Subscribe to Updates
Get the latest creative news from FooBar about art, design and business.
Author: kannadanewsnow05
ಮೈಸೂರು : ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಕಿಡಿಗೇಡಿಗಳು ಬೆಟ್ಟಕ್ಕೆ ಬೆಂಕಿ ಹಚ್ಚಿರುವ ಪರಿಣಾಮ ಸದ್ಯ ಚಾಮುಂಡಿ ಬೆಟ್ಟದಲ್ಲಿ ಬೆಂಕಿ ಹತ್ತಿ ಉರಿಯುತ್ತಿರುವ ಘಟನೆ ವರದಿಯಾಗಿದೆ. ಹೌದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಬೆಂಕಿ ಬಿದ್ದಿದ್ದು, ಚಾಮುಂಡಿ ಬೆಟ್ಟಕ್ಕೆ ಕಿಡಿಗೇಡಿಗಳು ಬೆಂಕಿ ಹಾಕಿರುವ ಶಂಕೆ ವ್ಯಕ್ತವಾಗಿದೆ. ಬೇಸಿಗೆ ಆರಂಭವಾಗಿರುವುದರಿಂದ ಬೆಟ್ಟ ಒಣಗಿತ್ತು.ಕಿಡಿ ಗಿಡಿಗಳು ಬೆಂಕಿ ಹಾಕಿದ್ದರಿಂದ ಈಗ ಬೆಂಕಿ ಆವರಿಸಿದೆ. ಕೂಡಲೇ ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ, ಬೆಂಕಿ ನಂದಿಸಲು ಮುಂದಾಗಿದ್ದಾರೆ.
ಬೆಂಗಳೂರು : ರಾಜ್ಯದಲ್ಲಿ OPS ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಶೀಘ್ರದಲ್ಲಿ OPS ಜಾರಿ ಮಾಡಿಯೇ ತೀರುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಅಲ್ಲದೇ ಸರ್ಕಾರಿ ನೌಕರರ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರು ಡಿಕೆ, ಡಿಕೆ ಎಂದು ಘೋಷಣೆ ಕೂಗಿದಾಗ ನನ್ನ ನೇತೃತ್ವದಲ್ಲಿ ಚುನಾವಣೆ ನಡೆದಾಗ ಈ ಪದ ಹೇಳಿ ಎಂದು ತಾವು ಮುಖ್ಯಮಂತ್ರಿ ಆಗುವ ಕನಸನ್ನು ಪರೋಕ್ಷವಾಗಿ ಹೇಳಿದ್ದಾರೆ ಎನ್ನಲಾಗಿದೆ. ಎನ್‌ಪಿಎಸ್ ಒಪಿಎಸ್ ಬಗ್ಗೆ ಡಿಕೆ ಶಿವಕುಮಾರ್ ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸರ್ಕಾರಿ ನೌಕರರ ಸಮಾವೇಶದಲ್ಲಿ ಮಾತನಾಡಿ, ಶೀಘ್ರದಲ್ಲಿ OPS ಜಾರಿ ಮಾಡುತ್ತೇವೆ ಎಂದಾಗ ಸರಕಾರಿ ನೌಕರರು ಫುಲ್ ಖುಷ್ ಆಗಿದ್ದಾರೆ. ಈ ವೇಳೆ ಡಿಕೆ ಡಿಕೆ ಅಂತ ಸರ್ಕಾರಿ ನೌಕರರು ಜೋರಾಗಿ ಕೂಗಿದ್ದಾರೆ. ನೌಕರರ ಮಾತಿಗೆ ಡಿಸಿಎಂ ಡಿಕೆ ಶಿವಕುಮಾರ್ ಅವರು ನಾಯಕತ್ವದ ಬಾಣ ಬಿಟ್ಟಿದ್ದು, ಮುಂದೇ ನಾನು ಚುನಾವಣೆಗೆ ನಿಂತಾಗ ಡಿಕೆ ಅಂತ ಪದ ಬಳಸಿ, ನನ್ನ ನೇತೃತ್ವದಲ್ಲಿ ಚುನಾವಣೆ ನಡೆದಾಗ ಈ ಪದವನ್ನು ಹೇಳಿ ಎಂದು ಡಿಸಿಎಂ…
ಮಂಡ್ಯ : ಜಮೀನಿಗೆ ನೀರು ಹಾಯಿಸಲು ಹೋದಾಗ ರೈತನ ಮೇಲೆ ಏಕಾಏಕಿ ಚಿರತೆ ದಾಳಿ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಕೆಸ್ತೂರು ಗ್ರಾಮದಲ್ಲಿ ರೈತನ ಮೇಲೆ ಚಿರತೆ ದಾಳಿ ಮಾಡಿದ್ದು, ಜಮೀನಿಗೆ ತೆರಳಿದ್ದ ವೇಳೆ ಚಿರತೆ ದಾಳಿ ಮಾಡಿದೆ. ಚಿರತೆ ದಾಳಿಗೆ ರೈತ ರಾಮು ಬೆನ್ನು, ಕುತ್ತಿಗೆ ಭಾಗಕ್ಕೆ ಗಂಭೀರವಾದ ಗಾಯಗಳಾಗಿವೆ. ಜಮೀನಿಗೆ ನೀರು ಹಾಯಿಸಲು ಹೋಗಿದ್ದಾಗ ರಾಮು ಮೇಲೆ ಚಿರತೆ ದಾಳಿ ಮಾಡಿದೆ. ಮದ್ದೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ರೈತ ರಾಮು ಪ್ರಾಣಪಾಯದಿಂದ ಪಾರಾಗಿದ್ದಾನೆ.
ಮೈಸೂರು : ಮುಡಾದಲ್ಲಿ ಅಕ್ರಮ ಎಸಗಿದ ಯಾರನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿಕೆ ನೀಡಿದರು. ಇಂದು ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳು ಈಗ ಮಾತನಾಡಿದ ಅವರು 50:50 ಅನುಪಾತದಲ್ಲಿ ಪರಿಹಾರ ನೀಡುವ ಕಾನೂನು ಮುಡಾದಲ್ಲಿ ಇದೆ. ಈ ಕಾನೂನು ಬಿಜೆಪಿ ಅವಧಿಯಲ್ಲು ಇತ್ತು. ಹಾಗಾಗಿ ಪಾರ್ವತಮ್ಮಗೆ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಪರಿಹಾರ ನೀಡಿದ್ದಾರೆ ಎಂದು ಸಚಿವ ಭೈರತಿ ಸುರೇಶ್ ತಿಳಿಸಿದರು. 50:50 ಅನುಪಾತದಂತೆ ಹಂಚಿಕೆಯಾದ ಸೈಟ್ ಅಕ್ರಮದ ತನಿಖೆ ನಡೆಯುತ್ತಿದೆ ನ್ಯಾ.ಪಿ.ಎನ್ ದೇಸಾಯಿ ಆಯೋಗ ಕೇಸ್ ತನಿಖೆ ನಡೆಸುತ್ತಿದೆ. ತನಿಖೆ ಮುಗಿದ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ. 50:50 ಅನುಪಾತದಲ್ಲಿ ಪರಿಹಾರ ನೀಡುವ ಕಾನೂನು ಮುಡಾದಲ್ಲಿ ಇದೆ. ಆ ಕಾನೂನು ಇಲ್ಲದೆ ಪರಿಹಾರ ಹೇಗೆ ಕೊಡುವುದು? ಇದು ಬಿಜೆಪಿ ಕಾಲದಲ್ಲಿ ಪರಿಹಾರ ನೀಡಿರುವುದಾಗಿದೆ. ಪಾರ್ವತಮ್ಮ ಅವರಿಗೂ ಬೊಮ್ಮಾಯಿ ಅವರೇ ಪರಿಹಾರ ನೀಡಿದ್ದಾರೆ ಎಂದು ನಗರ ಅಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿಕೆ ನೀಡಿದರು. ಮುಡಾ ಕೇಸ್…
ಹಾಸನ : ಹಾಸನದಲ್ಲಿ ಬೆಚ್ಚಿ ಬೀಳಿಸುವಂತಹ ಘಟನೆ ನಡೆದಿದ್ದು ಪತ್ನಿಯ ಮೇಲೆ ಅನುಮಾನಕ್ಕೆ ಪತಿಯೊಬ್ಬ ಪತ್ನಿಯ ಕತ್ತು ಸಿಳಿ ಭೀಕರವಾಗಿ ಕೊಂದು ಬಳಿಕ ಮನೆಗೆ ಬೇಗ ಹಾಕಿಕೊಂಡು ಪರಾರಿಯಾಗಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಕೂಡಿಗೆ ಎಂಬ ಗ್ರಾಮದಲ್ಲಿ ನಡೆದಿದೆ. ಹೌದು ಕೌಟುಂಬಿಕ ಕಲಹದಿಂದ ಪತ್ನಿ ಕತ್ತು ಸೀಳಿ ಭೀಕರವಾಗಿ ಪತಿ ಕೊಲೆಗೈದಿದ್ದಾನೆ. ಹಾಸನದ ಸಕಲೇಶಪುರದ ಹಿರಿಯೂರು ಕೂಡಿಗೆ ಎಂಬಲ್ಲಿ ಈ ಒಂದು ಕೊಲೆ ನಡೆದಿದೆ. ಪತ್ನಿ ಮಂಜುಳಾಳನ್ನು ಹತ್ಯೆಗೈದ ಬಳಿಕ ಪತಿ ಯೋಗೇಶ್ ಮನೆಗೆ ಬೇಗ ಹಾಕಿ ಪರಾರಿ ಆಗಿದ್ದಾನೆ. ಪತ್ನಿ ಮೇಲಿನ ಅನುಮಾನದಿಂದ ಪತಿ ಹತ್ಯೆಗೈದಿರುವ ಶಂಕೆ ಇದೀಗ ವ್ಯಕ್ತವಾಗುತ್ತಿದೆ. ಘಟನೆ ಕುರಿತು ಸಕಲೇಶಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪತಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ರಾಯಚೂರು : ಬೊಲೆರೋ ವಾಹನವೊಂದು ಪಲ್ಟಿಯಾಗಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ರಾಯಚೂರಿನ ಚಂದ್ರಬಂಡ ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ. ಬೊಲೆರೋ ವಾಹನದಲ್ಲಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಹೊನ್ನಪ್ಪ ಎಂದಿನಂತೆ ಶಾಲೆಗೆ ತೆರಳುತ್ತಿದ್ದ. ಮೃತ ವಿದ್ಯಾರ್ಥಿ ಗಣಮೂರು ಗ್ರಾಮದ ನಿವಾಸಿಯಾಗಿದ್ದಾನೆ. ಚಂದ್ರಬಂಡದ ಬಳಿ ಬೊಲೆರೋ ವಾಹನದಲ್ಲಿ ಬರುವಾಗ ಪಲ್ಟಿಯಾಗಿ ವಿದ್ಯಾರ್ಥಿ ಹೊನ್ನಪ್ಪ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
BREAKING : ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ಹಾಡಹಗಲೆ ವ್ಯಕ್ತಿಯ ಭೀಕರ ಮರ್ಡರ್ : ಮೊಬೈಲ್ ಗೋಸ್ಕರ ಚಾಕು ಇರಿದು ಹತ್ಯೆ!
ಬೆಂಗಳೂರು : ಬೆಂಗಳೂರಿನಲ್ಲಿ ಇಂದು ಹಾಡಹಗಲೇ ಭೀಕರವಾದ ಕೊಲೆ ನಡೆದಿದ್ದು, ಕೇವಲ ಮೊಬೈಲ್ಗಾಗಿ ಚಂದ್ರಪ್ಪ ಎನ್ನುವ ವ್ಯಕ್ತಿಯನ್ನು ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿದ್ದಾರೆ ಬೆಂಗಳೂರಿನ ಮೆಜೆಸ್ಟಿಕ್ ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಈ ಕೊಳೆ ನಡೆದಿದೆ. ಬೆಂಗಳೂರಿನ ಮೆಜೆಸ್ಟಿಕ್ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಚಂದ್ರಪ್ಪ ಎನ್ನುವ ವ್ಯಕ್ತಿಯ ಬಳಿ ಮೊಬೈಲ್ ಕಿತ್ತುಕೊಳ್ಳಲು ಇಬ್ಬರು ವ್ಯಕ್ತಿಗಳು ಮುಂದಾಗಿದ್ದಾರೆ.ಈ ವೇಳೆ ಚಂದ್ರಪ್ಪ ಎನ್ನುವ ವ್ಯಕ್ತಿ ವಿರೋಧ ವ್ಯಕ್ತಪಡಿಸಿದಾಗ ವಿಜಯ ಮತ್ತು ಆತನ ಗ್ಯಾಂಗ್ ಚಂದ್ರಪ್ಪನ ಮೇಲೆ ಚಾಕು ಇರಿದು ಭೀಕರವಾಗಿ ಹಲ್ಲೆ ಮಾಡಿದ್ದಾರೆ. ಮೃತ ಚಂದ್ರಪ್ಪ ಕಾಮಾಕ್ಷಿಪಾಳ್ಯ ನಿವಾಸಿಯಾಗಿದ್ದು ಟೆಲರಿಂಗ್ ಕೆಲಸ ಮಾಡುತ್ತಿದ್ದ ಅಲ್ಲದೆ ಚಂದ್ರಪ್ಪ ಮದ್ಯ ವ್ಯಸನಿ ಕೂಡ ಆಗಿದ್ದ. ಚಂದ್ರಪ್ಪನಿಗೆ ಚಾಕು ಇರಿದ ಪರಿಣಾಮ ರಕ್ತದ ಮಡಿವಿನಲ್ಲಿ ಬಿದ್ದಿದ್ದಾನೆ.ಪೊಲೀಸರು ಸದ್ಯ ವಿಜಯನನ್ನು ಅರೆಸ್ಟ್ ಮಾಡಿದ್ದು ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.ಘಟನೆ ಕುರಿತು ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರದುರ್ಗ : ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದ ಬಳಿ ಸರಣಿ ಅಪಘಾತವಾಗಿದ್ದು, ಸೈಕಲ್ ಸವಾರನೋಬ್ಬ ಸಾವನಪ್ಪಿದ್ದಾನೆ. ಕಾರು, ಶಾಲಾ ಬಸ್ ಹಾಗೂ ಸೈಕಲ್ ನಡುವೆ ಈ ಒಂದು ಅಪಘಾತ ಸಂಭವಿಸಿದೆ. ಚನ್ನಮ್ಮನಹಳ್ಳಿಯ ಸೈಕಲವಾರ ಅಪಘಾತದಲ್ಲಿ ತಿಪ್ಪೇಸ್ವಾಮಿ (60) ಸಾವನ್ನಪ್ಪಿದ್ದು, ಶಾಲಾ ಬಸ್ ನಲ್ಲಿದ್ದ ಐವರು ವಿಧ್ಯಾರ್ಥಿಗಳಿಗೆ ಗಾಯಗಳಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಕುರಿತು ಐಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೀದರ್ : ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ತೆರಳಿದ್ದ ರಾಜ್ಯದ ಬೀದರ್ ಜಿಲ್ಲೆಯ ಐವರು ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಹೌದು ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ರಾಜ್ಯದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಬೀದರ್ ಜಿಲ್ಲೆಯ ಐವರು ತೆರಳಿದ್ದರು. ಈ ವೇಳೆ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಐವರು ಸಾವನ್ನಪ್ಪಿದ್ದಾರೆ. ಇನ್ನು ಘಟನೆಯಲ್ಲಿ 6 ಜನರ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಕುಂಭಮೇಳ ಮುಗಿಸಿ ಕಾಶಿಗೆ ಹೋಗುವಾಗ ಈ ಒಂದು ಅಪಘಾತ ಸಂಭವಿಸಿದೆ. ಉತ್ತರಪ್ರದೇಶದ ರೂಪಾಪೂರ ಬಳಿ ಲಾರಿಗೆ ಈ ಕ್ರೂಜರ್ ಡಿಕ್ಕಿಯಾಗಿದೆ. ಲಾರಿ ಕ್ರೂಜರ್ ನಡುವೆ ಡಿಕ್ಕಿಯಾಗಿ ಬೀದರ್ ಜಿಲ್ಲೆಯ ಲಾಡಿಗೇರ ಬಡಾವಣೆ ನಿವಾಸಿಗಳು ಐದು ಜನ ಸಾವನಪ್ಪಿದ್ದಾರೆ. ಸುನೀತಾ, ಸಂತೋಷ ಹಾಗೂ ನೀಲಮ್ಮ ಸೇರಿ ಐದು ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇನ್ನು…
ರಾಯಚೂರು : ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಒಂದಿಲ್ಲೊಂದು ಹಗರಣದ ಸುಳಿಯಲ್ಲಿ ಸಿಲುಕಿದೆ. ವಾಲ್ಮೀಕಿ ಹಗರಣ, ಮುಡಾ ಹಗರಣ ಹೀಗೆ ಸಾಲು ಸಾಲು ಹಗರಣಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಆಗಿದೆ. ಇದೀಗ ಮತ್ತೊಂದು ಹಗರಣ ಬಯಲಾಗಿದ್ದು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ತಹಶೀಲಾರ್ ಕಚೇರಿಯಲ್ಲಿ 1.87 ಕೋಟಿ ಹಣ ಅಕ್ರಮ ವರ್ಗಾವಣೆ ಆಗಿರುವುದು ಬಳಕೆಗೆ ಬಂದಿದೆ. ಹೌದು ಲಿಂಗಸುಗೂರು ತಹಶೀಲ್ದಾರ್ ಕಚೇರಿಯ ಖಾತೆಗಳಲ್ಲಿದ್ದ 1 ಕೋಟಿ 87 ಲಕ್ಷ ರೂಪಾಯಿಗಳನ್ನು ಅಕ್ರಮವಾಗಿ ವರ್ಗಾಯಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಎಸ್‌ಡಿಎ ಯಲ್ಲಪ್ಪ ತನ್ನ ಕುಟುಂಬದ ಸದಸ್ಯರ ಖಾತೆಗಳಿಗೆ ಈ ಹಣವನ್ನು ವರ್ಗಾಯಿಸಿದ್ದಾನೆ ಎಂದು ಆರೋಪಿಸಲಾಗಿದೆ. ಯಲ್ಲಪ್ಪ ತನ್ನ ಮಗ ವಿಶಾಲ್ ಮಾಲೀಕತ್ವದ ವಿಶಾಲ್ ಡೆಕೋರೇಟರ್ಸ್ ಖಾತೆಗೆ 1 ಕೋಟಿ 98 ಸಾವಿರ ಹಣ, ಪುತ್ರಿ ದೀಪಾ ಹೆಸರಿನ ದೀಪಾ ಟೆಕ್ಸ್ಟೈಲ್ಸ್ ಹೆಸರಿನ ಖಾತೆಗೆ 31 ಲಕ್ಷ ರೂ. ಪತ್ನಿ ನಿರ್ಮಲಾ ಹೆಸರಿನ ನಿರ್ಮಲಾ ಡಿಜಿಟಲ್ಸ್ ಖಾತೆಗೆ 18 ಲಕ್ಷ ರೂ. ಅನ್ನು…













