Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಭೋವಿ ನಿಗಮದ ಮೇಲೆ ಇಡಿ ದಾಳಿ ಪ್ರಕರಣ ಸಂಬಂಧ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ 97 ಕೋಟಿ ರೂ. ಹಣ ದುರುಪಯೋಗವಾಗಿರುವುದಾಗಿ ಜಾರಿ ನಿರ್ದೇಶನಾಲಯ (ED) ಅಧಿಕೃತ ಮಾಹಿತಿ ನೀಡಿದೆ. ಹೌದು ಭೋವಿ ಸಮುದಾಯದ ಏಜೆಂಟರ ಮೂಲಕ ಹಣ ವರ್ಗಾವಣೆ ಆಗಿದೆ. ನಕಲಿ ಫಲಾನುಭವಿಗಳ ಖಾತೆ ಬಳಸಿಕೊಂಡು, ಹಣ ವರ್ಗಾವಣೆ ಮಾಡಲಾಗಿದೆ. ಕೆಬಿಡಿಸಿ ಇಂದ ಹಣ ಬೇರೆ ಕಡೆಗೆ ವರ್ಗಾಯಿಸಿರುವುದು ಇಡಿ ತನಿಖೆಯ ವೇಳೆ ಪತ್ತೆಯಾಗಿದೆ. ನಾಗರಾಜಪ್ಪ ಅಕ್ರಮ ವರ್ಗಾವಣೆಯಲ್ಲಿ ಭಾಗಿಯಾಗಿದ್ದು ಪತ್ತೆಯಾಗಿದೆ. ದಾಳಿಯ ವೇಳೆ ಸಂಗ್ರಹಿಸಿದ ಪುರಾವೆಗಳ ಆಧಾರದ ಅಡಿ ಇದೀಗ ನಾಗರಾಜಯ್ಯನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ನಕಲಿ ಖಾತೆಗಳನ್ನು ಬಳಸಿಕೊಂಡು ತಮ್ಮ ಸ್ನೇಹಿತರು ಮತ್ತು ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗಳಲ್ಲಿ ಹಣ ವರ್ಗಾವಣೆ ಮಾಡಿದ್ದಾರೆ.ಸದ್ಯ ನಾಗರಾಜಪ್ಪನನ್ನು ಬಂಧಿಸಿ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ ಇ.ಡಿ ಹೆಚ್ಚಿನ ತನಿಖೆಗಾಗಿ ನಾಗರಾಜಪ್ಪನನ್ನು 14 ದಿನ ವಶಕ್ಕೆ ಪಡೆದಿದೆ. ಇಡಿ ತನಿಖೆ ವೇಳೆ ಅಕ್ರಮ ಹಣ ವರ್ಗಾವಣೆ ಮಾಡಿರುವುದು ಪತ್ತೆಯಾಗಿದೆ ಎಂದು ಇ.ಡಿ…
ಕಲಬುರಗಿ : ಮನೆಯಲ್ಲಿ ಯಾರು ಇಲ್ಲದ ವೇಳೆ 14 ವರ್ಷದ ಬಾಲಕಿಯ ಮೇಲೆ ಅತಿಥಿ ಶಿಕ್ಷಕನೊಬ್ಬ ಅತ್ಯಾಚಾರ ಎಸಗಿರುವ ಘಟನೆ ಕಲಬುರ್ಗಿ ಜಿಲ್ಲೆಯ ಆಳಂದ್ ತಾಲೂಕಿನ ಮಾದನಹಿಪ್ಪರಗ ಎಂಬ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಅತಿಥಿ ಶಿಕ್ಷಕ ಶಿವರಾಜ ಹಣಮಂತ (32) ಬಂಧಿತ ಶಿಕ್ಷಕ ಎಂದು ತಿಳಿದುಬಂದಿದೆ. 8ನೇ ತರಗತಿ ಓದುತ್ತಿದ್ದ 14 ವರ್ಷದ ಬಾಲಕಿ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ. ಶಿಕ್ಷಕನ ವಿರುದ್ಧ ಪೋಕ್ಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಲಬುರ್ಗಿ ಜಿಲ್ಲೆಯ ಆಳಂದ್ ತಾಲೂಕಿನ ಮಾದನಹಿಪ್ಪರಗಾ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದ್ದು, 14 ವರ್ಷದ ವಿದ್ಯಾರ್ಥಿನಿಯ ಮೇಲೆ ಅತಿಥಿ ಶಿಕ್ಷಕ ಶಿವರಾಜ್ ಅತ್ಯಾಚಾರ ಎಸಗಿದ್ದಾನೆ. ಅದೇ ಗ್ರಾಮದ ಶಾಲೆಯಲ್ಲಿ ಶಿವರಾಜ್ ಹಣಮಂತ ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ವಿದ್ಯಾರ್ಥಿನಿ ಮನೆಯಲ್ಲಿ ಯಾರು ಇಲ್ಲದಿದ್ದಾಗ ಶಿವರಾಜ್ ಮನೆಗೆ ನುಗ್ಗಿ ಅತ್ಯಾಚಾರ ಆಗಿದ್ದಾನೆ ಎಂದು ತಿಳಿದುಬಂದಿದೆ. ಬಾಲಕಿಯ ತಾಯಿ ಯುಗಾದಿ ಹಬ್ಬಕ್ಕೆ ಮೂವರು ಮಕ್ಕಳನ್ನು ಕರೆದುಕೊಂಡು…
ಬೆಂಗಳೂರು : ರಾಜ್ಯದಲ್ಲಿ ಇಂದಿನಿಂದ ಮುಂದಿನ 5 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಹಾಗಾಗಿ ರಾಜ್ಯದ ಈ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇವತ್ತಿನಿಂದ 5 ದಿನ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವಿಪರೀತ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ‘ಎಲ್ಲೋ’ ಅಲರ್ಟ್ ಘೋಷಿಸಲಾಗಿದೆ.ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಹಾವೇರಿ, ಗದಗ, ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಎದ್ದಿದ್ದು, ಇದರ ಪರಿಣಾಮ ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡಿನ ಮೇಲೆ ಉಂಟಾಗಲಿದೆ ಎಂದು ಅಂದಾಜಿಸಲಾಗಿದೆ.
ಬೆಂಗಳೂರು : ನಂದಿನಿ ಹಾಲಿನ ಬೆಲೆ, ವಿದ್ಯುತ್ ದರ ಏರಿಕೆ, ಡೀಸೆಲ್ ಏರಿಕೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ, ಇಂದು ಬಿಜೆಪಿ ಜನಾಕ್ರೋಶ ಹೋರಾಟವನ್ನು ಆರಂಭಿಸುತ್ತಿದ್ದು, ಮೈಸೂರಿನಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಈ ಒಂದು ಹೋರಾಟಕ್ಕೆ ಚಾಲನೆ ನೀಡಲಿದ್ದಾರೆ. ಈ ಒಂದು ಹೋರಾಟದ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿ ಆಕ್ರೋಶ ಅವರಿಗೆ ಆಗಿರಬೇಕು ಆದರೆ ಜನರಿಗೆ ಆಗಿಲ್ಲ ಎಂದು ಬಿಜೆಪಿ ಹೋರಾಟಕ್ಕೆ ಕಿಡಿಕಾರಿದರು. ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೋರಾಟಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಕಿಡಿ ಕಾರಿದ್ದು, ಆಕ್ರೋಶ ಅವರಿಗೆ ಆಗಿರಬೇಕು ಆದರೆ ಜನರಿಗೆ ಆಗಿಲ್ಲ. ಗ್ಯಾರಂಟಿಗಳನ್ನು ಜಾರಿ ಮಾಡಿದ್ದೆ ಬೆಲೆ ಏರಿಕೆ ದೇವರ ಕೆಲಸ ನಮ್ಮ ಕೆಲಸ ಅಂದುಕೊಂಡಿದ್ದೇವೆ. ನಾವು ಇದ್ದೇವೆ ಎಂದು ತೋರಿಸಲು ಹೀಗೆ ಮಾಡುತ್ತಿದ್ದಾರೆ.ಬಿಜೆಪಿ ಜನಾಕ್ರೋಶ ಯಾತ್ರೆಯ ವಿರುದ್ಧ ಡಿಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ವಂಚನೆಯಿಂದ ಸಾಲ ನೀಡಿದ ಹಣವನ್ನು ಮರಳಿ ಪಡೆಯಲು ಕಪ್ಪು ಶಾಯಿ ಪರಿಹಾರ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ,…
ಕೊಡಗು : ಹೋಂ ಸ್ಟೇ ನಲ್ಲಿ ತಂಗಿದ್ದ ಬೆಂಗಳೂರು ಮೂಲದ ಮಹಿಳೆಗೆ ಹೋಂಸ್ಟೇ ನಿರ್ವಾಹಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದ್ದು, ಈ ಒಂದು ಘಟನೆ ಕೊಡಗು ಜಿಲ್ಲೆಯ ಮಡಿಕೇರಿಯ ಈಶ್ವರ ನಿವಾಸ ಹೋಂಕೆನಲ್ಲಿ ನಡೆದಿದೆ. ಹೌದು ಹೋಂ ಸ್ಟೇ ನಿರ್ವಾಹಕ ಪ್ರವೀಣ್ ನಿಂದ ಮಹಿಳೆಗೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. ಮುಂಜಾನೆ 3 ಗಂಟೆಗೆ ಕುಡಿದು ಬಂದು ಪ್ರವೀಣ್ ಕಿರುಕುಳ ನೀಡಿದ್ದಾನೆ. ಕೊಡಗು ಜಿಲ್ಲೆಯ ಮಡಿಕೇರಿಯ ಈಶ್ವರ ನಿಲಯ ಹೋಂ ಸ್ಟೇನಲ್ಲಿ ಮಹಿಳೆಯ ಕಿರುಕುಳ ನೀಡಿರುವ ಘಟನೆ ನಡೆದಿದೆ. ಬಾಗಿಲು ತೆಗೆಯದಿದ್ದಕ್ಕೆ ಕಾರಿನ ಮಾಡಿದ ಪ್ರವೀಣ್, ಬೆಂಗಳೂರು ಮೂಲದ ಪ್ರವಾಸಿ ಮಮತಾ ಗೆ ಪ್ರವೀಣ್ ಕಿರುಕುಳ ನೀಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಮಡಿಕೇರಿ ನಗರ ಪೊಲೀಸ್ ಠಾಣೆಗೆ ಈಗ ಮಹಿಳೆ ಮಮತಾ ಈ ಕುರಿತು ದೂರು ನೀಡಿದ್ದಾರೆ.
ಹುಬ್ಬಳ್ಳಿ : ಬಿಜೆಪಿಯಿಂದ 6 ವರ್ಷಗಳ ಕಾಲ ಪಕ್ಷದಿಂದ ಉಚ್ಛಾಟಿತರಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮುಂದಿನ ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ್ದಾರೆ. ನಾನು ಇಲ್ಲದೆ ರಾಜ್ಯದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎಂದು ಮತ್ತೊಮ್ಮೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನ್ನ ಹೃದಯದಲ್ಲಿ ಬಿಜೆಪಿ ಇದೆ. ಉಚ್ಚಾಟನೆ 6 ತಿಂಗಳು ನಡೆಯಲ್ಲ. ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟಿಲ್ ನನ್ನ ಹೊರ ಹಾಕಿರಬಹುದು. ಪಕ್ಷದಿಂದ ನನ್ನನ್ನು ಹೊರಗೆ ಹಾಕಿದರೆ ಏನು ಕಿಸಿಯೋಕೆ ಆಗಲ್ಲ ನಾನು ಹಿಂದುಗಳ ಪರ ಇದ್ದೇನೆ ಎಂದು ವಾಗ್ದಾಳಿ ನಡೆಸಿದ್ದಾರೆ. ಸನಾತನ ಧರ್ಮ ಉಳಿದರೆ ವಿಭೂತಿ ಉಳಿಯುತ್ತದೆ. ಇಲ್ಲ ಅಂದರೆ ಎಲ್ಲರೂ ಮಸೀದಿಗೆ ಹೋಗಬೇಕು. ನಾನು ಇಲ್ಲದೆ ಯಾವ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಆಗಲ್ಲ. ನನಗೆ ಜನರ ಆಶೀರ್ವಾದ ಇದೆ. ನಾನು ದೊಡ್ಡವನಾಗಲು ಭಗವಾಧ್ವಜ, ಶ್ರೀರಾಮ ಕಾರಣ. ನನಗೆ ಮೂರು ಸಾವಿರ…
ಚಿಕ್ಕಮಗಳೂರು : ಚಿಕ್ಕಮಂಗಳೂರಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದರಿಂದ ಜಿಲ್ಲೆಯಾದ್ಯಂತ ಹಲವು ಪ್ರದೇಶಗಳಲ್ಲಿ, ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಇದೆ ವೇಳೆ ತುಂಗಾ ನದಿಯಲ್ಲಿ ಈಜಲು ಹೋಗಿದ್ದ ಯುವಕ ನಾಪತ್ತೆಯಾಗಿದ್ದಾನೆ. ಹೌದು ನುಗ್ಗಿಮಕ್ಕಿ ಗ್ರಾಮದ ಬಳಿ ತುಂಗಾ ನದಿಯಲ್ಲಿ ಯುವಕನೊಬ್ಬ ಈಜಲು ಹೋಗಿ ನಾಪತ್ತೆಯಾಗಿದ್ದಾನೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ನುಗ್ಗಿಮಕ್ಕಿ ಎಂಬಲ್ಲಿ ಈ ಒಂದು ಘಟನೆ ಸಂಭವಿಸಿದೆ. ತುಂಗಾ ನದಿಯಲ್ಲಿ ಮನೋಜ್ (17) ನಾಪತ್ತೆಯಾಗಿರುವ ಯುವಕ ಎಂದು ತಿಳಿದು ಬಂದಿದೆ. ಸ್ನೇಹಿತರ ಜೊತೆಗೆ ನದಿಯಲ್ಲೂ ಈಚಲು ತೆರಳಿದ್ದಾಗ ಈ ಒಂದು ಘಟನೆ ಸಂಭವಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಈಗಾಗಲೇ ಹಲವೆಡೆ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನಾಪತ್ತೆಯಾಗಿರುವ ಯುವಕನಿಗಾಗಿ ಇದೀಗ ಶೋಧ ಕಾರ್ಯ ಮುಂದುವರಿದಿದೆ.
ನವದೆಹಲಿ : ರಾಜ್ಯದಲ್ಲಿ ಸಹಕಾರ ಸಚಿವ ಕೆ.ಎನ್ ರಾಜಣ್ಣ ವಿರುದ್ಧ ಹನಿಟ್ರ್ಯಾಪ್ ಪ್ರಕರಣ ಭಾರಿ ಸದ್ದು ಮಾಡಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಹಕಾರ ಸಚಿವ ಕೆ.ಎನ್ ರಾಜಣ್ಣ ಕಾಂಗ್ರೆಸ್ ಹೈಕಮಾಂಡಿಗೆ ದೂರು ನೀಡಲು ನವದೆಹಲಿಗೆ ತೆರಳಿದ್ದಾರೆ. ಎಲ್ಲಾ ಸಚಿವರೊಂದಿಗೆ ಸುದೀರ್ಘವಾಗಿ ಚರ್ಚಿಸಿ ಇದೀಗ ಹೈಕಮಾಂಡ್ಗೆ ದೂರು ನೀಡಲು ಕೆ.ಎನ್ ರಾಜಣ್ಣ ನಿರ್ಧರಿಸದ್ದಾರೆ. ಹೌದು ಹನಿಟ್ರ್ಯಾಪ್ ಪ್ರಕರಣ ಇನ್ನು ಮುಗಿದಂತೆ ಕಾಣುತ್ತಿಲ್ಲ. ಹೈಕಮಾಂಡ್ಗೆ ಹನಿಟ್ರ್ಯಾಪ್ ಬಗ್ಗೆ ದೂರು ನೀಡಲು ಕೆ.ಎನ್ ರಾಜಣ್ಣ ನಿರ್ಧರಿಸಿದ್ದಾರೆ. ಸಚಿವರೊಂದಿಗೆ ರಾಜಣ್ಣ ಸುದೀರ್ಘವಾಗಿ ಚರ್ಚೆ ನಡೆಸಿದ್ದು, ಈಗ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಹೈಕಮಾಂಡ್ಗೆ ದೂರು ನೀಡಲು ಕೆ.ಎನ್ ರಾಜಣ್ಣ ಚಿಂತನೆ ನಡೆಸಿದ್ದಾರೆ. ಹನಿಟ್ರ್ಯಾಪ್ ಬಗ್ಗೆ ಮಾಹಿತಿ ನೀಡಲು ರಾಜಣ್ಣ ಇದೀಗ ದೆಹಲಿಗೆ ತೆರಳಿದ್ದಾರೆ. ಮೂರು ದಿನ ದೆಹಲಿಯಲ್ಲಿದ್ದರೂ ಕೂಡ ಹೈಕಮಾಂಡ್ ಅವರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಇದೀಗ ಗುಜರಾತ್ ನಲ್ಲಿ ಎಐಸಿಸಿ ಅಧಿವೇಶನ ನಡೆಯುತ್ತಿದ್ದು, ಎಸಿಐಸಿ ಅಧಿವೇಶನಕ್ಕಾಗಿ ಇದೀಗ ಗುಜರಾತ್ ಗೆ ತೆರಳಲ್ಲಿದ್ದಾರೆ. ಅಧಿವೇಶನದಲ್ಲಿ ಹೈಕಮಾಂಡ್…
ಬೆಂಗಳೂರು : ಸಾಲಕ್ಕೆ ಹೆಚ್ಚು ಬಡ್ಡಿ ನೀಡುವಂತೆ ಮಾಜಿ ರೌಡಿ ಜೊತೆಗಿನ ಫೋಟೋ ತೋರಿಸಿ, ಬೆದರಿಕೆ ಹಾಕಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರಲ್ಲಿ ಸಿಸಿಬಿ ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ. ದೀಪಕ್ ಮತ್ತು ಜಯಕುಮಾರ್ ಎಂಬವರನ್ನು ಪೊಲೀಸರು ಸಿಸಿಬಿ ಅರೆಸ್ಟ್ ಮಾಡಿದ್ದಾರೆ. ದೀಪಕ್ ಮತ್ತು ಜಯಕುಮಾರ್ ಬಳಿ ರವಿ ಎನ್ನುವ ವ್ಯಕ್ತಿ ಲಕ್ಷಾಂತರ ರೂಪಾಯಿ ಸಾಲವನ್ನು ಪಡೆದುಕೊಂಡಿದ್ದ. ಇದಕ್ಕೆ ಪ್ರತಿಯಾಗಿ ಬಂಧಿತ ಆರೋಪಿಗಳು ಅಧಿಕ ಬಡ್ಡಿ ಪಡೆಯುತ್ತಿದ್ದರು. ದೀಪಕ್ ಬಳಿ ರವಿ 13 ಲಕ್ಷ ಸಾಲಕ್ಕೆ 63 ಲಕ್ಷ ರೂಪಾಯಿ ಬಡ್ಡಿ ನೀಡಿದ್ದ. ಇನ್ನು ಜಯ ಕುಮಾರ್ ಬಳಿ ಪಡೆದ 8 ಲಕ್ಷಕ್ಕೆ ರವಿ ತಿಂಗಳಿಗೆ 80,000 ಬಡ್ಡಿಯನ್ನು ಕಟ್ಟುತ್ತಿದ್ದ. ಆದರೂ ಸಹ ಅಸಲು ತೀರಿಲ್ಲ ಎಂದು ಹೆಚ್ಚು ಬಡ್ಡಿಗೆ ಒತ್ತಾಯಿಸಿ ಬೆದರಿಕೆ ಹಾಕಿದ್ದಾರೆ. ಬಡ್ಡಿ ಹಣ ನೀಡಲು ತಡವಾದ ಕಿಡ್ನ್ಯಾಪ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. 4 ಕೋಟಿ ಸಾಲ ಪಡೆದಿದ್ದಾಗಿ ದಾಖಲೆ ಸೃಷ್ಟಿಸಿ ಕೇಸ್ ದಾಖಲಿಸುವುದಾಗಿ ಬೆದರಿಸಿದ್ದಾರೆ. ಸೈಲೆಂಟ್ ಸುನಿಲ ಮತ್ತು…