Author: ಸುರೇಶ್‌

"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು

ಬೆಂಗಳೂರು : ಹಣಕ್ಕಾಗಿ, ಆಸ್ತಿಗಾಗಿ ಮಕ್ಕಳು ತಂದೆ ತಾಯಿಯರ ಮೇಲೆ ಹಲ್ಲೆ ಮಾಡುವುದು ಅಥವಾ ತಂದೆ-ತಾಯಿರನ್ನು ಕೊಲ್ಲುವುದನ್ನು ನೋಡಿದ್ದೇವೆ ಕೇಳಿದ್ದೇವೆ. ಆದರೆ ಇಲ್ಲಿ ಒಬ್ಬ ಪಾಪಿ ತಂದೆ ತನ್ನ ಮಗನಿಗೆ ಚಿಕಿತ್ಸೆ ಕೊಡಿಸಲು ಹಣ ಇಲ್ಲ ಎಂದು ವಿಷ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಹೌದು ಬೆಂಗಳೂರಿನ ಬಾಗಲೂರುನಲ್ಲಿ ಮಗನ ಚಿಕಿತ್ಸೆಗೆ ಹಣವಿಲ್ಲದೇ ಬುದ್ದಿಮಾಂದ್ಯ ಮಗುವಿಗೆ ತನ್ನ ಕೈಯ್ಯಾರೆ ವಿಷ ಹಾಕಿದ್ದಾನೆ. ಮುನಿಕೃಷ್ಣ ಎಂಬಾತ ಸ್ವಂತ ಮಗನಿಗೆ ಕೀಟನಾಶಕ ಕುಡಿಸಿದ್ದಾನೆ.ಸತ್ಯಾ-ಮುನಿಕೃಷ್ಣ ದಂಪತಿಯ 2.5 ವರ್ಷದ ಮಗ ಜೋಯಲ್ ಗೆ ವಿಷ ಕುಡಿಸಿದ್ದಾನೆ. ಡಿಸೆಂಬರ್ 22 ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Read More

ಬೆಂಗಳೂರು : ಬೆಂಗಳೂರಿನ ಕೋಗಿಲು ಲೇಔಟ್ ನಲ್ಲಿ ಅಕ್ರಮವಾಗಿ ನೆಲೆಸಿದವರಿಗೆ ಮನೆ ಹಂಚಿಕೆ ವಿಚಾರವಾಗಿ ಮನೆ ಹಂಚಿಕೆ ವಿರೋಧಿಸಿ ನಾಳೆ ವಿಪಕ್ಷ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ. ಈ ವೇಳೆ ನಾಳೆ ಪ್ರತಿಭಟನೆ ನಡೆಸಿದಂತೆ ಪೊಲೀಸರು ಬಿಜೆಪಿ ನಾಯಕರಿಗೆ ನೋಟಿಸ್ ನೀಡಿದ್ದಾರೆ. ಬೆಂಗಳೂರಿನ ಬಾಗಲೂರು ಠಾಣೆ ಪೋಲಿಸರು ನೋಟಿಸ್ ಜಾರಿ ಮಾಡಿದ್ದಾರೆ. ಹೌದು ಕೋಗಿಲು ಲೇಔಟ್ ನಲ್ಲಿ ಅನಧಿಕೃತ ಮನೆಗಳನ್ನು ತೆರವುಗೊಳಿಸಿದ ಬಳಿಕ ಅಲ್ಲಿನ ನಿವಾಸಿಗಳಿಗೆ ಮನೆ ಹಂಚಿಕೆ ವಿಚಾರವನ್ನು ವಿರೋಧಿಸಿ ನಾಳೆ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿತ್ತು ಇದೇ ವಿಚಾರವಾಗಿ ಬಾಗಲೂರು ಠಾಣೆ ಪೋಲಿಸರು ಬಿಜೆಪಿಯ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್ ಹರೀಶ್ ಗೆ ನೋಟಿಸ್ ನೀಡಿದ್ದಾರೆ. ಜಿಬಿಎ ವ್ಯಾಪ್ತಿಯಿಂದ ಹೊರಗೆ ಪ್ರತಿಭಟನೆಗೆ ಬಿಜೆಪಿ ನಿರ್ಧರಿಸಿದ್ದು ಬಾಗಲೂರು ಮುಖ್ಯ ರಸ್ತೆಯ ಕಂಟ್ರಿ ಕ್ಲಬ್ ಬಳಿ ಪ್ರತಿಭಟನೆಗೆ ನಿರ್ಧರಿಸಿದ್ದರು. ನಿನ್ನೆ ರಾತ್ರಿ ಹರೀಶ್ ಮನೆಗೆ ಬಂದು ಪೊಲೀಸರು ನೋಟಿಸ್ ನೀಡಿದ್ದಾರೆ ಎಂದು ತಿಳಿದು ಬಂದಿದೆ ಬೆಂಗಳೂರಿನ ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆ ಎಲ್ಲೂ ಪ್ರತಿಭಟನೆಗೆ…

Read More

ಮೈಸೂರು : ಮೈಸೂರು : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದ್ದು ಪೂಜೆ ಮಾಡುವ ವೇಳೆ ಕುಸಿದು ಬಿದ್ದು ಅರ್ಚಕರು ಒಬ್ಬರು ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ತಡರಾತ್ರಿ ನಡೆದಿದೆ. ಪೂಜೆ ವೇಳೆ ಶ್ರೀಕಂಠೇಶ್ವರ ದೇವಾಲಯದ ಸಹಾಯಕ ಶಂಕರ ಉಪಾಧ್ಯಾಯ (55) ಮೃತರು ಎಂದು ತಿಳಿದು ಬಂದಿದೆ. ಅರ್ಚಕ ಕುಸಿದು ಬೀಳುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಅಂಧಕಾಸುರ ವಧೆ ಪೂಜೆ ಸಮಯದಲ್ಲಿ ಕುಸಿದು ಬಿದ್ದು ಅರ್ಚಕ ಸಾವನಪ್ಪಿದ್ದಾರೆ. ಪ್ರತಿ ವರ್ಷ ನಂಜನಗೂಡಿನಲ್ಲಿ ಅಂಧಕಾಸುರ ವಧೆ ನಡೆಯುತ್ತದೆ. ಈ ವೇಳೆ ಅರ್ಚಕ ಉಪಾಧ್ಯಾಯ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಇದೀಗ ವರದಿಯಾಗಿದೆ. ನಿನ್ನೆ ರಾತ್ರಿ ದೇವಾಲಯದ ಮುಂದೆ ಪ್ರತಿ ವರ್ಷ ನಡೆಯುವ ಸಂಪ್ರದಾಯದಂತೆ ಅಂಧಕಾಸುರನ ವಧೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ನಿಗದಿತ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮ ಆರಂಭವಾಗಿತ್ತು. ನೆಲದ ಮೇಲೆ ರಂಗೋಲಿಯಲ್ಲಿ ಬಿಡಿಸಲಾಗಿದ್ದ ಅಂಧಕಾಸುರನ ಭಾವಚಿತ್ರದ ಮೇಲೆ ಪಲ್ಲಕ್ಕಿಯಲ್ಲಿ ವಿರಾಜಮಾನನಾದ ಶ್ರೀಕಂಠೇಶ್ವರನ ಉತ್ಸವಮೂರ್ತಿಯನ್ನು ಹೊತ್ತ ಅರ್ಚಕರ ತಂಡ ಎಂದಿನ ಆಚರಣೆಯಂತೆ…

Read More

ಮೈಸೂರು : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿಯಾಗಿದ್ದು ಪೂಜೆ ಮಾಡುವ ವೇಳೆ ಕುಸಿದು ಬಿದ್ದು ಅರ್ಚಕರು ಒಬ್ಬರು ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ ತಡರಾತ್ರಿ ನಡೆದಿದೆ. ಪೂಜೆ ವೇಳೆ ಅರ್ಚಕ ಉಪಾಧ್ಯಾಯ ಕುಸಿದು ಬಿದ್ದು ಸಾವನಪ್ಪಿದ್ದಾರೆ. ಅರ್ಚಕ ಕುಸಿದು ಬೀಳುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆಯಾಗಿದೆ. ಅಂಧಕಾಸುರ ವಧೆ ಪೂಜೆ ಸಮಯದಲ್ಲಿ ಕುಸಿದು ಬಿದ್ದು ಅರ್ಚಕ ಸಾವನಪ್ಪಿದ್ದಾರೆ. ಪ್ರತಿ ವರ್ಷ ನಂಜನಗೂಡಿನಲ್ಲಿ ಅಂಧಕಾಸುರ ವಧೆ ನಡೆಯುತ್ತದೆ. ಈ ವೇಳೆ ಅರ್ಚಕ ಉಪಾಧ್ಯಾಯ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಇದೀಗ ವರದಿಯಾಗಿದೆ.

Read More

ಮಂಡ್ಯ : ಮಂಡ್ಯ ಜಿಲ್ಲೆಯ ಅಗಸರ ಹಳ್ಳಿ ಬಳಿ,ಉಚಿತವಾಗಿ ಎಣ್ಣೆ ಕೊಡದಿದ್ದಕ್ಕೆ ಪುಂಡರು ಬಾರ್ ಗೆ ಬೆಂಕಿ ಇಟ್ಟಿರುವ ಘಟನೆ ವರದಿಯಾಗಿದೆ. ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಅಗಸರಹಳ್ಳಿ ಗ್ರಾಮದಲ್ಲಿ ಪರಮೇಶ್ ಎಂಬವರಿಗೆ ಸೇರಿದ ಈಗಲ್ ಬಾರ್ ಮತ್ತು ರೆಸ್ಟೋರೆಂಟ್ ಗೆ ಪುಂಡರು ಬೆಂಕಿ ಇಟ್ಟಿದ್ದಾರೆ. ಮುರುಕನಹಳ್ಳಿಯ ರಕ್ಷಿತ ಹಾಗೂ ಆತನ ಸ್ನೇಹಿತರಿಂದ ಬಾರ್ ನಲ್ಲಿ ಗಲಾಟೆ ಮಾಡಿದ್ದಾರೆ. ಉಚಿತವಾಗಿ ಮದ್ಯ ಕೊಡಬೇಕು ಎಂದು ರಕ್ಷಿತ್ ಮತ್ತು ಆತನ ಸ್ನೇಹಿತರು ಬೇಡಿಕೆ ಇಟ್ಟಿದ್ದರು. ಈ ವೇಳೆ ಮದ್ಯ ಕೊಡದಿದ್ದಕ್ಕೆ ಗಲಾಟೆ ಮಾಡಿದ್ದಾರೆ. ಬಳಿಕ ಬಾರ್ ಹಾಗೂ ಮಾಲೀಕ ಪರಮೇಶ್ ಕಾರಿಗೆ ಬೆಂಕಿ ಹಾಕಿ ಗಲಾಟೆ ಮಾಡಿದ್ದಾರೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೆಆರ್ ಪೇಟೆ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಹುಬ್ಬಳ್ಳಿ : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ನಡೆದಿದ್ದು, ಹುಬ್ಬಳ್ಳಿ ನಗರದಲ್ಲಿ ಅಪ್ರಾಪ್ತೆ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಹುಬ್ಬಳ್ಳಿಯ ಶಹರ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಒಂದು ವಾರದಲ್ಲಿ ಪರಿಚಯಸ್ಥ ಮೂವರು ಬಾಲಕರಿಂದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ. ಕಳೆದ ವಾರ ನಡೆದಿದ್ದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ನೊಂದ ಬಾಲಕಿ ಮತ್ತು ಆಕೆಯ ತಾಯಿ ದೂರು ನೀಡಿದ್ದು ಮೂವರು ಅಪ್ರಾಪ್ತ ಬಾಲಕರನ್ನು ಸದ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅತ್ಯಾಚಾರದ ವೇಳೆ ಲೈಂಗಿಕ ದೌರ್ಜನ್ಯದ ವಿಡಿಯೋ ಮಾಡಿ ಇಟ್ಟುಕೊಂಡಿದ್ದರು. ಬಾಲಕರ ವಿರುದ್ಧ ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಬಳ್ಳಾರಿಯಲ್ಲಿ ಗಲಾಟೆ ಹಾಗು ಫೈರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ SP ಪವನ್ ನಜ್ಜುರ್ ಸಸ್ಪೆಂಡ್ ಆಗಿದ್ದರು. ಇದರಿಂದ ನೊಂದ ಅವರು ತುಮಕೂರಲ್ಲಿ ಸ್ನೇಹಿತನ ಫಾರ್ಮ್ ಹೌಸ್ ನಲ್ಲಿ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಾಸಿದ್ದರು ಎಂದು ಹೇಳಲಾಗಿತ್ತು. ಇದೀಗ ಬಳ್ಳಾರಿ ಎಸ್‌ಪಿ ಪವನ್‌ ನಿಜ್ಜೂರ್‌ ಆತ್ಮಹತ್ಯೆಗೆ ಯತ್ನಿಸಿಲ್ಲ ಎಂದು ಅವರ ಸ್ನೇಹಿತ, ಬೆಂಗಳೂರು ಸಿಸಿಬಿ ಡಿಸಿಪಿ ಶ್ರೀಹರಿಬಾಬು ಹೇಳಿದ್ದಾರೆ. ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಈಗ ಶಿರಾ ಬಳಿಯ ಫಾರ್ಮ್‌ಹೌಸ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಪವನ್‌ ಆತ್ಮಹತ್ಯೆಗೆ ಯತ್ನಿಸಿದ್ದ ವರದಿ ಸುಳ್ಳು ಎಂದಿದ್ದಾರೆ.ಸರ್ಕಾರ ಅಮಾನುತು ಆದೇಶ ಪ್ರಕಟಿಸಿದ ಬಳಿಕ ಬಳ್ಳಾರಿ ಎಸ್‌ಪಿ ಪವನ್‌ ನಿಜ್ಜೂರ್‌ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ವದಂತಿ ಹರಡಿತ್ತು. ಜ.1 ರಂದು ಅಧಿಕಾರ ಸ್ವೀಕರಿಸಿದ್ದ ಪವನ್‌ ನಿಜ್ಜೂರ್‌ ಅವರನ್ನು ಕರ್ತವ್ಯ ಲೋಪದ ಆರೋಪದ ಅಡಿ ಸರ್ಕಾರ ನಿನ್ನೆ (ಜ.2) ರಾತ್ರಿ ಅಮಾನತು ಮಾಡಿ ಆದೇಶ ಪ್ರಕಟಿಸಿತ್ತು. ರಾತ್ರಿ…

Read More

ತುಮಕೂರು : ಬಳ್ಳಾರಿಯಲ್ಲಿ ಬ್ಯಾನರ್ ವಿಚಾರವಾಗಿ ನಡೆದ ಗಲಾಟೆ ಪ್ರಕರಣದಲ್ಲಿ ಫೈರಿಂಗ್ ಆಗಿ ಓರ್ವ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ SP ಪವನ್ ನಜ್ಜುರು ಅವರನ್ನು ಕರ್ತವ್ಯ ಲೋಪ ಆರೋಪದ ಅಡಿ ಸಸ್ಪೆಂಡ್ ಮಾಡಲಾಗಿತ್ತು ಇದೀಗ ಮಾತ್ರೆ ನುಂಗಿ ಪವನ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹೌದು ಸಸ್ಪೆಂಡ್ ಆಗಿದ್ದ ಎಸ್ಪಿ ಪವನ್ ನಜ್ಜುರ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಎನ್ನುವ ಸುದ್ದಿ ಹರಿದಾಡುತ್ತಿದ್ದು, ಸ್ನೇಹಿತನ ಫಾರ್ಮ್ ಹೌಸ್ ನಲ್ಲಿ ಪವನ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ ತುಮಕೂರು ಜಿಲ್ಲೆಯ ಶಿರದ ಬರಗೂರಿನ ಫಾರ್ಮರ್ಸ್ ನಲ್ಲಿ ಪವನ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಸದ್ಯ ಆಸ್ಪತ್ರೆಯಲ್ಲಿ ಪವನ್ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಬಲ್ಲಮೂಲಗಳಿಂದ ತಿಳಿದು ಬಂದಿದೆ.

Read More

ಢಾಕಾ : ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗಳ ಸರಣಿ ಮುಂದುವರಿದಿದ್ದು, ಕಳೆದ ಕೆಲವು ದಿನಗಳ ಹಿಂದೆ ಇಬ್ಬರು ಹಿಂದೂಗಳ ಹತ್ಯೆ ಬೆನ್ನಲ್ಲೆ, ಕಿಡಿಗೇಡಿಗಳ ದಾಳಿಯಿಂದ ಪವಾಡ ಸದೃಶವಾಗಿ ಪಾರಾಗಿ ಜೀವ ಉಳಿಸಿಕೊಂಡಿದ್ದ ಉದ್ಯಮಿ ಕೊಂಕನ್ ಚಂದ್ರ (50) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಇದೀಗ ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಕೇಔರ್‌ಬಂಗಾ ಪ್ರದೇಶದಲ್ಲಿ ಮೆಡಿಕಲ್‌ ಶಾಪ್‌ ಮುಚ್ಚಿ ಬುಧವಾರ (ಡಿ.31) ರಾತ್ರಿ 9 ಗಂಟೆ ಸುಮಾರಿಗೆ ಮನೆ ಕಡೆ ಬರುತ್ತಿದ್ದ ಕೊಂಕನ್ ಮೇಲೆ ಕಿಡಿಗೇಡಿಗಳು ಮಾರಣಾಂತಿಕ ಹಲ್ಲೆ ಮಾಡಿದ್ದರು. ಹಲವು ಬಾರಿ ಹೊಟ್ಟೆಗೆ ಇರಿದು, ಪೆಟ್ರೋಲ್‌ಹಾಕಿ ಬೆಂಕಿ ಹಚ್ಚಿದ್ದರು. ದೃಷ್ಟವಶಾತ್ ಪಕ್ಕದಲ್ಲೇ ಇದ್ದ ನೀರಿದ್ದ ಕೆರೆಗೆ ಜಿಗಿದು ಕೊಂಕನ್ ಪ್ರಾಣ ಉಳಿಸಿಕೊಂಡಿದ್ದರು. ನಂತರ ಕೆಲ ಸ್ಥಳೀಯರು ರಕ್ಷಿಸಿ ಢಾಕಾ ಮಡಿಕಲ್‌ ಆಸ್ಪತ್ರೆಗೆ ದಾಖಲಿಸಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಕೊಂಕನ್ ಚಂದ್ರ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಬಾಂಗ್ಲಾ ಮಾಧ್ಯಮಗಳು ವರದಿ ಮಾಡಿವೆ.

Read More

ಬಳ್ಳಾರಿ : ಬ್ಯಾನರ್​ ಕಟ್ಟುವ ವಿಚಾರದಲ್ಲಿ ಶಾಸಕ ಭರತ್ ರೆಡ್ಡಿ ಮತ್ತು ಜನಾರ್ದನ ರೆಡ್ಡಿ ಬೆಂಬಲಿಗರ ನಡುವಿನ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭರತ್​ ರೆಡ್ಡಿ ಸೇರಿ 22 ಜನರ ವಿರುದ್ಧ ದೂರು ದಾಖಲಾಗಿದೆ. ಮಾಜಿ ಸಚಿವ ಜನಾರ್ದನ ರೆಡ್ಡಿ ಮನೆಗೆ ಅತಿಕ್ರಮ ಪ್ರವೇಶ, ಜಾತಿನಿಂದನೆ, ಹಲ್ಲೆಗೆ ಯತ್ನ ಆರೋಪದಡಿ ಬ್ರೂಸ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಸಕ ಭರತ್​ ರೆಡ್ಡಿ ಅವರ ಆಪ್ತರಾದ ಸತೀಶ್​ ರೆಡ್ಡಿ, ಚಾನಾಳ ಶೇಖರ್, ಲೋಕೇಶ್​ ಅವಂಬಾವಿ, ಗಂಗಾಧರ ಸೇರಿ 22 ಜನರ ವಿರುದ್ದ ಪ್ರಕರಣ ದಾಖಲಾಗಿದೆ. ನಿನ್ನೆ ಭರತ್ ರೆಡ್ಡಿ ಅವರ ಬೆಂಬಲಿಗ ಚಾನಾಳ ಶೇಖರ್ ಅವರು ಜನಾರ್ದನ್ ರೆಡ್ಡಿ, ಶ್ರೀರಾಮುಲು ಸೇರಿದಂತೆ 11 ಜನರ ವಿರುದ್ಧ ದೂರು ನೀಡಿದ್ದರು. ಇಂದು ಜನಾರ್ದನ ರೆಡ್ಡಿ ಅವರ ಬೆಂಬಲಿಗ ಮನೆಗೆಲಸದ ವ್ಯಕ್ತಿ ನಾಗರಾಜ್ ಅವರು ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರತಿದೂರು ದಾಖಲಿಸಿದ್ದಾರೆ.

Read More