Subscribe to Updates
Get the latest creative news from FooBar about art, design and business.
Author: ಸುರೇಶ್
"ಕನ್ನಡ ನ್ಯೂಸ್ ನೌ ಜಾಲತಾಣದ ಮುಖ್ಯ ಸಂಪಾದಕರಾದ ಸುರೇಶ್ ಅವರು ಕಳೆದ 4 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಸರ್ಕಾರದ ಯೋಜನೆಗಳು, ಶಿಕ್ಷಣ ಮತ್ತು ಪ್ರಚಲಿತ ವಿದ್ಯಮಾನಗಳನ್ನು ಸಾಮಾನ್ಯ ಜನರಿಗೂ ಅರ್ಥವಾಗುವಂತೆ ವಿವರಿಸುವುದು ಇವರ ವಿಶೇಷತೆ. ಈ ಮೊದಲು ವಿವಿಧ ವೆಬ್ಸೈಟ್ಗಳಲ್ಲಿ ನಾಗರಿಕ ಸಮಸ್ಯೆಗಳ ಬಗ್ಗೆ ವರದಿಗಾರರಾಗಿ ಕೆಲಸ ಮಾಡಿರುವ ಇವರು, ಸಮಯೋಚಿತ ಹಾಗೂ ವಿಶ್ವಾಸಾರ್ಹ ಮಾಹಿತಿ ನೀಡುವ ಮೂಲಕ ಓದುಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಡಿಜಿಟಲ್ ಸಾಕ್ಷರತೆ ಇವರ ನೆಚ್ಚಿನ ವಿಷಯಗಳಲ್ಲೊಂದು
ಬೆಂಗಳೂರು : ಬಳ್ಳಾರಿಯಲಿ ಬ್ಯಾನರ್ ವಿಚಾರವಾಗಿ ಗಲಾಟೆ ನಡೆದು, ಖಾಸಗಿ ಗನ್ ಮ್ಯಾನ್ ಗಳು ನಡೆಸಿದ ಫೈರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವನಪ್ಪಿದ್ದಾನೆ. ಇದೀಗ ಈ ಒಂದು ಘಟನೆ ನಡೆದ ಬಳಿಕ, ಶಾಸಕ ಜನಾರ್ಧನ ರೆಡ್ಡಿ ಸಿಎಂ ಸಿದ್ದರಾಮಯ್ಯ ಅಮಿತ್ ಶಾ ಅವರಿಗೆ ನನಗೆ Z+ ಭದ್ರತೆ ಬೇಕು ಎಂದು ಪತ್ರ ಬರೆದು ಮನವಿ ಮಾಡಿದ್ದಾರೆ. ಶಾಸಕ ಜನಾರ್ಧನ ರೆಡ್ಡಿ ಅವರು ಭದ್ರತೆಗೆ ಮನವಿ ಮಾಡಿಕೊಂಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಡಿಸಿಎಂ ಡಿಕೆ ಶಿವಕುಮಾರ್ ಇದ್ದಾರೆ. ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಭದ್ರತೆಯಾದರೂ ಕೇಳಲಿ, ಇರಾನ್ ಇಂದ ಯಾವುದಾದರು ಭದ್ರತೆ ತೆಗೆದು ಕೊಂಡು ಬರಲಿ, ಅಥವಾ ಅಮೆರಿಕಾದಿಂದಲೂ ತರಿಸಿಕೊಳ್ಳಲಿ ತಾವೇ ಭದ್ರತೆ ಮಾಡಿಕೊಳ್ಳಲಿ. ಜನಾರ್ದನ ರೆಡ್ಡಿಗೆ ಭದ್ರತೆ ನೀಡುವುದು ಬೇಡ ಅಂದವರು ಯಾರು? ಭದ್ರತೆ ಕೋರಿ ಜನಾರ್ಧನ ರೆಡ್ಡಿ ಪತ್ರ ಬರೆದಿರುವುದು ಬಹಳ ಸಂತೋಷ ಬಿಜೆಪಿಯ 100 ಕಾರ್ಯಕರ್ತರನ್ನೇ ಭದ್ರತೆಗೆ ನೇಮಿಸಿ ಕೊಡಲಿ ಎಂದು ಲೇವಡಿ ಮಾಡಿದರು.
ಬೆಂಗಳೂರು : ಬೆಂಗಳೂರಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ಮೂವರು ಹೆಣ್ಣು ಮಕ್ಕಳು ಎಂದು ಪತ್ನಿಗೆ ಪತಿ ಕೈಕೊಟ್ಟ ಘಟನೆ ವರದಿಯಾಗಿದೆ. ಪತ್ನಿ ಹಾಗು ಮೂವರು ಹೆಣ್ಣು ಮಕ್ಕಳನ್ನು ಪತಿ ಬಿಟ್ಟು ಹೋಗಿದ್ದಾನೆ. ಬೆಂಗಳೂರಿನ ಯಲಹಂಕದಲ್ಲಿ ಈ ಒಂದು ಘಟನೆ ನಡೆದಿದೆ. ಪತಿ ಹರೀಶ್ ಹಾಗೂ ಪತ್ನಿ ವರಲಕ್ಷ್ಮಿ ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದ್ದರು. ಈಗಾಗಲೇ ಇಬ್ಬರು ಹೆಣ್ಣು ಮಕ್ಕಳು ಆಗಿದ್ದು ಇದೀಗ ಒಂದುವರೆ ತಿಂಗಳ ಹಸುಗೂಸನ್ನು ಪತಿ ಹರೀಶ್ ಇದೀಗ ಬಿಟ್ಟು ಹೋಗಿದ್ದಾನೆ. ಖಾಸಗಿ ಆಸ್ಪತ್ರೆಯಲ್ಲಿ ವರಲಕ್ಷ್ಮಿ ನರ್ಸ್ ಆಗಿದ್ದು, ಇನ್ನು ಪತಿ ಹರೀಶ್ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದ. ಬೇರೊಬ್ಬ ಮಹಿಳೆಯ ಜೊತೆ ಹರಿದು ಸಂಬಂಧ ಹೊಂದಿದ್ದಾರೆ ಎಂದು ಪತ್ನಿ ವರಲಕ್ಷ್ಮಿ ಆರೋಪಿಸಿದ್ದಾರೆ. ಪತಿ ಹರೀಶ್ ಗೆ ಮೂವರು ಹೆಣ್ಣು ಮಕ್ಕಳನ್ನು ಸಾಕೋದಕ್ಕೆ ಆಗುತ್ತಿಲ್ಲ ಮಕ್ಕಳ ಪೋಷಣೆ ಕಷ್ಟ ಆಗುತ್ತಿದೆ ಎಂದು ವರಲಕ್ಷ್ಮಿ ಕಣ್ಣೀರು ಹಾಕುತ್ತಿದ್ದಾರೆ. ಈ ವಿಚಾರವಾಗಿ ತಿಂಗಳ ಹಿಂದೆ ಬೆಂಗಳೂರಿನ ಈಶಾನ್ಯ ಠಾಣೆಗೆ ದೂರು…
ಚಿಕ್ಕಮಗಳೂರು : ಚಿಕ್ಕಮಗಳೂರಲ್ಲಿ ಭೀಕರ ಕೊಲೆ ನಡೆದಿದ್ದು, ಕುಡಿದ ಮತ್ತಿನಲ್ಲಿ ಅಪ್ಪನೇ ಹೆತ್ತ ಮಗನನ್ನು ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಆನೆಗುಂಡಿ ಗ್ರಾಮದಲ್ಲಿ ನಡೆದಿದೆ. ಪ್ರದೀಪ್ ಆಚಾರ್ (29) ಮೃತ ದುರ್ದೈವಿ ಎಂದು ತಿಳಿದುಬಂದಿದ್ದು, ರಮೇಶ್ ಆಚಾರ್ ಮಗನನ್ನೇ ಕೊಲೆಗೈದಿರೋ ಅಪ್ಪ. ಕ್ಷುಲಕ ಕಾರಣಕ್ಕೆ ಕುಡಿದು ಅಪ್ಪ-ಮಗ ಇಬ್ಬರೂ ಆಗಾಗ ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು. ಕುಡಿದು ಗಲಾಟೆ ಮಾಡುತ್ತಿದ್ದ ಅಪ್ಪ-ಮಗನ ಕಾಟಕ್ಕೆ ಬೇಸತ್ತು ಪ್ರದೀಪ್ ತಾಯಿ ಮನೆ ಬಿಟ್ಟು ಹೋಗಿದ್ದರು. ಬಳಿಕ ಮನೆಯಲ್ಲಿ ಅಪ್ಪ-ಮಗ ಇಬ್ಬರೇ ವಾಸವಿದ್ದರು ಎಂದು ತಿಳಿದುಬಂದಿದೆ. ಶನಿವಾರ ರಾತ್ರಿ ಅಪ್ಪ-ಮಗನ ಮಧ್ಯೆ ಗಲಾಟೆ ನಡೆದ ಸಂದರ್ಭ ಮಗನನ್ನು ಕಡಿದು ಅಪ್ಪ ಅಲ್ಲೇ ಮಲಗಿದ್ದ. ಮಗ ಪ್ರದೀಪ್ ಇಡೀ ರಾತ್ರಿ ರಕ್ತದ ಮಡುವಿನಲ್ಲಿ ಬಿದ್ದು ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ. ಬೆಳಗ್ಗೆ ಮಗನ ಮೃತದೇಹವನ್ನು ಅಪ್ಪ ಹಾಲ್ನಿಂದ ಹೊರಕ್ಕೆ ಎಳೆದು ತಂದಿದ್ದ. ಇದನ್ನು ನೋಡಿದ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು,…
ಬಳ್ಳಾರಿ : ಬಳ್ಳಾರಿಯಲ್ಲಿ ಬ್ಯಾನರ್ ವಿಚಾರವಾಗಿ ಗಲಾಟೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪೊಲೀಸರು ಕಾಂಗ್ರೆಸ್ಸಿನ 10 ಕಾರ್ಯಕರ್ತರನ್ನು ಸಹ ರೆಸ್ಟ್ ಮಾಡಿದ್ದಾರೆ. ಕಾರ್ತಿಕ್ (25), ಮುಕ್ಕಣ್ಣ (28), ಇನಾಯತುಲ್ಲಾ (24), ರಾಜು (20), ಮುಸ್ತಫಾ (22), ಶ್ರೀಕಾಂತ್ (30), ಮೊಹಮ್ಮದ್ ರಸೂಲ್ (35), ಬಾಬು (38), ವೆಂಕಟೇಶ್ (38), ಮುಬಾಶೀರ್ (25) ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ. ಬಂಧಿತರಿಗೆ ಬ್ರೂಸ್ ಪೇಟೆ ಠಾಣೆ ಪೊಲೀಸರು ಮೆಡಿಕಲ್ ಟೆಸ್ಟ್ ಮಾಡಿಸಿದ್ದಾರೆ. ಮೂವರು ಗನ್ ಮ್ಯಾನ್ ಗಳು ಅರೆಸ್ಟ್ ಇನ್ನು ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆಗೆ ಕಾಂಗ್ರೆಸ್ ಕಾರ್ಯಕರ್ತ ಬಲಿ ಪ್ರಕರಣಕ್ಕೆ ಸಂಬಂಧಿಸದಂತೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸತೀಶ್ ರೆಡ್ಡಿ ಆಪ್ತ ಗುರುಚರಣ್ ಸಿಂಗ್ ಬಂದೂಕಿನಿಂದ ಹಾರಿದ್ದ ಬುಲೆಟ್ ನಿಂದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆಗೆ ಕಾಂಗ್ರೆಸ್ ಕಾರ್ಯಕರ್ತ ಬಲಿ ಪ್ರಕರಣಕ್ಕೆ ಸಂಬಂಧಿಸದಿಂತೆ ಬ್ರೂಸ್ ಪೇಟೆ ಪೊಲೀಸರು ಮೂವರು ಖಾಸಗಿ ಗನ್ ಮ್ಯಾನ್ ಗಳನ್ನು ಬಂಧಿಸಿದ್ದಾರೆ. ಈ…
ಬೆಂಗಳೂರು : ನಗರದ ಕುಮಾರಕೃಪಾ ರಸ್ತೆಯಲ್ಲಿನ ಚಿತ್ರಕಲಾ ಪರಿಷತ್ನಲ್ಲಿ ಆಯೋಜಿಸಿರುವ ಪ್ರತಿಷ್ಟಿತ 23ನೇ ಚಿತ್ರಸಂತೆಯನ್ನು ಕ್ವಾನ್ವಸ್ ಮೇಲೆ ಬರೆಯುವ ಮೂಲಕ ಸಿಎಂ ಸಿದ್ದರಾಮಯ್ಯ ಇಂದು ಉದ್ಘಾಟಿಸಿದರು. ಈ ಮೂಲಕ 8ನೇ ಬಾರಿ ಚಿತ್ರಸಂತೆಗೆ ಅವರು ಚಾಲನೆ ನೀಡಿದಂತಾಯಿತು. ಬಳಿಕ ಮಾತನಾಡಿದ ಸಿಎಂ, ಅತ್ಯಂತ ಸಂತೋಷದಿದ 23ನೇ ಚಿತ್ರಸಂತೆ ಉದ್ಘಾಟಿಸಿದ್ದೇನೆ. ಇದು ನಾನು 8ನೇ ಬಾರಿ ಚಿತ್ರಸಂತೆಯಲ್ಲಿ ಭಾಗವಹಿಸುತ್ತಿರುವುದು. ಕಲಾವಿದರನ್ನು ಪ್ರೋತ್ಸಾಹಿಸಲು ಚಿತ್ರ ಪ್ರದರ್ಶನ ಹಾಗೂ ಮಾರಾಟದ ವೇದಿಕೆಯನ್ನು ಚಿತ್ರಕಲಾ ಪರಿಷತ್ ಅನೇಕ ವರ್ಷದಿಂದ ಮಾಡುತ್ತಿದೆ. 2003ರಲ್ಲಿ ಆರಂಭವಾಗಿದ್ದ ಚಿತ್ರಸಂತೆ ಇದೀಗ 23ನೇ ಚಿತ್ರಸಂತೆಯಾಗಿದೆ. 22 ರಾಜ್ಯ ಹಾಗೂ 4 ಕೇಂದ್ರಾಡಳಿತ ಪ್ರದೇಶದ ಕಲಾವಿದರು ಭಾಗಿಯಾಗಿದ್ದಾರೆ. ಕಲಾವಿದರು, ಜನರು ಸೇರಲು ಒಂದು ವೇದಿಕೆ ಬೇಕಾಗುತ್ತದೆ. ಅದನ್ನು ಚಿತ್ರಕಲಾ ಪರಿಷತ್ ಮಾಡ್ತಿದೆ. ನಾವು ಸಹಾಯ ಮಾಡುತ್ತಾ ಬಂದಿದ್ದೇವೆ. ಮುಂದೆಯೂ ಸಹಾಯ ಮಾಡ್ತೇವೆ ಎಂದು ಭರವಸೆ ನೀಡಿದರು. ಟ್ವೀಟ್ ನಲ್ಲಿ ಸಹ ಸಿಎಂ ಸಿದ್ದರಾಮಯ್ಯ ಪೋಸ್ಟ್ ಹಂಚಿಕೊಂಡಿದ್ದು, ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ ಆವರಣದಲ್ಲಿ…
ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಚಿಗರಿ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ಕಾರು ಚಾಲಕ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಉಣಕಲ್ ಚಿಗರಿ ಪಥದಲ್ಲಿ ಈ ಒಂದು ಅಪಘಾತ ಸಭವಿಸಿದೆ. ನೆಕ್ಸಾನ್ ಕಾರು ಚಾಲಕ ಗಿರೀಶ್ ಬಣವಿ (62) ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಅಪಘಾತದ ಭೀಕರ ದೃಶ್ಯ ಹಿಂಬದಿ ಕಾರಿನ ಡ್ಯಾಶ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಮೃತ ಗಿರೀಶ್ ಧಾರವಾಡ ನಗರದ ಸರಸ್ವತಿಪುರ ನಿವಾಸಿ ಎಂದು ತಿಳಿದು ಬಂದಿದ್ದು, ಹುಬ್ಬಳ್ಳಿ ಕಡೆಯಿಂದ ಚಿಗರಿ ಬಸ್ ಧಾರವಾಡ ಕಡೆಗೆ ಹೊರಟಿತ್ತು. ಧಾರವಾಡ ಕಡೆಯಿಂದ ಗಿರೀಶ್ ಅವರು ತಮ್ಮ ನೆಕ್ಸನ್ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಬಸ್ ಹಾಗೂ ಕಾರು ಮುಖಾಮುಖಿ ಡಿಕ್ಕಿ ಹೊಡೆದು ಗಿರೀಶ್ ಸಾವನಪ್ಪಿದ್ದಾರೆ. ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಬೆಂಗಳೂರು : ಹಾಸನದಲ್ಲಿ ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಿದ್ದಾರೆಂದು ಆರೋಪಿಸಿ, ಕಾಂಪೌಂಡ್ ಧ್ವಂಸಗೊಳಿಸಿದ ವಿಚಾರಕ್ಕೆ ಸಂಬಂಧಪಟ್ಟಂತೆ ನಟ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ನಾವು ಒತ್ತುವರಿ ಮಾಡಿಲ್ಲ, ಕಾನೂನು ಪ್ರಕಾರ ಜಾಗ ಪಡೆದಿದ್ದೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಹಾಸನದ ವಿದ್ಯಾನಗರದಲ್ಲಿರುವ ನಿವೇಶನದಲ್ಲಿ ನಿರ್ಮಿಸಿದ್ದ ಕಾಂಪೌಂಡ್ ಅಕ್ರಮವಾಗಿ ನಿರ್ಮಾಣ ಮಾಡಲಾಗಿದೆ ಎನ್ನೋ ಆರೋಪವನ್ನ ಯಶ್ ತಾಯಿ ತಳ್ಳಿಹಾಕಿದ್ದಾರೆ. ತೆರವುಗೊಳಿಸಿದವರ ವಿರುದ್ಧ ಹಾಗೂ ಪಿಡಿಓ ನಟರಾಜ್ ವಿರುದ್ಧ ಕೆಂಡಕಾರಿದ್ದಾರೆ. ಪಿಡಿಓ ನಟರಾಜ್ ಅಂತಾ ಇದ್ದಾರೆ. ಇದೆಲ್ಲ ಅವರ ಕುಮ್ಮಕ್ಕಿನಿಂದ ನಡೀತಿದೆ. ನಾವು ಜಾಗಕ್ಕೆ ಟ್ಯಾಕ್ಸ್ ಕಟ್ಟಿದ್ದೀವಿ. ಎಲ್ಲ ದಾಖಲೆ ನನ್ ಕಡೆ ಇದೆ. ಕಾನೂನು ಮುಖಾಂತರ ಎಲ್ಲದಕ್ಕೂ ಉತ್ತರ ಕೊಡ್ತೀನಿ ಎಂದಿದ್ದಾರೆ. ಜೊತೆಗೆ ಅವರ ಮೇಲೆ ಮಾನಹಾನಿ ಮೊಕದ್ದಮೆ ಹಾಕ್ತೀನಿ. ಅವರು ಇದಕ್ಕೆ ಉತ್ತರ ಕೊಡ್ಬೇಕು. ಯಶ್ ಹೆಸರು ಹೇಳಿಕೊಂಡು ಮೈಲೇಜ್ ತಗೋಳೋಕೆ ನೋಡ್ತಿದ್ದಾರೆ. ಕೋರ್ಟ್ ಆರ್ಡರ್ ನಮ್ಮ ಗಮನಕ್ಕೆ ತಂದಿಲ್ಲ. ನಾನು ಕಾನೂನು ಹೋರಾಟ ಮಾಡ್ತೀನಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಯಾರು ಖಾಲಿ…
ಬಳ್ಳಾರಿ : ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆಗೆ ಕಾಂಗ್ರೆಸ್ ಕಾರ್ಯಕರ್ತ ಬಲಿ ಪ್ರಕರಣಕ್ಕೆ ಸಂಬಂಧಿಸದಂತೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸತೀಶ್ ರೆಡ್ಡಿ ಆಪ್ತ ಗುರುಚರಣ್ ಸಿಂಗ್ ಬಂದೂಕಿನಿಂದ ಹಾರಿದ್ದ ಬುಲೆಟ್ ನಿಂದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆಗೆ ಕಾಂಗ್ರೆಸ್ ಕಾರ್ಯಕರ್ತ ಬಲಿ ಪ್ರಕರಣಕ್ಕೆ ಸಂಬಂಧಿಸದಿಂತೆ ಬ್ರೂಸ್ ಪೇಟೆ ಪೊಲೀಸರು ಮೂವರು ಖಾಸಗಿ ಗನ್ ಮ್ಯಾನ್ ಗಳನ್ನು ಬಂಧಿಸಿದ್ದಾರೆ. ಈ ವೇಳೆ ತನಿಖೆ ನಡೆಸಲಾಗಿದ್ದು, ಗುರುಚರಣ್ ಬಂದೂಕಿನಿಂದ ಹಾರಿದ್ದ ಬುಲೆಟ್ ನಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಖಾಸಗಿ ಗನ್ ಮ್ಯಾನ್ ಗಳಾದ ಮಹೇಂದ್ರ ಸಿಂಗ್, ಗುರುಚರಣ್ ಸಿಂಗ್, ಬಲ್ಜಿತ್ ಸಿಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ. ಇವರು ಸತೀಶ್ ರೆಡ್ಡಿ ಖಾಸಗಿ ಗನ್ ಮ್ಯಾನ್ ಗಳಾಗಿದ್ದಾರೆ. ಸತೀಶ್ ರೆಡ್ಡಿ ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ ಆಪ್ತರಾಗಿದ್ದಾರೆ..
ಬಳ್ಳಾರಿ : ಬಳ್ಳಾರಿ ಬ್ಯಾನರ್ ಗಲಾಟೆಗೆ ಇದೀಗ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಶಾಸಕ ಜನಾರ್ದನ ರೆಡ್ಡಿ ಮನೆ ಮೇಲೆ ದಾಳಿ ಮಾಡಲು ಮೊದಲೇ ಪ್ಲಾನ್ ಮಾಡಿಕೊಳ್ಳಲಾಗಿತ್ತು. ಪ್ಲಾನ್ ಮಾಡಿಕೊಂಡೆ ಪುಂಡರ ಗುಂಪು ಮನೆಯ ಬಳಿ ಬಂದಿತ್ತು. ಪೆಟ್ರೋಲ್ ಬಾಂಬ್ ಮತ್ತು ಬಾಟಲ್ ಗಳನ್ನು ತುಂಬಿಸಿಕೊಂಡು ಬಂದಿದ್ದರು. ಇದಕ್ಕೆ ಆಟೋದಲ್ಲಿ ಪೆಟ್ರೋಲ್ ಬಾಂಬ್ ಬಾಟಲಿಗಳು ತಂದಿರುವ ದೃಶ್ಯ ವೈರಲ್ ಆಗಿದೆ. ಗಲಾಟೆ ಸಂದರ್ಭದಲ್ಲಿ ಪೆಟ್ರೋಲ್ ಬಂ ಮತ್ತು ಬಾಟಲಿಗಳನ್ನು ಬಳಸಿರುವುದು ತನಿಖೆಯಲ್ಲಿ ಬಯಲಾಗಿದೆ. ಇನ್ನು ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆಗೆ ಕಾಂಗ್ರೆಸ್ ಕಾರ್ಯಕರ್ತ ಬಲಿ ಪ್ರಕರಣಕ್ಕೆ ಸಂಬಂಧಿಸದಂತೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಸತೀಶ್ ರೆಡ್ಡಿ ಆಪ್ತ ಗುರುಚರಣ್ ಸಿಂಗ್ ಬಂದೂಕಿನಿಂದ ಹಾರಿದ್ದ ಬುಲೆಟ್ ನಿಂದ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಬಳ್ಳಾರಿಯಲ್ಲಿ ಬ್ಯಾನರ್ ಗಲಾಟೆಗೆ ಕಾಂಗ್ರೆಸ್ ಕಾರ್ಯಕರ್ತ ಬಲಿ ಪ್ರಕರಣಕ್ಕೆ ಸಂಬಂಧಿಸದಿಂತೆ ಬ್ರೂಸ್ ಪೇಟೆ ಪೊಲೀಸರು ಮೂವರು ಖಾಸಗಿ ಗನ್ ಮ್ಯಾನ್ ಗಳನ್ನು ಬಂಧಿಸಿದ್ದಾರೆ. ಈ ವೇಳೆ ತನಿಖೆ ನಡೆಸಲಾಗಿದ್ದು,…
ಬೆಂಗಳೂರು : ಬಳ್ಳಾರಿಯಲಿ ಬ್ಯಾನರ್ ಕಟ್ಟುವ ವಿಚಾರವಾಗಿ ಫೈರಿಂಗ್ ಆಗಿ ಕಾಂಗ್ರೆಸ್ ಕಾರ್ಯಕರ್ತ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಗೃಹ ಸಚಿವ ಜಿ ಪರಮೇಶ್ವರ್, ಮುಖ್ಯಮಂತ್ರಿಗಳ ಜೊತೆ ಪ್ರಕರಣದ ಬಗ್ಗೆ ಚರ್ಚೆ ನಡೆಸಿ, ಅಗತ್ಯಬಿದ್ರೆ ತನಿಖೆಯನ್ನು ಸಿಐಡಿಗೆ ಕೊಡುತ್ತೇವೆ ಎಂದು ತಿಳಿಸಿದ್ದಾರೆ. ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಸ್ ತನಿಖೆ ಸಿಐಡಿಗೆ ವಹಿಸುವ ವಿಚಾರ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಮಾತನಾಡ್ತೇನೆ. ಅಗತ್ಯಬಿದ್ದರೆ ಸಿಐಡಿಗೆ ಕೊಡುತ್ತೇವೆ. ಪೊಲೀಸರ ಗನ್ ಹಾಗೂ ರಿವಾಲ್ವರ್ನಿಂದ ಫೈರಿಂಗ್ ಆಗಿಲ್ಲ, ಖಾಸಗಿ ಗನ್ನಿಂದ ಫೈರಿಂಗ್ ಆಗಿದ್ದೆಂದು ಎಡಿಜಿಪಿ ದೃಢಪಡಿಸಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ಆರೋಪಿಗಳನ್ನು ಬಂಧಿಸ್ತೇವೆ. ಹತ್ಯೆಗೆ ಪೆಟ್ರೋಲ್ ಬಾಂಬ್ ಬಳಕೆ ಮಾಡಿದ್ದಾರೆಂಬ ಆರೋಪವೂ ಇದ್ದು,ತನಿಖೆ ಆದಮೇಲೆ ಅದೆಲ್ಲ ಗೊತ್ತಾಗುತ್ತೆ ಎಂದು ಗೃಹ ಸಚಿವರು ಹೇಳಿದ್ದಾರೆ. ತಮಗೆ ಮತ್ತು ತಮ್ಮ ಕುಟುಂಬಕ್ಕೆ ಭದ್ರತೆ ಕೋರಿ ಸಿಎಂ, ಗೃಹ ಸಚಿವರಿಗೆ ಶಾಸಕ ಜನಾರ್ದನರೆಡ್ಡಿ ಪತ್ರ ಬರೆದ ವಿಚಾರ ಸಂಬಂಧವೂ ಪ್ರತಿಕ್ರಿಯಿಸಿದ ಪರಮೆಶ್ವರ್, ಶಾಸಕರ ಲೆಟರ್ ನನಗೆ ಇನ್ನೂ ತಲುಪಿಲ್ಲ. ಪತ್ರ ಬಂದ…














