Author: kannadanewsnow05

ಬೆಂಗಳೂರು : ಬಿಜೆಪಿ ಅವಧಿಯ 40% ಕಮಿಷನ್ ಆರೋಪದ ವಿಚಾರವಾಗಿ ನಾಗಮೋಹನ್ ದಾಸ್ ವರದಿಯನ್ನು ಇದೀಗ ಸಂಪುಟ ಸಭೆ ಅಂಗೀಕರಿಸಿದೆ.ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ವರದಿಯನ್ನು ಆಧರಿಸಿ ಇದೀಗ ಸಂಪುಟ ಸಭೆ ಎಸ್ಐಟಿ ರಚನೆಗೆ ನಿರ್ಧಾರ ಕೈಗೊಂಡಿದೆ. ಬಿಜೆಪಿ ಅವಧಿಯ 40% ಕಮಿಷನ್ ಆರೋಪದ ವಿಚಾರವಾಗಿ ಇದೀಗ ಎಸ್ಐಟಿ ರಚನೆ ಮಾಡಲು ನಿರ್ಧರಿಸಿದೆ. ಹೌದು ಕಳೆದ ಬಿಜೆಪಿ ಅವಧಿಯಲ್ಲಿ ರಾಜ್ಯ ಗುತ್ತಿಗೆದಾರರಿಂದ 40% ಕಮಿಷನ್ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಹಾಗಾಗಿ ಇಂದು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಲು ಕ್ಯಾಬಿನೆಟ್ ನಿರ್ಧರಿಸಿದೆ. ಹೌದು ನಾಗಮೋಹನ ದಾಸ್ ವರದಿಯನ್ನು ಅಂಗೀಕರಿಸಿದ ಸಂಪುಟ ಸಭೆ, ನಾಗಮೋಹನ ದಾಸ್ ಸಮಿತಿ ವರದಿ ಆಧರಿಸಿ SIT ರಚನೆಗೆ ನಿರ್ಧಾರ ಕೈಗೊಂಡಿದೆ. ಗುತ್ತಿಗೆದಾರರ ಸಂಘದ ಆರೋಪ ಬಗ್ಗೆ ತನಿಖೆಗೆ ಎಸ್ಐಟಿ ರಚನೆಗೆ ಸಂಪುಟ ಸಭೆ ನಿರ್ಧಾರ ಕೈಗೊಂಡಿದೆ. ವಿಶೇಷ ತನಿಖಾ ತಂಡ ರಚಿಸಲು…

Read More

ಬೆಂಗಳೂರು : ಜಾತಿ ಗಣತಿ ವರದಿ ಅನುಷ್ಟಾನ ವಿಚಾರಕ್ಕೆ ಸಂಬಂಧಿಸಿದಂತೆ ಏ.17 ರಂದು ಸಂಜೆ 4 ಗಂಟೆಗೆ ವಿಶೇಷ ಸಚಿವ ಸಂಪುಟ ಸಭೆ ನಿಗದಿಯಾಗಿದೆ.ಏ.17 ರಂದು ವಿಧಾನಸೌಧದಲ್ಲಿ ಸಂಜೆ 4 ಗಂಟೆಗೆ ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ. ಸಭೆಯಲ್ಲಿ ಜಾತಿ ಗಣತಿ ವರದಿ ಅನುಷ್ಟಾನ ವಿಚಾರಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಮಾನ ಕೈಗೊಳ್ಳಲಿದೆ. ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಜಾತಿ ಗಣತಿ ಅನುಷ್ಠಾನ ಕುರಿತು ದೀರ್ಘ ಚರ್ಚೆ ಆಯಿತು. ಆದರೆ ಏಪ್ರಿಲ್ 17ರಂದು ರಾಜ್ಯ ಸರ್ಕಾರ ವಿಶೇಷ ಸಂಪುಟ ಸಭೆ ನಿಗದಿ ಮಾಡಿದ್ದು, ಏಪ್ರಿಲ್ 17ರಂದು ಸಂಜೆ 4 ಗಂಟೆಗೆ ವಿಶೇಷ ಸಂಪುಟ ಸಭೆಯಲ್ಲಿ ಜಾತಿಗಣತಿ ವರದಿ ಜಾರಿ ಆಗುವ ಕುರಿತು ಮಹತ್ವದ ಸಭೆ ನಡೆಯಲಿದೆ ಎಂದು ತಿಳಿದುಬಂದಿದೆ. ಇಂದು ನಡೆದ ಸಂಪುಟ ಸಭೆಯಲ್ಲಿ ಸಂಪುಟ ಸಭೆಯಲ್ಲಿ ಸಚಿವರು ಯಾವುದೇ ಅಭಿಪ್ರಾಯವನ್ನು ಮಂಡಿಸಿಲ್ಲ.ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಸಚಿವರು ಪರ ಮತ್ತು…

Read More

ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರವಾದ ಕೊಲೆ ಆಗಿದ್ದು ಹಣಕ್ಕಾಗಿ ಹೆತ್ತ ತಾಯಿಯನ್ನೇ ಪಾಪಿ ಮಗನೊಬ್ಬ ರಾಡ್ ನಿಂದ ತಲೆಗೆ ಹೊಡೆದು ಭೀಕರವಾಗಿ ಕೊಲೆ ಮಾಡಿ, ಬಳಿಕ ಪರಾರಿ ಆಗಿರುವ ಘಟನೆ ಬೆಂಗಳೂರಿನ ಬಾಗಲಕುಂಟೆ ಮುನೇಶ್ವರ ನಗರದಲ್ಲಿ ಈ ಒಂದು ಹತ್ಯೆ ನಡೆದಿದೆ. ಕಬ್ಬಿಣದ ರಾಡ್ ನಿಂದ ಹೊಡೆದು ಪಾಪಿ ಮಗ ಹೆತ್ತ ತಾಯಿಯನ್ನೆ ಕೊಂದಿದ್ದಾನೆ. ಬಾಗಲಕುಂಟೆಯ ಮುನೇಶ್ವರ ನಗರದಲ್ಲಿ ತಡರಾತ್ರಿ ಒಂದು ಘಟನೆ ನಡೆದಿದೆ. ಶಾಂತಾಬಾಯಿ ಎನ್ನುವ ತಾಯಿಯನ್ನು ಮಹೇಂದ್ರ ಸಿಂಗ್ ಎನ್ನುವ ಮಗ ಕೊಲೆ ಮಾಡಿ ಇದೀಗ ತಲೆಮರಿಸಿಕೊಂಡಿದ್ದಾನೆ. ಹಣಗೋಸ್ಕರ ಶಾಂತಾಬಾಯಿ ಅವರಿಗೆ ಆರೋಪಿ ಮಹೇಂದ್ರ ಸಿಂಗ್ ದಿನಾಲು ಪೀಡಿಸುತ್ತಿದ್ದ ಎಂದು ತಿಳಿದುಬಂದಿದೆ.ನಿನ್ನೆ ರಾತ್ರಿ ಕೂಡ ಹಣಕ್ಕಾಗಿ ಕಿರುಕುಳ ನೀಡಿದ್ದು ಈ ವೇಳೆಯಿಂದ ತಲೆಗೆ ಬಲವಾಗಿ ಹೊಡೆದು ತಾಯನ್ನು ಕೊಂದು ಇದೀಗ ಆರೋಪಿ ಪರಾರಿಯಾಗಿದ್ದಾನೆ.

Read More

ಬೆಂಗಳೂರು : ಸಣ್ಣ ನೀರಾವರಿ ಸಚಿವ ಎನ್ಎಸ್ ಬೋಸರಾಜು ಅವರ ವಿರುದ್ಧ ಗುತ್ತಿಗೆದಾರರಿಂದ ಕಮಿಷನ್ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ವಿಚಾರವಾಗಿ ಬೆಂಗಳೂರಿನಲ್ಲಿ ಸಚಿವ ಎನ್ಎಸ್ ಬೊಸ ರಾಜು ಅವರು ಪ್ರತಿಕ್ರಿಯೆ ನೀಡಿ, ಗುತ್ತಿಗೆದಾರರಿಂದ  ಕಮಿಷನ್ ಪಡೆದಿದ್ದನ್ನು ಸಾಬೀತು ಮಾಡಿದರೆ ರಾಜೀನಾಮೆ ನೀಡುತ್ತೇನೆ ಎಂದು ತಿಳಿಸಿದರು. ರಾಜ್ಯ ಗುತ್ತಿಗೆದಾರರ ಸಂಘದಿಂದ ಕಮಿಷನ್ ಆರೋಪ ವಿಚಾರವಾಗಿ ಕಮಿಷನ್ ಪಡೆದಿದ್ದನ್ನು ಸಾಬೀತು ಮಾಡಿದರೆ ರಾಜೀನಾಮೆ ನೀಡುತ್ತೇನೆ ಎಂದು ಬೆಂಗಳೂರಿನಲ್ಲಿ ಸಣ್ಣ ನೀರಾವರಿ ಸಚಿವ ಎನ್ಎಸ್ ಬೋಸರಾಜು ಹೇಳಿಕೆ ನೀಡಿದರು ಮೊದಲು ನಮ್ಮ ಸ್ಪಷ್ಟನೆ ಕೇಳಲಿ ಆಮೇಲೆ ಆರೋಪ ಮಾಡಲಿ ಎಂದು ಅವರು ತಿಳಿಸಿದರು. ನನ್ನ ಇಲಾಖೆಯಲ್ಲಿ ಯಾವುದೇ ಭ್ರಷ್ಟಾಚಾರ ಇಲ್ಲ ಇಲಾಖೆಯಲ್ಲಿ ಅಧಿಕಾರಿಗಳ ತಪ್ಪು ಕಂಡು ಬಂದಾಗ ನಾನು ಸರಿಪಡಿಸಿದ್ದೇನೆ ಗುತ್ತಿಗೆದಾರರ ಬಗ್ಗೆ ನಾನು ಆರೋಪ ಮಾಡುವುದಿಲ್ಲ. ಆದರೆ ಗುತ್ತಿಗೆದಾರರು ಕೂಡ ಸುಮ್ಮನೆ ಆರೋಪ ಮಾಡಬಾರದು ಎಂದು ಎನ್ ಎಸ್ ಹೊಸರಾಜು ತಿಳಿಸಿದರು.

Read More

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಘೋರವಾದ ಘಟನೆ ಸಂಭವಿಸಿದ್ದು ಆಸ್ಪತ್ರೆಯ ಮೂರನೇ ಮಹಡಿಯಿಂದ ಜಿಗಿದು ಆರೋಗ್ಯ ಒಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕರ್ನಾಟಕ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ (KMCRI) ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಆತ್ಮಹತ್ಯೆಗೆ ಶರಣಾಗಿರುವ ರೋಗಿಯನ್ನು ನೇಕಾರ ನಗರದ ಆದರ್ಶ ಗೋಂದಕರ್ (18) ಎಂದು ತಿಳಿದುಬಂದಿದೆ. ಆದರ್ಶ ಅವರು ತೀವ್ರ ಜ್ವರದಿಂದ ಬಳಲುತ್ತಿದ್ದರು. ರಕ್ತದ ಪ್ಲೇಬ್ಲೆಟ್ ಸಂಖ್ಯೆ ಸಹ ಕಡಿಮೆಯಾಗಿತ್ತು. ಅವರು ಮಂಗಳವಾರ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಕೆಎಂಸಿಆರ್‌ಐ ನಿರ್ದೇಶಕ ಡಾ.ಎಸ್.ಎಫ್.ಕಮ್ಮಾರ ತಿಳಿಸಿದರು. ಶೌಚಾಲಯಕ್ಕೆ ಹೋಗಿ ಬರುವುದಾಗಿ ಹೇಳಿ ಬೆಳಿಗ್ಗೆ 4.30ಕ್ಕೆ ವಾರ್ಡ್‌ನಲ್ಲಿನ ಸಿಬ್ಬಂದಿಯ ಕಣ್ಣಪ್ಪಿಸಿ ಅವರು ಆಸ್ಪತ್ರೆಯ ಮುಖ್ಯ ಕಟ್ಟಡದ 303ನೇ ವಾರ್ಡ್‌ನ ಕಿಟಕಿಯಿಂದ ಜಿಗಿದಿದ್ದಾರೆ. ಅವರ ತಲೆ ಮತ್ತು ಯಕೃತ್ತಿಗೆ ಹಾನಿಯಾಗಿತ್ತು. ಕೂಡಲೇ ಚಿಕಿತ್ಸೆ ನೀಡಿದರೂ ಸ್ಪಂದಿಸಲಿಲ್ಲ ಎಂದರು.ಮರಣೋತ್ತರ ಪರೀಕ್ಷೆ ನಂತರ ವರದಿ ನೀಡುವಂತೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಿಗೆ ಸೂಚಿಸಲಾಗಿದೆ.

Read More

ಚಿಕ್ಕಮಗಳೂರು : ಐಪಿಎಲ್ ಅನ್ನು ಕ್ರಿಕೆಟ್ ಪ್ರೀಯರಿಗೆ ಹಬ್ಬದ ಊಟ ಅಂತಲೇ ಕರೆಯಲಾಗುತ್ತೆ. ಇದೀಗ ಐಪಿಎಲ್ ಬೆಟ್ಟಿಂಗ್ ತಂದೆ ನಡೆಸುತ್ತಿದ್ದವನನ್ನು ಪೊಲೀಸರು ಅರೆಸ್ಟ್ ಮಾಡಿದ್ದು ಆತನ ಬಳಿದ್ದ ನಗದು ಹಣ ಹಾಗೂ ಮೊಬೈಲ್ ಸೇರಿದಂತೆ ಇತರೆ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಠಾಣೆ ಪೊಲೀಸರು ಬೆಟ್ಟಿಂಗ್ ನಡೆಸುತ್ತಿದ್ದ ಹರೀಶ್ ಎನ್ನುವವನ್ನು ನನ್ನ ಬಂಧಿಸಿದ್ದಾರೆ. ಕೊಟ್ಟಿಗೆಹಾರ ಪಟ್ಟಣದ ಬಾರ್ ಮುಂದೆ ನಡೆಸುತ್ತಿದ್ದ 12 ಜನರ ತಂಡ ಮಾಡಿಕೊಂಡು ಹರೀಶ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ. ಬುಕ್ಕಿ ಹರೀಶ್ ಅನ್ನು ಬಂಧಿಸಿ 8500 ನಗದು ಹಾಗೂ ಹಲವು ಮೊಬೈಲ್ ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Read More

ಶಿವಮೊಗ್ಗ : ವೃತ್ತಿಯ ಕೊನೆಯ ದಿನದಂದೇ ಅಧಿಕಾರಿಯೊಬ್ಬರು ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಈ ವೇಳೆ ಲೋಕಾಯುಕ್ತ ಬಲೆಗೆ ರೆಡ್ ಹ್ಯಾಂಡ್ ಆಗಿ ಬಲೆಗೆ ಬಿದ್ದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.ಸ್ಮಾರ್ಟ್ ಸಿಟಿ ಚೀಫ್ ಇಂಜಿನಿಯರ್ ಆಗಿದ್ದ ಕೃಷ್ಣಪ್ಪ ಅವರು ಬಿಲ್ ಪಾಸ್ ಮಾಡಲು ರೂ.1 ಲಕ್ಷ ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದಿದ್ದಾರೆ. ಕೃಷ್ಣಪ್ಪ ಶಿವಮೊಗ್ಗ ಸ್ಮಾರ್ಟ್ ಸಿಟಿಯ ಪ್ರಭಾರ ಚೀಫ್ ಇಂಜಿನಿಯರ್ ಆಗಿದ್ದರು. ಖಾಸಗಿ ಕಂಪನಿಯವರು ಶಿವಮೊಗ್ಗ ಸ್ಮಾರ್ಟ್ ಸಿಟಿಯ ವ್ಯಾಪ್ತಿಯಲ್ಲಿ 7 ಕಡೆ ಡಿಸ್ಪ್ಲೇ ಬೋರ್ಡ್ ಅಳವಡಿಕೆ ಮಾಡಿ, ಅದರ ನಿರ್ವಹಣೆ 5 ವರ್ಷದಲ್ಲಿ ಮುಗಿದಿರುತ್ತದೆ. ಇವರಿಗೆ ಸ್ಮಾರ್ಟ್ ಸಿಟಿಯಿಂದ 11,16,100 ರೂ. ಬಿಲ್ ಪಾವತಿ ಮಾಡಬೇಕಾಗಿರುತ್ತದೆ.‌ ಇದಕ್ಕೆ ಕೃಷ್ಣಪ್ಪ ರೂ. 1 ಲಕ್ಷ ಹಣ ಲಂಚ ನೀಡುವಂತೆ ಕೇಳಿದ್ದರು. ಅದನ್ನು ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಶಿವಮೊಗ್ಗ ಸ್ಮಾರ್ಟ್ ಸಿಟಿಯಲ್ಲಿ ವಿವಿಧ ಎಲ್​ಇಡಿ ಪರದೆಯ ಅಳವಡಿಕೆ ಹಾಗೂ ನಿರ್ವಹಣೆಯ ಮಾಡುತ್ತಿದ್ದ ಖಾಸಗಿ ಕಂಪನಿಯಿಂದ ಇಂಜಿನಿಯರ್​ ಬಿಲ್ ಪಾಸ್…

Read More

ಬೆಂಗಳೂರು : ಮಸೂದೆಗಳಿಗೆ ಒಪ್ಪಿಗೆ ನೀಡಲು ಗವರ್ನರ್ ಗಳಿಗೆ ಕಾಲಮಿತಿ ನಿಗದಿ ವಿಚಾರವಾಗಿ, ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿ ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತಾಗಿ ಸಿಎಂ ಸಿದ್ದರಾಮಯ್ಯ ತಮ್ಮ ಸಾಮಾಜಿಕ ಜಾಲತಾಣ X ಖಾತೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಟ್ವೀಟ್ ನಲ್ಲಿ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದ್ದ ತಮಿಳುನಾಡಿನ ರಾಜ್ಯಪಾಲರಾದ ಆರ್.ಎನ್.ರವಿ ಅವರನ್ನು ತರಾಟೆಗೆ ತೆಗೆದುಕೊಂಡು, ಏಕಪಕ್ಷೀಯವಾಗಿ ಅವರು ಕೈಗೊಂಡಿರುವ ತೀರ್ಮಾನಗಳನ್ನು ರದ್ದುಪಡಿಸಿರುವ ಸುಪ್ರೀಂ ಕೋರ್ಟ್ ತೀರ್ಪು ದೇಶದ ಎಲ್ಲ ರಾಜ್ಯಪಾಲರು ಮತ್ತು ತೆರೆಯ ಹಿಂದೆ ಆಟವಾಡುತ್ತಿದ್ದ @narendramodi ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆಯ ಪಾಠವಾಗಿದೆ. ಸುಪ್ರೀಂ ಕೋರ್ಟಿನ ತೀರ್ಪು ರಾಜ್ಯಪಾಲ ಹುದ್ದೆಯ ಕರ್ತವ್ಯಗಳ ಇತಿ-ಮಿತಿಯನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿರುವ ಕಾರಣದಿಂದಾಗಿ ಈ ಬಗ್ಗೆ ಇದ್ದ ಗೊಂದಲಗಳು ನಿವಾರಣೆಯಾಗಿದೆ. ರಾಜ್ಯ ಸರ್ಕಾರ ಅಂಗೀಕರಿಸಿದ ಮಸೂದೆಗಳಿಗೆ ರಾಪ್ಟ್ರಪತಿಗಳ ಅಂಕಿತ ಪಡೆಯುವ ಪ್ರಕ್ರಿಯೆ ಗರಿಷ್ಠ ಮೂರು ತಿಂಗಳ ಅವಧಿಯೊಳಗೆ ನಡೆಯಬೇಕು ಎಂದು ಕಾಲಮಿತಿಯನ್ನು ಸುಪ್ರೀಂ…

Read More

ಚಿಕ್ಕಮಗಳೂರು : ರಾಜ್ಯದಲ್ಲಿ ಈಗಾಗಲೇ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಆಗುತ್ತಿದ್ದು, ಕೆಲವು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ಘೋಷಿಸಿದೆ. ಇದೀಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆರಾಯನ ಆರ್ಭಟದಿಂದ ಅವಾಂತರ ಸೃಷ್ಟಿಯಾಗಿದ್ದು, . ಭಾರಿ ಮಳೆಯಿಂದ KSRTC ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿರುವ ಮನೆಯ ಮೇಲೆ ಬಿದ್ದು 30 ಅಡಿ ಪ್ರಪಾತಕ್ಕೆ ಉರುಳಿದೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಹೌದು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ‌ ಸಮೀಪದ ಜಲದುರ್ಗಾ ಬಳಿ ಘಟನೆ ನಡೆದಿದೆ. ಕೆಎಸ್​ಆರ್​ಟಿಸಿ ಬಸ್​ ಬೆಂಗಳೂರಿನಿಂದ ಶೃಂಗೇರಿಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ಬಸ್ಸಿನಲ್ಲಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯವಾಗಿದೆ. ತಕ್ಷಣ ಗಾಯಾಳುಗಳನ್ನು ಕೊಪ್ಪ ಮತ್ತು ಜಯಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಎಂಬಿಬಿಎಸ್ ವಿದ್ಯಾರ್ಥಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವರದಿಯಾಗಿದೆ. ಮೃತ ವಿದ್ಯಾರ್ಥಿ ಮಾಜಿ ಶಾಸಕ ಕೆ.ಪಿ ಬಚ್ಚೇಗೌಡ ಸಂಬಂಧಿಯಾಗಿರುವ ಹೇಮಂತ್ (18) ಆತ್ಮಹತ್ಯೆಗೆ ಶರಣಾಗಿದ್ದಾನೆ. ಚಿಕ್ಕಬಳ್ಳಾಪುರ ತಾಲೂಕಿನ ಪಟ್ರೆನಹಳ್ಳಿ ತೋಟದ ಮನೆಯಲ್ಲಿ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿದ್ಯಾರ್ಥಿಯ ಆತ್ಮಹತ್ಯೆಗೆ ಇದುವರೆಗೂ ನಿಖರವಾದ ಕಾರಣ ತಿಳಿದು ಬಂದಿಲ್ಲ ಘಟನೆ ಕುರಿತಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Read More