Subscribe to Updates
Get the latest creative news from FooBar about art, design and business.
Author: kannadanewsnow05
ಬೆಳಗಾವಿ : ರಾಜ್ಯದಲ್ಲಿ ನವೆಂಬರ್ ಕ್ರಾಂತಿ ಮತ್ತು ಸಿಎಂ ಬದಲಾವಣೆ ಚರ್ಚೆ ವಿಚಾರಕ್ಕೆ ಸಂಬಂಧಪಟ್ಟಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ಮುಖ್ಯಮಂತ್ರಿ ಅಗಲಿದ್ದಾರೆ ಎಂದು ಬೆಳಗಾವಿಯಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕವಾದ ಹೇಳಿಕೆ ನೀಡಿದ್ದಾರೆ. ಸ್ಪರ್ಧೆಯಲ್ಲಿರುವ ಯಾವ ನಾಯಕರು ಮುಖ್ಯಮಂತ್ರಿ ಆಗಲ್ಲ. ರಾಜ್ಯದ ಸಾರಥ್ಯ ಬ್ಲ್ಯಾಕ್ ಹಾರ್ಸ್ ಕೈಗೆ ಸಿಗಲಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಿಎಂ ಆಗಲ್ಲ, ಸತೀಶ್ ಜಾರಕಿಹೊಳಿ ಸೇರಿದಂತೆ ಯಾರು ರಾಜ್ಯದ ಮುಖ್ಯಮಂತ್ರಿ ಆಗಲ್ಲ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಶಾಸಕ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಒಮ್ಮೆ ಸಿಎಂ ಆಗಬೇಕೆಂದು ಕಾಯುತ್ತಿದ್ದಾರೆ.ಒಮ್ಮೆಯಾದರೂ ಸಿಎಂ ಆಗಬೇಕೆಂದು ಅವರಿಗೆ ಆಸೆ ಇದೆ. ಅಲ್ಲಿ ಏನೂ ಕೆಲಸ ಇಲ್ಲ ಯಾವುದೇ ಉತ್ಪನ್ನವಿಲ್ಲ. ಸಿಎಂ ಪುತ್ರನ ಮೂಲಕ ಬೆಳಗಾವಿಗೆ ಬಂದು ಸತೀಶ್ ಹೆಸರು ಹೇಳಿಸಿದರು. ಡಿಕೆ ಶಿವಕುಮಾರ್ ಸಿಎಂ ಮಾಡಿದರೆ ನಮ್ಮ ಕಡೆಯಿಂದ ಸತೀಶ ಮಾಡಬೇಕೆಂದು ಹೇಳಿಸಿದ್ರು. ಸಿಎಂ ಸಿದ್ದರಾಮಯ್ಯ ಪುತ್ರನ ಮೂಲಕ…
ದಕ್ಷಿಣಕನ್ನಡ : ಅಕ್ರಮ ಕೂಟ ಸೇರಿದ ಆರೋಪದಲ್ಲಿ ಸೌಜನ್ಯ ತಾಯಿ ಕುಸುಮಾವತಿ ಸೇರಿದಂತೆ ತಿಮರೋಡಿ ಸಹೋದರ ಮೋಹನ್ ಶೆಟ್ಟಿ, ಪ್ರಸನ್ನ ರವಿ ಸೇರಿದಂತೆ 12 ಜನರ ವಿರುದ್ಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ತಿಮರೋಡಿ ಗಡಿಪಾರು ವಿರುದ್ಧ ಪ್ರತಿಭಟನೆ ಅಂತಾ ಕರೆ ನೀಡಲಾಗಿತ್ತು. ಪೊಲೀಸರಿಂದ ಅನುಮತಿ ಸಿಗದೇ ಇದ್ದರೂ ಜನ ಸೇರುವಂತೆ ಕರೆ ಕೊಡಲಾಗಿತ್ತು. ಇದರಿಂದ ಶಾಂತಿ-ಸುವ್ಯವಸ್ಥೆಗೆ ಧಕ್ಕೆಯಾಗಲಿದೆ ಎಂದು ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರು : ಬೆಂಗಳೂರಿನ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಮೊಬೈಲ್ ಖರೀಮರನ್ನು ಇದೀಗ ಒದ್ದು ಒಳಗಡೆ ಹಾಕಿದ್ದು, ಮೊಬೈಲ್ ಎಗರಿಸುತ್ತಿದ್ದ 42 ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ 3.36 ಕೋಟಿ ಮೌಲ್ಯದ ಮೊಬೈಲ್ ಫೋನ್ ಗಳನ್ನು ಸೀಜ್ ಮಾಡಿದ್ದಾರೆ. ಹೌದು ಒಟ್ಟು 1,949 ಮೊಬೈಲ್ ಗಳನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಕೇವಲ ಆರು ಮಂದಿ ಕಳ್ಳರಿಂದ 450 ಮೊಬೈಲ್ ಮಾಡಿದ್ದಾರೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಪ್ರಕರಣಗಳು ದಾಖಲಾಗಿದ್ದವು. ಮೊಬೈಲ್ ಕಳ್ಳರ ಖತರ್ನಾಕ್ ಐಡಿಯಾ ಬಯಲಾಗಿದ್ದು, ವಿಚಾರಣೆ ವೇಳೆ ಕಳ್ಳರು ಬಾಯಿ ಬಿಟ್ಟ ಸತ್ಯ ಕೇಳಿ ಪೊಲೀಸರು ಶಾಕ್ ಆಗಿದ್ದಾರೆ. ಬಸ್ ನಲ್ಲಿ ಐದಾರು ಕಳ್ಳರು ಒಟ್ಟಿಗೆ ಬರುತ್ತಿದ್ದರು. ಪ್ರಯಾಣಿಕರ ಗಮನ ಬೇರೆ ಸೆಳೆದು ಮೊಬೈಲ್ ಕಳ್ಳತನ ಮಾಡುತ್ತಿದ್ದರು. ಬಳಿಕ ಒಬ್ಬರಿಂದ ಒಬ್ಬರಿಗೆ ಮೊಬೈಲ್ ಶಿಫ್ಟ್ ಆಗುತ್ತಿತ್ತು. ಬಳಿಕ ಅಲುಮಿನಿಯಂ ಫೈಲ್ ನಲ್ಲಿ ಮೊಬೈಲ್ ಸುತ್ತಿಡುತ್ತಿದ್ದರು ಕೂಡಲೇ ಮೊಬೈಲ್ ನೆಟ್ವರ್ಕ್ ಜಾಮ್ ಆಗುತ್ತಿತ್ತು ತಕ್ಷಣ ಯಾರೇ ಕರೆ ಮಾಡಿದರು ಕಾಲ್…
ಬಾಗಲಕೋಟೆ : ಮುಂದಿನ ತಿಂಗಳು ಅಂದರೆ ನವೆಂಬರ್ ನಲ್ಲಿ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆ ಆಗಲಿದೆ ಎಂದು ಚರ್ಚೆಗಳು ನಡೆಯುತ್ತಿವೆ. ನಾಯಕತ್ವ ಬದಲಾವಣೆ ಆಗಿರಬಹುದು ಅಥವಾ ಸಚಿವ ಸಂಪುಟ ಪುನರಚನೆ ಎಲ್ಲವೂ ಕೂಡ ಬದಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇದೀಗ ನಾನು ಸಹ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದೇನೆ ಎಂದು ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿಕೆ ನೀಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್ ಮಾತನಾಡಿದ್ದು, ನಾನು ಕೂಡ ಮಂತ್ರಿ ಆಗಬಹುದು ಎಂಬ ನಿರೀಕ್ಷೆ ಇದೆ. ಸಚಿವ ಸಂಪುಟ ಪುನಾರಚನೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ವರಿಷ್ಠರ ಅನುಮತಿ ಪಡೆದು ಪುನಾರಚನೆ ಮಾಡುವುದಾಗಿ ಹೇಳಿದ್ದಾರೆ. ಈಗಾಗಲೇ ನಾನು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದೇನೆ ಎಂದು ವಿಜಯಾನಂದ ಕಾಶಪ್ಪನವರು ತಮ್ಮ ಮಂತ್ರಿ ಆಸೆ ಬಿಚ್ಚಿಟ್ಟರು.
ಮೈಸೂರು : ರಾಜ್ಯ ರಾಜಕಾರಣದಲ್ಲಿ ಇದೀಗ ನಾಯಕತ್ವ ಬದಲಾವಣೆ ಹಾಗೂ ಸಂಪುಟಪುನ ರಚನೆ, ಕುರಿತಾಗಿ ಭಾರಿ ಚರ್ಚೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೆ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಪೂರ್ಣಾವಧಿ ಸಿಎಂ ಎಂದು ಘೋಷಿಸಿ ಎಂದು ಪತ್ರ ಚಳುವಳಿ ಆರಂಭಿಸಿದ್ದಾರೆ. ಕಾಂಗ್ರೆಸ್ ಹೈ ಕಮಾಂಡ್ಗೆ ಪತ್ರ ಬರೆದು ಚಳುವಳಿ ಆರಂಭಿಸಿದ್ದಾರೆ. ಮೈಸೂರಿನಲ್ಲಿ ರಾಮಸ್ವಾಮಿ ಮೃತದಲ್ಲಿ ಅಹಿಂದ ಒಕ್ಕೂಟದಿಂದ ಈ ಒಂದು ಪತ್ರ ಚಳುವಳಿ, ಆರಂಭಿಸಿದ್ದು ಗೊಂದಲಗಳಿಗೆ ತೆರೆ ಎಳೆಯುವಂತೆ ಒತ್ತಾಯಿಸಿ ಪತ್ರ ಚಳುವಳಿ ನಡೆಸಲಾಗಿದೆ. ಯಾರು ಸಿಎಂ ಆಗ್ತಾರೆ ಸಿಎಂ ರೇಸ್ನಲ್ಲಿ ಯಾರು ಇದ್ದಾರೆ ಎಂದು ಗೊಂದಲಗಳಿದ್ದು ಅವೆಲ್ಲ ಗೊಂದಲಗಳಿಗೆ ತೆರೆ ಎಳೆಯಿರಿ. ಹಾಗಾಗಿ ಸಿದ್ದರಾಮಯ್ಯರನ್ನು ಪೂರ್ಣಾವಧಿ ಸಿಎಂ ಎಂದು ಘೋಷಿಸಿ ಎಂದು ರಾಹುಲ್ ಗಾಂಧಿಗೆ ಅಡ್ರೆಸ್ ಮಾಡಿ ಪತ್ರ ಬರೆದಿದ್ದಾರೆ.
BREAKING : ಕನ್ನೆರಿ ಮಠದ ಕಾಡಸಿದ್ದೇಶ್ವರ ಸ್ವಾಮಿಜಿಗೆ ಬಿಗ್ ಶಾಕ್ : ಮೇಲ್ಮನವಿ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್
ನವದೆಹಲಿ : ಕೊಲ್ಲಾಪುರದ ಕನ್ನೆರಿ ಮಠದ ಶ್ರೀ ಕಾಡಸಿದ್ದೇಶ್ವರ ಸ್ವಾಮೀಜಿಗೆ ವಿಜಯಪುರ ಜಿಲ್ಲೆ ಪ್ರವೇಶಿಸದಂತೆ ಜಿಲ್ಲಾ ಆಡಳಿತ ನಿರ್ಬಂಧ ವಿಚಾರಕ್ಕೆ ಸಂಬಂಧಪಟ್ಟಂತೆ ಕನ್ನೇರಿ ಶ್ರೀಗಳು ಸಲ್ಲಿಸಿದ ಮೇಲ್ಮನವಿ ಅರ್ಜಿಯನ್ನು ಇದೀಗ ಸುಪ್ರೀಂ ಕೋರ್ಟ್ ವಜಾ ಗೊಳಿಸಿದೆ. ವಿಚಾರಣೆಯಲ್ಲಿ ಕನ್ನೆರಿ ಮಠದ ಸ್ವಾಮೀಜಿ ಈ ರೀತಿ ಕೀಳುಮಟ್ಟದ ಹೇಳಿಕೆ ನೀಡಿದು ಸರಿಯಲ್ಲ ಎಂದು ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಹಾಗೂ ಪ್ರಸನ್ನ ವರಾಲೆ ಪೀಠದಿಂದ ಸ್ವಾಮೀಜಿಗೆ ತರಾಟೆ ತೆಗೆದುಕೊಂಡಿದ್ದು, ಪ್ರಚೋದನಕಾರಿ ಹೇಳಿಕೆ ನೀಡಿದ್ದ ಕನ್ನೇರಿ ಶ್ರೀಗಳ ನಡೆ ವಿರುದ್ಧ ಆಕ್ರೋಶ ಹೊರ ಹಾಕಿದರು. ಹೈಕೋರ್ಟ್ ಹೇಳಿರುವುದರಲ್ಲಿ ತಪ್ಪೇನಿದೆ? ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತು. ನೀವು ಸ್ವಾಮೀಜಿಯಾಗಿ ಗಂಭೀರವಾಗಿರಬೇಕು. ನೀವು ಒಳ್ಳೆಯ ಪ್ರಜೆಯಲ್ಲ. ಅವಹೇಳನಕಾರಿ ಭಾಷೆ ಬಳಸಿದ್ದೀರಿ. ವಾಕ್ ಸ್ವಾತಂತ್ರ್ಯ ವ್ಯಾಪ್ತಿಯಲ್ಲಿಲ್ಲ. ನೀವು ಮಾತನಾಡುವುದು ನಿಲ್ಲಿಸಿ ಮೌನವಾಗಿ ಬೇರೆ ಮಠದಲ್ಲಿ ಧ್ಯಾನ ಮಾಡಿ ಎಂದು ತರಾಟೆಗೆ ತೆಗೆದುಕೊಂಡಿತು.
ವಿಜಯಪುರ : ಇತ್ತೀಚಿಗೆ ವಿಜಯಪುರದಲ್ಲಿ ಸರಣಿ ಭೂಕಂಪನ ನಡೆಯುತ್ತಿದ್ದು, ನಿನ್ನೆ ರಾತ್ರಿ 11:00 ಸುಮಾರಿಗೆ ಒಂದು ಸಲ ಮತ್ತು ಇಂದು ಬೆಳಿಗ್ಗೆ 9 ಗಂಟೆಯ ಹಾಗೆ ಭೂಮಿ ಕಂಪಿಸಿದ ಅನುಭವ ಆಗಿದ್ದು ಜನರು ಬೆಚ್ಚಿಬಿದ್ದಿದ್ದಾರೆ. ಹೌದು ಜಿಲ್ಲೆಯಲ್ಲಿ ಸರಣಿ ಭೂಕಂಪನ ಸಂಭವಿಸಿದೆ. ಕಳೆದ 2 ತಿಂಗಳ ಅವಧಿಯಲ್ಲಿ 11 ಬಾರಿ ಭೂಮಿ ಕಂಪಿಸಿದ್ದು, ಇದರಿಂದ ಜನರು ಅಕ್ಷರಶಃ ನಲುಗಿ ಹೋಗಿದ್ದಾರೆ. ಮಂಗಳವಾರ ರಾತ್ರಿ 11:41ರ ಸುಮಾರಿಗೆ ಭೂಕಂಪನ ಸಂಭವಿಸಿದ್ದು, ಅದಾದ ಬಳಿಕ ಇಂದು ಬೆಳಿಗ್ಗೆ 5:30ರ ಸುಮಾರಿಗೆ ಭೂಮಿ ಕಂಪಿಸಿದೆ. ಸಿಸಿಟಿವಿ ದೃಶ್ಯದಲ್ಲಿಯೂ ಭೂಕಂಪನದ ತೀವ್ರತೆ ದಾಖಲಾಗಿದೆ.
ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೇಲಿನಲ್ಲಿರುವ ನಟ ದರ್ಶನ್, ಹಾಸಿಗೆ ದಿಂಬು ಸೇರಿದಂತೆ ಕನಿಷ್ಠ ಸೌಲಭ್ಯ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಇಂದು ಬೆಂಗಳೂರಿನ 57ನೇ ಸಿಸಿಎಚ್ ಕೋರ್ಟ್ ನಲ್ಲಿ ವಿಚಾರಣೆ ನಡೆದು, ತಿಂಗಳಿಗೊಮ್ಮೆ ಬಟ್ಟೆ, ಹೊದಿಕೆ ಒದಗಿಸಲು ಮಾತ್ರ 57ನೇ ಸಿಸಿಹೆಚ್ ಕೋರ್ಟ್ ಆದೇಶಿಸಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಶೀಘ್ರ ವಿಚಾರಣೆ ಕೋರಿದ ಎಸ್ಪಿಪಿ ಅರ್ಜಿಯನ್ನು ಕೋರ್ಟ್ ಮಾನ್ಯ ಮಾಡಿದೆ. ಅ.31 ರಂದು ದೋಷಾರೋಪ ನಿಗದಿಗೆ ಕೋರ್ಟ್ ಸೂಚನೆ ನೀಡುವ ಮೂಲಕ ದರ್ಶನ್ಗೆ ಡಬಲ್ ಶಾಕ್ ಕೊಟ್ಟಿದೆ. ದರ್ಶನ್ ಮತ್ತು ಪವಿತ್ರ ಗೌಡ ಸೇರಿದಂತೆ 6 ಜನ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ನಲ್ಲಿ ಹಾಜರಾಗಿದ್ದರೆ ಉಳಿದ ಆರೋಪಿಗಳು ನ್ಯಾಯಾಲಯದಲ್ಲಿ ಖುದ್ದಾಗಿ ಹಾಜರಾಗಿದ್ದರು.a
ಕೊಪ್ಪಳ : ಪತ್ನಿ ಬಿಟ್ಟು ಹೋಗಿದ್ದಕ್ಕೆ ವಿಷ ಕುಡಿದ ಪತಿಗೆ ಉಪಲೋಕಾಯುಕ್ತ ನ್ಯಾ.ವೀರಪ್ಪ ತರಾಟೆ ತೆಗೆದುಕೊಂಡಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಉಪಲೋಪಯುಕ್ತ ಬಿ.ವೀರಪ್ಪ ಕ್ಲಾಸ್ ತೆಗೆದುಕೊಂಡಿದ್ದಾರೆ. ವಿಷ ಕುಡಿದು ಏನು ಸಾಧನೆ ಮಾಡುತ್ತೀಯಾ? ಎಂದು ಬೈದು ಬುದ್ಧಿವಾದ ಹೇಳಿದ್ದಾರೆ. ಹೆಂಡತಿ ಬಿಟ್ಟು ಹೋದರೆ ಕೋರ್ಟಿಗೆ ಹೋಗು. ನೀನು ಡ್ರಿಂಕ್ಸ್ ಮಾಡ್ತೀಯಾ?ಯಾವ ಬ್ರಾಂಡ್ ಕುಡಿತಿಯ ಎಂದು ಉಪ ಲೋಕಾಯುಕ್ತ ವೀರಪ್ಪ ಇದೆ ವೇಳೆ ಕೇಳಿದರು. ಕೊಪ್ಪಳದ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದಾಗ ಈ ಒಂದು ಘಟನೆ ನಡೆದಿದೆ. ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಉಪ ಲೋಕಾಯುಕ್ತ ನ್ಯಾ. ಬಿ. ವೀರಪ್ಪ ಭೇಟಿ ನೀಡಿದಾಗ ಹರಿದ ಹಾಸಿಗೆ ತಲೆದೆಂಬ ನೋಡಿ ಉಪಲೋಕಾಯುಕ್ತ ವೀರಪ್ಪ ಗರಂ ಆದರು. ಅವರು ಆಸ್ಪತ್ರೆಯ ಬೆಡ್ ಪರಿಶೀಲನೆ ನಡೆಸಿದರು. ರೋಗಿಗಳಿಗೆ ಹರಿದ ಬೆಡ್ ತಲೆದೆಂಬು ನೀಡಿರುವುದಕ್ಕೆ ಆಕ್ರೋಶ ಹೊರಹಾಕಿದರು. ಕೊಪ್ಪಳ ಜಿಲ್ಲಾ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.ನಾಳೆಯೊಳಗೆ ರೋಗಿಗಳಿಗೆ ಒಳ್ಳೆಯ ಬೆಡ್ ತಲೆದೆಂಬು ನೀಡಿ ಎಂದು ವೈದ್ಯರಿಗೆ ಸೂಚನೆ…
BREAKING : ಬೆಂಗಳೂರಲ್ಲಿ ನಿಲ್ಲದ ರೋಡ್ ರೇಜ್ ಪ್ರಕರಣ : ಕಾರಿನ ಮಿರರ್ ಟಚ್ ಆಗಿದಕ್ಕೆ ಬೈಕ್ ಸವಾರನನ್ನು ಕೊಂದ ದಂಪತಿ!
ಬೆಂಗಳೂರು : ಬೆಂಗಳೂರಲ್ಲಿ ಮತ್ತೊಂದು ರೋಡ್ ರೇಜ್ ಪ್ರಕರಣ ನಡೆದಿದ್ದು, ಕಾರಿನ ಮಿರರ್ ಗೆ ಬೈಕ್ ಟಚ್ ಆಗಿದ್ದಕ್ಕೆ ಸವಾರರರನ್ನು ಭೀಕರವಾಗಿ ಕೊಲೆ ಮಾಡಲಾಗಿದೆ. ಕಾರಿನಿಂದ ಬೈಕಿಗೆ ಡಿಕ್ಕಿ ಹೊಡೆಸಿ ಹತ್ಯೆ ಮಾಡಲಾಗಿದೆ. ಬೆಂಗಳೂರಿನ ಪುಟ್ಟೇನಹಳ್ಳಿಯ ಶ್ರೀರಾಮ ಲೇಔಟ್ ನಲ್ಲಿ ಈ ಒಂದು ಘಟನೆ ನಡೆದಿದೆ. ಅಕ್ಟೋಬರ್ 25ರಂದು ದಂಪತಿಯಿಂದ ಬೈಕ್ ಸವಾರನ ಕೊಲೆಯಾಗಿದೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ಪುಟ್ಟಿನಹಳ್ಳಿಯ ಮನೋಜ್ ಮತ್ತು ಆತನ ಪತ್ನಿ ಆರತಿ ಶರ್ಮಾಳನ್ನು ಪೊಲೀಸರಿಗೆ ಅರೆಸ್ಟ್ ಮಾಡಿದ್ದಾರೆ. ಅಕ್ಟೋಬರ್ 21 ರಾತ್ರಿ 11:30ಕ್ಕೆ ದರ್ಶನ ಮತ್ತು ವರುಣ್ ಹೊರಗಡೆ ಬಂದಿದ್ದರು. ಇದೇ ವೇಳೆ ಕಾರಿನಲ್ಲಿ ಮನೋಜ್ ಮತ್ತು ಆರದಿ ಬರುತ್ತಿದ್ದರು. ಶ್ರೀರಾಮ ಲೇಔಟ್ ಬಳಿ ಕಾರಿನ ಮೇರರಿಗೆ ಬೈಕ್ ಟಚ್ ಆಗಿದೆ. ಬೈಕ್ ಸವಾರರು ದಂಪತಿ ಮನೋಜ್ ಮತ್ತು ಆರತಿಯಿಂದ ಪಾರಾಗಿದ್ದಾರೆ. ಮತ್ತೆ ಮನೋಜ್ ಯುಟರ್ನ್ ತೆಗೆದುಕೊಂಡು ಹೋಗಿ ದಂಪತಿಗಳು ಬೈಕ್ ಪತ್ತೆ ಹಚ್ಚಿದ್ದಾರೆ. ಈ ವೇಳೆ ಹಿಂದಿನಿಂದ ಬೈಕ್ ಗೆ ಕಾರಿನಿಂದ ಡಿಕ್ಕಿ ಹೊಡೆದ…














