Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ನಿನ್ನೆ ಬಿಹಾರ್ ಚುನಾವಣೆಯ ಫಲಿತಾಂಶ ಇಡೀ ದೇಶದಲ್ಲಿ ಕಾಂಗ್ರೆಸ್ ಕುಗ್ಗುವಂತೆ ಮಾಡಿದೆ. ಹಾಗಾಗಿ ಕರ್ನಾಟಕದಲ್ಲಿ ನವೆಂಬರ್ ಕ್ರಾಂತಿ ಹಾಗೂ ರಾಜ್ಯ ಸಚಿವ ಸಂಪುಟ ಪುನಾರಚನೆಗೆ ತಾತ್ಕಾಲಿಕ ಬ್ರೇಕ್ ಹಾಕಲಾಗಿದ್ದು ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಐದು ವರ್ಷಗಳ ಕಾಲ ಸಿಎಂ ಆಗಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹೌದು ಒಂದು ಕಡೆ ಈ ಫಲಿತಾಂಶ, ಡಿಕೆಶಿ ಟೀಮ್‌ಗಿದ್ದ ಅಧಿಕಾರ ಹಸ್ತಾಂತರ ಆಸೆಗೆ ತಣ್ಣೀರೆರಚಿದೆ. ಇನ್ನೊಂದು ಕಡೆ ಪುನಾರಚನೆ ಮಾಡಬೇಕೆಂಬ ಸಿಎಂ ಬೇಡಿಕೆಗೆ ಹೈಕಮಾಂಡ್ ಈಗಿನ ಸ್ಥಿತಿಯಲ್ಲಿ ಒಪ್ಪಿಗೆ ಕೊಡುತ್ತಾ ಅನ್ನೋ ಪ್ರಶ್ನೆಯೂ ಎದ್ದಿದೆ. ಹೈಕಮಾಂಡ್ ಸೋಲು ಸದ್ಯಕ್ಕೆ ಕರ್ನಾಟಕದಲ್ಲಿ ಬದಲಾವಣೆ ಪರ್ವಕ್ಕೆ ಕೈ ಹಾಕೋದಿಲ್ಲವಾ ಅನ್ನೋ ಚರ್ಚೆಗಳು ಪಕ್ಷದಲ್ಲೇ ಜೋರಾಗಿ ನಡೀತಿವೆ. ಬಿಹಾರ ಫಲಿತಾಂಶ ರಾಜ್ಯದ ಮೇಲೆ ಎಷ್ಟು ಪರಿಣಾಮ ಬೀರಿದೆ ಎಂದರೆ, ರಾಜ್ಯ ಕಾಂಗ್ರೆಸ್ ವಲಯದಲ್ಲಿ ಮುಂದೇನು ಅನ್ನೋ ಪ್ರಶ್ನೆ ಹುಟ್ಟಿಸಿದೆ. ಕಾಂಗ್ರೆಸ್ ಹೀನಾಯ ಸೋಲು ಕರ್ನಾಟಕದಲ್ಲಿ ಎದ್ದಿರೋ ಕ್ರಾಂತಿ ಬಿರುಗಾಳಿಗೆ ತಾತ್ಕಾಲಿಕ ಬ್ರೇಕ್…
ಬಾಗಲಕೋಟೆ : ಬಾಗಲಕೋಟೆಯಲ್ಲಿ ಅಮಾನವೀಯ ಘಟನೆ ಒಂದು ನಡೆದಿದ್ದು, ಗೂಡ್ಸ್ ವಾಹನದ ಮಾಲೀಕನ ಪತ್ನಿ ಜೊತೆಗೆ ಸಲುಗೆಯಿಂದ ಇದ್ದಾನೆ ಎಂದು ಚಾಲಕನನ್ನು ಅಪಹರಿಸಿ ಮನ ಬಂದತ್ತೆ ಥಳಿಸಿ , ಕ್ರೌರ್ಯ ಮೆರೆದಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಚಾಲಕನ ಕೈಕಟ್ಟಿ ಕಾಲುಗಳಿಗೆ ದೊಣ್ಣೆಯಿಂದ ಥಳಿಸಲಾಗಿದೆ. ಹಲ್ಲೆಯ ದೃಶ್ಯವನ್ನು ಮೊಬೈಲ್ನಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಬಾಗಲಕೋಟೆಯ ತುಳಸಿಗಿರಿ ಗುಡ್ಡದಲ್ಲಿ ಈ ಒಂದು ಹಲ್ಲೆ ನಡೆದಿದೆ. ಗೂಡ್ಸ್ ವಾಹನದ ಚಾಲಕ ಪ್ರಕಾಶ್ ಮೇಲೆ ಮಾಲೀಕ ಯಂಕಪ್ಪ ಮನಬಂದಂತೆ ಥಳಿಸಿದ್ದಾನೆ. ಯಂಕಪ್ಪ ಪತ್ನಿ ಜೊತೆಗೆ ಚಾಲಕ ಪ್ರಕಾಶ್ ಸಲುಗೆಯಿಂದ ಇದ್ದ ಎಂಬ ಕಾರಣಕ್ಕೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾನೆ. ಬಳಿಕ ಚೂರಿಯಿಂದ ಕೂಡ ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ. ಒಟ್ಟು 10 ಜನರ ಸೇರಿ ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆ. ಚಾಲಕ ಪ್ರಕಾಶ್ ಕಾಲುಗಳೆಲ್ಲ ಊದಿಕೊಂಡಿವೆ.
ದಕ್ಷಿಣಕನ್ನಡ : ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದರೆ ತಾಲೂಕಿನ ಪೊಲೀಸ್ ಠಾಣೆಯಲ್ಲಿ, ವಿಚಾರಣೆಯ ವೇಳೆ ಮೂವರ ಮೇಲೆ ಇನ್ಸ್ಪೆಕ್ಟರ್ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಮೂಡುಬಿದರೆ ಠಾಣೆಯ ಇನ್ಸ್ಪೆಕ್ಟರ್ ಸಂದೇಶ ವಿರುದ್ಧ ಈ ಒಂದು ಗಂಭೀರ ಆರೋಪ ಕೇಳಿ ಬಂದಿದ್ದು, ಕಳೆದ ಮೇನಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅಪ್ರಾಪ್ತ 16 ವರ್ಷದ ಬಾಲಕ 18 ವರ್ಷದ ಯುವಕ ಹಾಗೂ ಮಹಿಳೆಯ ಮೇಲೆ ಇನ್ಸ್ಪೆಕ್ಟರ್ ಸಂದೇಶ್ ಹಲ್ಲೆ ಮಾಡಿದ್ದಾರೆ. 2025 9ರ ರಾತ್ರಿ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದ್ದು, ಈ ಕುರಿತು ಮಾನವ ಹಕ್ಕುಗಳ ಆಯೋಗ ಕಾನೂನು ಸೇವಾ ಪ್ರಾಧಿಕಾರಕ್ಕೆ ದೂರು ಸಲ್ಲಿಸಲಾಗಿದೆ. ಬಾಲಕ ಹಾಗೂ ಮಹಿಳೆಯ ಮೇಲೆ ಇನ್ಸ್ಪೆಕ್ಟರ್ ದರ್ಪ, ದೌರ್ಜನ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ಸ್ಪೆಕ್ಟರ್ ಹಲ್ಲೆ ಮಾಡಿರುವ ಕುರಿತು ಸಮಿತಿ ನಾಯಕ್ ರಾಜ್ಯ ಮಾನವ ಹಕ್ಕುಗಳು ಆಯೋಗ ಹಾಗೂ ಕಾನೂನು ಪ್ರಾಧಿಕಾರಕ್ಕೆ ಈ ಕುರಿತು ದೂರು ಸಲ್ಲಿಸಿದ್ದಾರೆ.
ಬೆಳಗಾವಿ : ಸಾಮಾನ್ಯವಾಗಿ ದೇಶದಲ್ಲಿ ಎಲ್ಲೇ ಸೈಬರ್ ವಂಚನೆ ಪ್ರಕರಣಗಳು ನಡೆದರೂ ಅದರ ಹಿಂದೆ ವಿದೇಶಿ ವಂಚಕರ ಕೈವಾಡ ಇರೋದು ಕೇಳಿದ್ದೇವೆ. ಆದರೆ ಇದೀಗ ಬೆಳಗಾವಿಯಲ್ಲೇ ಕುಳಿತು ಅಮೆರಿಕದ ನಾಗರಿಕರಿಗೆ ಮಂಕು ಬೂದಿ ಎರಚಿ ವಂಚನೆ ಎಸುಗುತ್ತಿದ್ದ 33 ಸೈಬರ್ ವಂಚಕರನ್ನು ಬೆಳಗಾವಿ ಪೊಲೀಸರು ಅರೆಸ್ಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹೌದು ಸಾಮಾನ್ಯವಾಗಿ ಕರ್ನಾಟಕದಲ್ಲಿ ಎಲ್ಲೇ ಸೈಬರ್ ವಂಚನೆ ನಡೆದರೂ, ಅದರ ಹಿಂದೆ ವಿದೇಶಿಗರ ಲಿಂಕ್ ಇರುತ್ತಿತ್ತು. ಆದ್ರೆ ಈಗ ಕುಂದಾನಗರಿಯಲ್ಲಿ ನಡೆದಿರೋದೇ ಬೇರೆ. ಬೆಳಗಾವಿಯಲ್ಲಿ ಕುಳಿತು ವಿಶ್ವದ ದೊಡ್ಡಣ್ಣ ಎನ್ನುವ ಅಮೆರಿಕದ ನಾಗರಿಕರಿಗೆ ಚಳ್ಳೆಹಣ್ಣು ತಿನ್ನಿಸಿದ್ದಾರೆ. ಕಾಲ್ ಸೆಂಟರ್ ಹೆಸರಿನಲ್ಲಿ ಅನುಮತಿ ಪಡೆದು ವಂಚಿಸುತ್ತಿದ್ದ ಸೈಬರ್ ವಂಚಕರನ್ನ ಬೆಳಗಾವಿ ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದಾರೆ. ಘಟನೆ ಬೆಳಕಿಗೆ ಬಂದಿದ್ದೆಗೆ? ಆರೋಪಿಗಳು ಬೆಳಗಾವಿಯ ಅಜಮ್ ನಗರದ ಕುಮಾರ್ ಹಾಲ್‌ನಲ್ಲಿ ಬಾಡಿಗೆ ಮನೆ ಪಡೆದು ದಂಧೆ ನಡೆಸುತ್ತಿದ್ದರು ಎನ್ನಲಾಗಿದೆ. ಕಾಲ್ ಸೆಂಟರ್ ಹೆಸರಿನಲ್ಲಿ ದಂಧೆ ಶುರು ಮಾಡಿದ್ದರು. ಪ್ರತಿದಿನ ನೂರಾರು ಜನರಿಗೆ ಕರೆ ಮಾಡಿ ಯಾಮಾರಿಸುತ್ತಿದ್ದರು.…
ದಕ್ಷಿಣಕನ್ನಡ : ಇಂದು ಬೆಳಿಗ್ಗೆ ತಾನೇ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಫುಟ್ಪಾತ್ ಒಂದಕ್ಕೆ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದು, ಆರು ಜನರಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ನಡೆದಿತ್ತು. ಇದೀಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಹೌದು ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರು ಸಿಗ್ನಲ್ ಬಳಿ ಸರಣಿ ಅಪಘಾತ ಸಂಭವಿಸಿ, ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ಎರಡು ಟ್ಯಾಂಕರ್ ಹಾಗೂ ಆಟೋರಿಕ್ಷಾ ಕಾರಿನ ಮಧ್ಯ ಸರಣಿ ಅಪಘಾತ ಸಂಭವಿಸಿದೆ. ಸಿಗ್ನಲ್ ನಲ್ಲಿ ಟ್ಯಾಂಕರ್ ಹಿಂದೆ ಕಾರು ಹಾಗು ಆಟೋರಿಕ್ಷಾ ನಿಂತಿದ್ದವು. ಈ ವೇಳೆ ಹಿಂದಿನಿಂದ ಬಂದು ಮತ್ತೊಂದು ಟ್ಯಾಂಕರ್ ಆಟೋಗೆ ಡಿಕ್ಕಿ ಹೊಡೆದಿದೆ. ಆಟೋ ರಿಕ್ಷಾಗೆ ಡಿಕ್ಕಿ ಹೊಡೆದು ಎದುರಿಗೆ ನಿಂತಿದ್ದ ಕಾರಿಗೆ ಗುದ್ದಿದೆ. ಬಳಿಕ ಅದರ ಮುಂದೆ ನಿಂತಿದ್ದ ಮತ್ತೊಂದು ಟ್ಯಾಂಕರ್ ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಎರಡು ಟ್ಯಾಂಕರ್ ಗಳ ಮಧ್ಯೆ ಸಿಲುಕಿ ಆಟೋ ರಿಕ್ಷಾ ಅಪ್ಪಚ್ಚಿಯಾಗಿದೆ.…
ಬೆಳಗಾವಿ : ಜಿಲ್ಲೆಯ ಭೂತರಾಮನಹಟ್ಟಿಯ ಕಿತ್ತೂರುರಾಣಿ ಚೆನ್ನಮ್ಮ ಕಿರು ಮೃಗಾಲಯದಲ್ಲಿ 28 ಕೃಷ್ಣ ಮೃಗಗಳ ಅಸಹಜವಾಗಿ ಸಾವನ್ನಪ್ಪಿರುವ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಕಳವಳ ವ್ಯಕ್ತಪಡಿಸಿದ್ದು, ತನಿಖೆಗೆ ಆದೇಶಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು, ಇನ್ನೂ ಈ ಜಿಂಕೆಗಳು ಕಲುಷಿತ ನೀರು, ಆಹಾರ ಸೇವಿಸಿ ಕಾಯಿಲೆಗೆ ತುತ್ತಾಗಿ ಮೃತಪಟ್ಟಿವೆಯೇ ಅಥವಾ ಬೆಕ್ಕು ಹಾಗೂ ಇನ್ನಿತರ ಸಾಕು ಪ್ರಾಣಿಗಳಿಂದ ಈ ಕಾಯಿಲೆ ಹರಡಿದೆಯೇ ಎಂಬ ಬಗ್ಗೆ ತಜ್ಞರ ಸಮಿತಿ ರಚಿಸಿ, ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ. ಮೃಗಾಲಯದಲ್ಲಿರುವ ಪ್ರಾಣಿಗಳು ಈ ರೀತಿ ಸಾವಿಗೀಡಾಗುವುದು ಆತಂಕದ ವಿಚಾರವಾಗಿದ್ದು, ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಮತ್ತು ಸಿಬ್ಬಂದಿಯ ನಿರ್ಲಕ್ಷ್ಯವಿದ್ದಲ್ಲಿ ನಿಯಮಾನುಸಾರ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಆದೇಶ ನೀಡಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಜಿಂಕೆಗಳು ಸಾಂಕ್ರಾಮಿಕ ಕಾಯಿಲೆಯಿಂದ ಮೃತಪಟ್ಟಿವೆ ಎಂದು ತಿಳಿದುಬಂದಿದೆ. ಹೀಗಾಗಿ ಮೃಗಾಲಯದ ಬೇರೆ ಯಾವುದೇ ಪ್ರಾಣಿಗಳಿಗೂ ಸೋಂಕು ತಗುಲದಂತೆ ಮುಂಜಾಗರೂಕತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಬೆಂಗಳೂರು : ಬೆಂಗಳೂರಿನಲ್ಲಿ ಸ್ಯಾಂಡಲ್ವುಡ್ ನಟಿ ಒಬ್ಬರಿಗೆ ಉದ್ಯಮಿ ವೆಂಕಟೇಶ ರೆಡ್ಡಿ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಇದೀಗ ಅರವಿಂದ್ ವೆಂಕಟೇಶ ರೆಡ್ಡಿಯನ್ನು ಅರೆಸ್ಟ್ ಮಾಡಿದ್ದಾರೆ. ಶ್ರೀಲಂಕದಿಂದ ಬೆಂಗಳೂರಿಗೆ ಬರುವಾಗ ಆರೋಪಿ ಲಾಕ್ ಆಗಿದ್ದಾನೆ. ಕಳೆದ ತಿಂಗಳು 17ರಂದು ಅರವಿಂದ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಅರೆಸ್ಟ್ ಆಗಿರುವ ವೆಂಕಟೇಶ್ ರೆಡ್ಡಿ ಸ್ಯಾಂಡಲ್ ನಡಿಗೆ ಲೈಂಗಿಕ ಕಿರುಕುಳ ನೀಡಿದ್ದು, ಈತ AVR ಗ್ರೂಪ್ ಸಂಸ್ಥಾಪಕನಾಗಿದ್ದು ಅಲ್ಲದೆ ಚಲನಚಿತ್ರ ನಿರ್ಮಾಪಕ ಕೂಡ ಆಗಿದ್ದಾನೆ ನಟಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಸದ್ಯ ಪೋಲಿಸಲು ಉದ್ಯಮಿಯನ್ನು ಅರೆಸ್ಟ್ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಕನ್ನಡದಲ್ಲಿ 9ಕ್ಕೂ ಅಧಿಕ ಸಿನಿಮಾಗಳಲ್ಲಿ ಈ ನಟಿ ಅಭಿನಯಿಸಿದ್ದಾರೆ. 2021ರಲ್ಲಿ ಅರವಿಂದ್ಗೂ ಈ ನಟಿಗೂ ಪರಿಚಯ ಬೆಳೆದಿತ್ತು. 2022ರಲ್ಲಿ ಶ್ರೀಲಂಕಾದಲ್ಲಿ ನಡೆದ ‘ಲಾರ್ಸ್ ಕ್ರಿಕೆಟ್ ಕಪ್’ ಉದ್ಘಾಟನೆಗೆ ಬರುವಂತೆ ಅರವಿಂದ್ ನಟಿ ಬಳಿ ಕೇಳಿದ್ದ. ಅಂತೆಯೇ ನಟಿ ತೆರಳಿದ್ದರು. ಅಲ್ಲಿಂದ ಇಬ್ಬರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆಯಿತು.…
ಬೆಂಗಳೂರು :- ಇಡೀ ನಾಡಿಗೆ ಹೊಸ ಆದರ್ಶವನ್ನು ರೂಪಿಸಿದ ಎಲ್ಲರ ಅಚ್ಚುಮೆಚ್ಚಿನ ತಾಯಿ ಪದ್ಮಶ್ರೀ ಸಾಲುಮರದ ತಿಮ್ಮಕ್ಕನವರು ನಮ್ಮನ್ನು ಅಗಲಿರುವುದು ನೋವಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಸಾಲುಮರದ ತಿಮ್ಮಕ್ಕನವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಗೌರವ ನಮನ ಸಲ್ಲಿಸಿದ ಬಳಿಕ ಅವರು ಮಾತನಾಡಿದರು. ಸಾಲುಮರದ ತಿಮ್ಮಕ್ಕನವರ ಅಗಲಿಕೆಯು ವೈಯಕ್ತಿಕವಾಗಿ ನನಗೆ ಅಪಾರವಾದ ನಷ್ಟವಾಗಿದೆ. ತಿಮ್ಮಕ್ಕನವರು ನನಗೆ ಹಾಗೂ ನಮ್ಮ ಕುಟುಂಬಕ್ಕೆ ಬಹಳ ಹತ್ತಿರವಾಗಿದ್ದಂತವರು. ಬಹುಶಃ ಯಾರು ಕೂಡ ನಡೆಯದ ದಾರಿಯನ್ನು ಸೃಷ್ಟಿ ಮಾಡಿ, ಪರಿಸರ ಸಂರಕ್ಷಣೆಯ ಮಾತನ್ನು, ಕೃತಿಯಲ್ಲಿ ಮಾಡಿ ತೋರಿಸಿದವರು. ಅತ್ಯಂತ ಬಡ ಕುಟುಂಬದಿಂದ ಬಂದಂತ ಸಾಲುಮರದ ತಿಮ್ಮಕ್ಕ, ಮಕ್ಕಳಿಲ್ಲ ಎಂಬ ಕಾರಣಕ್ಕಾಗಿ ಗಿಡಗಳನ್ನು ನೆಡುವ ಮೂಲಕ ಅವೇ ತನ್ನ ಮಕ್ಕಳು ಎಂದು ಸಾಕಿದರು. ಜಗತ್ತಿಗೆ, ಪರಿಸರ ಕ್ಷೇತ್ರಕ್ಕೆ ಆದರ್ಶವನ್ನು ಕೊಟ್ಟಿದ್ದಾರೆ. ಇತ್ತೀಚೆಗೆ ಬ್ರೆಜಿಲ್‌ನಲ್ಲಿ ನಡೆದ ಅತಿದೊಡ್ಡ ಸಮಾವೇಶದಲ್ಲಿ, ಜಗತ್ತಿನಲ್ಲಿ ಪರಿಸರ ಹಾಳಾಗುತ್ತದೆ. ಮನುಷ್ಯನ ಮೇಲೆ ಪರಿಣಾಮ ಬೀರುತ್ತದೆ ಎಂಬ…
ಬೆಂಗಳೂರು : ಬೆಂಗಳೂರಲ್ಲಿ ಬೆಚ್ಚಿ ಬೀಳಿಸೋ ಘಟನೆಯೊಂದು ನಡೆದಿದ್ದು ಕೆಲಸ ಕೊಟ್ಟ ಮಾಲೀಕ ದೇವರಂತೆ ಎನ್ನುವ ಮಾತಿದೆ. ಆದರೆ ಇಲ್ಲಿ ಚಿನ್ನದಾಸೆಗೆ ಮಾಲೀಕನಿಗೆ ಚಾಕುವಿನಿಂದ ಇರಿದು ನಡುರಸ್ತೆಯಲ್ಲಿ ಚಿನ್ನದ ಚೈನ್ ದೋಚಿಕೊಂಡು ಪರಾರಿಯಾಗಿರುವ ಘಟನೆ ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ಸೂಲಿಕೆರೆ ಬಳಿ ನಡೆದಿದೆ. ಕಡಿಮೆ ಬೆಲೆಗೆ ನಿವೇಶನಗಳು ಮಾರಾಟಕ್ಕಿದ್ದು, ಅವುಗಳನ್ನು ತೋರಿಸುವುದಾಗಿ ಕಾರ್ಖಾನೆ ಮಾಲೀಕನನ್ನು ನಂಬಿಸಿ ಕರೆದುಕೊಂಡು ಹೋಗಿದ್ದ ಆರೋಪಿ ಈ ಕೃತ್ಯ ಎಸೆಗಿದ್ದಾನೆ. ಗಣೇಶ ಮೂರ್ತಿ ತಯಾರಿಸುವ ಕಾರ್ಖಾನೆ ಮಾಲೀಕ ಅಮರ್ ನಾರಾಯಣಸ್ವಾಮಿ ಗಾಯಗೊಂಡವರು. ಜಯಂತ್ (23) ಹಲ್ಲೆ ನಡೆಸಿ ಪರಾರಿಯಾದ ಆರೋಪಿ. ಅಮರ್ ಅವರಿಗೆ ಆರೋಪಿಯು ಚಾಕುವಿನಿಂದ ಕುತ್ತಿಗೆ, ಭುಜ, ಹಣೆಗೆ ಇರಿದು ಗಾಯಗೊಳಿಸಿ ಅವರ ಕೊರಳಿನಲ್ಲಿದ್ದ 100 ಗ್ರಾಂ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳು ದೂರು ನೀಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರಕನ್ನಡದಲ್ಲಿ ತಾಲೂಕು ವೈದ್ಯಾಧಿಕಾರಿ ಸೇರಿದಂತೆ 10ಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿಗಳ ದಾಳಿ : ಬೆಚ್ಚಿದ ಜನತೆ!
ಉತ್ತರಕನ್ನಡ : ಜಿಲ್ಲೆಯ ದಾಂಡೇಲಿಯಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಕಳೆದ ನಾಲ್ಕು ದಿನಗಳಲ್ಲಿ ಹತ್ತಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. ತಾಲೂಕು ವೈದ್ಯಾಧಿಕಾರಿ ಸೇರಿದಂತೆ ಹತ್ತಕ್ಕೂ ಹೆಚ್ಚು ಜನರಿಗೆ ಗಂಭೀರವಾದ ಗಾಯಗಳಾಗಿದ್ದು ನಿನ್ನೆ ಒಂದೇ ದಿನ 5 ಹೆಚ್ಚು ಜನರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ವೈಷ್ಣವಿ (14) ಹಜರತ್ (8) ರೋಜಿ (70) ಪೆಟ್ರಿನ (60) ಹಾಗೂ ನಾಗಮ್ಮ (5) ಎನ್ನುವವರಿಗೆ ಗಂಭೀರವಾದ ಗಾಯಗಳಾಗಿವೆ. ಮನೆಗೆ ಹೋಗುತ್ತಿದ್ದ ದಾಂಡೇಲಿಯ ತಾಲೂಕು ವೈದ್ಯಾಧಿಕಾರಿ ಮೇಲು ಕೂಡ ಬೀದಿ ನಾಯಿಗಳು ದಾಳಿ ಮಾಡಿವೆ. ಸದ್ಯ ವೈದ್ಯಾಧಿಕಾರಿ ಅನಿಲ್ ಎರಡು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದಾಂಡೇಲಿಯಲ್ಲಿ ಸುಮಾರು 2000ಕ್ಕೂ ಹೆಚ್ಚು ಬೀದಿ ನಾಯಿಗಳು ಇವೆ ನಾಯಿಗಳ ಹಾವಳಿ ಹೆಚ್ಚಾಗಿದ್ದರೂ ಕೂಡ ನಗರಸಭೆ ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ದಾಂಡೇಲಿ ನಗರಸಭೆ ಅಧಿಕಾರಿಗಳ ವಿರುದ್ಧ ಸದ್ಯ ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದಾರೆ.














