Subscribe to Updates
Get the latest creative news from FooBar about art, design and business.
Author: ಸುರೇಶ್
"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್‌ಸೈಟ್‌ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು
ಬೆಳಗಾವಿ : ಅಕ್ಕನ ಮೇಲೆ ಕಣ್ಣು ಹಾಕಿದ ದೇವಸ್ಥಾನದ ಪೂಜಾರಿಯನ್ನು ಅಪ್ರಾಪ್ತ ಬಾಲಕ ಒಬ್ಬ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದಲ್ಲಿ ಈ ಒಂದು ಭೀಕರ ಕೊಲೆ ನೆಡೆದಿದೆ. ರಾಜಾಪುರ ಗ್ರಾಮದ ಮಂಜುನಾಥ್ ಸುಭಾಷ್ ಎಣ್ಣಿ (23) ಭೀಕರವಾಗಿ ಕೊಲೆಯಾದ ಯುವಕ ಎಂದು ತಿಳಿದುಬಂದಿದೆ. 17 ವರ್ಷದ ಅಪ್ರಾಪ್ತ ಬಾಲಕನಿಂದ ಮಂಜುನಾಥ್ ಎಣ್ಣಿ ಕೊಲೆಯಾಗಿದೆ. ಹಲವು ವರ್ಷಗಳಿಂದ ಮಂಜುನಾಥ್ ಅಪ್ರಾಪ್ತೆಯ ಬೆನ್ನು ಬಿದ್ದಿದ್ದ. ಅಕ್ಕನ ತಂಟೆಗೆ ಬರದಂತೆ ಬಾಲಕ ಕೆಲವು ಬಾರಿ ಎಚ್ಚರಿಕೆ ಸಹ ನೀಡಿದ್ದ ಎನ್ನಲಾಗಿದೆ. ಆದರೂ ಪೂಜಾರಿ ಮಂಜುನಾಥ ಅಪ್ರಾಪ್ತಿ ತಂಟೆಗೆ ಹೋಗುತ್ತಿದ್ದ. ಅಕ್ಕನ ಮೇಲೆ ಕಣ್ಣು ಹಾಕಿದವನನ್ನು ಇದೀಗ ಬಾಲಕ ಭೀಕರವಾಗಿ ಕೊಲೆ ಮಾಡಿದ್ದಾನೆ. ಚೂನಮ್ಮದೇವಿ ದೇವಸ್ಥಾನದ ಪೂಜಾರಿಯಾಗಿದ್ದ ಮಂಜುನಾಥ್, ದೇವಸ್ಥಾನದಲ್ಲಿ ಯಾರು ಇಲ್ಲದನ್ನು ನೋಡಿ ಮಂಜುನಾಥನನ್ನು ಬಾಲಕ ಕೊಲೆ ಮಾಡಿದ್ದಾನೆ. ಪ್ರಕರಣ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ವಸ್ತ್ರ ಸಂಹಿತೆ ಜಾರಿ : ಮಹಿಳೆಯರಿಗೆ ಶಾರ್ಟ್ಸ್, ಟೈಟ್ ಪ್ಯಾಂಟ್ ಧರಿಸದೇ ಬರುವಂತೆ ಸೂಚನೆ
ಉಡುಪಿ : ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಇನ್ಮುಂದೆ ಭೇಟಿ ಕೊಡುವಾಗ ಸಾಂಪ್ರದಾಯಿಕ ಕೊಡುಗೆಯಲ್ಲಿ ಬರಬೇಕು ಎಂದು ಉಡುಪಿ ಶ್ರೀ ಕೃಷ್ಣ ಮಠ ಇದೀಗ ವಸ್ತ್ರ ಸಂಹಿತೆ ಜಾರಿ ಮಾಡಿದೆ. ಹೌದು ಇನ್ಮುಂದೆ ಉಡುಪಿ ಶ್ರೀಕೃಷ್ಣ ಮಠಕ್ಕೆ ಬರೋರು ಸಾಂಪ್ರದಾಯಿಕ ಉಡುಗೆಯಲ್ಲಿ ಬರಬೇಕು ಎಂದು ಕಟ್ಟುನಿಟ್ಟಿನ ವಸ್ತ್ರಸಂಹಿತೆ ಜಾರಿ ಮಾಡಲಾಗಿದೆ. ಶೀರೂರು ಮಠದ ನೂತನ ಪರ್ಯಾಯ ಸ್ವಾಮಿಗಳು ಈ ಸೂಚನೆ ಹೊರಡಿಸಿದ್ದಾರೆ. ಪುರುಷರು ಅಂಗಿ, ಬನಿಯನ್, ಬರ್ಮುಡಾ ಹಾಗೂ ಟೈಟ್ ವಸ್ತ್ರಗಳನ್ನು ಧರಿಸಿ ಪ್ರವೇಶಿಸುವಂತಿಲ್ಲ. ಇನ್ನೂ ಮಹಿಳೆಯರು ಶಾರ್ಟ್ಸ್, ಟೈಟ್ ಪ್ಯಾಂಟ್ ಧರಿಸಿಕೊಂಡು ಬರುವಂತಿಲ್ಲ. ಶ್ರೀಕೃಷ್ಣನ ದರ್ಶನಕ್ಕೆ ಬರುವವರು ಸಾಂಪ್ರದಾಯಿಕ ಉಡುಗೆಯಲ್ಲಿರಬೇಕು. ಮಾಡರ್ನ್ ಡ್ರೆಸ್ ಹಾಕೊಂಡು ಬಂದ್ರೆ ದರ್ಶನಕ್ಕೆ ಅವಕಾಶವಿಲ್ಲ ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಈಗಾಗಲೇ ಕೊಲ್ಲೂರು, ಧರ್ಮಸ್ಥಳ ಹಾಗೂ ಕಟೀಲು ಬಳಿಕ ಅದೇ ರೀತಿಯಲ್ಲಿ ಇದೀಗ ಉಡುಪಿ ಶ್ರೀಕೃಷ್ಣ ಮಠದಲ್ಲಿ ವಸ್ತ್ರಸಂಹಿತೆ ಜಾರಿತರಲಾಗಿದೆ.
ಬೆಂಗಳೂರು : 112 ದಿನಗಳ ಬಳಿಕ ಬಿಗ್ ಬಾಸ್ ಕನ್ನಡ ಸೀಸನ್ 12 ರಿಯಾಲಿಟಿ ಶೋಗೆ ತೆರೆ ಬಿದ್ದಿದೆ. ಈ ಒಂದು ಸೀಸನ್ 12ರ ವಿಜೇತರಾಗಿ ನಟರಾಜ್ ಅಲಿಯಾಸ್ ಗಿಲ್ಲಿ ಹೊರಹೊಮ್ಮಿದ್ದಾರೆ. ಇನ್ನು ರಕ್ಷಿತಾ ಶೆಟ್ಟಿ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ. ಇದೀಗ ಮೂರನೇ ರನ್ನರ್ ತಪ್ಪಾಗಿ ಸ್ಥಾನ ಪಡೆದ ಕಾವ್ಯ ಶೈವ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಗಿಲ್ಲಿ ನಟ ಅವರಿಗೆ ಶುಭಾಶಯ ಕೋರಿ ಪೋಸ್ಟ್ ಹಂಚಿಕೊಂಡಿದ್ದಾರೆ. ಬಡವರ ಮಕ್ಕಳು ಬೆಳೀಬೇಕು ಕಣ್ರಯ್ಯ ಹೇ ಗಿಲ್ಲಿ ಕಂಗ್ರಾಜುಲೇಷನ್ಸ್ ಕಣೋ. You deserve it from ZERO to HERO now More to go ಆದಷ್ಟು ಬೇಗ Action Cut ಹೇಳೋ ಹಾಗಾಗ್ಲಿ ತುಂಬಾ ತುಂಬಾ ಒಳ್ಳೆಯದಾಗಲಿ ಎಂದು ಕಾವ್ಯಶೈವ ಅವರು ಗಿಲ್ಲಿ ಅವರಿಗೆ ಅಭಿನಂದನೆ ತಿಳಿಸಿದ್ದಾರೆ.
ವಿಜಯಪುರ : ಯುವಕರ ಗ್ಯಾಂಗ್ ಒಂದು ಓರ್ವನಿಗೆ ಅಮಾನವೀಯವಾಗಿ ಹಲ್ಲೆ ಮಾಡಿರುವ ಘಟನೆ ವಿಜಯಪುರದಲ್ಲಿ ನಡೆದಿದೆ. ವಿಜಯಪುರ ನಗರದ ರಂಭಾಪುರ ಬಡಾವಣೆ ಬಳಿ ಈ ಒಂದು ಘಟನೆ ನಡೆದಿದ್ದು ಪೈಗಂಬರ್ ಎಂಬ ಯುವಕನ ಮೇಲೆ ಐದಾರು ಜನ ಯುವಕರ ಗ್ಯಾಂಗ್ ಹಲ್ಲೆ ಮಾಡಿದೆ. ಪೈಗಂಬರ್ ಮುಲ್ಲಾ ಕಲ್ಬುರ್ಗಿಯ ಶಹಬಾದ್ ನಲ್ಲಿ ನೆಲೆಸಿದ್ದ. ಹತ್ಯೆಯಾದ ರೌಡಿಶೀಟರ್ ಹೈದರ್ ನದಾಫ್ ನಿಕಟ ವರ್ತಿ ಎಂದು ತಿಳಿದು ಬಂದಿದೆ. ನದಾಫ್ ಹತ್ಯೆಯ ಬಳಿಕ ಪೈಗಂಬರ್ ಶಹಾಬಾದ್ ಗೆ ಬಂದು ನೆಲೆಸಿರುತ್ತಾನೆ. ವಿಜಯಪುರದ ಯುವಕರ ಗ್ಯಾಂಗ್ ಪೈಗಂಬರ ಮೇಲೆ ಹಲ್ಲೆ ಮಾಡಿದೆ. ಹಳೆ ವೈಷಮ್ಯ ಕಾರಣಕ್ಕಾಗಿ ಪೈಗಂಬರ್ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆಯ ವಿಡಿಯೋ ಆದರಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಳಗಾವಿ : ಅಕ್ಕನ ಮೇಲೆ ಕಣ್ಣು ಹಾಕಿದ ದೇವಸ್ಥಾನದ ಪೂಜಾರಿಯನ್ನು ಅಪ್ರಾಪ್ತ ಬಾಲಕ ಒಬ್ಬ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದಲ್ಲಿ ಈ ಒಂದು ಭೀಕರ ಕೊಲೆ ನೆಡೆದಿದೆ. ರಾಜಾಪುರ ಗ್ರಾಮದ ಮಂಜುನಾಥ್ ಸುಭಾಷ್ ಎಣ್ಣಿ (23) ಭೀಕರವಾಗಿ ಕೊಲೆಯಾದ ಯುವಕ ಎಂದು ತಿಳಿದುಬಂದಿದೆ. 17 ವರ್ಷದ ಅಪ್ರಾಪ್ತ ಬಾಲಕನಿಂದ ಮಂಜುನಾಥ್ ಎಣ್ಣಿ ಕೊಲೆಯಾಗಿದೆ. ಹಲವು ವರ್ಷಗಳಿಂದ ಮಂಜುನಾಥ್ ಅಪ್ರಾಪ್ತೆಯ ಬೆನ್ನು ಬಿದ್ದಿದ್ದ. ಅಕ್ಕನ ತಂಟೆಗೆ ಬರದಂತೆ ಬಾಲಕ ಕೆಲವು ಬಾರಿ ಎಚ್ಚರಿಕೆ ಸಹ ನೀಡಿದ್ದ ಎನ್ನಲಾಗಿದೆ. ಆದರೂ ಪೂಜಾರಿ ಮಂಜುನಾಥ ಅಪ್ರಾಪ್ತಿ ತಂಟೆಗೆ ಹೋಗುತ್ತಿದ್ದ. ಅಕ್ಕನ ಮೇಲೆ ಕಣ್ಣು ಹಾಕಿದವನನ್ನು ಇದೀಗ ಬಾಲಕ ಭೀಕರವಾಗಿ ಕೊಲೆ ಮಾಡಿದ್ದಾನೆ. ಚೂನಮ್ಮದೇವಿ ದೇವಸ್ಥಾನದ ಪೂಜಾರಿಯಾಗಿದ್ದ ಮಂಜುನಾಥ್, ದೇವಸ್ಥಾನದಲ್ಲಿ ಯಾರು ಇಲ್ಲದನ್ನು ನೋಡಿ ಮಂಜುನಾಥನನ್ನು ಬಾಲಕ ಕೊಲೆ ಮಾಡಿದ್ದಾನೆ. ಪ್ರಕರಣ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಯಚೂರು : ಮಹಿಳಾ ಅಧಿಕಾರಿಗಳಿಗೆ ಪುಂಡರು ಬೆದರಿಕೆ ಹಾಕಿರುವ ಘಟನೆಗಳು ಇತ್ತೀಚಿಗೆ ನಡೆದಿವೆ. ಆದರೆ ಇದೀಗ ಅಕ್ರಮ ಮರಳು ದಂಧೆಕೋರರು ಅಕ್ರಮ ಮರಳುಗಾರಿಕೆ ತಡೆಯದಂತೆ ನನ್ನ ಮನೆಗೆ ಬಂದು ಬೆದರಿಕೆ ಹಾಕಿದ್ದಾರೆ ಅಂತ ರಾಯಚೂರಿನ ದೇವದುರ್ಗ ಶಾಸಕಿ ಕರೆಮ್ಮ ಜಿ. ನಾಯಕ್ ಆಕ್ರೋಶ ಹೊರಹಾಕಿದ್ದಾರೆ. ಹೌದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನ ಭೇಟಿಯಾದ ಶಾಸಕಿ ಕರೆಮ್ಮ ಜಿ ನಾಯಕ್ ಅಕ್ರಮ ಮರಳು ದಂಧೆಕೋರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ರಾಯಚೂರು ಎಸ್.ಪಿ ಗೆ ದೂರು ನೀಡಿ ಬಳಿಕ ಮಾತನಾಡಿದ ಕರೆಮ್ಮ ನಾಯಕ್ ದೇವದುರ್ಗ ತಾಲೂಕಿನಲ್ಲಿ ಯಾವುದೇ ಟೆಂಡರ್ ಇಲ್ಲದೇ ಲಾರಿಗಳಲ್ಲಿ ಅಕ್ರಮ ಮರಳು ಸಾಗಣೆ ನಡೆದಿದೆ. ನಾನು ಟ್ರ್ಯಾಕ್ಟರ್‌ನಲ್ಲಿ ಸಾಗಿಸುವವರ ಪರ ಇದ್ದೇನೆ, ಲಾರಿಯವರು ಟ್ರ್ಯಾಕ್ಟರ್‌ನವರನ್ನ ಎತ್ತಿಕಟ್ಟುತ್ತಿದ್ದಾರೆ ಎಂದರು. ಲಾರಿ ಇಟ್ಟು ಮರಳುಗಾರಿಕೆ ಮಾಡುವ ಶ್ರೀನಿವಾಸ ನಾಯಕ್ ಇತರರು ಬೆದರಿಸಲು ಬಂದಿದ್ದರು. ಪೊಲೀಸ್ ಕ್ವಾಟ್ರಸ್‌ನಲ್ಲಿರೋ ನನ್ನ ಮನೆಗೆ ಬಂದು ಬೆದರಿಸುತ್ತಾರೆ. ಕಾನೂನು ಸುವ್ಯವಸ್ಥೆ ಎಲ್ಲಿದೆ? ಸರ್ಕಾರ ಕ್ರಮ ಯಾಕೆ…
ಪೆದ್ದ “ಯಂಕನ” ಮುಗ್ಧ ಭಕ್ತಿ ಒಂದು ಗ್ರಾಮದಲ್ಲಿ ವೆಂಕಣ್ಣ ಎಂಬ ಯುವಕನಿದ್ದ. ಬರ ಬರುತ್ತಾ ಅವನ ಹೆಸರು ಗ್ರಾಮದವರ ಬಾಯಲ್ಲಿ “ಯಂಕ” ಆಯಿತು. ಅನಾಥನಾಗಿ ಬೆಳೆದವನು. ಶಾಲೆ ಹತ್ತಿದವನಲ್ಲ, ಹೀಗೆ ಮಾಡು ಎಂದು ಹೇಳುವವರಿಲ್ಲ. ಊರವರ ಜಮೀನಿನಲ್ಲಿ ಕೆಲಸ ಮಾಡಿ, ಊರವರು ಕೊಟ್ಟಿದ್ದನ್ನು ತಿಂದುಕೊಂಡು ಆ ಮಕ್ಕಳ ಜೊತೆ ಬೆಳೆದು, ತಿಳಿದುಕೊಂಡಿದ್ದು ಎಷ್ಟೋ ಅಷ್ಟೇ. ಅವನಿಗೆ ಬಂಧು-ಬಳಗ ಹಿಂದಿಲ್ಲ -ಮುಂದಿಲ್ಲ. ಅವನ ಒಳ್ಳೆತನ ನೋಡಿ ಯಾರೋ ಸಾಹುಕಾರ ನೊಬ್ಬ ಅವನ ಸ್ವಂತಕ್ಕೆ ಸ್ವಲ್ಪ ಜಮೀನು ಕೊಟ್ಟರು. ಅಂದಿನಿಂದ ಬೇರೆಯವರ ಜಮೀನಿನಲ್ಲಿ ಕೆಲಸ ಮಾಡದೆ ತನ್ನ ಜಮೀನಿನಲ್ಲಿ ಕೆಲಸ ಮಾಡಿಕೊಂಡಿದ್ದ. ಅವನು ಮುಗ್ಧ- ಪೆದ್ದ- ಒಳ್ಳೆಯವನು. ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ…
ಬೆಂಗಳೂರು : ರಾಜ್ಯದಲ್ಲಿ ಇಡೀ ಪೊಲೀಸ್ ಇಲಾಖೆಯ ತಲಿತಗ್ಗಿಸುವಂತಹ ಘಟನೆ ನಡೆದಿದ್ದು, ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ವಿಡಿಯೋ ವೈರಲ್ ಆದ ಬೆನ್ನಲ್ಲೇ, ರಾಜ್ಯ ಸರ್ಕಾರ ಇದೀಗ ರಾಮಚಂದ್ರರಾವ್ ಅವರನ್ನು ಸಸ್ಪೆಂಡ್ ಮಾಡಿದೆ.ಈ ವಿಚಾರವಾಗಿ ಗೃಹ ಸಚಿವ ಜಿ ಪರಮೇಶ್ವರ್, ಪ್ರಕರಣದ ಕುರಿತು ತನಿಖೆ ನಡೆಸಿ ವರದಿ ಬಂದ ಬಳಿಕ ಆರೋಪ ಸಾಬೀತಾದರೆ ಅವರನ್ನು ವಜಾ ಮಾಡಲಾಗುತ್ತೆ ಎಂದು ತಿಳಿಸಿದರು. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ವಿಡಿಯೋ ವೈರಲ್ ಕೇಸ್ ಸಂಬಂಧಪಟ್ಟಂತೆ ಅವರನ್ನು ಈಗಾಗಲೇ ಅಮಾನತು ಮಾಡಲಾಗಿದೆ. ಪ್ರಕರಣದ ವಿಚಾರ ತಿಳಿದು ಬೇಸರ ಆಗಿದೆ. ಪ್ರಕರಣದ ಸಂಬಂಧ ಪೂರ್ಣ ಪ್ರಮಾಣದ ತನಿಖೆ ನಡೆಸಲಾಗುತ್ತದೆ ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಆರೋಪ ಸಾಬೀತಾದರೆ ವಜಾ ಕೂಡ ಆಗಬಹುದು ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಜಿ ಪರಮೇಶ್ವರ್ ಹೇಳಿಕೆ ನೀಡಿದರು
ಬೆಂಗಳೂರು : ರಾಜ್ಯದ ಪಿಯು ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಇದೀಗ ಬಿಗ್ ಶಾಕ್ ಕೊಟ್ಟಿದೆ. ಸ್ಟಡಿ ಹಾಲಿಡೇಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ಬ್ರೇಕ್ ಹಾಕಿದೆ. ಪಿಯು ಫಲಿತಾಂಶದ ಸುಧಾರಣೆಗೆ ಇಲಾಖೆ ಇದೀಗ ಮಹತ್ವದ ನಿರ್ಧಾರ ಕೈಗೊಂಡಿದೆ. ಹೌದು ಗ್ರೂಪ್ ಸ್ಟಡಿ ಮಾಡಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆ ಮುಂದಾಗಿದೆ. ಪರೀಕ್ಷೆ ಮುಗಿಯುವವರೆಗೂ ಪಿಯು ವಿದ್ಯಾರ್ಥಿಗಳು ಕಾಲೇಜಿಗೆ ಬರಬೇಕು ಕಾಲೇಜಿನಲ್ಲಿಯೇ ವಿದ್ಯಾರ್ಥಿಗಳನ್ನು ಮುಖ್ಯ ಪರೀಕ್ಷೆಗೆ ತಯಾರಿ ಮಾಡಬೇಕು ಈ ಹಿನ್ನೆಲೆ ಸ್ಟಡಿ ಹಾಲಿಡೇಗೆ ಬ್ರೇಕ್ ಹಾಕಲು ಎಂದು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಬೆಂಗಳೂರು : ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದಲ್ಲಿ ನಾಲ್ಕೂವರೆ ಕೆಜಿ ಚಿನ್ನ ಕಳುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬೆಂಗಳೂರು ಬಳ್ಳಾರಿ ಹಾಗೂ ತಿರುವನಂತಪುರದಲ್ಲಿ ದಾಳಿ ಮಾಡಿದ್ದಾರೆ. ಶ್ರೀರಾಮಪುರ ಅಯ್ಯಪ್ಪ ದೇವಸ್ಥಾನ ಮತ್ತು ಟ್ರಸ್ಟಿ ನಿವಾಸದ ಮೇಲೂ ದಾಳಿ ಮಾಡಿದ್ದಾರೆ. ಬೆಳ್ಳಂ ಬೆಳಗ್ಗೆ ದಾಳಿ ಮಾಡಿ ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಳ್ಳಾರಿಯ ರೊದ್ದಂ ಜುವೆಲರಿ ಅಂಗಡಿ ಮೇಲು ಇಡೀ ದಾಳಿ ಮಾಡಿದೆ. ಬಳ್ಳಾರಿ ರೊದ್ದಂ ಚಿನ್ನದ ಅಂಗಡಿ ಮಾಲೀಕನಾಗಿರುವ ಗೋವರ್ಧನ್, ಚಿನ್ನ ಖರೀದಿ ಆರೋಪದ ಅಡಿ ಈಗಾಗಲೇ ಗೋವರ್ಧನ್ ಅರೆಸ್ಟ್ ಆಗಿದ್ದಾರೆ. ಆರೋಪಿ ಉನ್ನಿಕೃಷ್ಣನನಿಂದ ಗೋವರ್ಧನ ಚಿನ್ನ ಖರೀದಿ ಮಾಡಿದ್ದರು. 470 ಗ್ರಾಂ ಕದ್ದ ಚಿನ್ನವನ್ನು ಖರೀದಿ ಮಾಡಿದ ಆರೋಪದಲ್ಲಿ ಜೈಲು ಪಾಲಾಗಿದ್ದಾರೆ ಇದೀಗ ಚಿನ್ನದ ಅಂಗಡಿಯ ಮೇಲೆ ಇಡೀ ಅಧಿಕಾರಿಗಳು ದಾಳಿ ಮಾಡಿ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ ಅಂಗಡಿಯಲ್ಲಿ ಇವರು ಹಿಡಿದಿ ಅಧಿಕಾರಿಗಳಿಂದ ಪರಿಶೀಲನೆ ನಡೆಸಲಾಗುತ್ತಿದೆ.














