Subscribe to Updates
Get the latest creative news from FooBar about art, design and business.
Author: kannadanewsnow05
ಕಲಬುರ್ಗಿ : ಕಲ್ಬುರ್ಗಿಯಲ್ಲಿ ತಿಪ್ಪೇಗುಂಡಿಯಲ್ಲಿ ನಾಡಪಿಸ್ತುಲ್ ಹಾಗೂ ಮೂರು ಗುಂಡುಗಳು ಪತ್ತೆಯಾಗಿವೆ, ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಚಿಂಚೋಳಿ (ಹೆಚ್) ಗ್ರಾಮದಲ್ಲಿ ನಾಡಪಿಸ್ತುಲ್ ಮತ್ತು ಗುಂಡುಗಳು ಪತ್ತೆಯಾಗಿವೆ. ಟೈಲರ್ ಅಂಗಡಿಯಲ್ಲಿದ್ದ ಬಟ್ಟೆಗಳನ್ನು ಮಾಳಪ್ಪ ಎನ್ನುವ ವ್ಯಕ್ತಿ ಗುಂಡಿಗೆ ಹಾಕಿದ್ದ. ಈ ವೇಳೆ ಬಟ್ಟೆಗೆ ಬೆಂಕಿ ಹಚ್ಚಿದ ಕೆಲ ಸಮಯದ ಬಳಿಕ ಭಾರಿ ಸ್ಫೋಟದ ಶಬ್ದ ಕೇಳಿಸಿದೆ. ಆಗ ತಿಪ್ಪೆಗುಂಡಿ ಪರಿಶೀಲಿಸಿದಾಗ ಮೂರು ಗುಂಡು ಪತ್ತೆಯಾಗಿದೆ. ಈ ಸಂಬಂಧ ಕಾಳಿಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾಸನ : ರಾಜ್ಯ ರಾಜಕೀಯದಲ್ಲಿ ಇದೀಗ ಭಾರಿ ವಿಚಾರ ಚರ್ಚೆಗೆ ಗ್ರಾಸವಾಗಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಶಕ್ತಿಯುತ ಖಡ್ಗಮಾಲಾ ಸ್ತೋತ್ರ ಹಾಗೂ ನಾರಾಯಣಿ ಪೂಜೆ, ಇಷ್ಟಾರ್ಥ ಸಿದ್ದಿಗಾಗಿ ನಾರಾಯಣಿ ಮಂತ್ರದೊಂದಿಗೆ ಡಿಸಿಎಂ ಡಿಕೆ ಶಿವಕುಮಾರ್ ಪೂಜೆ ಸಲ್ಲಿಸಿದ್ದಾರೆ. ಶತ್ರುಗಳ ಮೇಲೆ ವಿಜಯದ ಸಂಕೇತವಾಗಿ ಈ ಒಂದು ಪೂಜೆ ಮಾಡಿಸಿದ್ದು, 5 ನಿಮಿಷಗಳ ಕಾಲ ಶಕ್ತಿಯುತವಾದ ಖಡ್ಗಮಾಲಾ ಸ್ತೋತ್ರವನ್ನು ಡಿಸಿಎಂ ಡಿಕೆ ಶಿವಕುಮಾರ್ ಸ್ಪಟಿಸಿ ವಿಶೇಷವಾಗಿ ಪ್ರಾರ್ಥನೆ ಮಾಡಿದ್ದಾರೆ. ಹೌದು ಹಾಸನಾಂಬೆ ದೇಗುಲದಲ್ಲಿ ಶಕ್ತಿಯುತವಾದ ಖಡ್ಗಮಾಲಾ ಸ್ತೋತ್ರ ಪಠಿಸಿ ನಾರಾಯಣಿ ಮಂತ್ರದೊಂದಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ ಅತ್ಯಂತ ಪ್ರಬಲ ಪೂಜೆ ಇದಾಗಿದ್ದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಚಂಡಿಕಾ ಹೋಮ ಮಾಡುವಂತಹ ವೇಳೆ ಈ ಮಂತ್ರವನ್ನು ಪಠಿಸಲಾಗಿದೆ. ನಿನ್ನೆ ಕುಟುಂಬದ ಸಮೇತ ಅವರು ಹಾಸನ ಪಡೆದು ಸಲ್ಲಿಸಿದರು. ಅದು ನಮಗೆ ಸೀರೆ ಬಳೆ ಅರ್ಪಣೆ ಮಾಡಿ ಶತ್ರುವಿನ ಮೇಲೆ ವಿಜಯದ ಸಂಕೇತವಾಗಿ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ನನಗೆ ಸಿಎಂ ಸ್ಥಾನ ಸಿಗುವ…
ಬೆಂಗಳೂರು : ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಬೆಂಗಳೂರು ನಗರ-2, ಬೆಂಗಳೂರು ಗ್ರಾಮಾಂತರ-1, ಚಿತ್ರದುರ್ಗ-1, ದಾವಣಗೆರೆ-2, ಹಾವೇರಿ-2, ಬೀದರ್-1, ಉಡುಪಿ-1, ಬಾಗಲಕೋಟೆ-1 ಮತ್ತು ಹಾಸನ-1 ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ಒಟ್ಟು 12 ಸರ್ಕಾರಿ ಅಧಿಕಾರಿಗಳು ತಮ್ಮ ಬಲ್ಲ ಆದಾಯದ ಮೂಲಗಳಿಗಿಂತ ಹೆಚ್ಚು ಅಸಮತೋಲನ ಆಸ್ತಿಯನ್ನು ಹೊಂದಿದ್ದ ಬಗ್ಗೆ ಪ್ರಕರಣಗಳು ದಾಖಲಾಗಿರುತ್ತವೆ. ಈ ಕುರಿತಂತೆ ಕರ್ನಾಟಕ ಲೋಕಾಯುಕ್ತದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ದಿನಾಂಕ: 14.10.2025 ರಂದು ಆರೋಪಿತ ಸರ್ಕಾರಿ ಅಧಿಕಾರಿಗಳಿಗೆ ಸಂಬಧಿಸಿದ ಮನೆ, ಕಛೇರಿ ಹಾಗೂ ಸಂಬಂಧಿಕರ ಮನೆಗಳು ಸೇರಿದಂತೆ ಒಟ್ಟು 48 ಸ್ಥಳಗಳಲ್ಲಿ ಏಕ ಕಾಲಕ್ಕೆ ಶೋಧನಾ ಕಾರ್ಯ ಕೈಗೊಂಡಿದ್ದು, ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಅಸಮತೋಲನ ಆಸ್ತಿ ಹೊಂದಿದ್ದ ಬಗ್ಗೆ ಮಾಹಿತಿ ತಿಳಿದುಬಂದಿರುತ್ತದೆ ಎಂದಿದೆ. 1) ಮಂಜುನಾಥ. ಜಿ, ವೈದ್ಯಾಧಿಕಾರಿಗಳು, ಹೆರಿಗೆ ಆಸ್ಪತ್ರೆ, ಮಲ್ಲಸಂದ್ರ, ಬೆಂಗಳೂರು. ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 4 ಸ್ಥಳಗಳಲ್ಲಿ ಶೋಧನಾ ಕಾರ್ಯ ಕೈಗೊಳ್ಳಲಾಗಿರುತ್ತದೆ. ಶೋಧನಾ ಸಮಯದಲ್ಲಿ ಈ ಕೆಳಕಂಡಂತೆ ಆಸ್ತಿಯನ್ನು ಹೊಂದಿರುವುದು…
ಮೈಸೂರು : ಇಂದು ಮೈಸೂರಿಗೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 2:40ಕ್ಕೆ ಹಾಸನದಿಂದ ಸಿಎಂ ಸಿದ್ದರಾಮಯ್ಯ ಮೈಸೂರಿಗೆ ಆಗಮಿಸಲಿದ್ದು, ಹೆಲಿಕ್ಯಾಪ್ಟರ್ ನಲ್ಲಿ ಮೈಸೂರಿಗೆ ಆಗಮಿಸಲಿದ್ದಾರೆ. ಮೈಸೂರಿನಲ್ಲಿ ಬೌದ್ಧ ಮಹಾ ಸಮ್ಮೇಳನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಈ ಒಂದು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.ಮೈಸೂರಿನಲ್ಲಿ ಕರ್ನಾಟಕ ರಾಜ್ಯ ಭಿಕ್ಕು ಸಂಘ ಹಾಗೂ ರಾಜ್ಯ ಬೌದ್ಧ ಸಂಘ ಸಂಸ್ಥೆ ಈ ಒಂದು ಕಾರ್ಯಕ್ರಮ ಆಯೋಜಿಸಿದ್ದು, ಕಾರ್ಯಕ್ರಮದ ಬಳಿಕ ಮತ್ತೆ ಸಂಜೆ 7 ಗಂಟೆಗೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
ಬೆಂಗಳೂರು : ಈಗಾಗಲೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ನವೆಂಬರ್‌ಗೆ ಎರಡೂವರೆ ವರ್ಷ ಪೂರೈಸಲಿದೆ. ನವೆಂಬರ್ ವೇಳೆಗೆ ರಾಜ್ಯ ರಾಜಕೀಯದಲ್ಲಿ ಮಹಾಕ್ರಾಂತಿಯಾಗಲಿದೆ ಎನ್ನುವ ಚರ್ಚೆ ಕೇಳಿ ಬರುತ್ತಿದ್ದು, ಈ ನಡುವೆ ಮುಖ್ಯಮಂತ್ರಿ ಬದಲಾವಣೆ ಹಾಗೂ ಸಚಿವ ಸಂಪುಟ ಪುನರ್‌ರಚನೆ ಕುರಿತು ಹಲವು ಚರ್ಚೆಗಳು ನಡೆದಿವೆ. ಇದೀಗ ಸಂಪುಟ ಪುನಾರಚನೆ ಆದ್ರೆ 15 ಹಾಲಿ ಸಚಿವರಿಗೆ ಗೇಟ್ ಪಾಸ್ ನೀಡೋದಂತು ಪಕ್ಕಾ, ಹಾಗಾಗಿ 15 ಶಾಸಕರಿಗೆ ಸಚಿವ ಸ್ಥಾನ ಸಿಗಲಿದೆ. ಇನ್ನೂ 15 ಜನ ಹಿರಿಯ ಶಾಸಕರು ಹಾಗೂ ಹೊಸ ಮುಖಗಳಿಗೆ ಮಣೆ ಹಾಕಲು ಹೈಕಮಾಂಡ್ ಮುಂದಾಗಿದೆ. ಏಕೆಂದರೆ ಮುಂದಿನ 2028 ರ ವಿಧಾನಸಭಾ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ಅಸಮಾಧಾನಿತ ನಾಯಕರಿಗೆ ಮಂತ್ರಿ ಪಟ್ಟ ಕಟ್ಟಲು ತಯಾರಿ ನಡೆಸಿದೆ. ನವೆಂಬರ್ ಎರಡನೇ ವಾರದಲ್ಲಿ, ರಾಜ್ಯದ ನಾಯಕರು ದೆಹಲಿಗೆ ತೆರಳಿ ಹೈಕಮಾಂಡ್ ಜೊತೆ ಅಂತಿಮ ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಹೈಕಮಾಂಡ್‌ನಿಂದ ಹಸಿರು ನಿಶಾನೆ ಸಿಗುತ್ತಿದ್ದಂತೆಯೇ ಸಂಪುಟ ಪುನಾರಚನೆಯ ಕಸರತ್ತು ಅಧಿಕೃತವಾಗಿ ಆರಂಭವಾಗಲಿದೆ. ನವೆಂಬರ್ ತಿಂಗಳಾಂತ್ಯದ ವೇಳೆಗೆ…
ಹಾಸನ : ಹಾಸನಾಂಬ ದೇವಾಲಯಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಪೂಜೆ ಸಲ್ಲಿಸಿದ್ದು ನಿನ್ನೆ ಅಷ್ಟೇ ಡಿಕೆ ಶಿವಕುಮಾರ್ ಹಾಸನಾಂಬೆಗೆ ಪೂಜೆ ಪುನಸ್ಕಾರ ಸಲ್ಲಿಸಿದರು. ಹಾಸನ ಬಗ್ಗೆ ಪೂಜೆ ಸಲ್ಲಿಸಿ ಡಿಕೆ ಶಿವಕುಮಾರ್ ಅಚ್ಚರಿಯ ಹೇಳಿಕೆ ನೀಡಿದ್ದು ದೇವರಿಗೂ ಭಕ್ತನಿಗೂ ವ್ಯವಹಾರ ನಡೆಯುವ ಸ್ಥಳ ಅಂದರೆ ದೇವಾಲಯ ಸಿಎಂ ಸ್ಥಾನ ಸಿಗುವ ವಿಚಾರ ನನಗೆ ಮತ್ತು ಭಗವಂತನಿಗೆ ಮಾತ್ರ ಗೊತ್ತಿದೆ ಎಂದು ಹೇಳಿಕೆ ನೀಡಿದ್ದಾರೆ. ನಿನ್ನೆ ಶ್ರೀ ಹಾಸನಾಂಬ ದೇವಾಲಯಕ್ಕೆ ಕುಟುಂಬಸಮೇತ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದುರ್ಗಿಯ ಸ್ವರೂಪಿ, ಶಾರದೆ ಸ್ವರೂಪಿಯಾದ ತಾಯಿ ಹಾಸನಾಂಬೆಯ ದರ್ಶನ ಭಾಗ್ಯ ನಮ್ಮಲ್ಲರಿಗೂ ಸಿಕ್ಕಿದೆ. ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಶಕ್ತಿ ದೇವತೆಯಾಗಿದ್ದು, ಭಕ್ತರ ದುಃಖವನ್ನು ಪರಿಹರಿಸುತ್ತಾಳೆ ಎಂದರು. ಭಕ್ತರು ತಮಗೆ ನೆಮ್ಮದಿ, ಶಾಂತಿಯ ಬದುಕನ್ನು ಕೊಡು ಎಂದು ತಾಯಿಯಲ್ಲಿ ಬೇಡಿಕೊಳ್ಳುತ್ತಾರೆ. ಭಕ್ತನಿಗೂ ಭಗವಂತನಿಗೂ ವ್ಯವಹಾರ ನಡೆಯುವ ಸ್ಥಳ ದೇವಾಲಯ. ಎಲ್ಲ ಜನರು ವಿಶೇಷವಾದ ದರ್ಶನ…
ಬೆಂಗಳೂರು : ಬೆಂಗಳೂರಿನ ಬಡವರು ಮತ್ತು ಮಧ್ಯಮ ವರ್ಗದವರು ಅನಧಿಕೃತವಾಗಿ ನಿರ್ಮಿಸಿರುವ ಸಣ್ಣ ವಿಸ್ತೀರ್ಣದ ಮನೆಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ ಪಡೆಯುವುದರಿಂದ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೌದು ಬೆಂಗಳೂರಿನ ನಿವಾಸಿಗಳಿಗೆ ನಗರಾಭಿವೃದ್ಧಿ ಇಲಾಖೆ ಗುಡ್ ನ್ಯೂಸ್ ನೀಡಿದೆ. ಗ್ರೇಟರ್ ಬೆಂಗಳೂರು ಆಡಳಿತ (GBA) ವ್ಯಾಪ್ತಿಯಲ್ಲಿ 1200 ಚದರಡಿ(30*40 ಸೈಟ್) ವ್ಯಾಪ್ತಿಯ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ ಪಡೆಯುವುದರಿಂದ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಅಕ್ಟೋಬರ್ 9ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿತ್ತು. ಈ ನಿರ್ಧಾರದ ಅನ್ವಯ ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳ 1200 ಚದರ ಅಡಿ ಜಾಗದಲ್ಲಿ ನಿರ್ಮಾಣಗೊಂಡಿರುವ ನೆಲ+2 ಅಂತಸ್ತು ಅಥವಾ ಸ್ಟಿಲ್ಟ್(ಬೇಸ್‌ಮೆಂಟ್ ಪಾರ್ಕಿಂಗ್)+3 ಅಂತಸ್ತುಗಳವರೆಗಿನ ವಸತಿ ಕಟ್ಟಡಗಳಿಗೆ ಓಸಿ ಪಡೆಯುವುದರಿಂದ ವಿನಾಯಿತಿ ನೀಡಿ ಆದೇಶಿಸಿದೆ. 30*40 ಸೈಟ್ ನಲ್ಲಿ ನೆಲ +2 ಅಂತಸ್ತಿನ ಕಟ್ಟಡಗಳಿಗೆ, ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪತ್ರ ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ.…
ನವದೆಹಲಿ : ಕೋಲಾರ ಜಿಲ್ಲೆ ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ ಅವರ ಶಾಸಕ ಸ್ಥಾನ ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಚುನಾವಣಾ ಆಯೋಗಕ್ಕೆ ಮರುಮತ ಎಣಿಕೆ ಮಾಡುವಂತೆ ಮಹತ್ವದ ಸೂಚನೆ ನೀಡಿದೆ. ಹೌದು ಹೈಕೋರ್ಟ್ ಆದೇಶ ಪ್ರಶ್ನಿಸಿ ನಂಜೇಗೌಡ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ನ್ಯಾ.ಸೂರ್ಯ ಕಾಂತ್ ಹಾಗೂ ನ್ಯಾ.ಜೊಯಮಲ್ಯ ಬಾಗ್ನಿ ಅವರ ಪೀಠ ದಿಂದ ಮಂಗಳವಾರ ವಿಚಾರಣೆ ನಡೆಸಲಾಯಿತು. ಈ ವೇಳೆ ತಡೆಯಾಜ್ಞೆ ನೀಡಿದೆ. 2023ರ ಚುನಾವಣೆ ಯಲ್ಲಿ ಮಾಲೂರು ಕ್ಷೇತ್ರದ ಮತ ಎಣಿಕೆ ಯಲ್ಲಿ ಅಕ್ರಮ ಪ್ರಕರಣದಲ್ಲಿ ಸೆ.16 ರಂದು ಹೈಕೋರ್ಟ್ ಕಾಂಗ್ರೆಸ್ ಶಾಸಕ ನಂಜೇಗೌಡ ಆಯ್ಕೆಯನ್ನು ರದ್ದುಪಡಿಸಿತ್ತು. ಸುಪ್ರೀಂ ಮೇಲ್ಮನವಿಗೆ ತಿಂಗಳ ಅವಕಾಶ ನೀಡಿತ್ತು. ಸುಪ್ರೀಂ ಕೋರ್ಟ್, ಫಲಿತಾಂಶ ವನ್ನು ಯಾವುದೇ ಕಾರಣಕ್ಕೂ ಪ್ರಕಟ ಮಾಡದೇ ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ಸಲ್ಲಿಸುವಂತೆ ತಿಳಿಸಿದೆ. ಫಲಿ ತಾಂಶ ಬರುವವರೆಗೂ ಶಾಸಕ ಸ್ಥಾನ ಅಬಾಧಿತ ಎಂದು, ವಿಚಾರಣೆ 4 ವಾರ…
ಶಿವಮೊಗ್ಗ : ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ತೆರಳಿದ್ದ ಸಿಬ್ಬಂದಿ ಮೇಲೆ ನಾಯಿ ದಾಳಿ ಮಾಡಿ ಕಚ್ಚಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಈ ವೇಳೆ ಶಿಕ್ಷಕಿ ಕಾಲಿನಲ್ಲಿ ರಕ್ತ ಬಂದಿದೆ. ಆದರೂ ಅವರು ಗಣತಿ ಕಾರ್ಯವನ್ನು ಮುಗಿಸಿ ಬಳಿಕ ಚಿಕಿತ್ಸೆ ಪಡೆದು ಕರ್ತವ್ಯ ಪ್ರಜ್ಞೆ ಮಾಡಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಅಬ್ಬಲಗೆರೆ ಸರ್ಕಾರಿ ಪ್ರೌಢಶಾಲೆಯ ಪ್ರಥಮ ದರ್ಜೆ ಸಹಾಯಕಿ ಉಮಾರಾಣಿ ಅವರ ಮೇಲೆ ನಾಯಿ ದಾಳಿ ಮಾಡಿದೆ. ಆದರೂ ಅವರು ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಬಳಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಮಂಗಳವಾರ ಉಮಾರಾಣಿ ಅವರು ಗಣತಿ ಕಾರ್ಯಕ್ಕಾಗಿ ನಿಯೋಜನೆಗೊಂಡಿದ್ದರು. ಅದರಂತೆ ಶಿವಮೊಗ್ಗದ ರವಿವರ್ಮ ಬೀದಿ, ಆಜಾದ್ ನಗರ ಭಾಗದಲ್ಲಿ ಸರ್ವೆಗೆ ತೆರಳಿದ್ದರು. ಈ ವೇಳೆ ಅವರ ಮೇಲೆ ಬೀದಿ ನಾಯಿ ಏಕಾಏಕಿ ದಾಳಿ ನಡೆಸಿದೆ. ಉಮಾದೇವಿ ಅವರ ಎಡಗಾಲಿಗೆ ನಾಯಿ ಕಚ್ಚಿದೆ. ಇದರಿಂದ ಅವರ ಕಾಲಿನಿಂದ ರಕ್ತ ಬರಲು ಆರಂಭವಾಗಿದೆ. ಆದರೂ ಅವರು ಕರ್ತವ್ಯ ಪ್ರಜ್ಞೆ…
ಬೆಂಗಳೂರು : ವಿವಿಧ ಬೇಡಿಕೆಗಳನ್ನು ಈಡೇರಿಸದ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ಸಾರಿಗೆ ನೌಕರರು ಮತ್ತೆ ಮುಷ್ಕರ ಹಮ್ಮಿಕೊಂಡಿದ್ದು, ಬೇಡಿಕೆ ಈಡೇರಿಕೆ ಕುರಿತು ಶೀಘ್ರ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಗುರುವಾರದಿಂದ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹವನ್ನು ಮುಂದೂಡಲಾಗಿದೆ. ವೇತನ ಹೆಚ್ಚಳ ಮತ್ತು ವೇತನ ಹೆಚ್ಚಳ ಹಿಂಬಾಕಿ ಪಾವತಿಗೆ ಆಗ್ರಹಿಸಿ ಕೆಎಸ್ಸಾರ್ಟಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ನೇತೃತ್ವದಲ್ಲಿ ಅಕ್ಟೊಬರ್ 15 ರಿಂದ 19ರವರೆಗೆ ಬೆಂಗಳೂರು, ಹುಬ್ಬಳ್ಳಿ ಮತ್ತು ಕಲಬುರಗಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿತ್ತು. ಈ ಕುರಿತು ಕಾರ್ಮಿಕ ಇಲಾಖೆ ಆಯುಕ್ತರು ಮಂಗಳವಾರ ಕಾರ್ಮಿಕ ಸಂಘಟನೆಗಳ ಮುಖಂಡರು ಮತ್ತು ಸಾರಿಗೆ ನಿಗಮಗಳ ಅಧಿಕಾರಿಗಳೊಂದಿಗೆ ಸಂಧಾನ ಸಭೆಯನ್ನೂ ನಡೆಸಿದ್ದರು. ಆದರೆ, ಸಭೆಯಲ್ಲಿ ಯಾವುದೇ ನಿರ್ಣಯ ತೆಗೆದುಕೊಳ್ಳದ ಕಾರಣ ಅ.27ಕ್ಕೆ ಸಭೆ ಮುಂದೂಡಲಾಗಿತ್ತು. ಅದರ ನಡುವೆಯೇ ನೌಕರರ ಬೇಡಿಕೆ ಈಡೇರಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ 15 ದಿನಗಳಲ್ಲಿ ಜಂಟಿ…














