Author: kannadanewsnow05

ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನಿನ್ನೆ ಸ್ನೇಹಮಯಿ ಕೃಷ್ಣ ಎನ್ನುವವರು ಸಿಎಂ ಸಿದ್ದರಾಮಯ್ಯ ಆರೋಪಿಯೆಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ ನ್ಯಾಯಾಲಯವು ಇದೀಗ ವಿಚಾರಣೆಯನ್ನು ಆಗಸ್ಟ್ 13ಕ್ಕೆ ಮುಂದೂಡಿ ಆದೇಶಿಸಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದ ಆರೋಪದ ವಿಚಾರವಾಗಿ ಇಂದು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ಸ್ನೇಹಮಯಿ ಕೃಷ್ಣ ಎಂಬುವವರ ಖಾಸಗಿ ದೂರು ವಿಚಾರಣೆ ನಡೆಯಿತು. ದೂರುದಾರರ ಪರ ಹಿರಿಯ ವಕೀಲೆ ಲಕ್ಷ್ಮಿ ಅಯ್ಯಂಗಾರ್ ವಾದ ಮಂಡಿಸಿದರು. ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಆದಾಗ ಡಿ ನೋಟಿಫಿಕೇಷನ್ ಮಾಡಲಾಗಿದೆ. ಮಾಲೀಕರೇ ಅಲ್ಲದ ವ್ಯಕ್ತಿ ಪರವಾಗಿ ಡಿನೋಟಿಫಿಕೇಶನ್ ಮಾಡಿದ್ದಾರೆ ಎಂದು ವಾದಿಸಿದರು. ಈ ಜಮೀನಿನಲ್ಲಿ ದೇವನೂರು ಬಡಾವಣೆ ರಚನೆಯಾಗಿದೆ. ಸಿಎಂ ಪತ್ನಿಯ ಸಹೋದರ ಜಮೀನನ್ನು ಖರೀದಿಸಿದ್ದಾರೆ. 2004ರಲ್ಲಿ ದೇವರಾಜು ನಿಂದ ಜಮೀನನ್ನು ಖರೀದಿಸಲಾಗಿದೆ. ಆಗಲು ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದರು. ಜಮೀನು ಖರೀದಿಸಿದ ಹಣದ ಮೂಲದ ಬಗ್ಗೆ ಪ್ರಶ್ನೆ ಇದೆ. ದೇವನೂರು ಬಡಾವಣೆಯಲ್ಲಿ ಈಗಲೂ…

Read More

ಶಿವಮೊಗ್ಗ : ಮನೆಯಲ್ಲಿ ನಾಯಿ, ಬೆಕ್ಕು ಸಾಕೋದು ಸಹಜ. ಆದರೆ ಅವುಗಳಿಂದ ಏನೇ ಪ್ರಾಣಾಪಾಯ ಎದುರಾದರು, ತಕ್ಷಣ ವೈದ್ಯರನ್ನು ಕಾಣಬೇಕು.ಇಲ್ಲದಿದ್ದರೆ ಪ್ರಾಣಕ್ಕೆ ಸಂಚಕಾರ ಎದುರಾಗಬಹುದು. ಇದೀಗ ಸಾಕು ಬೆಕ್ಕು ಕಚ್ಚಿದ್ದರಿಂದ ರೇಬಿಸ್​ ಉಂಟಾಗಿ ಮಹಿಳೆ ಸಾವನ್ನಪ್ಪಿರುವ ಘಟನೆ ಶಿಕಾರಿಪುರ ತಾಲೂಕು ತರಲಘಟ್ಟ ಕ್ಯಾಂಪ್​​ನಲ್ಲಿ ನಡೆದಿದೆ. ಹೌದು ಶಿಕಾರಿಪುರ ತಾಲೂಕು ತರಲಘಟ್ಟ ಕ್ಯಾಂಪ್​​ನ ತರಲಘಟ್ಟ ಗ್ರಾಮದ ಗಂಗಿಬಾಯಿ(50) ಮೃತ ಮಹಿಳೆ ಎಂದು ತಿಳಿದುಬಂದಿದೆ. ಗಂಗಿಬಾಯಿಗೆ ಕಳೆದ ಎರಡೂವರೆ ತಿಂಗಳ ಹಿಂದೆ ಬೆಕ್ಕು ಕಚ್ಚಿತ್ತು. ಮೊದಲ ರೇಬಿಸ್ ಇಂಜೆಕ್ಷನ್ ಪಡೆದುಕೊಂಡಿದ್ದರು. ಬಳಿಕ ಹುಷಾರಾಗಿದ್ದೇನೆ ಎಂದು ಪೂರ್ಣ ಇಂಜೆಕ್ಷನ್ ಪಡೆದಿರಲಿಲ್ಲ ಎಂದು ತಿಳಿದು ಬಂದಿದೆ. ಗ್ರಾಮದ ಆಶಾ ಕಾರ್ಯಕರ್ತೆಯರು ಇಂಜೆಕ್ಷನ್ ಪಡೆಯುವಂತೆ ತಿಳಿಸಿದರೂ ಗಂಗಿಬಾಯಿ ನಿರ್ಲಕ್ಷ್ಯ ವಹಿಸಿದ್ದರು. ಈ ನಡುವೆ ನಾಟಿ ಕಾರ್ಯದಲ್ಲಿ ಭಾಗಿಯಾಗಿದ್ದ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ನಂತರ ಜ್ವರ ಹೆಚ್ಚಾಗಿ ಆರೋಗ್ಯ ಹದಗೆಟ್ಟಿದ್ದರಿಂದ ಶಿಕಾರಿಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿ ಗುಣವಾಗದೆ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ…

Read More

ಮೈಸೂರು : ಮುಡಾ ಪ್ರಕರಣದ ವಿರುದ್ಧ ವಿಪಕ್ಷಗಳು ಪಾದಯಾತ್ರೆ ಮಾಡುತ್ತಿವೆ. ಇದಕ್ಕೆ ಕೌಂಟರ್ ನೀಡುವಂತೆ ಕಾಂಗ್ರೆಸ್ ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಂಡಿದ್ದು,ಮೈಸೂರಿನ ಅರಮನೆ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಜನಾಂದೋಲನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಭ್ರಷ್ಟಾಚಾರ ನಡೆದಿದೆ. ಆದರೆ ಹಗರಣದಲ್ಲಿ ನಾನು ಭಾಗಿಯಾಗಿಲ್ಲ. ವಿರೋಧ ಪಕ್ಷಗಳು ದಾಖಲೆ ಸಹಿತ ಯಾವುದೇ ಚರ್ಚೆ ನಡೆಸಿಲ್ಲ. ವಾಲ್ಮೀಕಿ ನಿಗಮದಲ್ಲಿ 84 ಕೋಟಿ 63, ಅವ್ಯವಹಾರ ನಡೆದಿದೆ ಎಂದು ಜನಾಂದೋಲನ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು. ವಾಲ್ಮೀಕಿ ನಿಗಮದ ಅಧಿಕಾರಿಗಳೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ. ಈಗ ಎಸ್ಐಟಿ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ವಾಲ್ಮೀಕಿ ನಿಗಮದಲ್ಲಿ ನನ್ನ ಪಾತ್ರ ಇಲ್ಲ ಅಂತ ಗೊತ್ತಾದ ಬಳಿಕ ಈಗ ಮುಡಾದಲ್ಲಿ ಹಗರಣ ಆಗಿದೆ ಅಂತ ಹೇಳುತ್ತಿದ್ದಾರೆ. ಮುಡಾದಲ್ಲಿ ನಾನು ಭ್ರಷ್ಟಾಚಾರ ಮಾಡಿಲ್ಲ. ನನ್ನ ಪಾತ್ರವೂ ಇಲ್ಲ. ವಿಜಯೇಂದ್ರ, ಕುಮಾರಸ್ವಾಮಿ, ಯಡಿಯೂರಪ್ಪಗೆ ನನ್ನ ರಾಜೀನಾಮೆ ಕೇಳಲು ಇವರಿಗೆ ಯಾವ ನೈತಿಕತೆ ಇದೆ ಎಂದು ವಾಗ್ದಾಳಿ ನಡೆಸಿದರು. ಮುಡಾದಲ್ಲಿ…

Read More

ನವದೆಹಲಿ : ಮುಡಾ ಪ್ರಕರಣದ ವಿರುದ್ಧ ಮೈತ್ರಿ ಪಕ್ಷಗಳಿಂದ ಪಾದಯಾತ್ರೆ ಮಾಡಲಾಗುತ್ತಿದೆ. ಇದಕ್ಕೆ ಟಕ್ಕರ್​ ಎಂಬಂತೆ ಕಾಂಗ್ರೆಸ್​ ಜನಾಂದೋಲನ ಮಾಡಿದೆ. ಇವೆರಡೂ ಈಗ ಡಿಕೆ ಶಿವಕುಮಾರ್​ ಮತ್ತು ಹೆಚ್​ಡಿ ಕುಮಾರಸ್ವಾಮಿ ಮಧ್ಯೆ ವೈಯಕ್ತಿಕ ಟೀಕೆಗಳು ಬರುತ್ತಿದ್ದು, ಇದೀಗ ಮಾಡಿದ್ರೆ ಗಂಡಸ್ತನದ ರಾಜಕೀಯ ಮಾಡಬೇಕು ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಇಂದು ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತನ್ನ ಮಗನನ್ನು ಬೆಳೆಸಲು ಮತ್ತೊಬ್ಬ ಮಗನನ್ನು ಮುಗಿಸಿದರು. ಮನುಷ್ಯನ ಅವನು. ರಾಜಕೀಯ ಮಾಡಿದರೆ ಗಂಡಸ್ತನದ ರಾಜಕೀಯ ಮಾಡಬೇಕು.ನನ್ನ ಕುಟುಂಬದ ವಿರುದ್ಧ ಮಾತಾಡ್ತಾರಾ. 10 ತಿಂಗಳಲ್ಲಿ ಸರ್ಕಾರ ಬೀಳಿಸಲು ಸಂಚು ಎಂದು ಶಿವಕುಮಾರ್​ ಆರೋಪ ಮಾಡಿದ್ದಾರೆ. ಸರ್ಕಾರ ಬೀಳಿಸಲು ಟ್ರೈಮಾಡಿದ್ದಾರೆಂದು ಅಜ್ಜಯ್ಯ ಹೇಳಿದ್ರಾ? ಸುಮ್ಮನೆ ನನ್ನನ್ನು ಕೆಣಕಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಕುತಂತ್ರ ಮಾಡುತ್ತಿರುವವರು ಯಾರು. ಹೆಚ್.ಡಿ.ರೇವಣ್ಣ ಮತ್ತು ಮಕ್ಕಳ ವಿರುದ್ಧ ಷಡ್ಯಂತ್ರ ಮಾಡಿದ್ದು ಯಾರು? ಅವರನ್ನು ಜೈಲಿಗೆ ಕಳುಹಿಸಿದವರು ಯಾರು? ನಮ್ಮ ಕುಟುಂಬದ ವಿರುದ್ಧ ಮಾತನಾಡಿದರೆ ಸುಮ್ಮನೆ ಬಿಡುವುದಿಲ್ಲ…

Read More

ಬಾಗಲಕೋಟೆ : ಬಹಳ ದಿನಗಳಿಂದ ಪ್ರೀತಿಸುತ್ತಿದ್ದ ಇಬ್ಬರು ಪ್ರೇಮಿಗಳಿಗೆ ಜಾತಿ ಅಡ್ಡ ಬಂದಿದೆ. ಹೀಗಾಗಿ ತಮ್ಮ ಮದುವೆಗೆ ಮನೆಯವರು ಒಪ್ಪಿಲ್ಲವೆಂದು ಮನನೊಂದು ಪ್ರೇಮಿಗಳೆಬ್ಬರೂ ಒಂದೇ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ನಂದಗಾವ ಗ್ರಾಮದಲ್ಲಿ ನಡೆದಿದೆ. ಹೌದು ಗ್ರಾಮದ ಸಚಿನ್ ದಳವಾಯಿ(22), ಪ್ರಿಯಾ ಮಡಿವಾಳರ(19) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು ಎಂದು ತಿಳಿದುಬಂದಿದೆ.ಇವರಿಬ್ಬರ ಜಾತಿ ಬೇರೆಯಾಗಿದ್ದರಿಂದ ಹುಡುಗನ ಮನೆಯವರು ಅಂತರ್ಜಾತಿ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಇದರಿಂದ ಮನನೊಂದ ಪ್ರೇಮಿಗಳು ಆತ್ಮಹತ್ಯೆಯೆ ಪರಿಹಾರ ಎಂದು ನೇಣಿಗೆ ಶರಣಾಗಿದ್ದಾರೆ. ಸಚಿನ್‌ ದಳವಾಯಿ, ಪ್ರಿಯಾ ಮಡಿವಾಳರ ಬಹಳ ದಿನಗಳಿಂದ ಪ್ರೀತಿಸುತ್ತಿದ್ದರು. ಇಬ್ಬರು ಪರಸ್ಪರ ಮದುವೆಯಾಗಿ ಹೊಸ ಜೀವನ ಪ್ರಾರಂಭಿಸಬೇಕು ಎಂದು ನಿರ್ಧಾರ ತೆಗೆದುಕೊಂಡಿದ್ದರು. ಇಬ್ಬರದ್ದು ಬೇರೆ ಬೇರೆ ಜಾತಿಯಾಗಿದ್ದರಿಂದ ಸಚಿನ್‌ ಮನೆಯಲ್ಲಿ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ವಿಷಯವನ್ನು ಸಚಿನ್‌, ತಮ್ಮ ಪ್ರೇಯಸಿ ಪ್ರಿಯಾಳಿಗೆ ತಿಳಿಸಿದ್ದಾನೆ. ಇದರಿಂದ ಮನನೊಂದ ಪ್ರೇಮಿಗಳು ಗುರುವಾರ ರಾತ್ರಿ ಒಂದೇ ಮರಕ್ಕೆ ನೇಣು ಬಿಗಿದುಕೊಂಡು…

Read More

ಮೈಸೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಜೆಡಿಎಸ್ ಮೈಸೂರು ಚಲೋ ಪಾದಯಾತ್ರೆ ಮಾಡುತ್ತಿದ್ದರೆ, ಇನ್ನೊಂದು ಕಡೆ ಇದಕ್ಕೆ ಕೌಂಟರ್ ನೀಡಲು ಕಾಂಗ್ರೆಸ್ ಪಕ್ಷ ಜನಾಲೋಂದನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇಂದು ಮೈಸೂರಿನಲ್ಲಿ ಮಹಾರಾಜ ಕಾಲೇಜಿನ ಮೈದಾನದಲ್ಲಿ ನಡೆದ ಸಮಾವೇಶದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ವಿಪಕ್ಷಗಳ ವಿರುದ್ಧ ಗುಡುಗಿದರು. ಈ ಒಂದು ಸಮಾವೇಶದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಡಿಸಿಎಂ ಡಿಕೆ ಶಿವಕುಮಾರ್ ಅವರು,ಈ ಬಂಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಇದೆ. ರಾಜ್ಯದ ಮತದಾರರು ಸಿದ್ದರಾಮಯ್ಯ ಜೊತೆ ಇದ್ದಾರೆ. ಈ ಬಂಡೆಯ ಹಿಂದೆ ರಾಜ್ಯದ 136 ಶಾಸಕರು ಇದ್ದಾರೆ. ನಾವೆಲ್ಲರೂ ಸಿಎಂ ಸಿದ್ದರಾಮಯ್ಯ ಜೊತೆಗೆ ಇರುವುದಾಗಿ ಎಂದು ಮೈಸೂರಿನ ಜನಂದೋಲನ ಸಮಾವೇಶದಲ್ಲಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು. ಯಾವುದೇ ಕಾರಣಕ್ಕೂ ಗ್ಯಾರಂಟಿಗಳನ್ನು ತೆಗೆದುಹಾಕಲು ಆಗಲ್ಲ. ಡಿಕೆ ಕುಮಾರಸ್ವಾಮಿ ತಮ್ಮ ಕುಟುಂಬಕ್ಕೆ ಏನು ಬೇಕು ಅದನ್ನು ಮಾಡಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಎರಡನೇ ಹಿಂದುಳಿದ ನಾಯಕರು. ಸಂಚಿನಿಂದ ಅಧಿಕಾರಿಂದ ಅವರನ್ನು ಕಳೆಗೊಳಿಸಲು…

Read More

ಬೆಂಗಳೂರು : ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪದ ಮೇಲೆ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯವು ಇದೆ ಆಗಸ್ಟ್​ 27ಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ . ಹೌದು 2022ರ ನವೆಂಬರ್​ನಲ್ಲಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯಲ್ಲಿ ಆಯೋಜಿಸಲಾಗಿದ್ದ ಮಾನವ ಬಂದುತ್ವ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸಚಿವ ಸತೀಶ್​ ಜಾರಕಿಹೊಳಿ, ಹಿಂದೂ ಎಂಬ ಪದ ಎಲ್ಲಿಂದ ಬಂತು? ಇದು ನಮ್ಮ ಪದವಲ್ಲ ಪರ್ಷಿಯನ್​ನಿಂದ ಬಂದಿದ್ದು. ಭಾರಕ್ಕೂ ಪರ್ಷಿಯನ್​ಗೂ ಏನು ಸಂಬಂಧ? ಎಂದು ಹೇಳಿದ್ದರು. ಹಿಂದೂ ಭಾರತೀಯ ಪದವೇ ಅಲ್ಲ, ಅದು ಪರ್ಷಿಯನ್​ ಪದ, ಹಿಂದೂ ನಮ್ಮದು ಹೇಗೆ ಆಯಿತು ಅನ್ನೋದು ಚರ್ಚೆ ಆಗಬೇಕುದೆ. ಹಿಂದೂ ಪದದ ಅರ್ಥ ಬಹಳ ಅಶ್ಲೀಲವಾಗಿದೆ. ಅದು ನಿಮಗೆ ತಿಳಿದರೆ ನಾಚಿಕೆ ಆಗುತ್ತೆ. ಎಲ್ಲಿಂದಲೋ ಬಂದಿರುವ ಧರ್ಮವನ್ನು ತಂದು ಒತ್ತಾಯಪೂರ್ವಕವಾಗಿ ಹೇರಲಾಗುತ್ತಿದೆ ಎಂದಿದ್ದರು. ಹಿಂದೂ ಧರ್ಮ‌ಕ್ಕೆ ನಿಂದನೆ ಮಾಡುವ‌ ಮೂಲಕ ಅಶಾಂತಿ ಮೂಡಿಸಲು ಯತ್ನಿಸಲಾಗುತ್ತಿದೆ. ಸಮುದಾಯಗಳ ನಡುವೆ ದ್ವೇಷ ಮೂಡಿಸಲು ಯತ್ನಿಸಲಾಗಿದೆ…

Read More

ಬೆಂಗಳೂರು : ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಜಾಮೀನು ಮತ್ತು ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಆಗಸ್ಟ್ 29ಕ್ಕೆ ಮುಂದೂಡಿತು. ಹಾಸನ ಜಿಲ್ಲೆಯ ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಜಾಮೀನು ಕೋರಿರುವ ಮತ್ತು ಬೆಂಗಳೂರು ಸೈಬರ್ ಅಪರಾಧ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠಕ್ಕೆ ಸರ್ಕಾರ ಕಾಲಾವಕಾಶ ಕೋರಿತು. ವಿಚಾರಣೆ ವೇಖೆ ವಿಶೇಷ ತನಿಖಾ ದಳದ (ಎಸ್ಐಟಿ) ವಿಶೇಷ ಸರ್ಕಾರಿ ಅಭಿಯೋಜಕರಾದ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್, ಅರ್ಜಿ ಸಂಬಂಧ ಆಕ್ಷೇಪಣೆ ಸಲ್ಲಿಸಲು ಎರಡು ವಾರ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಅರ್ಜಿದಾರರ ಪರವಾಗಿ ಹಾಜರಾಗಿದ್ದ ವಕೀಲ ಜಿ.ಅರುಣ್, ಎಸ್ಐಟಿಯು ಸಂಬಂಧಿತ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದೆ. ನಮಗೆ ಇನ್ನೂ ಸರ್ಟಿಫೈಡ್ ಆರೋಪ ಪಟ್ಟಿ ಸಿಕ್ಕಿಲ್ಲ. ಹೀಗಾಗಿ, ವಿಚಾರಣೆ ಮುಂದೂಡಬೇಕು ಎಂದರು. ಇದಕ್ಕೆ ಸಹಮತ ವ್ಯಕ್ತಪಡಿಸಿದ ನ್ಯಾಯಪೀಠ,…

Read More

ಚಿಕ್ಕಬಳ್ಳಾಪುರ : ಮದುವೆಯಾಗಿ 3 ಮುದ್ದಾದ ಹೆಣ್ಣು ಮಕ್ಕಳು ಇದ್ದರು ಸಹ ಆತನಿಗೆ ಪತ್ನಿಯೊಂದಿಗೆ ವಿಕೃತವಾಗಿ ಕಾಮದಾಟವಾಡುವ ಮನಸ್ಥಿತಿ.ಕಟ್ಟಿಕೊಂಡ ಗಂಡನೇ ಪತ್ನಿಯ ಬಳಿ ವಿಕೃತಿ ಮೆರೆದಿರುವ ಅಮಾನುಷ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದ ಪಿಲೇಚರ್ಸ್ ಕ್ವಾಟ್ರಸ್‍ನಲ್ಲಿ ನಡೆದಿದೆ. ಹೌದು ಎಸ್.ಮೊಸಿನ್‍ ಪಾಷ(39) ಎಂಬಾತ ಹೆಂಡತಿಯ ಜೊತೆ ವಿಕೃತವಾಗಿ ವರ್ತಿಸಿದ್ದು, ಆತನ ಕಿರುಕುಳಕ್ಕೆ ಆತನ ತಾಯಿ ಕೂಡ ಸಾಥ್ ನೀಡಿರುವ ಆರೋಪ ಕೇಳಿಬಂದಿದೆ. ಇನ್ನು ಇವರಿಗೆ ಮದುವೆಯಾಗಿ 3 ಮುದ್ದಾದ ಹೆಣ್ಣು ಮಕ್ಕಳಿವೆ. ಆದರೂ ಆತನಿಗೆ ಪತ್ನಿಯ ಜೊತೆ ವಿಕೃತ ಕಾಮದಾಟವಾಡುವ ಹುಚ್ಚುತನ. ಇನ್ನು ಲೈಂಗಿಕ ಜಾಲತಾಣಗಳ ವೀಡಿಯೋ, ಪೋಟೋಗಳನ್ನು ಪತ್ನಿಗೆ ತೋರಿಸಿ ಹಾಗೆ ಮಾಡು, ಹೀಗೆ ಮಾಡು ಎಂದು ವಿಕೃತ ಲೈಂಗಿಕ ಕಿರುಕುಳ ನೀಡುತ್ತಿದ್ದ.ಇಷ್ಟಾದರೂ ಸಾಲದೆಂಬಂತೆ ಪತ್ನಿಯ ಏಕಾಂತ ಪೋಟೋ, ವೀಡಿಯೋಗಳನ್ನು ತೆಗೆದು ಅವುಗಳನ್ನು ಮಾರಾಟ ಮಾಡುವುದಾಗಿ ಪತ್ನಿಗೆ ಬ್ಲಾಕ್‍ಮೇಲ್ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ತನ್ನ ವಿಕೃತ ಲೈಂಗಿಕ ಕಿರುಕುಳಕ್ಕೆ ಪತ್ನಿ ಸಾಥ್ ನೀಡುತ್ತಿಲ್ಲವೆಂದು ಪತ್ನಿಯ ಎದುರಲ್ಲೆ ಬೇರೆ ಮಹಿಳೆಯ…

Read More

ಬೆಂಗಳೂರು : ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಚಾಲಕರ ಅಡ್ಡಾದಿಡ್ಡಿ ಚಾಲನೆಗೆ ಯಾವಾಗ ಬ್ರೇಕ್ ಬೀಳುತ್ತೋ ಗೊತ್ತಿಲ್ಲ. ಬಿಎಂಟಿಸಿ ಯದ್ವಾತದ್ವ ಚಾಲನೆಗೆ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಇಂದು ಕೂಡ ಬಿಎಂಟಿಸಿ ಬಸ್ ಗೆ ಬೈಕ್ ಸವಾರ ಒಬ್ಬ ಸಾವನ್ನಪ್ಪಿರುವ ಘಟನೆ ಆನೇಕಲ್ ತಾಲೂಕಿನ ಜಿಗಣಿ ಬಳಿ ನಡೆದಿದೆ. ಹೌದು ಮುಂದೆ ತೆರಳುತ್ತಿದ್ದ ಬೈಕ್ ಗೆ ಹಿಂಬದಿಯಿಂದ ಬಸ್ ಡಿಕ್ಕಿ ಹೊಡೆದಿದೆ. ಈ ವೇಳೆ ಕೆಳಗೆ ಬಿದ್ದಿದ್ದ ಬೈಕ್ ಸವಾರನ ಮೇಲೆ ಬಿಎಂಟಿಸಿ ಬಸ್ ಹರಿದಿದೆ. ಬೈಕ್ ನಲ್ಲಿದ್ದ ಸವಾರ ಸಾವನ್ನಪ್ಪಿದ್ದು ಮೃತ ಯುವಕನ ಗುರುತು ಇದುವರೆಗೂ ಪತ್ತೆಯಾಗಿಲ್ಲ. ಆನೇಕಲ್ ತಾಲೂಕಿನ ಜಿಗಣಿ ಹಳೆ ಬಸ್ ನಿಲ್ದಾಣದ ಬಳಿ ಈ ಒಂದು ಘಟನೆ ನಡೆದಿದೆ. ಈ ವೇಳೆ ಸ್ಥಳೀಯರು ಆಕ್ರೋಶಗೊಂಡು ಬಿಎಂಟಿಸಿ ಬಸ್ಸಿನ ಗಾಜಿನ ಗ್ಲಾಸ್ ಗಳನ್ನು ಹೊಡೆದು ಪುಡಿ ಮಾಡಿದ್ದಾರೆ. ಅಲ್ಲದೆ ಬಿಎಂಟಿಸಿ ಬಸ್ಸಿನ ಚಾಲಕನಿಗೂ ಹಿಗ್ಗಾಮುಗ್ಗ ಥಳಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಗಣಿ ಪೊಲೀಸ್ ಠಾಣೆಯ ಅಧಿಕಾರಿಗಳು ಬಂದು ಭೇಟಿ ನೀಡಿ ಪರಿಶೀಲನೆ…

Read More