Subscribe to Updates
Get the latest creative news from FooBar about art, design and business.
Author: ಸುರೇಶ್
"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು
BIG NEWS : 2023ರಲ್ಲೇ ಸಿದ್ದರಾಮಯ್ಯ ಬಿ ಫಾರಂ ನೀಡಿದ್ದರು, ನಾನು ಬಯಸಿದ್ದರೆ ಆಗಲೇ ಶಾಸಕನಾಗುತ್ತಿದ್ದೆ : ಝೈದ್ ಖಾನ್
ಮೈಸೂರು : ಶಾಸಕ ರಿಜ್ವಾನ್ ಆರ್ಷದ್ ಗೆ ಟಿಕೆಟ್ ಕೊಡಿಸಿದ್ದು, ಜಮೀರ್ ಅಹ್ಮದ್ ಖಾನ್ ಎಂದು ಮೈಸೂರು ನಲ್ಲಿ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ ಹೇಳಿಕೆ ನೀಡಿದರು. ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ರಿಜ್ವಾನ್ ರಿಜ್ವಾನ್ ಆರ್ಷದ್ ವೆ ಜಮೀರ್ ಅಹ್ಮದ್ ಖಾನ್ ಟಿಕೆಟ್ ಕೊಡಿಸಿದ್ದಾರೆ ಎಂದರು. 2023ರಲ್ಲಿ ನನಗೆ ಸಿದ್ದರಾಮಯ್ಯ ಅವರು ಬಿ ಫಾರಂ ನೀಡಿದ್ದರು. ಆದರೆ ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ. ಶಿವಾಜಿನಗರ ಕ್ಷೇತ್ರದ ಶಾಸಕ ಶಾಸಕ ರಿಜ್ವಾನ್ ಗೆ ಟಿಕೆಟ್ ಕೊಡಿಸಿದ್ದೆ ನಮ್ಮ ತಂದೆ. ಚುನಾವಣೆಯಲ್ಲಿ ರಿಜ್ವಾನ್ ಆರ್ಷದ್ ಅವರನ್ನು ಗೆಲ್ಲಿಸಿದ್ದು ಸಹ ನಮ್ಮ ತಂದೆ ಶಿವಾಜಿನಗರ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತದಾರರು ಹೆಚ್ಚಾಗಿದ್ದಾರೆ. ನಮ್ಮ ಮನೆ ಸಹ ಶಿವಾಜಿನಗರ ಕ್ಷೇತ್ರದಲ್ಲಿಯೇ ಇದೆ ನಾನು ಬಯಸಿದ್ದರೆ ಆಗಲೇ ಶಾಸಕನಾಗುತ್ತಿದ್ದೆ ಎಂದು ಜೈದ್ಖಾನ್ ಹೇಳಿಕೆ ನೀಡಿರುವ ವಿಡಿಯೋ ವೈರಲ್ ಆಗಿದೆ.
ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು, ಪ್ಲಾಸ್ಟಿಕ್ ಗೋದಾಮು ಒಂದು ಬೆಂಕಿಯ ಕೆನ್ನಾಲಿಗೆಗೆ ಹೊತ್ತಿ ಉರಿದಿರುವ ಘಟನೆ ಬೆಂಗಳೂರಿನ ಬೇಗೂರಿನಲ್ಲಿ ನಡೆದಿದೆ. ಬೇಗುರಿನ ಅಕ್ಷಯನಗರದಲ್ಲಿರುವ ಹಳೆಯ ಪ್ಲಾಸ್ಟಿಕ್ ಗೋದಾಮಿನಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ನಾಲ್ಕು ಅಗ್ನಿಶಾಮಕದಳ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದ್ದು, ಗೋದಾಮಿನಲ್ಲಿ ಇರುವ ಪ್ಲಾಸ್ಟಿಕ್ ವಸ್ತುಗಳು ದಗದಗನೆ ಹೊತ್ತಿ ಉರಿದಿವೆ. ಶಾರ್ಟ್ ಸರ್ಕ್ಯೂಟ್ ನಿಂದ ಈ ಒಂದು ಅಗ್ನಿ ದುರಂತ ಸಂಭವಿಸಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.
ಬೆಂಗಳೂರು : ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಇದೀಗ ಬಿಎಂಆರ್‌ಸಿಎಲ್ ಮತ್ತೊಂದು ಸಿಹಿ ಸುದ್ದಿ ನೀಡಿದ್ದು , ಇಂದಿನಿಂದ ನಮ್ಮ ಮೆಟ್ರೋ ಪ್ರಯಾಣಿಕರಿಗಾಗಿ ಬಿಎಂಆರ್‌ಸಿಎಲ್ 1, 3 ಹಾಗೂ 5 ದಿನಗಳ ಅನ್ಸಿಮಿಟೆಡ್ ಕ್ಯೂಆರ್ ಕೋಡ್ ಪಾಸ್ ಸೇವೆ ಆರಂಭಿಸಿದೆ. ಇದುವರೆಗೆ ಅನಿಯಮಿತ ಪ್ರಯಾಣ ಪಾಸ್‌ಗಳು, ಕೇವಲ ಕಾಂಟ್ಯಾಕ್ಟ್‌ಲೆಸ್ ಸ್ಮಾರ್ಟ್ ಕಾರ್ಡ್‌ಗಳ (ಸಿಎಸ್‌ಸಿ) ಮೂಲಕವೇ ಲಭ್ಯವಾಗುತ್ತಿದ್ದು, ₹50 ಭದ್ರತಾ ಠೇವಣಿ ಪಾವತಿಸುವುದು ಕಡ್ಡಾಯವಾಗಿತ್ತು. ಇದೀಗ ಮೊಬೈಲ್ ಕ್ಯೂಆರ್ ಕೋಡ್ ಪಾಸ್‌ಗಳ ಪರಿಚಯದೊಂದಿಗೆ, ಪಾಸ್‌ಗಳು ಮೊಬೈಲ್ ಫೋನ್‌ಗಳಲ್ಲಿ ಡಿಜಿಟಲ್ ರೂಪದಲ್ಲಿ ಲಭ್ಯವಾಗುತ್ತವೆ. ಪ್ರಯಾಣಿಕರಿಗೆ ಯಾವುದೇ ಭದ್ರತಾ ಠೇವಣಿ ಪಾವತಿಸುವ ಅಗತ್ಯವಿರುವುದಿಲ್ಲ. ಪಾಸ್‌ಗಳನ್ನು ನಮ್ಮ ಮೆಟ್ರೋ ಅಧಿಕೃತ ಆಪ್ ಮೂಲಕ ಖರೀದಿಸಬಹುದು. ಇತರ ಮೊಬೈಲ್ ಅಪ್ಲಿಕೇಶನ್‌ಗಳಲ್ಲಿ ಶೀಘ್ರದಲ್ಲೇ ಪರಿಚಯಿಸಲಾಗುತ್ತದೆ. ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಪ್ರದರ್ಶಿಸಲಾದ ಕ್ಯೂಆರ್ ಕೋಡ್ ಅನ್ನು ಸ್ವಯಂಚಾಲಿತ ಸಂಗ್ರಹ (ಎಎಫ್‌ಸಿ) ಗೇಟ್‌ಗಳಲ್ಲಿ ಸ್ಕ್ಯಾನ್ ಮಾಡಿ ಪ್ರವೇಶ ಮತ್ತು ನಿರ್ಗಮನ ಪಡೆಯಬಹುದು. ಮೆಟ್ರೋ ದಿನದ ಪಾಸ್ ದರಗಳು 1 ದಿನದ ಪಾಸ್ -…
ಬೆಂಗಳೂರು : ಮಕರ ಸಂಕ್ರಾಂತಿ ಅಂಗವಾಗಿ ರಾಜ್ಯದ ಎಲ್ಲ ದೇಗುಲಗಳಲ್ಲಿ ಎಳ್ಳು ಬೆಲ್ಲ ವಿತರಣೆಗೆ ಧಾರ್ಮಿಕ ದತ್ತಿ ಇಲಾಖೆಯ ಎಲ್ಲಾ ದೇಗುಲಗಳಿಗೆ ಇದೀಗ ಸುತ್ತೋಲೆ ಹೊರಡಿಸಲಾಗಿದೆ. ದೇವರ ದರ್ಶನಕ್ಕೆ ಬರುವ ಎಲ್ಲಾ ಭಕ್ತರಿಗೆ ಎಳ್ಳು ಬೆಲ್ಲವಿಕರಿಸಬೇಕು ದೇವರಿಗೆ ನೈವೇದ್ಯ ಅರ್ಪಿಸಿದ ನಂತರ ಭಕ್ತರಿಗೆ ಎಳ್ಳು ಬೆಲ್ಲ ವಿತರಿಸಬೇಕು. ಸರ್ಕಾರದ ಲಾಂಛನ ಮುದ್ರಿಸಿದ ಕಾಗದ ಲಕೋಟೆಯಲ್ಲಿ ವಿತರಿಸಿ. ಪ್ರತಿಯೊಬ್ಬರಿಗೆ ಕನಿಷ್ಠ 50 ಗ್ರಾಂ ಎಳ್ಳು ಬೆಲ್ಲ ನೀಡುವಂತೆ ಸೂಚನೆ ನೀಡಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯ ಎಲ್ಲಾ ದೇಗುಲಗಳಿಗೆ ಈ ಕುರಿತು ಸುತ್ತೋಲೆ ಹೊರಡಿಸಲಾಗಿದೆ. ಹಾಗಾಗಿ ಎಲ್ಲಾಧಿ ಗುಣಗಳಲ್ಲಿ ಬರುವ ಭಕ್ತಾದಿಗಳಿಗೆ 50 ಗ್ರಾಂ ಎಳ್ಳುಬೆಲ್ಲ ವಿತರಿಸಬೇಕು ಎಂದು ಸೂಚಿಸಲಾಗಿದೆ.
ಬೆಂಗಳೂರು : ಈ ವರ್ಷದ ಮೊದಲ ಹಬ್ಬ ಸಂಕ್ರಾಂತಿ. ಪ್ರತಿವರ್ಷದಂತೆ ಈ ವರ್ಷವೂ ಗವಿಗಂಗಾಧರ ದೇವಾಲಯ ವಿಶೇಷ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ. ಸಂಕ್ರಾತಿಯಂದು ಸೂರ್ಯ ದಕ್ಷಿಣ ಪಥದಿಂದ ಉತ್ತರ ಪಥಕ್ಕೆ ಸಂಚಲನ ಮಾಡುವ ಶುಭಘಳಿಗೆ. ಈ ವೇಳೆ ಬೆಂಗಳೂರಿನ ಗವಿಪುರಂನಲ್ಲಿರುವ ಗವಿಗಂಗಾಧರೇಶ್ವರ ದೇಗುಲದ ಶಿವನ ಮೂರ್ತಿಯನ್ನು ಸೂರ್ಯನ ಕಿರಣಗಳು ಸ್ಪರ್ಶಿಸಲಿವೆ. ಇದನ್ನು ಶಿವನಿಗೆ ಸೂರ್ಯದೇವ ಸಲ್ಲಿಸೋ ಪೂಜೆ ಅಂತಾ ನಂಬಿಕೆಯಿದ್ದು, ಈ ಬಾರಿ ಸಂಜೆ 5:02 ರಿಂದ 5:04ರವರೆಗೆ ಅಂದರೆ ಎರಡು ನಿಮಿಷಗಳ ಕಾಲ ಶಿವನಿಗೆ ಭಾಸ್ಕರ ನಮಿಸಲಿದ್ದಾನೆ. ಇದನ್ನು ‘ಸೂರ್ಯನ ಅಭಿಷೇಕ’ ಎಂದೇ ಕರೆಯಲಾಗುತ್ತದೆ. ಈ ಕಿರಣಗಳು ನಂದಿಯ ಕೊಂಬುಗಳ ಮಧ್ಯದಿಂದ ಹೋಗಿ ಗರ್ಭಗುಡಿಯೊಳಗಿರುವ ಶಿವಲಿಂಗವನ್ನು ತಲುಪುವ ಮೂಲಕ ದೇವಸ್ಥಾನವನ್ನು ಬೆಳಗಿಸುತ್ತದೆ. ಈ ಪವಾಡವನ್ನು ಕಣ್ತುಂಬಿಕೊಳ್ಳಲು ರಾಜ್ಯದ ಅನೇಕ ಭಾಗಗಳಿಂದ ಭಕ್ತರು ಭೇಟಿ ನೀಡುತ್ತಾರೆ. ಈ ಪವಾಡವನ್ನು 5 ರಿಂದ 10 ನಿಮಿಷಗಳ ಕಾಲ ನಡೆಯುತ್ತದೆ. ದೇವಸ್ಥಾನದ ಪ್ರಧಾನ ಅರ್ಚಕರಾದ ಸೋಮಸುಂದರ ದೀಕ್ಷಿತ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. ಪ್ರತಿ…
ಬೆಂಗಳೂರು : ಮಹರ್ಷಿ ವಾಲ್ಮೀಕಿ ನಿಗಮದ ಹಗರಣ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರಗೆ ಬಿಗ್ ರಿಲೀಫ್ ಎನ್ನುವಂತೆ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ. ಮಹರ್ಷಿ ವಾಲ್ಮೀಕಿ ನಿಗಮದ ಹಗರಣದಲ್ಲಿ ಬಂಧನದ ಭೀತಿ ಎದುರಾಗಿದೆ. ಈ ಹಿನ್ನೆಲೆ ಬಿ ನಾಗೇಂದ್ರ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಈಗಾಗಲೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಜಾರಿ ನಿರ್ದೇಶನಾಲಯ ಕೂಡ ಮೇಲಿಂದ ಮೇಲೆ ಜಾರಣೆ ನಡೆಸುತ್ತಿದೆ. ಹಾಗಾಗಿ ಬಿ ನಾಗೇಂದ್ರ ಕೋರ್ಟ್ ಮೊರೆ ಹೋಗಿದ್ದಾರೆ ಈಗಾಗಲೇ ಬಹಳ ದಿನಗಳ ಕಾಲ ಜೈಲಿನಲ್ಲಿ ಇದ್ದು ಬಂದಿದ್ದಾರೆ. ಮತ್ತೊಮ್ಮೆ ಬಂಧನದ ಭೀತಿ ಹಿನ್ನೆಲೆ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೊರೆ ಹೋಗಿದ್ದು, ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದಿಗೆ ಆದೇಶ ಕಾಯ್ದಿರಿಸಿದೆ. ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದಂತ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಲಾಯಿತು. ವಾದ ಪ್ರತಿವಾದವನ್ನು ಆಲಿಸಿದಂತ ನ್ಯಾಯಾಲಯವು ಮಹರ್ಷಿ ವಾಲ್ಮೀಕಿ ನಿಗಮದ ಹಗರಣ ಕೇಸಲ್ಲಿ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರಗೆ…
ಬೆಂಗಳೂರು : ಜನವರಿ.22ರ ಬೆಳಗ್ಗೆ 11 ಗಂಟೆಯಿಂದ ವಿಧಾನ ಮಂಡಲದ ಅಧಿವೇಶನ ನಡೆಸಲು ರಾಜ್ಯ ಸಂಪುಟ ಸಭೆಯಲ್ಲಿ ನಿರ್ಧರಿಸಿರುವುದಾಗಿ ಸಚಿವ ಹೆಚ್.ಕೆ ಪಾಟೀಲ್ ತಿಳಿಸಿದ್ದಾರೆ. ಇಂದು ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ಜನವರಿ.22ರಿಂದ ವಿಧಾನಮಂಡಲ ಅಧಿವೇಶನ ನಡೆಸಲು ಸಂಪುಟ ಸಭಎಯಲ್ಲಿ ನಿರ್ಧರಿಸಲಾಗಿದೆ. ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ರಾಜ್ಯಪಾಲರ ಭಾಷಣ ಅನುಮೋದಿಸಲು ಸಿಎಂಗೆ ಪರಮಾಧಿಕಾರ ನೀಡಲಾಗಿದೆ ಎಂದರು. ವಿಬಿ ಜಿ ರಾಮ್ ಜಿ ಪರಿಣಾಮಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲಾಗುತ್ತದೆ. ವಿಧಾನ ಮಂಡಲ ಅಧಿವೇಶನದಲ್ಲಿ ಚರ್ಚಿಸಿ ನಿರ್ಣಯಿಸಲು ನಿರ್ಧರಿಸಲಾಗಿದೆ.ಜನವರಿ.22ರಿಂದ 31ರವರೆಗೆ ವಿಧಾನಮಂಡಲ ಅಧಿವೇಶನಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದಾಗಿ ತಿಳಿಸಿದರು.
ಬೆಂಗಳೂರು : ಜನವರಿ.22ರಂದು ವಿಶೇಷ ಅಧಿವೇಶನ ಕರೆಯೋದಕ್ಕೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು. ಈ ಸಂಪುಟ ಸಭೆಯಲ್ಲಿ ಜನವರಿ.22ರ ಬೆಳಗ್ಗೆ 11 ಗಂಟೆಯಿಂದ ವಿಶೇಷ ಅಧಿವೇಶನ ಕರೆಯಲು ನಿರ್ಧರ ಕೈಗೊಳ್ಳಲಾಗಿದೆ. ವಿಶೇಷ ಅಧಿವೇಶನ ನಡೆಸಲು ಇಂದಿನ ರಾಜ್ಯ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಜನವರಿ.22ರಿಂದ ನಡೆಯಲಿರುವಂತ ವಿಶೇಷ ಅಧಿವೇಶನದಲ್ಲಿ ಯಾವೆಲ್ಲ ವಿಚಾರಗಳನ್ನು ಚರ್ಚಿಸಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಬೆಂಗಳೂರು : ಬೆಂಗಳೂರಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಪ್ರತ್ಯೇಕ ಕೇಸ್ ನಲ್ಲಿ ಮಾದಕ ವಸ್ತುಗಳು ಮತ್ತು ಆನೆದಂತ ವಿಗ್ರಹಗಳನ್ನು ಜಪ್ತಿ ಮಾಡಿದ್ದು ಇವುಗಳ ಒಟ್ಟೂ ಮೌಲ್ಯ ಸುಮಾರು 1.2 ಕೋಟಿ ಎನ್ನಲಾಗಿದೆ. ಸಿಸಿಬಿ ಮಾದಕದ್ರವ್ಯ ನಿಗ್ರಹ ದಳ ಡ್ರಗ್ಸ್ ಡೀಲಿಂಗ್ ಜಾಲ ಭೇದಿಸಿ ಕೊಕೇನ್, ಹೈಡ್ರೋ ಗಾಂಜಾ ವಶಪಡಿಸಿಕೊಂಡರೆ, ಜಿಗಣಿ ಪೊಲೀಸರು ಕಾನೂನುಬಾಹಿರ ಆನೆದಂತ ಮಾರಾಟ ಜಾಲವನ್ನು ಪತ್ತೆಹಚ್ಚಿ ಇಬ್ಬರನ್ನು ಬಂಧಿಸಿದ್ದಾರೆ. ಡ್ರಗ್ ಡಿಲೀಂಗ್ನಲ್ಲಿ ತೊಡಗಿದ್ದ ಒರ್ವ ವಿದೇಶಿ ಪ್ರಜೆ ಸೇರಿ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದ್ದು, ಬಂಧಿತರಿಂದ 1 ಕೋಟಿ ಮೌಲ್ಯದ 101 ಗ್ರಾಂ ಕೊಕೇನ್ ಮತ್ತು 481 ಗ್ರಾಂ ಹೈಡ್ರೋ ಗಾಂಜಾ ಸೀಜ್ ಮಾಡಲಾಗಿದೆ. ಬೇಗೂರು ವ್ಯಾಪ್ತಿಯಲ್ಲಿ ವಾಸವಿದ್ದ ಆಕಾಶ್ ಮತ್ತು ಉಚೆ ನಡುರಿ ಬಂಧಿತರಾಗಿದ್ದು, ಪರಿಚಯಸ್ಥರು, ವಿದ್ಯಾರ್ಥಿಗಳು ಮತ್ತು ಐಟಿಬಿಟಿ ಉದ್ಯೋಗಿಗಳಿಗೆ ಹೆಚ್ಚಿನ ಬೆಲೆಗೆ ಇವರು ಡ್ರಗ್ ಮಾರಾಟ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ. ಮತ್ತೊಂದು ಪ್ರಕರಣದಲ್ಲಿ ಆನೆ ದಂತದಿಂದ ಮಾಡಿದ ವಿಗ್ರಹ ಮಾರಾಟ ಜಾಲ ಪತ್ತೆ…
ನವದೆಹಲಿ : ‘ರಾಹುಕೇತು’ ಚಿತ್ರದಲ್ಲಿ ಕಾಂತಾರ ದೈವದ ಕೂಗಿನ ಅನುಕರಣೆಗೆ ಬ್ರೇಕ್ ಹಾಕಲಾಗಿದೆ. ಸಿನಿಮಾದಲ್ಲಿ ದೈವದ ಧ್ವನಿಗೆ ಸೆನ್ಸಾರ್ ಮಂಡಳಿ ಇದೀಗ ಬ್ರೇಕ್ ಹಾಕಿದೆ. ಪುಲ್ಕಿತ್ ಸಾಮ್ರಾಟ್ ಹಾಗು ವರುಣ್ ಶರ್ಮ ಅಭಿನಯದ ರಾಹುಕೇತು ಚಿತ್ರದಲ್ಲಿ ಕಾಂತಾರ ಚಿತ್ರದ ದೈವದ ಕೂಗನ್ನು ಈ ಚಿತ್ರದಲ್ಲಿ ಬಳಸಲಾಗಿತ್ತು. ಇದೀಗ ಈ ಶಬ್ದವನ್ನು ಬದಲಿಸುವಂತೆ ಸೆನ್ಸಾರ್ ಮಂಡಳಿ ಸೂಚನೆ ನೀಡಿದೆ. ಚಿತ್ರದಲ್ಲೇ ಮಧ್ಯದ ಬೆರಳು ತೋರಿಸಲಾಗಿದೆ. ಮಧ್ಯದ ಬೆರಳಿನ ಸನ್ನೆ ಬದಲಿಸಲು ಸೂಚನೆ ನೀಡಿದೆ. ಚಿತ್ರದಲ್ಲಿ ಬಳಸಿದ ಸಂಸ್ಕೃತ ಶ್ಲೋಕಕ್ಕೆ ದೃಢೀಕರಣ ಪತ್ರ ಸಲ್ಲಿಸಲು ಸೂಚನೆ ನೀಡಿದೆ. ಜನವರಿ 16ರಂದು ರಾಹುಕೇತು ಸಿನಿಮಾ ಬಿಡುಗಡೆ ಆಗಲಿದೆ.














