Author: kannadanewsnow05

ಹುಬ್ಬಳ್ಳಿ : ಒಂದು ಕಡೆ ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಕುರಿತು ಭಾರಿ ಚರ್ಚೆ ಆಗುತ್ತಿದ್ದು, ಇನ್ನೊಂದು ಕಡೆ ಡಿಕೆ ಶಿವಕುಮಾರ್ ಅವರು ನಿನ್ನೆ ಮುಂದಿನ ಚುನಾವಣೆ ನನ್ನ ನೇತೃತ್ವದಲ್ಲೇ ನಡೆಯಲಿದೆ ಎಂದು ಪರೋಕ್ಷವಾಗಿ ಸಿಎಂ ಆಗುವ ಕುರಿತು ವಿರೋಧಿ ಬಣಗಳಿಗೆ ಟಾಂಗ್ ನೀಡಿದ್ದಾರೆ. ಇದರ ಮಧ್ಯ ಡಿ.ಕೆ.ಶಿವಕುಮಾರ್ ಇದೇ ಅವಧಿಯಲ್ಲಿ ಸಿಎಂ ಆಗ್ತಾರೆ ಎಂದು ಭೈರವಿ ಅಮ್ಮ ಸ್ಪೋಟಕ ಭವಿಷ್ಯ ಹೇಳಿದ್ದಾರೆ. ನಗರದಲ್ಲಿರುವ ಸಿದ್ದರೂಢ ಮಠದ ಕಾರ್ಯಕ್ರಮದಲ್ಲಿ ಇಂದು ಭಾಗಿಯಾದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದ ಅವರು, ನನ್ನ‌ ಮಾತು ಯಾವತ್ತೂ ಸುಳ್ಳಾಗಲ್ಲ. ಇಲ್ಲಿಯತನಕ ಸುಳ್ಳಾಗಿಲ್ಲ, ಸುಳ್ಳು ಆಗೋದೂ ಇಲ್ಲ. ನಾನೂ ಮೂರು ವರ್ಷದ ಹಿಂದೆ ಡಿಕೆಶಿ ಮನೆಗೆ ಹೋಗಿದ್ದೆ. ಅವರು ನನ್ನ ಕರೆದಿದ್ರು. ಮುಂದೆ ಏನಾಗುತ್ತೆ ಅಂತಾ ಕೇಳಿದ್ರು. ಏನು ಆಗಬೇಕು ಅಂತಾ ಕೇಳಿದೆ. ಮುಂದಿನ ಕಥೆ ಏನು ಅಂತಾ ಕೇಳಿದರು. ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಅಂತಾ ಹೇಳಿದ್ದೆ. ನೀನು ದುಡಿದ ದುಡ್ಡು, ಇನ್ಯಾವನೋ ತಿಂದು ಗುಂಡಾಗ್ತಾನೆ…

Read More

ಬೆಂಗಳೂರು : ಕ್ಷೇತ್ರ ಮರುವಿಂಗಡಣೆ ನಡೆದಾಗ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎನ್ನುವ ಕೇಂದ್ರ ಗೃಹ ಸಚಿವ ಅಮಿತ್ ಶಾಅವರ ಹೇಳಿಕೆ ನಂಬಿಕೆಗೆ ಅರ್ಹವಾಗಿಲ್ಲ. ಇದು ದಕ್ಷಿಣದ ರಾಜ್ಯಗಳಲ್ಲಿ ಗೊಂದಲ ಹುಟ್ಟಿಸುವ ದುರುದ್ದೇಶದಿಂದ ಕೂಡಿದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಈ ಕುರಿತು ಸಿಎಂ ಸಿದ್ದರಾಮಯ್ಯ ಸಾಮಾಜಿಕ ಜಾಲತಾಣ ತಮ್ಮ ಖಾತೆಯಲ್ಲಿ ಸರಣಿ ವಾಗ್ದಾಳಿ ನಡೆಸಿದ್ದು, ಕೇಂದ್ರ ಗೃಹ ಸಚಿವರ ಬೀಸು ಹೇಳಿಕೆಯನ್ನು ನೋಡಿದರೆ ಅವರಿಗೆ ಒಂದೋ ಮಾಹಿತಿಯ ಕೊರತೆ ಇದೆ, ಇಲ್ಲವಾದರೆ ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳಾದ ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶಗಳಿಗೆ ಅನ್ಯಾಯ ಮಾಡುವ ದುರುದ್ದೇಶ ಇದೆ ಎಂದು ಅರ್ಥಮಾಡಿಕೊಳ್ಳಬಹುದು. ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಮಾಡಬಾರದೆಂಬ ಸದುದ್ದೇಶ ಕೇಂದ್ರ ಸರ್ಕಾರ ಹೊಂದಿರುವುದಾಗಿದ್ದರೆ ಕ್ಷೇತ್ರ ಮರುವಿಂಗಡಣೆಯನ್ನು ಜನಸಂಖ್ಯೆಯ ಅನುಪಾತದ ಆಧಾರದಲ್ಲಿ ಮಾಡಲಾಗುವುದೋ? ಇಲ್ಲವೇ ಲೋಕಸಭಾ ಸದಸ್ಯರ ಈಗಿನ ಸಂಖ್ಯೆಯ ಅನುಪಾತದಲ್ಲಿ ಮಾಡಲಾಗುವುದೋ? ಎಂಬ ಮುಖ್ಯ ಪ್ರಶ್ನೆಗೆ ಗೃಹ ಸಚಿವರು ಉತ್ತರಿಸಬೇಕಾಗುತ್ತದೆ.ಇತ್ತೀಚಿನ ಜನಸಂಖ್ಯೆಯ ಅನುಪಾತದಲ್ಲಿ ಕ್ಷೇತ್ರ ಮರುವಿಂಗಡಣೆ ನಡೆದರೆ…

Read More

ಹಾಸನ : ಹಾಸನದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಲಾರಿ ಹಾಗು ಬೈಕ್ ಮಧ್ಯ ಅಪಘಾತ ಸಂಭವಿಸಿ ಸ್ಥಳದಲ್ಲೇ ಇಬ್ಬರು ಬೈಕ್ ಸವಾರರು ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.ಮೃತ ಸವಾರರನ್ನು ಆಕಾಶ್​​ (22) ಶಂಕರ್​ (45) ಎಂದು ತಿಳಿದುಬಂದಿದೆ. ಇವರು ಸಕಲೇಶಪುರ ತಾಲೂಕಿನ ವಳಲಹಳ್ಳಿ ಗ್ರಾಮದ ನಿವಾಸಿಗಳು ಎನ್ನಲಾಗಿದ್ದು, ಇವರು ಇಂದು ಸಕಲೇಶಪುರ ಪಟ್ಟಣದಲ್ಲಿ ನಡೆಯುತ್ತಿರುವ ಸಕಲೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಮುಗಿಸಿ ವಾಪಸ್​ ಸ್ವಗ್ರಾಮಕ್ಕೆ ತೆರಳುವ ವೇಳೆ ಹಿಂಬದಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಥಳದಲ್ಲೇ ಇಬ್ಬರು ಸಾವಿಗೀಡಾಗಿದ್ದಾರೆ. ಅಪಘಾತಕ್ಕೆ ಲಾರಿ ಚಾಲಕನ ನಿರ್ಲಕ್ಷ್ಯ ಮತ್ತು ಅತೀ ವೇಗವೇ ಕಾರಣ ಎನ್ನಲಾಗಿದೆ. ಸ್ಥಳಕ್ಕೆ ಸಕಲೇಶಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ನವದೆಹಲಿ : ಬೆಂಗಳೂರಿನ ಅರಮನೆ ಜಾಗಕ್ಕೆ ಟಿಡಿಆರ್ ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಸುಪ್ರೀಂಕೋರ್ಟ್ ಅಲ್ಲಿ ಮೈಸೂರು ರಾಜಮನೆತನ ಸಲ್ಲಿಸಿದ ವಿಚಾರಣೆ ಇಂದು ನಡೆಯಿತು. ಅರ್ಜಿ ವಿಚಾರಣೆಯ ಬಳಿಕ ನ್ಯಾ.ಸುರೇಶ ಹಾಗೂ ನ್ಯಾ.ಅರವಿಂದ್ ಕುಮಾರ್ ಅವರಿದ್ದ ಪೀಠವು ಒಂದು ವಾರದ ಒಳಗಾಗಿ ಟಿಡಿಆರ್ ತನ್ನ ಸುಪರ್ದಿಗೆ ನೀಡಬೇಕು ರಾಜ್ಯ ಸರಕಾರಕ್ಕೆ ಸೂಚನೆ ನೀಡಿ ವಿಚಾರಣೆಯನ್ನು ಮಾರ್ಚ್ 20ಕ್ಕೆ ಮುಂದೂಡಿತು. ಈ ವೇಳೆ ನ್ಯಾಯಾಂಗ ನಿಂದನೆಯಿಂದ ಪಾರಾದ ರಾಜ್ಯ ಸರ್ಕಾರ. ಟಿಡಿಆರ್ ನೀಡಿದರೂ ಸಹ ಅದು ಬಳಕೆಯಾದಂತೆ ವಕೀಲರು ನೋಡಿಕೊಂಡಿದ್ದಾರೆ. ಟಿಡಿಆರ್ ಬಳಕೆಯಾದಂತೆ ಸರ್ಕಾರದ ಪರ ವಕೀಲರು ಇದೀಗ ನೋಡಿಕೊಂಡ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಸರ್ಕಾರಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ರಾಜ ಮನೆತನದವರಿಗೆ ನೀಡಬೇಕಿದ್ದ ಟಿಡಿಆರ್ ಕೋರ್ಟಿಗೆ ಹಸ್ತಾಂತರವಾಗಿದ್ದು, ರಾಜಮನೆತನದವರಿಗೆ ನೀಡಬೇಕಿದ್ದ 3400 ಕೋಟಿಯ ಟಿಡಿಆರ್ ನ್ಯಾಯಾಲಯದ ಅಧಿಕಾರದಲ್ಲಿ ಟಿಡಿಆರ್ ಇರಲಿದೆ. ಇದರಿಂದ ಟಿಡಿಆರ್ ಬಳಕೆ ಆಗಬಹುದು ಎನ್ನುವ ಆತಂಕದಿಂದ ಇದೀಗ ರಾಜ್ಯ ಸರ್ಕಾರಕ್ಕೆ ಮುಕ್ತಿ ದೊರೆತಿದೆ. ಇತ್ತ ಟಿಡಿಆರ್ ನೀಡಲು ನ್ಯಾಯಾಲಯ ಸೂಚಿಸಿತ್ತು.…

Read More

ಬೆಂಗಳೂರು : ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ರಚನೆ ಮಾಡಿರುವ ಸಮಿತಿ ಸದಸ್ಯರಿಗೆ ಸಂಪುಟ ಸ್ಥಾನಮಾನ ನೀಡಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಸಮಿತಿಗಳ ಮುಖ್ಯಸ್ಥರಿಗೆ ಸಚಿವ ಸಂಪುಟ ಸ್ನಾನಮಾನ ಪ್ರಶ್ನಿಸಿ ಪಿಐಎಲ್ ಸಲ್ಲಿಸಲಾಗಿದೆ. ಪಿ.ರಾಜೀವ್ ಸಲ್ಲಿಸಿದ ವಿಚಾರಣೆಯನ್ನು ನಡೆಸಿದ ಹೈಕೋರ್ಟ್ ಕಾಂಗ್ರೆಸ್ ಪಕ್ಷದ ನಾಯಕರಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ. ಸಂವಿಧಾನ ಆರ್ಟಿಕಲ್ 164 (1A) ಉಲ್ಲಂಘಿಸಿ ನೇಮಕ ಮಾಡಲಾಗಿದೆ. ಯಾವುದೇ ಶೈಕ್ಷಣಿಕ ತಾಂತ್ರಿಕ ಅರ್ಹತೆ ಪರಿಗಣಿಸದೆ ನೇಮಕದ ಆರೋಪ ಕೇಳಿ ಬಂದಿದೆ ಎಂದು ಅರ್ಜಿದಾರರ ಪರ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು. ಬಳಿಕ ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ನ್ಯಾಯಪೀಠವು, ಆರೋಪ ಸತ್ಯವಾದರೆ ಸರ್ಕಾರದ ಕ್ರಮ ಸ್ವಾಗತಾ ರ್ಹವಲ್ಲ ಎಂದು ಸರ್ಕಾರದ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜ್ಯ ಸರ್ಕಾರ ಮತ್ತು ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಸಮಿತಿಯ ಸದಸ್ಯರಿಗೆ ನೋಟಿಸ್ ಜಾರಿ…

Read More

ಕಲಬುರ್ಗಿ : ವಿದ್ಯಾರ್ಥಿಗಳಿಗೆ ಅಂಕಪಟ್ಟಿ ವಿಳಂಬ, ನಕಲಿ ಪದವಿ ಪ್ರಮಾಣ ಪತ್ರ, ಅಂಕಪಟ್ಟಿ ಮತ್ತು ಲಂಚದ ಆರೋಪ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಗುಲ್ಬರ್ಗ ವಿಶ್ವವಿದ್ಯಾಲಯದ ಮೇಲೆ ಲೋಕಾಯುಕ್ತ ಅಧಿಕಾರಿಗಳ 5 ತಂಡಗಳು ಏಕಕಾಲಕ್ಕೆ ದಾಳಿ ನಡೆಸಿವೆ. ಹೌದು ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಮೇಲೆ ಗುರುವಾರ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ದಾಳಿಯ ವೇಳೆ ಗುಲ್ಬರ್ಗ ವಿಶ್ವವಿದ್ಯಾನಿಲಯದ ಹಾಜರಿ ಪುಸ್ತಕ, ಚಲನವಲನ ರಿಜಿಸ್ಟರ್, ಕ್ಯಾಸಿಸ್ಟರ್, ಸಿಸಿಟಿವಿ ಕ್ಯಾಮರಾ ಸೇರಿದಂತೆ ಹಲವು ರೀತಿಯಲ್ಲಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಲೋಕಾಯುಕ್ತ ಎಸ್ಪಿ ಉಮೇಶ್ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಡಿವೈಎಸ್ಪಿ ಗೀತಾ ಬೇನಾಳ, ಡಿವೈಎಸ್ಪಿ ಹನುಮಂತ್ ರಾಯ, ಇನ್ ಸ್ಪೆಕ್ಟರ್ ಸಂತೋಷ್, ಅರುಣ್ ಕುಮಾರ್, ಸಿದ್ದರಾಯ ರಾಜಶೇಖರ್ ಹಾಗೂ ಪೊಲೀಸ್ ಸಿಬ್ಬಂದಿಯಾದ ಬಸವರಾಜ್, ಪ್ರದೀಪ್ ಕುಮಾರ್, ರೇಣುಕಾ, ಜಯಶ್ರೀ, ಮಸೂದ್, ಗುಂಡುರಾವ್ ಸಿಬ್ಬಂದಿ ಈ ದಾಳಿ ನಡೆಸಿದೆ ಎನ್ನಲಾಗಿದೆ.

Read More

ಕಲಬುರ್ಗಿ : ದೇಶದ 28 ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿ ತಯಾರಿಸಿ ಮಾರಾಟ ಮಾಡುತ್ತಿದ್ದ ದೆಹಲಿ ಮೂಲದ ರಾಜೀವ್ ಸಿಂಗ್ ಆರೋರ ಎಂಬಾತನನ್ನು ಇದೀಗ ಕಲಬುರ್ಗಿಯ ಸೆನ್ ಠಾಣೆ ಪೊಲೀಸರು ದೆಹಲಿಯ ದ್ವಾರಕಮೋಡ್ ರಾಮ ಪಾರ್ಕ್ ಅಪಾರ್ಟ್ಮೆಂಟ್ ನಲ್ಲಿ ಅರೆಸ್ಟ್ ಮಾಡಿದ್ದಾರೆ. ನಕಲಿ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ಅಂಕಪಟ್ಟಿ ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ, KSOU ನಕಲಿ ಅಂಕಪಟ್ಟಿ ಮಾರಾಟ ಮಾಡುತ್ತಿದ್ದ. ದೆಹಲಿ ಮೂಲದ ರಾಜೀವ್ ಸಿಂಗ್ ಆರೋಪಿಯನ್ನು ಇದೀಗ ಕಲಬುರ್ಗಿಯ ಸೆನ್ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ.ಬಂಧಿತ ರಾಜೀವ್ ಸಿಂಗ್ ಬಳಿ 522 ನಕಲಿ ಅಂಕಪಟ್ಟಿ ವಶಕ್ಕೆ ಪಡೆದ ಪೊಲೀಸರು, ನಕಲಿ ಅಂಕಪಟ್ಟಿಸಿದ ಪಡಿಸಲು 1626 ಖಾಲಿ ಪೇಪರ್ ಗಳನ್ನು ಇದೆ ವೇಳೆ ವಶಕ್ಕೆ ಪಡಿಸಿಕೊಳ್ಳಲಾಯಿತು. ವಿವಿಧ ವಿಶ್ವವಿದ್ಯಾಲಯಗಳ 122 ನಕಲಿ ಸೀಲ್ಗಳು, 36 ಮೊಬೈಲ್, ಎರಡು ಲ್ಯಾಪ್ಟಾಪ್, 1 ಪ್ರಿಂಟರ್, ಎಟಿಎಂ ಕಾರ್ಡ್ ಗಳು, 123 ನಕಲಿ ಗುರುತಿನ ಚೀಟಿಗಳನ್ನು ವಶಕ್ಕೆ ಪಡೆಯಲಾಯಿತು. ರಾಜೀವ್ ಸಿಂಗ್…

Read More

ನವದೆಹಲಿ : ಬೆಂಗಳೂರಿನ ಅರಮನೆ ಜಾಗಕ್ಕೆ ಟಿಡಿಆರ್ ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ ನಲ್ಲಿ ಮೈಸೂರು ರಾಜಮನೆತನ ಸಲ್ಲಿಸಿದ ಅರ್ಜಿ ವಿಚಾರಣೆ ಇಂದು ನಡೆಯಿತು.ವಿಚಾರಣೆ ಬಳಿಕ ನ್ಯಾ.ಸುಂದರೇಶ್ ಹಾಗು ನ್ಯಾ ಅರವಿಂದ್ ಕುಮಾರ್ ನೇತೃತ್ವದ ಪೀಠವು ಒಂದು ವಾರಗಳಿಗೆ ಟಿಡಿಆರ್ ಪಾವತಿಸಬೇಕು ಎಂದು ರಾಜ್ಯ ಸರಕಾರಕ್ಕೆ ಸೂಚನೆ ನೀಡಿ, ವಿಚಾರಣೆಯನ್ನು ಮಾರ್ಚ್ 22ಕ್ಕೆ ಮುಂದೂಡಿತು ಈ ವಿಚಾರವಾಗಿ ಸುಪ್ರೀಂ ಕೋರ್ಟ್ ನಲ್ಲಿ ರಾಜಮನೆತನ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಯಿತು. ನ್ಯಾ.ಸುಂದರೇಶ್ ಹಾಗು ನ್ಯಾ ಅರವಿಂದ್ ಕುಮಾರ್ ನೇತೃತ್ವದ ಪೀಠವು ರಾಜಮನೆತನ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದರು. ರಾಜ್ಯ ಸರ್ಕಾರದ ಪರವಾಗಿ ಕಪಿಲ್ ಸಿಬಲ್ ವಾದ ಮಂಡಿಸಿದರು. ಬಳಕೆ ಮಾಡಿದ್ದಷ್ಟು ಭೂಮಿಗೆ ಟಿಡಿಆರ್ ನೀಡಲಾಗುತ್ತದೆ. ಉಳಿದ ಭೂಮಿಯನ್ನು ನಾವು ಬಳಕೆ ಮಾಡುತ್ತಿಲ್ಲ ಎಂದು ವಾದಿಸಿದರು. ರಸ್ತೆ ಅಗಲೀಕರಣ ಪ್ರಸ್ತಾಪವನ್ನು ಕ್ಯಾಬಿನೆಟ್ ನಲ್ಲಿ ಕೈ ಬಿಡಲಾಗಿದೆ.ಈಗ ಬಳಸಿದ ಭೂಮಿಗೆ ಸುಮಾರು 45 ಕೋಟಿ ಆರ್ ನೀಡಬೇಕು. ಹಾಗಾಗಿ ನಾವು ಬಳಸಿದ ಜಮೀನಿಗೆ ಮಾತ್ರ…

Read More

ಮೈಸೂರು : ಶೌಚಾಲಯ ಗುಂಡಿಯನ್ನು ದುರಸ್ತಿ ಮಾಡುವ ಸಂದರ್ಭದಲ್ಲಿ ಗುಂಡಿಯಲ್ಲಿ ಮನುಷ್ಯನ ತಲೆ ಬುರುಡೆ ಹಾಗೂ ಕೈ ಕಾಲಿನ ಮೂಳೆಗಳು ಪತ್ತೆಯಾಗಿರುವ ಘಟನೆ ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲೂಕಿನ ಜೋಂಪನಪಾಳ್ಯ ಎಂಬಲ್ಲಿ ನಡೆದಿದೆ. ಮೈಸೂರು ಜಿಲ್ಲೆಯ ಹೆಚ್ ಡಿ ಕೋಟೆ ತಾಲೂಕಿನ ಜೋಂಪನಪಾಳ್ಯ ಎಂಬಲ್ಲಿ ದಾಸ್ ಪ್ರಕಾಶ್ ಎಂಬುವವರ ಮನೆಯ ಹಿತ್ತಲಿನ ಶೌಚಾಲಯ ಗುಂಡಿಯಲ್ಲಿ ಶೌಚಾಲಯದ ಗುಂಡಿ ದುರಸ್ತಿ ಮಾಡುತ್ತಿದ್ದರು. ಈ ವೇಳೆ ಅಲ್ಲಿ ತಲೆ ಬುರುಡೆ ಹಾಗು ದೇಹದ ಹಲವು ಮೂಳೆಗಳು ಪತ್ತೆಯಾಗಿವೆ. ಏಳು ತಿಂಗಳ ಹಿಂದೆ ದಾಸ್ ಪ್ರಕಾಶ್ ಕಾಣೆಯಾಗಿದ್ದಾರೆ. ಮನೆ ಹಿಂದಿನ ಶೌಚಾಲಯ ಗುಂಡಿಯಲ್ಲಿ ಮೂಳೆ ಪತ್ತೆಯಾಗಿವೆ. ದಾಸ್ ಎನ್ನುವವನು ಕೂಲಿ ಕೆಲಸವನ್ನು ಮಾಡಿಕೊಂಡಿದ್ದಾರೆ ಇದುವರೆಗೂ ದಾಸ್ ಪ್ರಕಾಶ್ ಪತ್ತೆಯಾಗದೆ ಇರುವ ಹಿನ್ನೆಲೆ ತಲೆ ಬುರುಡೆ, ಮೂಳೆ ಅವನದ್ದೇ ಇರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ.

Read More

ಹುಬ್ಬಳ್ಳಿ : ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಹೃದಯಾಘಾತ ಅನ್ನೋದು ಸಾಮಾನ್ಯ ಕಾಯಿಲೆಯಾಗಿದೆ. ಇದೀಗ ಬಟ್ಟೆ ಅಂಗಡಿ ಸಿಬ್ಬಂದಿಯೊಬ್ಬ ಗ್ರಾಹಕರಿಗೆ ಬಟ್ಟೆ ತೋರಿಸುತ್ತಿದ್ದಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹೌದು ಹುಬ್ಬಳ್ಳಿಯ ಕಂಚಗಾರ ಗಲ್ಲಿಯ ಎನ್.ಆರ್.ಸಾರಿ ಸೆಂಟರ್ ನಲ್ಲಿ ಈ ಘಟನೆ ನಡೆದಿದೆ. ಮೃತರನ್ನು ರಾಜಸ್ಥಾನ ಮೂಲದ ಭವರ್ ಸಿಂಗ್ (43) ಎಂದು ಗುರುತಿಸಲಾಗಿದೆ. ನಗರದ ಕಂಚಗಾರ ಗಲ್ಲಿಯಲ್ಲಿರುವ ಎನ್​ಆರ್ ಸಾರಿ ಸೆಂಟರ್​ನಲ್ಲಿ ಗ್ರಾಹಕರಿಗೆ ಬಟ್ಟೆ ತೋರಿಸುವಾಗ ಏಕಾಏಕಿ ಕೂತಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಇನ್ನೋರ್ವ ಸಿಬ್ಬಂದಿ ಆತನನ್ನು ಮೇಲಕೆತ್ತಲು ಯತ್ನಿಸಿದರೂ ಎಚ್ಚರಗೊಂಡಿಲ್ಲ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗಿಲ್ಲ. ಆಸ್ಪತ್ರೆಗೆ ದಾಖಲಿಸುವ ಅಷ್ಟರಲ್ಲಿ ಅವರು ಸಾವನ್ನಪ್ಪಿದ್ದರು ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

Read More