ ಹನುಮನಟ್ಟಿ ಹೋಟೆಲ್ ಅಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಅಪಘಾತದ ಕುರಿತಂತೆ ರಾಣೆಬೆನ್ನೂರು ತಾಲೂಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ರಾಯಚೂರು : ರಾಜ್ಯದಲ್ಲಿ ಇತ್ತೀಚಿಗೆ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ಇದೀಗ ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಚಾಕ್ಲೆಟ್ ಆಸೆ ತೋರಿಸಿ 11 ವರ್ಷದ ಬಾಳಿಕೆಯ ಮೇಲೆ ಅತ್ಯಾಚಾರ ಎಸಗಿರುವ ಘೋರ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನಲ್ಲಿ ನಡೆದಿದೆ. ಶಾಲೆಗೆ ಹೋಗಿದ್ದ ಬಾಲಕಿಯನ್ನು ಊಟದ ಬಿಡುವಿನ ವೇಳೆ ಚಾಕೊಲೇಟ್​ ಕೊಡಿಸುವುದಾಗಿ ಚಂದ್ರಶೇಖರ್ ಎಂಬ ವ್ಯಕ್ತಿ ಆಮಿಷವೊಡ್ಡಿ, ತನ್ನ ಮನೆಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ.ಘಟನೆ ನಡೆದ ಬಳಿಕ ಸ್ಥಳೀಯರು ಕೊಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಹಟ್ಟಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ಚಂದ್ರಶೇಖರರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ತಿಳಿಸುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ, ಮರಕ್ಕೆ ಗುದ್ದಿದ ಬಳಿಕ ಪಲ್ಟಿಯಾಗಿ ಬಸ್ ನಲ್ಲಿದ್ದ 17 ಪ್ರಯಾಣಿಕರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ನಡೆದಿದೆ. ಹೌದು KSRTC ಬಸ್ ಪಲ್ಟಿಯಾಗಿ 17 ಜನರಿಗೆ ಗಾಯಗಳಾಗಿವೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಣ್ಣಿಗೇರಿ ಬಳಿ ಈ ಒಂದು ಘಟನೆ ನಡೆದಿದೆ. ಶಿರಸಿಯಿಂದ ಬೆಳಗಾವಿಗೆ ಹೋಗುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಬಸ್ ಚಾಲಕನ ನಿಯಂತ್ರಣ ತಪ್ಪಿ, ಮರಕ್ಕೆ ಡಿಕ್ಕಿ ಹೊಡೆದು ಬಸ್ ಪಲ್ಟಿಯಾಗಿದೆ. ಕೂಡಲೇ ಗಾಯಾಳುಗಳನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕೋಲಾರ : ಇತ್ತೀಚಿಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಮಕ್ಕಳ ಮೇಲೆ ಏಕಾಏಕಿ ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದ ಪ್ರಕರಣಗಳು ಕಂಡುಬರುತ್ತಿವೆ. ಇದೀಗ ಕೋಲಾರದಲ್ಲಿ ವೃದ್ದೆಯ ಮೇಲೆ ಬೀದಿ ನಾಯಿಗಳು ದಾಳಿ ಮಾಡಿ ಗಾಯಗೊಳಿಸಿರುವ ಘಟನೆ ನಡೆದಿದೆ. ಹೌದು ಬೀದಿ ನಾಯಿಗಳ ದಾಳಿಯಿಂದ ವೃದ್ಧೆ ಲಕ್ಷಮ್ಮಗೆ ಗಂಭೀರವಾಗಿ ಗಾಯಗಳಾಗಿವೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಮಹಾಲಕ್ಷ್ಮಿ ನಗರದಲ್ಲಿ ಈ ಒಂದು ಘಟನೆ ನಡೆದಿದೆ. ಕೂಡಲೇ ಶ್ರೀನಿವಾಸಪುರ ಆಸ್ಪತ್ರೆಯಲ್ಲಿ ವೃದ್ದೆಯನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀನಿವಾಸಪುರ ಪುರಸಭೆ ನಿರ್ಲಕ್ಷಕ್ಕೆ ಇದೀಗ ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ.

Read More

ಬೆಳಗಾವಿ : ಬೆಳಗಾವಿಯ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಬಿಗ್ ಶಾಕ್ ಎದುರಾಗಿದ್ದು, ಇಬ್ಬರು ಬಿಜೆಪಿ ಸದಸ್ಯರು ಸದಸ್ಯತ್ವ ರದ್ದುಗೊಳಿಸಲಾಗಿದೆ.ಬಿಜೆಪಿ ಶಾಸಕ‌ ಅಭಯ ಪಾಟೀಲ್ ಆಪ್ತ ಸದಸ್ಯರ ಸದಸ್ಯತ್ವ ರದ್ದು ಮಾಡಲಾಗಿದೆ. ಸದಸ್ಯತ್ವ ರದ್ದು ಮಾಡಿ ಬೆಳಗಾವಿ ಪ್ರಾದೇಶಿಕ ಆಯುಕ್ತ ಎಸ್.ಬಿ.ಶೆಟ್ಟಣ್ಣವರ ಆದೇಶ ಹೊರಡಿಸಿದ್ದಾರೆ. ಹೌದು ಇಬ್ಬರು ಬಿಜೆಪಿ ಸದಸ್ಯತ್ವವನ್ನು ರದ್ದು ಪಡಿಸಿದ್ದು, ಬಿಜೆಪಿಗೆ ಬಿಗ್ ಶಾಕ್ ಎದುರಾಗಿದೆ.ಬೆಳಗಾವಿ ದಕ್ಷಿಣ ಮತಕ್ಷೇತ್ರದ ವಾರ್ಡ್‌ ನಂಬರ್‌ 41 ರ ಸದಸ್ಯ ಮಂಗೇಶ್ ಪವಾರ್, ವಾರ್ಡ್ ನಂಬರ್‌ 23ರ ಸದಸ್ಯ ಜಯಂತ್ ಜಾಧವ ಸದಸ್ಯತ್ವ ರದ್ದಾಗಿದೆ. ಲೋಕೋಪಯೋಗಿ ಇಲಾಖೆಯ ತಿನಿಸುಕಟ್ಟೆಯಲ್ಲಿ ಪತ್ನಿಯರ ಹೆಸರಿನಲ್ಲಿ ಬಿಜೆಪಿ ಸದಸ್ಯರು ಮಳಿಗೆ ಪಡೆದಿದ್ದರು. ಪತ್ನಿ ನೀತಾ ಹೆಸರಿನಲ್ಲಿ ಮಂಗೇಶ್ ಪವಾರ, ಪತ್ನಿ ಸೋನಾಲಿ ಹೆಸರಿನಲ್ಲಿ ಜಯಂತ್ ಜಾಧವ ಮಳಿಗೆ ಪಡೆದಿದ್ದರು. ತಮ್ಮ ಪ್ರಭಾವ ಬೀರಿ ಪತ್ನಿಯರ ಹೆಸರಿನಲ್ಲಿ ಮಳಿಗೆ ಪಡೆದಿದ್ದಾರೆಂದು ಸುಜೀತ್ ಮುಳಗುಂದ ದೂರು ನೀಡಿದ್ದರು. ಈ ದೂರು ಆಧರಿಸಿ ಸುದೀರ್ಘ ವಿಚಾರಣೆ ನಡೆಸಿ ಬಿಜೆಪಿ ಸದಸ್ಯರ ಸದಸ್ಯತ್ವ ರದ್ದು…

Read More