Subscribe to Updates
Get the latest creative news from FooBar about art, design and business.
Author: ಸುರೇಶ್
"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು
ಬೆಂಗಳೂರು : ಕೇಂದ್ರ ಸರ್ಕಾರದ ಗೃಹ ಇಲಾಖೆಯ ‘ರಾಜ ಭಾಷಾ ಸಮಿತಿ’ ಬೆಂಗಳೂರಿನ ತಾಜ್‌ವೆಸ್ಟ್ಎಂಡ್ ಹೋಟೆಲಿನಲ್ಲಿ ಗುರುವಾರ ಆಯೋಜಿಸಿದ್ದ ‘ಹಿಂದಿ ಪ್ರಚಾರ ಸಭೆ’ಗೆ ಕರ್ನಾಟಕ ರಕ್ಷಣಾ ವೇದಿಕೆ ಏಕಿಏಕಿ ದಾಳಿ ನಡೆಸಿದೆ. ಹೌದು ಬೆಂಗಳೂರಿನಲ್ಲಿ ಉತ್ತರ ಭಾರತದ ಸಂಸದರ ಕಾರ್ಯಕ್ರಮದಲ್ಲಿ ಕರವೇ ಕಾರ್ಯಕರ್ತರು ಏಕಾಏಕಿ ನುಗ್ಗಿ ದಾಂಧಲೇ ನಡೆಸಿದ್ದಾರೆ. ಹಿಂದಿ ಹೇರಿಕೆ ಬಗ್ಗೆ ಕಾರ್ಯಕ್ರಮ ಅಂತ ಕರವೇ ಆಕ್ಷೇಪ ವ್ಯಕ್ತಪಡಿಸಿದ್ದು, ತಾಜ್ ವೆಸ್ಟೆಂಡ್ ಹೋಟೆಲಿಗೆ ನುಗ್ಗಿ ಕಾರ್ಯಕರ್ತರು ದಾಂದಲೆ ಮಾಡಿದ್ದಾರೆ. ಕರವೇ ನಾರಾಯಣಗೌಡ ನೇತೃತ್ವದಲ್ಲಿ ಮುತ್ತಿಗೆಗೆ ಪ್ರಯತ್ನಿಸಿದ್ದಾರೆ. ಹಿಂದಿ ಭಾಷೆಯನ್ನು ಹಿಂದಿಯೇತರ ರಾಜ್ಯಗಳ ಮೇಲೆ ಹೇರಿಕೆ ಮಾಡುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕಾರ್ಯಕ್ರಮದ ನಡುವೆ ಕರವೇ ಕಾರ್ಯಕರ್ತರು ಯಾವುದೇ ಮುನ್ಸೂಚನೆ ನೀಡದೆ ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಹೈಗ್ರೌಂಡ್ಸ್ ಠಾಣೆ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿದರು.
ಬೆಂಗಳೂರು : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ, ದಿನವೊಂದಕ್ಕೆ ತಿರುವು ಪಡೆದುಕೊಳ್ಳುತ್ತಿದ್ದು, ಧರ್ಮಸ್ಥಳದ ಬಂಗ್ಲೆ ಗುಡ್ಡದಲ್ಲಿ ಎಸ್ಐಟಿ ಅಧಿಕಾರಿಗಳು ತನಿಖೆ ಮಾಡುವ ವೇಳೆ ಹಲವು ಆಸ್ತಿ ಪಂಜರ ಪತ್ತೆಯಾಗಿದ್ದವು. ಈಗ ಈ ಒಂದು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಬಂಗ್ಲೆ ಗುಡ್ಡದಲ್ಲಿ ಎಸ್ಐಟಿ ಅಧಿಕಾರಿಗಳು ಶೋಧ ಮಾಡುವ ವೇಳೆ ಮಡಿಕೇರಿ ಮೂಲದ ವ್ಯಕ್ತಿ ಒಬ್ಬರ ಐಡಿ ಕಾರ್ಡ್ ಪತ್ತೆಯಾಗಿತ್ತು. ಇದೀಗ ಮತ್ತೊಂದು ಸಾಕ್ಷಿ ಸಿಕ್ಕಿದ್ದು, ಎಸ್ಐಟಿ ತನಿಖೆ ವೇಳೆ ಬಂಗ್ಲೇ ಗುಡ್ಡದಲ್ಲಿ ಡಿಎಲ್ ಸಿಕ್ಕಿತ್ತು. ಈ ಒಂದು ಡಿಎಲ್ ಆದಿಶೇಷ ನಾರಾಯಣ ಹೆಸರಿನ ಡ್ರೈವಿಂಗ್ ಲೈಸೆನ್ಸ್ ಪತ್ತೆಯಾಗಿದೆ. ಇವರು ತುಮಕೂರು ಮೂಲದವರು ಎಂದು ತಿಳಿದುಬಂದಿದೆ. ತುಮಕೂರು ಮೂಲದ ಫ್ಯಾಮಿಲಿ ಗೆ ಇದೀಗ ಎಸ್ಐಟಿ ಬುಲಾವ್ ನೀಡಿದೆ. ಬೆಳ್ತಂಗಡಿ ಎಸ್ಐಟಿ ಕಚೇರಿಗೆ ಕುಟುಂಬ ಆಗಮಿಸಿದೆ. ಆದಿಶೇಷ ನಾರಾಯಣನ ಸಹೋದರಿಯರು, ಬಾವ ಭೇಟಿ ನೀಡಿದ್ದಾರೆ. ಸಹೋದರ ಲಕ್ಷ್ಮಿ, ಪದ್ಮ ಹಾಗೂ ಬಾವ ಶಿವಕುಮಾರ್ ಆಗಮಿಸಿದ್ದಾರೆ. ಡಿಎಲ್ ಆದಿಶೇಷನದೆ ಎಂದು ಸಂಬಂಧಿಕರು ಪತ್ತೆಹಚ್ಚಿದ್ದಾರೆ. ಬಳಿಕ ಡಿಎನ್ಎ ಟೆಸ್ಟ್…
ಬೆಂಗಳೂರು : ರಾಜ್ಯದಲ್ಲಿ ಸೆಪ್ಟೆಂಬರ್ 22 ರಿಂದ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಆರಂಭವಾಗಿದ್ದು,ಸಾಮಾಜಿಕ ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಪ್ರಶ್ನಿಸಿ ಹೈಕೋರ್ಟಿಗೆ ಪಿಐಎಲ್ ಸಲ್ಲಿಸಲಾಗಿತ್ತು. ಇದೀಗ ಹೈಕೋರ್ಟ್ ವಿಭಾಗಿಯ ಪೀಠದಲ್ಲಿ ಅರ್ಜಿಗಳ ವಿಚಾರಣೆ ನಡೆಯಿತು. ಈ ವೇಳೆ ಕೆಲಸರತ್ತು ವಿಧಿಸಿ ಜಾತಿಗಣತಿ ಸಮೀಕ್ಷೆಗೆ ತಡೆ ನೀಡಲು ಹೈಕೋರ್ಟ್ ನಕಾರ ವ್ಯಕ್ತಪಡಿಸಿದ್ದು, ಮಧ್ಯಂತರ ಆದೇಶ ನೀಡಿದೆ.ಬಳಿಕ ವಿಚಾರಣೆಯನ್ನು ಡಿಸೆಂಬರ್ 2ನೇ ವಾರಕ್ಕೆ ಮುಂದೂಡಿ ಆದೇಶ ಹೊರಡಿಸಿತು. ಆಯೋಗದ ಪರವಾಗಿ ಪ್ರೊ. ರವಿವರ್ಮಕುಮಾರ್ ಅವರು ವಾದ ಆರಂಭಿಸಿದರು. 5 ನಿಮಿಷವಾದ ಮಂಡಿಸಲು ಅವಕಾಶ ನೀಡುವಂತೆ ಕೋರ್ಟಿಗೆ ಮನವಿ ಮಾಡಿದರು. ಚಿನ್ನಪ್ಪ ರೆಡ್ಡಿ ಆಯೋಗದ ವರದಿ ಆಧರಿಸಿ ವಾದ ಮಂಡನೆ ಮಾಡಿದರು. ಶೀಘ್ರವಾದ ಮಂಡನೆ ಪೂರ್ಣಗೊಳಿಸಲು ಇದೆ ವೇಳೆ ಕೋರ್ಟ್ ಸೂಚನೆ ನೀಡಿತು. ಒಂದು ಪತ್ರ ಬಂದಿದೆ ಅದನ್ನು ನಿಮಗೆ ನೀಡುತ್ತೇನೆ ಎಂದು ಜಡ್ಜ್ ಗೆ ರವಿವರ್ಮಕುಮಾರ್ ಪತ್ರ ನೀಡಿದರು. ಆಯೋಗದ ಸರ್ವೆಯ ವಿಧಾನವನ್ನು ಮರು ಪರಿಶೀಲಿಸಿದ್ದೇವೆ . ಸರ್ವೆ ವೇಳೆ ಮಾಹಿತಿ…
ಶ್ರೀರಂಗಪಟ್ಟಣದಲ್ಲಿ 415ನೇ ದಸರಾ ಮಹೋತ್ಸವ ಹಿನ್ನೆಲೆ : ಜಂಬೂ ಸವಾರಿಗೆ ನಿರ್ದೇಶಕ ಟಿ.ಎಸ್ ನಾಗಾಭರಣ ವಿದ್ಯುಕ್ತ ಚಾಲನೆ
ಮಂಡ್ಯ : ಶ್ರೀರಂಗಪಟ್ಟಣದಲ್ಲಿ 415ನೇ ದಸರಾ ಮಹೋತ್ಸವ ಹಿನ್ನೆಲೆಯಲ್ಲಿ ಜಂಬೂ ಸವಾರಿಗೆ ವಿದ್ಯುಕ್ತ ಚಾಲನೆ ನೀಡಲಾಯಿತು. ಮಂಗಳಾರತಿ ಬಳಿಕ ಅಂಬಾರಿಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಮರದ ಅಂಬಾರಿಯಲ್ಲಿ ವಿರಾಜಮಾನರಾದ ನಾಡದೇವಿಗೆ ಪುಷ್ಪಾರ್ಚನೆಸಲ್ಲಿಸಲಾಯಿತು. ಚಿತ್ರ ನಿರ್ದೇಶಕ ಟಿ.ಎಸ್.ನಾಗಾಭರಣ ಅವರು ಪುಷ್ಪಾರ್ಚನೆ ಸಲ್ಲಿಸಿದರು. ಪುಷ್ಪಾರ್ಚನೆ ಮೂಲಕ ಜಂಬೂ ಸವಾರಿಗೆ ಚಾಲನೆ ನೀಡಿದರು. ಟಿ.ಎಸ್.ನಾಗಾಭರಣ ಅವರಿಗೆ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕರಾದ ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಗಣಿಗ ರವಿಕುಮಾರ್ ಸಾಥ್ ನೀಡಿದರು. ಕಿರಂಗೂರು ಬನ್ನಿಮಂಟಪದಿಂದ ಜಂಬೂ ಸವಾರಿಗೆ ಚಾಲನೆ ನೀಡಲಾಯಿತು. ಮರದ ಅಂಬಾರಿ ಹೊತ್ತ ಮಹೇಂದ್ರ ಆನೆಗೆ ಕಾವೇರಿ, ಲಕ್ಷ್ಮೀ ಆನೆಗಳು ಸಾಥ್ ನೀಡಿದವು. ಕಿರಂಗೂರಿನ ಬನ್ನಿ ಮಂಟಪದಿಂದ ಶ್ರೀ ರಂಗನಾಥಸ್ವಾಮಿ ದೇವಾಲಯವರೆಗೆ ಮೆರವಣಿಗೆ ಸಾಗಲಿದೆ.
ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ನಟ ದರ್ಶನ್ ಪ್ರಕರಣದಿಂದ ಕೈಬಿಡುವಂತೆ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ 57 ಕೋರ್ಟ್ ಗೆ ನಟ ದರ್ಶನ್ ಅರ್ಜಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಇದೆ ವೇಳೆ ಹಾಸಿಗೆ ದಿಂಬು ಸೇರಿದಂತೆ ಕನಿಷ್ಠ ಸೌಲಭ್ಯ ನೀಡುವಂತೆ ಕೂಡ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಬಳಿಕ ಅಕ್ಟೋಬರ್ 9ಕ್ಕೆ ವಿಚಾರಣೆ ಮುಂದೂಡಿ ಕೋರ್ಟ್ ಆದೇಶ ಹೊರಡಿಸಿತು. ಇದೀಗ ನಟ ದರ್ಶನ್ ಕೋರ್ಟ್ ಗೆ ಹಾಜರಾಗಿದ್ದಾರೆ. ಆರೋಪಿ ದರ್ಶನ್ ಪರವಾಗಿಲ್ಲ ಸುನೀಲ್ ವಾದ ಮಂಡಿಸಿದರು. ಇನ್ನು ಆರೋಪಿಗಳನ್ನು ಕ್ವಾರೆಂಟೈನಲ್ಲಿ ಇಟ್ಟಿದ್ದಾರೆ. ಜೈಲಿನ ಅಧಿಕಾರಿಗಳು ಆದೇಶ ಪಾಲಿಸುತ್ತಿಲ್ಲ. ಇದೆ ವೇಳೆ ಕೊಲೆ ಆರೋಪಿ ದರ್ಶನ್ ಗೆ ಜಡ್ಜ್ ಆದೇಶ ಪಾಲಿಸುತ್ತಿದ್ದಾರ ಎಂದು ಪ್ರಶ್ನಿಸಿದರು. ಆಗ ಇಲ್ಲ ಸರ್ ಯಾವ ಆದೇಶಗಳನ್ನು ಸಹಪಾಲಿಸುತ್ತಿಲ್ಲ. 25/3 ಫೀಟ್ ಮಾತ್ರ ಓಡಾಡಲು ಅವಕಾಶ ಕೊಟ್ಟಿದ್ದಾರೆ ವಾಕಿಂಗ್ ಮಾಡಲು ಸೂರ್ಯನ ಬೆಳಕು ಬರುತ್ತಿಲ್ಲ ಎಂದು ಆರೋಪಿ ದರ್ಶನ್ ಜಡ್ಜ್…
ಬೆಂಗಳೂರು : ರಾಜ್ಯದಲ್ಲಿ ಸೆಪ್ಟೆಂಬರ್ 22 ರಿಂದ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ನಡೆಸುತ್ತಿದ್ದು ಈ ಒಂದು ಸಮೀಕ್ಷೆಗೆ ರಾಜ್ಯದಲ್ಲಿ ಸರ್ಕಾರಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ ಆದರೆ ಸಮೀಕ್ಷೆ ಆರಂಭದ ದಿನವೇ ನೂರಾರು ಸಮಸ್ಯೆಗಳು ಎದುರಾಗಿದ್ದು ಸರ್ವರ್ ಸಮಸ್ಯೆ ಹಾಗೂ ಮೊಬೈಲ್ನಲ್ಲಿ ತಾಂತ್ರಿಕ ದೋಷಗಳಿಂದ ಸಮೀಕ್ಷೆ ನಡೆಸುವುದು ಕಷ್ಟವಾಗಿದೆ. ಇತ್ತ ಇನ್ನೊಂದು ಕಡೆ ಇಂದು ಸಚಿವ ಸಂಪುಟದಲ್ಲಿ ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಗೆ ಗೈರಾದ ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಒಂದು ಕಡೆ ಸರ್ವರ್ ಇಲ್ಲ ಮೊಬೈಲಲ್ಲಿ ತಾಂತ್ರಿಕ ದೋಷಗಳು ಇವೆ ಎಂದು ಶಿಕ್ಷಕರು ಈ ಒಂದು ಜಾತಿಗಣತಿ ಸಮೀಕ್ಷೆ ಮುಂದೂಡುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದರೆ, ಇನ್ನೊಂದೆಡೆ ಸಮೀಕ್ಷೆಗೆ ಗೈರಾದ ಸಿಬ್ಬಂದಿ ಮತ್ತು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಂಪುಟ ಮುಂದಾಗಿದೆ.
ನವದೆಹಲಿ : ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಚಿನ್ನಯ ಬುರುಡೆ ಗ್ಯಾಂಗ್ ದೆಹಲಿಗೆ ತೆರಳಿ ಸುಪ್ರೀಂ ಕೋರ್ಟ್ ಜಡ್ಜ ಅವರನ್ನು ಸಹ ಭೇಟಿಯಾಗಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿತ್ತು. ಇದೀಗ ಚೆನ್ನಾಗಿರ ಮೂಲಕ ಈ ಒಂದು ಬುರುಡೆ ತಂಡ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಪಿಐಎಲ್ ಅನ್ನು ಇದೀಗ ವಜಾಗೋಳಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ. ಹೌದು ಧರ್ಮಸ್ಥಳ ತಲೆ ಬುರುಡೆ ಕೇಸಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಸುಪ್ರೀಂ ಕೋರ್ಟ್ ನಲ್ಲಿ ಚಿನ್ನಯ ಹಿಂದಿದ್ದ ಟೀಮ್ಗೆ ತಪರಾಕಿ. ಚಿನ್ನಯ್ಯ ಮೂಲಕ ಸಲ್ಲಿಸಿದ ಪಿಐಎಲ್ ವಜಾಗೊಳಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ. ಎಫ್ಐಆರ್ ಇಲ್ಲದೇ ಯಾವುದೇ ಕ್ರಮ ಕೈಗೊಳ್ಳಲಿಸಲಾಗಿತ್ತು. 1995 ರಿಂದ 2004 ರವರೆಗೆ ಚಿನ್ನಯ್ಯ ಟೀಮ್ ತನಿಖೆಗೆ ಕೋರಿ ಪಿಐಎಲ್ ಸಲ್ಲಿಸಿತ್ತು ವಕೀಲ ಕೆ.ವಿ ಧನಂಜಯ ಸಲ್ಲಿಸಿದ ಪಿಐಎಲ್ ಅನ್ನು ಇದೀಗ ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಪ್ರತಿವಾದಿಗಳ ವಿರುದ್ಧ ಯಾವುದೇ ಮನವಿ ಇಲ್ಲದೆ ಪಿಐಎಲ್ ಸಲ್ಲಿಸಲಾಗಿತ್ತು.
ಬೆಂಗಳೂರು : ರಾಜ್ಯದಲ್ಲಿ ಅವಧಿ ಮುಗಿದಿರೋ ಮದ್ಯದ ಅಂಗಡಿಗಳನ್ನ ಹರಾಜು ಮೂಲಕ ಹಂಚಿಕೆ ಮಾಡೋ ಪ್ರಕ್ರಿಯೆ ಶುರುವಾಗಿದೆ. ಕರಡು ನಿಯಮ ಬಿಡುಗಡೆ ಮಾಡಲಾಗಿದ್ದು, ಆದಷ್ಟೂ ಬೇಗ ಪ್ರಕ್ರಿಯೆ ಶುರು ಮಾಡೋದಾಗಿ ಅಬಕಾರಿ ಸಚಿವ ತಿಮ್ಮಾಪುರ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ಹರಾಜು ಪ್ರಕ್ರಿಯೆಗೆ ತಯಾರಿ ಆಗ್ತಿದೆ. ಹರಾಜು ಪ್ರಕ್ರಿಯೆಯಲ್ಲಿ ಮೀಸಲಾತಿ ಕೊಡಬೇಕು ಎಂದು ಅಂದುಕೊಳ್ಳಲಾಗಿದೆ. ಈಗಾಗಲೇ ಹರಾಜು ಪ್ರಕ್ರಿಯೆಯ ಡ್ರಾಫ್ಟ್ ರೆಡಿ ಆಗಿ ಸಹಿ ಆಗಿದೆ. ಆದಷ್ಟೂ ಬೇಗ ಹರಾಜು ಪ್ರಕ್ರಿಯೆ ಆಗಲಿದೆ ಎಂದಿದ್ದಾರೆ. ಜನರಲ್ ಆಗಿ ಹರಾಜು ಹಾಕಬೇಕಾ? ಮೀಸಲಾತಿ ಕೊಡಬೇಕು ಅಂತ ಸಿಎಂ ಜೊತೆ ನಾಳೆ ಚರ್ಚೆ ಮಾಡ್ತೀನಿ. ಹರಾಜು ಪ್ರಕ್ರಿಯೆಯಿಂದ 2 ಸಾವಿರ ಕೋಟಿ ರೂ. ಲಾಭ ಬರಬಹುದು ಅಂತ ನಿರೀಕ್ಷೆ ಇದೆ. ಮೀಸಲಾತಿ ಕೊಟ್ಟರೆ ಸಹಾಯ ಅಗುತ್ತದೆ ಅಂತ ಚರ್ಚೆ ಇದೆ. ಚರ್ಚೆ ಮಾಡಿ ನಿರ್ಧಾರ ಮಾಡ್ತೀವಿ ಎಂದು ಹೇಳಿದ್ದಾರೆ.
ಬೆಂಗಳೂರು : ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ನೀತಿ ರೂಪಿಸಲು ಒಂದು ತಿಂಗಳ ಕಾಲಾವಕಾಶ ನೀಡಿದರೂ ಸೂಕ್ತ ಕ್ರಮಕ್ಕೆ ಮುಂದಾಗದ ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಬೈಕ್ ಟ್ಯಾಕ್ಸಿ ಸೇವೆ ಸ್ಥಗಿತಗೊಳಿಸಿದ್ದ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಓಲಾ, ಉಬರ್ ಮತ್ತು ರ‍್ಯಾಪಿಡೋ ಮಾತೃ ಸಂಸ್ಥೆಗಳು ಸಲ್ಲಿಸಿರುವ ಮೇಲ್ಮನವಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ನೇತೃತ್ವದ ವಿಭಾಗೀಯ ಪೀಠ, ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿತು. ವಿಚಾರಣೆ ವೇಳೆ ಹಾಜರಿದ್ದ ಅಡ್ವೋಕೇಟ್ ಜನರಲ್ ಶಶಿಕಿರಣ ಶೆಟ್ಟಿ, ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ನಿರ್ಬಂಧ ವಿಧಿಸಿದ್ದು, ಪ್ರಯಾಣಿಕರು ಬಳಸಲು ಅನುಮತಿ ನೀಡಿಲ್ಲ. ಕೇವಲ ಡೆಲಿವರಿಗಾಗಿ ಬಳಸಲು ಅವಕಾಶ ನೀಡಲಾಗಿದೆ. ಡೆಲಿವರಿಗಾಗಿ ಟ್ಯಾಕ್ಸಿ ಎಂದು ನೋಂದಣಿ ಮಾಡಿಸುವ ಅಗತ್ಯವಿಲ್ಲ. ಈ ಸಂಬಂಧ ನೀತಿ ರೂಪಿಸಿದ್ದೇವೆ ಎಂದು ತಿಳಿಸಿದರು. ಪ್ರಕರಣದ ಹಿನ್ನೆಲೆ ಮೋಟಾರು ವಾಹನ ಕಾಯ್ದೆಯ ನಿಯಮಗಳ ಪ್ರಕಾರವಾಗಿ ಹಳದಿ ನೋಂದಣಿ ಫಲಕ (ಎಲ್ಲೋ…
ಬೆಂಗಳೂರು : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿರುವ ಸಮಸ್ಯೆಗಳನ್ನು ಪರಿಹರಿಸುವ ವರೆಗೂ ಮುಂದೂಡುವಂತೆ ಮನವಿ ರಾಜ್ಯದ ಶಿಕ್ಷಕರು ಮನವಿ ಮಾಡಿದ್ದಾರೆ. ಮೇಲ್ಕಾಣಿಸಿದ ವಿಷಯಕ್ಕೆ ಸಂಬಂಧಿಸಿದಂತೆ, ತಮ್ಮ ಗಮನಕ್ಕೆ ತರುವ ವಿಷಯವೆನೆಂದರೆ, ಸದ್ಯ ನಡೆಸುತ್ತಿರುವ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಅನೇಕ ತಾಂತ್ರಿಕ ಸಮಸ್ಯೆಗಳು ಶಿಕ್ಷಕರಿಗೆ ಕಾಡುತ್ತಿದ್ದು, ಇದರ ಕುರಿತು ಮೇಲಾಧಿಕಾರಿಗಳಿಗೆ ಎಷ್ಟೇ ಕೇಳಿಕೊಂಡರೂ ಸಹ ಯಾವುದೇ ಪರಿಹಾರ ಸಿಗುತ್ತಿಲ್ಲ. ಕಾರಣ ಶಿಕ್ಷಕರು ಮನೆ ಮನೆಗೆ ಹೋಗಿ ಗಂಟೆಗಟ್ಟಲೇ ಕುಳಿತು APP ಕಾರ್ಯ ನಿರ್ವಹಿಸದ ಕಾರಣ ಮುಜುಗರ ಪಡುವಂತಾಗಿದ್ದು, ಮಹಿಳಾ ಶಿಕ್ಷಕಿಯರು ಪಡುವ ಕಷ್ಟಗಳನ್ನು ಕೇಳುವವರಿಲ್ಲದಂತಾಗಿದೆ. 1) ಹೊಸ ವರ್ಷನ್ APP ಓಪನ್ ಆಗದೇ UNKNOWN ERROR ಬರುತ್ತಿರುವುದು. 2) ನಿಯೋಜಿಸಿರುವ ಮನೆಗಳು ಲೋಕೆಷನ್ ನಲ್ಲಿ ಸಿಗದೇ ಇರುವುದು. 3) ನಿಗದಿಪಡಿಸಿರುವ ಮನೆಗಳು ಒಂದೇ ಕಡೆ ಇಲ್ಲದಿರುವುದು 4) ಮನೆ ಸಮೀಕ್ಷೆ ಮಾಡಿದ ನಂತರ ಸಬ್ಸಿಟ್ ಆಗದೇ ಇರುವುದು 5) OTP ಮತ್ತು ODP ಸಮಸ್ಯೆ 6) ಮನೆಪಟ್ಟಿ ಮುಖ್ಯಸ್ಥರು…







