Subscribe to Updates
Get the latest creative news from FooBar about art, design and business.
Author: kannadanewsnow05
ಮಂಡ್ಯ : ಮಾಜಿ ಶಾಸಕ ಸುರೇಶ್ ಗೌಡ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ. ಮಂಡ್ಯ ಜಿಲ್ಲೆಯ ಬೊಂತೆಕೊಪ್ಪಲು ಸಮೀಪ ನಿನ್ನೆ ರಾತ್ರಿ ಒಂದು ಅಪಘಾತ ನಡೆದಿದೆ.ಅದೃಷ್ಟವಶಾತ್ ಅಪಘಾತದಲ್ಲಿ ಮಾಜಿ ಶಾಸಕ ಸುರೇಶ್ ಗೌಡ ಪ್ರಾಣಪಾಯದಿಂದ ಪಾರಾಗಿದ್ದಾರೆ. ಸುರೇಶ ಗೌಡ ಮಂಡ್ಯ ಜಿಲ್ಲೆಯ ನಾಗಮಂಗಲ ಕ್ಷೇತ್ರದ ಮಾಜಿ ಶಾಸಕರಾಗಿದ್ದಾರೆ. ಪಕ್ಷದ ಕಾರ್ಯಕರ್ತರ ಮದುವೆಗೆ ಸುರೇಶ್ ಗೌಡ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಅಪಘಾತದ ರಭಸಕ್ಕೆ ಭಾಗಶಹ ಕಾರು ಜಖಂಗೊಂಡಿದೆ. ಸುರೇಶ್ ಗೌಡ ಕೈಗೆ ಪೆಟ್ಟಾಗಿದ್ದು, ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ತಕ್ಷಣ ಗನ್ ಮ್ಯಾನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುರೇಶ್ ಗೌಡರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮೈಸೂರು : ಮಹಿಳೆಯರ ಮುಂದೆ ಶಿಕ್ಷಕ ಮೂತ್ರ ವಿಸರ್ಜನೆ ಮಾಡುತ್ತಿದ್ದ ಆರೋಪ ಹಿನ್ನೆಲೆಯಲ್ಲಿ, ಇದನ್ನು ಪ್ರಶ್ನಿಸಿದ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ನಡೆದಿದೆ ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಚಿಕ್ಕನಾಯಕನಹಳ್ಳಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಸಿಎಂ ಗೋಪಾಲ್ ಮತ್ತು ಆತನ ಪುತ್ರ ಅಭಿಷೇಕಗೆ ಚಾಕು ಇರಿಲಾಗಿದೆ. ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಸಿಎಂ ಮಂಜುನಾಥನಿಂದ ಈ ಒಂದು ಕೃತ್ಯ ನಡೆದಿದೆ. ಸಿಎಂ ಗೋಪಾಲ ಸ್ಥಿತಿ ಗಂಭೀರವಾಗಿದ್ದು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿಕ್ಷಕ ಮಂಜುನಾಥನನ್ನು ಸಾಲಿಗ್ರಾಮ ಪೊಲೀಸರು ಇದೀಗ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಶಿಕ್ಷಕ ಮಂಜುನಾಥನನ್ನು ಅಮಾನತು ಮಾಡಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ.
ಚಿಕ್ಕಮಗಳೂರು : ಪತ್ನಿಯ ಅಕ್ರಮ ಸಂಬಂಧ ಮತ್ತು ಆಕೆ ತನ್ನ ವಿರುದ್ಧವೇ ನೀಡಿದ ಸುಳ್ಳು ದೂರಿನಿಂದ ಮನನೊಂದ ವ್ಯಕ್ತಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಮನು ಎಂದು ತಿಳಿದುಬಂದಿದೆ. ವೃತ್ತಿಯಲ್ಲಿ ಚಾಲಕನಾಗಿದ್ದ ಮನು, ಸಖರಾಯಪಟ್ಟಣ ಮೂಲದ ಹರಿಣಿ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದನು. ದಾಂಪತ್ಯ ಜೀವನ ಸುಗಮವಾಗಿಯೇ ಸಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಪತ್ನಿ ಹರಿಣಿಗೆ ಪಕ್ಕದ ಮನೆಯ ಅಶೋಕ್ ಎಂಬಾತನ ಜೊತೆ ಸಲುಗೆ ಬೆಳೆದಿತ್ತು. ಕಳೆದ ರಾತ್ರಿ ಮನು ತನ್ನ ಪತ್ನಿಯ ಮೊಬೈಲ್‌ನಲ್ಲಿ ಅಶೋಕ್ ಕಳುಹಿಸಿದ್ದ ಸಂದೇಶಗಳನ್ನು ನೋಡಿದ್ದನು. ಇದೇ ವಿಚಾರವಾಗಿ ಮನು ಮತ್ತು ಅಶೋಕ್ ನಡುವೆ ತೀವ್ರ ಗಲಾಟೆ ನಡೆದಿದೆ. ಈ ವೇಳೆ ಅಶೋಕ್, “ನಿನ್ನ ಹೆಂಡತಿ ಜೊತೆ ನನಗೆ ಸಂಬಂಧ ಇರುವುದು ನಿಜ” ಎಂದು ಹೇಳಿ ಮನುಗೆ ಅವಮಾನ ಮಾಡಿದ್ದಾನೆ ಎನ್ನಲಾಗಿದೆ. ಈ ಗಲಾಟೆಯ ಬೆನ್ನಲ್ಲೇ ಪತ್ನಿ ಹರಿಣಿ, ಗಂಡ ಮನು ವಿರುದ್ಧ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ…
ಮುಂಬೈ : ಕಳೆದ ವರ್ಷ ಬಾಲಿವುಡ್ ಸಿನಿಮಾ ಧುರಂಧರ್ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನಗೊಂಡಿತ್ತು. ಇದೀಗ ಮಾರ್ಚ್ 20ರಂದು ಧುರಂಧರ್-2 ಸಿನಿಮಾ ರಿಲೀಸ್ ಆಗಲಿದ್ದು ಸಿನಿಮಾ ಬಿಡುಗಡೆಗೆ ಮುನ್ನವೇ ಇದೀಗ ನಟ ರಣವೀರ್ ಸಿಂಗ್ ಗೆ ಬೆದರಿಕೆ ಸಂದೇಶ ಬಂದಿದೆ.. ಹೌದು ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ಒಂದೇ ತಿಂಗಳಲ್ಲಿ ಎರಡನೇ ಬಾರಿ ಬೆದರಿಕೆ ಸಂದೇಶ ಬಂದಿದೆ. ಅವರಿಂದ 10 ಕೋಟಿ ರೂಪಾಯಿ ಸುಲಿಗೆ ಮಾಡುವ ಉದ್ದೇಶದಿಂದ ಈ ರೀತಿ ಬೆದರಿಕೆ ಹಾಕಲಾಗಿದೆ. ಹಾಗಾಗಿ ರಣವೀರ್ ಸಿಂಗ್ ಅವರಿಗೆ ಮುಂಬೈ ಪೊಲೀಸರು ಹೆಚ್ಚಿನ ಭದ್ರತೆ ನೀಡಿದ್ದಾರೆ. ವರದಿಗಳ ಪ್ರಕಾರ, ರಣವೀರ್ ಸಿಂಗ್ ಅವರ ಮ್ಯಾನೇಜರ್ ವಾಟ್ಸಪ್ಗೆ ಬೆದರಿಕೆ ಸಂದೇಶ ಬಂದಿದೆ. ಅಮೆರಿಕ ಮೂಲದ ಮೊಬೈಲ್ ಸಂಖ್ಯೆಯಿಂದ ಸಂದೇಶ ಕಳಿಸಿ ಬೆದರಿಕೆ ಹಾಕಲಾಗಿದೆ. ಮುಂಬೈ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ತೀವ್ರಗೊಳಿಸಿದ್ದಾರೆ. ಇಂಥ ಪ್ರಕರಣಗಳು ಆಗಾಗ ನಡೆಯುತ್ತಿರುವುದರಿಂದ ಸೆಲೆಬ್ರಿಟಿಗಳಲ್ಲಿ ಆತಂಕ ಹೆಚ್ಚಾಗಿದೆ. ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಕಡೆಯಿಂದ ಈ ಮೊದಲು…
ಚಿತ್ರದುರ್ಗ : ಚಿತ್ರದುರ್ಗದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು ಪಟ್ಟರೆಹಳ್ಳಿ ಗ್ರಾಮದ ಬಳಿ ಹಿಟ್ ಅಂಡ್ ರನ್ ಗೆ ಇಬ್ಬರು ಬಲಿಯಾಗಿದ್ದಾರೆ, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಪಟ್ಟರೆಹಳ್ಳಿ ಗ್ರಾಮದಲ್ಲಿ ಈ ಒಂದು ಅಪಘಾತ ಸಂಭವಿಸಿದೆ. ರಸ್ತೆಬದಿ ನಿಂತಿದ್ದವರಿಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಘಟನೆಯಲ್ಲಿ ಮತ್ತೆ ಇಬ್ಬರಿಗೆ ಗಂಭೀರವಾದ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರು ಕಟ್ಟಿದ್ದರಿಂದ ರಸ್ತೆ ಬದಿ ನಾಲ್ವರು ರಿಪೇರಿಗಾಗಿ ನಿಂತಿದ್ದರು. ಈ ವೇಳೆ ಅಪಚಿತವಾ ವಾಹನ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸಾವನಪ್ಪಿದ್ದರೆ, ಇಬ್ಬರಿಗೆ ಗಾಯಗಳಾಗಿವೆ. ಅಪಘಾತದ ಬಳಿಕ ವಾಹನ ಸಮೇತ ಚಾಲಕ ಪರಾರಿಯಾಗಿದ್ದಾನೆ. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಗಲಕೋಟೆ : ಸಕ್ಕರೆ ಸಚಿವ ಶಿವಾನಂದ್ ಪಾಟೀಲ್ ಅವರಿಗೆ ಮಾತೃ ವಿಯೋಗ. ಸಚಿವ ಶಿವಾನಂದ್ ಪಾಟೀಲ್ ಗಂಗಾಬಾಯಿ (84) ಇಂದು ವಿಧಿವಶರಾಗಿದ್ದಾರೆ. ಗಂಗಾಬಾಯಿ ಅವರಿಗೆ ಮೂವರು ಪುತ್ರರು ಹಾಗೂ ಓರ್ವ ಪುತ್ರಿಯರು ಇದ್ದಾರೆ. ಸಂಜೆ 4:30ಕ್ಕೆ ಗಂಗಾಬಾಯಿ ಸಿದ್ದರಾಮಯ್ಯ ಪಾಟೀಲ ಅವರ ಅಂತ್ಯಕ್ರಿಯೆ ನಡೆಯಲಿದೆ. ವಿಜಯಪುರದ ಜಮಖಂಡಿ ರಸ್ತೆಯಲ್ಲಿರುವ ತೋಟದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ. ವಿವಿಧ ಮಠಾಧೀಶರು ರಾಜಕೀಯ ನಾಯಕರು ಹಾಗೂ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಹುಬ್ಬಳ್ಳಿ : ಅಮೆಜಾನ್ ಅಥವಾ ಹಲವು ಆನ್ಲೈನ್ ಶಾಪಿಂಗ್ ಮಾಡುವಾಗ ನಾವು ಮಾಡಿರುವ ಆರ್ಡರ್ ಬೇರೆ ಆದರೆ ಅಲ್ಲಿ ಬರುವ ವಸ್ತುಗಳೆ ಬೇರೆ, ಈ ರೀತಿ ಅನೇಕ ಘಟನೆಗಳು ಈ ಹಿಂದೆ ನಡೆಯಲಿವೆ. ಅದರಂತೆ ಇದೀಗ ಮತ್ತೊಂದು ಘಟನೆ ನಡೆದಿದ್ದು ಹುಬ್ಬಳ್ಳಿ ಉದ್ಯಮಿಯೊಬ್ಬರು ಅಮೆಜಾನ್ ನಲ್ಲಿ ಕ್ಯಾಮೆರಾ ಆರ್ಡರ್ ಮಾಡಿದರೆ ಅವರಿಗೆ ಡೆಲಿವರಿ ಆಗಿದ್ದು ಎರಡು ವಾಷಿಂಗ್ ಪೌಡರ್ ಪ್ಯಾಕೆಟ್. ಹೌದು ಕ್ಯಾಮರಾ ಆರ್ಡರ್ ಮಾಡಿದ್ದಕ್ಕೆ ವಾಷಿಂಗ್ ಪೌಡರ್ ಡೆಲಿವರಿ ಆಗಿದೆ. ಅಮೆಜಾನ್ ಕಂಪನಿ ವಿರುದ್ಧ ಉದ್ಯಮಿ ಆಲ್ಫ್ರೈಡ್ ಝೆವಿಯರ್ ಗಂಭೀರವಾದ ಆರೋಪ ಮಾಡಿದ್ದಾರೆ. ಹುಬ್ಬಳ್ಳಿ ಮೂಲದ ಅಲ್ಫ್ರೈಡ್ ಝೆವಿಯರ್ ಶಾರ್ಜಾದಲ್ಲಿ ನೆಲೆಸಿದ್ದಾರೆ. ಡಿಜೆಐ ಹೊಸ ಪಾಕೆಟ್ ಮೂರು ಕ್ಯಾಮರಾ ಬುಕ್ ಮಾಡಿದ್ದರು. ಆತ್ಮೀಯರೊಬ್ಬರಿಗೆ ಹುಡುಗರಿಗೆ ನೀಡಲು ಕ್ಯಾಮೆರಾ ಬುಕ್ ಮಾಡಿದ್ದರು. ಅಮೆಜಾನ್ ನಲ್ಲಿ ಕ್ಯಾಮೆರಾ ಆರ್ಡರ್ ಮಾಡಿದ್ದರು. ಹುಬ್ಬಳ್ಳಿಯ ಖಾಸಗಿ ಹೋಟೆಲ್ ವಿಳಾಸಕ್ಕೆ ನಿನ್ನ ಕೊರಿಯರ್ ಬಂದಿದೆ, ಕೋರಿಯರ್ ತೆರೆದು ನೋಡಿದಾಗ ಎರಡು ಪಾಕೆಟ್ ವಾಷಿಂಗ್ ಪೌಡರ್ ಪತ್ತೆಯಾಗಿದೆ. ಅಮೆಜಾನ್…
ದಾವಣಗೆರೆ : ಅಗ್ನಿ ಅವಘಡಕ್ಕೆ ಬೆಣ್ಣೆ ದೋಸೆ ಹೋಟೆಲ್ ಸುಟ್ಟು ಭಸ್ಮವಾಗಿದೆ. ಪ್ರಸಿದ್ದ ಶ್ರೀ ಕೊಟ್ಟೂರೇಶ್ವರ ಹೋಟೆಲ್, ಸಂಪೂರ್ಣವಾಗಿ ಸುಟ್ಟು ಬಸ್ಮವಾಗಿದೆ. ದಾವಣಗೆರೆಯ ಡೆಂಟಲ್ ಕಾಲೇಜು ಬಳಿ ಈ ಒಂದು ಘಟನೆ ನಡೆದಿದೆ. ಹೋಟೆಲ್ ಕ್ಲೋಸ್ ಆಗಿದ್ದರಿಂದ ಭಾರಿ ಅನಾಹುತ ಒಂದು ತಪ್ಪಿದೆ. ಹೋಟೆಲ್ ನಲ್ಲಿ ಇದ್ದಂತಹ ವಸ್ತುಗಳೆಲ್ಲವೂ ಸುಟ್ಟು ಭಸ್ಮವಾಗಿವೆ. ದಾವಣಗೆರೆ ನಗರದಲ್ಲಿರುವ ಅತ್ಯಂತ ಹಳೆಯ ಹೋಟೆಲ್ ಎಂದು ಪ್ರಸಿದ್ಧವಾಗಿದ್ದು, ಕೊಟ್ಟೂರೇಶ್ವರ ಹೋಟೆಲ್ ಇದೀಗ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಬೆಂಗಳೂರು : ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರ ಮೂಲದ ಹಾಗೂ ಬೈರನಕುಂಟೆ ನಿವಾಸಿ ಮಹಮ್ಮದ್ ಜಹಂಗೀರ್(43) ಬಂಧಿತ. ಮಹಿಳೆಯೊಬ್ಬರು ನೀಡಿದ ದೂರಿನನ್ವಯ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೂರುದಾರೆ ಹಾಗೂ ಆರೋಪಿ ಬಿಹಾರ ಮೂಲದವರಾ ಗಿದ್ದು, ನಗರದ ಬೈರನಕುಂಟೆಯಲ್ಲಿ ವಾಸವಾಗಿದ್ದರು. ಮಹಿ ಳೆಯ ಪತಿ ಹಾಗೂ ಆರೋಪಿ ಸ್ನೇಹಿತರಾಗಿದ್ದರು. ಆರೋಪಿಯ ಪತ್ನಿ ಬಿಹಾರದಲ್ಲಿದ್ದ ಕಾರಣ ಮಹಿಳೆ ಈತನ ಮನೆಗೆ ಬಂದು ಅಡುಗೆ ಮಾಡಿ ಕೊಟ್ಟು ಹೋಗುತ್ತಿದ್ದರು. ಆರೋಪಿಯು 2023ರಲ್ಲಿ ಮಹಿಳೆ ಮೇಲೆ ಅತ್ಯಾಚಾರ ನಡೆಸಿ ವಿಡಿಯೋ ಮಾಡಿಕೊಂಡಿದ್ದ. ನಂತರ ಆ ವಿಡಿಯೋ ತೋರಿಸಿ ಈ ವಿಚಾರ ಬಹಿರಂಗಪಡಿಸಿದರೆ ಅದನ್ನು ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದ. ಬಳಿಕ ಮಹಿಳೆ ಬಿಹಾರಕ್ಕೆ ತೆರಳಿದ್ದರು. 3 ವರ್ಷಗಳ ಬಳಿಕ ಮಹಿಳೆ ಮತ್ತೆ ಬೆಂಗಳೂರಿಗೆ ವಾಪಾಸ್ ಬಂದಿದ್ದಾರೆ. ಊಟ ಕೊಡಲು ಹೋದಾಗ ಸೆಕ್ಸ್ಗೆ ಸಹಕರಿಸದಿದ್ದರೆ 5 ಲಕ್ಷ ಹಣ…
ದಕ್ಷಿಣಕನ್ನಡ : ಲೂಡೋ ಬೋರ್ಡ್ ಕಾಯಿನ್ ನುಂಗಿ ಬಾಲಕಿ ಸಾವನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಪ್ಲಾಸ್ಟಿಕ್ ಕಾಯಿನ್ ನುಂಗಿ 8 ವರ್ಷದ ತನುಷ್ಕ ಸಾವನ್ನಪ್ಪಿದ್ದಾಳೆ ಸಹೋದರರ ಜೊತೆ ಲೂಡೋ ಆಡುವಾಗ ಈ ಒಂದು ಘಟನೆ ನಡೆದಿದೆ.ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮದಲ್ಲಿ ಈ ಒಂದು ಘೋರ ದುರಂತ ಸಂಭವಿಸಿದೆ. ಕೇರಳದ ಕಾಸರಗೋಡು ಜಿಲ್ಲೆಯ ನಿವಾಸಿಯಾಗಿರುವ ತನುಷ್ಕ ಗಂಟಲಲ್ಲಿ ಲೂಡೋ ಕಾಯಿನ್ ಸಿಲುಕಿ ಸಾವನ್ನಪ್ಪಿದ್ದಾಳೆ. ಆಟ ಆಡುವ ಸಂದರ್ಭದಲ್ಲಿ ಲೂಡೋ ಕಾಯಿನ್ ಬಾಯಲ್ಲಿ ಇಟ್ಟುಕೊಂಡಿರುತ್ತಾಳೆ. 20 ನಿಮಿಷಗಳ ಕಾಲ ಗಂಟಲಲ್ಲಿ ಸಿಲುಕಿ ಉಸಿರಾಡಲು ಸಾಧ್ಯವಾಗದೆ ನರಳಾಡಿದ್ದಾಳೆ. ತಕ್ಷಣ ಪೋಷಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿ ಆಗಲಿ ಆಕೆಯ ಪ್ರಾಣ ಪಕ್ಷಿ ಹಾರಿ ಹೋಗಿದೆ.














