Author: kannadanewsnow05

ಬೆಂಗಳೂರು : ನಗರದಲ್ಲಿ ಇಂದು ಬಿಜೆಪಿ-ಜೆಡಿಎಸ್ ನಾಯಕರ ಸಭೆಯ ವೇಳೆಯಲ್ಲಿ ಸುದ್ದಿಗೋಷ್ಠಿಯಲ್ಲೇ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮೂಗಿನಿಂದ ರಕ್ತಸ್ತ್ರಾವ ಆಗಿದೆ. ತಕ್ಷಣ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಯಿತು, ಈ ವೇಳೆ ಆಸ್ಪತ್ರೆಯ ವೈದ್ಯರು, ಸ್ಟ್ರೋಕ್ ಆಗಿದ್ದರಿಂದ ರಕ್ತ ಹೆಪ್ಪು ಕಟ್ಟದಂತೆ ಮಾತ್ರೆ ತೆಗೆದುಕೊಳ್ಳುತ್ತಿದ್ದರು ಹಾಗಾಗಿ ರಕ್ತಸ್ರಾವವಾಗಿದೆ ಎಂದು ಮಾಹಿತಿ ನೀಡಿದರು. ಜಯನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಿದ ನಂತರ ವೈದ್ಯರು ಅವರನ್ನು ತಕ್ಷಣ ಚಿಕಿತ್ಸೆಗೆ ಒಳಪಡಿಸಿದರು. ಈ ವೇಳೆ ಸುದ್ದಿಗಾರರು ಮಾತನಾಡಿದ ವೈದ್ಯರು, ಕೇಂದ್ರ ಸಚಿವ ಹೆಚ್‍ಡಿ ಕುಮಾರಸ್ವಾಮಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಂಪೂರ್ಣ ಪರೀಕ್ಷೆಗೆ ಒಳಪಡಿಸಿದ ನಂತರ ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ಆಸ್ಪತ್ರೆಯ ವೈದ್ಯರು ಮಾಹಿತಿ ನೀಡಿದರು. ಹಿಂದೆ ಎಚ್‍ಡಿ ಕುಮಾರಸ್ವಾಮಿಗೆ ಮೈಂಡ್ ಸ್ಟ್ರೋಕ್, ಹಾರ್ಟ್ ಸರ್ಜರಿ ಹಿನ್ನೆಲೆಯಲ್ಲಿ ರಕ್ತ ಹೆಪ್ಪುಗಟ್ಟದಂತೆ ಮಾಡುವ ಚಿಕಿತ್ಸೆ ಪಡೆದಿರಬಹುದು. ಅಥವಾ ಔಷಧಿಗೆ ಒಳಪಟ್ಟಿರುವ ಸಾಧ್ಯತೆ ಇದೆ. ಹೀಗಾಗಿ ಎಚ್ ಡಿ ಕುಮಾರಸ್ವಾಮಿಗೆ ಮೂಗಿನಿಂದ ರಕ್ತಸ್ತ್ರಾವ ಆಗಿದೆ ಎಂದು ಜಯನಗರದ ಅಪೋಲೋ ಆಸ್ಪತ್ರೆಯ ವೈದ್ಯರು…

Read More

ಬೆಂಗಳೂರು : ಎಚ್ ಡಿ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಯಾವುದೇ ರೀತಿಯಾಗಿ ಆತಂಕ ಪಡುವ ಅಗತ್ಯವಿಲ್ಲ ಅವರಿಗೆ ತಂದೆ ತಾಯಿಯ ಆಶೀರ್ವಾದವಿದೆ ಎಂದು ಬೆಂಗಳೂರಿನಲ್ಲಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದರು. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲಸದ ಒತ್ತಡದಿಂದ ವಿಶ್ರಾಂತಿ ಪಡೆದುಕೊಳ್ಳಲು ಅವರಿಗೆ ಆಗಲಿಲ್ಲ. ಆ ರೀತಿ ಆದಂಗ ಪಡುವ ಯಾವುದೇ ವಾತಾವರಣ ಇಲ್ಲ. ಕುಮಾರಣ್ಣ ಅವರು ಆರೋಗ್ಯವಾಗಿದ್ದಾರೆ. ಕುಮಾರಣ್ಣನ ಮೇಲೆ ತಂದೆ ತಾಯಿ ಆಶೀರ್ವಾದ ಇದೆ. ಕುಮಾರಣ್ಣಗೆ ಏನು ಆಗಿಲ್ಲ ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿಸಿದರು. ಇಂದು ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಸಭೆ ನಡೆಯಿತು. ರಾಜ್ಯ ಸರ್ಕಾರದ ಅಕ್ರಮಗಳ ವಿರುದ್ಧ ಹೋರಾಟದ ಬಗ್ಗೆ ನಡೆದಂತ ಸಭೆಯಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಕೂಡ ಭಾಗಿಯಾಗಿದ್ದರು. ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಲು ಹೆಚ್.ಡಿ ಕುಮಾರಸ್ವಾಮಿ ಪ್ರಾರಂಭಿಸಿದಾಗ ಅವರ ಮುಗಿನಲ್ಲಿ ರಕ್ತ ಸೋರುವುದಕ್ಕೆ ಶರುವಾಯ್ತು. ಕೂಡಲೇ ಸುದ್ದಿಗೋಷ್ಠಿಯನ್ನು ಮೊಟಕುಗೊಳಿಸಿ, ಅವರ ಪುತ್ರ ನಿಖಿಲ್…

Read More

ಬಾಗಲಕೋಟೆ : ರಾಜ್ಯಾದ್ಯಂತ ಭಾರಿ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ರಾಜ್ಯದ ಎಲ್ಲಾ ಡ್ಯಾಮ್ ಗಳು ಭರ್ತಿಯಾಗಿವೆ ಈ ನೆಲೆಯಲ್ಲಿ ಹಲವು ಕಡೆ ಪ್ರವಾಹದ ಭೀತಿ ಕೂಡ ಎದುರಾಗಿದೆ. ಇದೀಗ ಬಾಗಲಕೋಟೆಯಲ್ಲಿ ಕೃಷ್ಣಾ ನದಿಯ ಹಿನ್ನೀರಿನಲ್ಲಿ ಐದು ವರ್ಷದ ಬಾಲಕಿ ಒಬ್ಬಳು ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಹೌದು ಕೃಷ್ಣಾ ನದಿಯ ಹಿನ್ನೀರಿನಲ್ಲಿ ಮುಳುಗಿ ಬಾಲಕಿ ದುರ್ಮರಣ ಹೊಂದಿದ್ದಾಳೆ.ಕಡಕೋಳ ಗ್ರಾಮದಲ್ಲಿ ಸಮೃದ್ಧಿ ತಿಮ್ಮಕ್ಕನವರ್ (5) ಸಾವನ್ನಪ್ಪಿದ್ದಾಳೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ತಾಯಿ ಜೊತೆಗೆ ಬಟ್ಟೆ ತೊಳೆಯಲು ತೆರಳಿದ್ದಳು. ಬಟ್ಟೆ ತೊಳೆದ ನಂತರ ಸಮೃದ್ಧಿ ತಾಯಿ ಜೊತೆ ವಾಪಸ್ ಮನೆಗೆ ಬಂದಿದ್ದಳು. ಆ ಬಳಿಕ  ಕೃಷ್ಣಾ ನದಿ ಹಿನ್ನೀರು ಕಡೆಗೆ ಬಾಲಕಿ ಹೋಗಿದ್ದಾಗ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾಳೆ. ಘಟನಾ ಸ್ಥಳಕ್ಕೆ ಇದೀಗ ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

Read More

ರಾಮನಗರ : ಬಿಜೆಪಿಯ ಮಾಜಿ ಸಚಿವ ಸಿಪಿ ಯೋಗೇಶ್ವರ್ ಅವರಿಗೆ ಪಿತೃ ವಿಯೋಗವಾಗಿದ್ದು,ಇಂದು ಅವರ ತಂದೆ ಪುಟ್ಟಮಾದೇಗೌಡ(89) ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಪುಟ್ಟ ಮಾದೇಗೌಡರು ಅನಾರೋಗ್ಯ ಹಾಗೂ ಅಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಅಲ್ಲದೆ ಅವರಿಗೆ 89 ವರ್ಷ ವಯಸ್ಸು ಕೂಡ ಆಗಿತ್ತು. ಹೀಗಾಗಿ ಅವರನ್ನು ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳಿದಿದ್ದಾರೆ. ನಾಳೆ ಸ್ವಗ್ರಾಮ ಚನ್ನಪಟ್ಟಣದ ಚಕ್ಕೆರೆ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರಿಂದ ಮಾಹಿತಿ ಲಭ್ಯವಾಗಿದೆ. ಪುಟ್ಟ ಮಾದೇಗೌಡರು ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

Read More

ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇಂದು ಬಿಜೆಪಿ ಹಾಗೂ ಜೆಡಿಎಸ್ ಮಿತ್ರ ಪಕ್ಷಗಳ ಸಭೆಯ ಬಳಿಕ ಆಗಸ್ಟ್ 3 ರಂದು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜೇಂದ್ರ ತಿಳಿಸಿದರು. ಇಂದು ಬೆಂಗಳೂರಿನಲ್ಲಿ ನಡೆದ ಬಿಜೆಪಿ ಜೆಡಿಎಸ್ ನಾಯಕರ ಸಭೆಯ ಬಳಿಕ ಬಿವೈ ವಿಜಯೇಂದ್ರ ಮಾತನಾಡಿ, ಮುಂದಿನ ಶನಿವಾರ ಆಗಸ್ಟ್ 3ರಂದು ನಮ್ಮ ಪಾದಯಾತ್ರೆ ಆರಂಭವಾಗುತ್ತದೆ. ಈ ಒಂದು ಪಾದಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವರದ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಎಲ್ಲ ಬಿಜೆಪಿ ಜೆಡಿಎಸ್ ನಾಯಕರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದರು. ಇದೆ ವೇಳೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮಾತನಾಡಿ, ಬೆಂಗಳೂರಿನಿಂದ ಮೈಸೂರಿನ ವರೆಗೆ ಮುಡಾ ಹಗರಣಕ್ಕೆ ಸಂಬಂಧಿಸದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪಾದಯಾತ್ರೆ ನಡೆಸಲಾಗುತ್ತದೆ. ಸಾವಿರಾರು ಜನ ಸೇರಿ ದೊಡ್ಡ ಹೋರಾಟವನ್ನು ಕೈಗೊಂಡಿದ್ದೇವೆ. ಈ ರಾಜ್ಯದ ಮುಖ್ಯಮಂತ್ರಿ ರಾಜೀನಾಮೆ ನೀಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ. ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ…

Read More

ದಾವಣಗೆರೆ : ಜಾತಿ ಪದ್ಧತಿ ಹೋಗಲ್ಲ ಎಂಬುವುದು ನನ್ನ ಅಭಿಪ್ರಾಯ. ನಾವು ಬದಲಾಗದಿದ್ದರೆ ಮುಂದೆಯೂ ಗ್ರಾಮಗಳ ಹೊರಗೆ ಇರಬೇಕಾಗುತ್ತದೆ ಎಂದು ದಾವಣಗೆರೆಯಲ್ಲಿ ಗೃಹ ಇಲಾಖೆಯ ಸಚಿವ ಜಿ. ಪರಮೇಶ್ವರ್ ಬೇಸರ ವ್ಯಕ್ತಪಡಿಸಿದರು. ದಾವಣಗೆರೆಯಲ್ಲಿ ಛಲವಾದಿ ಮಹಾಸಭೆಯ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಭಾಷಣ ಮಾಡಿ, ನಾನು ಎಂಎ.ಪಿಎಚ್ ಡಿ ಮಾಡಿದ್ದೇನೆ. ಆದರೆ ನನ್ನ ಜಾತಿ ನನ್ನ ಬಿಟ್ಟು ಹೋಗುವುದಿಲ್ಲ. ಜಿ ಪರಮೇಶ್ವರ್ ಬುದ್ಧಿವಂತ ಆದರೆ ಪರಿಶಿಷ್ಟ ಜಾತಿಗೆ ಸೇರಿದ್ದಾನೆ ಇಲ್ಲದಿದ್ದರೆ ಎಲ್ಲೋ ಹೋಗುತ್ತಿದ್ದ ಅಂತ ಹೇಳುತ್ತಾರೆ. ಹೀಗಾಗಿ ಜಾತಿ ನಾಶವಾಗುತ್ತದೆ ಎಂಬುದು ಸಾಧ್ಯವಿಲ್ಲ ಎಡಬಲ ಹೀಗೆ ಹತ್ತಾರು ಗುಂಪುಗಳನ್ನು ಮಾಡಿದ್ದಾರೆ.ಈ ಜನ್ಮದಲ್ಲಿ ಒಂದಾಗದ ರೀತಿ ಸಮುದಾಯವನ್ನು ಒಡೆದು ಹಾಕಿದ್ದಾರೆ ಎಂದರು

Read More

ಹುಬ್ಬಳ್ಳಿ : ಬಡವರಿಗೆ ತಲುಪಬೇಕಾದ ಅನ್ನಭಾಗ್ಯ ಯೋಜನೆಯ ಅಕ್ಕಿಯೂ ಇದೀಗ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದು ಇದೀಗ ಹುಬ್ಬಳ್ಳಿಯಲ್ಲಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದ ಅಡ್ಡೆಯ ಮೇಲೆ  ಅಧಿಕಾರಿಗಳು ದಾಳಿ ಮಾಡಿ ಲಕ್ಷಾಂತರ ಮೌಲ್ಯದ ಅಕ್ಕಿಯನ್ನು ಜಪ್ತಿ ಮಾಡಿಕೊಂಡಿದ್ದಾರೆ. ಹಳೆ ಹುಬ್ಬಳ್ಳಿಯ ಇಸ್ಲಾಂ ಗಳ್ಳಿಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಅಧಿಕಾರಿಗಳಿಂದ ರೇಡ್ ಮಾಡಲಾಗಿದೆ. ಕರ್ನಾಟಕ ತೆಲಂಗಾಣದಿಂದ ಅಕ್ರಮವಾಗಿ ಅಕ್ಕಿ ಸಂಗ್ರಹಿಸಿ, ಹೆಚ್ಚಿನ ಬೆಲೆಗೆ ಆರೋಪಿ ಕಲಂದರ್ ಮಾರಾಟ ಮಾಡುತ್ತಿದ್ದ. ಅಲ್ಮೆರಾ ತಯಾರಿಕಾ ಅಂಗಡಿಯಲ್ಲಿ ಅಕ್ಕಿ ಸಂಗ್ರಹಿಸಿಟ್ಟಿದ್ದ 36 ಅಕ್ಕಿಯನ್ನು ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ. ಹಳೆ ಹುಬ್ಬಳ್ಳಿ ಪೋಲಿಸ್ಟ್ ಹಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ದಾವಣಗೆರೆ : ಹಿಂದುಳಿದ ವರ್ಗಗಳ ಇಲಾಖೆಗಳಲ್ಲಿ ಯಾವುದೇ ರೀತಿಯಾಗಿ ಅನುದಾನ ಸ್ಥಗಿತವಾಗಿಲ್ಲ. ಅನುದಾನ ಬಿಡುಗಡೆ ಆಗದೆ ಇರಬಹುದು ಆದರೆ ಅನುದಾನ ಸ್ಥಗಿತವಾಗಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಎಚ್ ಸಿ ಮಹದೇವಪ್ಪ ಸ್ಪಷ್ಟಪಡಿಸಿದರು. ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ಸ್ಥಗಿತವಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಬಜೆಟ್ ನಲ್ಲಿ ನಿಗದಿಯಾಗಿರುವ ಅನುದಾನ ಮಂಜೂರಾತಿ ಆಗಲಿದೆ. ಅನುದಾನ ಬಿಡುಗಡೆ ಆಗದೇ ಇರಬಹುದು ಆದರೆ ಸ್ಥಗಿತವಾಗಲು ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದರು. ಅಂಬೇಡ್ಕರ್ ವಸತಿ ಶಾಲೆಗಳು ಗೋಡೌನ್‌ನಲ್ಲಿ ನಡೆಯುತ್ತಿವೆ ವಿಚಾರಕ್ಕೆ ಕ್ರೈಸ್ ನಲ್ಲಿ 821 ವಸತಿ ಶಾಲೆಗಳಿವೆ. 600 ವಸತಿ ಶಾಲೆಗಳಿಗೆ ಸ್ವಂತ ಕಟ್ಟಡ ಇದೇ. ಇನ್ನೂ 200ಕ್ಕೆ ಬಾಡಿಗೆ ನಲ್ಲಿ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. ಎಲ್ಲೆಲ್ಲಿ ಬಾಡಿಗೆನಲ್ಲಿ ನಡೆಸಲಾಗುತ್ತೆ, ನಮಗೆ 36 ಕಡೆ ಜಾಗ ಇದ್ದು ಅಲ್ಲಿ ಕಟ್ಟುತ್ತೇವೆ. ಜಾಗ ಇಲ್ಲದ ಕಡೆ ಜಾಗ ಒದಗಿಸಿಕೊಂಡು ಕಟ್ಟುತ್ತೇವೆ ಎಂದು ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಹ ಆಗಿದೆ. ಇದೀಗ ಸ್ವಾವಲಂಬಿ ಜೀವನ ನಡೆಸಲು ರ‍್ಯಾಪಿಡೊ ಬೈಕ್ ಟ್ಯಾಕ್ಸಿ ಚಲಾಯಿಸಿಕೊಂಡು ಜೀವನ ನಡೆಸುತ್ತಿದ್ದ ಮಹಿಳೆಯೊಂದಿಗೆ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಹೌದು ರ‍್ಯಾಪಿಡೊ ಬೈಕ್ ಟ್ಯಾಕ್ಸಿ ಚಲಾಯಿಸುತ್ತಿದ್ದ ಮಹಿಳೆಗೆ ಬೈಕ್ ಟ್ಯಾಕ್ಸಿ ಬುಕ್‌ ಮಾಡಿದ್ದ ಯುವಕನಿಂದ ಅಸಭ್ಯ ವರ್ತನೆ ಆರೋಪ ಕೇಳಿಬಂದಿದೆ. 35 ವರ್ಷದ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಆಧರಿಸಿ ಜೈಪುರ ಮೂಲದ ಮಹೇಶ್ (27) ಎಂಬಾತನನ್ನು ಪೊಲೀಸ್ ವಶಕ್ಕೆ ಪಡೆದುಕೊಂಡಿದ್ದಾರೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಾಲಹಳ್ಳಿಯ ಹೆಚ್​ಎಂಟಿಯಿಂದ ದಾಸರಹಳ್ಳಿಗೆ ಬರುವ ಮಾರ್ಗ ಮಧ್ಯದಲ್ಲಿ ಯುವಕನಿಂದ ಅಸಭ್ಯ ವರ್ತನೆ ಮಾಡಿದ್ದಾರೆ ಮಹಿಳೆ ಆರೋಪಿಸಿದ್ದಾರೆ. ಘಟನೆ ಬಳಿಕ ಬೈಕ್ ನಿಲ್ಲಿಸಿ ಹೊಯ್ಸಳ ಪೊಲೀಸ್​ರಿಗೆ ಮಹಿಳೆ ಕರೆ ಮಾಡಿದ್ದು, ಸ್ಥಳಕ್ಕೆ ಬಂದು ಮಹೇಶ್​ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Read More

ವಿಜಯಪುರ : ಮುಡಾದಲ್ಲಿ ನಡೆದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಅವರು ಸ್ವಪಕ್ಷದ ವಿರುದ್ಧವೇ ಸ್ಪೋಟಕ ಹೇಳಿಕೆ ನೀಡಿದ್ದು, ಮಾಜಿ ಅಧ್ಯಕ್ಷ ಹೆಚ್​.ವಿ ರಾಜೀವ್ ಬಿಜೆಪಿಯಲ್ಲೆ ಇದ್ದಾಗ ಆದ ಹಗರಣ ನಡೆದಿದೆ. ಈಗ ಅವರು ಕಾಂಗ್ರೆಸ್ ಸೇರಿದ್ದಾನೆ. ಕಾಂಗ್ರೆಸ್​ಗೆ ಯಾಕೆ ಸೇರಿದ್ದಾರೆ ಅಂದರೆ ಇದೆಲ್ಲ ಮುಚ್ಚಿ ಹಾಕಲು ಸೇರಿದ್ದಾರೆ ಎಂದು ಶಾಸಕ ಬಸನಗೌಡಾ ಪಾಟೀಲ ಯತ್ನಾಳ್ ಕಿಡಿಕಾರಿದ್ದಾರೆ. ರಾಜೀವ ಯಾರ ಶಿಷ್ಯ ಅನ್ನೋದು ಎಲ್ಲರಿಗೂ ಗೊತ್ತಿದೆ. ವಿಧಾನಸೌಧದಲ್ಲಿ ನಾನು ಹೇಳಿದ್ದೇನೆ. ಕೇವಲ ಸಿದ್ಧರಾಮಯ್ಯ ಅವರನ್ನ ಮಾತ್ರ ಗುರಿ ಮಾಡಬೇಡಿ. ಇವತ್ತು ನಮ್ಮ ವಿಜಯೇಂದ್ರ ಹೇಳುತ್ತಾರೆ, ಇದು ಕೇವಲ ಸಿದ್ಧರಾಮಯ್ಯ ವಿರುದ್ದ ಹೋರಾಟ ಅಲ್ಲ, ಕಾಂಗ್ರೆಸ್ ವಿರುದ್ಧ ಹೋರಾಟ ಅಂತ, ಹಾಗಾದ್ರೆ ಸಿದ್ಧರಾಮಯ್ಯ ಯಾರು? ಬೇರೆನಾ, ಬಿಜೆಪಿಯವರಾ? ಎಂದು ಪ್ರಶ್ನಿಸಿದ್ದಾರೆ. ಮುಡಾ ಹಗರಣದಲ್ಲಿ ಯಡ್ಡಿಯೂರಪ್ಪ ಇದ್ದಾರೋ, ವಿಜಯೇಂದ್ರ ಇದ್ದಾರೋ, ಯಡ್ಡಿಯೂರಪ್ಪ ಅಕ್ಕನ ಮಕ್ಕಳು ಇದ್ದಾರೋ, ರಾಜೀವ್ ಅದರೋ, ಮತ್ಯಾರು ಇದ್ದಾರೆ ಎಲ್ಲರೂ ಸಿಕ್ಕಿ ಬೀಳುತ್ತಾರೆ. ರಾಜೀವ್…

Read More