Author: kannadanewsnow05

ಉತ್ತರಪ್ರದೇಶ : ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ಸಮಾಜವಾದಿ ಪಕ್ಷದ ಶಾಸಕ ಇರ್ಫಾನ್ ಸೋಲಂಕಿ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ತಂಡ ಗುರುವಾರ ದಾಳಿ ನಡೆಸಿದೆ. ತನಿಖಾ ಸಂಸ್ಥೆ ಲಕ್ನೋದಿಂದ ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. https://kannadanewsnow.com/kannada/another-inhuman-incident-in-karnataka-social-boycott-for-inter-caste-marriage-in-koppal/ ಬಲ್ಲ ಮೂಲಗಳ ಪ್ರಕಾರ, ಇರ್ಫಾನ್ ಸೋಲಂಕಿ ಅಷ್ಟೆ ಅಲ್ಲದೆ ಅವರ ಸಹೋದರ ಅರ್ಷದ್ ಸೋಲಕಿ ಅವರ ಆವರಣದ ಮೇಲೂ ದಾಳಿ ನಡೆಸಲಾಗಿದೆ. ಅರ್ಷದ್ ಅವರ ನಿವಾಸದಲ್ಲಿಯೂ ವಿಚಾರಣೆ ನಡೆಸಲಾಗುತ್ತಿದೆ. ದಾಳಿ ಆರಂಭವಾಗುತ್ತಿದ್ದಂತೆ ತನಿಖಾ ಸಂಸ್ಥೆ ತಂಡ ಸೋಲಂಕಿ ಆವರಣದಲ್ಲಿದ್ದ ಸಿಸಿಟಿವಿ ಸಂಪರ್ಕಗಳನ್ನು ಕಡಿತಗೊಳಿಸಿದೆ ಎಂದು ವರದಿಯಾಗಿದೆ. https://kannadanewsnow.com/kannada/electricity-bill-payments-to-be-stopped-in-bengaluru-other-cities-from-march-10/ ಒಂದು ವರ್ಷದಿಂದ ಜೈಲಿನಲ್ಲಿರುವ ಸೋಲಂಕಿ ಸಮಾಜವಾದಿ ಪಕ್ಷದ ಶಾಸಕ ಇರ್ಫಾನ್ ಸೋಲಂಕಿ ಒಂದು ವರ್ಷದಿಂದ ಜೈಲಿನಲ್ಲಿದ್ದಾರೆ. ಪ್ಲಾಟ್ ಸ್ವಾಧೀನಪಡಿಸಿಕೊಳ್ಳುವ ಉದ್ದೇಶದಿಂದ ಶಾಸಕರಿಗೆ ಬೆಂಕಿ ಹಚ್ಚಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಶಾಸಕ ಇರ್ಫಾನ್ ವಿರುದ್ಧ ಇದುವರೆಗೆ 17 ಪ್ರಕರಣಗಳು ದಾಖಲಾಗಿವೆ. ಇದರಿಂದಾಗಿ ಇರ್ಫಾನ್ ಸೋಲಂಕಿ ಅವರು ರಾಜ್ಯಸಭಾ ಚುನಾವಣೆಯಲ್ಲಿ ಮತದಾನದಿಂದ ವಂಚಿತರಾಗಿದ್ದರು. ಇರ್ಫಾನ್ ಮತ…

Read More

ಕೊಪ್ಪಳ : ದೇಶ ಎಷ್ಟೇ ಮುಂದುವರೆದರು ಸಹ ಇನ್ನು ನಮ್ಮ ಗ್ರಾಮೀಣ ಭಾಗದಲ್ಲಿ ಹಲವು ಮೂಢನಂಬಿಕೆ ಹಾಗೂ ಹಲವು ಅನಿಷ್ಟ ಪದ್ದತಿಗಳು ಇನ್ನೂ ಜಾರಿಯಲ್ಲಿವೆ. ಇದೀಗ ಕೊಪ್ಪಳದಲ್ಲಿ ಅಂತರ್ಜಾತಿ ವಿವಾಹವಾಗಿದ್ದಕ್ಕೆ ಯುವಕನ ಕುಟುಂಬಕ್ಕೆ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿರುವ ಘಟನೆ ಕೊಪ್ಪಳ ಜಿಲ್ಲೆಯ ಭಾಗ್ಯನಗರದಲ್ಲಿ ನಡೆದಿದೆ. https://kannadanewsnow.com/kannada/huts-gutted-in-fire-in-tumkur-poor-families-come-out-on-the-streets/ ಅಂತರ್ಜಾತಿ ವಿವಾಹವಾಗಿದ್ದಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎನ್ನುವ ವಿಷಯ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಕೊಪ್ಪಳ ಜಿಲ್ಲೆಯ ಭಾಗ್ಯನಗರದಲ್ಲಿ ಯುವಕನ ಕುಟುಂಬಕ್ಕೆ ಗ್ರಾಮಸ್ಥರು ಬಹಿಷ್ಕಾರ ಹಾಕಿದ್ದಾರೆ.ಶಂಕ್ರಪ್ಪ ಅವರ ಪುತ್ರ ಅಂತರ್ಜಾತಿ ವಿವಾಹವಾಗಿದ್ದ ಎಂದು ಹೇಳಲಾಗುತ್ತಿದ್ದು ಶಂಕ್ರಪ್ಪ ಬೇನಳ್ಳಿ ಕುಟುಂಬಕ್ಕೆ ಇದೀಗ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. https://kannadanewsnow.com/kannada/bengalurus-first-driverless-metro-train-to-undergo-37-tests/ ಸಮಾಜದ ಯಾವುದೇ ಸಮಾರಂಭಗಳಿಗೆ ಶಂಕ್ರಪ್ಪ ಕುಟುಂಬಕ್ಕೆ ಆಹ್ವಾನ ಇಲ್ಲ. ಅಂತರ್ಜಾತಿ ವಿವಾಹವಾಗಿದ್ದಕ್ಕೆ ಇದೀಗ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ ಎಂದು ತಿಳಿದುಬಂದಿದೆ. ಕಳೆದ ಒಂದುವರೆ ವರ್ಷದಿಂದ ಈ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎನ್ನಲಾಗುತ್ತಿದೆ. https://kannadanewsnow.com/kannada/bengalurus-first-driverless-metro-train-to-undergo-37-tests/ ಕಾರ್ಪೆಂಟರ್ ಆಗಿ ಶಂಕ್ರಪ್ಪ ಕೆಲಸ…

Read More

ತುಮಕೂರು : ಆಕಸ್ಮಿಕ ಬೆಂಕಿಯಿಂದ ಗುಡಿಸಲುಗಳು ಹೊತ್ತಿ ಉರಿದ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನೆಲದಿಮ್ಮನಹಳ್ಳಿಯ ಕಾಲೋನಿಯಲ್ಲಿ ಅಗ್ನಿ ಅವಘಡ ಸಂಭವಿಸಿದೆ. https://kannadanewsnow.com/kannada/lok-sabha-elections-bbmp-appoints-nodal-officers-for-5-constituencies/ https://kannadanewsnow.com/kannada/breaking-youth-hangs-himself-in-mysore-fearing-ghost-on-his-body/ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ನೆಲದಿಮ್ಮನಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದೆ.ಕಳೆದ 20 ವರ್ಷಗಳಿಂದ ಸುಮಾರು 30 ಬಡ ಕುಟುಂಬಗಳು ಇಲ್ಲಿ ವಾಸ ಮಾಡುತ್ತಿದ್ದವು. ಈ ವೇಳೆ ಆಕಸ್ಮಿಕ ಬೆಂಕಿಯಿಂದ ಬಡ ಕುಟುಂಬಗಳು ಇದೀಗ ಬೀದಿಗೆ ಬಂದು ನಿಂತಿವೆ. ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದೆ ಎಂದು ತಿಳಿಬಂದಿದೆ.

Read More

ಬೆಂಗಳೂರು : ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಹಿನ್ನಲೆ ಬಿಬಿಎಂಪಿ ವ್ಯಾಪ್ತಿಯ ಐದು ಲೋಕಸಭಾ ಕ್ಷೇತ್ರಗಳಿಗೆ ನೋಡಲ್ ಅಧಿಕಾರಿಗಳ ನೇಮಕ ಮಾಡಲಾಗಿದೆ. ಈ ಕುರಿತಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಆದೇಶ ಹೊರಡಿಸಿದ್ದಾರೆ. https://kannadanewsnow.com/kannada/breaking-youth-hangs-himself-in-mysore-fearing-ghost-on-his-body/ ಬಿಬಿಎಂಪಿ 5 ಕ್ಷೇತ್ರಗಳಿಗೆ ಇದೀಗ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಪೊಲೀಸ್ ಇಲಾಖೆ, ಬಿಬಿಎಂಪಿ, ಆದಾಯ ತೆರಿಗೆ, ವಾಣಿಜ್ಯ ತೆರಿಗೆ, ಅರಣ್ಯ ಇಲಾಖೆ, ಅಬಕಾರಿ ಇಲಾಖೆ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಿ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್ ಅವರು ಆದೇಶ ಹೊರಡಿಸಿದ್ದಾರೆ. https://kannadanewsnow.com/kannada/i-dont-want-to-leave-india-bill-gates-watch/ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ, 2 ಕ್ಷೇತ್ರಗಳನ್ನು ಹೊಂದಿರುವ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ, 3 ಕ್ಷೇತ್ರಗಳನ್ನು ಹೊಂದಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.

Read More

ಮೈಸೂರು : ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ಹಲವು ಬಲವಾದ ಕಾರಣಗಳಿರುತ್ತವೆ. ಅಲ್ಲದೆ ಮಾನಸಿಕವಾಗಿಯೂ ಹಲವರು ಖಿನ್ನತೆಗೆ ಒಳಗಾಗಿರುತ್ತಾರೆ. ಆದರೆ ಮೈಸೂರಿನಲ್ಲಿ ಯುವಕನೊಬ್ಬ ಮೈಮೇಲೆ ದೆವ್ವ ಬರುತ್ತದೆ ಎಂಬ ಕ್ಷುಲ್ಲಕ ಕಾರಣಕ್ಕೆ ಹೆದರಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. https://kannadanewsnow.com/kannada/rameswaram-cafe-bomb-blast-nia-team-conducts-in-depth-probe-in-tumkur/ ಹೌದು ಘಟನೆಯು ಮೈಸೂರಿನ ಮೈ ಮೇಲೆ ದೆವ್ವ ಬರುತ್ತೆ ಎಂದು ಹೆದರಿ ಯುವಕ ಆತ್ಮಹತ್ಯೆ ಖನ್ನತೆಗೆ ಒಳಗಾಗಿ ಋಷಭೇಂದ್ರ (21) ಎನ್ನುವ ಯುವಕ ಮೈಸೂರಿನಲ್ಲಿ ನೇಣು ಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ. https://kannadanewsnow.com/kannada/will-join-bjp-after-lok-sabha-term-ends-sumalatha-ambareesh/ ಋಷಭೇಂದ್ರ ತೀವ್ರವಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎಂದು ಹೇಳಲಾಗುತ್ತಿದೆ. ಹೀಗಾಗಿ ಮೈಸೂರಿನ ಬೆಮಲ್ ಬಡಾವಣೆ ಉದ್ಯಾನವನದಲ್ಲಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆ ಕುರಿತಂತೆ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ತುಮಕೂರು : ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಇತ್ತೀಚಿಗೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸ್ ಅಧಿಕಾರಿಗಳು ಹಾಗೂ ಎನ್ಐಎ ತಂಡದ ಅಧಿಕಾರಿಗಳು ಇದೀಗ ತುಮಕೂರು ಜಿಲ್ಲೆಯ ಇಂಂಚಿನ್ಚು ಜಾಗವನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. https://kannadanewsnow.com/kannada/will-join-bjp-after-lok-sabha-term-ends-sumalatha-ambareesh/ ತುಮಕೂರಿನಲ್ಲಿ ಇಂಚಿಂಚು ಸ್ಥಳಗಳಲ್ಲಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ತುಮಕೂರು ಕಂಟ್ರೋಲ್ ರೂಮ್, ಪಾಲಿಕೆಯ ಸಿಸಿಟಿವಿಗಳು ಹಾಗೂ ಪೊಲೀಸ್ ಕಂಟ್ರೋಲ್ ಸೇರಿದಂತೆ ಹಲವು ತೀವ್ರವಾದ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. https://kannadanewsnow.com/kannada/18-killed-more-than-50-missing-as-isis-attacks-syrian-truffle-hunters/ ಬೆಂಗಳೂರು ಡಿಸಿಪಿ ಎನ್ಐಎ ತಂಡದಿಂದ ತೀವ್ರವಾದ ಶೋಧ ನಡೆಯುತ್ತಿದೆ. ತುಮಕೂರು ಬೆಂಗಳೂರಿಗೆ ಹತ್ತಿರವಾದ ಹಿನ್ನೆಲೆಯಲ್ಲಿ ಇದೀಗ ಆರೋಪಿಯು ಈ ಒಂದು ಭಾಗದಲ್ಲಿ ಕೂಡ ಸಂಚರಿಸಿರಬಹುದು ಎಂದು ಇದೀಗ ಪೊಲೀಸ್ ಅಧಿಕಾರಿಗಳು ಹಾಗೂ NIA ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ. https://kannadanewsnow.com/kannada/india-three-other-countries-to-contribute-more-than-half-of-global-economic-growth-in-next-five-years-imf/ 10 ಲಕ್ಷ ರೂಪಾಯಿ ಬಹುಮಾನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ತನ್ನ ತನಿಖೆಯನ್ನು ಇನ್ನಷ್ಟು ಚುರುಕು ಮಾಡಿದೆ.…

Read More

ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರ ರಾಜ್ಯದ ಒಂದು ಪ್ರಮುಖ ಕ್ಷೇತ್ರ ಎಂದು ಹೇಳಲಾಗುತ್ತದೆ. ಏಕೆಂದರೆ ಇದೀಗ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಬಿಜೆಪಿಗೆ ಬೆಂಬಲಿಸಿರುವ ಸುಮಲತಾ ಅಂಬರೀಶ್ ಗೆ ಟಿಕೇಟ್ ನೀಡಬೇಕೋ ಅಥವಾ ಮೈತ್ರಿ ಪಕ್ಷದ ಜೆಡಿಎಸ್ ಅಭ್ಯರ್ಥಿಗೆ ನೀಡಬೇಕೋ ಎಂಬುವುದು ಬಿಜೆಪಿಗೆ ತಲೆ ನೋವಾಗಿ ಪರಿಣಮಿಸಿದೆ.ಇದರ ಬೆನ್ನಲ್ಲೆ ಇದೀಗ ಸುಮಲತಾ ಅಂಬರೀಶ್ ಲೋಕಸಭಾ ಅವಧಿ ಮುಗಿದ ಬಳಿಕ ಬಿಜೆಪಿ ಪಕ್ಷಕ್ಕೆ ಸೇರುತ್ತೇನೆ ಎಂದು ತಿಳಿಸಿದ್ದಾರೆ. https://kannadanewsnow.com/kannada/18-killed-more-than-50-missing-as-isis-attacks-syrian-truffle-hunters/ ಲೋಕಸಭಾ ಚುನಾವಣೆಯಲ್ಲಿ ರೆಕಾರ್ಡ್ ಪಟ್ಟಿ, ಕೆಲಸ ನೋಡಿ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಅದಕ್ಕೆ ನನಗೆ ಮೈತ್ರಿ ಟಿಕೆಟ್ ಸಿಗುವ ಬಗ್ಗೆ ಪೂರ್ಣ ವಿಶ್ವಾಸವಿದೆ. ಲೋಕಸಭಾ ಅವಧಿ ಮುಗಿದ ಬಳಿಕ ನಾನು ಬಿಜೆಪಿ ಪಕ್ಷ ಸೇರ್ಪಡೆಯಾಗುತ್ತೇನೆ. ಕೆಲವೊಂದು ತಾಂತ್ರಿಕ ಸಮಸ್ಯೆಗಳಿರುವುದರಿಂದ ಇಷ್ಟು ದಿನ ಸೇರಲಾಗುತ್ತಿಲ್ಲ ಎಂದು ಸಂಸದೆ ಸುಮಲತಾ ತಿಳಿಸಿದರು. https://kannadanewsnow.com/kannada/india-three-other-countries-to-contribute-more-than-half-of-global-economic-growth-in-next-five-years-imf/ ಬಿಜೆಪಿ ಪಕ್ಷ ಅಧಿಕೃತವಾಗಿ ಘೋಷಣೆ ಮಾಡುವವರೆಗೂ ಯಾವುದೂ ಫೈನಲ್ ಆಗುವುದಿಲ್ಲ. ಟಿಕೆಟ್ ಸಿಗಲಿದೆ ಎಂಬ ವಿಶ್ವಾಸ ನನಗಿದೆ. ಅದು…

Read More

ಬೆಂಗಳೂರು : ವಾರದ ಹಿಂದಷ್ಟೇ ಕೆಜಿಗೆ 500 ರೂ. ಇದ್ದ ಬೆಳ್ಳುಳ್ಳಿ ದರ ಈಗ ಕೆಜಿಗೆ 150ರಿಂದ 200 ರೂ.ಗಳಿಗೆ ಇಳಿದಿದೆ. ಇದರಿಂದಾಗಿ, ಅನೇಕ ಕುಟುಂಬಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಇತ್ತೀಚೆಗೆ ಬೆಳ್ಳುಳ್ಳಿ ಬೆಲೆ ಏರಿಕೆಯಾಗಿದ್ದರಿಂದ ಅಡುಗೆಗೆ ಬೆಳ್ಳುಳ್ಳಿಯನ್ನು ಬಂಗಾರದಂತೆ ಉಪಯೋಗಿಸುವ ಹಾಗಾಗಿತ್ತು. ಉತ್ತರ ಭಾರತದಿಂದ ಬೆಳ್ಳುಳ್ಳಿ ಯಥೇಚ್ಛವಾಗಿ ರಾಜ್ಯಕ್ಕೆ ಬಂದಿದ್ದರಿಂದ ಬೆಲೆ ಇಳಿಕೆಗೆ ಅದು ಸಹಕಾರಿಯಾಗಿದೆ ಎಂದು ತಿಳಿದುಬಂದಿದೆ. https://kannadanewsnow.com/kannada/no-reduction-in-alimony-paid-to-wife-on-pretext-of-unnecessary-expenses-hc/ ಮಧ್ಯಪ್ರದೇಶ, ರಾಜಾಸ್ಥಾನ, ಗುಜರಾತ್‌ ಮತ್ತಿತರ ರಾಜ್ಯಗಳಲ್ಲಿ ಯಥೇಚ್ಛವಾಗಿ ಬೆಳೆಯಲಾಗಿದೆ. ಹೀಗಾಗಿ, ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗಿದ್ದು, ಬೆಲೆಗಳು ಇಳಿಕೆಯಾಗಿವೆ.ಹೋಟೆಲ್‌ಗಳಲ್ಲಿಕೂಡ ಬೆಳ್ಳುಳ್ಳಿ ಬಳಕೆ ಎಂದಿನಂತಿರಲಿಲ್ಲ. ಆದರೆ ಈಗ ಬೆಳ್ಳುಳ್ಳಿ ದರದಲ್ಲಿಭಾರೀ ಇಳಿಕೆಯಾಗಿದ್ದು, ಅಗತ್ಯವಿರುವಷ್ಟು ಪ್ರಮಾಣದಲ್ಲಿ ಬಳಸಬಹುದಾಗಿದೆ. ದೇಶಾದ್ಯಂತ ಬೆಳ್ಳುಳ್ಳಿ ಕೊರತೆಯಿತ್ತು. ಉತ್ತರ ಭಾರತದ ರಾಜ್ಯಗಳಿಂದ ಬೆಳ್ಳುಳ್ಳಿ ಬೆಳೆ ಸಾಕಷ್ಟು ಪ್ರಮಾಣದಲ್ಲಿ ಬಂದಿದೆ. https://kannadanewsnow.com/kannada/state-govt-not-handling-water-crisis-properly-mp-tejasvi-surya/ ಬೆಳ್ಳುಳ್ಳಿ ದರ ಭಾರೀ ಪ್ರಮಾಣದಲ್ಲಿಇಳಿಕೆಯಾಗಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ, ಬೆಳ್ಳುಳ್ಳಿ ದರ ಏರಿಕೆಯಾಗುವುದಿಲ್ಲ. ಹೀಗಾಗಿ, ಸರಕಾರ ಖರೀದಿ ಕೇಂದ್ರಗಳನ್ನು ತೆರೆದು ರೈತರಿಂದ ಕನಿಷ್ಠ ಬೆಂಬಲ ಬೆಲೆಯಡಿ…

Read More

ಬೆಂಗಳೂರು: ಪತಿಯು ಪತ್ನಿಗೆ ನೀಡುವ ಜೀವನಾಂಶದಲ್ಲಿ ವೈಯಕ್ತಿಕ ಪ್ರಯೋಜನದ ಖರ್ಚು-ವೆಚ್ಚದ ನೆಪ ಹೇಳಿ ಜೀವನಾಂಶದ ಮೊತ್ತ ಕಡಿತಗೊಳಿಸಲಾಗದು ಎಂದಿರುವ ಹೈಕೋರ್ಟ್, ಈ ನಿಟ್ಟಿನಲ್ಲಿ ನೀಡಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ್ದಕ್ಕೆ ಅರ್ಜಿದಾರರಿಗೆ 15 ಸಾವಿರ ರೂ. ದಂಡ ವಿಧಿಸಿದೆ ಎಂದು ತಿಳಿದುಬಂದಿದೆ. https://kannadanewsnow.com/kannada/state-govt-not-handling-water-crisis-properly-mp-tejasvi-surya/ ಪತ್ನಿಯ ಜೀವನಾಂಶಕ್ಕಾಗಿ ಮಾಸಿಕ 15 ಸಾವಿರ ಹಾಗೂ ಮಕ್ಕಳ ಪೋಷಣೆಗೆ 10 ಸಾವಿರ ರೂ.ಗಳನ್ನು ಪಾವತಿಸುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿದ್ದ ವಿಧಿಸಿದ ಹಂಚಾಟೆ ಸಂಜೀವಕುಮಾ‌ರ್ ಅವರಿದ್ದ ಹೈಕೋರ್ಟ್ ನ್ಯಾಯಪೀಠ ಈ ಆದೇಶ ನೀಡಿದೆ.ಅರ್ಜಿದಾರರು ತಾವು ಪಡೆದುಕೊಳ್ಳುತ್ತಿರುವ ವೇತನದ ರಶೀದಿಯನ್ನು ನ್ಯಾಯಪೀಠದ ಮುಂದೆ ಪ್ರಸುತ್ತಪಡಿಸಿದರು. ಭವಿಷ್ಯನಿಧಿ, ಮನೆ ಬಾಡಿಗೆ, ಪೀಠೋಪಕರಣ ಗಳಿಗೆ ಭರಿಸುತ್ತಿರುವ ವೆಚ್ಚವನ್ನು ಪರಿಗಣಿಸಿ ಜೀವನಾಂಶ ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು. https://kannadanewsnow.com/kannada/mumbai-customs-officials-seize-2-8-kg-of-illegal-gold-worth-rs-1-4-crore/ ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ವೇತನದಿಂದ ವೃತ್ತಿಪರ ತೆರಿಗೆ ಮತ್ತು ಆದಾಯ ತೆರಿಗೆ ಕಡಿತವಾಗುತ್ತಿದ್ದು, ಇನ್ನುಳಿದ ಎಲ್‌ಐಸಿ, ಪೀಠೋಪಕರಣಗಳ ಖರೀದಿ ಇನ್ನಿತರಗಳೆಲ್ಲವೂ ವೈಯಕ್ತಿಕ ಪ್ರಯೋಜನಕ್ಕಾಗಿ ಕಡಿತಗೊಳ್ಳುತ್ತಿದೆ. ಈ ನೆಪ ಹೇಳಿ…

Read More

ಮುಂಬೈ : ಮುಂಬೈನಲ್ಲಿ ಕಸ್ಟಮ್ಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ ಮೂಲಕ ಮುಂಬೈ ಏರ್ಪೋರ್ಟ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 2.8 ಕೆ.ಜಿ ಚಿನ್ನ ಚಿನ್ನವನ್ನು ಜಪ್ತಿ ಮಾಡಿಕೊಂಡಿದ್ದರೆ. https://kannadanewsnow.com/kannada/breaking-home-minister-parameshwara-announces-ban-on-sale-of-acid-in-state/ ಮೂರು ಪ್ರತ್ಯೇಕ ಕೇಸ್ಗಳಲ್ಲಿ 1.4 ಕೋಟಿ ಮೌಲ್ಯದ 2.8 ಕೆಜಿ ಅಕ್ರಮ ಚಿನ್ನವನ್ನು ಜಪ್ತಿ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆರೋಪಿಗಳು ಬಟ್ಟೆಗಳು ಹಾಗೂ ಬ್ಯಾಗ್ ಗಳನ್ನು ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದರು. https://kannadanewsnow.com/kannada/bengaluru-metros-yellow-line-deadline-postponed-to-year-end-trial-run-to-begin-this-weekend/ ಈ ವೇಳೆ ವಿಚಾರಣೆ ಸಂದರ್ಭದಲ್ಲಿ ಕಸ್ಟಮ್ಸ್ ಅಧಿಕಾರಿಗಳಿಗೆ ಆರೋಪಿಗಳ ಮೇಲೆ ಅನುಮಾನ ಮೂಡಿದೆ. ಈ ವೇಳೆ ಹೆಚ್ಚಿನ ತಪಾಸಣೆ ಮಾಡಿದಾಗ ಬಟ್ಟೆ ಹಾಗೂ ಬ್ಯಾಗಗಳಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದಿದ್ದು ಕಂಡುಬಂದಿದ್ದು, ಇದೀಗ ಅಧಿಕಾರಿಗಳು ಚಿನ್ನವನ್ನು ಜಪ್ತಿ ಮಾಡಿಕೊಂಡು ಆರೋಪಿಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Read More