Subscribe to Updates
Get the latest creative news from FooBar about art, design and business.
Author: kannadanewsnow05
ಕಲಬುರ್ಗಿ : ಕಲ್ಬುರ್ಗಿಯಲ್ಲಿ ತಡರಾತ್ರಿ ಭೀಕರವಾದ ಅಪಘಾತ ಸಂಭವಿಸಿದ್ದು, ಬೈಕ್ ಮತ್ತು ಕಾರಿಗೆ ಟ್ಯಾಂಕರೊಂದು ಢಿಕ್ಕಿಯಾಗಿ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಸ್ಥಳದಲ್ಲೇ ನಾಲ್ವರು ಮೃತಪಟ್ಟಿರುವ ಘಟನೆ ಕಲಬುರಗಿ ತಾಲೂಕಿನ ಔರಾದ್(ಬಿ) ಗ್ರಾಮದ ಬಳಿ ಶುಕ್ರವಾರ ರಾತ್ರಿ ನಡೆದಿದೆ. ಮೃತರನ್ನು ಕಮಲಾಪುರ ತಾಲ್ಲೂಕಿನ ಶಿರಡೋಣ ಗ್ರಾಮದ ನಾಗೇಂದ್ರಪ್ಪ (33), ಶಿವರಾಜ್(32), ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಚಂದ್ರಕಲಾ(70) ಹಾಗೂ ದತ್ತಾತ್ರೇಯ(48) ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಉತ್ತಮ(36) ಹಾಗೂ ಸುದೇಶ್ನಾ ಎಂಬುವವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹುಮನಾಬಾದ್ ಕಡೆಗೆ ಹೋಗುತ್ತಿದ್ದ ಬೈಕ್ ಹಾಗೂ ಕಾರಿಗೆ ಹುಮನಾಬಾದ್ ಕಡೆಯಿಂದ ಕಲಬುರಗಿಯತ್ತ ಹೋಗುತ್ತಿದ್ದ ಟ್ಯಾಂಕರ್ ಢಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಬೈಕ್ ನಲ್ಲಿದ್ದ ಇಬ್ಬರು ಸವಾರರು ಮತ್ತು ಕಾರಿನಲ್ಲಿದ್ದ ಮತ್ತಿಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಕಲಬುರಗಿ ಸಂಚಾರಿ ಠಾಣೆ-2 ರಲ್ಲಿ ಪ್ರಕರಣ ದಾಖಲಾಗಿದೆ
ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಬಿಜೆಪಿ MLCಸಿಟಿ ರವಿ ಅವರು ಸವಿತಾ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ಬಿಜೆಪಿ ಎಂಎಲ್ಸಿ ಸಿಟಿ ರವಿ ವಿರುದ್ಧ ಬೆಂಗಳೂರಿನ ಮಡಿವಾಳ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಹೌದು ಸವಿತಾ ಸಮಾಜದ ಬಗ್ಗೆ ಅವಹೇಳನಕಾರಿ ಪದ ಬಳಕೆ ಆರೋಪಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಎಂಎಲ್ಸಿ ಸಿಟಿ ರವಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕೆಲವು ದಿನಗಳ ಹಿಂದೆ ಫೋನ್ ನಲ್ಲಿ ಮಾತನಾಡುವಾಗ ಕಾರ್ಯಕ್ರಮ ಒಂದಕ್ಕೆ ಬರುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತಿನ ಭರದಲ್ಲಿ ಸವಿತಾ ಸಮಾಜದ ಕುರಿತು ಅವಹೇಳನಕಾರಿ ಪದ ಬಳಸಿದ್ದರು. ಬಳಿಕ ಸವಿತಾ ಸಮಾಜದವರ ಕ್ಷಮೆ ಕೂಡ ಸಿಟಿ ರವಿ ಕೇಳಿದರು. ಆದರೆ ಇದೀಗ ಮಡಿವಾಳ ಪೊಲೀಸ್ ಠಾಣೆಯಲ್ಲಿ ಸಿ ಟಿ ರವಿ ವಿರುದ್ಧ FIR ದಾಖಲಾಗಿದೆ. ಕಾಂಗ್ರೆಸ್ ಮುಖಂಡ ಮುರುಗೇಶ್ ಮೊದಲಿಯಾರ್ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. ಅಕ್ಟೋಬರ್ 27 ರಂದು ಎಂಎಲ್‌ಸಿ ಸಿಟಿ ರವಿ ಅಕ್ಷೇಪಾರ್ಹ ಪದ…
ಬೆಂಗಳೂರು : ಕಳೆದ ಕೆಲವು ತಿಂಗಳ ಹಿಂದೆ ರಾಜಧಾನಿ ಬೆಂಗಳೂರು ಸೇರಿದಂತೆ ಹೈದರಾಬಾದ್, ದೆಹಲಿ ಹಾಗೂ ಗುಜರಾತ್ ಶಾಲೆಗಳಿಗೆ ಬೆದರಿಕೆ ಇ-ಮೇಲ್ ಸಂದೇಶ ಬಂದಿದ್ದ ಪ್ರಕರಣಗಳು ನಡೆದಿತ್ತು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಗುಜರಾತ್ ಮೂಲದ ಮಹಿಳಾ ಟೆಕ್ಕಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ವಿಚಾರಣೆಯ ವೇಳೆ ಮಹಿಳಾ ಟೆಕ್ಕಿ ಬಾಯಿಬಿಟ್ಟಿದ್ದು ಪೊಲೀಸರೇ ಶಾಕ್ ಆಗಿದ್ದಾರೆ. ಬಾಂಬ್ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಆರೋಪಿ ರೆನೆ ಜೋಶಿಲ್ದಾನ ವಿಚಾರಣೆ ನಡೆಸಿದ ಉತ್ತರ ಸೆನ್ ವಿಭಾಗದ ಪೊಲೀಸರು ವಾಪಸ್ ಗುಜರಾತ್ಗೆ ಬಿಟ್ಟು ಬಂದಿದ್ದಾರೆ. ಈ ನಡುವೆ ಬೆಂಗಳೂರು ಉತ್ತರ ವಿಭಾಗ ಡಿಸಿಪಿ ನೇಮಗೌಡ ಅವರ ನೇತೃತ್ವದಲ್ಲಿ ನಡೆದ ವಿಚಾರಣೆಯಲ್ಲಿ ಆರೋಪಿ ಅಸ್ಪಷ್ಟ ಹಾಗೂ ವಿಚಿತ್ರ ಹೇಳಿಕೆಗಳನ್ನು ನೀಡಿದ್ದಾಳೆ. ಹೀಗಾಗಿ ರೆನೆ ಜೋಶಿಲ್ದಾ ಪ್ರಿಯಕರ ಪ್ರಭಾಕರ್‌ಗೂ ನೋಟಿಸ್ ಕೊಟ್ಟು ವಿಚಾರಣೆ ನಡೆಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ತನಿಖೆ ವೇಳೆ ಬೆಚ್ಚಿ ಬಿದ್ದ ಪೊಲೀಸರು ಮೂಲತಃ ಗುಜರಾತ್ನವಳಾಗಿರುವ ರೆನೆ ಜೋಶಿಲ್ದಾ ಚೆನ್ನೈ ಏರ್ಪೋರ್ಟ್ ರಸ್ತೆಯ…
ಗದಗ : ಈ ಒಂದು ಘಟನೆ ವಿಚಿತ್ರವೊ, ದೇವರ ಪವಾಡವೊ ಗೊತ್ತಿಲ್ಲ. ಆದರೆ ಸತತ ಆರು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯ ಬಳಿಕ ಸಾವನ್ನಪ್ಪಿದ್ದ ವ್ಯಕ್ತಿ ಆತನ ಶವ ಮನೆಗೆ ತಂದ ಕೂಡಲೇ ಉಸಿರಾಡಿ ಕಣ್ಣು ತೆರೆದು ಮತ್ತೆ ಜೀವಂತವಾಗಿರುವ ಘಟನೆ ಗದಗದಲ್ಲಿ ನಡೆದಿದೆ. ಹೌದು 6 ಗಂಟೆ ಶಸ್ತ್ರಚಿಕಿತ್ಸೆ ಬಳಿಕ ಪ್ರಾಣಬಿಟ್ಟ ವ್ಯಕ್ತಿ ಅಂತ್ಯಕಿಯೆ ವೇಳೆ ಉಸಿರಾಟಿ ಕಣ್ತೆರೆದ ಘಟನೆ ಗದಗ ಜಿಲ್ಲೆಯ ಬೆಟಗೇರಿಯಲ್ಲಿ ನಡೆದಿದೆ.ವ್ಯಕ್ತಿಯನ್ನು ಬೆಟಗೇರಿ ನಿವಾಸಿ 38 ವರ್ಷದ ನಾರಾಯಣ ಹೊನ್ನಲ್ ಎಂದು ಗುರುತಿಸಲಾಗಿದೆ. ಇದನ್ನು ಕಂಡ ಸ್ಥಳೀಯರು ಇದು ದೇವರ ಪವಾಡವೇ ಅಂತಿದ್ದಾರೆ. ಬೇಗ ಗುಣಮುಖರಾಗಿ ಬರಲಿ ಎಂದು ಕುಟುಂಬಸ್ಥರು, ಸ್ನೇಹಿತರು, ಬಂದು ಬಾಂಧವರು ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ. ನಾರಾಯಣ ಅವರು ಪಿತ್ತಕೋಶದ ಸಮಸ್ಯೆಯಿಂದ ಧಾರವಾಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸುಮಾರು 6 ಗಂಟೆಗಳ ಕಾಲ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದರು. ಆದರೆ ಶಸ್ತ್ರಚಿಕಿತ್ಸೆ ಫಲಕಾರಿಯಾಗದೇ ನಾರಾಯಣ ಸಾವನ್ನಪ್ಪಿದ್ದರು. ಬಳಿಕ ಕುಟುಂಬಸ್ಥರು ಗದಗ ಜಿಲ್ಲೆಯಲ್ಲಿ ಅಂತ್ಯ ಸಂಸ್ಕಾರಕ್ಕೆ…
ದಕ್ಷಿಣಕನ್ನಡ : ಇತ್ತೀಚಿಗೆ ಸೈಬರ್ ವಂಚನೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಅಮಾಯಕ ಜನರು ಸೈಬರ್ ವಂಚಕರ ಬಲೆಗೆ ಬಿದ್ದು ಕೋಟ್ಯಾಂತರ ರೂಪಾಯಿ ಹಣ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಮಹಿಳೆಯೊಬ್ಬರಿಗೆ ವಾಟ್ಸ್ಆ್ಯಪ್ ವಿಡಿಯೋ ಕರೆ ಮೂಲಕ ಬೆದರಿಸಿ, ಡಿಜಿಟಲ್ ಅರೆಸ್ಟ್ ಮಾಡಿ, ಸುಮಾರು 1.16 ಕೋಟಿ ರೂ. ಲಪಟಾಯಿಸಿರುವ ಬಗ್ಗೆ ಮಂಗಳೂರಿನ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆ ಮನೆಯಲ್ಲಿದ್ದ ವೇಳೆ ವಾಟ್ಸ್ಆ್ಯಪ್ ನಂಬರ್ ಒಂದರಿಂದ ವಿಡಿಯೋ ಕರೆ ಬಂದಿದೆ. ಅದನ್ನು ಸ್ವೀಕರಿಸಿದಾಗ, ದೆಹಲಿಯ ಟೆಲಿಕಮ್ಯೂನಿಕೇಶನ್ ಡಿಪಾರ್ಟ್ಮೆಂಟ್ ಕಡೆಯಿಂದ ಮಾತನಾಡುವುದಾಗಿ ಹೇಳಿದ್ದಾರೆ. ಬಳಿಕ, ನಿಮ್ಮ ಹೆಸರಿನಲ್ಲಿರುವ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಬಳಸಿ ಮೊಬೈಲ್ ನಂಬರ್ ಖರೀದಿಸಿದ್ದು, ದೆಹಲಿಯಲ್ಲಿ ಸಾರ್ವಜನಿಕರಿಗೆ ಅಕ್ರಮವಾಗಿ ಜಾಹೀರಾತು ಹಾಗೂ ಕಿರುಕುಳದ ಸಂದೇಶಗಳನ್ನು ಕಳುಹಿಸಿರುತ್ತೀರಿ ಎಂದಿದ್ದಾರೆ. ಆಗ ಮಹಿಳೆಯು, ತಾನು ಯಾವುದೇ ರೀತಿಯ ಸಂದೇಶಗಳನ್ನು ಹಾಗೂ ಜಾಹೀರಾತುಗಳನ್ನು ಕಳುಹಿಸಿಲ್ಲ. ಹಾಗೂ ನಂಬರ್ ನನ್ನದಲ್ಲ ಎಂದು ಉತ್ತರಿಸಿದಾಗ, ಆ ವ್ಯಕ್ತಿಯು ಹಾಗಿದ್ದಲ್ಲಿ ನಾನು ದೆಹಲಿ ಪೊಲೀಸರಿಗೆ ಕರೆ ವರ್ಗಾಯಿಸುತ್ತಿದ್ದೇನೆ.…
ಬೆಂಗಳೂರು : ಪ್ರತಿ ಟನ್ ಕಬ್ಬಿಗೆ 100 ರೂ. ಹೆಚ್ಚಿಸಿರುವ ಸರ್ಕಾರದ ತೀರ್ಮಾನವನ್ನು ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಬಿವೈ ವಿಜಯೇಂದ್ರ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಚಿಕ್ಕೋಡಿ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಕಬ್ಬು ಬೆಳೆಗಾರರು ನಡೆಸಿದ ಸಂಘಟಿತ ಹೋರಾಟಕ್ಕೆ ಮಣಿದಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರತಿ ಟನ್ ಕಬ್ಬಿಗೆ ₹3,300 ದರ ನಿಗದಿಪಡಿಸಿ ನಿರ್ಧಾರ ಕೈಗೊಂಡಿರುವುದು ಸ್ವಾಗತಾರ್ಹ ಎಂದಿದ್ದಾರೆ. ಕಳೆದ ಕೆಲವು ದಿನಗಳಿಂದ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್‍ನಲ್ಲಿ ಕಬ್ಬು ಬೆಳೆಗಾರರು, ರಾಜ್ಯ ರೈತ ಸಂಘ, ಹಸಿರು ಸೇನೆ ಶಾಂತಿಯುತ ಹೋರಾಟ ನಡೆಸಿದ್ದರು. ಇದು ಕಬ್ಬು ಬೆಳೆಗಾರರು, ರೈತ ಸಂಘದ ಹೋರಾಟಕ್ಕೆ ಸಂದ ಜಯ. ಮುಖ್ಯಮಂತ್ರಿಗಳು ಒಂದು ಅಥವಾ ಎರಡು ತಿಂಗಳ ಮೊದಲೇ ಈ ಸಭೆ ನಡೆಸಬೇಕಿತ್ತು. ರೈತರು ಬೀದಿಗಿಳಿದು ಹೋರಾಟ ಮಾಡಿ, ಆ ಹೋರಾಟವು ರಾಜ್ಯದ ಇತರ ಜಿಲ್ಲೆಗಳಿಗೆ ಹಬ್ಬುವ ಸಂದರ್ಭದಲ್ಲಿ ನಾವು ಕೂಡ ಹೋರಾಟದ ಸ್ಥಳಕ್ಕೆ ಭೇಟಿ ಕೊಟ್ಟು ಹೋರಾಟಕ್ಕೆ ಬೆಂಬಲ…
ಚಿತ್ರದುರ್ಗ : ಚಿತ್ರದುರ್ಗದಲ್ಲಿ ಘೋರ ಘಟನೆ ಒಂದು ನಡೆದಿದ್ದು, ಸರ್ಕಾರಿ ಆಸ್ಪತ್ರೆ ಚಾವಣಿಯ ಸಿಮೆಂಟ್ ಕುಸಿದು ಬಾಣಂತಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕು ಆಸ್ಪತ್ರೆಯಲ್ಲಿ ಈ ಒಂದು ಘಟನೆ ಸಂಭವಿಸಿದೆ. ಚಾವಣಿಯ ಸಿಮೆಂಟ್ ಕುಸಿದು ಬಾಣಂತಿ ಅಬ್ಜ ಕೌಸರ್ (36) ಎನ್ನುವ ಬಾಣಂತಿಗೆ ಗಾಯಗಳಾಗಿದ್ದು, ಹಿರಿಯೂರಿನ ಸರಕಾರಿ ಆಸ್ಪತ್ರೆಯ ತಾಯಿ ಮತ್ತು ಮಕ್ಕಳ ವಾರ್ಡ್ ನಲ್ಲಿ ಘಟನೆ ನಡೆದಿದೆ. ಹಿರಿಯೂರು ಸರ್ಕಾರಿ ಆಸ್ಪತ್ರೆಯ ವ್ಯವಸ್ಥೆಯ ಬಗ್ಗೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಪ್ರತಿನಿಧಿಸುವ ಹಿರಿಯೂರಲ್ಲೇ ಇಂತಹ ಘಟನೆ ನಡೆದಿದ್ದು ಸ್ಥಳೀಯರು ಕಿಡಿ ಕಾರಿದ್ದಾರೆ.
ಬೆಂಗಳೂರು : ಮದ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ಮಧ್ಯೆ ಉಂಟಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತ್ಯಾಗರಾಜನಗರ ನಿವಾಸಿ ಸುರೇಶ್ ಎಂಬುವವರನ್ನು ಅವರ ಸ್ನೇಹಿತರು ಬಿಯರ್ ಬಾಟಲ್‌ನಿಂದ ಹೊಡೆದು ಕೊಂದಿದ್ದು, ಹಣಕಾಸು ವ್ಯವಹಾರವು ಜಗಳಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ತ್ಯಾಗರಾಜನಗರದ ನಿವಾಸಿ ಸುರೇಶ್ (45) ಕೊಲೆಯಾದ ದುರ್ದೈವಿ. ಈ ಹತ್ಯೆ ಸಂಬಂಧ ಮೃತನ ಸ್ನೇಹಿತರಾದ ವೇಲು, ಸ್ಟೀಫನ್ ಹಾಗೂ ಪ್ರದೀಪ್ ನನ್ನು ಅರೆಸ್ಟ್ ಮಾಡಲಾಗಿದೆ. ಮದ್ಯದ ಅಮಲಿನಲ್ಲಿ ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಆರೋಪಿಗಳು, ಸುರೇಶ್‌ಗೆ ಬಿಯರ್ ಬಾಟಲ್‌ನಿಂದ ಹೊಡೆದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನವದೆಹಲಿ : ರಾಷ್ಟ್ರೀಯ ಗೀತೆ ವಂದೇ ಮಾತರಂನ ಮುಖ್ಯ ಚರಣಗಳನ್ನು ಕತ್ತರಿಸುವ ಮೂಲಕ ಕಾಂಗ್ರೆಸ್ ಪಕ್ಷ ಅಪಮಾನ ಮಾಡಿದೆ ಎಂದು ಆರೋಪಿಸಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಗೆ ಆರೆಸ್ಸೆಸ್‌ಗೆ ‘ನಮಸ್ತೆ ಸದಾ ವತ್ಸಲೇ’ ಮಾತ್ರ ಮುಖ್ಯ ಎಂದು ಹೇಳುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ವಂದೇ ಮಾತರಂ ಅನ್ನು ಬಹುವಾಗಿ ಮೆಚ್ಚುತ್ತಿದ್ದ ರವೀಂದ್ರನಾಥ ಟ್ಯಾಗೋರ್‌ಅವರೇ ಆ ಗೀತೆಯ ಮೊದಲ 2 ಚರಣ ಸ್ವೀಕರಿಸಿ. ಉಳಿದವನ್ನು ಕೈಬಿಡಿ ಎಂದು ಸೂಚಿಸಿದ್ದರು. ಆ ಪ್ರಕಾರ 1937ರಲ್ಲಿ ಅವನ್ನು ಕೈಬಿಡಲಾಗಿತ್ತು. ಇದನ್ನೇ ವಿಭಜಕ ಸಿದ್ಧಾಂತ ಎಂದರೆ ಹೇಗೆ? ಇದು ನಾಚಿಕೆಗೇಡಿತನ. ಮೋದಿ ಈ ಆರೋಪದ ಬಗ್ಗೆ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಇಂದು ರಾಷ್ಟ್ರೀಯತೆಯ ಸ್ವಯಂಘೋಷಿತ ರಕ್ಷಕರೆಂದು ಹೇಳಿಕೊಳ್ಳುವ ಆರ್‌ಎಸ್‌ಎಸ್ ಮತ್ತು ಬಿಜೆಪಿ ತಮ್ಮ ಶಾಖೆಗಳಲ್ಲಿ ಅಥವಾ ಕಚೇರಿಗಳಲ್ಲಿ ವಂದೇ ಮಾತರಂ ಅಥವಾ ನಮ್ಮ ರಾಷ್ಟ್ರಗೀತೆ ಜನ ಗಣ ಮನವನ್ನು ಎಂದಿಗೂ ಹಾಡಿಲ್ಲ. ಬದಲಾಗಿ, ‘ನಮಸ್ತೆ ಸದಾ…
ಬೆಂಗಳೂರು : ರಾಜಧಾನಿ ಬೆಂಗಳೂರು ನಗರದಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯವನ್ನು ವಿಲೇವಾರಿಗಾಗಿ ವೈಜ್ಞಾನಿಕ ರೀತಿಯಲ್ಲಿ ಘನ ತ್ಯಾಜ್ಯ ನಿರ್ವಹಣೆ (ಎಸ್ಡಬ್ಲೂಎಂ) ಮಾಡಲು ಏಕರೂಪ ಮತ್ತು ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಜಾರಿಗೆ ತರುವಂತೆ ಹೈಕೋರ್ಟ್ ಸರ್ಕಾರ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ)ಕ್ಕೆ ನಿರ್ದೇಶನ ನೀಡಿದೆ. ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ (ಬಿಎಸ್ ಡಬ್ಲೂಎಂಎಲ್) 2025ರ ಜುಲೈ 30ರಂದು ಬೆಂಗಳೂರು ಮಹಾನಗರದಲ್ಲಿ ಘನತ್ಯಾಜ್ಯ ವಿಲೇವಾರಿಗೆ 33 ಪ್ಯಾಕೇಜ್ಗಳಿಗೆ ಹೊರಡಿಸಿದ್ದ ಟೆಂಡರ್ ಪ್ರಶ್ನಿಸಿ ಹಲವು ಘನತ್ಯಾಜ್ಯ ನಿರ್ವಹಣೆಯ ಗುತ್ತಿಗೆದಾರರು ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜು ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದ್ದು, ಎಲ್ಲ ಅರ್ಜಿಗಳನ್ನು ವಜಾಗೊಳಿಸಿ ಆದೇಶಿಸಿದೆ. ಬೆಂಗಳೂರಿನಲ್ಲಿ ಘನತ್ಯಾಜ್ಯ ವಿಲೇವಾರಿ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವು ನಿರ್ದೇಶನಗಳನ್ನು ನೀಡಿರುವ ಪೀಠ, ಡಿಜಿಟಲ್ ಡ್ಯಾಶ್ಬೋರ್ಡ್, ಮೊಬೈಲ್ ಅಪ್ಲಿಕೇಶನ್, ಜಿಪಿಎಸ್ ಟ್ರ್ಯಾಕಿಂಗ್, ವೇಯ್ಟ್ ಬ್ರಿಡ್ಜ್ ಏಕೀಕರಣ ಮತ್ತು ಸಿಸಿಟಿವಿ ಕಣ್ಗಾವಲುಗಳನ್ನು ಒಳಗೊಂಡಿರಬೇಕು. ಅವುಗಳನ್ನು ಪ್ರತ್ಯೇಕ ಅಥವಾ ಸ್ವತಂತ್ರ ಯೋಜನೆಗಳಾಗಿ ನೋಡದೆ ಒಂದೇ,…














