Author: kannadanewsnow05

ದಕ್ಷಿಣಕನ್ನಡ : ಅಂಬುಲೆನ್ಸ್ ಗೆ ದಾರಿ ಬಿಡದೆ ಪುಂಡಾಟ ಮೆರೆದಿದ್ದ ಬೈಕ್ ಸವಾರನನ್ನು ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ. ಬೆಟ್ಟಂಪಾಡಿ ಗ್ರಾಮದಲ್ಲಿ ಮೊಹಮ್ಮದ್ ಮನ್ಸೂರ್ (38) ಇದೀಗ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ನಿವಾಸಿಯಾಗಿರುವ ಮಹಮ್ಮದ್ KA22 C 1382 ಸಗೆಯ ದ್ವಿಚಕ್ರ ವಾಹನ ಸಹ ಜಪ್ತಿ ಮಾಡಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ನಿನ್ನೆ ಬಿಸಿಲೆ ಘಾಟ್ ಬಳಿ ಅಪಘಾತ ನಡೆದಿತ್ತು. ಗಯಾಳುಗಳನ್ನು ಆಂಬುಲೆನ್ಸ್ ಚಾಲಕ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ. ಈ ವೇಳೆ ದಾರಿ ಬಿಡದೆ ಬೈಕ್ ಸವಾರ ಪುಂಡಾಟ ಮೆರೆದಿದ್ದ. ಮೂರ್ನಾಲ್ಕು ಕಿಲೋಮೀಟರ್ ವರೆಗೂ ದಾರಿ ಬಿಡದೆ ಮೊಹಮ್ಮದ್ ಪುಂಡಾಟ ಮೆರೆದಿದ್ದಾನೆ. ಬಂಟ್ವಾಳ ತಾಲೂಕಿನ ಬಿಸಿ ರೋಡ್ ಬಳಿ ಈ ಒಂದು ಘಟನೆ ನಡೆದಿತ್ತು ವಿಡಿಯೋ ಮಾಡಿ ಆಂಬುಲೆನ್ಸ್ ಗೆ ಸಿಬ್ಬಂದಿ ವೈರಲ್ ಮಾಡಿದ್ದರು.

Read More

ಬೆಂಗಳೂರು : ಜಿಲ್ಲೆಯಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮತ್ತಿಬ್ಬರು ಸಾವು ಬದುಕಿನ ನಡುವೆ ಹೋರಾಡುತ್ತಿರುವುದಾಗಿ ತಿಳಿದು ಬಂದಿದೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಗ್ಗನಹಳ್ಳಿಯಲ್ಲಿ ವಿಷ ಸೇವಿಸಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಹೆಗ್ಗನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಒಂದೇ ಕುಟುಂಬದ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ತಂದೆ ಹಿರಿಮಗ ಸಾವನ್ನಪ್ಪಿದ್ದರೆ, ತಾಯಿ ಹಾಗು ಕಿರಿ ಮಗನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

Read More

ನವದೆಹಲಿ : ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶವಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ತುರ್ತು ಭೂಸ್ಪರ್ಶವಾಗಿದೆ ಸಿಲಿಗುರಿಯ ಬಾಗ್ಡೋಗ್ರಾ ಏರ್ಪೋರ್ಟ್ ನಲ್ಲಿ ಈ ಒಂದು ಘಟನೆ ಸಂಭವಿಸಿದೆ. ಪ್ರತಿಕೂಲ ಹವಾಮಾನದಿಂದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೂತಾನ್‌ಗೆ ಕರೆದೊಯ್ಯುತ್ತಿದ್ದ ವಿಮಾನ ಗುರುವಾರ ತುರ್ತು ಭೂಸ್ಪರ್ಶ ಮಾಡಿತು. ಅಧಿಕೃತ ಭೇಟಿಗಾಗಿ ಥಿಂಪುವಿಗೆ ತೆರಳುತ್ತಿದ್ದ ಸಚಿವರು, ಸಿಲಿಗುರಿಯಲ್ಲಿ ಭಾರೀ ಮಳೆ ಮತ್ತು ಕಡಿಮೆ ಒತ್ತಡದ ಹಿನ್ನೆಲೆಯಲ್ಲಿ ಬಾಗ್ಡೋಗ್ರಾ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಯಬೇಕಾಯಿತು. ಈ ರಾತ್ರಿ ಅಲ್ಲಿಯೇ ತಂಗಲಿದ್ದಾರೆ. ಮೂಲಗಳ ಪ್ರಕಾರ, ಸಚಿವರ ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ತೀವ್ರ ಪ್ರಕ್ಷುಬ್ಧತೆಯನ್ನು ಎದುರಿಸಿತು, ಇದು ಒರಟು ಹವಾಮಾನ ಮತ್ತು ಹಿಮಾಲಯನ್ ಮಾರ್ಗದಲ್ಲಿ ಗೋಚರತೆ ಕಡಿಮೆಯಾಗಲು ಕಾರಣವಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಪೈಲಟ್ ವಿಮಾನವನ್ನು ಬಾಗ್ಡೋಗ್ರಾ ವಿಮಾನ ನಿಲ್ದಾಣಕ್ಕೆ ತಿರುಗಿಸಿದರು. ವಿಮಾನ ನಿಲ್ದಾಣದ ಅಧಿಕಾರಿಗಳು ತುರ್ತು ಶಿಷ್ಟಾಚಾರಗಳನ್ನು ತಕ್ಷಣವೇ ಜಾರಿಗೆ ತಂದರು, ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು…

Read More

ಶಿವಮೊಗ್ಗ : ಮಕ್ಕಳ ಜಗಳವನ್ನು ಬಿಡಿಸಲು ಹೋಗಿ ಅಂಗನವಾಡಿ ಸಹಾಯಕಿ ಒಬ್ಬಳು ಬೆಂಕಿಯಲ್ಲಿ ಕಾಸಿದ ಚಾಕುವಿ ನಿಂದ ಮಗುವಿನ ಗಲ್ಲಕ್ಕೆ ಎಳೆದಿದ್ದಾರೆ.ಹೌದು ಮಕ್ಕಳ ಜಗಳ ಬಿಡಿಸಲು ಅಂಗನವಾಡಿ ಸಹಾಯಕಿಯೊಬ್ಬಳು ಬೆಂಕಿಯಲ್ಲಿ ಕಾಸಿದ ಚಾಕುವಿ ನಿಂದ ಮಗುವಿನ ಗಲ್ಲಕ್ಕೆ ಬರೆ ಎಳೆದ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಚಿಕ್ಕಸವಿ ಗ್ರಾಮದಲ್ಲಿ ಗುರುವಾರ ನಡೆದಿದೆ. ಚಿಕ್ಕಸವಿ ಗ್ರಾಮದ ಚಂದ್ರಪ್ಪ ಮತ್ತು ನಂದಿನಿ ದಂಪತಿಯ ಮೂರುವರೆ ವರ್ಷದ ಮಗು ಯೋಧ ಮೂರ್ತಿ, ಬರೆಗೆ ತುತ್ತಾದ ಮಗು. ಚಿಕ್ಕಸವಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ 10 ಮಕ್ಕಳಿದ್ದಾರೆ. ಗುರುವಾರ ಬೆಳಗ್ಗೆ ಎಂದಿನಂತೆ ಮಕ್ಕಳು ಹಾಜರಾಗಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಮಕ್ಕಳು ಜಗಳವಾಡಿದ್ದಾರೆ. ಯೋಧಮೂರ್ತಿ ಇನ್ನೊಬ್ಬ ಮಗುವಿಗೆ ಕಚ್ಚಿದ್ದಾನೆ. ಪರಸ್ಪರ ಜಗಳವಾಡುತ್ತಿದ್ದ ಮಕ್ಕಳನ್ನು ಬಿಡಿಸಬಹುದಾಗಿತ್ತು. ಆದರೆ ಅಂಗನವಾಡಿ ಸಹಾಯಕಿ ಹೇಮಮ್ಮ ಎಂಬುವರು ಚಾಕುವನ್ನು ಬೆಂಕಿಯಲ್ಲಿ ಕಾಸಿ ಯೋಧಮೂರ್ತಿಯ ಗಲ್ಲಕ್ಕೆ ಬರೆ ಎಳೆದಿದ್ದಾರೆ. ಬಿಸಿಯ ಉರಿಯಿಂದ ಅಳತೊಡಗಿದ ಮಗು ಅಸ್ವಸ್ಥಗೊಂಡಿದ್ದು, ಸೊರಬ ಸಾರ್ವಜನಿಕ ಆಸತ್ರೆಗೆ ದಾಖಲಿಸಲಾಗಿದೆ. ಮಗುವಿನ ಪೋಷಕರು ನೀಡಿದ…

Read More

ಬೆಂಗಳೂರು : ನಮ್ಮ ಮೆಟ್ರೊದಲ್ಲಿ ಮೂರನೇ ಬಾರಿ ಅಂಗಾಂಗ ರವಾನಿಸಲಾಗಿದ್ದು, ಯಶವಂತಪುರದ ಸ್ಪರ್ಶ್ ಆಸ್ಪತ್ರೆಯಿಂದ ಗೊರಗುಂಟೆಪಾಳ್ಯ ಮೆಟ್ರೊ ನಿಲ್ದಾಣದ ಮೂಲಕ ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿಗೆ ಸಾಗಾಟ ಮಾಡಲಾಯಿತು. ಅತಿಯಾದ ಒತ್ತಡದಿಂದ ಮಿದುಳಿನಲ್ಲಿ ರಕ್ತಸ್ರಾವ ಉಂಟಾಗಿ ಮಿದುಳು ನಿಷ್ಕ್ರಿಯಗೊಂಡ 33 ವರ್ಷದ ಯುವಕನಿಂದ ಪಡೆದ ಅಂಗಾಂಗವನ್ನು ‘ನಮ್ಮ ಮೆಟ್ರೊ’ ರೈಲಿನಲ್ಲಿ ರವಾನಿಸುವ ಮೂಲಕ ನಾಲ್ವರು ರೋಗಿಗಳಿಗೆ ಯಶಸ್ವಿಯಾಗಿ ಕಸಿ ಶಸ್ತ್ರಚಿಕಿತ್ಸೆ ನಡೆಸಿ ಮರುಜೀವ ನೀಡಲಾಗಿದೆ. ದಾನಿಯು ನಗರದ ಮತ್ತಿಕೆರೆ ನಿವಾಸಿಯಾಗದ್ದು, ಮನೆಯಲ್ಲಿ ಸ್ನಾನ ಮುಗಿಸಿ ಹೊರ ಬಂದವರೇ ತಲೆ ಸುತ್ತಿ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದರು. ಆರಂಭದಲ್ಲಿ ನಿಮ್ಹಾನ್ಸ್‌ ಗೆ ಸೇರಿಸಲಾಗಿತ್ತು. ಆನಂತರ ಸ್ಪರ್ಶ್ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಿಸದೆ ರೋಗಿ ಯ ಮಿದುಳು ನಿಷ್ಕ್ರಿಯಗೊಂಡಿದ್ದಾಗಿ ವೈದ್ಯರು ತಿಳಿ ಸಿದ ಬಳಿಕ ಕುಟುಂಬದವರು ಅಂಗಾಂಗ ದಾನಕ್ಕೆ ಸಮ್ಮ ಮೆಟ್ರೋದಲ್ಲಿ ಅಂಗಾಂಗ ಸಾಗಾಟ ಮಾಡಲಾಯಿತು. 61 ನಿಮಿಷಗಳಲ್ಲಿ ರವಾನೆ: ಯಶವಂತಪುರದ ಸ್ಪರ್ಶ್ ಆಸ್ಪತ್ರೆಯಲ್ಲಿ ದಾನಿಯಿಂದ ಪಡೆದ ಅಂಗಾಂಗಗಳ ಪೈಕಿ ಶ್ವಾಸಕೋಶವನ್ನು ಗೊರಗುಂಟೆಪಾಳ್ಯ ಮೆಟ್ರೋ…

Read More

ಹರ್ಯಾಣ : ರಾಜ್ಯಪಾಲರು ವಿವಿ ಕಾರ್ಯಕ್ರಮಕ್ಕೆ ಬರುವ ದಿನವೇ ಮಹಿಳಾ ಸ್ವಚ್ಚತಾ ಸಿಬ್ಬಂದಿ ತಡವಾಗಿ ಕೆಲಸಕ್ಕೆ ಬಂದರು ಎಂಬ ಕಾರಣಕ್ಕೆ, ಪುರುಷ ಮೇಲ್ವಿಚಾರಕ ಸ್ತ್ರೀಯರ ಬಟ್ಟೆ ಬಿಚ್ಚಿಸಿ, ಮುಟ್ಟು ಪರೀಕ್ಷೆ ನಡೆಸಿದ ಆಘಾತಕಾರಿ ಘಟನೆ ಹರ್ಯಾಣದಲ್ಲಿ ನಡೆದಿದೆ. ಅ.26ರಂದು ರಾಜ್ಯಪಾಲ ಅಸೀಮ್ ಕುಮಾ‌ರ್ ಘೋಷ್ 3 ದಿನಗಳ ಭೇಟಿಗಾಗಿ ಮಹರ್ಷಿ ದಯಾನಂದ್ ವಿವಿಗೆ ಆಗಮಿಸಿದ್ದರು. ಅದೇ ದಿನದಂದು ಕೆಲ ಮಹಿಳಾ ಸಿಬ್ಬಂದಿ ತಡವಾಗಿ ಕೆಲಸಕ್ಕೆ ಬಂದಿದ್ದಾರೆ. ತಾವು ಮುಟ್ಟಾಗಿದ್ದ ಕಾರಣ ಕೆಲಸಕ್ಕೆ ತಡವಾಯಿತು ಎಂದು ಕಾರಣ ಕೊಟ್ಟಿದ್ದಾರೆ. ಇದನ್ನು ಒಪ್ಪದ ವಿಚಾರಕ, ಬೇರೆ ಮಹಿಳೆಯರಿಂದ ಹೆಂಗಸರ ವಸ್ತ್ರ ತೆಗೆಸಿ, ಅವರು ನಿಜವಾಗಿಯೂ ಮುಟ್ಟಾಗಿದ್ದಾರೆಯೇ ಎಂದು ಪರೀಕ್ಷೆ ನಡೆಸಿ, ಸ್ಯಾನಿಟರಿ ಪ್ಯಾಡ್‌ಗಳ ಫೋಟೋ ತೆಗೆದುಕೊಂಡಿದ್ದಾನೆ. ಮೇಲ್ವಿಚಾರಕ ವಶಕ್ಕೆ: ಈ ಒಂದು ಅಮಾನವೀಯ ಘಟನೆಯಿಂದ ತೀವ್ರ ಅವಮಾನಿತರಾದ ಸಂತ್ರಸ್ತರು ಮೇಲ್ವಿಚಾರಕನ ವಿರುದ್ಧ ವಿವಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಪೊಲೀಸರು ಮೇಲ್ವಿಚಾರಕನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Read More

ಬೆಂಗಳೂರು: ಮಂಗಳೂರಿನ ಬಜ್ಜೆಯ ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ನಿಷೇಧಿತ ಸಂಘಟನೆ ಪ್ಯಾಫುಲರ್‌ಫ್ರಂಟ್‌ ಆಫ್ ಇಂಡಿಯಾದ ಮಾಜಿ ಸದಸ್ಯ ಸೇರಿದಂತೆ 11 ಮಂದಿ ವಿರುದ್ಧ NIA ಕೋರ್ಟ್ ಗೆ ಆರೋಪ ಪಟ್ಟಿಯನ್ನು ಸಲ್ಲಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಪರ ಸಂಘಟನೆಗಳ ಸಂಘಟನೆಯಲ್ಲಿ ಸುಹಾಸ್ ಸಕ್ರಿಯವಾಗಿದ್ದ. ಈ ಚಟುವಟಿಕೆಗೆ ಕಡಿವಾಣ ಹಾಕಲು ಆರೋಪಿಗಳು ಸಂಚು ರೂಪಿಸಿ ಸುಹಾಸ್ ಅವರನ್ನು ಕಳೆದ ಮೇ.1 ರಂದು ಆತನ ಮೇಲೆ ಭೀಕರವಾಗಿ ಹಲ್ಲೆ ನಡೆಸಿ ಹತ್ಯೆಗೈದಿದ್ದರು. ಈ ಕೃತ್ಯದ ಮೂಲಕ ಸಮಾಜದಲ್ಲಿ ಭೀಕರ ಭೀತಿಯನ್ನು ಸೃಷ್ಟಿಸಿ ಸಮಾಜದ ಗಮನ ಸೆಳೆಯುವುದಾಗಿತ್ತು ಎಂದು ಎನ್‌ಐಎ ತಿಳಿಸಿದೆ.

Read More

ಬೆಂಗಳೂರು : ರಾಜ್ಯದಲ್ಲಿ ಒಳ ಮೀಸಲಾತಿ ಅನುಷ್ಠಾನಗೊಳಿಸುವ ಕುರಿತು ನೂತನ ಕಾಯ್ದೆ ಜಾರಿ ಸಂಬಂಧ ಕರಡು ನಿಯಮಗಳಿಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಂಗೀಕಾರ ಪಡೆಯಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ ಪಾಟೀಲ್ ಹೇಳಿದ್ದಾರೆ. ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಳಮೀಸಲಾತಿ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಸಮಾಜ ಕಲ್ಯಾಣ ಸಚಿವರು ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಜತೆಗೂಡಿ ಚರ್ಚಿಸಿ ಗುರುವಾರದ ಸಂಪುಟ ಸಭೆಯಲ್ಲಿ ಕರಡು ಮಂಡಿಸಲು ನಿರ್ಧರಿಸಲಾಗಿತ್ತು. ಆದರೆ ಬುಧವಾರ ಸಭೆ ನಡೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ವಿಷಯ ಮುಂದೂಡಲಾಗಿದೆ’ ಎಂದು ಹೇಳಿದರು. ಮುಂದಿನ ಸಂಪುಟ ಸಭೆ ವೇಳೆಗೆ ಕರಡು ನಿಯಮಗಳನ್ನು ಸಿದ್ಧಪಡಿಸಿ ಮಂಡಿಸಿ ಅಂಗೀಕಾರ ಪಡೆಯಲಾಗುವುದು. ಬಳಿಕ ಕಾಯ್ದೆ ಜಾರಿ ಮಾಡಲಾಗುವುದು ಎಂದರು. ಬೆಳಗಾವಿ ಚಳಿಗಾಲದ ಅಧಿವೇಶನ ದಿನಾಂಕ ನಿಗದಿ ಕುರಿತ ಪ್ರಶ್ನೆಗೆ, ಅಧಿವೇಶನ ದಿನಾಂಕ ಇನ್ನೂ ನಿಗದಿ ಮಾಡಿಲ್ಲ ಎಂದಷ್ಟೇ ಹೇಳಿದರು.

Read More

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 ಇಂದಿಗೆ ಕೊನೆಗೊಳ್ಳಲಿದೆ. ಆದರೇ ವಿವರ ದಾಖಲಿಸದೇ ಇರುವವರು ದಿನಾಂಕ 10-11-2025ರವರೆಗೆ ಆನ್ ಲೈನ್ ಮೂಲಕ ದಾಖಲಿಸಲು ಅವಕಾಶ ನೀಡಲಾಗಿದೆ. ಈ ಕುರಿತು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕಾರ್ಯದರ್ಶಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಸರ್ಕಾರದ ಆದೇಶ ಸಂಖ್ಯೆ: ಹಿಂವಕ 289 ಬಿಸಿಎ 2025, ದಿನಾಂಕ:13.08.2025 ರ ಅನ್ವಯ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಜನರ (ಹಿಂದುಳಿದ ವರ್ಗಗಳು, ಇತರೆ ಜಾತಿಗಳು ಅನುಸೂಚಿತ ಜಾತಿ ಮತ್ತು ಪಂಗಡಗಳು ಸೇರಿದಂತೆ) ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ದಿನಾಂಕ: 22.09.2025 ರಿಂದ ಪ್ರಾರಂಭಿಸಲಾಗಿದ್ದು, ದಿನಾಂಕ:31.10.2025 ರಂದು ಮುಕ್ತಾಯಗೊಳ್ಳಲಿದೆ ಎಂದಿದ್ದಾರೆ. ಇನ್ನೂ ವಿವಿಧ ಕಾರಣಗಳಿಂದಾಗಿ ಸಮೀಕ್ಷೆಯಲ್ಲಿ ಭಾಗವಹಿಸಲು ಸಾಧ್ಯವಾಗದೇ ಅವಕಾಶ ನೀಡುವ ಹಿನ್ನೆಲೆಯಲ್ಲಿ Online ಮೂಲಕ https://kscbcselfdeclaration.karnataka.gov.in ಲಿಂಕ್ ಬಳಸಿಕೊಂಡು ಸಮೀಕ್ಷೆಯಲ್ಲಿ ಸ್ವಯಂ ಪಾಲ್ಗೊಳ್ಳುವ ಅವಧಿಯನ್ನು ದಿನಾಂಕ:10.11.2025 ರ ವರೆಗೆ ಅಂತಿಮವಾಗಿ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.

Read More

ಬೆಂಗಳೂರು : ರಾಜ್ಯದಲ್ಲಿ ಒಟ್ಟು 51,000 ಶಿಕ್ಷಕರ ಕೊರತೆ ಇದ್ದು, 32 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ ಈಗಾಗಲೇ 13,000 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು. ಬೆಂಗಳೂರಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ 32 ಸಾವಿರ ಶಿಕ್ಷಕರನ್ನು ನೇಮಕಾತಿ ಮಾಡುತ್ತಿದ್ದೇವೆ. ಈಗಾಗಲೇ 13,000 ಶಿಕ್ಷಕರನ್ನು ನೇಮಕ ಮಾಡಿದ್ದೇವೆ. ಒಟ್ಟು ರಾಜ್ಯದಲ್ಲಿ 51,000 ಶಿಕ್ಷಕರ ಕೊರತೆ ಇದೆ. ಅಲ್ಲದೆ ಕಾಯಂ ಶಿಕ್ಷಕರನ್ನು ಸಹ ನೇಮಕ ಮಾಡುತ್ತಿದ್ದೇವೆ. ಒಂದನೇ ತರಗತಿ ಮಕ್ಕಳಿಗೆ ಗಣಕಯಂತ್ರದ ತರಬೇತಿ ನೀಡುತ್ತೇವೆ. ಗ್ರಾಮೀಣ ಭಾಗದ ಮಕ್ಕಳಿಗೆ ವಿಶೇಷ ಅವಕಾಶ ನೀಡಬೇಕಿದೆ. ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಇಂದ ಅನುಕೂಲ ಆಗಿದೆ. ಸರ್ಕಾರಿ ಶಾಲೆಗಳಲ್ಲಿ ಸಂಜೆ ವಿಶೇಷ ತರಗತಿ ಮಾಡಲಾಗುತ್ತಿದೆ ಎಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

Read More