Subscribe to Updates
Get the latest creative news from FooBar about art, design and business.
Author: kannadanewsnow05
ಬೆಳಗಾವಿ : ಬೆಳಗಾವಿಯಲ್ಲಿ ಬೀದಿ ನಾಯಿ ಕಚ್ಚಿ ವ್ಯಕ್ತಿಯೊಬ್ಬರು ಸಾವನಪ್ಪಿದ್ದಾರೆ. ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ಶಿವಶಂಕರ್ ಬಸವಣ್ಣಪ್ಪ ಪರಸಪ್ಪಗೋಳ್ ಮೃತ ದುರ್ದೈವಿ ಎಂದು ಬಂದಿದೆ. ಶಿವಶಂಕರಿಗೆ ಕಳೆದ 6 ತಿಂಗಳ ಹಿಂದೆ ಬೀದಿ ನಾಯಿ ಕಚ್ಚಿತ್ತು.ಈ ವೇಳೆ ಗಾಯದ ನಂಜು ಹೆಚ್ಚಾಗಿ ಶಿವಶಂಕರ್ ಊಟ ಮತ್ತು ನೀರನ್ನು ಬಿಟ್ಟಿದ್ದ. ನಿನ್ನೆ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ಶಿವಶಂಕರ್ ದಾಖಲಾಗಿದ್ದ.ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಿವಶಂಕರ್ ಸಾವನ್ನಪ್ಪಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಕಲಬುರ್ಗಿ : ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಸಾಲು ಸಾಲು ಸರಣಿ ದರೋಡೆ ಪ್ರಕರಣಗಳು ನಡೆದಿವೆ. ಮಂಗಳೂರು, ಬೀದರ್ ಬ್ಯಾಂಕಿನ ಹಣ ದರೋಡೆ ಬೆನ್ನಲ್ಲೇ ಇದೀಗ ಖದೀಮರು ಕಲಬುರಗಿಯಲ್ಲಿ ಎಸ್ಬಿಐ ಎಂಟಿಎಂಗೆ ಕನ್ನ ಹಾಕಿದ್ದಾರೆ. ಗ್ಯಾಸ್ ಕಟರ್ ಬಳಸಿ ಕಳ್ಳರು ATM ನಿಂದ 18 ಲಕ್ಷ ರೂ. ಕದ್ದೊಯ್ದಿರುವ ಘಟನೆ ಕಲಬುಗರಿಯ ಪೂಜಾರಿ ಚೌಕ್ನಲ್ಲಿ ನಡೆದಿದೆ. ಹೌದು ಇತ್ತೀಚೆಗೆ ಬೀದರ್ನಲ್ಲಿ ಇಬ್ಬರಿಗೆ ಶೂಟ್ ಮಾಡಿ ಎಟಿಎಂ ಹಣ ದೋಚಿಕೊಂಡು ಹೋಗಿದ್ದರು. ಇದರ ಬೆನ್ನಲ್ಲೇ ಮಂಗಳೂರಿನಲ್ಲಿ ಬ್ಯಾಂಕ್ ದರೋಡೆಯಾಗಿತ್ತು. ಇದೀಗ ಕಲಬುರಗಿಯಲ್ಲಿ ಮತ್ತೊಂದು ಎಟಿಎಂ ದರೋಡೆಯಾಗಿದೆ. ಕಲಬುರಗಿಯಲ್ಲಿ ಏಪ್ರಿಲ್ 9ರ ನಸುಕಿನ ಜಾವ 3 ಗಂಟೆ ಸುಮಾರಿಗೆ ಹರಿಯಾಣದ ಮೂಲದ ಗ್ಯಾಂಗ್ ಎಟಿಎಂಗೆ ನುಗ್ಗಿದೆ. ತಡರಾತ್ರಿ 2.18ಕ್ಕೆ ಕಾರೊಂದು ಪಾಸ್ ಆಗಿದೆ. ಅದಾಗಿ 48 ನಿಮಿಷದಲ್ಲೇ ಎಂಟಿಎಂ ಕಳ್ಳತನವಾಗಿದೆ. ಹೀಗಾಗಿ ಇದೇ ಕಾರಿನಲ್ಲಿ ಖದೀಮರು ಬಂದಿರುವ ಶಂಕೆ ವ್ಯಕ್ತವಾಗಿದೆ. ಎಟಿಎಂನಲ್ಲಿ ಸೆಕ್ಯೂರಿಟಿ ಗಾರ್ಡ್ ಇಲ್ಲದ್ದನ್ನ ಗಮನಿಸಿ ಎಟಿಎಂಗೆ ನುಗ್ಗಿರುವ ಬಗ್ಗೆ ಪೊಲೀಸರು ಅನುಮಾನ…
ಉಡುಪಿ : ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ರಾಜೀನಾಮೆ ಕುರಿತಾಗಿ ನಮ್ಮ ಪಕ್ಷದಲ್ಲಿ ರಾಜಿನಾಮೆ ವಿಚಾರ ಬರುವುದಿಲ್ಲ. ಯಾವಾಗ ಬೇಕಾದರೂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಆಗಬಹುದು. ಆದರೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಆಗುವಾಗ ನಾನು ಸ್ಪರ್ಧೆ ಮಾಡುವುದಿಲ್ಲ ಎಂದು ಉಡುಪಿಯಲ್ಲಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಹೇಳಿಕೆ ನೀಡಿದರು. ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಾನೊಬ್ಬ ಕಾರ್ಯಕರ್ತ ಪಕ್ಷ ನನಗೆ ಒಂದು ಜವಾಬ್ದಾರಿ ಕೊಟ್ಟಿತ್ತು. ಇನ್ನೊಂದು ಜವಾಬ್ದಾರಿ ಕೊಟ್ಟರು ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಕೆಲಸ ಮಾಡುವುದು ನನ್ನ ಕರ್ಮ ಏನೇ ಜವಾಬ್ದಾರಿ ಕೊಟ್ಟರೂ ಸಹ ನಾನು ನಿಭಾಯಿಸುತ್ತೇನೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಪಳನಿಸ್ವಾಮಿ ಭೇಟಿಯಾಗಿದ್ದಾರೆ. ಎಐಎಡಿಎಂಕೆ ಜೊತೆಗಿನ ಮೈತ್ರಿ ಬಗ್ಗೆ ಅಮಿತ್ ಶಾ ಮಾತನಾಡಿದ್ದಾರೆ. ಕೇಂದ್ರ ಗೃಹ ಸಚಿವರನ್ನು ಭೇಟಿ ಆಗಿರುವುದರಿಂದ ಸಂದೇಶ ಸ್ಪಷ್ಟವಾಗಿದೆ. ನಾನು ಪೊಸಿಷನ್ನಲ್ಲಿ ಇರಬೇಕು ಅನ್ನೋದು ಪಕ್ಷಕ್ಕೆ ಗೊತ್ತಿದೆ. ಮೈತ್ರಿಗೆ ಯಾವುದು ಸರಿಯಾದ ನಿಲುವು ಎಂಬುವುದು ಪಕ್ಷಕ್ಕೆ ಗೊತ್ತು. ಕಾರ್ಯಕರ್ತರಾಗಿ ನಾನು…
ಬೆಂಗಳೂರು : ರಾಜ್ಯದಲ್ಲಿ ಇತ್ತೀಚಿಗೆ ಹಾಲು ಮೊಸರು ವಿದ್ಯುತ್ ಹಾಗೂ ಡೀಸೆಲ್ ದರ ಏರಿಕೆ ಮಾಡಿದೆ. ಇದರ ಬೆನ್ನಲ್ಲೇ ಇದೀಗ ಪೋಷಕರಿಗೆ ಬಿಗ್ ಶಾಕ್ ನೀಡಲು ಖಾಸಗಿ ಶಾಲೆಗಳು ಮುಂದಾಗಿದ್ದು, ಖಾಸಗಿ ಶಾಲೆಗಳ ವಾಹನದ ಶುಲ್ಕ ದರ ಹೆಚ್ಚಳ ಮಾಡಲು ಖಾಸಗಿ ಶಾಲಾ ವಾಹನ ಸಂಘ ಇದೀಗ ನಿರ್ಧಾರ ಕೈಗೊಂಡಿದೆ. ಹೌದು ಶಾಲಾ ವಾಹನ ಶುಲ್ಕ ಹೆಚ್ಚಳಕ್ಕೆ ಇದೀಗ ನಿರ್ಧರಿಸಲಾಗಿದೆ. ಖಾಸಗಿ ಶಾಲಾ ವಾಹನ ಸಂಘದಿಂದ ಈ ಒಂದು ನಿರ್ಧಾರ ಕೈಗೊಳ್ಳಲಾಗಿದ್ದು, ಪ್ರತಿ ಕುಟುಂಬಕ್ಕೆ ತಿಂಗಳಿಗೆ 500 ರಿಂದ 600 ರೂ. ದರ ಹೆಚ್ಚಳ ಆಗುವ ಸಾಧ್ಯತೆ ಇದೆ. ಸದ್ಯ ಶಾಲಾ ವಾಹನ ಶುಲ್ಕ 2 ಸಾವಿರದಿಂದ 2100 ರೂಪಾಯಿ ಶುಲ್ಕ ಇದೆ. ಶಾಲಾ ವಾಹನ ಶುಲ್ಕ ಏರಿಕೆ ಆದರೆ ಸುಮಾರು 2500 ರಿಂದ 3000 ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಬಡ ಮತ್ತು ಮಧ್ಯಮ ವರ್ಗದ ಪೋಷಕರಿಗೆ ಈ ಒಂದು ಶುಲ್ಕ ಹೊರೆ ಆಗಲಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ…
ಹಾಸನ : ನಿನ್ನೆ ಪ್ರಕಟವಾದ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 79 ಅಂಕ ಬಂದಿದ್ದರೂ ಕಡಿಮೆ ಎಂದು ಮನನೊಂದು ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಜಿಲ್ಲೆಯ ಅರಸೀಕೆರೆ ನಗರದಲ್ಲಿ ನಡೆದಿದೆ. ಇಲ್ಲಿನ ಶಿಕ್ಷಕ ಪ್ರಕಾಶ್ ಅವರ ಪುತ್ರ 18 ವರ್ಷದ ಮನೋಜ್ ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ ಎಂದು ತಿಳಿದು ಬಂದಿದೆ. ಇಲ್ಲಿನ ಶಿಕ್ಷಕ ಪ್ರಕಾಶ್ ಅವರ ಪುತ್ರ 18 ವರ್ಷದ ಮನೋಜ್ ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ. ಮನೋಜ್ ಅರಸೀಕೆರೆ ನಗರದ ಅನಂತ ಪಿಯು ಕಾಲೇಜಿನಲ್ಲಿ ಪಿಸಿಎಂಬಿ ಸೈನ್ಸ್ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿದ್ದ. ಪರೀಕ್ಷೆಯಲ್ಲಿ ಮನೋಜ್ 79% ಅಂಕ ಗಳಿಸಿದ್ದಾನೆ. ಆದರೂ ಅಂಕ ಕಡಿಮೆ ಬಂತೆಂದು ನೊಂದ ಆತ ನಿನ್ನೆ ರಾತ್ರಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೋಜ್ ಕಾಲೇಜಿನ ಅತ್ಯಂತ ಪ್ರತಭಾನ್ವಿತ ವಿದ್ಯಾರ್ಥಿಯಾಗಿದ್ದ. ಸದಾ ಓದುವುದರಲ್ಲಿ ಟಾಪರ್ ಕೂಡಾ ಆಗಿದ್ದ. ಎಸ್ಎಸ್ಎಲ್ಸಿಯಲ್ಲಿ 98% ಅಂಕ ಗಳಿಸುವ ಮೂಲಕ ಇಡೀ ತಾಲೂಕಿನಲ್ಲಿ ಗಮನಸೆಳೆದಿದ್ದ. ಆದರೆ ಇದೀಗ ಆತನ ಆತ್ಮಹತ್ಯೆ ಸ್ಥಳೀಯರನ್ನು ಆಘಾತಕ್ಕೆ…
ಬೆಂಗಳೂರು : ಕೊಡುಗು ಜಿಲ್ಲೆ ಮೂಲದ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಅತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಹೆಣ್ಣೂರು ಠಾಣೆ ಪೊಲೀಸರು, ಇತ್ತೀಚಿಗೆ ಮೃತನ ಮೊಬೈಲ್ ಹಾಗೂ ಡೆತ್ನೋಟ್ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದರು. ಇದೀಗ ಮೃತ ವಿನಯ್ ಅವರ ಮರಣೋತ್ತರ ಪರೀಕ್ಷೆಯ ಹೆಣ್ಣೂರು ಪೊಲೀಸರ ಕೈಗೆ ಸೇರಿದೆ. ಹೌದು ಬಿಜೆಪಿ ಕಾರ್ಯಕರ್ತ ವಿನಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರ ಕೈಗೆ ಮರಣೋತ್ತರ ಪರೀಕ್ಷೆ ವರದಿ ವರದಿ ಸೇರಿದೆ. ಪ್ರಕರಣದ ಪರಿಶೀಲನೆಯ ನಡೆಸುತ್ತಿರುವ ಹೆಣ್ಣೂರು ಪೊಲೀಸರು ಈ ವರದಿಯನ್ನು ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ವಿನಯ್ ಸಾವನ್ನಪ್ಪಿದ ನಿಖರವಾದ ಸಮಯ ಯಾವುದು? ವಿನಯ್ ಮೃತ ದೇಹದ ಸ್ಥಿತಿ ಹೇಗಿತ್ತು? ವಿನಯ್ ಮಾಡಿದ ವಾಟ್ಸಾಪ್ ಡೆತ್ ನೋಟ್ ಸಮಯ ಕೂಡ ಪರಿಶೀಲನೆ ಮಾಡಲಿದ್ದಾರೆ. ಅಲ್ಲದೆ ಸಾವನ್ನಪ್ಪಿದ ಸಮಯದ ಬಗ್ಗೆಯೂ ಪೊಲೀಸರು ಪರಿಶೀಲಿಸಲಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣದ ಹಿನ್ನೆಲೆ ಆತ್ಮಹತ್ಯೆಗೆ ಶರಣಾದ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಪತ್ನಿ ಮತ್ತು ಮಗುವಿನ ಜತೆಗೆ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ…
ಬೆಂಗಳೂರು : ಇತ್ತೀಚಿಗೆ ರಾಜ್ಯ ಸರ್ಕಾರ ಹಾಲು, ಮೊಸರು ವಿದ್ಯುತ್ ಸೇರಿದಂತೆ ಡೀಸೆಲ್ ದರ ಏರಿಕೆ ಮಾಡಿ ರಾಜ್ಯದ ಜನರಿಗೆ ದರ ಏರಿಕೆಯ ಶಾಕ್ ನೀಡಿತು. ಇದರ ಬೆನ್ನಲ್ಲೇ ಇದೀಗ ಬೆಂಗಳೂರು ಜನತೆಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದ್ದು ಪ್ರತಿ 1 ಲೀಟರ್ ನೀರಿಗೆ 1 ಪೈಸೆ ಹೆಚ್ಚಳಕ್ಕೆ ಇದೀಗ BWSSB ನಿರ್ಧಾರ ಕೈಗೊಂಡಿದೆ ಎಂದು ತಿಳಿದು ಬಂದಿದೆ ಹಾಗಾಗಿ ಬೆಂಗಳೂರಿನ ಜನತೆಗೆ ಇದೀಗ ಮತ್ತೊಂದು ದರ ಏರಿಕೆಯ ಶಾಕ್ ಎದುರಾಗಿದೆ. ಈ ಕುರಿತು BWSSB ಅಧ್ಯಕ್ಷ ರಾಮ್ ಪ್ರಸಾದ್ ಮನೋಹರ್ ಅವರು ಮಾಹಿತಿ ನೀಡಿದ್ದು ನೀರಿನ ಬೆಲೆ ಹೆಚ್ಚಿಸಲು ಬೆಂಗಳೂರು ಜಲ ಮಂಡಳಿ ನಿರ್ಧರಿಸಿದೆ.ಒಂದು ಲೀಟರ್ ನೀರಿಗೆ ಗರಿಷ್ಠ 1 ಪೈಸೆ ಹೆಚ್ಚಳಕ್ಕೆ ಬಿಡಬ್ಲ್ಯೂಎಸ್ಎಸ್ಬಿ ನಿರ್ಧಾರ ಕೈಗೊಂಡಿದೆ. ಗೃಹ ಬಳಕೆ ಬಳಕೆ ನೀರು ಸಂಪರ್ಕ ಒಂದು ಲೀಟರ್ 1 ಪೈಸೆ ಹೆಚ್ಚಳ, 8,000 ಲೀಟರ್ ಒಳಗಿನ ನೀರು ಸಂಪರ್ಕಕ್ಕೆ 0.15 ಹೆಚ್ಚಳ 8 ರಿಂದ 25 ಸಾವಿರಕ್ಕೆ 0.40 ಪೈಸೆ…
ಬೆಳಗಾವಿ : ಬೆಳಗಾವಿಯಲ್ಲಿ ಘೋರವಾದ ಘಟನೆ ನಡೆದಿದ್ದು, ಯುವಕನಿಗೆ ಮೊಬೈಲ್ ಗೀಳು ಇತ್ತು. ಇದರಿಂದ ಆತನ ತಂದೆ ಕಾಲೇಜಿಗೆ ಹೋಗು ಅಂತಾ ಹೇಳಿದ್ದಕ್ಕೆ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನಲ್ಲಿ ನಡೆದಿದೆ. ಮೃತ ಯುವಕನನ್ನು ಸಾಗರ್ ತುಕಾರಾಂ ಕುರಾಡೆ (20) ಎಂದು ತಿಳಿದುಬಂದಿದೆ. ಸಾಗರ್ ಸದಲಗಾ ಸರ್ಕಾರಿ ಪ್ರಥಮ ವರ್ಷ ಬಿಎ ವ್ಯಾಸಂಗ ಮಾಡುತ್ತಿದ್ದ. ಮೊಬೈಲ್ ಗೀಳು ಹೆಚ್ಚಿತ್ತು. ಯಾವಾಗಲೂ ಮನೆಯಲ್ಲಿ ಮೊಬೈಲ್ ನಲ್ಲೇ ಮುಳುಗಿಹೋಗಿದ್ದ.ಕಾಲೇಜಿಗೆ ಹೋಗು ಅಂದರೆ ಕೇಳದೇ ಮೊಬೈಲ್ ನೋಡುತ್ತಿದ್ದ ಎನ್ನಲಾಗಿದೆ. ಹೀಗಾಗಿ ಕಾಲೇಜಿಗೆ ಹೋಗುವಂತೆ ಪೋಷಕರು ಪದೇ ಪದೇ ಒತ್ತಡ ಹೇರುತ್ತಿದ್ದರಿಂದ ನಗ್ರಾಲ್ ಗ್ರಾಮದ ತನ್ನ ಮನೆಯ ಮುಂದಿರುವ ಹಳೆಯ ಮನೆಯಲ್ಲಿ ಸಾಗರ್ ನೇಣಿಗೆ ಕೊರಳೊಡ್ಡಿದ್ದಾನೆ. ಸಾಗರ್ ಅವರ ತಂದೆ ಚಿಕ್ಕೋಡಿಯ ಸಿ.ಬಿ.ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಇವರು ತಂದೆ ತಾಯಿ ಹಾಗೂ ಕಿರಿಯ ಸಹೋದರನನ್ನು ಅಗಲಿದ್ದಾರೆ
ಬೆಳಗಾವಿ : ಬೆಳಗಾವಿಯಲ್ಲಿ ಘೋರವಾದ ಘಟನೆ ಒಂದು ನಡೆದಿದ್ದು, ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು ಇಂಜಿನಿಯರಿಂಗ್ ವಿದ್ಯಾರ್ಥಿ ಒಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ, ಬೆಳಗಾವಿಯ ರಾಮನಗರದಲ್ಲಿರುವ ಚಂದ್ರಕಾಂತ ಕಾಗವಾಡ ಬಾಯ್ಸ್ ಹಾಸ್ಟೇಲ್ ನಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿಯನ್ನು ಪ್ರಜ್ವಲ್ ಕುಪ್ಪಾನಟ್ಟಿ (20) ಎಂದು ಗುರುತಿಸಲಾಗಿದೆ. ಪ್ರಜ್ವಲ್ ನಿನ್ನೆ ಕಾಲೇಜಿಗೆ ಹೋಗದೆ ತನ್ನ ರೂಮಿನಲ್ಲಿಯೇ ಇದ್ದ. ಸಂಜೆ ಸ್ನೇಹಿತ ಬಂದು ರೂಮಿನ ಬಾಗಿಲು ಬಡಿದಾಗ ಪ್ರಜ್ವಲ್ ಬಾಗಿಲು ತೆಗೆಯಲಿಲ್ಲ. ಈ ವೇಳೆ ಕಿಟಕಿಯಿಂದ ನೋಡಿದಾಗ ಪ್ರಜ್ವಲ್ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ರಾಯಭಾಗ ತಾಲೂಕಿನ ಭಾವನಸೌಂದತ್ತಿ ಗ್ರಾಮದ ನಿವಾಸಿಯಾಗಿರುವ ಪ್ರಜ್ವಲ್ ಬೆಳಗಾವಿಯ ಇಂಜಿನಿಯರಿಂಗ್ ಕಾಲೇಜು ಒಂದರಲ್ಲಿ ವ್ಯಾಸಾಂಗ ಮಾಡುತ್ತಿದ್ದ. ಪ್ರಜ್ವಲ್ ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ.ಸ್ಥಳಕ್ಕೆ ಮಾಳಮಾರುತಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಶವವನ್ನು ಬೆಳಗಾವಿಯ ಬೀಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು : ರಾಜ್ಯದಲ್ಲಿ ಆಹಾರ ಇಲಾಖೆ ಸಮರ ಸಾರಿದ್ದು, ಆಹಾರ ಗುಣಮಟ್ಟಗಳ ಕುರಿತಂತೆ ಕಳೆದ ಕೆಲವು ದಿನಗಳಿಂದ ರಾಜ್ಯದ ಹಲವು ಕಡೆಗಳಲ್ಲಿ ಹಲವು ಆಹಾರ ಪದಾರ್ಥಗಳ ಗುಣಮಟ್ಟ ಪರೀಕ್ಷಿಸಿ ಕೆಲವನ್ನು ಈಗಾಗಲೇ ಬ್ಯಾನ್ ಮಾಡಿದೆ. ಇದೀಗ ಆಹಾರ ಇಲಾಖೆಯು ತುಪ್ಪ ಕೋವಾ ಐಸ್ ಕ್ರೀಮ್ ಮತ್ತು ನೀರಿನ ಬಾಟಲ್ ಗಳ ಪರೀಕ್ಷೆ ನಡೆಸಿದ್ದು, ಅದರಲ್ಲಿ ಹಲವು ಮಾದರಗಳಲ್ಲಿ ರಾಸಾಯನಿಕ ಅಂಶ ಪತ್ತೆಯಾಗಿದೆ ಎಂದು ಆಹಾರ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಬೆಂಗಳೂರಿನ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಸ್ ಕ್ರೀಮ್ ಗಳಲ್ಲಿ ಅಪಾಯಕಾರಿ ರಾಸಾಯನಿಕ ಅಂಶ ಪತ್ತೆಯಾಗಿದ್ದು, 92 ಐಸ್ ಕ್ರೀಮ್ ಘಟಕಗಳಿಗೆ ನೋಟಿಸ್ ನೀಡಲಾಗಿದೆ. ತಯಾರಿಕಾ ಘಟಕಗಳಲ್ಲಿ ಲೋಪ ಬಂದ ಹಿನ್ನೆಲೆಯಲ್ಲಿ ಇದೀಗ 92 ಘಟಕಗಳಿಗೆ ನೋಟಿಸ್ ನೀಡಲಾಗಿದೆ. ಇನ್ನು 6 ಐಸ್ ಕ್ರೀಂ ಘಟಕಗಳಿಗೆ ಈಗಾಗಲೇ 38 ವಿಧಿಸಲಾಗಿದ್ದು, ಐಸ್ ಕ್ರೀಮ್ ಕೂಡ ಸೇಫ್ ಅಲ್ಲ ಅನ್ನೋದು ಆಹಾರ ಇಲಾಖೆಯ ಪರೀಕ್ಷೆಯಲ್ಲಿ ಬಯಲಾಗಿದೆ ಎಂದು ಸಚಿವ ದಿನೇಶ್…