Subscribe to Updates
Get the latest creative news from FooBar about art, design and business.
Author: kannadanewsnow05
ಬೆಂಗಳೂರು : ವಿದ್ಯುತ್, ನೀರು, ಹಾಲು, ಬಸ್ಸು ಹಾಗೂ ಮೆಟ್ರೋ ಪ್ರಯಾಣ ದರ, ಮುದ್ರಾಂಕ ಶುಲ್ಕ ಸೇರಿ ವಿವಿಧ ದರ ಹೆಚ್ಚಳ ಬೆನ್ನಲ್ಲೇ ಇದೀಗ ಆಸ್ತಿಗಳ ನೋಂದಣಿ ಶುಲ್ಕವನ್ನೂ ದುಪ್ಪಟ್ಟು ಮಾಡಿ ಕಂದಾಯ ಇಲಾಖೆ ಆದೇಶ ಹೊರಡಿಸಿದ್ದು, ಆ.31ರಿಂದ ಅನ್ವಯವಾಗುವಂತೆ ನೋಂದಣಿ ಶುಲ್ಕ ಶೇ.1 ರಿಂದ ಶೇ.2ಕ್ಕೆ ಹೆಚ್ಚಳ ಆಗಲಿದೆ. ಸ್ಥಿರಾಸ್ತಿ ಶುದ್ಧ ಕ್ರಯ ಪತ್ರ, ಸ್ವಾಧೀನ ಭೋಗ್ಯ ಪತ್ರ, ಕ್ರಯ ಉದ್ದೇಶದ ಜಿಪಿಎ ಸೇರಿ ವಿವಿಧ ಆಸ್ತಿ ಖರೀದಿ ನೋಂದಣಿಗೆ ಈ ಶುಲ್ಕ ಅನ್ವಯವಾಗಲಿದೆ. ಈವರೆಗೆ ರಾಜ್ಯದಲ್ಲಿ ನಿವೇಶನ, ಭೂಮಿ, ಫ್‌ಲ್ಯಾಟ್, ಮನೆ ಸೇರಿ ಯಾವುದೇ ಸ್ಥಿರಾಸ್ತಿ ಖರೀದಿ ವೇಳೆ ಶೇ.1 ರಷ್ಟು ನೋಂದಣಿ ಶುಲ್ಕ ಹಾಗೂ ಶೇ.5.6 ರಷ್ಟು ಮುದ್ರಾಂಕ ಶುಲ್ಕ ಸೇರಿ ಒಟ್ಟು ಶೇ.6.6 ರಷ್ಟು ಶುಲ್ಕ ಭರಿಸಬೇಕಾಗಿತ್ತು. ಇದೀಗ ನೋಂದಣಿ ಶುಲ್ಕ ರಷ್ಟಾಗಿರುವುದರಿಂದ ಆಸ್ತಿಯ ಮಾರುಕಟ್ಟೆ ಬೆಲೆಯ ಶೇ.7.6 ರಷ್ಟನ್ನು ನೋಂದಣಿ ಮತ್ತು ಮುದ್ರಾಂಕ ಶುಲ್ಕಕ್ಕೆ ಭರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ. ಈ ಬಗ್ಗೆ ಕಂದಾಯ ಇಲಾಖೆ…
ಬೆಂಗಳೂರು : ವಿವಾದದಿಂದ ಕೂಡಿದ್ದ ಬೆಂಗಳೂರಿನ ಅಭಿಮಾನ್ ಸ್ಟುಡಿಯೋವನ್ನು ಮುಟ್ಟುಗೋಲು ಹಾಕಲು ರಾಜ್ಯ ಸರ್ಕಾರ ಇದೀಗ ಮುಂದಾಗಿದೆ. ಇದೇ ಆಗಸ್ಟ್ 7 ರಂದು ರಾತ್ರೋರಾತ್ರಿ ಅಭಿಮಾನ್ ಸ್ಟುಡಿಯೋದಲ್ಲಿದ್ದ ಕನ್ನಡದ ಮೇರುನಟ ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಸಮಾಧಿಯನ್ನ ಧ್ವಂಸ ಮಾಡಲಾಗಿತ್ತು. ಈ ಕಾರಣಕ್ಕೆ ಭಾರೀ ವಿವಾದಕ್ಕೀಡಾಗಿದ್ದ ಜಾಗವನ್ನ ಇದೀಗ ಸರ್ಕಾರ ವಶಪಡಿಸಿಕೊಳ್ಳುವಂತೆ ಅರಣ್ಯ ಇಲಾಖೆ ಡಿಸಿ ಜಗದೀಶ್ ಅವರಿಗೆ ಪತ್ರ ಬರೆದಿದೆ. ಬೆಂಗಳೂರು ದಕ್ಷಿಣ ತಾಲೂಕು ಕೆಂಗೇರಿ ಹೋಬಳಿ, ಮೈಲಸಂದ್ರ ಗ್ರಾಮಕ್ಕೆ ಸೇರಿದ ಸರ್ವೇ ನಂ, 26ರಲ್ಲಿ ಅಭಿಮಾನ್ ಸ್ಟುಡಿಯೋಗೆ ಸರ್ಕಾರ ನೀಡಿರುವ ಅರಣ್ಯ ಪ್ರದೇಶ ಆದೇಶವನ್ನು ರದ್ದು ಪಡಿಸಿ ಹಿಂಪಡೆಯುವ ಬಗ್ಗೆ ಅರಣ್ಯ ಇಲಾಖೆ ಪತ್ರದಲ್ಲಿ ಉಲ್ಲೇಖಿಸಿದೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್ ರವೀಂದ್ರಕುಮಾರ್ ಅವರು ಪತ್ರ ಬರೆದಿದ್ದಾರೆ. ಸರ್ಕಾರಿ ಆದೇಶದ ಅನ್ವಯ ಏಪ್ರಿಲ್ 09, 1969 ರಂದು 20 ಎಕರೆ ಪ್ರದೇಶವನ್ನು ಟಿ ಎನ್ ಬಾಲಕೃಷ್ಣ ಅವರಿಗೆ ಅಭಿಮಾನ್ ಚಿತ್ರ ಸ್ಟುಡಿಯೋ ಸ್ಥಾಪಿಸುವ ಸಲುವಾಗಿ 20 ವರ್ಷಗಳ ಅವಧಿಗೆ…
ದಕ್ಷಿಣಕನ್ನಡ : ಗಿರೀಶ್ ಮಟ್ಟಣ್ಣನವರಿಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದ್ದು, ಗಿರೀಶ್ ಮಟ್ಟಣನವರ ವಿರುದ್ಧ ರಾಜ್ಯ ಮಹಿಳಾ ಆಯೋಗಕ್ಕೆ ಇದೀಗ ದೂರು ಸಲ್ಲಿಸಲಾಗಿದೆ. ಧರ್ಮಸ್ಥಳದ ಸಾಮೂಹಿಕ ವಿವಾಹದ ಬಗ್ಗೆ ಗಿರೀಶ್ ಮಟ್ಟಣ್ಣನವರ್ ಹೇಳಿಕೆ ನೀಡಿದ್ದು ಹೆಣ್ಣು ಮಕ್ಕಳ ಗೌರವಕ್ಕೆ ಧಕ್ಕೆ ತಂದಿರುವ ಆರೋಪದ ಹಿನ್ನೆಲೆಯಲ್ಲಿ ಇದೀಗ ಕಾವೇರಿ ಕೇದಾರನಾಥ್ ಅವರ ನೇತೃತ್ವದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ. ಇನ್ನು ನಿನ್ನೆ ಸಹ ಮಾನವ ಹಕ್ಕುಗಳ ಆಯೋಗಕ್ಕೆ ಪ್ರತ್ಯೇಕ ದೂರು ಸಲ್ಲಿಕೆಗೆ ಸೂಚನೆ ನೀಡಲಾಗಿತ್ತು. ಈ ಮೂಲಕ ಗಿರೀಶ್ ಮಟ್ಟಣ್ಣನವರಿಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗಿದೆ. ರಾಜ್ಯ ಮಹಿಳಾ ಆಯೋಗಕ್ಕೆ ಗಿರೀಶ್ ವಿರುದ್ಧ ದಾಖಲಾಗಿದ್ದು ಧರ್ಮಸ್ಥಳದ ಸಾಮೂಹಿಕ ವಿವಾಹದ ಕುರಿತು ಮಾತನಾಡಿದ್ದು ಕಾವೇರಿ ಕೇದಾರನಾಥ ಅವರು ಹೆಣ್ಣು ಮಕ್ಕಳ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಪರಿಪೂರ್ಣತೆಯನ್ನು ಸಾಧಿಸಬೇಕಾದರೆ, ಅವನಿಗೆ ಆಗಬೇಕಾದ ಎಲ್ಲಾ ಶುಭ ಕಾರ್ಯಗಳು ಸರಿಯಾದ ಸಮಯದಲ್ಲಿ ಆಗಬೇಕು. ಆ ನಿಟ್ಟಿನಲ್ಲಿ, ಅನೇಕರಿಗೆ ಅಡಚಣೆಯೆಂದರೆ ಮದುವೆಯ ನಿಷೇಧ. ಮದುವೆಯ ನಂತರವೂ, ಇತ್ತೀಚಿನ ದಿನಗಳಲ್ಲಿ ಮಗುವನ್ನು ಪಡೆಯುವುದು ಬಹಳ ಅಪರೂಪದ ವಿಷಯ. ಅದಕ್ಕಾಗಿಯೇ ಇತ್ತೀಚಿನ ದಿನಗಳಲ್ಲಿ ಮಗುವಿನ ಆಶೀರ್ವಾದವನ್ನು ಒದಗಿಸಲು ಅನೇಕ ಆಸ್ಪತ್ರೆಗಳು ಹೆಚ್ಚುತ್ತಿವೆ. ವೈದ್ಯಕೀಯ ಸೌಲಭ್ಯಗಳು ಹೆಚ್ಚಿದ್ದರೂ, ಅನೇಕ ಜನರು ಮಗುವನ್ನು ಪಡೆಯಲು ಕಷ್ಟಪಡುತ್ತಿದ್ದಾರೆ. ಅಂತಹ ಜನರು ಸರಿಯಾದ ವೈದ್ಯಕೀಯ ಚಿಕಿತ್ಸೆಯೊಂದಿಗೆ ಆಂಜನೇಯನನ್ನು ಈ ರೀತಿ ಪೂಜಿಸಿದರೆ, ಅವರಿಗೆ ಶೀಘ್ರದಲ್ಲೇ ಮಗುವಿನ ಆಶೀರ್ವಾದ ಸಿಗುತ್ತದೆ. ಈ ಆಧ್ಯಾತ್ಮಿಕ ಪೋಸ್ಟ್‌ನಲ್ಲಿ ನಾವು ಆ ಪೂಜಾ ವಿಧಾನವನ್ನು ನೋಡಲಿದ್ದೇವೆ . ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ಮಗುವನ್ನು ಪಡೆಯಲು…
ಚಾಮರಾಜನಗರ : ಇತ್ತೀಚಿಗೆ ರಾಜ್ಯದಲ್ಲಿ ಹೃದಯಾಘಾತಕ್ಕೆ ಸಾವನ ಪುತ್ರುವವರ ಸಂಖ್ಯೆ ಹೆಚ್ಚಿದ್ದು, ಅದರಲ್ಲೂ ಹಾಸನದಲ್ಲಿ ಹೃದಯಾಘಾತದಿಂದ ಕಳೆದ ತಿಂಗಳು ಸರಣಿ ಸಾವುಗಳು ಸಂಭವಿಸಿದವು ಇದೀಗ ಚಾಮರಾಜನಗರದಲ್ಲಿ ನಾಲ್ಕನೇ ತರಗತಿ ಬಾಲಕನೊಬ್ಬ ಹೃದಯಘಾತಕ್ಕೆ ಬಲಿಯಾಗಿದ್ದಾನೆ. ಹೌದು ಚಾಮರಾಜನಗರ ತಾಲೂಕಿನ ಕುಲಗಾಣ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದ್ದು ಕುಲಗಾಣ ಗ್ರಾಮದ ಮೂರ್ತಿ ಮತ್ತು ಮಹೇಶ್ವರಿ ದಂಪತಿಯ ಪುತ್ರ ಉಲ್ಲಾಸ್ ಬೇಗೂರಿನ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದ ಬಾಲಕ ಉಲ್ಲಾಸ ಆರೋಗ್ಯವಾಗಿಯೇ ಇದ್ದ. ಇದೀಗ ಹೃದಯಾಘಾತಕ್ಕೆ ಉಲ್ಲಾಸ್ ಬಲಿಯಾಗಿದ್ದಾನೆ.
ಬೆಂಗಳೂರು : ಬೆಂಗಳೂರಿನ ಗುರುದ್ವಾರಕ್ಕೆ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿದೆ. ಕಳೆದ ನಾಲ್ಕು ದಿನಗಳ ಹಿಂದೆಯೇ ಇ-ಮೇಲ್ ಮೂಲಕ ಗುರುದ್ವಾರಕ್ಕೆ ಬೆದರಿಕೆ ಇ-ಮೇಲ್ ಸಂದೇಶ ಬಂದಿತ್ತು. ನಾಲ್ಕು ಆರ್ ಡಿ ಎಕ್ಸ್ ಐ ಇ ಡಿ ಯಿಂದ ಸ್ಪೋಟಿಸುವುದಾಗಿ ಬೆದರಿಕೆ ಸಂದೇಶ ಬಂದಿತ್ತು. ಸಿಖ್ ಗುರುದ್ವಾರದ ಶೌಚಾಲಯದಲ್ಲಿ ಬಾಂಬೆ ಇಟ್ಟಿದ್ದಾಗಿ ಈ ಮೇಲ್ ಸಂದೇಶ ಬಂದಿತ್ತು. ರಾಜಗಿರಿ ಎಂಬ ಹೆಸರಿನಲ್ಲಿ ಈ ಒಂದು ಇಮೇಲ್ ಬೆದರಿಕೆ ಸಂದೇಶ ಬಂದಿದೆ, ಹಲಸೂರು ಸಮೀಪ ಇರುವ ಗುರು ಸಿಂಗ್ ಸಭಾ ಗುರುದ್ವಾರಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದು, ಈ ಬಗ್ಗೆ ಋಷಿಪಾಲ್ ಸಿಂಗ್ ದೂರು ಆಧರಿಸಿ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಬೆಂಗಳೂರಿನ ಹಲಸೂರು ಪೊಲೀಸ್ ಠಾಣೆಯಲ್ಲಿ ಇದೀಗ ಪ್ರಕರಣ ದಾಖಲಾಗಿದೆ.
ಮಂಡ್ಯ : ಮಂಡ್ಯದಲ್ಲಿ ಭೀಕರವಾದ ಅಪಘಾತ ಸಂಭವಿಸಿದ್ದು, ಬೈಕ್ ಒಂದಕ್ಕೆ KSRTC ಬಸ್ ಡಿಕ್ಕಿಯಾಗಿ ಬೈಕ್ ಸವಾರರು ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಅಂಚೆ ಬೀರನಹಳ್ಳಿ ಬಳಿ ಈ ಒಂದು ಅಪಘಾತ ಸಂಭವಿಸಿದೆ. ಬೈಕ್ನಲ್ಲಿದ್ದಂತಹ ಉಮೇಶ್ (24) ಹಾಗು ದಿನೇಶ್ (24) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಸ್ ಚಾಲಕನ ಜಾಗರೂಕತೆಯಿಂದ ಈ ಒಂದು ಅಪಘಾತ ಸಂಭವಿಸಿದೆ ಘಟನೆ ಸಂಭಂದ ಕಿಕ್ಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಯಚೂರು : ನಿನ್ನೆ ರಾತ್ರಿ ರಾಯಚೂರಿನ ಅಂಬೇಡ್ಕರ್ ವಸತಿ ನಿಲಯಕ್ಕೆ ಉಪಲೋಕಾಯುಕ್ತ ನ್ಯಾ.ಬಿ. ವೀರಪ್ಪ ಏಕಾಏಕಿ ದಾಳಿ ಮಾಡಿ ಅಲ್ಲಿನ ಅವ್ಯವಸ್ಥೆಯನ್ನು ಕಂಡು ವಾರ್ಡನ್ ಸಸ್ಪೆಂಡ್ ಮಾಡಿ ಸೂಚನೆ ನೀಡಿದರು. ಅದಾದ ಬಳಿಕ ಇಂದು RTO ಕಚೇರಿ ಮೇಲೆ ನ್ಯಾ.ಬಿ.ವೀರಪ್ಪ ದಾಳಿ ಮಾಡಿದ್ದಾರೆ. ರಾಯಚೂರು ನಗರದ ಆರ್ ಟಿ ಓ ಕಚೇರಿಯ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದರು. ಆರ್‌ಟಿಓ ಅಧಿಕಾರಿಗಳಿಗೆ ಉಪಲೋಕಾಯುಕ್ತ ವೀರಪ್ಪ ತರಾಟೆ ತೆಗೆದುಕೊಂಡರು. ವಾಹನಗಳ ಮಾಹಿತಿ ನೀಡಲು ಆರ್‌ಟಿಓ ಅಧಿಕಾರಿಗಳು ತಡಬಾಡಾಯಿಸಿದರು. 29 ಸಾವಿರ ವಾಹನಗಳ ಪೈಕಿ 236 ಶಾಲಾ ವಾಹನಗಳ ಹೀಗೆ ಎಫ್ ಸಿ ಇಲ್ಲ ಎಫ್ ಸಿ ಇಲ್ಲದ ಶಾಲಾ ವಾಹನಗಳನ್ನು ಮಾಡದಿದ್ದಕ್ಕೆ ನ್ಯಾ.ಬಿ.ವೀರಪ್ಪ ಆಕ್ರೋಶ ಹೊರಹಾಕಿದರು. ಎಫ್ ಸಿ ಇಲ್ಲದ ವಾಹನಗಳಿಗೆ ಹೆಚ್ಚು ಕಡಿಮೆ ಆದರೆ ಪರಿಹಾರ ಸಿಗುವುದಿಲ್ಲ ನಿಮ್ಮ ಮಕ್ಕಳಿಗೆ ಇದೇ ರೀತಿ ಆದರೆ ಏನು ಮಾಡುತ್ತೀರಿ? ಬೇರೆ ಮಕ್ಕಳ ಬಗ್ಗೆ ಕಾಳಜಿ ಇಲ್ವಾ ಅಂತ ಅಧಿಕಾರಿಗಳಿಗೆ ನ್ಯಾ.ಬಿ.ವೀರಪ್ಪ ತರಾಟೆಗೆ ತೆಗೆದುಕೊಂಡರು.ಎಲ್ಲಾ…
ದಕ್ಷಿಣಕನ್ನಡ : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನ ಹೂತು ಹಾಕಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಎಸ್ ಐಟೆ ಅಧಿಕಾರಿಗಳು ಇದೀಗ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ತೀವ್ರ ವಿಚಾರಣೆಯ ಒಳಪಡಿಸಿದ್ದು ಎಸ್ಐಟಿ ಮುಂದೆ ಇದೀಗ ಚಿನ್ನಯ ಮತ್ತೊಂದು ಸ್ಪೋಟಕ ಹೇಳಿಕೆ ನೀಡಿದ್ದು ಸುಮಾರು 4, ವರೆಗೂ ಹಣ ನೀಡಿ ಸುಳ್ಳು ಹೇಳುವಂತೆ ಬೆದರಿಕೆ ಹಾಕಿದ್ದಾರೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾನೆ. ಚಿನ್ನಯನಿಗೆ ಬುರುಡೆ ಗ್ಯಾಂಗ್ ಬಿದರಿಕೆ ಹಾಕಿತ್ತು. ಚೆನ್ನಯ್ಯನಿಗೂ ಸೂತ್ರದಾರಿಗಳು ಬಿದರಿಕೆ ಹಾಕಿದ್ದರು ಹಣ ನೀಡಿ ಹೀಗೆ ಹೇಳಬೇಕು ಅಂತ ಬೆದರಿಕೆ ಹಾಕಿದ್ದರು ಅಂತ ಎಸ್ಐಟಿ ಮುಂದೆ ಹೇಳಿಕೆ ನೀಡಿದ್ದಾನೆ ಮುಂದೆ ಚಿನ್ನಯ ಈ ಒಂದು ಹೇಳಿಕೆ ನೀಡಿದ್ದು ನನಗೆ ಹೀಗೆ ಹೇಳಿಕೆ ನೀಡಬೇಕು ಎಂದು ಹೇಳಿ ಕೊಟ್ಟರು. ನಾನು ದೂರವಾಗಲು ಬಯಸಿದಾಗ ನನಗೆ ಹೆದರಿಕೆ ಹಾಕಿದರು ಸಹಾಯ ಮಾಡುವ ರೀತಿಯಲ್ಲಿ ಹಣ ಕೊಟ್ಟಿದ್ದಾರೆ, ಐದು ಹತ್ತು ಸಾವಿರ ಹಂತ ಹಂತವಾಗಿ ಹಣ ನೀಡಿದರು. ಮೂರುವರೆಯಿಂದ ನಾಲ್ಕು ಲಕ್ಷದ ತನಕ ಹಣ ನೀಡಿದರು ಎಂದು ಹೇಳಿಕೆ…
ಬೆಂಗಳೂರು : ಯುಜಿಸಿ ಪಠ್ಯಕ್ರಮಕ್ಕೆ ರಾಜ್ಯ ಸರ್ಕಾರದಿಂದಲೂ ವಿರೋಧ ವ್ಯಕ್ತವಾಗಿದ್ದು, ಕೇರಳ ಬಳಿಕ ರಾಜ್ಯದಲ್ಲಿಯೂ ಯುಜಿಸಿ ಪಠ್ಯಕ್ರಮಕ್ಕೆ ವಿರೋಧ ವ್ಯಕ್ತವಾಗಿದೆ. ಈ ವಿಚಾರವಾಗಿ ಬೆಂಗಳೂರಲ್ಲಿ ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್ ಮಾಹಿತಿ ನೀಡಿದ್ದು, ಪಠ್ಯಕ್ರಮ ರಚನೆಯಲ್ಲಿ ಯುಜಿಸಿ ತೋರಿಸುತ್ತಿದೆ. ಪಠ್ಯಕ್ರಮ ಒಪ್ಪುವುದಿಲ್ಲ ಅಂತ ಸಚಿವ ಎಂ.ಸಿ ಸುಧಾಕರ್ ಹೇಳಿಕೆ ನೀಡಿದ್ದಾರೆ. ಯುಜಿಸಿ ಪಠ್ಯ ರೂಪಿಸುವ ಹಕ್ಕಿಲ್ಲ. ಕೇವಲ ಪಠ್ಯಕ್ರಮದ ಚೌಕಟ್ಟನ್ನು ಮಾತ್ರ ನೀಡಬೇಕು. ಹೀಗಾಗಿ ಯುಜಿಸಿ ಕರಡು ಪ್ರತಿಗೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಯುಜಿಸಿ ಒಂದು ನಿಯಂತ್ರಣ ಸಂಸ್ಥೆ ಅಷ್ಟೇ ಯೋಚಿಸಿ ಪಠ್ಯಕ್ರಮ ರೂಪಿಸಲು ಅಧಿಕಾರ ಹೊಂದಿಲ್ಲ. ಪಠ್ಯಕ್ರಮ ರೂಪಿಸುವ ಅಧಿಕಾರ ವಿಶ್ವವಿದ್ಯಾಲಯದ ಅಧ್ಯಯನ ಮಂಡಳಿಗೆ ಇದೆ. ಯುಜಿಸಿಯ ಪಠ್ಯಕ್ರಮ ಕರ್ಡನ್ನು ಅಧ್ಯಯನ ಮಾಡಲು ಸಮಿತಿ ರಚನೆ ಮಾಡಲಾಗಿದ್ದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ತಜ್ಞರ ಸಮಿತಿ ರಚನೆಯಾಗಿದೆ. ಈ ಕುರಿತು ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಎಂ ಸಿ ಸುಧಾಕರ್ ಮಾಹಿತಿ ನೀಡಿದರು.