Subscribe to Updates
Get the latest creative news from FooBar about art, design and business.
Author: ಸುರೇಶ್
"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು
ಬೀದರ್ : ಶತಾಯುಷಿ ಹಾಗೂ ಮಾಜಿ ಸಚಿವ ಭೀಮಣ್ಣ ಖಂಡ್ರೆ (102) ಅವರು ನಿನ್ನೆ ವಿಧಿವಶರಾಗಿದ್ದಾರೆ. ಭೀಮಣ್ಣ ಕಂಡ್ರಿ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ರಾಜಕೀಯ ಗಣ್ಯರು ಸಂತಾಪ್ ಸೂಚಿಸಿದ್ದು, ಇದೀಗ ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ಅವರು ಕೂಡ ಸಂತಾಪ ಸೂಚಿಸಿದ್ದಾರೆ. ಟ್ವೀಟ್ ನಲ್ಲಿ ರಾಹುಲ್ ಗಾಂಧಿ ಸಂತಾಪಸೂಚಿಸಿದ್ದು ಭೀಮಣ್ಣ ಕಂಡ್ರೆ ಅವರ ನಿಧನ ನನಗೆ ತೀವ್ರ ನೋವು ತಂದಿದೆ. ಅವರು ಸ್ವತಂತ್ರ ಹೋರಾಟಗಾರ ಹಾಗೂ ಶಿಕ್ಷಣ ತಜ್ಞರಾಗಿದ್ದರು. ತಮ್ಮ ಸೇವೆಯನ್ನ ಕರ್ನಾಟಕ ಜನರಿಗೆ ಮುಡುಪಾಗಿಟ್ಟಿದ್ದರು. ಖಂಡ್ರೆ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಆ ಭಗವಂತ ನೀಡಲಿ ಎಂದು ಟ್ವೀಟ್ ಖಾತೆಯ ಮೂಲಕ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ. https://twitter.com/RahulGandhi/status/2012378703851061651?t=2bDjT1zv4kwC3fIHmtcnWg&s=19
ಬೆಂಗಳೂರು : ವಲಸೆ ಕಾರ್ಮಿಕರು ಇರುವ ಮನೆಗೆ ತೆರಳಿ ಅಕ್ರಮವಾಗಿ ನುಗ್ಗಿ ಅವರ ಪೌರತ್ವ ಹಾಗೂ ಗುರುತಿನ ದಾಖಲೆಗಳನ್ನು ಕೇಳಿ ಬೆದರಿಕೆ ಹಾಗೂ ಭೀತಿಯನ್ನುಂಟು ಮಾಡುತ್ತಿದ್ದಾನೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಪುನೀತ್ ಕೆರೆಹಳ್ಳಿಯನ್ನು ಬನ್ನೇರುಘಟ್ಟ ಪೊಲೀಸ್ ಠಾಣಾ ಪೊಲೀಸರು ತಡರಾತ್ರಿ ಬಂಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಎಸ್ಪಿ ಅವರ ಮಾರ್ಗದರ್ಶನದಲ್ಲಿ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು ಎನ್ನಲಾಗಿದೆ. ಪುನೀತ್ ಕೆರೆಹಳ್ಳಿಯ ಬಂಧನ ಸುದ್ದಿ ತಿಳಿದ ಬಳಿಕ, ಆತನ ಬೆಂಬಲಿಗರು ಠಾಣೆಯ ಬಳಿ ಜಮಾಯಿಸಲು ಯತ್ನಿಸಿದರೂ, ಪೊಲೀಸರು ಅವರನ್ನು ಒಳಗೆ ಬಿಡದೆ ನಿಯಂತ್ರಿಸಿದರು. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ತಿಳಿದು ಬಂದಿದೆ.
ಬೀದರ್ : ಶತಾಯುಷಿ, ಮಾಜಿ ಸಚಿವ ಡಾ. ಭೀಮಣ್ಣ ಖಂಡ್ರೆ (102) ವಿಧಿವಶ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯ ಸರ್ಕಾರಿ ಶಾಲಾ ಕಾಲೇಜುಗಳಿಗೆ ಇಂದು ರಜೆ ಘೋಷಿಸಲಾಗಿದೆ. ಇಂದು ಎಲ್ಲಾ ಸರ್ಕಾರಿ ಶಾಲಾ ಕಾಲೇಜುಗಳಿಗೆ ರಜೆ ಗೋಪಿಸಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮ ಆದೇಶ ಹೊರಡಿಸಿದ್ದಾರೆ. ಕಳೆದ 10-12 ದಿನಗಳಿಂದ ವಯೋಸಹಜವಾದ ಕಾಯಿಲೆ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಬೀದರ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಭಾಲ್ಕಿಯ ಮನೆಯಲ್ಲೇ ಚಿಕಿತ್ಸೆ ಮುಂದುವರಿಸಲಾಗಿತ್ತು, ಇಂದು ರಾತ್ರಿ ಅವರ ಆತ್ಮ ದೇಹವನ್ನು ತ್ಯಜಿಸಿತು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದರು. ಕಳೆದ ಒಂದು ವಾರದಿಂದ ನಾಡಿನ ವಿವಿಧ ಮಠಗಳ ಪೀಠಾಧಿಪತಿಗಳು, ಹರಚರ ಗುರುಮೂರ್ತಿಗಳು, ಸಚಿವರು, ಶಾಸಕರು, ಸಮಾಜದ ಗಣ್ಯರು, ವಿವಿಧ ಪಕ್ಷಗಳ ನಾಯಕರು, ಕಾರ್ಯಕರ್ತರು, ಅಭಿಮಾನಿಗಳು, ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಭಾಲ್ಕಿಗೆ ಆಗಮಿಸಿ ಭೀಮಣ್ಣ ಖಂಡ್ರೆ ಅವರನ್ನು ನೋಡಿ, ಆರೋಗ್ಯ ವಿಚಾರಿಸಿದ್ದರು. ಹಲವರು ದೇವಾಲಯಗಳಲ್ಲಿ ವಿಶೇಷ ಪೂಜೆ…
ಬೆಂಗಳೂರು : ಇನ್ಸ್ಟಿಟ್ಯೂಟ್ ಆಫ್ ವುಡ್ ಸೈನ್ಸ್ ಟೆಕ್ನಾಲಜಿ (IWST) ಪರೀಕ್ಷೆಯಲ್ಲಿ ಇದೀಗ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ ಈ ಒಂದು ಪರೀಕ್ಷೆ ನಡೆಸಿದ್ದು, ಬೇರೆ ವ್ಯಕ್ತಿಗಳಿಂದ ಆರೋಪಿಗಳು ಪರೀಕ್ಷೆ ಬರೆದಿದ್ದಾರೆ ಎಂದು ತನಿಖೆ ವೇಳೆ ಬಯಲಾಗಿದೆ. ಈ ಕುರಿತು ಆಂತರಿಕ ತನಿಖೆ ನಡೆಸಿದ ಅರಣ್ಯ ಸಂಶೋಧನಾ ಮತ್ತು ಶಿಕ್ಷಣ ಮಂಡಳಿ ಪರೀಕ್ಷೆಗೆ ಹಾಜರಾದ ವ್ಯಕ್ತಿಗಳ ಫೋಟೋ ಮತ್ತು ಸಿಸಿಟಿವಿಗಳನ್ನು ಪರಿಶೀಲನೆ ಮಾಡಿದ್ದು, ನೇಮಕಾತಿ ವೇಳೆ ಅರ್ಹ ವ್ಯಕ್ತಿಗಳು ಸಲ್ಲಿಸಿದ ದಾಖಲೆಗಳನ್ನು ಪರಿಶೀಲನೆ ಮಾಡಿತ್ತು. ಕೆಲಸಕ್ಕೆ ಸೇರಿದ ವೇಳೆ ಸಲ್ಲಿಸಿದ ದಾಖಲೆಗಳನ್ನು ಸಂಸ್ಥೆ ಪರಿಶೀಲನೆ ಮಾಡಿದ್ದು ಎಲ್ಲಾ ದಾಖಲೆಗಳ ಸಹಿಗಳಲ್ಲಿ ವ್ಯತ್ಯಾಸ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಫೋಟೋ ಮತ್ತು ಸಿಸಿಟಿವಿ ಹಾಗೂ ವಿಡಿಯೋ ಗ್ರಾಫಿ ಪರಿಶೀಲನೆ ನಡೆಸುತ್ತಿದ್ದು, ಎಲ್ಲಾ ದಾಖಲೆಗಳನ್ನು ಮಂಡಳಿ FSL ಗೆ ಕಳುಹಿಸಿದೆ. FSL ವರದಿಯಲ್ಲಿ ಬೇರೆ ಬೇರೆ ವ್ಯಕ್ತಿಗಳು ಪರೀಕ್ಷೆ ಬರೆದಿರುವುದು ದೃಢವಾಗಿದೆ. ಈ ಹಿನ್ನೆಲೆ…
ಬೆಂಗಳೂರು : ಸಿಎಂ ಸಿದ್ದರಾಮಯ್ಯ ತೆರಳಬೇಕಿದ್ದ ಹೆಲಿಕಾಪ್ಟರ್ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಇಂದು ಕರ್ನಾಟಕ ಕ್ರೀಡಾಕೂಟ ಉದ್ಘಾಟನೆಗೆಂದು ಸಿಎಂ ಸಿದ್ದರಾಮಯ್ಯನವರು ಬೆಂಗಳೂರಿನ HAL ಏರ್ಪೋರ್ಟ್ನಿಂದ ವಿಶೇಷ ಹೆಲಿಕಾಪ್ಟರ್ ನಲ್ಲಿ ತುಮಕೂರಿಗೆ ತೆರಳಬೇಕಿತ್ತು. ಆದರೆ, ತಾಂತ್ರಿಕ ದೋಷದಿಂದ ಹೆಲಿಕಾಪ್ಟರ್ ಟೇಕಾಫ್ ಆಗಿಲ್ಲ. ಇದರಿಂದ ಸಿದ್ದರಾಮಯ್ಯ ಬೆಂಗಳೂರಿನಿಂದ ರಸ್ತೆ ಮೂಲಕವೇ ತುಮಕೂರಿಗೆ ತೆರಳಿದರು. ಬಳಿಕ ಮಾಜಿ ಸಚಿವ ಕೆ ಎನ್ ರಾಜಣ್ಣ ಅವರು ಏರ್ಪಡಿಸಿದ್ದ ಔತಣಕೂಟದಲ್ಲಿ ಭಾಗವಹಿಸಿ ಕರ್ನಾಟಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಇನ್ನು ಡಿಸಿಎಂ ಡಿಕೆ ಶಿವಕುಮಾರ್ ದೆಹಲಿ ಪ್ರವಾಸ ಕೈಗೊಂಡಿರುವ ವಿಚಾರವಾಗಿ ನನಗೆ ಗೊತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಜಾರಿಕೊಂಡರು.
ಬೆಂಗಳೂರು : ಬಿಎಂಟಿಸಿ ಬಸ್ ನಲ್ಲಿ ಮಹಿಳೆ ಉದ್ಧಟತನ ತೋರಿದ್ದಾರೆ. ಶಕ್ತಿ ಯೋಜನೆಯ ಟಿಕೆಟ್ ಬಿಸಾಕಿ ಮಹಿಳೆ ದರ್ಪ ಮೆರೆದಿರುವ ಘಟನೆ ಬೆಂಗಳೂರಿನ ಮೆಜೆಸ್ಟಿಕ್ ಟು ದಾಬಸ್ ಪೇಟೆ ಬಸ್ ನಲ್ಲಿ ಈ ಒಂದು ಘಟನೆ ನಡೆದಿದೆ. ಹಣಕೊಟ್ಟು ಟಿಕೆಟ್ ತೆಗೆದುಕೊಳ್ಳುವಂತೆ ಕಂಡಕ್ಟರ್ ಹೇಳಿದ್ದಾರೆ. ಆದರೂ ಸಹ ಟಿಕೆಟ್ ಪಡೆಯದೆ ಮಹಿಳೆ ಉದ್ಧಟತನ ತೋರಿದ್ದಾರೆ. ಚೆಕಿಂಗ್ ನವರು ಬರುತ್ತಾರೆ ಅಂತ ಹೇಳಿದರೆ, ಯಾರಾದರೂ ಬರಲಿ ನಾನು ಮಾತನಾಡುತ್ತೇನೆ ಅಂತ ಉದ್ಧಟತನ ತೋರಿದ್ದಾರೆ. ಇನ್ನೋರ್ವ ಮಹಿಳೆ ಮೇಡಂ ಟಿಕೆಟ್ ತೊಗೊಳ್ಳಿ ನಿಮ್ ಜೊತೆ ನಮಗೂ ಲೇಟ್ ಆಗುತ್ತೆ ಎಂದಿದ್ದಾರೆ. ಏನ್ ಮಾಡ್ತೀರಾ ಮಾಡಿ ಬೇಕಾದ್ ಮಾಡಿ ಅಂತ ಅವಾಜ್ ಹಾಕಿದ್ದಾರೆ.
ಗದಗ : ಗದಗದಲ್ಲಿ ಬೈಕ್ ಮತ್ತು ಕಾರು ನಡುವೆ ಭೀಕರವಾದ ಅಪಘಾತ ಸಂಭವಿಸಿದೆ.ಕಾರು ಗುದ್ದಿದ ರಭಸಕ್ಕೆ ಇಬ್ಬರು ಬೈಕ್ ಸವಾರರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದಾರೆ. ರಸ್ತೆ ಬದಿಯ ಗಿಡಗಂಟಿಗಳ ಮಧ್ಯೆ ಬಿದ್ದಿದ್ದಾರೆ. ಈ ವೇಳೆ ಕಾರು ರಸ್ತೆ ಬದಿರುವ ಬೇಲಿ ಒಳಗೆ ನುಗ್ಗಿದೆ. ಗದಗದ ಲಕ್ಷ್ಮೇಶ್ವರ ತಾಲೂಕಿನ ರಾಮಗಿರಿಯಲ್ಲಿ ಈ ಒಂದು ಅಪಘಾದ ಸಂಭವಿಸಿದೆ. ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಇನ್ನು ಕಾರಲ್ಲಿರುವ ಮೂವರು ಮತ್ತು ಬೈಕ್ ನಲ್ಲಿ ಇರುವ ಇಬ್ಬರು ಸವಾರರಿಗೆ ಗಂಭೀರವಾದ ಗಾಯಗಳಾಗಿದ್ದು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೈಸೂರು : ಮೈಸೂರು ಭಾಗದ ಆಧ್ಯಾತ್ಮಿಕ ಶಕ್ತಿ ಕೇಂದ್ರ ಸುತ್ತೂರಲ್ಲಿ ಜಾತ್ರೆ ಸಂಭ್ರಮ ಮೇಳೈಸಿದೆ. ಸುತ್ತೂರು ಜಾತ್ರಾ ಮಹೋತ್ಸವ ಅಂಗವಾಗಿ 2ನೇ ದಿನ ಸಾಮೂಹಿಕ ವಿವಾಹ ನೆರವೇರಿದ್ದು, ಬರೋಬ್ಬರಿ 135 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿವಿಧ ಮಠಾಧಿಪತಿಗಳ ದಿವ್ಯ ಸಾನ್ನಿಧ್ಯದಲ್ಲಿ ಸಾಮೂಹಿಕ ವಿವಾಹ ನಡೆಯಿತು. 135 ಜೋಡಿಗಳ ಪೈಕಿ 4 ವೀರಶೈವ ಲಿಂಗಾಯತ, 84 ಪರಿಶಿಷ್ಟ ಜಾತಿ, 15 ಪರಿಶಿಷ್ಟ ಪಂಗಡ, 21 ಹಿಂದುಳಿದ ವರ್ಗ, 11 ಅಂತರಜಾತಿ ಜೋಡಿಗಳು ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ನವಜೀವನಕ್ಕೆ ಕಾಲಿಟ್ಟಿದ್ದಾರೆ. ತಮಿಳುನಾಡಿನ 5 ಜೋಡಿಗಳು, 3 ವಿಶೇಷಚೇತನ ಜೋಡಿಗಳು ಹಾಗು 3 ಜೋಡಿ ಮರುಮದುವೆ ವಿಶೇಷ ಗಮನ ಸೆಳೆಯಿತು. ಒಟ್ಟಾರೆ ಜಾತ್ರೆಯಲ್ಲಿ ನವ ಜೋಡಿ ಹೊಸ ಬದುಕು ಆರಂಭಿಸಿದ್ದು, ನೆರೆದ ಜನರು ಶುಭ ಹಾರೈಸಿದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಶ್ರೀಗಳೊಂದಿಗೆ, ಸಚಿವ ರಾಮಲಿಂಗಾರೆಡ್ಡಿ, ಶಾಸಕ ಆರ್.ವಿ. ದೇಶಪಾಂಡೆ, ಸಚಿವ ಮಂಕಾಳ ಎಸ್.ವೈದ್ಯ, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಶಾಸಕ ನಂಜೇಗೌಡ, ಹಂಪನಗೌಡ,…
ಬೆಂಗಳೂರು : ಇನ್ನೇನು ಬರುವ ಭಾನುವಾರ ಕನ್ನಡ ಬಿಗ್ ಬಾಸ್ ಸೀಸನ್ 12ರ ಫಿನಾಲೆ ಕಾರ್ಯಕ್ರಮ ಕೊನೆಯ ಹಂತಕ್ಕೆ ಬಂದಿದ್ದು, ಬರುವ ಭಾನುವಾರ ಕಿಚ್ಚ ಸುದೀಪ್ ಈ ಬಾರಿಯ ಬಿಗ್ ಬಾಸ್ ವಿನ್ನರ್ ಅನ್ನು ಘೋಷಿಸಲಿದ್ದಾರೆ. ಆದರೆ ಬಿಗ್ ಬಾಸ್ ಗೆ ಇದೇ ವೇಳೆ ಸಂಕಷ್ಟ ಎದುರಾಗಿದ್ದು, ವೀಕೆಂಡ್ ನಲ್ಲಿ ನಟ ಕಿಚ್ಚ ಸುದೀಪ್ ಅವರು ರಣಹದ್ದು ಕುರಿತಂತೆ ಹೇಳಿಕೆ ಒಂದನ್ನು ನೀಡಿದ್ದು ಈ ವಿಚಾರವಾಗಿ ದೂರು ಸಹ ದಾಖಲಾಗಿತ್ತು. ಕಿಚ್ಚ ಸುದೀಪ್ ಅವರು ರಣಹದ್ದು ಪದ ಬಳಸಿದ ವಿಚಾರವಾಗಿ ದೂರು ದಾಖಲಾಗಿತ್ತು. ಬಿಗ್ ಬಾಸ್ ಶೋನಲ್ಲಿ ರಣಹದ್ದು ಬಗ್ಗೆ ಹಿನ್ನೆಲೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಿಂದ ಬಿಗ್ ಬಾಸ್ ಶೋ ಹನ್ನೆರಡರ ಪ್ರೋಗ್ರಾಮ್ ಹೆಡ್ಗೆ ನೋಟಿಸ್ ಜಾರಿ ಮಾಡಲಾಗಿದೆ. ಮುಂದಿನ ಸಂಚಿಕೆ ವೇಳೆ ಸ್ಪಷ್ಟೀಕರಣ ನೀಡುವಂತೆ ಸೂಚನೆ ನೀಡಲಾಗಿದೆ. ಬಿಗ್ ಬಾಸ್ ಶೋ ಮತ್ತು ಕಿಚ್ಚ ಸುದೀಪ್ ವಿರುದ್ಧ ದೂರು ನೀಡಿದ್ದರು. ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ಸದಸ್ಯರು ದೂರು…
ಬೆಂಗಳೂರು : ಪತಿಯ ಮೇಲಿನ ಕೋಪಕ್ಕೆ 4 ವರ್ಷದ ಮಗಳನ್ನ ಕೊಂದು, ಬಳಿಕ ಬೆಂಕಿ ಹಚ್ಚಿಕೊಂಡು ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಸಂಜಯ್ ನಗರದ ಕೃಷ್ಣಪ್ಪ ಲೇಔಟ್‌ನಲ್ಲಿ ಗುರುವಾರ ಸಂಜೆ 7:30 ಸುಮಾರಿಗೆ ಘಟನೆ ನಡೆದಿದ್ದು, ಸೀತಾ (29) ಹಾಗೂ ಮಗಳು ಸೃಷ್ಟಿ (4) ಸಾವನ್ನಪ್ಪಿದ್ದಾರೆ. ಸಂಜಯ್ ನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ. ನೇಪಾಳ ಮೂಲದ ಗೋವಿಂದ್ ಬಹದ್ದೂರ್ ಹಾಗೂ ಸೀತಾ ದಂಪತಿ ಇಲ್ಲಿನ ಸಂಜಯ್ ನಗರದ ಮನೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಕೆಲಸ ಮಾಡುತ್ತಿದ್ದ ಮನೆಯ ಪಕ್ಕದಲ್ಲಿಯೇ ದಂಪತಿ ವಾಸಿಸಲು ಸಣ್ಣ ಮನೆ ನೀಡಲಾಗಿತ್ತು. ಆಗಾಗ ನೇಪಾಳಕ್ಕೆ ಹೋಗುತ್ತಿದ್ದ ಗೋವಿಂದ್ ಬಹದ್ದೂರ್ ಐದಾರು ತಿಂಗಳಾದರೂ ವಾಪಸ್ ಬರುತ್ತಿರಲಿಲ್ಲ. ಅದೇ ವಿಚಾರವಾಗಿ ಪತಿ – ಪತ್ನಿ ನಡುವೆ ಆಗಾಗ ಜಗಳವಾಗುತ್ತಿತ್ತು. ಇದರಿಂದ ರೋಸಿ ಹೋಗಿದ್ದ ಪತ್ನಿ ಸೀತಾ, ನಿನ್ನೆ ಸಂಜೆ ಸಹ ಪತಿಯೊಂದಿಗೆ ಫೋನ್ ಕರೆಯಲ್ಲಿ ಜಗಳವಾಡಿಕೊಂಡಿದ್ದಳು. ಬಳಿಕ ತಾನು ಹಾಗೂ ಪುತ್ರಿಯ ಮೇಲೆ ಪೆಟ್ರೊಲ್…














