Author: kannadanewsnow05

ಬೆಳಗಾವಿ : ಬೆಳಗಾವಿ ಜಿಲ್ಲೆಯ ಆದ್ಯಂತ ಮಳೆಯ ಅಬ್ಬರ ಮುಂದುವರೆದಿದ್ದು ಇದೀಗ ಬೆಳಗಾವಿಯ ಖಾನಾಪುರ ಬೈಲಹೊಂಗಲ ಹಾಗೂ ಕಿತ್ತೂರು ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ನಾಳೆ ಮತ್ತು ನಾಡಿದ್ದು ಎರಡು ದಿನ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಹೌದು ಬೆಳಗಾವಿ ಜಿಲ್ಲೆಯಲ್ಲಿ ಮಳೆ ಅಬ್ಬರ ಜೋರಾಗಿದ್ದ ಹಿನ್ನೆಲೆಯಲ್ಲಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಬೈಲಹೊಂಗಲ, ಕಿತ್ತೂರು ತಾಲೂಕಿನ ಶಾಲೆಗಳಿಗೆ ಎರಡು ದಿನ ರಜೆ ಘೋಷಣೆ ಮಾಡಲಾಗಿದ್ದು, ಅದೆ ರೀತಿ ಬೆಳಗಾವಿ ಖಾನಾಪುರ ತಾಲೂಕು, ಬೈಲಹೊಂಗಲ ಹಾಗೂ ಕಿತ್ತೂರು ತಾಲೂಕಿನಲ್ಲಿ ಪದವಿ ಪೂರ್ವ ಕಾಲೇಜುಗಳಿಗೂ ಕೂಡ ರಜೆ ಘೋಷಿಸಲಾಗಿದೆ ನಾಳೆ ನಾಡಿದ್ದು ರಜೆ ಘೋಷಿಸಿ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ.

Read More

ಮೈಸೂರು : ಮುಡಾ ಬಹುಕೋಟಿ ಹಗರಣ ಆರೋಪ ಪ್ರತ್ಯಾರೋಪ ವಿಚಾರಕ್ಕೆ ಸಂಬಂಧಿಸಿದಂತೆ ಮುಡಾ ಅಧ್ಯಕ್ಷ ಕೆ. ಮರಿಗೌಡ ವಿರುದ್ಧ ಪ್ರತಾಪ್ ಸಿಂಹ ಹೇಳಿಕೆ ಹಿನ್ನೆಲೆ ಕೆ. ಮರಿಗೌಡ ಕಿಡಿಕಾರಿದ್ದು, ಮಾಧ್ಯಮ ಪ್ರಕಟಣೆಯ ಮೂಲಕ ಮಾಜಿ ಬಿಜೆಪಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಕೀಳು ಮಟ್ಟದ ರಾಜಕಾರಣದಿಂದ ಪ್ರತಾಪ್ ಸಿಂಹಗೆ ಈ ಬಾರಿ ಟಿಕೆಟ್ ತಪ್ಪಿದೆ ಎಂದು ಕಿಡಿಕಾರಿದ್ದಾರೆ. ಮಾಜಿ ಸಂಸದ ಪ್ರತಾಪ್ ಸಿಂಹ ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ತಮ್ಮ ನಡವಳಿಕೆಯಿಂದಲೇ ಈ ಬಾರಿ ಚುನಾವಣೆಯಲ್ಲಿ ಟಿಕೆಟ್ ತಪ್ಪಿದೆ. ಸಿಎಂ ಸಿದ್ದರಾಮಯ್ಯ ನ್ಯಾಯಯುತವಾಗಿ ನಿವೇಶನ ಪಡೆದುಕೊಂಡಿದ್ದಾರೆ. ಅವರು ಯಾಕೆ ನಿವೇಶನ ವಾಪಸ್ ನೀಡಬೇಕು? ಎಂದು ಕಿಡಿ ಕಾರಿದರು. ಪ್ರತಾಪ್ ಸಿಂಹ ಎಲ್ಲರನ್ನು ಏಕವಚನದಲ್ಲಿ ನಿಂದಿಸುತ್ತ ಬಂದಿದ್ದಾರೆ. ಸಿಎಂ ಸಿದ್ದರಾಮಯ್ಯನವರ ಏಳಿಗೆಯನ್ನು ಪ್ರತಾಪ್ ಸಿಂಹ ಸಹಿಸುತ್ತಿಲ್ಲ. ಅವಾಗವಾಗ ಸಿದ್ದರಾಮಯ್ಯರನ್ನು ತೇಜೋವಧೆ ಮಾಡುತ್ತಾ ಬಂದಿದ್ದಾರೆ. ಮುಡಾ ವಿಚಾರದಲ್ಲಿ ಪ್ರತಾಪ್ ಸಿಂಹ ವಾಮ ಮಾರ್ಗ ಅನುಸರಿಸಿದ್ದಾರೆ ಎಂದು ಮುಡಾ ಅಧ್ಯಕ್ಷ ಕೆ.ಮರಿಗೌಡರಿಂದ ಈ ಕುರಿತು ಮಾಧ್ಯಮ…

Read More

ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ 66ರ ಬಳಿ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ಇದೀಗ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಆದರೆ ಲಾರಿ ಚಾಲಕ ಅರ್ಜುನನ ಮೃತದೇಹ ಇನ್ನೂ ಪತ್ತೆ ಆಗಿರದ ಕಾರಣ ಶೋಧ ಕಾರ್ಯ ಮುಂದುವರೆದಿದೆ. ಹೌದು ಕಳೆದ 8 ದಿನಗಳಿಂದ ಶಿರೂರು ಗುಡ್ಡ ಕುಸಿತ ಸ್ಥಳದಲ್ಲಿ ಎನ್ ಡಿ ಆರ್ ಎಫ್ ಎಚ್ ಡಿ ಆರ್ ಎಫ್ ತಂಡ ಸೇರಿದಂತೆ ಮಿಲ್ಟ್ರಿ ತಂಡ ಕೂಡ ಮಣ್ಣು ತೆರವು ಕಾರ್ಯಾಚರಣೆಗೆ ಆಗಮಿಸಿತ್ತು. ಈ ವೇಳೆ ನಿನ್ನೆಯವರೆಗೆ 8 ಮೃತದೇಹಗಳನ್ನು ಪತ್ತೆ ಮಾಡಲಾಗಿದ್ದು, ಇನ್ನೂ ಹಲವರು ಮಣ್ಣಿನ ಅಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಇದೀಗ ಗಂಗಾವಳಿ ನದಿಯಲ್ಲಿ ನಾಪತ್ತೆಯಾಗಿದ್ದ ಲಾರಿ ಪತ್ತೆಯಾಗಿದೆ. ಟಿಂಬರ್ ಲಾರಿ ನದಿಯಲ್ಲಿ ಪತ್ತೆ ಆಗಿರುವ ಸ್ಥಿತಿಯಲ್ಲಿ ಇದೆ.ಕೇರಳ ಮೂಲದ ಲಾರಿ ನದಿಯಲ್ಲಿ ಇದೀಗ ಪತ್ತೆಯಾಗಿದೆ. ಲಾರಿ ಜೊತೆಗೆ ಚಾಲಕ ಅರ್ಜುನ್…

Read More

ಬೆಂಗಳೂರು : ಮಂಡ್ಯದಲ್ಲಿ ಈ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್ 20, 21 ರಂದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಿರುವುದರ ಕುರಿತು ಸಮ್ಮೇಳನಕ್ಕೆ ಅನುದಾನ ಬಿಡುಗಡೆ ಮಾಡುವ ವಿಚಾರವಾಗಿ ಸದನದಲ್ಲಿ ಶಾಸಕ ರವಿ ಕುಮಾರ್ ಗಣಿಗ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಶಿವರಾಜ್ ತಂಗಡಗಿ ಸಮ್ಮೇಳನಕ್ಕೆ 100 ಕೋಟಿ ಮೀಸಲಿರಿಸಲಾಗಿದ್ದು 30 ಕೋಟಿ ರೂಪಾಯಿಗಳ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದು ತಿಳಿಸಿದರು. ಇಂದು ಸದನದಲ್ಲಿ ಪ್ರಶ್ನೋತ್ತರದ ಕಲಾಪದ ವೇಳೆ ಮಂಡ್ಯ ಶಾಸಕ ರವಿಕುಮಾರ್ ಗಣಿಗ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರುಮಂಡ್ಯದಲ್ಲಿ ನಡೆಯಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 100 ಕೋಟಿ ರೂಪಾಯಿಗಳನ್ನು ಮೀಸಲಿರಿಸಲಾಗಿದ್ದು, 30 ಕೋಟಿ ರೂಪಾಯಿಗಳ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಕೆಯಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಡಿಸೆಂಬರ್ 20, 21 ರಂದು ಆಯೋಜಿಸಲಾಗಿರುವ ಸಾಹಿತ್ಯ ಸಮ್ಮೇಳನಕ್ಕೆ ಅನುದಾನ ಬಿಡುಗಡೆ ಮಾಡುವ ಕುರಿತು ಪರಿಶೀಲಿಸಲಾಗುತ್ತಿದೆ. ಈಗಾಗಲೇ 2024 25ನೇ…

Read More

ಬೆಂಗಳೂರು : ‘ಮುಡಾ’ ಹಗರಣಕ್ಕೆ ಸಂಬಂಧಿಸಿದಂತೆ ಇಂದು ಸದನದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಜಟಾಪಟಿ ನಡೆಯಿತು. ಇದಾದ ಬಳಿಕ ವಿಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ ಮುಡಾ ಹಗರಣದ ಬಗ್ಗೆ ಚರ್ಚಿಸಿದರೆ ಸಿಎಂ ಮರ್ಯಾದೆ ಹೋಗುತ್ತೆಂದು ಸದನದಲ್ಲಿ ಚರ್ಚೆಗೆ ಅವಕಾಶ ಕೊಡ್ತಿಲ್ಲ ಎಂದು ಕಿಡಿ ಕಾರಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಗರಣದಲ್ಲಿ ಸರ್ಕಾರ ಹೆದರಿ ಓಡಿಹೋಗಿದೆ. ಕಾಂಗ್ರೆಸ್ ಸರ್ಕಾರ ಹೇಡಿಗಳಂತೆ ನಡೆದುಕೊಳ್ಳುತ್ತಿದೆ ಎಂದು ವಿಧಾನಸೌಧದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ತಿಳಿಸಿದರು. ಮುಡಾದಲ್ಲಿ 14 ಸೈಟ್ ನ್ಯಾಯವಾಗಿ ತೆಗೆದುಕೊಂಡಿದ್ದೆ ಅಂತ ಸದನದಲ್ಲಿ ಸಿಎಂ ಸಿದ್ದರಾಮಯ್ಯನವರು ಹೇಳಬೇಕು ಬರಿ ಹೊರಗಡೆ ಹೇಳುವುದಲ್ಲ. ದಲಿತರ ಜಾಗ ಲೂಟಿ ಹೊಡೆಯುವ ಕೆಲಸ ಆಗಿದೆ. ಸಿದ್ದರಾಮಯ್ಯ ಸಿಎಂ, ಡಿಸಿಎಂ ಆಗಿದ್ದಾಗ ಹಗರಣ ನಡೆದಿದೆ. ದಲಿತರ ಜಮೀನು ಲೂಟಿ ಹೊಡೆದು ಅನ್ಯಾಯ ಮಾಡಿದ್ದಾರೆ. ದಲಿತ ಸಮುದಾಯಕ್ಕೆ ಸಿಎಂ ಅನ್ಯಾಯ ಮಾಡಿದ್ದಾರೆ.ಇಂತಹ ಹಗರಣಗಳ ಬಗ್ಗೆ ಧ್ವನಿಯೆತ್ತಲು ಬಿಡುತ್ತಿಲ್ಲ. ಸ್ಪೀಕರ್ ಪೀಠಕ್ಕೆ ಅಗೌರವ ತೋರುತ್ತಿದ್ದಾರೆ ಎಂದು ಕಿಡಿ ಕಾರಿದರು.…

Read More

ಬೆಂಗಳೂರು : ಸಮಾಜದಲ್ಲಿ ಇನ್ನು ಮೌಢ್ಯಗಳು ಇವೆ. ವಿದ್ಯಾವಂತರೇ ಮೌಢ್ಯವನ್ನು ನಂಬುತ್ತಿದ್ದಾರೆ. ಎಲ್ಲಿವರೆಗೂ ಮೌಢ್ಯಗಳು ಇರುತ್ತವೆಯೋ ಅಲ್ಲಿಯವರೆಗೂ ಸಾಮಾಜಿಕ ನ್ಯಾಯ ತರುವುದಕ್ಕೆ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇಂದು ವಿಧಾನಸೌಧದ ಸಭಾಪತಿಗಳ ಕೊಠಡಿಯಲ್ಲಿ ಸಭಾಪತಿ ಬಸವರಾಜ್ ಹೊರಟ್ಟಿ ಆಯೋಜಿಸಿದ್ದ ಜಗಜ್ಯೋತಿ ಬಸವಣ್ಣನವರ ಅನುಭವ ಮಂಟಪ ಭಾವಚಿತ್ರವನ್ನು ವಿಧಾನ ಪರಿಷತ್ ಸದಸ್ಯರಿಗೆ ನೀಡುವ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಬಸವಣ್ಣನವರು ಸಮಾಜದ ಬದಲಾವಣೆ ಬಯಸಿದ್ದರು, ಮೂಢನಂಬಿಕೆ ಇರಬಾರದು ಅಂತ ಹೇಳಿದ್ದರು. ಎಲ್ಲಿವರೆಗೂ ಮೌಢ್ಯಗಳು ಇರುತ್ತವೆಯೋ ಅಲ್ಲಿಯವರೆಗೂ ಸಾಮಾಜಿಕ ನ್ಯಾಯ ತರುವುದಕ್ಕೆ ಆಗುವುದಿಲ್ಲ ಎಂದರು. 850 ವರ್ಷಗಳ ಹಿಂದೆಯೇ ಬಸವಾದಿ ಶರಣರು ಅನುಭವ ಮಂಟಪ ಮಾಡಿದ್ದರು. ಅಂದಿನ ಕಾಲದಲ್ಲೇ ಅನುಭವ ಮಂಟಪ ಮಾಡಿ ಅದರ ಮುಖಾಂತರ ಸಮಾಜದ ಆನೇಕ ಸಮಸ್ಯೆ ಚೆರ್ಚೆ ಆಗುವಂತೆ ಮಾಡಲಾಗಿತ್ತು. ಸಮಾಜದ ಬದಲಾವಣೆ ಬಗ್ಗೆ ಚೆರ್ಚೆ ಹಾಗೂ ಸಮಾಜಕ್ಕೆ ಒಳಿತು ಆಗುವುದರ ಬಗ್ಗೆ ಚೆರ್ಚೆ ಆಗುತ್ತಿತ್ತು. ಬಸವಣ್ಣ ಅವರು ಸಾಮಾಜಿಕ ಕ್ರಾಂತಿ ಮಾಡಿದ್ದರು. ಅದರ ನಿಮಿತ್ತ ಇಂದು ಅನುಭವ…

Read More

ಉತ್ತರಕನ್ನಡ : ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರುಗುಡ್ಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದಿಗೆ ನಾಪತ್ತೆಯಾದವರನ್ನು ಹುಡುಕಲು ಕಾರ್ಯಚರಣೆ ಆರಂಭಗೊಂಡು 8 ದಿನಗಳಾಯ್ತು. ಇದೀಗ ಈ ಕುರಿತು ಸಚಿವ ಕೃಷ್ಣ ಭೈರೇಗೌಡ ಅವರು ಟ್ವೀಟ್ ಮಾಡಿದ್ದು ನದಿಯಲ್ಲಿ ಲಾರಿ ಇರುವುದು ಖಚಿತವಾಗಿದೆ ಎಂದು ತಿಳಿಸಿದ್ದಾರೆ. ಟ್ವೀಟ್ ನಲ್ಲಿ ನದಿ ನೀರಿನಲ್ಲಿ ಖಚಿತವಾಗಿ ಒಂದು ಟ್ರಕ್ ಇದೆ. ನೌಕಾಪಡೆಯ ಡಿವೈರಗಳು ಸ್ಥಳದಲ್ಲೇ ಲಂಗರು ಹಾಕಲಿದ್ದಾರೆ. ನದಿಯ ಅಡಿಯಲ್ಲಿರೋ ಹೂಳೆತ್ತಳು ಯಂತ್ರ ಬಳಸಲಾಗುವುದು. ಅಲ್ಲದೆ ಮೆಟಲ್ ಡಿಟೆಕ್ಟ್ ಗಳ ಮೂಲಕ ಮೃತದೇಹ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಹೆಲಿಕ್ಯಾಪ್ಟರ್ ಗಳ ಮೂಲಕ ಮೃತದೇಹಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಎಂದು ಕಾರ್ಯಾಚರಣೆ ಬಗ್ಗೆ ಸಚಿವ ಕೃಷ್ಣಭೈರೇಗೌಡ ಇದೀಗ ಟ್ವೀಟ್ ಮಾಡಿದ್ದಾರೆ. ಕಳೆದ ಎಂಟು ದಿನಗಳ ಹಿಂದೆ ಭಾರಿ ಮಳೆಯಿಂದಾಗಿ ಉತ್ತರ ಕನ್ನಡ ಗೆಳೆಯ ಅಂಕೋಲಾ ತಾಲೂಕಿನ ಶಿರೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಗುಡ್ಡ ಕುಸಿದು ಹತ್ತುಕೂ ಹೆಚ್ಚು ಜನರು ನಾಪತ್ತೆಯಾಗಿದ್ದರು ಇದೀಗ ನಿನ್ನಯವರೆಗೂ ಎಂಟು ಜನರ…

Read More

ಬೆಂಗಳೂರು : ಕೋ ಕೋ ಟೂರ್ನಮೆಂಟ್ ವೇಳೆ ಸರಿಯಾಗಿ ತೀರ್ಪು ಕೊಟ್ಟಿಲ್ಲವೆಂದು ತೀರ್ಪುಗಾರರಿಗೆ ಬೆದರಿಸಲು ಪುಂಡರು ಮಾರಕಹಸ್ತ್ರಗಳನ್ನು ಹಿಡಿದು ಮೈದಾನಕ್ಕೆ ಇಳಿದ ಘಟನೆ ಬೆಂಗಳೂರಿನ ಕೊತ್ತನೂರು ಸರ್ಕಾರಿ ಶಾಲಾ ಆವರಣದಲ್ಲಿ ನಡೆದಿದೆ. ಹೌದು ನಿನ್ನೆ ಈ ಒಂದು ಘಟನೆ ನಡೆದಿದ್ದು, ಶಾಲಾ ಮಕ್ಕಳ ಮುಂದೆ ಮಾರಾಕಸ್ತ್ರಗಳನ್ನು ಹಿಡಿದು ದಾಂದಲೆ ಮಾಡಿರುವ ಘಟನೆ ಬೆಂಗಳೂರಿನ ಕೊತ್ತನೂರು ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಟೂರ್ನಮೆಂಟ್ ವೇಳೆ ಡ್ಯಾಗರ್ ಕ್ರಿಕೆಟ್ ಸ್ಂಪ್ ಹಿಡಿದು ಓಡಾಟ ಮಾಡಿದ್ದಾರೆ. ಬೇರೆ ಏರಿಯಾದಿಂದ ಬಂದ ಯುವಕರು ಮಾರಕಾಸ್ತ್ರಗಳನ್ನು ಹಿಡಿದು ಕಿರಿಕ್ ಮಾಡಿದ್ದಾರೆ. ಶಾಲಾ ಮಕ್ಕಳ ಮುಂದೆ ಮಾರಕಸ್ತ್ರಗಳನ್ನು ಹಿಡಿದು ದಾಂದಲೆ ನಡೆಸಿದ್ದಾರೆ. ಟೂರ್ನಮೆಂಟ್ ವೇಳೆ ಡ್ಯಾಗರ್ ಹಾಗೂ ವಿಕೆಟ್ ಹಿಡಿದು ಓಡಾಟ ನಡೆಸಿದ್ದಾರೆ. ಸರಿಯಾಗಿ ತೀರ್ಪು ಕೊಟ್ಟಿಲ್ಲ ಅಂತ ಯುವಕರು ರೊಚ್ಚಿಗೆದ್ದಿದ್ದಾರೆ. ತೀರ್ಪುಗಾರರನ್ನು ಬೆದರಿಸಲು ಮಾರಕಾಸ್ತ್ರಗಳನ್ನು ಹಿಡಿದು ಓಡಾಡಿದ್ದಾರೆ.ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.

Read More

ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಂದು ಸದನದಲ್ಲೂ ಕೂಡ ಬಿಜೆಪಿ ಸದಸ್ಯರು ಈ ಒಂದು ವಿಷಯಕ್ಕೆ ಸಂಬಂಧಿಸಿದ ಚರ್ಚೆ ನಡೆಯಬೇಕು ಎಂದು ಪಟ್ಟು ಹಿಡಿದರು. ಈ ಕುರಿತು ವಿಧಾನ ಪರಿಷತ್ ಸದಸ್ಯ ಸಿಟಿ ರವಿ ಸುದ್ದಿಗೋಷ್ಟಿಯಲ್ಲಿ ಗಂಭೀರ ಆರೋಪವನ್ನು ಮಾಡಿದ್ದು ಮುಡಾ ಹಗರಣದ ಕಿಂಗ್ ಪಿನ್ ಸಿಎಂ ಸಿದ್ದರಾಮಯ್ಯ ಎಂದು ಆರೋಪಿಸಿದರು. ಮುಡಾ ಹಗರಣದ ಕಿಂಗ್ ಪಿನ್ ಸಿಎಂ ಸಿದ್ದರಾಮಯ್ಯ ಎಂದು ಪರಿಷತ್ ಸದಸ್ಯ ಸಿಟಿ ರವಿ ಗಂಭೀರ ಆರೋಪ ಮಾಡಿದ್ದು, ಸಿದ್ದರಾಮಯ್ಯ ಪತ್ನಿಗೆ 14 ನಿವೇಶನ ನೀಡಲಾಗಿದೆ. ಹಗರಣ ಮುಚ್ಚಿಹಾಗಲು ಷಡ್ಯಂತರ ಮಾಡುತ್ತಿದ್ದಾರೆ ಸಿಎಂ ಸಿದ್ದರಾಮಯ್ಯ ಅವರೇ ರೀಡು ಪಿತಾಮಹ. ಸಿಎಂ ಸಿದ್ದರಾಮಯ್ಯ ಮಿಸ್ಟರ್ ಕ್ಲೀನ್ ಆಗಿದ್ರೆ ಉಳಿದ ರೈತರಿಗೆ ಯಾಕೆ ಜಮೀನ ಕೊಟ್ಟಿಲ್ಲ? ಎಂದು ಅವರು ಪ್ರಶ್ನಿಸಿದರು. ವಿಜಯೇಂದ್ರ ವಾಗ್ದಾಳಿ ಇನ್ನು ಇದೆ ವಿಚಾರವಾಗಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮಾತನಾಡಿದ್ದು ಮುಡಾ ಹಗರಣದ ಬಗ್ಗೆ ಚರ್ಚೆ ಆಗಲೇಬೇಕು. ಸದನದಲ್ಲಿ ಇಂದು ಚರ್ಚೆಗೆ ಅವಕಾಶ ಕೊಡಲಿಲ್ಲ. ಸಿಎಂ…

Read More

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೇವಲ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಮುಖ್ಯಮಂತ್ರಿಯಲ್ಲ ಅವರು ಕರ್ನಾಟಕ ರಾಜ್ಯದ ಆರು ಕೋಟಿ ಕನ್ನಡಿಗರಿಗೂ ಕೂಡ ಮುಖ್ಯಮಂತ್ರಿನೇ ಎಂದು ವಿಧಾನಸೌಧದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತಿಳಿಸಿದರು. ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೀತಿ ಆಯೋಗದ ಸಭೆಯನ್ನು ಸಿಎಂ ಬಹಿಷ್ಕಾರ ಮಾಡಿದ್ದಾರೆ. ಸಭೆ ಬಹಿಷ್ಕಾರದ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಸಿಎಂ ಅಲ್ಲ ಆರೂವರೆ ಕೋಟಿ ಕನ್ನಡಿಗರ ಸಿಎಂ ಸಿದ್ದರಾಮಯ್ಯ ರಾಜಕೀಯ ಬಿಡಬೇಕು ಎಂದು ಇದೆ ವೇಳೆ ಆಗ್ರಹಿಸಿದರು. ಮುಡಾ ಹಗರಣದ ಬಗ್ಗೆ ಚರ್ಚೆ ಆಗಲೇಬೇಕು. ಸದನದಲ್ಲಿ ಇಂದು ಚರ್ಚೆಗೆ ಅವಕಾಶ ಕೊಡಲಿಲ್ಲ. ಸಿಎಂ ಕುಟುಂಬ ಮುಡಾ ಅಕ್ರಮದಲ್ಲಿ ಭಾಗಿಯಾಗಿದೆ. ಇದರಿಂದ ಅವರು ಲಾಭ ಪಡೆದುಕೊಂಡಿದ್ದಾರೆ. ಬಡವರಿಗೆ ಸಿಗಬೇಕಂತ ನಿವೇಶನಗಳು, ಕಾಂಗ್ರೆಸ್ ಸರ್ಕಾರ ಮನಬಂದಂತೆ ಅವರ ರಾಜಕೀಯ ಹಿಂಬಾಲಕರಿಗೆ ರಾಜಕಾರಣಿಗಳಿಗೆ, ಮುಖ್ಯಮಂತ್ರಿಗಳ ಹಿಂಬಾಲಕರಿಗೆ ಕೊಟ್ಟಿರುವಂತಹ ಉದಾಹರಣೆಗಳು ಇವೆ. ಆ ಕುರಿತು ಚರ್ಚೆ ಮಾಡಬೇಕು ಅಂದರೆ ಸದನದಲ್ಲಿ ಆಡಳಿತ ಪಕ್ಷದವರು ಚರ್ಚೆಗೆ…

Read More