Subscribe to Updates
Get the latest creative news from FooBar about art, design and business.
Author: kannadanewsnow05
ಶಿವಮೊಗ್ಗ : ಬೇಟೆಗೆ ಎಂದು ತೆರಳಿದ್ದಾಗ ಕೈಯಲ್ಲಿದ್ದ ಗುಂಡು ಆಕಸ್ಮಿಕವಾಗಿ ಸಿಡಿದಿದ್ದರಿಂದ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಟ್ಟೇಹಕ್ಕಲು ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ಬಸವಾನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳವಾರ ಮಜರೆ ಗ್ರಾಮದ ಗೌತಮ್ ಕೆ.ವಿ. (27) ಎಂದು ತಿಳಿದುಬಂದಿದೆ. ತಡರಾತ್ರಿ ನಾಲ್ವರು ಸ್ನೇಹಿತರೊಂದಿಗೆ ಗೌತಮ್ ಕಾರಿನಲ್ಲಿ ತೆರಳಿದ್ದ. ವಾಹನವನ್ನು ದಾರಿ ಮಧ್ಯೆ ನಿಲ್ಲಿಸಿ ಉಳಿದ ಸ್ನೇಹಿತರನ್ನು ಅಲ್ಲಿಯೇ ಬಿಟ್ಟು ಬಂದೂಕು ಹಿಡಿದುಕೊಂಡು ಸಮೀಪದ ಗುಡ್ಡ ಏರಿದ್ದಾನೆ. ಬಂದೂಕಿನ ಟ್ರಿಗರ್ ಎಳೆದು ಗುಡ್ಡ ಹತ್ತುವಾಗ ಕಾಲು ಜಾರಿ ಕೆಳಗೆ ಬಿದ್ದ ವೇಳೆ ಬಂದೂಕಿನಿಂದ ಗುಂಡು ಸಿಡಿದು ಕುತ್ತಿಗೆ ಮೂಲಕ ಮುಖವನ್ನು ಸೀಳಿಕೊಂಡು ಹೋಗಿ ಮೃತಪಟ್ಟಿದ್ದಾನೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು : ಗೂಗಲ್ ಮ್ಯಾಪ್ ನಂಬಿ ಅದೆಷ್ಟು ಅನಾಹುತಗಳು ನಡೆದಿವೆ. ಅದೆಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದೀಗ ಚಿಕ್ಕಮಂಗಳೂರಿನಲ್ಲಿ ಘಟನೆ ನಡೆದಿದ್ದು ಗೂಗಲ್ ಮ್ಯಾಪ್ ನಂಬಿ ಟಿಟಿ ವಾಹನ ಒಂದು ಸೀದಾ ರೈತನ ಗದ್ದೆಗೆ ನುಗ್ಗಿರುವ ಘಟನೆ ವರದಿಯಾಗಿದೆ. ಹೌದು ಗೂಗಲ್ ಮ್ಯಾಪ್ ನಂಬಿ ಬಂದಿದ್ದ ಪ್ರವಾಸಿಗರು, ವಾಹನವನ್ನು ಗದ್ದೆಗೆ ಇಳಿಸಿಕೊಂಡು ಪರದಾಡಿದ ಘಟನೆ ಆಲ್ದೂರು ಬಳಿ ನಡೆದಿದೆ. ಬೆಂಗಳೂರು ಮೂಲದ ಪ್ರವಾಸಿಗರು ಬಾಳೆಹೊನ್ನೂರು ಕಡೆಯಿಂದ ಮೂಡಿಗೆರೆಗೆ ತೆರಳುತ್ತಿದ್ದರು. ಈ ವೇಳೆ, ಗೂಗಲ್ ಮ್ಯಾಪ್ ಕೈ ಕೊಟ್ಟಿದ್ದು, ವಾಹನ ಗದ್ದೆ ಬಳಿ ಹೋಗಿ ಸಿಕ್ಕಿ ಹಾಕಿಕೊಂಡಿದೆ. ಇದರಿಂದ ವಾಹನ ವಾಪಸ್ ತೆಗೆಯಲಾಗದೆ ಪ್ರವಾಸಿಗರು ಕೆಲವು ಕಾಲ ಅಲ್ಲೇ ಪರದಾಡಿದ್ದಾರೆ. ತಕ್ಷಣವೇ ಸ್ಥಳೀಯರು ಪ್ರವಾಸಿಗರ ನೆರವಿಗೆ ಧಾವಿಸಿದ್ದಾರೆ ಕೂಡಲೇ ಟ್ರ್ಯಾಕ್ಟರ್ ಒಂದನ್ನು ತಂದು ಅದಕ್ಕೆ ಹಗ್ಗ ಕಟ್ಟಿ ಗದ್ದೆಯಿಂದ ಟಿಟಿಯನ್ನು ರಸ್ತೆಗೆ ಎಳೆದು ತಂದಿದ್ದಾರೆ ಬಳಿಕ ಸ್ಥಳೀಯ ಮಾಹಿತಿ ಪಡೆದುಕೊಂಡು ಪ್ರವಾಸಿಗರು ಅಲ್ಲಿಂದ ತೆರಳಿದ್ದಾರೆ.
ನವದೆಹಲಿ : ಭಾರತದಲ್ಲಿ ಇದ್ಕೊಂಡು ಪಾಕಿಸ್ತಾನದ ಬೇಹುಗಾರಿಕೆಯಂತ ನೀಚ ಕೆಲಸ ಮಾಡಿದ ಯೂಟ್ಯೂಬರ್ ಜ್ಯೋತಿ ಕುರಿತು ಇದೀಗ ಮತ್ತಷ್ಟು ಸ್ಪೋಟಕ ಅಂಶ ಬಹಿರಂಗವಾಗಿದ್ದು, ತನಿಖೆಯ ವೇಳೆ ಜ್ಯೋತಿ ಪಾಕಿಸ್ತಾನದ ಗುಪ್ತಚರ ಅಧಿಕಾರಿಗೆ ನನ್ನ ಪಾಕಿಸ್ತಾನದಲ್ಲೇ ಮದ್ವೆ ಆಗು ಎಂದು ಹೇಳಿರುವ ಸಂಭಾಷಣೆ ತನಿಖೆ ವೇಳೆ ಬೆಳಕಿಗೆ ಬಂದಿದೆ. ಹೌದು ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ಮತ್ತು ಪಾಕಿಸ್ತಾನಿ ಗುಪ್ತಚರ ಅಧಿಕಾರಿಯ ನಡುವಿನ ಸಂಭಾಷಣೆ ತನಿಖೆಯಿಂದ ಬೆಳಕಿಗೆ ಬಂದಿದೆ. ಪಾಕಿಸ್ತಾನದಲ್ಲಿ ನನ್ನನ್ನು ಮದುವೆಯಾಗಿ ಎಂದು ಪಾಕ್ ಅಧಿಕಾರಿಯನ್ನು ಜ್ಯೋತಿ ಕೇಳಿರುವುದು ಸಂಭಾಷಣೆಯಲ್ಲಿದೆ. ಚಾಟ್‌ವೊಂದರಲ್ಲಿ ಜ್ಯೋತಿ, ಹಸನ್‌ಗೆ ನನ್ನನ್ನು ಪಾಕಿಸ್ತಾನದಲ್ಲಿ ಮದುವೆಯಾಗು ಎಂದು ತಮ್ಮ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ತನಿಖೆಯ ಸಮಯದಲ್ಲಿ, ಪೊಲೀಸರು ಮಲ್ಹೋತ್ರಾ ಅವರಿಗೆ ಸೇರಿದ ನಾಲ್ಕು ಬ್ಯಾಂಕ್ ಖಾತೆಗಳ ಬಗ್ಗೆ ಮಾಹಿತಿಯನ್ನು ಕಂಡುಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಒಂದು ಖಾತೆಯಲ್ಲಿ ದುಬೈನಿಂದ ಮಾಡಿದ ವಹಿವಾಟುಗಳು ಸಹ ಕಂಡುಬಂದಿವೆ. ಆಕೆಗೆ ಎಲ್ಲಿಂದ ಹಣ ಬರುತ್ತಿದೆ ಎಂಬುದನ್ನು ಕಂಡುಹಿಡಿಯಲು ಏಜೆನ್ಸಿಗಳು ಈಗ ಆಕೆಯ ಎಲ್ಲಾ ಬ್ಯಾಂಕ್…
ಬೆಂಗಳೂರು : ಬೆಂಗಳೂರಲ್ಲಿ ಬಿಬಿಎಂಪಿಯ ಇಬ್ಬರು ಇಂಜಿನಿಯರ್ ಗಳು ಲೋಕಾಯುಕ್ತ ಬಲೆಗೆ ಬಿದ್ದಿದು, 5 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಬಿಬಿಎಂಪಿ ಇಂಜಿನಿಯರ್ ಗಳು ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಬಿಬಿಎಂಪಿ ಮಹದೇವ ಮತ್ತು ಸುರೇಂದ್ರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬಿಬಿಎಂಪಿ ಹೆಬ್ಬಾಳ ಉಪ ವಿಭಾಗದ ಎಇಇ ಮಹದೇವ ಆರ್.ಎಂವಿ ಉಪ ವಿಭಾಗದ ಸುರೇಂದ್ರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ಎನ್ ಓ ಸಿ ನೀಡಲು 10 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದುಬಂದಿದೆ. ಸಂಜಯ್ ಎನ್ನುವರಿಂದ 5 ಲಕ್ಷ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಬಿಬಿಎಂಪಿ ಮಹಾದೇವ ಮತ್ತು ಸುರೇಂದ್ರರನ್ನು ಬಂಧಿಸಿ 5 ಲಕ್ಷ ಹಣ ಜಪ್ತಿ ಮಾಡಿಕೊಳ್ಳಲಾಗಿದ್ದು, ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.
ಬೆಂಗಳೂರು : ಇಂದು ಗೃಹ ಸಚಿವ ಜಿ ಪರಮೇಶ್ವರ್ ಅವರ ಒಡೆತನದ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿ ನಡೆಸಿದ್ದಾರೆ. ಇನ್ನು ಈ ವಿಚಾರವಾಗಿ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿ ಪರಮೇಶ್ವರ್ ಒಬ್ಬ ದಲಿತ ನಾಯಕ ಹೀಗಾಗಿ ಅವರ ಮೇಲೆ ಸೇಡಿನ ರಾಜಕಾರಣ ನಡೆಯುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಯ ಮೇಲೆ ಇಡಿ ದಾಳಿ ನಡೆಸಿದೆ. ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಆರಂಭಗೊಂಡು ಬಹಳ ವರ್ಷಗಳಾಗಿದೆ. ಪರಮೇಶ್ವರ್ ಒಬ್ಬ ದಲಿತ ನಾಯಕರು. ಹೀಗಾಗಿ ಸೇಡಿನ ರಾಜಕಾರಣ ನಡೆಯುತ್ತಿದೆ. ಕಾಂಗ್ರೆಸ್ಸಿನ ದಲಿತರು, ಬಡವರ ಹಿಂದುಳಿದವರ ಮೇಲೆ ದಾಳಿ ನಡೆಸಲಾಗಿದೆ. ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಮೇಲೆ ಈ ಹಿಂದೆ ಐಟಿ ದಾಳಿ ನಡೆಸಿತ್ತು. ಈಗ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಲಿತ ನಾಯಕನನ್ನು ಟಾರ್ಗೆಟ್ ಮಾಡಲಾಗಿದೆ. ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿಯ…
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ವರ್ಣಾರ್ಭಟದಿಂದ ಸಂಪೂರ್ಣ ಜನಜೀವನವೇ ಅಸ್ತವ್ಯಸ್ತವಾಗಿದೆ. ಹಾಗಾಗಿ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸಚಿವರು ಶಾಸಕರು ಸೇರಿದಂತೆ ಅಧಿಕಾರಿಗಳು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಳೆಹಾನಿ ಪರಿಶೀಲನೆ ನಡೆಸಿದ ಬಳಿಕ ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಬೆಂಗಳೂರಿನಲ್ಲಿ ಕಳೆದ 10 ವರ್ಷಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಹವಾಮಾನ ಬದಲಾವಣೆಯಿಂದ ಅತಿ ಹೆಚ್ಚು ಮಳೆಯಾಗಿದೆ. ಬಿಟಿಎಂ ಲೇಔಟ್ ನಲ್ಲಿ ವಿದ್ಯುತ್ ಹರಿದು ಇಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿಸಿದರು. ಇನ್ಮುಂದೆ ಬೇಸ್ಮೆಂಟ್ ನಿರ್ಮಿಸುವುದಕ್ಕೆ ಅವಕಾಶ ನೀಡಬಾರದು. ತಗ್ಗು ಪ್ರದೇಶದಲ್ಲಿ ಬೇಸ್ಮೆಂಟ್ ನಿರ್ಮಿಸಲು ಅವಕಾಶ ನೀಡಬಾರದು. 166 ಸೂಕ್ಷ್ಮ ಅತಿ ಸೂಕ್ಷ್ಮ ಪ್ರದೇಶಗಳು ಅಂತ ಗುರುತಿಸಲಾಗಿದೆ. ಎಷ್ಟೇ ಪ್ರಭಾವಿಗಳಿದ್ದರೂ ರಾಜಕಾಲುವೇ ಒತ್ತುವರಿತರೆಗೆ ಸೂಚಿಸಿದ್ದೇನೆ. ಕೋರ್ಟ್ ನಿಂದ ತಡೆಯಾಜ್ಞೆ ತಂದ ಕಡೆ ಮಾತ್ರ ವಿಳಂಬ ಮಾಡಲಾಗಿದೆ ಎಂದರು. ಪಣತ್ತೂರು ಗಾರ್ಡನ್ನಲ್ಲೂ ಮಳೆ ನೀರು ಸರಿಯಾಗಿ ಹರಿಯುತ್ತಿಲ್ಲ. ಪಣತ್ತೂರು ಗಾರ್ಡನ್ನಲ್ಲಿ ರಸ್ತೆ…
ಬೆಂಗಳೂರು : ಬೆಂಗಳೂರಿನಲ್ಲಿ ಇದೀಗ ಭಾರಿ ಮಳೆಯಾಗುತ್ತಿದ್ದು ಕಳೆದ ಕೆಲವು ದಿನಗಳಿಂದ ಮಹಾ ಮಳೆಗೆ ಹಲವರು ಬಲಿಯಾಗಿದ್ದಾರೆ. ಗೋಡೆ ಕುಸಿದು ವೈಟ್ ಫೀಲ್ಡ್ ಬಳಿ ಮನೆ ಗೋಡೆ ಕುಸಿದು ಮಹಿಳೆ ಒಬ್ಬರು ಸಾವನ್ನಪ್ಪಿದ್ದರೆ, ಇನ್ನೂ ಅಪಾರ್ಟ್ಮೆಂಟ್ ನಲ್ಲಿ ಬೇಸ್ಮೆಂಟ್ ನಲ್ಲಿರುವ ನೀರು ಹೊರ ಹಾಕುವಾಗ ವಿದ್ಯುತ್ ಶಾಕ್ ನಿಂದ ಇಬ್ಬರು ಸಾವನಪ್ಪಿದ್ದರು. ಇದೀಗ ಬೈಕ್ ನಲ್ಲಿ ತೆರಳುವಾಗ ಮರ ಬಿದ್ದು ಸವಾರ ಒಬ್ಬರು ಸಾವನಪ್ಪಿದ್ದಾರೆ. ಹೌದು ಬೆಂಗಳೂರಿನಲ್ಲಿ ಮಹಾಮಳೆಗೆ ಇದೀಗ ಮತ್ತೊಂದು ಬಲಿಯಾಗಿದೆ. ಬೈಕ್ ನಲ್ಲಿ ತೆರಳುತ್ತಿದ್ದಾಗ ಮರ ಬಿದ್ದು ಸವಾರ ಸ್ಥಳದಲ್ಲೇ ಸಾವನಪ್ಪಿದ್ದಾರೆ. ಕೋರಮಂಗಲದಲ್ಲಿ ಮರ ಉರುಳಿ ಬಿದ್ದು 50 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಆಡುಗೋಡಿ ನಿವಾಸಿ ಮೂಡಲಗಿರಿ (50) ಮೃತ ದುರ್ದೈವಿ ಎಂದು ತಿಳಿದುಬಂದಿದೆ.
ಬೆಂಗಳೂರು : ನಮ್ಮ ಮೆಟ್ರೋದಲ್ಲಿ ಯಾವಾಗಲೂ ಒಂದಿಲ್ಲೊಂದು ಕಿರಿಕ್ ಆಗುತ್ತಲೇ ಇರುತ್ತದೆ. ಇದೀಗ ವಿಕೃತ ಮನಸ್ಸಿನ ವ್ಯಕ್ತಿಯೊಬ್ಬ ಮಹಿಳೆಯರ ಆಕ್ಷೇಪಾರ್ಹ ವಿಡಿಯೋ ತೆಗೆದು ನೀಚ ಕೃತ್ಯ ಎಸಗಿದ್ದಾನೆ. ಅಪರಿಚಿತ ವ್ಯಕ್ತಿಯ ಹುಚ್ಚಾಟಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ದೂರು ದಾಖಲಾಗಿದೆ. ಹೌದು ಬೆಂಗಳೂರಿನ ಮೆಟ್ರೋ ರೈಲಲ್ಲಿ ಆಗಾಗ ಕಿರಿಕ್ ಘಟನೆಗಳು ನಡೆಯುತ್ತಿರುತ್ತವೆ. ಆದರೆ ಇದೀಗ ಕಾಮುಕನೊಬ್ಬ ಮಹಿಳೆಯರ ಅರಿವಿಗೆ ಬಾರದಂತೆ ನಿಮ್ಮ ಆಕ್ಷೇಪಾರ್ಹ ಪೋಟೋ, ವಿಡಿಯೋ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ವಿಕೃತಿ ಮೆರೆಯಲು ಮುಂದಾಗಿದ್ದಾರೆ. ಹೀಗೆ ಮೆಟ್ರೋ ನಿಲ್ದಾಣ ಮತ್ತು ರೈಲಿನೊಳಗೆ ಯುವತಿಯರು, ಮಹಿಳೆಯರ ಪೋಟೋ ತೆಗೆದ ಅಪರಿಚಿತ ವ್ಯಕ್ತಿಯೊಬ್ಬ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಮೆಟ್ರೋದಲ್ಲಿ ಪ್ರಯಾಣಿಸುವ ಮಹಿಳೆಯರ ಅರಿವಿಗೆ ಬಾರದಂತೆ ಅವರ ಆಕ್ಷೇಪಾರ್ಹ ವಿಡಿಯೋಗಳನ್ನ ಚಿತ್ರೀಕರಿಸಿದ ಅಪರಿಚಿತ ವ್ಯಕ್ತಿ, ನಂತರ ಅವುಗಳನ್ನ ತನ್ನ ಇನ್ಸ್ಟಾ ಖಾತೆಯಲ್ಲಿ ಅಪ್ಲೋಡ್ ಮಾಡಿ ವಿಕೃತಿ ಮೆರೆದಿದ್ದಾನೆ. ಮೆಟ್ರೋ ಚಿಕ್ಸ್ ಪೇಜ್ ನಲ್ಲಿ ಈ ಆಕ್ಷೇಪಾರ್ಹ ವಿಡಿಯೋಗಳು ಅಪ್ಲೋಡ್…
ತುಮಕೂರು : ತುಮಕೂರಲ್ಲಿ ಘೋರವಾದ ದುರಂತ ಸಂಭವಿಸಿದ್ದು, ಲೋರಸ್ ಬಯೋ ಕಂಪನಿಯಲ್ಲಿ ಕೆಮಿಕಲ್ ಸಂಪ್ ಕ್ಲೀನ್ ಮಾಡುವಾಗ ಉಸಿರುಗಟ್ಟಿ ಇಬ್ಬರು ಸಾವನಪ್ಪಿದ್ದಾರೆ. ತುಮಕೂರಿನ ಲೊರಸ್ ಬಯೋ ಕಂಪನಿಯಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ. ತುಮಕೂರಿನ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ಲೊರಸ್ ಬಯೋ ಕಂಪನಿಯಲ್ಲಿ ಸಂಪ್ ನಲ್ಲಿ ಉಸಿರುಗಟ್ಟಿ ವೆಂಕಟೇಶ್ (32) ಹಾಗು ಪ್ರತಾಪ್ (23) ಸಾವನಪ್ಪಿದ್ದಾರೆ. ವೆಂಕಟೇಶ್ ಫ್ಯಾಕ್ಟರಿಯನ್ನು ನಾಲ್ವರು ಸಂಪ್ ಸ್ವಚ್ಛಗೊಳಿಸುತ್ತಿದ್ದರು. ಕಾರ್ಖಾನೆಯ ಸಂಪ್ ಕ್ಲೀನಿಂಗ್ ಗೆ ಮಂಜುನಾಥ್ ಮೊದಲು ಇಳಿದಿದ್ದಾರೆ.. ಈ ವೇಳೆ ಉಸಿರುಗಟ್ಟಿ ಮಂಜುನಾಥ್ ಸಂಪನೊಳಗೆ ಸಿಲುಕಿದ್ದಾರೆ. ಇದನ್ನು ಕಂಡ ಫ್ಯಾಕ್ಟರಿ ಸೆಕ್ಯೂರಿಟಿ ಗಾರ್ಡ್ ಪ್ರತಾಪ್ ಹಾಗೂ ಕಾರ್ಮಿಕರಾದ ವೆಂಕಟೇಶ್ ಯುವರಾಜ್ ಸಹ ಒಳಗೆ ಇಳಿದಿದ್ದರು. ಸಂಪ್ ಒಳಗೆ ಇಳಿದಿದ್ದ ನಾಲ್ವರು ಸಹ ಪ್ರಜ್ಞೆ ತಪ್ಪಿದ್ದಾರೆ. ತಕ್ಷಣ ಫ್ಯಾಕ್ಟರಿಯಲ್ಲಿದ್ದ ಇತರರಿಂದ ನಾಲ್ವರ ರಕ್ಷಣೆಗೆ ಯತ್ನಿಸಲಾಗಿದೆ. ಬಳಿಕ ನಾಲ್ವರನ್ನು ರಕ್ಷಣೆ ಮಾಡಿ ಸಿದ್ದಗಂಗಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ವೇಳೆ ಮಾರ್ಗ ಮಧ್ಯೆ ಸೆಕ್ಯೂರಿಟಿ ಗಾರ್ಡ್ ಪ್ರತಾಪ್ ಮತ್ತು…
ಉತ್ತರಕನ್ನಡ : ರಾಜಧಾನಿ ಬೆಂಗಳೂರು ಮಹಾನಗರ ಸೇರಿದಂತೆ ಈಗಾಗಲೇ ಹಲವು ಜಿಲ್ಲೆಗಳಲ್ಲಿ ವರುಣ ಅಬ್ಬರಿಸುತ್ತಿದ್ದಾನೆ. ಇದೀಗ ಉತ್ತರಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಮಳೆಯ ಅಬ್ಬರದಿಂದ ಭಾರಿ ಅವಾಂತರ ಸೃಷ್ಟಿಯಾಗಿದೆ. ಕುಮಟಾ ತಾಲೂಕಿನ ಖೈರಾ ಕ್ರಾಸ್ ಬಳಿ ಭಾರಿ ಮಳೆಯಿಂದಾಗಿ ಗುಡ್ಡ ಕುಸಿತವಾಗಿದೆ. ಹೌದು ಅಂಕೋಲ ಮತ್ತು ಶಿರಸಿ ಸಂಪರ್ಕಿಸುವ ಮಾರ್ಗದಲ್ಲಿ ಗುಡ್ಡ ಕುಸಿದಿದ್ದು, ಆತಂಕದಲ್ಲಿ ಜನರು ಇದ್ದಾರೆ. ಗುಡ್ಡದ ಆಸು ಪಾಸಿನ ನೀವಾಸಿಗಳು ಅಲ್ಲಿಂದ ಸ್ಥಳಾಂತರವಾಗಲು ಈಗಾಗಲೇ ಸೂಚನೆ ನೀಡಲಾಗಿದೆ. ಹೆದ್ದಾರಿ ಕುಸಿದಿದ್ದರೂ ಕೂಡ ವಾಹನಗಳು ನಿರ್ಲಕ್ಷ ವಹಿಸಿ ಅದೇ ಮಾರ್ಗದಲ್ಲಿಯೇ ಸಂಚರಿಸುತ್ತಿವೆ. ಸ್ಥಳೀಯರು ಮುಂದಾಗುವ ಅನಾಹುತ ತಪ್ಪಿಸಲು ಕಲ್ಲುಗಳನ್ನು ಇಟ್ಟಿದ್ದಾರೆ. ಜೀವದ ಹಂಗು ತೊರೆದು ಸ್ಥಳೀಯರು ರಸ್ತೆಯನ್ನು ಬ್ಲಾಕ್ ಮಾಡಿದ್ದಾರೆ. ತಳಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮಿರ್ಜಾನ್ ಮತ್ತು ಕಥಗಾಲ್ ರಸ್ತೆಯನ್ನು ಅಧಿಕಾರಿಗಳು ತಕ್ಷಣವೇ ಬಂದ್ ಮಾಡಿದ್ದಾರೆ. ಸುಮಾರು 18 ಕಿಲೋಮೀಟರ್ ಸುತ್ತಿಕೊಂಡು ಶಿರಸಿಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಕುಮಟಾ ಮೂಲಕ ಶಿರಸಿಗೆ ಹೋಗುವ ಪರಿಸ್ಥಿತಿ…













