Author: kannadanewsnow05

ಕೊಪ್ಪಳ : ನನ್ನ ಕತ್ತು ಕೊಯ್ದರು ನಾನು ಕಾಂಗ್ರೆಸ್ ಪಕ್ಷಕ್ಕೆ ಹೋಗಲ್ಲ. ಮತ್ತೆ ನಾನು ಬಿಜೆಪಿಗೆ ಹೋಗುತ್ತೇನೆ ಆದರೆ ಈಗ ಹೋಗಲ್ಲ ಎಂದು ಕೊಪ್ಪಳದಲ್ಲಿ ಬಿಜೆಪಿಯ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿಕೆ ನೀಡಿದರು. ಕೊಪ್ಪಳದಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಮತ್ತೆ ಬಿಜೆಪಿಗೆ ಹೋಗುತ್ತೇನೆ ಆದರೆ ಸದ್ಯ ಹೋಗಲ್ಲ ಆದರೆ ನನ್ನ ಕತ್ತು ಕೊಯ್ದರು ಕಾಂಗ್ರೆಸ್ ಗೆ ಮಾತ್ರ ಸೇರಲ್ಲ ಎಂದು ತಿಳಿಸಿದರು.ದಕ್ಷಿಣ ಕನ್ನಡದಲ್ಲಿ ಕೋಮು ಸೌಹಾರ್ದತೆ ಕಾಪಾಡಲು ಗೃಹ ಸಚಿವರಿಗೆ ಸ್ಪೀಕರ್ ಯುಟಿ ಖಾದರ್ ಪತ್ರ ಬರೆದ ವಿಚಾರವಾಗಿ ಈಶ್ವರಪ್ಪ ವಾಗ್ದಾಳಿ ನಡೆಸಿದರು. ಸ್ಪೀಕರ್ ಯುಟಿ ಖಾದರ್ ಕೋಮುವಾದಿಯಾಗಿದ್ದಾರೆ. ಮುಸ್ಲಿಂ ಗೂಂಡಾ ಯುವಕನ ಹತ್ಯೆಯಾಗಿದೆ. ಈ ಸೌಹಾರ್ದತೆ ಬಗ್ಗೆ ಗ್ರಹ ಸಚಿವರಿಗೆ ಪತ್ರ ಬರೆದಿದ್ದಾರೆ. ಸ್ಪೀಕರ್ ಆಗಿರುವ ಯುಟಿ ಖಾದರ್ ಅವರು, ಸಭಾಧ್ಯಕ್ಷರಾಗಿ ನಡೆದುಕೊಳ್ಳಬೇಕು ಹಿಂದೂ ಕಾರ್ಯಕರ್ತರ ಕೊಲೆ ಆದಾಗ ಏಕೆ ಮಾತಾಡಿಲ್ಲ? ಎಂದು ಪ್ರಶ್ನಿಸಿದರು.

Read More

ಬೆಂಗಳೂರು : ಬೆಂಗಳೂರಿನಲ್ಲಿ ಭಾರಿ ದೊಡ್ಡ ಪ್ರಮಾಣದಲ್ಲಿ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಕೋಟ್ಯಾಂತರ ರೂಪಾಯಿಗೆ ಬೆಲೆಬಾಳುವ ಜಮೀನಿಗಾಗಿ, ಜೀವಂತ ಇರುವ ವ್ಯಕ್ತಿಯ ಹೆಸರಿನಲ್ಲಿ ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿ ಮಾಡಿರುವ ಘಟನೆ ನಡೆದಿದೆ. ಕೋಟ್ಯಾಂತರ ಮೌಲ್ಯದ ಭೂಮಿಗಾಗಿ ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಲಾಗಿದೆ. ಜಮೀನು ಮಾಲೀಕ 50 ವರ್ಷಗಳ ಹಿಂದೆ ಮೃತಪಟ್ಟಿದ್ದಾನೆ ಎಂದು ಡೆತ್ ಸರ್ಟಿಫಿಕೇಟ್ ಸೃಷ್ಟಿಸಲಾಗಿದೆ. ಚೆಮಸಂದ್ರ ಗ್ರಾಮದ ಮುನಿಯಪ್ಪಗೆ ಡೆತ್ ಸರ್ಟಿಫಿಕೇಟ್ ನೀಡಿ ವಂಚನೆ ಎಸಗಲಾಗಿದೆ. ಬೆಂಗಳೂರು ಪೂರ್ವ ತಾಲೂಕಿನ ಚೇಮಸಂದ್ರ ಗ್ರಾಮದ ನಿವಾಸಿಯಾಗಿರುವ ಮುನಿಯಪ್ಪನಿಗೆ ಭೂಮಿ ಮಾರಿದ್ದ ನಾಗೇಶ್ ಹಾಗು ಖರೀದಿಸಿದ ನರೇಂದ್ರ ವಿರುದ್ಧ ಇದೀಗ ಪ್ರಕರಣ ದಾಖಲಾಗಿದೆ. ನರೇಂದ್ರ ಮತ್ತು ನಾಗೇಶ ಸೇರಿದಂತೆ ಇದೀಗ 21 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. 21 ಜನರ ವಿರುದ್ಧ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿಸಿ ಜಮೀನು ಲಪಟಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.ಜಮೀನಿನಲ್ಲಿ ಪತ್ನಿಯ ಸಮಾಧಿಯ ಮುಂದೆ ನಿಂತು…

Read More

ಬೆಂಗಳೂರು : ಮಾಜಿ ಸಂಸದ ಡಿಕೆ ಸುರೇಶ್ ಸಹೋದರಿ ಎಂದು ಹೇಳಿ ಕೋಟ್ಯಾಂತರ ರೂಪಾಯಿ ಚಿನಾಭರಣ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಜೈಲಲ್ಲಿ ಇದ್ದ ಆರೋಪಿ ಐಶ್ವರ್ಯ ಗೌಡಗೆ ಬೆಂಗಳೂರಿನ 1ನೇ ಸಿಸಿಎಚ್ ನ್ಯಾಯಾಲಯವು ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಹೌದು ಪಿ ಎಮ್ ಎಲ್ ಎ ಪ್ರಕರಣದಲ್ಲಿ ಐಶ್ವರ್ಯ ಗೌಡಗೆ ಜಾಮೀನು ಮಂಜೂರು ಮಾಡಲಾಗಿದೆ. ಬೆಂಗಳೂರಿನ 1ನೇ ಸಿಸಿಎಚ್ ನ್ಯಾಯಾಲಯ ಇದೀಗ ಐಶ್ವರ್ಯ ಗೌಡಳಿಗೆ ಜಾಮೀನು ಮಂಜೂರು ನೀಡಿ ಆದೇಶ ಹೊರಡಿಸಿದೆ. ಅನುಸೂಚಿತ ಪ್ರಕರಣವಿಲ್ಲದಿದ್ದರು ಇಡಿ ಬಂಧಿಸಿದೆ. ಮಹಿಳೆಗೆ ಬಂಧನದಿಂದ ವಿಶೇಷ ವಿನಾಯಿತಿ ಇದೆ ಎಂದು ಐಶ್ವರ್ಯ ಗೌಡ ಪರ ವಕೀಲ ಎಸ್ ಸುನಿಲ್ ಕುಮಾರ್ ವಾದಿಸಿದರು. ಹಾಗಾಗಿ ಸೇಷನ್ಸ್ ಕೋರ್ಟ್ ಐಶ್ವರ್ಯ ಗೌಡಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಇದೇ ಒಂದು ಪ್ರಕರಣದಲ್ಲಿ ಇಂದು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಮಾಜಿ ಸಂಸದ ಡಿಕೆ ಸುರೇಶ್ ಅವರಿಗೆ ವಿಚಾರಣೆಗೆ ಹಾಜರಾಗಿ ಎಂದು ಕಮೆಂಟ್ ನೀಡಿದೆ ಕಳೆದ ಜೂನ್…

Read More

ಮಂಗಳೂರು : ಮಂಗಳೂರಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಕಾರೊಂದು ಪಲ್ಟಿಯಾಗಿ ಯುವ ವೈದ್ಯರೊಬ್ಬರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ನಂತೂರು-ಪಂಪ್‌ವೆಲ್ ನಡುವೆ ನಿನ್ನೆ ತಡರಾತ್ರಿ ನಡೆದಿದೆ. ಮೃತ ವೈದ್ಯರನ್ನು ಕೇರಳದ ಆಳಪ್ಪುಝ ನಿವಾಸಿ, ದೇರಳಕಟ್ಟೆಯ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಅಲ್ಲಿಯೇ ಫಿಸಿಯೋಥೆರಪಿ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ| ಮೊಹಮ್ಮದ್ ಅಮಲ್ (29) ಎಂದು ತಿಳಿದುಬಂದಿದೆ. ಇನ್ನು ಕಾರಿನಲ್ಲಿದ್ದ ಕೇರಳ ಮೂಲದ ವೈದ್ಯ ವಿದ್ಯಾರ್ಥಿನಿ ಗಾಯಗೊಂಡಿದ್ದಾಳೆ. ನಂತೂರಿನ ತಾರೆತೋಟ ಬಳಿ ಘಟನೆ ನಡೆದಿದ್ದು, ರಾತ್ರಿ ಮಳೆ ಬರುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿದ ಕಾರು ಸ್ಕಿಡ್ ಆಗಿ ಡಿವೈಡರ್‌ಗೆ ಬಡಿದು ಬಳಿಕ ಮೂರು ಪಲ್ಟಿಯಾಗಿದೆ. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಈ ವೇಳೆ ಅವರು ಮೃತಪಟ್ಟಿದ್ದರು. ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಳಗಾವಿ : ಬೆಳಗಾವಿಯಲ್ಲಿ ಒಂದು ವಿಚಿತ್ರವಾದ ಘಟನೆ ನಡೆದಿದ್ದು, ವಿಷಕಾರಿ ಹಾವು ಕಚ್ಚಿಸಿಕೊಂಡ ಬಳಿಕ ರೈತನೋಬ್ಬ ಅದೇ ಹಾವಿನೊಂದಿಗೆ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದಿರುವ ಘಟನೆ, ಬೆಳಗಾವಿಯಲ್ಲಿ ನಡೆದಿದೆ. ಹೌದು ಬೆಳಗಾವಿ ತಾಲೂಕಿನ ಅಂಬೇವಾಡಿಯಲ್ಲಿ ಈ ಒಂದು ಘಟನೆ ನಡೆದಿದ್ದು ಜಮೀನಿನಲ್ಲಿ ಕೆಲಸ ಮಾಡುವಾಗ ರೈತನಿಗೆ ಹಾವು ಕಚ್ಚಿದೆ. ಕೂಡಲೇ ಹಾವನ್ನು ಬಾಟಲಿಯಲ್ಲಿ ಹಾಕಿಕೊಂಡು ರೈತ ಯಲ್ಲಪ್ಪ ಆಸ್ಪತ್ರೆಗೆ ಬಂದಿದ್ದಾನೆ. ರುಸೇಲ್ಸ್ ಎಂಬ ವಿಷಕಾರಿ ಹಾವು ಕಡಿದ ಹಿನ್ನೆಲೆಯಲ್ಲಿ ರೈತನ ಸ್ಥಿತಿ ಗಂಭೀರವಾಗಿದ್ದು ಬೆಳಗಾವಿಯ ಬಿಮ್ಸ್ ತುರ್ತು ಚಿಕಿತ್ಸಾ ಘಟಕದಲ್ಲಿ ರೈತನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

Read More

ಹಾಸನ : ಹಾಸನದಲ್ಲಿ ಭಾರಿ ಮಳೆಯಿಂದಾಗಿ ಶಿರಾಡಿ ಘಾಟ್ ರಸ್ತೆಯಲ್ಲಿ ತಡೆಗೋಡೆ ನಾಶವಾಗಿದ್ದು, ಮಳೆಗೆ ನೂತನವಾಗಿ ನಿರ್ಮಿಸಿದ್ದ ರಸ್ತೆ ತಡೆಗೋಡೆ ಕೊಚ್ಚಿ ಹೋಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಆನೆ ಮಹಲ್ ಬಳಿ ಈ ಒಂದು ಘಟನೆ ಸಂಭವಿಸಿದೆ. ಹೌದು ಶಿರಾಡಿ ಘಾಟ್ ಬಳಿ ಆನೆ ಮಹಲ್ ಎಂಬಲ್ಲಿ ಸುಮಾರು 100 ಮೀಟರ್ ಉದ್ದಕ್ಕೂ ಗೆಬ್ರಿಯನ್ ವಾಲ್ ಕುಸಿದು ಬಿದ್ದಿದೆ. ರಸ್ತೆಯ ಸುರಕ್ಷತೆಗೆ ಎಂದು ನಿರ್ಮಿಸಿದ್ದ ತಡೆಗೋಡೆ ಇದೀಗ ಭಾರಿ ಮಳೆಗೆ ಕೊಚ್ಚಿಕೊಂಡು ಹೋಗಿದೆ. ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಶಿರಾಡಿ ಘಾಟ್ ರಸ್ತೆಯಲ್ಲಿ ಇಂತಹ ಅವಘಡಗಳು ಹೆಚ್ಚುತ್ತಿವೆ.

Read More

ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಲ್ಲಿ ಕೊಲೆ ಆರೋಪಿ ನಟ ದರ್ಶನಗೆ ರಾಜಾತಿಥ್ಯ ನೀಡಲಾಗುತ್ತಿತ್ತು ಎನ್ನುವ ಪ್ರಕರಣ ಬಾರಿ ಸದ್ದು ಮಾಡಿತ್ತು. ಅದಾದ ಬಳಿಕ ತನಿಖೆ ಕೂಡ ನಡೆದಿತ್ತು. ಇದೀಗ ಪರಪ್ಪನ ಅಗ್ರಹಾರ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿ ಗಾಂಜಾ, ಚಾಕು, ಬ್ಲೇಡ್ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಹೌದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೇಲೆ ಕೇಂದ್ರ ಅಪರಾಧ ವಿಭಾಗ ಪೊಲೀಸರು ಏಕಾಏಕಿ ದಾಳಿ ನಡೆಸಿ ಗಾಂಜಾ, ಬ್ಲೇಡ್, ಚಾಕು, ನಗದು ಹಣ ಸೇರಿ ಹಲವಾರು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ನಿನ್ನೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಸಿಸಿಬಿ ತಂಡ ಜೈಲಿನಲ್ಲಿ ತೀವ್ರ ತಪಾಸಣೆ ನಡೆಸಿದ್ದು, ಕೈದಿಗಳ ಬಳಿಯಿಂದ ಅನೇಕ ಅಸಾಧಾರಣ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಸಿಸಿಬಿ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿಕೊಂಡಿದ್ದು, ಈ ಬಗ್ಗೆ ತನಿಖೆ ಮುಂದುವರೆಸಿದ್ದಾರೆ. ದಾಳಿ ವೇಳೆ ಕಸೂರಿ ಮೇತಿ ಸೊಪ್ಪು, ಬೀಡಿ ಪ್ಯಾಕೆಟ್ಸ್, ಗಾಂಜಾ ಚಿಲ್ಲಂಸ್, ಮೊಳೆಗಳು, ಹರಿತವಾದ…

Read More

ಶಿವಮೊಗ್ಗ : ಶಿವಮೊಗ್ಗದಲ್ಲಿ ಭಾರಿ ಪ್ರಮಾಣದಲ್ಲಿ ಭೂಕುಸಿತಗೊಂಡಿದ್ದು, ಕುಂದಗಲ್ ಬಳಿ ಭಾರಿ ಪ್ರಮಾಣದಲ್ಲಿ ಬಿರುಕು ಬಿಟ್ಟು ಭೂಮಿ ಕುಸಿತವಾಗಿದೆ. ಹೊಸನಗರ ತಾಲೂಕಿನ ಅರಮನೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದಗಲ್ ನಲ್ಲಿ ಈ ಘಟನೆ ಸಂಭವಿಸಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕುಂದಗಲ ಗ್ರಾಮದಲ್ಲಿ ಒಂದು ಅಡಿ ಕುಸಿತ ಕಂಡಿದ್ದ ಭೂಮಿಯಲ್ಲಿ ಮತ್ತೆ ಎರಡು ಅಡಿ ಕುಸಿತವಾಗಿದೆ. ಎರಡು ಅಡಿ ಆಳಕ್ಕೆ ಭೂಮಿ ಕುಸಿದಿವೆ.ಗ್ರಾಮದ ರಸ್ತೆಯು ಸೇರಿದಂತೆ ಭಾರಿ ಪ್ರಮಾಣದಲ್ಲಿ ಭೂಮಿ ಕುಸಿತವಾಗಿದೆ. ಸ್ಥಳಕ್ಕೆ ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.ಅಲ್ಲದೆ ಬಹುವಿಜ್ಞಾನ ಮತ್ತು ಕಂದಾಯ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ನಡೆಸಲಾಗುತ್ತಿದೆ.

Read More

ಬೆಂಗಳೂರು : ಬೆಂಗಳೂರಿನಲ್ಲಿ ಘೋರವಾದ ದುರಂತ ಒಂದು ನಡೆದಿದ್ದು, ಕರೆಂಟ್ ಶಾಕ್ ನಿಂದ ಬಾಲಕನೊಬ್ಬ ಸುಟ್ಟ ಗಾಯಗಳಿಂದ ನೆರಳಾಡುತ್ತಿರುವ ಘಟನೆ, ಬೆಂಗಳೂರಿನ ಕೆಆರ್ ಪುರಂ 53ನೇ ವಾರ್ಡ್ನಲ್ಲಿ ಈ ಒಂದು ದುರ್ಘಟನೆ ಸಂಭವಿಸಿದೆ. ನಿರ್ಮಾಣ ಹಂತದ ಕಟ್ಟಡದ ಬಳಿ ವಿದ್ಯುತ್ ಪ್ರವಹಿಸಿದ್ದರಿಂದ ಬಾಲಕನಿಗೆ ಗಂಭೀರವಾದ ಗಾಯಗಳಾಗಿವೆ. ಹೌದು ಅಪಾಯಕಾರಿಯಾಗಿ ಹಾದುಹೋಗಿರುವ ವಿದ್ಯುತ್ ತಂತಿಯ ಬಳಿ ನಿನ್ನೆ ಆಟ ಆಡುತ್ತಾ ಬಾಲಕ ಪೊರಕೆ ಬಿಸಾಡಲು ಹೋಗಿದ್ದ. ವಿದ್ಯುತ್ ತಂತಿಗೆ ಪೊರಕೆ ತಾಗಿ ಬಾಲಕನಿಗೆ ಕರೆಂಟ್ ಶಾಕ್ ಹೊಡೆದಿದೆ. ಕರೆಂಟ್ ಶಾಕ್ ಗಾಯಗಳಿಂದ ಬಾಲಕ ಇದೀಗ ತೀವ್ರವಾಗಿ ನರಳಾಡುತ್ತಿದ್ದಾನೆ. ಸದ್ಯ ಬಾಲಕನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಸುಟ್ಟ ಗಾಯಗಳ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತಂತೆ ಕೆಆರ್ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತದಲ್ಲಿ 11 ಜನರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಇಂದು ಹೈಕೋರ್ಟ್ ನಲ್ಲಿ ಪಿಐಎಲ್ ವಿಚಾರಣೆ ನಡೆಯಿತು. ಇದೆ ವೇಳೆ ರಾಜ್ಯ ಸರ್ಕಾರ ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟಕ್ಕೆ ವರದಿಯನ್ನು ಸಲ್ಲಿಸಿತು. ವಿಚಾರಣೆಯ ಬಳಿಕ ಆರ್‌ಸಿಬಿ ಕೆ ಎಸ್ ಸಿ ಎ ಹಾಗೂ ಡಿಎನ್ಎ ಸಂಸ್ಥೆಗಳಿಗೆ ಹೈ ಕೋರ್ಟ್ ನೋಟಿಸ್ ನೀಡಿ ವಿಚಾರಣೆಯನ್ನು ಜೂನ್ 23ಕ್ಕೆ ನಿಗದಿಪಡಿಸಿತು ವಿಚಾರಣೆಯ ಆರಂಭದ ವೇಳೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಕೆ ಏಕೆ ಎಂದು ಹೈಕೋರ್ಟ್ ಪ್ರಶ್ನಿಸಿತು. ಮೂರನೇ ವ್ಯಕ್ತಿಗಳ ವಿರುದ್ಧ ಅಭಿಪ್ರಾಯವೆಂದು ಭಾವಿಸಬಾರದು ಹಾಗಾಗಿ ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಲಾಗಿದೆ ಎಂದು ಹೈಕೋರ್ಟಿಗೆ ಸರ್ಕಾರದ ಪರವಾಗಿ ಎಜಿ ಶಶಿಕಿರಣಶೆಟ್ಟಿ ಉತ್ತರಿಸಿದರು. ದಾಖಲೆಗಳನ್ನು ಹಂಚಿಕೊಳ್ಳುವುದಕ್ಕೆ ಸರ್ಕಾರದ ಆಕ್ಷೇಪವಿಲ್ಲ. ಆದರೆ ನ್ಯಾಯಾಂಗ ತನಿಖೆ ಬಾಕಿ ಇರುವುದರಿಂದ ವರದಿ ಬಹಿರಂಗ ಅಗಿದು ಬೇಡ ಎಂದು ಎಜಿ ಶಶಿಕಿರಣ್ ಶೆಟ್ಟಿ ತಿಳಿಸಿದರು. ಈ ಪ್ರಕರಣದಲ್ಲಿ ಅಮೈಕಸ್ ಕ್ಯೂರಿ ಅಗತ್ಯವಿದೆ ಎಂದು ಇದೇ ವೇಳೆ ಹೈಕೋರ್ಟ್…

Read More