Author: kannadanewsnow05

ಬೆಂಗಳೂರು : ಬೆಂಗಳೂರು ಮಹಾನಗರದಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದ್ದು ಹೆಬ್ಬಾಳದ ಗುಡ್ಡದ ಹಳ್ಳಿಯ ಟೈರ್ ಅಂಗಡಿ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ ಘಟನಾ ಸ್ಥಳಕ್ಕೆ ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ಬೆಂಕಿಯನ್ನು ನಂದಿಸಿದೆ ಎಂದು ತಿಳಿದುಬಂದಿದೆ. ಮನೆಯೊಂದರಲ್ಲಿ ಬೆಂಕಿ ಅವಘಡ ಇದಕ್ಕೂ ಮುಂಚೆ ಬೆಂಗಳೂರಿನ ಇಲ್ಲಿನ ಸಾರಾಯಿಪಾಳ್ಯದ ಮನೆಯೊಂದರಲ್ಲಿ ಗುರುವಾರ ಬೆಳಗ್ಗೆ ಅಗ್ನಿ ಅವಘಡ ಸಂಭವಿಸಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಮನೆಯೊಂದರಿಂದ ಬೆಂಕಿ ಬರುತ್ತಿರುವುದನ್ನು ಗಮಸಿದ ಸ್ಥಳೀಯರು ಪೊಲೀಸರು ಹಾಗೂ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದರು. ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಥಳೀಯರು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ ಕಾರಣ ಹೆಚ್ಚಿನ ಅನಾಹುತ ಆಗುವುದ ತಪ್ಪಿದೆ. ಎರಡು ಮಹಡಿಯ ಮನೆಯ ಮೇಲಿನ ಅಂತಸ್ತಿನದಲ್ಲಿ ಬೆಂಕಿ ಹೊತ್ತಿಕೊಂಡಿದೆ. ದಟ್ಟ ಹೊಗೆ ಹಾಗೂ ಬೆಂಕಿಯ ಜ್ವಾಲೆಯು ಮನೆಯಿಂದ ಹೊಸ ಸೂಸಿದ ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿ…

Read More

ಬೆಂಗಳೂರು : ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆಗಳು ನಡೆಯುತ್ತಿದ್ದು ಇದೀಗ ಕಲ್ಬುರ್ಗಿಯಲ್ಲಿ ಆಪರೇಷನ್ ಹಸ್ತ ಬಹುತೇಕ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದ ಆಫ್ಜಲ್ಪುರ ತಾಲೂಕಿನ ಬಿಜೆಪಿಯ ಮಾಜಿ ಶಾಸಕ ಮಾಲಿಕೆಯ ಗುತ್ತೇದಾರ್ ಇದೀಗ ನಾಳೆ ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ಮರಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೌದು ಬೆಂಗಳೂರಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಬಿಜೆಪಿಯ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ಡಿಕೆ ಶಿವಕುಮಾರ್ ಜೊತೆಗೆ ಮಾಲೀಕಯ್ಯ ಗುತ್ತೇದಾರ ಮಾತುಕತೆ ನಡೆಸಿದ್ದು ಬಹುತೇಕ ಅವರು ನಾಳೆ ಕಲ್ಬುರ್ಗಿ ಸಮಾವೇಶದಲ್ಲಿ ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಉಡೆ ಎಂದು ಹೇಳಲಾಗುತ್ತಿದೆ. ಖರ್ಗೆ ವಿರುದ್ಧ ಮಾಲಿಕೆಯ ಗುತ್ತೇದಾರ್ ತೊಡೆತಟ್ಟಿ ಬಿಜೆಪಿಗೆ ಹೋಗಿದ್ದರು ನಿನ್ನೆ ಅಷ್ಟೆ ಅವರ ಸಹೋದರ ನಿತೀನ್ ಗುತ್ತೇದಾರ ಅವರು ಬಿಜೆಪಿ ಗೆ ಸೇರ್ಪಡೆಯಾಗಿದ್ದರು. ಇದೀಗ ಇತ್ತ ಮಾಲಿಕಯ್ಯ ಗುತ್ತೇದಾರ್ ಗೆ ಕಾಂಗ್ರೆಸ್ ಗಾಳ ಹಾಕಿದ್ದು, ಕಲ್ಬುರ್ಗಿಯಲ್ಲಿ ಆಪರೇಷನ್ ಹಸ್ತ…

Read More

ಬೆಂಗಳೂರು : ಎದೆಹಾಲು ಸಂಗ್ರಹಿಸುವ ಹಾಗೂ ಅದನ್ನು ಮಾರಾಟ ಮಾಡುವುದನ್ನು ನಿಷೇಧಿಸುವ ಕಾನೂನು ಎಲ್ಲಾದರೂ ಇದ್ದರೆ ತಿಳಿಸಿ ಎಂದು ಕರ್ನಾಟಕ ಹೈಕೋರ್ಟ್ ಕೇಳಿದೆ.ಭಾರತದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಎದೆಹಾಲು ಮಾರಾಟ ಮಾಡುವ ಜಾಲವನ್ನು ಸದ್ಯದಲ್ಲೇ ವಿಸ್ತರಿಸುವುದನ್ನು ಆಕ್ಷೇಪಿಸಿ ಬೆಂಗಳೂರಿನ ಮುನೇಗೌಡ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು. https://kannadanewsnow.com/kannada/priyank-kharge-on-pm-modis-visit-to-karnataka-tell-me-what-you-have-done-for-kannadigas-in-10-years/ ಅರ್ಜಿದಾರರ ಪರ ವಾದಿಸಿದ ವಕೀಲ ಬಿ.ವಿಶ್ವೇಶ್ವರಯ್ಯ, ಕೆಲ ಬಹುರಾಷ್ಟ್ರೀಯ ಕಂಪನಿಗಳು ತಾಯಿ ಎದೆಹಾಲು ವಾಣಿಜ್ಯೀಕರಣ ಮಾಡುತ್ತಿವೆ. ಅನೈತಿಕವಾಗಿರುವ ಈ ವ್ಯಾಪಾರ ತಡೆಯಬೇಕು. ಆ ಸಂಬಂಧ ನಿರ್ದಿಷ್ಟ ಕಾನೂನು ರೂಪಿಸಲು ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ತಾಯಿ ಎದೆಹಾಲು ಸಂಗ್ರಹಿಸಿ ಮಾರಾಟ ಮಾಡುತ್ತಿರುವ ಬಗ್ಗೆ ಯಾವುದಾದರೂ ವಿಶೇಷ ಹಾಗೂ ನಿರ್ದಿಷ್ಟ ಘಟನೆ ನಡೆದಿರುವುದು ಕಂಡು ಬಂದಿದೆಯೇ? ಅದನ್ನು ತಡೆಯಲು ದೇಶ-ವಿದೇಶದಲ್ಲಿ ಯಾವುದಾದರೂ ಕಾನೂನುಗಳ ಇವೆಯೇ?,ಎಂದು ಪ್ರಶ್ನಿಸಿತು. https://kannadanewsnow.com/kannada/aadhaar-atm-no-longer-have-to-go-to-bank-atm-withdraw-money-sitting-at-home-do-you-know-how/ ಇದೊಂದು ಪ್ರಮುಖವಾದ ವಿಚಾರವಾಗಿದೆಯಾದರೂ, ಅದನ್ನು ನಿರ್ಬಂಧಿಸಲು ಯಾವುದಾದರೂ ಕ್ರಮ ಅಥವಾ ಕಾನೂನು ಇದ್ದರೆ ನಾವು ಅದನ್ನು ಆಧಾರವಾಗಿಟ್ಟುಕೊಂಡು ಕೇಂದ್ರ ಸರ್ಕಾರಕ್ಕೆ ನಿರ್ದೇಶನ…

Read More

ಕಲಬುರಗಿ : ಏಪ್ರಿಲ್ 14ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಅವರು ಕರ್ನಾಟಕದಲ್ಲಿ ಮತ ಬೇಟೆ ನಡೆಸಲಿದ್ದಾರೆ ಇದೀಗ ಮೋದಿ ಅವರ ರಾಜ್ಯ ಪ್ರವಾಸಕ್ಕೆ ಐಟಿಬಿಟಿ ಸಚಿವ ಪ್ರಿಯಾಂಕ ಖರ್ಗೆ ಕಿಡಿಕಾರಿದ್ದು 10 ವರ್ಷದಲ್ಲಿ ಕನ್ನಡಿಗರಿಗೆ ಏನು ಮಾಡಿದ್ದೀರಿ ಎಂದು ತಿಳಿಸಿ ಎಂದು ವಾಗ್ದಾಳಿ ನಡೆಸಿದರು. https://kannadanewsnow.com/kannada/aadhaar-atm-no-longer-have-to-go-to-bank-atm-withdraw-money-sitting-at-home-do-you-know-how/ ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ರಾಜ್ಯ ಪ್ರವಾಸಕ್ಕೆ ಕಿಡಿ ಕಾರಿದ ಪ್ರಿಯಾಂಕ ಖರ್ಗೆ ಅವರು ದೇಶದ ಪ್ರಧಾನಿ ಎಲ್ಲಾದರೂ ಪ್ರಚಾರ ಮಾಡಬಹುದು.ಆದರೆ ರಾಜ್ಯಕ್ಕೆ ಬಂದು ನಮಗೇನು ಕೊಟ್ಟಿದ್ದಾರೆ ಎಂದು ಅವರು ಹೇಳಲಿ.ಬರ ನಿರ್ವಹಣೆಗೆ ಏಕೆ ದುಡ್ಡು ಕೊಟ್ಟಿಲ್ಲ ಅಂತ ತಿಳಿಸಬೇಕು ಎಂದು ಅವರು ವಾಗ್ದಾಳಿ ನಡೆಸಿದರು. https://kannadanewsnow.com/kannada/breaking-13-children-injured-in-andhra-pradesh-ugadi-rathotsava-tragedy/ ಸುಮ್ಮನೆ ಪ್ರವಾಸಿಗರಂತೆ ಬಂದು ಹೋದರೆ ಏನು ಪ್ರಯೋಜನ? ಏಕೆ ತಾರತಮ್ಯಮಾಡುತ್ತಿದ್ದೀರಾ ಎಂದು ಜನರಿಗೆ ಉತ್ತರ ಕೊಡಿ ಹತ್ತು ವರ್ಷದಲ್ಲಿ ಕನ್ನಡಿಗರಿಗೆ ಏನು ಮಾಡಿದ್ದೀರಿ ಅಂತ ಹೇಳಿ ಸುಮ್ಮನೆ ಬಂದ ಪುಟ್ಟ ಹೋದ ಪುಟ್ಟ ಅಂದರೆ…

Read More

ಆಂಧ್ರಪ್ರದೇಶ : ಯುಗಾದಿ ರಥೋತ್ಸವದ ವೇಳೆ 13 ವಿದ್ಯಾರ್ಥಿಗಳು ವಿದ್ಯುತ್ ಸ್ಪರ್ಶದಿಂದ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ತೇಕೂರ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೆರವಣಿಗೆ ಭಾಗವಾದ ರಥವು ಓವರ್ಹೆಡ್ ಹೈವೋಲ್ಟೇಜ್ ವಿದ್ಯುತ್ ತಂತಿಗೆ ತಗುಲಿ ಕನಿಷ್ಠ 13 ಮಕ್ಕಳು ಗಾಯಗೊಂಡಿದ್ದಾರೆ.ಘಟನೆಯಲ್ಲಿ ವಿದ್ಯುದಾಘಾತಕ್ಕೊಳಗಾದ ಮಕ್ಕಳನ್ನು ಚಿಕಿತ್ಸೆಗಾಗಿ ಕರ್ನೂಲ್‌ನ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಕ್ಕಳ ಜೀವಕ್ಕೆ ತಕ್ಷಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಯುಗಾದಿ ಉತ್ಸವದ ಆಚರಣೆಯ ಮುಕ್ತಾಯದ ನಂತರ 13 ಮಕ್ಕಳು ವಿದ್ಯುತ್ ಆಘಾತದಿಂದ ಗಾಯಗೊಂಡಿದ್ದಾರೆ ಯಾವುದೇ ಸಾವುನೋವುಗಳು ಸಂಭವಿಸಿಲ್ಲ. ಗಾಯಗೊಂಡ ಮಕ್ಕಳನ್ನು ಭೇಟಿ ಮಾಡಲು ವೈಎಸ್‌ಆರ್‌ಸಿಪಿ ಮುಖಂಡ ಮತ್ತು ಪಾಣ್ಯಂ ಶಾಸಕ ಕಾಟಸಾನಿ ರಾಮಭೂಪಾಲ್ ರೆಡ್ಡಿ ಮತ್ತು ನಂದ್ಯಾಳ ಟಿಡಿಪಿ ಅಭ್ಯರ್ಥಿ ಬೈರೆಡ್ಡಿ ಶಬರಿ ಆಸ್ಪತ್ರೆಗೆ ಭೇಟಿ ನೀಡಿದರು.

Read More

ಹಾಸನ : ನಾನು 14 ತಿಂಗಳು ಮುಖ್ಯಮಂತ್ರಿ ಆಗಿದ್ದಾಗ ಹಲವು ಸಮಸ್ಯೆಗಳನ್ನ ಎದುರಿಸಿದ್ದೇನೆ. ನಾನು ಅಧಿಕಾರಕ್ಕೆ ಬಂದರೆ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದೆ, ಯಾರಿಗೂ ಬಹುಮತ ಸಿಗದಿದ್ದಾಗ ಅವರೇ ಎಚ್ ಡಿ ದೇವೇಗೌಡ ಅವರನ್ನು ಭೇಟಿಯಾದರು. ದೇವೇಗೌಡರು ನನ್ನ ಮಗ ಸಿಎಂ ಆಗುವುದು ಬೇಡ ಎಂದು ಹೇಳಿದರು.ಆದರೂ ಅವರೇ ಒತ್ತಡ ಹಾಕಿ ನನ್ನನ್ನು ಸಿಎಂ ಮಾಡಿದರು ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ನೀಡಿದರು. https://kannadanewsnow.com/kannada/job-notification-3712-junior-grade-clerk-data-entry-operator-recruitment-here-is-the-complete-information/ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಮಾತನಾಡಿದ ಅವರು, ವೈಯಕ್ತಿಕ ಲಾಭಕ್ಕಾಗಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡಿಲ್ಲ. ಇವರು ದೇವೇಗೌಡರನ್ನು ಅಧಿಕಾರದಿಂದ ಯಾಕೆ ಕೆಳಗೆ ಇಳಿಸಿದರು? ಎಚ್ಡಿ ದೇವೇಗೌಡರು ಮಾಡಿದ ದ್ರೋಹ ಏನು? ದೇವೇಗೌಡರನ್ನು ಕೂಡಿಸಿ ಪ್ರಧಾನಿ ಮೋದಿ ನಿಂತುಕೊಳ್ಳುತ್ತಾರೆ. ಇದು ಎಚ್ ಡಿ ದೇವೇಗೌಡರಿಗೆ ಇರುವ ಗೌರವ. ನಾನು ಸಿಎಂ ಆಗಿದ್ದಾಗ ಈ ಜಿಲ್ಲೆಯ ಮಗನಾಗಿ ಕೆಲಸ ಮಾಡಿದ್ದೇನೆ ಎಂದು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ಮಾಜಿ…

Read More

ದಾವಣಗೆರೆ : ಒಮಿನಿ ವಾಹನಕ್ಕೆ ಕೆಎಸ್ಆರ್ಟಿಸಿ ಬಸ್ ಒಂದು ಡಿಕ್ಕಿ ಹೊಡೆದ ಪರಿಣಾಮವಾಗಿ ವ್ಯಾನ್ ನಲ್ಲಿದ್ದ ಮೂವರು ವ್ಯಕ್ತಿಗಳು ಸ್ಥಳದಲ್ಲಿ ಸಾವನ್ನಪ್ಪಿದ್ದು, ಆರು ಜನರಿಗೆ ಗಂಭೀರವಾದಂತಹ ಗಾಯಗಳಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಚಿನ್ನಕಟ್ಟೆ ಶಿವಪುರ ಎಂಬಲ್ಲಿ ಈ ಅಪಘಾತ ಸಂಭವಿಸಿದೆ. ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಓಮಿನಿ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ನಂಜುಂಡ (83) ದೇವರಾಜ್ (27) ರಾಕೇಶ್ (30) ಎಂದು ಹೇಳಲಾಗುತ್ತಿದೆ. ದಾವಣಗೆರೆ ಚಿನ್ನಕಟ್ಟೆ ಶಿವಪುರದ ಬಳಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಸುಮಾರು 6ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದ್ದು ಇಬ್ಬರ ಸ್ಥಿತಿ ಇನ್ನೂ ಗಂಭೀರವಾಗಿದ್ದು, ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಕುರಿತಂತೆ ದಾವಣಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ನವದೆಹಲಿ : ಅಕ್ರಮ ಮದ್ಯ ನೀತಿ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಕ್ಕೆ ಒಳಗಾಗಿ ನ್ಯಾಯಾಂಗ ಬಂಧನದಲ್ಲಿರುವ ತೆಲಂಗಾಣ ಮಾಜಿ ಸಿಎಂ ಕೆಸಿ ಚಂದ್ರಶೇಖರ್‌ ರಾವ್‌ ಅವರ ಪುತ್ರಿಯನ್ನು ಈಗ ಸಿಬಿಐ ಕೂಡ ಬಂಧಿಸಿದೆ ಎಂದು ತಿಳಿದುಬಂದಿದೆ. ದೆಹಲಿಯ ಅಬಕಾರಿ ನೀತಿ ಸಂಬಂಧಿತ ಆಪಾದಿತ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ.ಕವಿತಾ ಅವರನ್ನು ತಿಹಾರ್ ಜೈಲಿನಲ್ಲಿ ಸುಟ್ಟುಹಾಕಿದ ನಂತರ ಕೇಂದ್ರೀಯ ತನಿಖಾ ದಳ (ಸಿಬಿಐ) ಗುರುವಾರ ಅವರನ್ನು ಬಂಧಿಸಿದೆ. ಆಮ್ ಆದ್ಮಿ ಪಕ್ಷಕ್ಕೆ 100 ಕೋಟಿ ರೂ.ಗಳನ್ನು ಅಬಕಾರಿ ನೀತಿಗೆ ಪಾವತಿಸಿದ ಆರೋಪದ ಸಹ-ಆರೋಪಿ ಬುಚ್ಚಿ ಬಾಬು ಅವರ ಫೋನ್ ಮತ್ತು ದಾಖಲೆಗಳಿಂದ ವಶಪಡಿಸಿಕೊಂಡ ವಾಟ್ಸಾಪ್ ಚಾಟ್‌ಗಳನ್ನು ಪ್ರಶ್ನಿಸಲು ವಿಶೇಷ ನ್ಯಾಯಾಲಯದಿಂದ ಅನುಮತಿ ಪಡೆದ ನಂತರ ಸಿಬಿಐ ಶನಿವಾರ ಕೆ ಕವಿತಾ ಅವರನ್ನು ಗ್ರಿಲ್ ಮಾಡಿದೆ ಎಂದು ತಿಳಿದು ಬಂದಿದೆ.

Read More

ಚಿಕ್ಕಬಳ್ಳಾಪುರ : ಆತನಿಗೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿದ್ದರೂ ಆದರೂ ಇನ್ನೊಂದು ಮದುವೆಯಾಗಿದ್ದನು.ಆದರೆ ಎರಡನೇ ಪತ್ನಿಯ ಜೊತೆಗೆ ಕ್ಷುಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದ ಆತ ಆಕೆಯನ್ನು ಭೀಕರವಾಗಿ ಕೊಲೆಗೈದು ಆಮೇಲೆ ತಾನಾಗೇ ಪೊಲೀಸರಿಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿ ನಗರದ ಸೊಣ್ಣಶೆಟ್ಟಿಹಳ್ಳಿ ಬಡಾವಣೆಯಲ್ಲಿ ನಡೆದಿದೆ. ಪತ್ನಿಯನ್ನು ಕೊಲೆಗೈದು ಪೊಲೀಸರಿಗೆ ಶರಣಾಗಿರುವ ಪತಿಯನ್ನು ಹರೀಶ್ ಎಂದು ಹೇಳಲಾಗುತ್ತಿದ್ದು, ರೆಡ್ಡಿಲಕ್ಷ್ಮಿ(30) ಮೃತ ರ್ದುದೈವಿ. ಆಂಧ್ರ ಪ್ರದೇಶ ಮೂಲದವರಾಗಿದ್ದ ದಂಪತಿ, ಒಂದು ವರ್ಷದ ಹಿಂದೆ ಸಾರ್ವಜನಿಕರ ಸಮ್ಮೂಖದಲ್ಲಿ ಅದ್ದೂರಿ ವಿವಾಹ ಮಾಡಿಕೊಂಡು, ಸೊಣ್ಣಶೆಟ್ಟಿಹಳ್ಳಿ ಬಡಾವಣೆಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು. ಹರೀಶ್ ಹೋಸಕೋಟೆಯಲ್ಲಿ ಹೂ ವ್ಯಾಪಾರಿಯಾಗಿದ್ರೆ, ರೆಡ್ಡಿಲಕ್ಷ್ಮಿ ಮನೆಯಲ್ಲಿ ಇದ್ದಳು. ಆದ್ರೆ, ಈಗ ಸ್ವತಃ ಹರೀಶ್ ಪತ್ನಿಯನ್ನು ಬರ್ಬರವಾಗಿ ಕೊಂದು ಹೊಸಕೋಟೆ ಠಾಣೆ ಪೊಲೀಸರಿಗೆ ಶರಣಾಗಿದ್ದಾನೆ. ಹತ್ತು ವರ್ಷಗಳ ಹಿಂದೆ ಹರೀಶ್​ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪಟ್ಟಣದಲ್ಲಿ ಮಮತಾ ಎಂಬುವವರ ಜೊತೆ ಮದುವೆಯಾಗಿ, ಇಬ್ಬರು ಗಂಡು ಮಕ್ಕಳು ಇದ್ದಾರೆ. ಇತ್ತ ವಿವಾತೆಯಾಗಿದ್ದ ರೆಡ್ಡಿಲಕ್ಷ್ಮಿ ಪತಿಯಿಂದ…

Read More

ಮೈಸೂರು : ದೇಶದ ಇತಿಹಾಸದಲ್ಲಿ ಕರ್ನಾಟಕಕ್ಕೆ ಮೋದಿ ಸರ್ಕಾರ ನೀಡಿದಷ್ಟು ಅನುದಾನ ಹಿಂದೆ ಯಾವ ಸರ್ಕಾರವು ನೀಡಿಲ್ಲ.ಯುಪಿಎ ಅವಧಿಯಲ್ಲಿ ರಾಜ್ಯಕ್ಕೆ ಕೊಟ್ಟ ಕೊಡುಗೆ ಎಷ್ಟು? ಕಳೆದ 10 ವರ್ಷಗಳ ಅವಧಿಯಲ್ಲಿ ಮೋದಿ ಸರ್ಕಾರ ನೀಡಿದ ತೆರಿಗೆ ಪಾಲು, ಗ್ರ್ಯಾಂಟ್ ಮೂಲಕ ಎಷ್ಟು ಅನುದಾನ ನೀಡಿದೆ? ಈ ಕುರಿತು ಚರ್ಚೆ ಮಾಡಲು ನಾವು ಸಿದ್ಧರಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ಧರಿದ್ದಾರೆಯೇ ಎಂದು ಮಾಜಿ ಶಾಸಕ ಸಿ.ಟಿ.ರವಿ ಸವಾಲು ಹಾಕಿದರು. https://kannadanewsnow.com/kannada/if-you-worship-devi-matangi-in-this-way-luck-will-automatically-come-in-search-of-you/ ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಕೃಷ್ಣ ಭೈರೇಗೌಡ ಅವರ ಪ್ರಶ್ನೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ಉತ್ತರ ಕೊಟ್ಟಿದ್ದಾರೆ. ಆದರೆ, ಅವರು ಚರ್ಚೆ ಮಾಡದೆ ಏಕಪಾತ್ರಾಭಿನಯ ಮಾಡಿದರು. ನಾವು ಅನುದಾನ ಕೊಟ್ಟಿದ್ದು ಸುಳ್ಳಾದರೆ ಚಾಮುಂಡೇಶ್ವರಿ ಮುಂದೆ ಪ್ರಮಾಣಮಾಡಲಿ ಎಂದು ಸವಾಲು ಹಾಕಿದ್ದೆ, ಯಾರೂ ಸ್ವೀಕರಿಸಲಿಲ್ಲ ಎಂದರು. https://kannadanewsnow.com/kannada/congress-will-be-wiped-out-after-mp-election-results-by-vijayendra/ ನೀತಿ ಸಂಹಿತೆ ಇರುವುದರಿಂದ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಿಗೂ ಪರಿಹಾರ ನೀಡಿಲ್ಲ. ಇಷ್ಟು ದಿನ ರಾಜ್ಯ ಸರ್ಕಾರ…

Read More