Author: kannadanewsnow05

ಗದಗ : ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರು ಧರಣಿ ನಡೆಸುತ್ತಿದ್ದಾರೆ. ಗದಗದ ಜಿಲ್ಲಾಧಿಕಾರಿ ಕಚೇರಿ ಎದುರು ಅತಿಥಿ ಉಪನ್ಯಾಸಕರು ಅಹೋರಾತ್ರಿ ಧರಣಿ ನಡೆಸುತ್ತಿದ್ದು, ಈ ವೇಳೆ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಉಪನ್ಯಾಸಕ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ತಕ್ಷಣ ಎಚ್ಚೆತ್ತುಕೊಂಡು ಪೋಲಿಸ್ ಸಿಬ್ಬಂದಿಗಳು ಪೆಟ್ರೋಲ್ ಬಾಟಲಿಯನ್ನು ವಶಕ್ಕೆ ಪಡೆದಿದ್ದಾರೆ. ಪ್ರತಿಭಟನೆ ವೇಳೆ ಚಾಕು ಪ್ರದರ್ಶಿಸಿ ಉಪನ್ಯಾಸಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಕೌನ್ಸೆಲಿಂಗನ್ನು ತಕ್ಷಣ ಸ್ಥಗಿತಗೊಳಿಸುವಂತೆ ಒತ್ತಾಯಿಸಿದ್ದಾರೆ. ಅಥಿತಿ ಉಪನ್ಯಾಸಕರ ನೇಮಕಾತಿಗೆ ಅವೈಜ್ಞಾನಿಕ ನಿಯಮ ಜಾರಿ ಮಾಡಿದ್ದಕ್ಕೆ ಕಿಡಿಕಾರಿದ್ದಾರೆ. ಕಳೆದ 20 ರಿಂದ 30 ವರ್ಷ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದವರು ಅತಂತ್ರರಾಗಿದ್ದಾರೆ. ಬೆಂಗಳೂರು, ಮೈಸೂರು, ಮಂಡ್ಯ, ಚಿತ್ರದುರ್ಗ, ಬಾಗಲಕೋಟೆ ಹಾಗು ಗದಗ ಸೇರಿದಂತೆ ಹಲವು ಜಿಲ್ಲೆಗಳಿಂದ ಉಪನ್ಯಾಸಕರು ಆಗಮಿಸಿದ್ದಾರೆ. ಈಗಾಗಲೇ ಸೇವೆ ಸಲ್ಲಿಸುತ್ತಿರುವವರನ್ನೇ ನೇಮಿಸಿಕೊಳ್ಳುವಂತೆ ಆಗ್ರಹಿಸಿದ್ದಾರೆ. ಧರಣಿ ನಿರತ ಪ್ರಥಮ ದರ್ಜೆ ಕಾಲೇಜು ಅಥಿತಿ ಉಪನ್ಯಾಸಕರು ಆಗ್ರಹಿಸಿದ್ದಾರೆ.

Read More

ಕಲಬುರ್ಗಿ : ಸದ್ಯ ರಾಜ್ಯ ಕಾಂಗ್ರೆಸ್ ನಲ್ಲಿ ಸಿಎಂ ಕುರ್ಚಿಗಗಿ ಹಾಕಿ ಸಿಎಂ ಸಿದ್ದರಾಮಯ್ಯ ಬಣ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಬಣದ ನಡುವೆ ಬಿಗ್ ಫೈಟ್ ನಡೆಯುತ್ತಿದೆ, ಇದರ ಮಧ್ಯ ದಲಿತ ಸಿಎಂ ಕೂಗು ಸಹ ಕೇಳಿಬರುತ್ತಿದೆ. ಈ ವಿಚಾರವಾಗಿ ಬಿಜೆಪಿ ಸಂಸದ ಗೋವಿಂದ ಕಾರಜೋಳ ಮಾತನಾಡಿ, ಇವರ ಕಿತ್ತಾಟದ ನಡುವೆ ದಲಿತರ ಹಾಗು ಮುಸ್ಲಿಮರನ್ನು ಕಡೆಗಣಿಸುತ್ತಿದ್ದಾರೆ .ದೇಶದ ಏಕತೆಗೆ ಮುಸ್ಲಿಮರು ನಮ್ಮ ಪಕ್ಷಕ್ಕೆ ಬರಬೇಕು ಅವರು ರಾಜ್ಯದ ಮುಖ್ಯಮಂತ್ರಿ ಆದರೆ ಸ್ವಾಗತ ಎಂದು ಸಂಸದ ಗೋವಿಂದ ಕಾರಜೋಳ ತಿಳಿಸಿದರು. ಕಲ್ಬುರ್ಗಿಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಮೂರು ಗುಂಪುಗಳು ಸೃಷ್ಟಿಯಾಗಿವೆ. ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಲಿಂಗಾಯತ ಗುಂಪುಗಳಿವೆ. ಇಬ್ಬರ ಕುರ್ಚಿಕ ಕಚ್ಚಾಟದಲ್ಲಿ ಈ ಸರ್ಕಾರ ಬಿದ್ದು ಹೋಗುತ್ತದೆ. ಕಾಂಗ್ರೆಸ್ ನಲ್ಲಿ ದಲಿತರು ಮತ್ತು ಮುಸ್ಲಿಮರನ್ನು ಕಡೆಗಣಿಸಲಾಗಿದೆ. ಯಾರ ಬಾಯಿಂದ ಕೂಡ ಮುಸಲ್ಮಾನರು ಸಿಎಂ ಆಗಲಿ ಅಂತ ಬರುತ್ತಿಲ್ಲ. ಮುಸ್ಲಿಮರು ಏಕೆ ಸಿಎಂ ಮಾಡುತ್ತಿಲ್ಲ? ಎಂದು…

Read More

ಮಂಡ್ಯ : ಸಿದ್ದರಾಮಯ್ಯಗೆ ಸಿಎಂ ಸ್ಥಾನ ಬಿಟ್ಟು ಕೊಡುವ ಮನಸ್ಸು ಇಲ್ಲ. ಕಾಂಗ್ರೆಸ್ ಹೈಕಮಾಂಡ್ ಎಲ್ಲರಿಗೂ ಹೆದರಿಕೊಳ್ಳುವ ಸ್ಥಿತಿ ಇದೆ. ಅದಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ. ಕಾಂಗ್ರೆಸ್ ನಿಯಮದ ಪ್ರಕಾರ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಬೇಕು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದರು. ಮಂಡ್ಯದಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಗೆ ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟು ಕೊಡ್ತಾರೆ ಅಂತ ಅನಿಸಲ್ಲ. ಸಿದ್ದರಾಮಯ್ಯ ಎಚ್‌ಡಿ ದೇವೇಗೌಡರ ಗರಡಿಯಲ್ಲಿ ಪಳಗಿದವರು. ಸಿದ್ದರಾಮಯ್ಯ ಬರಿ ಪಾಲಿಟಿಕ್ಸ್ ಕಲಿತರು. ಓಲೈಕೆ, ಗುರ್ ಅನ್ನೋದು ಬಿಟ್ಟರೆ ಪಾಲಿಟಿಕ್ಸ್ ಚೆನ್ನಾಗಿ ಮಾಡುತ್ತಾರೆ. ಎರಡೂವರೆ ವರ್ಷ ಒಳ್ಳೆಯ ಕೆಲಸ ಮಾಡಿದರೆ ಮುಂದುವರೆಯಲಿ ಅಂತಿದ್ರು ಸಿದ್ದರಾಮಯ್ಯ ಮುಂದುವರೆಯಲಿ ಅಂತ ಜನರೇ ಧ್ವನಿ ಎತ್ತುತ್ತಿದ್ದರು. ಆದರೆ ಜನರು ಮುಖಕ್ಕೆ ಛಿ ಥು ಅಂತ ಉಗಿಯುತ್ತಿದ್ದಾರೆ. ಪೊಲೀಸರ ಸರ್ಪಗಾವಲಿನಲ್ಲಿ ಕಾರ್ಯಕ್ರಮ ಮಾಡಿ ಹೋಗುತ್ತಿದ್ದಾರೆ. ಇವರು ಎಷ್ಟೊತ್ತಿಗೆ ತೊಳುಗುತ್ತಾರೋ ಅನ್ನೋ ಸ್ಥಿತಿ ಇದೆ 2023ರಲ್ಲಿ ಡಿಕೆ ಶಿವಕುಮಾರ್ ಸೋಲಿಸುವುದಕ್ಕೆ…

Read More

ಮಂಡ್ಯ : ರಾಜ್ಯ ಕಾಂಗ್ರೆಸ್ ನಲ್ಲಿ ಸದ್ಯ ಬದಲಾವಣೆಯ ಕುರಿತು ಭಾರಿ ಚರ್ಚೆ ನಡೆಯುತ್ತಿದ್ದು, ಈ ವಿಚಾರವಾಗಿ ಬಿಜೆಪಿಯ ಮಾಜಿ ಸಂಸದ ಪ್ರತಾಪ್ ಸಿಂಹ ಸಿದ್ದರಾಮಯ್ಯ ದಲಿತರನ್ನು ಓಟಿಗಷ್ಟೇ ಇಟ್ಟುಕೊಂಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆಗೆ ಅಧಿಕಾರ ಬಿಟ್ಟು ಕೊಡ್ತಾರೆ ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಲ್ಲ ಎಂದರು. ಮಂಡ್ಯದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ದಲಿತರನ್ನು ಓಟಿಗಷ್ಟೇ ಇಟ್ಟುಕೊಂಡಿದ್ದಾರೆ. ಸಿದ್ದರಾಮಯ್ಯ ಅಧಿಕಾರಕ್ಕಾಗಿ ಪರಮೇಶ್ವರವರನ್ನು ಸೋಲಿಸಿದರು. ಶ್ರೀನಿವಾಸ್ ಪ್ರಸಾದ್ ಅವರನ್ನು ಸಚಿವ ಸಂಪುಟದಿಂದ ಕಿತ್ತು ಹಾಕಿದರು. ನಂತರ ಡಿಸಿಎಂ ಪಟ್ಟಕ್ಕೆ ಜಿ ಪರಮೇಶ್ವರ್ ಬೇಡಿಕೊಂಡಿದ್ದರು. ಆದರೂ ಸಿದ್ದರಾಮಯ್ಯ ತಿರಸ್ಕಾರ ಮಾಡಿದರು. ಈಗ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಪಟ್ಟ ಬಿಟ್ಟು ಕೊಡ್ತಾರ?ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅಧಿಕಾರ ಬಿಟ್ಟುಕೊಡಲ್ಲ ಎಂದು ವಾಗ್ದಾಳಿ ನಡೆಸಿದರು.

Read More

ಕನಕಪುರ : ನನ್ನನ್ನು ಮುಖ್ಯಮಂತ್ರಿ ಮಾಡಿ ಅಂತ ನಾನು ಕೇಳಿಲ್ಲ. ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲ ಇದೆ. ಬಸವರಾಜ ರಾಯರೆಡ್ಡಿ, ಡಿವಿ ಸದಾನಂದ ಗೌಡ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ನಾನೇನು ಅವರ ವಕ್ತಾರ ಅಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದರು. ಹೈಕಮಾಂಡ್ ಹೇಳಿದ್ಮೇಲೆನೆ ಸಂಪುಟ ಪುನಾರಚನೆ : ಸಿಎಂ ಸ್ಪಷ್ಟನೆ ರಾಜ್ಯದಲ್ಲಿ ನಾಯಕತ್ವ ಜಟಾಪಟಿ ನಡೆಯುತ್ತಿದ್ದರೆ ಮತ್ತೊಂದು ಕಡೆ ಸಂಪುಟ ಪುನಾರಚನೆ ಯಾವಾಗ ಆಗುತ್ತೆ ಅನ್ನೋದು ಮತ್ತೊಂದು ಚರ್ಚೆ ನಡೆಯುತ್ತಿದೆ. ಈ ವಿಚಾರವಾಗಿ ಸಿಎಂ ಸಿದರಾಮಯ್ಯ ಯಾರು ಏನೇ ಹೇಳಿದರೂ ಕೂಡ ಕೊನೆಗೆ ಹೈಕಮಾಂಡ್ ಹೇಳಿದ್ಮೇಲೇನೆ ಸಂಪುಟ ಪುನಾರಚನೆ ಆಗಲಿದೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು. ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಮಾತನಾಡಿದ ಅವರು ಶಾಸಕರು ದೆಹಲಿಗೆ ಹೋಗಲು ಸ್ವತಂತ್ರರು ದೆಹಲಿಗೆ ತೆರಳಿರುವ ಶಾಸಕರು ಏನು ಹೇಳುತ್ತಾರೋ ಹೇಳಲಿ ಅಂತಿಮವಾಗಿ ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಹೈಕಮಾಂಡ್ ಏನು ಹೇಳುತ್ತಾರೋ ಅದನ್ನು ಕೇಳಲು…

Read More

ಬೆಂಗಳೂರು : ಬೆಂಗಳೂರಲ್ಲಿ 7 ಕೋಟಿ 11 ಲಕ್ಷ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದುವರೆಗೂ 7.1 ಕೋಟಿ ರೂಪಾಯಿ ಹಣ ರಿಕವರಿ ಆಗಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ 9 ಆರೋಪಿಗಳನ್ನು ಅರೆಸ್ಟ್ ಮಾಡಿದ್ದು ವಿಚಾರಣೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾಹಿತಿ ನೀಡಿದರು. ನಮ್ಮ ಪೊಲೀಸರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಶೇಕಡ 98.6 ರಷ್ಟು ಹಣ ರಿಕವರಿ ಆಗಿದೆ ದರೋಡೆ ಪ್ರಕರಣದಲ್ಲಿ ಇದುವರೆಗೂ 9 ಆರೋಪಿಗಳ ಬಂಧನ ಆಗಿದೆ. ಚೆನ್ನೈ ಆಂಧ್ರ ಪೊಲೀಸರು ಸಹ ಸಾಕಷ್ಟು ಸಹಾಯ ಮಾಡಿದ್ದಾರೆ. ಈಗಾಗಲೇ ತಂಡಕ್ಕೆ 5 ಲಕ್ಷ ಬಹುಮಾನ ಘೋಷಿಸಲಾಗಿದೆ. ಹೆಚ್ಚುವರಿಯಾಗಿ 2 ಲಕ್ಷ ಬಹುಮಾನ ನೀಡುತ್ತಿದ್ದೇವೆ. ಸದ್ಯ 9 ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿಕೆ ನೀಡಿದರು.

Read More

ಬೆಳಗಾವಿ : ಈ ಹಿಂದೆ 2019 ರಲ್ಲಿ ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮುಖ್ಯ ಕಾರಣ. ಸಿದ್ದರಾಮಯ್ಯ ಇದಕ್ಕೆ ಕಾರಣ ಅಲ್ಲ ಎಂದು ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ತಿಳಿಸಿದರು. ಗೋಕಾಕ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಕೆಡವಲು ನಾನೇ ಮುಂದಾಳತ್ವ ವಹಿಸಿದ್ದೆ. ಬೆಳಗಾವಿ ರಾಜಕಾರಣದಲ್ಲಿ ಡಿ.ಕೆ.ಶಿವಕುಮಾರ್‌ ಹಸ್ತಕ್ಷೇಪ ಮಾಡಿದ್ದಕ್ಕೆ ಸರ್ಕಾರ ಕೆಡವಿದೆ. ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹೇಳಿದಂತೆ ಸಿದ್ದರಾಮಯ್ಯ ಕಾರಣ ಅಲ್ಲ ಎಂದು ಶಾಸಕ ರಮೇಶ್‌ ಜಾರಕಿಹೊಳಿ ಹೇಳಿದರು. ಪೂರ್ಣ ಬಹುಮತದ ಸರ್ಕಾರ ತರಲು ನಾವೆಲ್ಲರೂ ಗಟ್ಟಿಯಾಗಿ ಕೆಲಸ ಮಾಡಬೇಕು.ಹೈಕಮಾಂಡ್ ನಿರ್ಣಯಕ್ಕೆ ನಾವು ಬದ್ಧರಿದ್ದೇವೆ.ನಾನು ಬಿಜೆಪಿ ಶಾಸಕ. ಕಾಂಗ್ರೆಸ್‌ನ ಹೊಲಸು ರಾಜಕಾರಣದ ಬಗ್ಗೆ ಬಿಜೆಪಿ ಮಾತನಾಡಬಾರದು. ನಾಯಕತ್ವ ಬದಲಾವಣೆ ಸಂಬಂಧ ಕಾಂಗ್ರೆಸ್‌ನ ಆಂತರಿಕ ವಿಚಾರದಲ್ಲಿ ಬಿಜೆಪಿ ತಟಸ್ಥ ಇರಬೇಕು ಎಂದರು.

Read More

ಬೆಂಗಳೂರು : ರಾಜ್ಯದಲ್ಲಿ ನಾಯಕತ್ವ ಜಟಾಪಟಿ ನಡೆಯುತ್ತಿದ್ದರೆ ಮತ್ತೊಂದು ಕಡೆ ಸಂಪುಟ ಪುನಾರಚನೆ ಯಾವಾಗ ಆಗುತ್ತೆ ಅನ್ನೋದು ಮತ್ತೊಂದು ಚರ್ಚೆ ನಡೆಯುತ್ತಿದೆ. ಈ ವಿಚಾರವಾಗಿ ಸಿಎಂ ಸಿದರಾಮಯ್ಯ ಯಾರು ಏನೇ ಹೇಳಿದರೂ ಕೂಡ ಕೊನೆಗೆ ಹೈಕಮಾಂಡ್ ಹೇಳಿದ್ಮೇಲೇನೆ ಸಂಪುಟ ಪುನಾರಚನೆ ಆಗಲಿದೆ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು. ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಮಾತನಾಡಿದ ಅವರು ಶಾಸಕರು ದೆಹಲಿಗೆ ಹೋಗಲು ಸ್ವತಂತ್ರರು ದೆಹಲಿಗೆ ತೆರಳಿರುವ ಶಾಸಕರು ಏನು ಹೇಳುತ್ತಾರೋ ಹೇಳಲಿ ಅಂತಿಮವಾಗಿ ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ ಹೈಕಮಾಂಡ್ ಏನು ಹೇಳುತ್ತಾರೋ ಅದನ್ನು ಕೇಳಲು ನಾವು ಸಿದ್ಧರಿದ್ದೇವೆ. ಎಲ್ಲಾ ಗೊಂದಲಗಳಿಗೆ ಹೈಕಮಾಂಡ್ ಫುಲ್ ಸ್ಟಾಪ್ ಇಡಬೇಕು ಎಂದು ಸಿಎಂ ಅಧಿಕೃತ ನಿವಾಸದಲ್ಲಿ ಸಿದ್ದರಾಮಯ್ಯ ಹೇಳಿಕೆ ನೀಡಿದರು

Read More

ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ರಸ್ತೆಗುಂಡಿ ತಪ್ಪಿಸಲು ಹೋಗಿ ಸ್ಕೂಟಿಯಲ್ಲಿ ತಳ್ಳುತ್ತಿದ್ದ ಯುವತಿ ಒಬ್ಬಳು ಕೆಳಗೆ ಬಿದ್ದಾಗ ಹಿಂದಿನಿಂದ ಬಂದ ಟಿಪ್ಪರ್ ಒಂದು ಆಕೆ ಮೇಲೆ ಹರಿದು ಸಾವನ್ನಪ್ಪಿದ್ದಳು. ಇದೀಗ ಬೆಂಗಳೂರಲ್ಲಿ ರಸ್ತೆ ಗುಂಡಿಗೆ ಮತ್ತೊಂದು ಬಲಿಯಾಗಿದ್ದು ರಸ್ತೆಗುಂಡಿ ತಪ್ಪಿಸಲು ಹೋಗಿ ಚಾಲಕನ ಸಮೇತ ಲಾರಿ ಎಂದು ಕೆರೆಗೆ ಉರುಳಿ ಬಿದ್ದಿರುವ ಘಟನೆ ವರದಿಯಾಗಿದೆ. ಹೌದು ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಬಿದರಗುಪ್ಪೆ ಕೆರೆಯಲ್ಲಿ ಘಟನೆ ಸಂಭವಿಸಿದೆ. ಕಲಬುರಗಿ ಮೂಲದ ಲಾರಿ ಚಾಲಕ ಮಹೇಶ್ (37) ಕೆರೆಯಲ್ಲಿ ಮುಳುಗಿರುವ ಸಾಧ್ಯತೆಯಿದೆ. ಜಲ್ಲಿ ತುಂಬಿಕೊಂಡು ಬಂದಿದ್ದ 12 ಚಕ್ರದ ಲಾರಿ ಕಳೆದ ರಾತ್ರಿ 11:30ರ ಸುಮಾರಿಗೆ ಕೆರೆಗೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಅತ್ತಿಬೆಲೆಯಿಂದ ಸರ್ಜಾಪುರ ಮಾರ್ಗವಾಗಿ ಹೋಗುತ್ತಿದ್ದ ಲಾರಿ ರಸ್ತೆಯಲ್ಲಿ ಗುಂಡಿ ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡು ಚಾಲಕನ ಸಮೇತವಾಗಿ ಕೆರೆಗೆ ಬಿದ್ದಿದೆ. ಘಟನೆಯಲ್ಲಿ ಚಾಲಕ ಜಲಸಮಾಧಿಯಾಗಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಎಸ್‌ಡಿಆರ್‌ಎಫ್, ಅಗ್ನಿಶಾಮಕ…

Read More

ಅಯೋಧ್ಯೆ : ಅಯೋಧ್ಯೆಯ ಶ್ರೀ ರಾಮಮಂದಿರ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದು, ಶ್ರೀರಾಮಮಂದಿರ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೇಸರಿ ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಡೀ ವಿಶ್ವ ಇಂದು ರಾಮಮಯ ಆಗಿದೆ. ಶ್ರೀರಾಮ ಭಕ್ತರ ಮನಸ್ಸು ಇಂದು ಬಹಳಷ್ಟು ಆನಂದವಾಗಿದೆ. ಅಂದಿನ ಸಂಕಲ್ಪ ಇಂದು ಸಿದ್ಧಿಯಾಗಿದೆ. 500 ವರ್ಷಗಳ ಅಗ್ನಿ ಯಜ್ಞ ಇಂದು ಶಾಂತಗೊಂಡಿದೆ ಭವ್ಯವಾದ ಮಂದಿರದಲ್ಲಿ ಶ್ರೀರಾಮ ವಿರಾಜಮಾನರಾಗಿದ್ದಾರೆ.ಕೇಸರಿ ಧ್ವಜ ಕನಸುಗಳ ಸಾಕಾರದ ಸ್ವರೂಪ. ಶತಮಾನಗಳ ವೇದನೆಗೆ ಇಂದು ಪೂರ್ಣವಿರಾಮ ಸಿಕ್ಕಿದೆ. ಮರ್ಯಾದಾ ಪುರುಷೋತ್ತಮರಾಗಿ ರಾಮ ಅಯೋಧ್ಯೆಗೆ ಬಂದರು. ಶ್ರೀರಾಮ ಮಂದಿರದ ಧರ್ಮಧ್ವಜ ಏಕರೂಪದ ಪ್ರತೀಕವಾಗಿದೆ. 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣ ಪೂರ್ಣಗೊಳ್ಳಲಿದೆ. ಶ್ರೀರಾಮನ ವ್ಯಕ್ತಿತ್ವವನ್ನು ನಾವೆಲ್ಲರೂ ತಿಳಿದುಕೊಳ್ಳಬೇಕು ಎಂದು ಹೇಳಿಕೆ ನೀಡಿದರು. ಧರ್ಮ ಸತ್ಯದ ಮೇಲೇ ನಿಂತಿದೆ ಎಂಬ ಸಂದೇಶ ಜಗತ್ತಿನಲ್ಲಿ ಕರ್ಮ ಹಾಗೂ ಕರ್ತವ್ಯದ ಸಂದೇಶ ನೀಡುತ್ತದೆ ಬೇದ ಭಾವ ದೌರ್ಜನ್ಯಗಳ ಅಂತ್ಯದ ಪ್ರತೀಕವಾಗಿದೆ. ವನವಾಸಕ್ಕೆ…

Read More