Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಬೆಂಗಳೂರು ನಿವಾಸದಲ್ಲಿ ಬಹು ಭಾಷಾ ಹಿರಿಯ ನಟಿ ಬಿ. ಸರೋಜಾದೇವಿ (87) ಇಂದು ನಿಧನರಾಗಿದ್ದಾರೆ. ಕನ್ನಡ ತಮಿಳು ತೆಲುಗು ಹಿಂದಿ ಚಿತ್ರಗಳಲ್ಲಿ ಬಿ ಸರೋಜಾದೇವಿ ಅನೇಕ ಚಿತ್ರಗಳಲ್ಲಿ ನಟಿಸಿದ್ದರು. ಹೌದು ಇಂದು ಬೆಂಗಳೂರಿನ ಮಲ್ಲೇಶ್ವರಂ ನಿವಾಸದಲ್ಲಿ ಬಿ ಸರೋಜಾದೇವಿ ಸಾವನ್ನಪ್ಪಿದ್ದಾರೆ. ಸರೋಜಾದೇವಿಯವರು ವಯೋ ಸಹಜ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು ಅಭಿನಯ ಸರಸ್ವತಿಯಂದೆ ಸರೋಜಾದೇವಿ ಖ್ಯಾತಿ ಹೊಂದಿದ್ದರು. ಸುಮಾರು ಆರು ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಐದು ಭಾಷೆಗಳಲ್ಲಿ ಸುಮಾರು 25ಕ್ಕೂ ಹೆಚ್ಚು ಚಿತ್ರಗಳಲ್ಲಿ ಸರೋಜಾ ದೇವಿ ನಟಿಸಿದ್ದಾರೆ.ಡಾ.ರಾಜಕುಮಾರ್, ಕಲ್ಯಾಣ್ ಕುಮಾರ್ ಸೇರಿದಂತೆ ಅನೇಕ ಹಿರಿಯ ನಟರೊಂದಿಗೆ ಬಿ ಸರೋಜಾ ದೇವಿ ಅದ್ಭುತವಾಗಿ ನಟಿಸಿದ್ದರು.ಇವರ ಅಗಲಿಕೆಯಿಂದ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಬಹುದೊಡ್ಡ ನಷ್ಟ ಉಂಟಾಗಿದೆ. ಹೀಗಿವೆ ನಟಿ ಬಿ.ಸರೋಜಾದೇವಿ ಅವರು ನಟಿಸಿರುವ ಸಿನಿಮಾಗಳು ಕಿತ್ತೂರುರಾಣಿ ಚೆನ್ನಮ್ಮ, ಅಮರಶಿಲ್ಪಿ ಜಕಣಾಚಾರಿ, ಕಥಾಸಾಗರ, ಬಬ್ರುವಾಹನ, ಭಾಗ್ಯವಂತರು, ಆಷಾಡಭೂತಿ, ಶ್ರೀರಾಮಪೂಜಾ, ಕಚ ದೇವಯಾನಿ, ರತ್ನಗಿರಿ ರಹಸ್ಯ, ಕೋಕಿಲವಾಣಿ, ಸ್ಕೂಲ್ಮಾಸ್ಟರ್, ಪಂಚರತ್ನ, ಲಕ್ಷ್ಮೀಸರಸ್ವತಿ, ಚಿಂತಾಮಣಿ,…
ಬೆಂಗಳೂರು : ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ಇಂದು ಮೈಸೂರಲ್ಲಿ ಇಬ್ಬರು, ದಾವಣಗೆರೆ, ಗದಗ ಹಾಗು ರಾಯಚೂರಲ್ಲಿ ಒಬ್ಬರು ಸಾವನ್ನಪ್ಪಿದ್ದು, ಇಂದು ಒಂದೇ ದಿನದಲ್ಲಿ ರಾಜ್ಯದಲ್ಲಿ ಒಟ್ಟು ಐದು ಜನ ಹಾರ್ಟ್ ಅಟ್ಯಾಕ್ ಗೆ ಬಲಿಯಾಗಿದ್ದಾರೆ. ಬಸ್ ನಲ್ಲಿ ತೆರಳುವಾಗಲೇ ಸರ್ಕಾರಿ ನೌಕರ ಬಲಿ! ಮೈಸೂರಿನಲ್ಲಿ ಸರ್ಕಾರಿ ನೌಕರರೊಬ್ಬರು ಹೃದಯಾಘಾತದಿಂದ ಸಾವನಪ್ಪಿದ್ದಾರೆ. ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಸರ್ಕಾರಿ ನೌಕರ ಅರುಣ್ ಎನ್ನುವವರಿಗೆ ಹೃದಯಾಘಾತವಾಗಿದೆ. ಆಸ್ಪತ್ರೆಗೆ ಕರೆದೋಯ್ಯುವಾಗ ಮಾರ್ಗಮಧ್ಯೆ ಅರುಣ್ (44) ಸಾವನ್ನಪ್ಪಿದ್ದಾರೆ. ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕು ಕಚೇರಿಯಲ್ಲಿ ಅರುಣ್ SDA ಆಗಿ ಕಾರ್ಯನಿರ್ವಹಿಸುತ್ತಿದ್ದರು. ಮೃತ ಅರುಣ್ ಮೂಲತಃ ಮಂಡ್ಯ ಜಿಲ್ಲೆಯ ಕಿಲಾರಿ ಗ್ರಾಮದ ನಿವಾಸಿಯಾಗಿದ್ದಾರೆ. ಹಾರ್ಟ್ ಅಟ್ಯಾಕ್ ನಿಂದ ದೇವಸ್ಥಾನದ ಅರ್ಚಕ ಸಾವು! ಮೈಸೂರಲ್ಲಿ ಇಂದು ಬೆಳಿಗ್ಗೆ ತಾನೇ ಬಸ್ ನಲ್ಲಿ ಸಂಚರಿಸುವಾಗ ಸರ್ಕಾರಿ ನೌಕರರೊಬ್ಬರೂ ಹೃದಯಾಘಾತಕ್ಕೆ ಬಲಿಯಾಗಿದ್ದರು. ಇದೀಗ ಮತ್ತೊಂದು ಘಟನೆ ವರದಿಯಾಗಿದ್ದು, ದೇವಸ್ಥಾನದ ಪ್ರಧಾನ ಅರ್ಚಕರೊಬ್ಬರೂ ಹೃದಯಾಘಾತದಿಂದ ಸಾವನ್ನಪಿದ್ದಾರೆ. ಹೌದು ಮೈಸೂರಲ್ಲಿ ಹೃದಯಾಘಾತದಿಂದ…
ಕಲಬುರ್ಗಿ : ರಾಜ್ಯ ರಾಜಕಾರಣದಲ್ಲಿ ಇತ್ತೀಚಿಗೆ ಹಲವಾರು ಬದಲಾವಣೆಗಳು ನಡೆದಿದ್ದು, 5 ವರ್ಷಗಳ ಕಾಲ ನಾನೇ ಸಿಎಂ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಇತ್ತ ಕೆಲವು ಪ್ರಮುಖ ಸಚಿವರು ಸಹ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. ಇದರ ಮಧ್ಯ ಶಾಸಕ ಹಾಗು KKRDB ಅಧ್ಯಕ್ಷ ಡಾ.ಅಜೇಯ್ ಸಿಂಗ್ ಅಕ್ಟೋಬರ್ ನಲ್ಲಿ ಸಂಪುಟ ಪುನಾರಚನೆ ಆಗಲಿದ್ದು, ನನಗೆ ಈ ಬಾರಿ ಸಚಿವ ಮಂತ್ರಿ ಸ್ಥಾನ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಸುಂಪುಟ ಪುನಾರಚನೆ ಆಗುತ್ತದೆ. ಈಗಾಗಲೇ ಈ ಬಗ್ಗೆ ಸಿಎಂ ಕೂಡ ಹೇಳಿದ್ದಾರೆ. ಎಷ್ಟು ಜನರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಈ ಬಾರಿ ನನಗೆ ಮಂತ್ರಿಸ್ಥಾನ ಸಿಕ್ಕೇ ಸಿಗುತ್ತದೆ. ಆ ಆತ್ಮವಿಶ್ವಾಸ ನನ್ನಲ್ಲಿದೆ ಎಂದು ಕಾಂಗ್ರೆಸ್ ಶಾಸಕ ಹಾಗೂ ಕೆಕೆಆರ್ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ತಂದೆಯ ಕಾಲದಿಂದಲೂ ಶಾಂತವಾಗಿದ್ದೇವೆ. ನಮ್ಮ…
ಗದಗ : ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಇದೀಗ ಇಂದು ಮೈಸೂರಲ್ಲಿ ಇಬ್ಬರು ದಾವಣಗೆರೆಯಲ್ಲಿ ಒಬ್ಬರು ರಾಯಚೂರಲ್ಲಿ ಒಬ್ಬರು ಸಾವನ್ನಪ್ಪಿದ್ದು, ಇದೀಗ ಗದಗದಲ್ಲೂ ಕೂಡ ಓರ್ವ ಮಹಿಳೆ ಹಾರ್ಟ್ ಅಟ್ಯಾಕ್ ಗೆ ಬಲಿಯಾಗಿದ್ದಾರೆ. ಹೌದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ನಿವಾಸಿ ಶೋಭಾ ವಡಕಣ್ಣವರ್ (42) ಸಾವನಪ್ಪಿದ್ದಾರೆ. ಎದೆನೋವು ಕಾಣಿಸಿಕೊಂಡ ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿದರು ಕೂಡ ಚಿಕಿತ್ಸೆ ಫಲಕಾರಿ ಆಗದೆ ಶೋಭಾ ಸಾವನ್ನಪ್ಪಿದ್ದಾರೆ. ಆರೋಗ್ಯವಾಗಿದ್ದ ಶೋಭಾ ವಡಕಣ್ಣವರ ಹೃದಯಘಾತದಿಂದ ಸಾವನಪ್ಪಿದ್ದಾರೆ.
ಮೈಸೂರು : ಮೈಸೂರಲ್ಲಿ ಇಂದು ಬೆಳಿಗ್ಗೆ ತಾನೇ ಬಸ್ ನಲ್ಲಿ ಸಂಚರಿಸುವಾಗ ಸರ್ಕಾರಿ ನೌಕರರೊಬ್ಬರೂ ಹೃದಯಾಘಾತಕ್ಕೆ ಬಲಿಯಾಗಿದ್ದರು. ಇದೀಗ ಮತ್ತೊಂದು ಘಟನೆ ವರದಿಯಾಗಿದ್ದು, ದೇವಸ್ಥಾನದ ಪ್ರಧಾನ ಅರ್ಚಕರೊಬ್ಬರೂ ಹೃದಯಾಘಾತದಿಂದ ಸಾವನ್ನಪಿದ್ದಾರೆ. ಹೌದು ಮೈಸೂರಲ್ಲಿ ಹೃದಯಾಘಾತದಿಂದ ಮತ್ತೊಬ್ಬ ವ್ಯಕ್ತಿ ಬಲಿಯಾಗಿದ್ದು, ಜಿಲ್ಲೆಯ ಟಿ. ನರಸೀಪುರ ದೇಗುಲದ ಪ್ರಧಾನ ಅರ್ಚಕ ಸಂಪತ್ ಕುಮಾರ್ ಇದೀಗ ಸಾವನಪ್ಪಿದ್ದಾರೆ. ಸಂಪತ್ ಗುಂಜನರಸಿಂಹ ಸ್ವಾಮಿ ದೇವಸ್ಥಾನದ ಪ್ರದಾನ ಅರ್ಚಕರಾಗಿದ್ದು, ಇವರು ಮೂಲತಃ ರಾಮನಗರ ಜಿಲ್ಲೆಯ ನಿವಾಸಿಯಾಗಿದ್ದು, ತಡರಾತ್ರಿ ಅವರಿಗೆ ತೀವ್ರ ಎದೆ ನೋವಿನಿಂದ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.
ಬೆಂಗಳೂರು : ನಗರದಲ್ಲಿ ಬೇಕರಿ, ಜ್ಯೂಸ್ ಅಂಗಡಿ, ಕಾಂಡಿಮೆಂಟ್ಸ್ ಅಂಗಡಿ ಇಟ್ಟುಕೊಂಡು ಬದುಕು ನಡೆಸುತ್ತಿರುವ ಸಣ್ಣ ವ್ಯಾಪಾರಿಗಳಿಗೆ ಕಮರ್ಷಿಯಲ್ ಟ್ಯಾಕ್ಸ್ ಇಲಾಖೆ ಅವರ ಬದುಕಿನ ಅತಿ ದೊಡ್ಡ ಶಾಕ್ ನೀಡಿದೆ. ವ್ಯಾಪಾರಿಗಳ ಅಪರಾಧವೆಂದರೆ ಗ್ರಾಹಕರಿಂದ ಆನ್ಲೈನ್ ಮುಖಾಂತರ ಹಣ ಸ್ವೀಕರಿಸಿರುವುದು. ವ್ಯಾಪಾರಿಗಳು ವ್ಯಾಪಾರ ಶುರುಮಾಡಿದಾಗಿನಿಂದ ಇದುವರೆಗೆ ನಡೆಸಿರುವ ವಹಿವಾಟಿನ ಮೇಲೆ ವಾಣಿಜ್ಯ ತೆರಿಗೆ ಕಟ್ಟಬೇಕೆಂದು ಇಲಾಖೆ ನೋಟೀಸ್ ಕಳಿಸಿದೆ. ಆದರೆ ಇದೀಗ ವಾಣಿಜ್ಯ ಇಲಾಖೆ ಅಂಗಡಿ ಮಾಲೀಕರಿಗೆ ಸಿಹಿ ಸುದ್ದಿ ಒಂದನ್ನು ನೀಡಿದ್ದು, 40 ಲಕ್ಷ ರೂಪಾಯಿಗಿಂತ ಅಧಿಕ ವಹಿವಾಟು ನಡೆಸಿದ ಬೇಕರಿ, ಕಾಂಡಿಮೆಂಟ್ಸ್, ಬೀಡ ಅಂಗಡಿಗಳು ಕಮರ್ಷಿಯಲ್ ಟ್ಯಾಕ್ಸ್ ಪಾವತಿ ಮಾಡಬೇಕೆಂಬ ನೋಟಿಸ್ಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆ ಸ್ಪಷ್ಟನೆ ನೀಡಿದ್ದು, ವಾರ್ಷಿಕ ವಹಿವಾಟು 1.5 ಕೋಟಿಗಿಂತ ಕಡಿಮೆ ಇದ್ದರೇ ಅಂತಹ ವರ್ತಕರು ಕೇವಲ ಶೇ 1 ರಷ್ಟು ಮಾತ್ರ ತೆರಿಗೆ ಪಾವತಿಸಬಹುದಾಗಿದೆ ಎಂದು ಹೇಳಿದೆ. ಹೌದು ಜುಲೈ 1, 2017 ರಿಂದ ಸರಕು ಮತ್ತು…
ದಾವಣಗೆರೆ : ಬೆಂಗಳೂರಲ್ಲಿ ಬೀದಿ ನಾಯಿಗಳಿಗೆ ಬಿರಿಯಾನಿ ಹಂಚುವ ವಿಚಾರವಾಗಿ ವಿಪಕ್ಷ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದು ಕೂಡ ಹಣ ಲೂಟಿ ಮಾಡುವ ಕೆಲಸವಾಗಿದೆ ಎಂದು ಕಿಡಿ ಕಾರಿದ್ದರು. ಇದೀಗ ಈ ವಿಚಾರವಾಗಿ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದು, ವಿದೇಶಗಳಿಗೆ ಹೆಚ್ಚು ಗೋಮಾಂಸ ಪೂರೈಕೆ ಮಾಡೋದು ಭಾರತ ಅದರ ಬಗ್ಗೆ ಉತ್ತರ ಪ್ರದೇಶದ ಸಿಎಂ ಅವರನ್ನೇ ಕೇಳಿ ಎಂದು ತಿರುಗೇಟು ನೀಡಿದ್ದಾರೆ. ದಾವಣಗೆರೆಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿದ್ದು, ಬೆಂಗಳೂರಲ್ಲಿ ಬೀದಿ ನಾಯಿಗಳಿಗೆ ಬಿರಿಯಾನಿ ಯಾರು ಹಾಕಿದ್ದಾರೆ ಗೊತ್ತಿಲ್ಲ. ಆದರೆ ಬಿರಿಯಾನಿ ಪ್ರಶ್ನೆ ಮಾಡುವ ಬಿಜೆಪಿ ನಾಯಕರನ್ನು ಕೇಳಿ ಭಾರತ ಅತಿ ಹೆಚ್ಚು ಗೋಮಾಂಸ ರಸ್ತೆ ಮಾಡುತ್ತಿದೆ. ಅದರಲ್ಲಿ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಗೋಮಾಂಸ ಪೂರೈಕೆ ಮಾಡಲಾಗುತ್ತಿದೆ. ಗೋಮಾತೆ ಜಪ ಮಾಡುವ ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇದಕ್ಕೆ ಉತ್ತರಿಸಬೇಕು ಎಂದು ದಾವಣಗೆರೆಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿಕೆ…
ಬೆಂಗಳೂರು : ದಕ್ಷಿಣಭಾರತದ ಬಹುತೇಕ ಬ್ಲಾಸ್ಟ್ ಪ್ರಕರಣಗಳಲ್ಲಿ ಮೋಸ್ಟ್ ವಾಂಟೆಡ್ ಉಗ್ರ ಟಿ.ನಾಸಿರ್ ಗೆ ಸಹಾಯ ಮಾಡಿದ ಹಿನ್ನೆಲೆ NIA ಮೂವರು ಶಂಕಿತ ಉಗ್ರರನ್ನು ಅರೆಸ್ಟ್ ಮಾಡಿದೆ. ASI ಚಾನ್ ಪಾಷಾ, ವೈದ್ಯ ನಾಗರಾಜ್ ಹಾಗು ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಉಗ್ರ ಜುನೈದ್ ತಾಯಿ ಫಾತಿಮಳನ್ನು NIA ಬಂಧಿಸಿ ವಿಚಾರಣೆ ನಡೆಸುತ್ತಿದೆ. ಇದೀಗ ವಿಚಾರಣೆ ವೇಳೆ ಮತ್ತಷ್ಟು ಸ್ಫೋಟಕವಾದ ಅಂಶಗಳು ಬಯಲಾಗಿದ್ದು, ಸದ್ಯ ಮತ್ತೋರ್ವ ಉಗ್ರ ಜುನೈದ್ ಗಲ್ಫ್ ದೇಶದಲ್ಲಿ ಇದ್ದಾನೆ ಎಂದು ತಿಳಿದುಬಂದಿದೆ. ಹೌದು ಎನ್‌ಐಎ ಅಧಿಕಾರಿಗಳಿಂದ ಮೂವರು ಶಂಕಿತ ಉಗ್ರರ ಬಂಧನದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳು ಒಂದೊಂದಾಗಿ ಹೊರ ಬೀಳುತ್ತಿವೆ. ನಾಲ್ಕನೇ ದಿನದ ಕಸ್ಟಡಿಯಲ್ಲಿ ಬಂಧಿತ ಮೂವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಎನ್‌ಐಎ ಅಧಿಕಾರಿಗಳು ಮೂವರ ಉಗ್ರರ ಬಾಯಿ ಬಿಡಿಸುವಲ್ಲಿ ನಿರತರಾಗಿದ್ದಾರೆ. ಇದೇ ವೇಳೆ ಉಗ್ರ ಜುನೈದ್ ಮಧ್ಯರಾತ್ರಿ ಮೊಬೈಲ್‌ನಲ್ಲಿ ಕರೆ ಮಾಡಿ ಹಲವರೊಂದಿಗೆ ಮಾತನಾಡುತ್ತಿದ್ದ. ತನ್ನ ತಾಯಿಗೂ ಸಹ ಕರೆ ಮಾಡುತ್ತಿದ್ದು, ತಾಯಿ ಉನ್ನಿಸಾ ಸಹ…
ಬೆಂಗಳೂರು : ರಾಜ್ಯದಲ್ಲಿ ಹೃದಯಾಘಾತದಿಂದ ಸರಣಿ ಸಾವುಗಳು ಸಂಭಾವಿಸುತ್ತಿddu ಇದೀಗ ಇಂದು ಬೆಳಿಗ್ಗೆ ಮೈಸೂರು, ದಾವಣಗೆರೆಯಲ್ಲಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದು, ಇದೀಗ ಬೆಂಗಳೂರಿನಲ್ಲಿ ಡ್ಯಾನ್ಸ್ ಮಾಡುತ್ತಿರುವಾಗಲೇ ಹೃದಯಾಘಾತ ದಿಂದ ವೇದಿಕೆ ಮೇಲೆ ಕುಸಿದು ಬಿದ್ದು ವ್ಯಕ್ತಿ ಸಾವನಪ್ಪಿದ್ದಾನೆ. ಮೃತ ವ್ಯಕ್ತಿಯನ್ನು ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಸರ್ಜಾಪುರದ ಬಸವರಾಜ್ ಎಂದು ತಿಳಿದುಬಂದಿದೆ. ಬಸವರಾಜ್ ಖಾಸಗಿ ಕಂಪನಿಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದ. ಸ್ನೇಹಿತರ ಜೊತೆಗೆ ರೆಸಾರ್ಟ್ ಗೆ ತೆರಳಿದ್ದಾಗಲೇ ಈ ಒಂದು ಘಟನೆ ಸಂಭವಿಸಿದೆ. ಇಂದು ಬೆಂಗಳೂರಿನಿಂದ ಸರ್ಜಾಪುರ ಗ್ರಾಮಕ್ಕೆ ಬಸವರಾಜ್ ಶವವನ್ನು ಇದೀಗ ಶಿಫ್ಟ್ ಮಾಡಲಾಗಿದೆ.
ಮೈಸೂರು : ಇಂದು ಬೆಳಿಗ್ಗೆ 5:30 ರ ಸುಮಾರಿಗೆ ತಿರುವಲ್ಲೂರು ರೈಲು ನಿಲ್ದಾಣದ ಬಳಿ ಡೀಸೆಲ್ ಸಾಗಿಸುತ್ತಿದ್ದ ಸರಕು ರೈಲಿನ ನಾಲ್ಕು ವ್ಯಾಗನ್‌ಗಳಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. 5 ಬೋಗಿಗಳಲ್ಲಿ ಕಾಣಿಸಿಕೊಂಡ ಬೆಂಕಿ ಕ್ರಮೇಣ 22 ಬೋಗಿಗಳಿಗೆ ಆವರಿಸಿದೆ. ಸುತ್ತಮುತ್ತಲಿನ ದೇಶಗಳಲ್ಲಿ ಭೀತಿ ಉಂಟಾಗಿದೆ. ಈ ಹಿನ್ನೆಲೆ ಇದೀಗ ಚೆನ್ನೈ ವಿಭಾಗದಲ್ಲಿ ಪೆಟ್ರೋಲಿಯಂ ಹೊತ್ತಿರುವ ಬೋಗಿ ವ್ಯಾಗನ್ ಪತನ ಹಾಗೂ ಬೆಂಕಿಯಿಂದಾಗಿ ರೈಲುಗಳ ರದ್ದತಿ ಕುರಿತು ಪ್ರಕಟಣೆ ಹೊರಡಿಸಿದ್ದು, ಚೆನ್ನೈ ವಿಭಾಗದ ತಿರುವಳ್ಳುರ್ ಬಳಿ ಪೆಟ್ರೋಲಿಯಂ ಭರಿತ ಬೋಗಿ ಟ್ಯಾಂಕ್ ವ್ಯಾಗನ್ (BTPN) ರೇಕ್ ಪತನಗೊಂಡು ನಂತರ ಬೆಂಕಿ ಹತ್ತಿದೆ. ಈ ಕಾರಣದಿಂದಾಗಿ ದಕ್ಷಿಣ ರೈಲ್ವೆಯು ಈ ಕೆಳಕಂಡ ರೈಲು ಸೇವೆಗಳನ್ನು ಇಂದಿಗೆ (13.07.2025) ರದ್ದುಗೊಳಿಸಿದೆ: 1. ರೈಲು ಸಂಖ್ಯೆ 20607 – ಎಂ.ಜಿ.ಆರ್ ಚೆನ್ನೈ ಸೆಂಟ್ರಲ್ – ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್, 13.07.2025 ರಂದು ರದ್ದುಗೊಂಡಿದೆ. 2. ರೈಲು ಸಂಖ್ಯೆ 12007 – ಎಂ.ಜಿ.ಆರ್ ಚೆನ್ನೈ ಸೆಂಟ್ರಲ್ –…














