Author: kannadanewsnow05

ವಿಜಯಪುರ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಇದೀಗ ಬಿಜೆಪಿಯ ಮಾಜಿ ಸಚಿವ ಸಿಟಿ ರವಿ ಇದೀಗ ವಿಜಯಪುರದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದು, ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಮುಂದಿನ ದಿನಗಳಲ್ಲಿ ಪಾಕಿಸ್ತಾನದಲ್ಲೂ ರಾಹುಲ್ ಗಾಂಧಿ ರಾಜಕೀಯ ಮಾಡಬಹುದು ಎಂದು ಕಿಡಿ ಕಾರಿದರು. ಕಾಂಗ್ರೆಸ್ ಗೆಲವು ಸಂಭ್ರಮಿಸುವವರು ಪಾಕಿಸ್ತಾನದಲ್ಲಿ ಅಷ್ಟೇ ಇದ್ದಾರೆ. ವಿಜಯಪುರದಲ್ಲಿ ಬಿಜೆಪಿ ಮಾಜಿ ಶಾಸಕ ಸಿಟಿ ರವಿ ಹೇಳಿಕೆ ನೀಡಿದ್ದು ಮುಸ್ಲಿಮರು ಹೆಚ್ಚಿರುವ ಕಾರಣ ರಾಹುಲ್ ಗಾಂಧಿ ಕೇರಳಕ್ಕೆ ಹೋಗಿದ್ದಾರೆ ಮುಂದಿನ ದಿನಗಳಲ್ಲಿ ಪಾಕಿಸ್ತಾನದಲ್ಲೂ ಕೂಡ ರಾಜಕೀಯ ಮಾಡಬಹುದು ರಾಹುಲ್ ಗಾಂಧಿ ಪಾಕಿಸ್ತಾನದಲ್ಲೂ ರಾಜಕೀಯ ಮಾಡಬಹುದು ಎಂದು ವಿಜಯಪುರದಲ್ಲಿ ಬಿಜೆಪಿ ಮಾಜಿ ಶಾಸಕ ಸಿಡಿ ರವಿ ಹೇಳಿಕೆ ನೀಡಿದರು. ಗ್ಯಾರಂಟಿ ಹೆಸರಿಗೆ ಕೈ ಪೇಟೆಂಟ್ ಪಡೆದಿದ್ದೀಯ? ಗ್ಯಾರಂಟಿ ಅನ್ನೋದು ಕಾಂಗ್ರೆಸ್ ಹುಟ್ಟು ಹಾಕಿದ ಪದವಾಗಿದ್ಯಾ? ಬಿಜೆಪಿ ಗ್ಯಾರಂಟಿ ಅಭಿವೃದ್ಧಿಯತ್ತ ಕೊಂಡುಯುತ್ತದೆ. ನಮ್ಮ ಗ್ಯಾರಂಟಿ ಅಭಿವೃದ್ಧಿ ಗ್ಯಾರಂಟಿಯಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.

Read More

ಮಂಡ್ಯ : ರಾಜ್ಯದಲ್ಲಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಲೋಕಸಭಾ ಕ್ಷೇತ್ರದ ಪ್ರಮುಖ ಅಖಾಡವಾಗಿರುವ ಮಂಡ್ಯದಲ್ಲಿ ನಾಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮತ ಭೇಟಿ ನಡೆಸಲಿದ್ದಾರೆ ಈ ಕುರಿತಂತೆ ಈಗಾಗಲೇ ಮಂಡ್ಯದಲ್ಲಿ ಕಾಂಗ್ರೆಸ್ ಸಮಾವೇಶ ಕುರಿತಂತೆ ಭರದ ಸಿದ್ಧತೆ ನಡೆಸಲಾಗುತ್ತಿದೆ. ನಾಳೆ ಮಂಡ್ಯದಲ್ಲಿ ರಾಹುಲ್ ಗಾಂಧಿಯಿಂದ ಮತ ಬೇಟೆ ನಡೆಸಲಿದ್ದು, ನಾಳೆ ಮಂಡ್ಯದಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ ಯೋಜನೆ ಮಾಡಲಾಗಿದೆ. ಮಂಡ್ಯದ ವಿವಿ ಮೈದಾನದಲ್ಲಿ ಬೃಹತ್ ವೇದಿಕೆ ತಯಾರಿ ಆಗುತ್ತಿದ್ದು ಜರ್ಮನ್ ಟೆಂಟ್ ಮೂಲಕ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಮಂಡ್ಯ ಕಾಂಗ್ರೆಸ್ ಶಾಸಕರಿಂದ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು, ಶಾಸಕ ಗಣಿಗ ರವಿಕುಮಾರ್ ಇಂದ ಇದೀಗ ವೇದಿಕೆ ಪರಿಶೀಲನೆ ನಡೆಸಲಾಗುತ್ತಿದೆ. ರಾಹುಲ್ ಗಾಂಧಿಯವರಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಾಥ್ ನೀಡಲಿದ್ದಾರೆ.ನಾಳೆ ಮಧ್ಯಾಹ್ನ 1.30 ಕ್ಕೆ ಮಂಡ್ಯಕ್ಕೆ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ಕೈ ಅಭ್ಯರ್ಥಿ ಸ್ಟಾರ್ ಚಂದ್ರ ರಾಹುಲ್ ಗಾಂಧಿ ಮತ ಪ್ರಚಾರ ಮಾಡಲಿದ್ದಾರೆ ಎಂದು…

Read More

ಚಿಕ್ಕಮಗಳೂರು : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನೀಟ್ಟಾಗಿ ಪಾಲಿಸುತ್ತಿದ್ದು, ಅಕ್ರಮವಾಗಿ ಸಾಗಿಸುತವ ಹಣ ಮದ್ಯದ ಮೇಲೆ ಚುನಾವಣೆ ಅಧಿಕಾರಿಗಳು ಕಣ್ಣಿಟ್ಟಿದ್ದು, ಇದೀಗ ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಅಕ್ರಮವಾಗಿ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ಹಣವನ್ನು ಜಪ್ತಿ ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಜೈನ್ ರಸ್ತೆಯಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 13.10 ಲಕ್ಷ ಹಣ ಜಪ್ತಿ ಮಾಡಿಕೊಂಡಿದ್ದಾರೆ. ರಾತ್ರಿ ಜೈನ್ ನಗರ ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳು ಕಾರು ನಿಲ್ಲಿಸಿಕೊಂಡಿದ್ದರು ಈ ವೇಳೆ ಕಾರು ತಪಾಸನೆ ನಡೆಸಿದ ಅಧಿಕಾರಿಗಳಿಗೆ ವೇಳೆ 13.10 ಹಣವನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Read More

ಕೊಪ್ಪಳ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈಗ ಕಾಂಗ್ರೆಸ್ ಕೊಪ್ಪಳ ಹಾಲಿ ಸಂಸದರಾಗಿರುವ ಕರಡಿ ಸಂಗಣ್ಣ ಅವರಿಗೆ ಗಾಳ ಹಾಕಿದ್ದು ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ಕರಡಿ ಸಂಗಣ್ಣ ಅವರು ನಾಳೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರನ್ನು ಭೇಟಿಯಾಗಿ ನಂತರ ನನ್ನ ಮುಂದಿನ ನಿರ್ಧಾರ ತಿಳಿಸುತ್ತೇನೆ ಎಂದು ತಿಳಿಸಿದರು. ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸೇರ್ಪಡೆ ಕುರಿತಂತೆ ನಿಖರವಾದ ಮಾಹಿತಿ ಬಂದಿಲ್ಲ ಎಂದು ಕೊಪ್ಪಳದಲ್ಲಿ ಬಿಜೆಪಿ ಸಂಸದ ಕರಡಿ ಶಂಕರಣ್ಣ ಪ್ರತಿಕ್ರಿಯೆ ನೀಡಿದ್ದು, ಇಂದು ಬೆಂಗಳೂರಿಗೆ ಹೋಗುತ್ತಿದ್ದೇನೆ ನಾಳೆ ಮುಖ್ಯಮಂತ್ರಿ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡುತ್ತೇನೆ. ಸಿಎಂ ಡಿಸಿಎಂ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಕೊಪ್ಪಳದಲ್ಲಿ ಬಿಜೆಪಿ ಸಂಸದ ಕರಡಿ ಸಂಗಣ್ಣ ಹೇಳಿಕೆ ನೀಡಿದರು. ಈಗಾಗಲೇ ಅಥಣಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಲಕ್ಷ್ಮಣ ಸವದಿ ಅವರು ಸಂಸದ ಕರಡಿ ಸಂಗಣ್ಣ ಅವರನ್ನು ಭೇಟಿಯಾಗಿದ್ದು, ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುವ ಕುರಿತಂತೆ ಬಹುತೇಕ ಚರ್ಚಿಸಲಾಗಿದೆ ಎಂದು ಬಲಮೂಲಗಳಿಂದ ತಿಳಿದು ಬಂದಿದೆ ಹೀಗಾಗಿ ನಾಳೆ ಮುಖ್ಯಮಂತ್ರಿ…

Read More

ಯಾದಗಿರಿ : ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಈ ಬಾರಿ ಹೆಚ್ಚು ಸ್ಥಾನ ಗೆಲ್ಲದೆ ಹೋದರೆ ಸಚಿವ ಸ್ಥಾನದ ಕುರ್ಚಿಯನ್ನು ಬಿಟ್ಟು ಕೊಡಬೇಕಾಗುತ್ತದೆ ಎಂದು ಯಾದಗಿರಿ ಜಿಲ್ಲೆ ಸುರಪುರದಲ್ಲಿ ಸಚಿವ ಶರಣಬಸಪ್ಪಗೌಡ ದರ್ಶನಪುರ ಹೇಳಿಕೆ ನೀಡಿದ್ದಾರೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವಂತಹ ರಾಜ ವೇಣುಗೋಪಾಲ ನಾಯಕ ಅವರ ಪರವಾಗಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಲೀಡ್ ಕೊಡದೆ ಹೋದರೆ ಆ ಕುರ್ಚಿ ಅವರಿಗೆ ಬಿಟ್ಟು ಕೊಡಬೇಕಾಗುತ್ತದೆ. ನಾವೇ ಲೀಡರ್ ಕೊಡಿಸಲಿಲ್ಲ ಅಂದರೆ ಹೈಕಮಾಂಡಿಗೆ ಹೋಗಿ ಮುಖ ತೋರಿಸಿವುದು ಹೇಗೆ? ಇದು ಹೇಳಬೇಕಂದ್ರೆ ನಮಗೆ ಮಂತ್ರಿ ಕೊಡಬಾರದಿತ್ತು 20,000 ಲೀಡ್ ಕೊಟ್ರಿ ನಿಮ್ಮ ಎಲೆಕ್ಷನ್ ಮಾಡ್ಕೋತೀರಿ ಮಂದಿ ಎಲೆಕ್ಷನ್ ಮಾಡಂಗಿಲ್ಲ ಅನ್ನೋದು ಭಾವನೆ ಬರುತ್ತಿದೆ ಎಂದರು. ಲೋಕಸಭೆ ಚುನಾವಣೆಯಲ್ಲಿ ಲೀಡ್ ಕೊಡದೆ ಹೋದರೆ ಕುರ್ಚಿ ಅವರಿಗೆ ಬಿಟ್ಟು ಕೊಡಬೇಕಾಗುತ್ತದೆ ಮತ್ತೆ ಈ ಬಾರಿ ಲೀಡ್ ಬರ್ಲಿಲ್ಲ ಅಂದರೆ ಬಹಳ ಕಷ್ಟ ಪಡಬೇಕಾಗುತ್ತೆ. ನಿಮ್ಮ ಎಲ್ಲರಲ್ಲೂ ನಮ್ಮ ಮುಖಂಡರಲ್ಲಿ ಕೈ ಜೋಡಿಸಿ ಕೇಳಿಕೊಳ್ಳುತ್ತೇನೆ.…

Read More

ತುಮಕೂರು : ಗ್ಯಾಸ್, ಪೆಟ್ರೋಲ್, ಡೀಸೆಲ್, ರೈತರ ಕೃಷಿ ಪರಿಕರದ ದರ ಹೆಚ್ಚಿಸಿದರು. ಯಾವ ಮುಖ ಹೊತ್ತುಕೊಂಡು ಮೋದಿ ಮೈಸೂರಿಗೆ ಬಂದಿದ್ದಾರೆ.ಬಿಜೆಪಿ ನರೇಂದ್ರ ಮೋದಿಗೆ ನಾಚಿಕೆ ಮಾನ ಮರ್ಯಾದೆ ಇದೆಯಾ? ಬಿಜೆಪಿಯವರ ಮನೆ ದೇವರೇ ಸುಳ್ಳು ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕೆ ಬಿ ಕ್ರಾಸ್ ನಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಜಾರಿ ಮಾಡಿ ನುಡಿದಂತೆ ನಡೆದಿದೆ. ಗ್ಯಾರಂಟಿ ಜಾರಿ ಮಾಡಿದರೆ ರಾಜ ದಿವಾಳಿ ಆಗುತ್ತದೆ ಎಂದು ಮೋದಿ ಹಾಗೂ ಬಿಜೆಪಿಗೆ ಹೇಳಿತ್ತು ಇಂದು ಬಿಜೆಪಿ ಹಾಗೂ ಮೋದಿ ನಮ್ಮ ಗ್ಯಾರಂಟಿ ಪದವನ್ನೇ ಕದ್ದು ಬಿಟ್ಟಿದ್ದಾರೆ ಹತ್ತು ವರ್ಷಗಳ ಹಿಂದೆ ಬಿಜೆಪಿ ನೀಡಿದ್ದ ಭರವಸೆ ಈಡೇರಿಸಿದ್ದಾರಾ? ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುತ್ತೇವೆ ಅಂದಿದ್ದರು ಎಂದು ಕಿಡಿ ಕಾರಿದರು. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಬಿಜೆಪಿಯವರು ಹೇಳಿದ್ದರು. ರೈತರ ಆದಾಯ ದ್ವಿಗುಣಗೊಳಿಸುವುದಾಗಿ…

Read More

ಮೈಸೂರು : ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ತಾಯಂದಿರು ದಾರಿ ತಪ್ಪುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಅವರು ಹೇಳಿಕೆಗೆ ಇದೀಗ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದು, ನೀನು ಒಂದು ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ್ದೀಯ ಅವಳ ನೋವು ಅರ್ಥ ಆಗುತ್ತಾ? ಎಂದು HD ಕುಮಾರಸ್ವಾಮಿ ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ಏಕವಚನದಲ್ಲಿ ಕಿಡಿ ಕಾರಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಕೆ ವಿ ಕ್ರಾಸ್ ನಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು,ಎಚ್ ಡಿ ಕುಮಾರಸ್ವಾಮಿ ಹೇಳಿಕೆಯನ್ನು ಕ್ಷಮಿಸಲು ಯಾರಿಂದಲೂ ಆಗಲ್ಲ. ನನ್ನ ತಾಯಂದಿರು ಅಕ್ಕಂದಿರು ಅವರ ತಾಯಿಯ ಮನೆಗೆ ಹೋಗೋಕೆ, ಧರ್ಮಸ್ಥಳ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಸ್ ನಲ್ಲಿ ಹೋದರೆ ದಾರಿ ತಪ್ಪಿದ್ದಾರೆ ಅಂತೀರಾ? ಇಂತಹ ಹೇಳಿಕೆಯನ್ನು ಸಹಿಸಲಾಗುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು. ಎಚ್ ಡಿ ಕುಮಾರಸ್ವಾಮಿ ಅವರನ್ನು ಕ್ಷಮೆ ಕೇಳಿ ಅಂತ ಹೇಳ್ತಿರಲ್ಲ ಇದು ನಿಮ್ಮ ಜವಾಬ್ದಾರಿ. ಈಗಾಗಲೇ ಹೆಣ್ಣುಮಕ್ಕಳು ಧರಣಿ ಆರಂಭಿಸಿದ್ದಾರೆ.ದೇಶದಲ್ಲೆಡೆ ನಿಮ್ಮ ಹೇಳಿಕೆ ಕುರಿತಂತೆ ಹೊತ್ತಿಕೊಂಡು ಉರಿಯುತ್ತಿದೆ.…

Read More

ಮೈಸೂರು : ಮೈಸೂರಿನಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಪ್ರಧಾನಿ ಮೋದಿ ರಾಜ್ಯ ಸರ್ಕಾರದ ವಿರುದ್ಧ ಕಪ್ಪುಹಣದ ಗಂಭೀರ ಆರೋಪ ಮಾಡಿದ್ದಾರೆ. ದೇಶದಾದ್ಯಂತ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಕರ್ನಾಟಕ ಕಾಂಗ್ರೆಸ್‌ ನಿಂದ ನೂರಾರು ಕೋಟಿ ಕಪ್ಪು ಹಣ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಕರ್ನಾಟಕ ದೇಶದ ಐಟಿ & ಟೆಕ್ನಾಲಜಿ ಹಬ್‌ ಆಗಿದೆ. ಇಲ್ಲಿನ ಯುವಕರಿಗೆ ಇದರ ಹೆಚ್ಚಿನ ಲಾಭ ಸಿಗಬೇಕು. ನಾವು ಸಂಕಲ್ಪ ಪತ್ರದಲ್ಲಿ ಸ್ಥಳೀಯ ಭಾಷೆಗಳ ಪ್ರೋತ್ಸಾಹ ನೀಡುವುದಾಗಿ ಹೇಳಿದ್ದೇವೆ. ಕನ್ನಡ ದೇಶದ ಸಮೃದ್ಧ ಭಾಷೆ. ಬಿಜೆಪಿಯ ಈ ಮಿಷನ್‌ನಿಂದ ಕನ್ನಡದ ವಿಸ್ತಾರವಾಗುತ್ತದೆ ಹಾಗೂ ಹೆಚ್ಚಿನ ಮಾನ್ಯತೆ ಸಿಗುತ್ತದೆ. ಮೈಸೂರು, ಹಂಪಿ ಬಾದಾಮಿ ರೀತಿಯ ಹೆರಿಟೇಜ್‌ ಸೈಟ್‌ಗಳನ್ನು ವಿಶ್ವ ಟೂರಿಸಂ ಭೂಪಟದಲ್ಲಿ ಪ್ರಮೋಟ್‌ ಮಾಡಲಿದ್ದೇನೆ ಎಂದರು. ಕರ್ನಾಟಕದಲ್ಲಿ ಟೂರಿಂಸಂ ಹಾಗೂ ಉದ್ಯೋಗಾವಕಾಶಗಳು ಹೆಚ್ಚುತ್ತವೆ. ಇವೆಲ್ಲವೂ ಜಾರಿಯಾಗಲು ಬಿಜೆಪಿ ಅಗತ್ಯವಿದೆ. ಎನ್‌ಡಿಎ ಅಗತ್ಯದೆ. ಎನ್‌ಡಿಎ ಏನು ಹೇಳುತ್ತೋ ಅದನ್ನು ಮಾಡುತ್ತದೆ. 370ನೇ ವಿಧಿ, ತ್ರಿವಳಿ ತಲಾಕ್‌, ರಾಮ ಮಂದಿರವೇ ಆಗಲಿ ಬಿಜೆಪಿಯ…

Read More

ಮೈಸೂರು : ಲೋಕಸಭೆ ಚುನಾವಣೆ ಹಿನ್ನೆಲೆ ಇಂದು ಮೈಸೂರಿಗೆ ಆಗಮಿಸಿದ ಪ್ರಧಾನಿ ಮೋದಿಯವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು ಭಾರತ ಮಾತಾ ಕಿ ಜೈ ಎಂದು ಘೋಷಣೆ ಕೂಗಲು ಅನುಮತಿ ಪಡೆಯಬೇಕಾ? ಹೀಗಾಗಿ ಇಂದು ಕಾಂಗ್ರೆಸ್ ಪತನದ ಪರಾಖಾಷ್ಟೇ ಹೊಂದಿದ್ದು ಅಧಿಕಾರಕ್ಕಾಗಿ ಬೆಂಕಿನ ಆಟ ಆಡುತ್ತಿದೆ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷ ತುಕುಡೆ ತುಕುಡೆ ಗ್ಯಾಂಗ್ ಜೊತೆ ಇದೆ ಎಂದು ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಕೆಂಡಮಂಡಲರಾದರು.ಕಾಂಗ್ರೆಸ್ ದೇಶದ ವಿರುದ್ಧವೇ ಮಾತನಾಡುತ್ತದೆ. ಕಾಂಗ್ರೆಸ್ ಪಕ್ಷ ಕತರ್ನಾಕ್ ಕಾಂಗ್ರೆಸ್ನ ಕತರ್ನಾಕು ಉದ್ದೇಶಗಳು ಈಗಲೂ ಹಾಗೆ ಇದೆ. ಆರ್ಟಿಕಲ್ 370 ವಿಚಾರವಾಗಿ ಕಾಂಗ್ರೆಸ್ ಅಧ್ಯಕ್ಷರು ಹೇಳಿದ್ದರು. ತುಕುಡಿ ತಿಕುಡೆ ಗ್ಯಾಂಗ್ ಸುಲ್ತಾನಾಗಿ ಕಾಂಗ್ರೆಸ್ ಓಡಾಡುತ್ತಿದೆ ಎಂದರು. ಕಾಂಗ್ರೆಸ್ನ ಖತರ್ನಾಕ ಉದ್ದೇಶಗಳು ಈಗಲೂ ಹಾಗೆ ಇದೆ. ಕಾಶ್ಮೀರಕ್ಕೂ ಬೇರೆ ರಾಜ್ಯಕ್ಕೂ ಏನು ಸಂಬಂಧ ಎಂದು ಕೇಳಿದ್ದರು. ಭಾರತದ ವಿರುದ್ಧ ಮಾಡುವವರಿಗೆ ಟಿಕೆಟ್ ಕೊಡುತ್ತದೆ.ಭಾರತ ಮಾತೆಗೆ ಜೈಕಾರ ಹಾಕಲು ನಾಯಕರ ಅನುಮತಿ ಕೇಳಬೇಕಾಯಿತು. ಮೊದಲು…

Read More

ಮೈಸೂರು : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ರಾಜ್ಯಕ್ಕೆ ಭೇಟಿ ನೀಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮೈಸೂರಿನ ಮಹಾರಾಜ ಕಾಲೇಜು ಆವರಣದಲ್ಲಿ ಹಮ್ಮಿಕೊಂಡ ಬ್ರಹತ್ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು ಹಲವು ಗ್ಯಾರಂಟಿ ಯೋಜನೆಗಳನ್ನ ಘೋಷಸಿದರು. ದೇಶದಲ್ಲಿ ಮೋದಿ ಗ್ಯಾರಂಟಿಗೆ ನೈಜ ಗ್ಯಾರಂಟಿ ದೇವೇಗೌಡರು ಕೂಡ ಗ್ಯಾರಂಟಿ ಬಗ್ಗೆ ಹೇಳಿದ್ದಾರೆ ಕಾಂಗ್ರೆಸ್ ಗ್ಯಾರಂಟಿಗೆ ಪ್ರಧಾನಿ ಮೋದಿ ಕೌಂಟರ್ ನೀಡಿದ್ದು, ಮೋದಿ ಗ್ಯಾರಂಟಿ ದೇಶದ ಜನರಿಗೆ ಸಹಕಾರಿಯಾಗಿದೆ ಮೋದಿ ಗ್ಯಾರಂಟಿ ಕರ್ನಾಟಕದ ಪ್ರತಿಯೊಬ್ಬರ ಗ್ಯಾರಂಟಿಯಾಗಿದೆ. ಬಿಜೆಪಿ ಸಂಕಲ್ಪ ಪತ್ರ ಭವಿಷ್ಯದಲ್ಲಿ ಪರಿವರ್ತನೆಗೆ ಆಧಾರ ದೇಶವನ್ನು ಅಭಿವೃದ್ಧಿಯತ್ತ ಕೊಂಡಯುವಂತಹ ಪ್ರಣಾಳಿಕೆಯಾಗಿದೆ ಎಂದು ಬಿಜೆಪಿ ಪ್ರಣಾಳಿಕೆಯ ಬಗ್ಗೆ ಪ್ರಧಾನಿ ಮೋದಿ ಹಾಡಿ ಹೋಗಳಿದರು. ಭಾರತ ತಂತ್ರಜ್ಞಾನದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ. ಕರ್ನಾಟಕದ ಪ್ರತಿ ಒಬ್ಬ ವ್ಯಕ್ತಿಯ ಜೀವನ ಪರಿವರ್ತನೆಗೆ ನಮ್ಮ ಗ್ಯಾರಂಟಿ ಡಿಜಿಟಲ್ ಇಂಡಿಯಾ ನಮ್ಮ ಬದುಕಿಗೆ ವೇಗ ತಂದು ಕೊಟ್ಟಿದೆ ಇದು ನವ ಭಾರತದ ಲಕ್ಷಣವಾಗಿದೆ. ಎಕ್ಸ್ಪ್ರೆಸ್ ವೇಗಗಳು ಭಾರತದ ಹೆಗ್ಗುತ್ತಾಗಿದೆ ಇವತ್ತೇ ಬಿಜೆಪಿಯ…

Read More