Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ಮುಡಾ ಹಗರಣದಲ್ಲಿ ಸಿಲುಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ಈಗಾಗಲೇ ವಿಪಕ್ಷಗಳು ಆಗ್ರಹಿಸುತ್ತಿವೆ. ಇದರ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾವುದೇ ಅನುಮಾನ ಬೇಡ ಮುಖ್ಯಮಂತ್ರಿ ಆಗಿ ನಾನೇ ಮುಂದುವರಿಯುತ್ತಿದ್ದೇನೆ ಎಂದು ಸ್ಪಷ್ಟನೆ ನೀಡಿದರು. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ನಾನು ಸಿಎಂ ಆಗಬಹುದು ಎಂಬ ತಮ್ಮ ವೈಯಕ್ತಿಕ ಅಭಿಪ್ರಾಯ ಹೇಳುತ್ತಿದ್ದು, ಅವರು ಅವರ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ ಯಾವುದೇ ಅನುಮಾನ ಬೇಡ ಮುಖ್ಯಮಂತ್ರಿ ಸ್ಥಾನದಲ್ಲಿ ನಾನೇ ಮುಂದುವರೆಯಲಿದ್ದೇನೆ ಎಂದು ಸಿದ್ದರಾಮಯ್ಯ ಮತ್ತೊಮ್ಮೆ ಸ್ಪಷ್ಟಪಡಿಸಿದರು. ಇನ್ನು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಾವು ಎಂದಿಗೂ ದ್ವೇಷದ ರಾಜಕೀಯ ಮಾಡಿಲ್ಲ . ಆದರೆ ಬಿಜೆಪಿಯವರು ನಮ್ಮ ವಿರುದ್ಧ ದ್ವೇಷದ ರಾಜಕೀಯ ಮಾಡಿದರು. ನಾವು ಈ ಹಿಂದೆಯೂ ದ್ವೇಷದ ರಾಜಕಾರಣ ಮಾಡಿಲ್ಲ ಈಗಲೂ ಮಾಡುವುದಿಲ್ಲ ಎಂದು ಬೆಂಗಳೂರಿನಲ್ಲಿ ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ 21…
ನವದೆಹಲಿ : ರಾಜ್ಯದಲ್ಲಿ ಸಿಎಂ ಕುರ್ಚಿಯ ಕುರಿತು ಈಗಾಗಲೇ ಕಾಂಗ್ರೆಸ್ ನಲ್ಲಿ ಸರ್ಕಸ್ ನಡೆಯುತ್ತಿದ್ದು, ನಿನ್ನೆ MLC ಗಳು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಸಿಎಂ ಸ್ಥಾನದ ಕುರಿತು ಸಚಿವರ ಹೇಳಿಕೆಗೆ ಬ್ರೇಕ್ ಹಾಕಿ ಎಂದು ಪತ್ರ ಬರೆದಿದ್ದಾರೆ.ಇದರ ಮಧ್ಯ ಇಂದು ದಿಲ್ಲಿಯಲ್ಲಿ ಕೇಂದ್ರ ಸಚಿವ ಎಚ್ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ. ಹೌದು 2025ರ ಫೆಬ್ರವರಿ 12ರಿಂದ 14ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ಪಾಟೀಲ ಅವರು ದೆಹಲಿಗೆ ಎರಡು ದಿನಗಳ ಭೇಟಿ ನೀಡಿದ್ದು, ಮೊದಲ ದಿನ ಎಡೆಬಿಡದ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರು. ನವದೆಹಲಿಯ ಉದ್ಯೋಗ ಭವನದಲ್ಲಿರುವ ಭಾರೀ ಕೈಗಾರಿಕೆ ಸಚಿವಾಲಯದ ಕಚೇರಿಯಲ್ಲಿ ರಾಜ್ಯದವರೇ ಆದ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಕಂಡ ಪಾಟೀಲ ಅವರು, ಮೇಲಿನ ಸಂಗತಿಗಳ ಜತೆಗೆ ಕರ್ನಾಟಕದ ಕೈಗಾರಿಕಾ ವಲಯದ ಬೆಳವಣಿಗೆಗೆ ಅಗತ್ಯವಿರುವ ನಿರ್ಣಾಯಕ ನೆರವಿನ ಕುರಿತು ವಿಚಾರ ವಿನಿಮಯ ನಡೆಸಿದರು. ಬಳಿಕ ರಕ್ಷಣಾ ಸಚಿವ ರಾಜನಾಥ್…
ಬಾಗಲಕೋಟೆ : ರಾಜ್ಯದಲ್ಲಿ ಒಂದು ಅಮಾನವೀಯ ಘಟನೆ ನಡೆದಿದ್ದು, ಆಗ ತಾನೇ ಜನಿಸಿದ ನವಜಾತ ಶಿಶುವನ್ನು ರಾಕ್ಷಸರು ಚರಂಡಿಗೆ ಎಸೆದು ಹೋಗಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಶಿರೂರು ಅಗಸಿ ಬಳಿ ನಡೆದಿದೆ. ಹೌದು ಬಾಗಲಕೋಟೆ ಜಿಲ್ಲೆಯ ಶಿರೂರು ಅಗಸಿಯಲ್ಲಿ ಬಾಕ್ಸ್ ನಲ್ಲಿ ಪಾಪಿಗಳು ಮಗುವನ್ನು ಎಸೆದು ಹೋಗಿದ್ದರು. ಈ ವೇಳೆ ಸ್ಥಳೀಯರು ಬಾಕ್ಸ್ ನಲ್ಲಿ ಏನಿದೆ ಎಂದು ಕುತೂಹಲದಿಂದ ತೆರೆದು ನೋಡಿದಾಗ, ಮೃತಪಟ್ಟ ನವಜಾತ ಶಿಶು ಒಂದು ಪತ್ತೆಯಾಗಿದೆ. ಈ ವೇಳೆ ನವಜಾತ ಶಿಶುವನ್ನು ಕಂಡು ಸ್ಥಳೀಯರು ಮಮ್ಮಲ ಮರುಗಿದ್ದಾರೆ.ಅಲ್ಲದೆ ಶಿಶುವನ್ನು ಎಸೆದು ಹೋದವರಿಗೆ ಹಿಡಿ ಶಾಪ ಹಾಕಿದ್ದಾರೆ. ಕೂಡಲೇ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಸ್ಥಳಕ್ಕೆ ಬಂದ ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಕೃತ್ಯ ಎಸಗಿದವರ ವಿರುದ್ದ ದೂರು ನೀಡಲು ಮುಂದಾದ ಅಧಿಕಾರಿಗಳು, ತನಿಖೆಯನ್ನು ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು : ಮನೆಯಲ್ಲಿ ಇರುವ ಹಳೆಯ ಟಿವಿ, ಕಂಪ್ಯೂಟರ್, ಮೊಬೈಲ್ ಹಾಗೂ ಚಾರ್ಜರ್ಗಳನ್ನು ಇತ್ಯಾದಿ ವಸ್ತುಗಳನ್ನು ಮಾರಾಟಗಾರರು ಗ್ರಾಹಕರಿಗೆ ಕನಿಷ್ಠ ಬೆಲೆಯನ್ನು ನೀಡಿ ಖರೀದಿಸಬೇಕು ಎಂಬ ನಿಯಮವನ್ನು ರಾಜ್ಯ ಸರ್ಕಾರ ಜಾರಿಗೆ ತರಲು ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಹೌದು ದಿನದಿಂದ ದಿನಕ್ಕೆ ಮನೆಗಳಲ್ಲೂ ಅಪಾಯಕಾರಿಯಾದ ಇ-ತ್ಯಾಜ್ಯದ ಹೆಚ್ಚಳ ಆಗುತ್ತಿರುವುದು ಮತ್ತು ಗುಜರಿ ಅಂಗಡಿಗಳಲ್ಲಿ ವಿದ್ಯುನ್ಮಾನ ಉಪಕರಣಗಳಿಂದ ಆಯ್ದ ವಸ್ತು ಮಾತ್ರ ತೆಗೆದುಕೊಂಡು ಉಳಿದ ವಸ್ತುಗಳನ್ನು ವೈಜ್ಞಾನಿಕವಾಗಿ ಸಂಸ್ಕರಿಸದೇ ಇರುವುದು ಸರ್ಕಾರದ ಗಮನಕ್ಕೆ ಬಂದಿದೆ. ಸಾರ್ವಜನಿಕರ ಮತ್ತು ಸಮುದಾಯ ಆರೋಗ್ಯ ರಕ್ಷಣೆಯ ಹಿನ್ನೆಲೆಯಲ್ಲಿ ಇ-ತ್ಯಾಜ್ಯದ ವೈಜ್ಞಾನಿಕ ವಿಲೇವಾರಿ ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಹೊಸ ಟಿವಿ, ಕಂಪ್ಯೂಟರ್, ಮೊಬೈಲ್ ಇತ್ಯಾದಿ ಯಾವುದೇ ವಿಧ್ಯುನ್ಮಾನ ಉಪಕರಣ ಖರೀದಿಸುವ ಸಂದರ್ಭದಲ್ಲಿ ಗ್ರಾಹಕರು ಇಚ್ಛಿಸಿದಲ್ಲಿ, ಅವರ ಹಳೆಯ ಟಿವಿ, ಕಂಪ್ಯೂಟರ್, ಮೊಬೈಲ್ ಮತ್ತು ಚಾರ್ಜರ್ ಇತ್ಯಾದಿಯನ್ನು ಕಡ್ಡಾಯವಾಗಿ ಮಾರಾಟಗಾರರು ಕನಿಷ್ಠ ಬೆಲೆ ನೀಡಿ ಮರು ಖರೀದಿ ಮಾಡಬೇಕು ಎಂಬ ನಿಯಮ ಜಾರಿಗೆ ತಂದರೆ, ಇ-ತ್ಯಾಜ್ಯವನ್ನು ನಿಯಂತ್ರಿಸಲು…
ಯಾದಗಿರಿ : ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿರುವ ವಿಚಾರವಾಗಿ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಡಿಸಿಎಂ ಡಿಕೆ ಶಿವಕುಮಾರ್ ಕಂಡರೆ ಹೆದರಿಕೆ ಇದೆ ಹಾಗಾಗಿ ಅವರಿಗೆ ಭೇಟಿ ನೀಡಲು ಸಮಯಾವಕಾಶ ನೀಡಿದ್ದಾರೆ ಎಂದರು. ಇಂದು ಯಾದಗಿರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರ ಫೇಸ್ ವ್ಯಾಲ್ಯೂ ಹೋಗಿದೆ. ಕುಮಾರಸ್ವಾಮಿ ಅವರನ್ನು ಭೇಟಿಯಾಗಲು ಮೋದಿ ಬಾಗಿಲವರೆಗೆ ಹೋಗಿ ಭೇಟಿ ಮಾಡ್ತಿದ್ದಾರೆ. ಡಿಕೆ ಶಿವಕುಮಾರ ಬಗ್ಗೆ ಪ್ರಧಾನಿ ಮೋದಿಗೆ ಅಂಜಿಕೆ ಇದೆ ಹೀಗಾಗಿ ಡಿಕೆಶಿ ಭೇಟಿಯಾಗಲು ಮೋದಿ ಸಮಯ ಕೊಟ್ಟು ಭೇಟಿಯಾಗಿದ್ದಾರೆ. ಅಂಜಿಕೆ ಇದ್ರೆ ಭೇಟಿಯಾಗಲು ಕರೆಯುತ್ತಾರೆ ಎಂದರು. ಸಿದ್ದರಾಮಯ್ಯ ಮುಂದಿನ ಐದು ವರ್ಷ ಅಲ್ಲ, ಹತ್ತು ವರ್ಷ ಸಿಎಂ ಆಗಿ ಅಧಿಕಾರದಲ್ಲಿರ್ತಾರೆ. ರಾಜ್ಯದಲ್ಲಿ ಸಿದ್ದರಾಮಯ್ಯನವರಿಗೆ ಹೆಚ್ಚಿನ ಜನ ಬೆಂಬಲವಿದೆ. ಜನ ಬೆಂಬಲವಿರೋದಕ್ಕೆ ಬಿಜೆಪಿ ಸಿದ್ದರಾಮಯ್ಯರನ್ನು ಟಾರ್ಗೆಟ್ ಮಾಡುತ್ತಿದೆ. ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಸೆಳೆಯುವ ಯತ್ನ ಮಾಡಿದ್ರೂ ಯಾರೂ…
ಚಿಕ್ಕಮಗಳೂರು : ಚಿಕ್ಕಮಂಗಳೂರು ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಯ ಸಹೋದರಿ ಹಾಗೂ ಸಹೋದರ ಇಬ್ಬರು ಸೇರಿ ತುರ್ತು ಸೇವಾ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯನ ಮೇಲೆ ಹಲ್ಲೆ ನಡೆಸಿದ್ದರು. ಇದೀಗ ಇಬ್ಬರು ಆರೋಪಿಗಳನ್ನು ನಗರ ಠಾಣೆಯ ಪೊಲೀಸರು ಬಂಧಿಸಿದ್ದು, ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಹೌದು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯಲ್ಲಿ ಕರ್ತವ್ಯ ನಿರತ ವೈದ್ಯನ ಮೇಲೆ ಹಲ್ಲೆ ವೈದ್ಯ ವೆಂಕಟೇಶ ಮೇಲೆ ಹಲ್ಲೆಗೈದಿದ್ದ ತಸೀಮಾ ಮತ್ತು ಇರ್ಫಾನ್ ನನ್ನು ಬಂಧಿಸಿದ್ದಾರೆ. ಬಂಧಿತರು ಚಿಕ್ಕಮಂಗಳೂರು ನಗರದ ಟಿಪ್ಪು ಬಡಾವಣೆಯ ನಿವಾಸಿಗಳು ಎಂದು ತಿಳಿದುಬಂದಿದೆ.ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯಲ್ಲಿ ಈ ಒಂದು ಘಟನೆ ನಡೆದಿತ್ತು. ತುರ್ತು ಸೇವೆ ಘಟಕದಲ್ಲಿದ್ದ ವೆಂಕಟೇಶ ಮೇಲೆ ಹಲ್ಲೆ ಮಾಡಿದ್ದರು. ರೋಗಿಯ ಸಹೋದರಿ ತಸೀಮಾಳಿಂದ ವೆಂಕಟೇಶ್ ಮೇಲೆ ಹಲ್ಲೆ ನಡೆಸಲಾಗಿತ್ತು. ಅಲ್ಲೇಯನ್ನು ಖಂಡಿಸಿ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆ, ಬಳಿ ಇದೀಗ ಪ್ರತಿಭಟನೆ ಮುಂದುವರೆದಿದೆ OPD ಬಂದ್ ಮಾಡಿ ವೈದ್ಯರು ಮತ್ತು ಸಿಬ್ಬಂದಿಗಳು…
ಬೆಂಗಳೂರು : ಕ್ರಿಪ್ಟೋ ಕರೆನ್ಸಿ ವರ್ಗಾಯಿಸಿ ವಂಚನೆ ಮಾಡಿದ್ದ ಆರೋಪಿಯನ್ನು ಇದೀಗ CID ಅಧಿಕಾರಿಗಳು ಬಂಧಿಸಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಹೌದು ಕ್ರಿಪ್ಟೋ ಕರೆನ್ಸಿ ವರ್ಗಾಯಿಸಿ ವಂಚನೆ ಮಾಡಿದ್ದ ಆರೋಪಿಯನ್ನು ಸಿಐಡಿ ಸೈಬರ್ ಕ್ರೈಂ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತನನ್ನು ಶುಭಾಂಗ ಜೈನ್ (26) ಎಂದು ಗುರುತಿಸಲಾಗಿದೆ. ಖಾಸಗಿ ಕಂಪನಿಯಲ್ಲಿ ಆರೋಪಿ ಶುಭಾಂಗ್ ಜೈನ್ ಕೆಲಸ ಮಾಡುತ್ತಿದ್ದ. ಕಂಪನಿಯ ಕ್ರಿಪ್ಟೋ ಕರೆನ್ಸಿ ಅಕ್ರಮವಾಗಿ ವರ್ಗಾವಣೆ ಮಾಡಿದ್ದ. ಪಾಸ್ವರ್ಡ್ ಬದಲಿಸಿ ಕರೆನ್ಸಿಯನ್ನು ರೂಪಾಯಿಗೆ ಕನ್ವರ್ಟ್ ಮಾಡಿ ವಂಚನೆ ಎಸಗಿದ್ದ. ಇಂಡಿಯನ್ ಕರೆನ್ಸಿಯಾಗಿ ಬದಲಿಸಿ ಸ್ನೇಹಿತರ ಖಾತೆಗೆ ವರ್ಗಾವಣೆ ಮಾಡಿದ್ದ. ಪ್ರಕರಣವನ್ನು ದಾಖಲಿಸಿಕೊಂಡಿದ್ದ ಸುಬ್ರಮಣ್ಯ ನಗರ ಠಾಣೆಯ ಪೊಲೀಸರು, ನಂತರ ವಂಚನೆ ಪ್ರಕರಣವನ್ನು ಸಿಐಡಿ ಗೆ ವರ್ಗಾವಣೆ ಮಾಡಿದ್ದರು. ಸದ್ಯ ಸಿಐಡಿ ಅಧಿಕಾರಿಗಳು ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದೆ ವೇಳೆ ಬಂಧಿತ ಆರೋಪಿಯಿಂದ ಎರಡು ಮೊಬೈಲ್, ಎರಡು ಲ್ಯಾಪ್ಟಾಪ್ ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಬೆಂಗಳೂರು : ಬಿಜೆಪಿ ಅಧಿಕಾರ ಅವಧಿಯಲ್ಲಿ ನಡೆದಂತಹ ಹಗರಣಗಳು ಸೇರಿದಂತೆ ಒಟ್ಟು 26 ಹಗರಣಗಳ ಕುರಿತಂತೆ ತನಿಖೆ ನಡೆಸಿ ಶೀಘ್ರದಲ್ಲಿ ವರದಿ ಸಲ್ಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಹಾಗಾಗಿ ಮೊನ್ನೆ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಸಂಪುಟ ಉಪ ಸಮಿತಿ ರಚನೆ ಮಾಡಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿನ ಹಗರಣಗಳ ತನಿಖೆಯ ವಿಚಾರವಾಗಿ ನನ್ನ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚನೆ ಮಾಡಲಾಗಿದೆ. ಸಮಿತಿಯಿಂದ 26 ಹಗರಣಗಳ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದ್ದು, ಆದಷ್ಟು ಬೇಗ ತನಿಖಾ ವರದಿ ಸಲ್ಲಿಸಲು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಸೂಚನೆ ಹಿನ್ನೆಲೆಯಲ್ಲಿ ಇದೀಗ ಸಂಪುಟ ಉಪಸಮಿತಿ ರಚನೆ ಮಾಡಲಾಗಿದೆ ಎಂದು ತಿಳಿಸಿದರು. ಬಿಜೆಪಿ ಅಧಿಕಾರದ ಅವಧಿಯಲ್ಲಿ ಯಾವೆಲ್ಲ ಹಗರಣ ನಡದಿವೆಯೋ ಅವೆಲ್ಲ ಹಗರಣಗಳು ಹೊರಬರಲಿವೆ. ಎರಡು ತಿಂಗಳಿನ ಒಳಗಾಗಿ ವರದಿ ಕೊಡಬೇಕೆಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸುಮಾರು 20 ರಿಂದ 25 ಹಗರಣಗಳ ಪಟ್ಟಿ ಮಾಡಿದ್ದೇವೆ. ದ್ವೇಷದ ರಾಜಕಾರಣ…
ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ದರ್ಶನ ಪ್ರಕರಣದ ಬಗ್ಗೆ ಹಿರಿಯ ನಟ ರಮೇಶ್ ಅರವಿಂದ್ ಪ್ರತಿಕ್ರಿಯೆ ನೀಡಿದ್ದು, ನಾವು ಇಲ್ಲಿ ಮೂವರು ದರ್ಶನ್ ರನ್ನ ನೋಡುತ್ತೇವೆ. ನಾವು ಮುಖ್ಯವಾಗಿ ನೋಡಬೇಕಿರುವುದು ನಾಳೆಯ ದರ್ಶನ್ ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಲ್ಲಿ ಮೂವರು ದರ್ಶನ್ ಇದ್ದಾರೆ. ನಿನ್ನೆಯ ದರ್ಶನ್ ಇವತ್ತಿನ ದರ್ಶನ್ ಮತ್ತು ನಾಳೆಯ ದರ್ಶನ್. ನಾವು ನಿನ್ನೆ ದರ್ಶನ್ ಅವರನ್ನು ಸ್ಟಾರ್ ಆಗಿ ನೋಡಿದ್ವಿ. ಇಂದು, ಈ ಕೇಸ್ ನಲ್ಲಿ ಸಿಲುಕಿದ ದರ್ಶನ್ ನೋಡುತ್ತಿದ್ದೇವೆ. ಮುಖ್ಯವಾಗಿ ನೋಡಬೇಕಿರುವುದು ನಾಳೆಯ ದರ್ಶನ್ ಬಗ್ಗೆ ಎಂದು ಅವರು ತಿಳಿಸಿದರು. ಇಷ್ಟು ದಿನ ದರ್ಶನ್ ಬಗ್ಗೆ ನಾನೆಲ್ಲೂ ಸಹ ಮಾತನಾಡಿರಲಿಲ್ಲ. ಇಲ್ಲಿ ಮೂವರು ದರ್ಶನ್ ಇದ್ದಾರೆ ಮುಖ್ಯವಾಗಿ ನೋಡ್ಬೇಕಿರೋದು ನಾಳೆ ದರ್ಶನ್. ನಮಗೆ ದರ್ಶನ್ ಅಂದ ತಕ್ಷಣ ನನಗೆ ಸೂಪರ್ ಸ್ಟಾರ್ ದರ್ಶನ್, ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದ ದರ್ಶನ್ ನೆನಪಾಗುತ್ತಾರೆ. ನಾವು ಬದಲಾದ ದರ್ಶನ ನೋಡಬೇಕು.ಹಳೆ…
ಯಾದಗಿರಿ : ಕಳೆದ ಕೆಲವು ದಿನಗಳ ಹಿಂದೆ ಮಂಡ್ಯ ಜಿಲ್ಲೆಯ ಶಾಸಕ ಗಣಿಗ ರವಿ ಕುಮಾರ್ ಬಿಜೆಪಿಯವರು ಆಪರೇಷನ್ ಕಮಲ ಮಾಡುತ್ತಿದ್ದು, ಕಾಂಗ್ರೆಸ್ ಶಾಸಕರಿಗೆ 100 ಕೋಟಿ ರೂಪಾಯಿ ಆಮಿಷ ಒಡ್ಡಿ ಖರೀದಿಸುತ್ತಿದ್ದಾರೆ ಎಂಬ ಆರೋಪ ಮಾಡಿದ್ದರು. ಇದಾದ ಬಳಿಕ ಇದೀಗ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಪುರ, ಕಳೆದ ಒಂದು ವರ್ಷದಿಂದ ಶಾಸಕರನ್ನು ಖರೀದಿಸುವ ಪ್ರಯತ್ನ ಬಿಜೆಪಿ ಮಾಡುತ್ತಿದೆ ಎಂದು ಸ್ಪೋಟ ವಾದಂತಹ ಹೇಳಿಕೆ ನೀಡಿದರು. ಯಾದಗಿರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೀಪಾವಳಿ ಒಳಗೆ ಸರ್ಕಾರ ಪತನ ಎಂದು ಸಿಟಿ ರವಿ ಹೇಳಿಕೆ ವಿಚಾರವಾಗಿ ದೀಪಾವಳಿ ಇನ್ನು ಎರಡು ತಿಂಗಳಿದೆ ನೋಡೋಣ. ಒಂದು ವರ್ಷದ ಅವಧಿಯಲ್ಲಿ ಸರ್ಕಾರ ಎಷ್ಟು ಬಾರಿ ಬಿದ್ದಿದೆ ಹೇಳಿ. ಶಾಸಕರನ್ನು ಖರೀದಿ ಮಾಡುವ ಪ್ರಯತ್ನ ಬಿಜೆಪಿಯಿಂದ ನಡೆದಿದೆ. ಆದರೆ ಯಾರೂ ಸಹ ಬಿಜೆಪಿಯವರ ಬಲೆಗೆ ಬೀಳುವುದಿಲ್ಲ ಎಂದರು. ಶಾಸಕರ ಖರೀದಿ ಮಾಡಲು ಒಂದು ವರ್ಷದಿಂದ ಪ್ರಯತ್ನ ನಡೆದಿದೆ. ಹಬ್ಬಗಳು ಬರುತ್ತೆ ಹೋಗುತ್ತೆ ಸರ್ಕಾರ 5…